Categories
ಸಿನಿ ಸುದ್ದಿ

ರಾಜೀವ್‌ ʼಉಸಿರೇʼ ಗೆ ಕಿಚ್ಚ ಸುದೀಪ್ ಕೊಟ್ಟರು ಸಾಥ್‌ : ರಿವೀಲ್‌ ಆಯ್ತು ಮೋಷನ್‌ ಪೋಸ್ಟರ್‌ !

ಬಿಗ್ ಬಾಸ್ ಸೀಸನ್‌ 8 ರಲ್ಲಿನ ಕಂಟೆಸ್ಟೆಂಟ್‌ ಗಳಲ್ಲಿ ಒಬ್ಬರಾಗಿದ್ದ ನಟ ರಾಜೀವ್‌ ಈಗ ಉಸಿರೇ ಉಸಿರೇ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸುತ್ತಿದ್ದು, ಅದರ ಮೋಷನ್‌ ಪೋಸ್ಟರ್‌ ಈಗ ಲಾಂಚ್‌ ಆಗಿದೆ. ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಉಸಿರೇ ಉಸಿರೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಬಾದ್ ಷಾ ಕಿಚ್ಚ ಸುದೀಪ ‌ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು.ಪದೀಪ್‌ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ನಟ ರಾಜೀವ್‌ ಮಾತನಾಡಿ, ʼನಾನು ಈ ತನಕ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ, ಇಂತಹ ವೇದಿಕೆ ಸಿಗಲು 10 ವರ್ಷ ಬೇಕಾಯಿತು. ಈ ಅವಕಾಶ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಹೇಳಿದರು.

ಮೋಷನ್ ಪೋಸ್ಟರ್ ಬಿಡುಗಡೆಗೆ ಆಗಮಿಸಿರುವ ಸುದೀಪ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದರು. ʼನಾನು ಸುದೀಪ್ ಸರ್ ಜೊತೆ ಕಾರಿನಲ್ಲಿ ಬರುತ್ತಿದ್ದಾಗ, ಅವರ ನಟನೆಯ ಚಿತ್ರದ “ಉಸಿರೇ ಉಸಿರೇ” ಹಾಡು ಕೇಳಿದ್ದೆ. ನನಗೆ ಈ ಚಿತ್ರದ ಗೊತ್ತಿದ್ದರಿಂದ ನಿರ್ದೇಶಕರಿಗೆ ಫೋನ್ ಮಾಡಿ ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಡೋಣ. ಈಗಲೇ ನೊಂದಾಯಿಸಿ ಎಂದು ಹೇಳಿದೆ. ಚಿತ್ರಕ್ಕಾಗಿ ನಾನು ಹೆಚ್ಚು ವರ್ಕ್ ಔಟ್ ಏನು ಮಾಡಿಲ್ಲ. ಸಹಜವಾಗಿರುವ ಪಾತ್ರ. ನಮ್ಮ ನಾಲ್ಕುವರ್ಷಗಳ ಶ್ರಮಕ್ಕೆ ಈಗ ಉತ್ತಮ ಕಾಲ ಕೂಡಿ ಬಂದಿದೆ.‌ ಎಲ್ಲರ ಹಾರೈಕೆಯು ನಮಗಿರಲಿ ಎಂದರು ರಾಜೀವ್.

ಇದೊಂದು ಪಕ್ಕಾ ಪ್ರೇಮಕಥೆ.‌ ಇಲ್ಲಿಯವರೆಗೂ ಅನೇಕ ಪ್ರೇಮಕಥೆಯುಳ್ಳ ಚಿತ್ರಗಳು ಬಂದಿವೆಯಾದರೂ ಇದು ವಿಭಿನ್ನ. ಅಮರಪ್ರೇಮಿಗಳು ಎಂದರೆ ಎಲ್ಲರೂ ರೋಮಿಯೋ – ಜೂಲಿಯಟ್, ಸಲೀಂ – ಅನಾರ್ಕಲಿ ಅನ್ನುತ್ತಾರೆ. ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರು ನಮ್ಮ ಕಥಾನಾಯಕ – ನಾಯಕಿಯನ್ನು ಈ ಸಾಲಿಗೆ‌ ಸೇರಿಸಬಹುದು ಎಂದ ನಿರ್ದೇಶಕ ಸಿ.ಎಂ.ವಿಜಯ್ ಸೆಪ್ಟೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಆರಂಭಿಸುವುದಾಗಿ ಹೇಳಿದ್ದಾರೆ. ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ರಾಜೀವ್‌ ಅವರಿಗೆ ಇಲ್ಲಿ ಶ್ರೀಜಿತ ಘೋಷ್ ನಟಿಸುತ್ತಿದ್ದು, ಅವರು ಸಹ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದರು.‌ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಶ್ರೀಜಿತ ಅವರಿಗೆ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ನಿರಂಜನ್ ಸುಧೀಂದ್ರ ಈಗ ಹಂಟರ್ : ಟೈಟಲ್ ಲಾಂಚ್ ಮಾಡಿ ಶುಭ ಕೋರಿದ ಸೂಪರ್ ಸ್ಟಾರ್ !

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ ಸುದೀಂದ್ರ ಹೀರೋ ಆಗಿ ಎಂಟ್ರಿ ಆಗುತ್ತಿರುವುದು ಹಳೇ ಮಾತು. ಈಗಾಗಲೇ ನಿರಂಜನ್ ಸುಧೀಂದ್ರ ಅಭಿನಯದ ‘ಸೂಪರ್ ಸ್ಟಾರ್’ ರಿಲೀಸ್ ಗೆ ರೆಡಿಯಿದೆ. ಅದರ ನಡುವೆ ಯೇ ನಿರಂಜನ್ ಪಾಲಿಗೆ ಅದೃಷ್ಟ ಖುಲಾಯಿಸಿದೆ. ಡೆಬ್ಯೂ ಚಿತ್ರ ರಿಲೀಸ್ ಮುನ್ನವೇ ಹಂಟರ್ ಆಗಿಯೂ ನಿರಂಜನ್ ಸುಧೀಂದ್ರ ಬೆಳ್ಳಿತೆರೆಗೆ ಎಂಟ್ರಿಆಗುತ್ತಿದ್ದಾರೆ. ಹೌದು, ನಿರಂಜನ್ ಸುಧೀಂದ್ರ ಈಗ ಹಂಟರ್ ಹೆಸರಿನ ಚಿತ್ರವೊಂದರಲ್ಲೂ ಹೀರೋ ಆಗಿ ಅಭಿನಯಸುತ್ತಿದ್ದು, ಆ ಚಿತ್ರದ ಟೈಟಲ್ ಮೊನ್ನೆಯಷ್ಟೇ ನಿರಂಜನ ಹುಟ್ಟು ಹಬ್ಬದಂದು ಲಾಂಚ್ ಆಗಿದೆ. ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅನಾವರಣಗೊಳಿಸಿ ಶುಭ ಕೋರಿದ್ದಾರೆ.

ಸದ್ಯಕ್ಕೆ ಚಿತ್ರ ತಂಡ ನೀಡಿದ ಮಾಹಿತಿ ಪ್ರಕಾರ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ. ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡುತ್ತಿದ್ದು, ವಿನಯ್ ಕೃಷ್ಣ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ಇವರು’ಸೀಜರ್’ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಆನಂತರವೀಗ ಇದು ಅವರ ಎರಡನೇ ಚಿತ್ರ. ಹಾಗೆಯೇ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರಿಗೂ ಇದು ಮೂರನೇ ಚಿತ್ರ. ಪರಿ ಹಾಗೂ ಸೀಜರ್ ನಂತರ ಈಗ ಹಂಟರ್. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ. ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶುರುವಾಗಲಿದೆ. ಕೇರಳದ ಸೌಮ್ಯ ಮೆನನ್ ಈ ಚಿತ್ರದ ನಾಯಕಿ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

Categories
ಸಿನಿ ಸುದ್ದಿ

ಭೀಕರ ರಣಭಯಂಕರ ರಾಜಮನಾರ್ : ಸಲಾರ್‌ ಅಡ್ಡದಲ್ಲಿ ಜಗ್ಗು ಸುನಾಮಿ !

ಮನುಷ್ಯನಿಗೆ ಎರಡ್ಸಲ ಮೈ ನಡುಗುತ್ತೆ, ಒಂದು ತುಂಬಾ ಚಳಿ ಅಂದಾಗ, ಇನ್ನೊಂದು ತುಂಬಾ ಭಯ ಅದಾಗ … ಹೀಗಂತ ಬೆಂಕಿ ಡೈಲಾಗ್‌ ಉಗುಳಿ ಕಣ್ಣು ಹುಬ್ಬು ಹಾರಿಸಿದ್ದ ಖಡಕ್‌ ವಿಲನ್‌ ಜಗಪತಿ ಬಾಬು ಈಗ ಮೂಗಿಗೆ ರಿಂಗ್‌ ಸಿಕ್ಕಿಸಿಕೊಂಡು ಬಾಯಲ್ಲಿ ಸಿಗರೇಟ್‌ ಹಚ್ಚಿ ಹೊಗೆ ಬಿಡುತ್ತಾ ಎದುರಾಳಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದಾರೆ. ಜಗ್ಗು ಲುಕ್‌ ನೋಡಿದರವೆಲ್ಲ ದೆವುಡಾ ಅಂತ ನಿಬ್ಬೆರಗಾಗಿ ನೋಡ್ತಿದ್ದಾರೆ.

ರಾಜಮನಾರ್ ಅಂದರೆ ಏನು ? ರಾಜಮನಾರ್ ಅಂದರೆ ಯಾರು ? ಹೀಗೆ ತಲೆಗೆ ಹುಳ‌ಬಿಟ್ಕೊಂಡು ಸೌತ್ ಸಿನಿಮಾದ‌ ಎಲ್ಲಾ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಕಾಯ್ತಿದ್ದರು. ಸಲಾರ್ ಚಿತ್ರತಂಡ ಪರಿಚಯಿಸ ಲಿರುವ ‘ರಾಜಮನಾರ್’ ಗಾಗಿ ಕಣ್ಣರಳಿಸಿ‌ ಕಾಯ್ತಿದ್ದರು. ಹೀಗೆ ಕೂತೂಹಲ ದಿಂದ ಕಾಯ್ತಿದ್ದವರಿಗೆ ‘ಸಲಾರ್’ ಚಿತ್ರತಂಡ ಭರ್ಜರಿ ಸಪ್ರೈಸ್ ಕೊಟ್ಟಿದೆ. ರಾಜಮನಾರ್ ಬೇರಾರು ಅಲ್ಲ ಒನ್ ಆಂಡ್ ಓನ್ಲೀ ಜಗಪತಿ ಬಾಬು ಅನ್ನೋದನ್ನ‌ ರಿವೀಲ್ ಮಾಡಿದೆ. ಭೀಕರ ರಣಭಯಂ ಕರ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮಾಯಬಜಾರ್ ನಲ್ಲಿ‌ ಸಂಚಲನ ಸೃಷ್ಟಿಸಿದೆ.

ಜಗಪತಿ ಬಾಬು ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಶೇಕ್ ಆಗುವಂತಹ ಖಡಕ್ ಖಳನಾಯಕ. ಜಗಪತಿ ಬಾಬು ಹೆಸರು ಕೇಳಿದರೆ ಸಿನಿಮಾ ಸೌತ್‌ ಸಿನಿಮಾ ಜಗತ್ತೇ ಕೇಕೆ ಹಾಕುತ್ತೆ ಅಷ್ಟರ ಮಟ್ಟಿಗೆ ಖಡಕ್‌ ವಿಲನ್‌ ಕ್ಯಾರೆಕ್ಟರ್‌ ಗೆ ಬ್ರ್ಯಾಂಡ್ ಆಗಿರೋ ಜಗಪತಿ‌ ಬಾಬು ರಾಜಮನಾರ್ ಪಾತ್ರದ ಮೂಲಕ ʼಸಲಾರ್ʼ ಸಿನಿಮಾದಲ್ಲಿ ಸುನಾಮಿ ಎಬ್ಬಿಸಲಿದ್ದಾರೆ. ಅಮರೇಂದ್ರ ಬಾಹುಬಲಿ ಅಖಾಡದಲ್ಲಿ ಕಾದಾಡಲಿದ್ದಾರೆ.

ನ್ಯಾಷನಲ್ ಸ್ಟಾರ್ ಪ್ರಭಾಸ್, ನ್ಯಾಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್’ ಸಲಾರ್’ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹವಾ ಕ್ರಿಯೇಟ್ ಮಾಡಿಕೊಂಡಿರುವ ಖಳನಾಯಕ ಜಗಪತಿ ಬಾಬು ‘ಸಲಾರ್’ ಅಡ್ಡಕ್ಕೆ ಎಂಟ್ರಿಕೊಟ್ಟಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಒಂದು ತೂಕ ಜಾಸ್ತಿಯಾಗಿದೆ.‌ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ, ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ನಿರ್ಮಾಣದ‌ ‘ಸಲಾರ್’ ವರ್ಲ್ಡ್‌ ವೈಡ್ ಮತ್ತೊಮ್ಮೆ ಧೂಳೆಬ್ಬಿಸೋದು ಖಚಿತ ಎನ್ನುವುದು ಪಾತ್ರವರ್ಗ ಹಾಗೂ ಮೇಕಿಂಗ್ ನಿಂದಲೇ ಗೊತ್ತಾಗ್ತಿದೆ. ʼಸಲಾರ್ʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇನ್ನಷ್ಟು ಬಿಗ್ ಅಪ್ ಡೇಟ್ ಒನ್ ಬೈ ಒನ್ ರಿವೀಲ್ ಆಗಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ
Categories
ಸಿನಿ ಸುದ್ದಿ

ಶ್ರೀರಾಮ ಧಗಧಗಿಸಿದ ಮೇಲೆ ಶೆಹಜಾದ್ ಅಖಾಡಕ್ಕೆ ಎಂಟ್ರಿ ; ಮಾನ್ ಸ್ಟಾರ್ ವಿರುದ್ಧ ತೊಡೆತಟ್ಟುವವರಾರು ?

ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟಾರ್.. ಲೇಟಾದರೂ ಸಿಂಗಲ್ಲಾಗಿ ಒಬ್ಬನೇ ಬರೋನು ಮಾನ್ ಸ್ಟಾರ್. ಹೌದು, ಕೆಜಿಎಫ್‌ 2 ಲೇಟಾಗಿಯೇ ಬರ್ತಿದೆ. ಬರೋದಿಕ್ಕೆ ಡೇಟ್‌ ಕೂಡ ಫಿಕ್ಸ್‌ ಆಗಿದೆ. ಹಾಗಂತ ನಾಳೆಯೇ ಬರುತ್ತಾ? ಇಲ್ಲ, ಅದಕ್ಕೂ ಇನ್ನು ಕಾಯಬೇಕಿದೆ ಆ ಏಳು ತಿಂಗಳು. ಹಾಗಾದ್ರೆ ಅದು ಬರುವ ದಿನವಾದರೂ ಯಾವಾಗ? ಇಲ್ಲಿದೆ ಡಿಟೈಲ್ಸ್.
ಇದೊಂದು ದಿನಕ್ಕಾಗಿ.. ಇದೊಂದು ಕ್ಷಣಕ್ಕಾಗಿ..ಇದೊಂದು ಶುಭಗಳಿಗೆಗಾಗಿ.. ಇಡೀ ಜಗತ್ತು ಎದುರುನೋಡ್ತಿದೆ. ಆ ದಿನ ಆ ಕ್ಷಣ ಆ ಶುಭಗಳಿಗೆ ಯಾವಾಗ ಬರುತ್ತೆ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ರಾಕಿಂಗ್ ಸ್ಟಾರ್ ದಿವ್ಯ ದರ್ಶನಕ್ಕೆ ಮುಹೂರ್ತ ಫಿಕ್ಸಾಗಿದೆ.‌ ಆದರೆ, ಆ ಸುವರ್ಣಗಳಿಗೆ ಸನ್ನಿಹಿತವಾಗುವುದಕ್ಕೆ ಯುಗಾದಿ ಮುಗಿಬೇಕು, ಶ್ರೀರಾಮನನ್ನು ಇಡೀ ಜಗತ್ತು ಸ್ಮರಿಸಬೇಕು. ಒಟ್ನಲ್ಲಿ ಏಳು ತಿಂಗಳು‌ ಕಾಯಲೇಬೇಕು. ಅಯ್ಯೋ ಇನ್ನೂ ಏಳು ತಿಂಗಳು ಕಾಯಬೇಕಾ ಹೀಗಂತ ಉದ್ಘಾರ ಎತ್ತುವವರು ಎಷ್ಟು ಜನರು ಇದ್ದಾರೋ ಅಷ್ಟೇ ಜನರು ಕಾಯೋಣ ಬಿಡಿ ಅಂತಿದ್ದಾರೆ.

ಹೌದು, ಮನೆದೇವರ ದರ್ಶನಕ್ಕೂ ಜನ ಇಷ್ಟೊಂದು ತಾಳ್ಮೆಯಿಂದ ಕಾಯ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಕಿಂಗ್ ಸ್ಟಾರ್ ಯಶ್ ದರ್ಶನಕ್ಕಾಗಿ ಆಸೆಯ ಕಣ್ ಗಳಿಂದ ಎದುರುನೋಡ್ತಿದ್ದಾರೆ. ಎರಡೂವರೆ ವರ್ಷಾನೇ ಕಳೆದಿದ್ದೇವೆ ಇನ್ನೂ ಏಳು ತಿಂಗಳು ಯಾವ್ ಲೆಕ್ಕ ಕಾಯ್ತೀವಿ. ಸೆಲ್ಫ್ ಮೇಡ್ ಷೆಹಜಾದ್ ಆಗಮನಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದೇವೆ, ಮುಂದೆಯೂ ನಿಲ್ಲುತ್ತೇವೆ ಎನ್ನುತ್ತಿದ್ದಾರೆ ರಾಕಿಂಗ್ ಭಕ್ತರು.‌ ಚೀನಿ ಕ್ರಿಮಿ ಕೊರೊನಾ ಅಟ್ಟಹಾಸ ಇರಲಿಲ್ಲ ಅಂದರೆ ಇಷ್ಟೊತ್ತಿಗೆ ಅಣ್ತಮ್ಮ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಿ‌ ಬೊಬ್ಬಿರಿಯುತ್ತಿದ್ದರು. ಇಂಟರ್ ನ್ಯಾಷನಲ್ ಪಟ್ಟಕ್ಕೇರಿ ಧಗಧಗಿಸುತ್ತಿದ್ದರು. ಗಂಧದಗುಡಿಗೆ ವಜ್ರದ ಕಿರೀಟವನ್ನೇ ತೊಡಿಸಿ‌ ಮುನ್ನುಗುತ್ತಿದ್ದರು.‌ ಇದೆಲ್ಲಾ ಮಾಡೋದಕ್ಕೆ ಕೊರೊನಾ ಅಡ್ಡಿಯಾಯ್ತು. ಈಗಲೂ ಕೊರೊನಾಂತಕ ಇರುವುದರಿಂದ ಕೆಜಿಎಫ್ ಬಿಡುಗಡೆ ದಿನಾಂಕವನ್ನು ಭರ್ತಿ ಏಳು ತಿಂಗಳು‌ ಮುಂದೂಡಿದೆ.

2022 ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ತೆರೆಗೆ ಅಪ್ಪಳಿಸಲಿದೆ. ಇಲ್ಲಿವರೆಗೂ ಎರಡು ಭಾರಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಕ್ಯಾನ್ಸಲ್ ಆಗಿದೆ. ಆದರೆ‌ ಏಪ್ರಿಲ್‌14 ಕ್ಯಾನ್ಸಲ್ ಮಾಡುವ ಪ್ರಮಯನೇ ಇಲ್ಲ ಅಂತ ರಾಕಿಭಾಯ್ ಭರವಸೆ ಕೊಟ್ಟಿದ್ದಾರೆ. ರಾಕಿ- ಅಧೀರನ ಹೋರಾಟದ ಜೊತೆಗೆ ಚಿನ್ನದ ಸಾಮ್ರಾಜ್ಯಕ್ಕೆ ಷೆಹಜಾದ್ ರಾಜಗಾಂಭೀ ರ್ಯದಿಂದ ಎಂಟ್ರಿಕೊಡುವ ದೃಶ್ಯ ನೋಡುವುದಕ್ಕೆ ಚಿತ್ರ ಪ್ರೇಮಿಗಳು ಕಾತುರರಾಗಿದ್ದಾರೆ. ಆ ನಿರೀಕ್ಷೆಗೂ‌ ಮೀರಿ ನರಾಚಿ ಲೋಕ ತೆರೆದುಕೊ ಳ್ಳುವುದು ಸತ್ಯ ಎನ್ನುವದಕ್ಕೆ ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್, ಸ್ಯಾಟ್ ಲೈಟ್ ರೈಟ್ಸ್, ದುಬಾರಿ ಮೊತ್ತಕ್ಕೆ ಸೇಲಾಗಿರುವುದೇ ಸಾಕ್ಷಿ.

ಹೌದು, ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್ 7 ಲಕ್ಷಕ್ಕೆ, ಸ್ಯಾಟ್ ಲೈಟ್ ರೈಟ್ಸ್ ಸರಿಸುಮಾರು 120 ಕೋಟಿಗೆ ಬಿಕರಿಯಾಗಿದೆ. ಪ್ರಶಾಂತ್ ನೀಲ್‌ ಕೆತ್ತನೆಯ ಕೆಜಿಎಫ್ ಶಿಲೆಯನ್ನ ಕೊಂಡುಕೊಳ್ಳುವುದಕ್ಕೆ ಪ್ರಭಲರು ಮುಂದೆ ಬರ್ತಿದ್ದಾರೆ. ಓಟಿಟಿಯವರು ಬಂದು ವಾಪಾಸ್ ಹೋಗಿದ್ದಾರೆ.. ಸಿನಿಮಾ ಪ್ರೇಕ್ಷಕರಿಗೆ ಹಾಗೂ ಫ್ಯಾನ್ಸ್ ಗೆ ನಿರಾಸೆಯಾಗಬಾರದು ಅಂತ ಕೆಜಿಎಫ್‌ ಫಿಲ್ಮ್‌ಟೀಮ್ ಏಳು ತಿಂಗಳು ಲೇಟಾದರೂ ಪರವಾಗಿಲ್ಲ ಥಿಯೇಟರ್ ನಲ್ಲೇ ರಿಲೀಸ್ ಮಾಡೋದಕ್ಕೆ ಫಿಕ್ಸಾಗಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14 ರಂದು ರಾಕಿಂಗ್ ಸ್ಟಾರ್ ಗೆ ಪೈಪೋಟಿ ಕೊಡುವುದಕ್ಕೆ ಯಾರು ಹುಟ್ಟಿಕೊಳ್ತಾರೋ‌? ಅದ್ಯಾವ ಸ್ಟಾರ್ ಚಿತ್ರಗಳು ರಿಲೀಸ್ ಗೆ ಸಜ್ಜಾಗುತ್ತವೋ? ಬೆಳ್ಳಿಪರದೆ ಹಾಗೂ ಬಾಕ್ಸ್ ಆಫೀಸ್ ಅಂಗಳದಲ್ಲಿ ಅದೆಂತಾ ವಾರ್ ನಡೆಯಲಿದೆಯೋ ಗೊತ್ತಿಲ್ಲ. ಕೆಜಿಎಫ್ ಚಾಪ್ಟರ್ 2 ಬರುವಾಗ ದೊಡ್ಡ ಜಟಾಪಟಿಯಂತೂ ನಡೆಯಲಿದೆ. ಅದೇನೆ ಆಗಲಿ, ಸಿಲ್ವರ್ ಸ್ಕ್ರೀನ್ ಗೆ ಸಿಂಗಲ್ಲಾಗಿ ಕಣಕ್ಕಿಳಿಯೋ ಮಾನ್ ಸ್ಟಾರ್ ನ ಸ್ವಾಗತಿಸೋಕೆ ಗುಂಪು ಕಟ್ಟಿಕೊಂಡು ಗ್ಯಾಂಗ್ ಸ್ಟಾರ್ ಗಳು ಚಿತ್ರಮಂದಿ ರಕ್ಕೆ ಬಂದರೆ ಅಷ್ಟೇ ಸಾಕು. ಮುಂದಾಗುವುದೆಲ್ಲವೂ ಮರೆಯಲಾಗದ ಇತಿಹಾಸ ಇದು ಅಕ್ಷರಶಃ ಸತ್ಯ ಎನ್ನುತ್ತಿದೆ ಗಾಂಧಿನಗರ.

  • ವಿಶಾಲಾಕ್ಷಿ, ಎಂಟರ್ ಟೈ ನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನ ಕಟ್ಟಿಹಾಕಿದ ನಟಿ ಮಧುಬಾಲಾ ; ಬಾಲಿವುಡ್ ಮರ್ಲಿನ್ ಮನ್ರೋಗೆ ಸಿಎಂ ಮನಸೋತ ಕಥೆ ರಿವೀಲ್ ಆಯ್ತಲ್ಲಾ !

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಬಾಲಿವುಡ್ ಜಗತ್ತು ಕಂಡ ಅತ್ಯಾದ್ಬುತ ನಟಿ ಮಧುಬಾಲ ಕಟ್ಟಿಹಾಕಿದ ಕಥೆ ಕೊನೆಗೂ ರಿವೀಲ್‌ ಆಗಿದೆ. ಅದು ಕಣ್ಣು ತಂಪಾಗಿಸುವ ಸೌಂದರ್ಯದಿಂದಲೋ ಅಥವಾ ಮನಸ್ಸು ಮುಟ್ಟುವ ಮನೋಜ್ಜ ಅಭಿನಯದಿಂದಲೋ ಎನ್ನುವ ರಹಸ್ಯ ಮಾತ್ರ ನಿಗೂಢವಾಗಿದೆ. ಆ ಗುಟ್ಟನ್ನು ಮಾತ್ರ ಸಿಎಂ ಬಿಟ್ಟುಕೊಟ್ಟಿಲ್ಲ. ಆದರೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಆಲ್‌ ಟೈಮ್‌ ಫೆವರೀಟ್‌ ಮಧುಬಾಲಾ ಅಂತೆ !
ಎಲ್ಲಾ ನಟಿಮಣಿಯರು ಒಂದೇ ರೀತಿಯಾಗಿ ಇರುವುದಿಲ್ಲ. ಎಲ್ಲರ ಕಣ್ಣಿಗೆ ಒಂದೇ ತರನಾಗಿ ಕಾಣುವುದೂ ಇಲ್ಲ. ಕೆಲವು ನಟಿಯರು ಮಾದಕ ಮೈಮಾಟದಿಂದ ನೋಡುಗರನ್ನು ಅಟ್ರ್ಯಾಕ್ಟ್ ಮಾಡ್ತಾರೆ. ಇನ್ನೂ ಕೆಲವರು ಕಣ್ಣೋಟದಿಂದ ಕಟ್ಟಿಹಾಕ್ತಾರೆ. ಉಳಿದವರು ಅಭಿನಯದಿಂದ ನೋಡುಗರ ಮನಸೂರೆಗೊಳ್ತಾರೆ. ಆ ಮೂಲಕ ಆಲ್ ಟೈಮ್ ಫೇವರಿಟ್ ನಟಿಯಾಗಿ ಉಳಿದುಬಿಡ್ತಾರೆ. ಹೀಗೆ ಅಚ್ಚಳಿಯದ ಛಾಪು ಒತ್ತಿದ ಸುಂದರಿ ಮಧುಬಾಲರನ್ನು ಬೊಮ್ಮಾಯಿ ಸಾಹೇಬ್ರು ಖಾಸಗಿ ಮನರಂಜನೆ ವಾಹಿನಿಯ ಸ್ಪೆಷಲ್‌ ಕಾರ್ಯಕ್ರಮದಲ್ಲಿ ನೆನಪು‌ ಮಾಡಿಕೊಂಡಿದ್ದಾರೆ.

ಹೌದು, ರಂಭೆ- ಊರ್ವಶಿ- ಮೇನಕೆಗಿಂತ ಮಿಗಿಲು ಅಂತ ಸಿಎಂ ಸಾಹೇಬ್ರು ಬಾಯ್ಬಿಟ್ಟು ಹೇಳಿಲ್ಲ ಅಷ್ಟೇ ಆದರೆ, ಮಧುಬಾಲ ಆಲ್‌ಟೈಮ್ ಫೇವರಿಟ್ ಹೀರೋಯಿನ್ ಎನ್ನುವುದನ್ನು ಜೀ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಹುಡುಗರು ನಿಮ್ಮ ಫೇವರಿಟ್ ನಾಯಕಿ ಬಗ್ಗೆ ಹೇಳಿ ಅಂದಾಗ ಕನ್ನಡದಲ್ಲಿ ಕಲ್ಪನಾ, ಭಾರತಿ, ಜಯಂತಿ. ಹಿಂದಿಯಲ್ಲಿ ಮಧುಬಾಲ ಎಂದಿದ್ದಾರೆ. ಇದೇ ವೇಳೆ ಡಾ. ರಾಜ್ ಕುಮಾರ್ ಅವರನ್ನೂ ಕೂಡ ಸ್ಮರಿಸಿಕೊಂಡಿದ್ದಾರೆ. ಮಧುಬಾಲ ಬಾಲಿವುಡ್ ಚಿತ್ರರಂಗ ಕಂಡ ಅಮೋಘ ಸುಂದರಿ, ಅತ್ಯದ್ಭುತ ನಟಿ.‌ ಈ‌ ನಟಿಯ ಹೆಸರು ಕೇಳಿದರೆ ಇವತ್ತಿನ ಅಂಕಲ್ ಗಳು ಮಾತ್ರವಲ್ಲ 16 ರ ಹದಿಹರೆಯದ ಯುವಕರು ಕೂಡ ದಡಕ್ಕನೆ ಎದ್ದುಕೂಡ್ತಾರೆ‌. ಕಣ್ಣುಕುಕ್ಕುವ ಚೆಲುವಿನಿಂದ- ನಯನ ಮನೋಹರ ಅಭಿನಯದಿಂದ ಬಾಲಿವುಡ್ ಆಳಿದ ಅಭಿನೇತ್ರಿಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಉತ್ಸುಕರಾಗ್ತಾರೆ.‌ ಅಷ್ಟರ ಮಟ್ಟಿಗೆ ಮಧುಬಾಲ ತಮ್ಮ ಛಾಪು‌ ಮೂಡಿಸಿ ಹೋಗಿದ್ದಾರೆ. ‌ಮಹಲ್,ಥರಾನಾ, ಮೊಘಲ್ ಇ ಅಜಾಮ್, ಲಾಲ್ ದುಪ್ಪಟ್ಟ ಅನಾರ್ಕಲಿ ಸಿನಿಮಾ ಮೂಲಕ ಜೀವಂತವಾಗಿದ್ದಾರೆ.

ಮಧುಬಾಲ ಹಿಂದಿ ಚಿತ್ರರಂಗದ ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸ್.‌ ಬಾಲಿವುಡ್ ಮಲ್ರಿನ್ ಮನ್ರೋ‌ ಅಂತನೇ ಖ್ಯಾತಿಗಳಿಸಿಕೊಂಡ ಮಧುಬಾಲ, ಭರ್ತಿ 20 ವರ್ಷಗಳ‌ ಕಾಲ‌ ಬೆಳ್ಳಿ ತೆರೆಯನ್ನಾಳಿದರು. 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ರಾಜ್ ಕಪೂರ್, ದೇವಾನಂದ್, ದಿಲೀಪ್ ಕುಮಾರ್, ಅಶೋಕ್ ಕುಮಾರ್ ರಂತಹ ದಿಗ್ಗಜರೊಟ್ಟಿಗೆ ಕುಣಿದರು. ಕೋಟ್ಯಾಂತರ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟರು. ಅಟ್ ದಿ ಸೇಮ್ ಟೈಮ್ ಪಡ್ಡೆಹೈಕ್ಳು- ಹುಡುಗರು- ಅಂಕಲ್ ಗಳ ನಿದ್ದೆಗೆಡಿಸಿದರು.

ಬಾಲನಟಿಯಾಗಿ‌ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟ ಮಧುಬಾಲ‌,‌ ಅತೀ ಚಿಕ್ಕ ಅವಧಿಯಲ್ಲಿ ಒಂದಿಡೀ ಜನ್ಮಕ್ಕಾಗುವಷ್ಟು ಹೆಸರು ಮಾಡಿದರು. ನೇಮ್- ಫೇಮ್- ಆಸ್ತಿ- ಅಂತಸ್ತು- ಐಶ್ವರ್ಯ ಎಲ್ಲವೂ ಸಂಪಾದಿಸಿದರು. ಲವ್ ಲೈಫ್ ನಲ್ಲಿ ಮುಳುಗಿ ಮುಳುಗಿ ಎದ್ದರು. ಎಷ್ಟು ಲವ್ವಾಯ್ತೋ ಅಷ್ಟೇ ಬ್ರೇಕಪ್ಸ್ ಆಯ್ತು.‌ ಕಿಶೋರ್ ಕುಮಾರ್ ಜೊತೆ ಸಂಸಾರವೂ ನಡೆಸಿದರು. ಕೊನೆಗೆ ಪರ್ಸನಲ್ ಲೈಫ್ ಕೂಡ ಚಿಂದಿ ಚಿತ್ರಾನ್ನ‌ ಆಗೋಯ್ತು. ಖಿನ್ನತೆಗೊಳಗಾದ ಮಧುಬಾಲ ಒಂಭತ್ತು ವರ್ಷಗಳ ಕಾಲ ಹಾಸಿಗೆಯಲ್ಲೇ ನರಳಿದರು.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಿ ಬೆಂಡಾದರು. 36 ನೇ ವಯಸ್ಸಿಗೆ ಜಗತ್ತಿಗೆ ಗುಡ್ ಬೈ ಹೇಳುವಂತಾಯ್ತು. ಪ್ರೀತಿ ಪ್ರೇಮ ಪ್ರಣಯ ಅಂತ ಪದೇ ಪದೇ ಹಾರ್ಟ್ ನ ಸೇಲ್ ಗಿಟ್ಟಿದ್ದೇ ಬಿಟೌನ್ ಮಲ್ರಿನ್ ಮನ್ರೋ ಬಾಳಿಗೆ ಮುಳುವಾಯ್ತು. ದುರಂತ ಅಂತ್ಯಕಾಣುವಂತಾಯ್ತು. ಆದರೆ, ಮಧುಬಾಲ ಸದಾ ಜೀವಂತ ದಂತಕತೆ ಎನ್ನುವುದು ಮಾತ್ರ ಸತ್ಯಸ್ಯಸತ್ಯ. ಇಂತಹ ಚಿರಕಾಲದ ಜವ್ವನೆ ಮಧುಬಾಲ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಮನಸು ಗೆದಿದ್ದು ಕೂಡ ವಿಶೇಷ.

  • ಎಂಟರ್ ಟೈನ್ಮೆಂಟ್‌‌ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಸ್ಯಾಂಡಲ್‌ವುಡ್‌ಗೆ ‘ರೌಡಿ ಬೇಬಿ’ ಖ್ಯಾತಿಯ ನಟಿ ಬರ್ತಿರೋದು ನಿಜ, ಆದ್ರೆ ಅಬ್ಬಕ್ಕನಾಗಿ ಅಲ್ಲ , ಹಾಗಾದ್ರೆ ಯಾವ ಸಿನ್ಮಾಕ್ಕೆ ಗೊತ್ತಾ ?

ನಿರ್ದೇಶಕ ಮಂಸೋರೆ ಮತ್ತೊಂದು ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಆ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ ಗೆ ಸೌತ್‌ ಇಂಡಸ್ಟ್ರಿಯ ಫೇಮಸ್‌ ನಟಿ ಸಾಯಿ ಪಲ್ಲವಿ ಬರ್ತಿದ್ದಾರೆ. ಹಾಗಾದ್ರೆ ಆ ಸಿನಿಮಾ ಯಾವುದು? ಅದರಲ್ಲಿ ಸಾಯಿ ಪಲ್ಲವಿ ಕ್ಯಾರೆಕ್ಟರ್‌ ಏನು? ಆ ಡಿಟೈಲ್ಸ್‌ ಇಲ್ಲಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಮೊನ್ನೆಯಷ್ಟೇ ಮದುವೆಯಾದರು. ಅವರ ಮದುವೆಯ ಜತೆಗೆಯೇ ಮತ್ತೊಂದು ಕಾರಣಕ್ಕೂ ಸಿಕ್ಕಾಪಟ್ಟೆ ಸುದ್ದಿಯಾದರು. ಅದು ಸೌತ್‌ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ವಿಚಾರಕ್ಕೆ. ಹಾಗಂತ ಅದೇನಾದ್ರೂ ಮಂಸೋರೆ ಅವರ ಮದುವೆಗೆ ಲಿಂಕ್‌ ಇತ್ತಾ ಅಂತ ಕಿವಿ ಅರಳಿಸಬೇಡಿ, ಸಾಯಿ ಪಲ್ಲವಿ ವಿಚಾರ ಇಲ್ಲಿ ಸುದ್ದಿ ಆಗಿದ್ದು ಮಂಸೋರೆ ನಿರ್ದೇಶನದ ಹೊಸ ಸಿನಿಮಾಕ್ಕೆ ಸಂಬಂಧಿಸಿದಂತೆ. ಹೌದು, ಅವರ ಹೊಸ ಸಿನಿಮಾದ ಮೂಲಕ ʼಪ್ರೇಮ್ಂʼ ಚಿತ್ರದ ಖ್ಯಾತಿಯ ಸೌತ್‌ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ. ಮಂಸೋರೆ ಸಿನಿಮಾ, ಸಾಯಿ ಪಲ್ಲವಿ ಎಂಟ್ರಿ ಅಂದಾಕ್ಷಣ ʼರಾಣಿ ಅಬ್ಬಕ್ಕʼ ಸಿನಿಮಾಕ್ಕಾ ಅಂತ ಕುತೂಹಲ ಮೂಡುವುದು ಇಲ್ಲಿ ಅಷ್ಟೇ ಸಹಜ. ಯಾಕಂದ್ರೆ ʼಆಕ್ಟ್‌ ೧೯೭೮ʼ ಚಿತ್ರದ ನಂತರ ನಿರ್ದೇಶಕ ಮಂಸೋರೆ ಅವರು ಅನೌನ್ಸ್‌ ಮಾಡಿದ ಸಿನಿಮಾ ʼರಾಣಿ ಅಬ್ಬಕ್ಕʼ.

ಕಡಲ ತಡಿಯ ಉಲ್ಲಾಳದ ರಾಣಿ ಅಬ್ಬಕ್ಕನ ಇತಿಹಾಸ ಕುರಿತು ಅವರು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅಬ್ಬಕ್ಕನ ಪಾತ್ರ ಅಂದ್ರೆ ಅದೊಂದು ಸಖತ್‌ ಪವರ್‌ ಫುಲ್‌ಕ್ಯಾರೆಕ್ಟರ್. ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧೆ. ಹಾಗಾಗಿ ಅದನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬಾರದೇಕೆ ಅನ್ನೋ ಲೆಕ್ಕಚಾರದಲ್ಲಿ ಮಂಸೋರೆ ಇದ್ದಾರೆ. ಹಾಗಾಗಿ ಸೌತ್‌ ಸುಂದರಿ ಸಾಯಿ ಪಲ್ಲವಿ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತರೋದಿಕ್ಕೆ ಹೊರಟಿರಬಹುದಾ ಎನ್ನುವ ಸುದ್ದಿಗಳು ಹರದಾಡಿದವು. ಯಾಕಂದ್ರೆ ʼರಾಣಿ ಅಬ್ಬಕ್ಕʼ ಅನ್ನೋದು ಬಿಗ್‌ ಪ್ರಾಜೆಕ್ಟ್.‌ ಹಾಗೆಯೇ ಬಿಗ್‌ ಬಜೆಟ್‌ ಸಿನಿಮಾ ಕೂಡ. ಮಂಸೋರೆ ಅವರೇ ಹೇಳಿಕೊಂಡ ಪ್ರಕಾರ, ಕಥೆ ಮತ್ತು ನಿರ್ಮಾಣದಲ್ಲಿ ದೊಡ್ಡ ಕ್ಯಾನ್ವಾಸ್‌ ಇರುವಂತಹ ಸಿನಿಮಾ. ಸದ್ಯಕ್ಕೆ ಅದೇ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಅವರ ನಿರ್ದೇಶನದ ಸಿನಿಮಾಕ್ಕೆ ಸಾಯಿ ಪಲ್ಲವಿ ಬರ್ತಿದ್ದಾರೆ ಅಂದಾಗ ತಕ್ಷಣಕ್ಕೆ ಎಲ್ಲರಿಗೂ ನೆನಪಾಗಿದ್ದು ಮಂಸೋರೆ ಅವರ ಫ್ಯೂಚರ್‌ ಪ್ರಾಜೆಕ್ಟ್‌ ರಾಣಿ ಅಬ್ಬಕ್ಕ .

ಅಧಿಕೃತ ಮಾಹಿತಿ ಪ್ರಕಾರ ಸಾಯಿ ಪಲ್ಲವಿ ಮತ್ತೊಂದು ಹೊಸ ಸಿನಿಮಾಕ್ಕಾಗಿ. ಬರ್ತಿದ್ದಾರೆನ್ನುವುದು ಸುದ್ದಿ. ಆದರೆ ಅದೆನ್ನು ಮಾತುಕತೆ ಹಂತದಲ್ಲಿದೆ ಅನ್ನೋದು ನಿರ್ದೇಶಕ ಮಂಸೋರೆ ಹೇಳುವ ಮಾತು. ” ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಹೊತ್ತಿಗೆ ನಾನು ಈಗಾಗಲೇ ಅನೌನ್ಸ್‌ ಮಾಡಿದ್ದ ʼರಾಣಿ ಅಬ್ಬಕ್ಕʼ ಸಿನಿಮಾವೇ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಅದು ಒಂದಷ್ಟು ತಡವಾಗುತ್ತಿದೆ. ಹಾಗಾದ್ರೆ ಶುರುವಾಗೋದದ್ರು ಯಾವಾಗ, ಅದಿನ್ನುನನಗೂ ಅಂಂದಾಜು ಆಗುತ್ತಿಲ್ಲ. ಕೊರೋನಾ ಕಾರಣ ಮೊದಲು ಬಂದಿದ್ದ ನಿರ್ಮಾಪಕರು ಅಷ್ಟು ದೊಡ್ಡ ಪ್ರಾಜೆಕ್ಟ್‌ ಈಗ ಬೇಡ ಅಂತಿದ್ದಾರೆ. ಹಾಗಂತ ನಂಗೆ ಅದನ್ನು ಬಿಡೋದಿಕ್ಕೆ ಮನಸಿಲ್ಲ. ಅದೇ ಕಾರಣಕ್ಕೆ ಈಗ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜತೆಗೆ ಮಾತುಕತೆ ನಡೆದಿದೆ. ನಾನು ಹೋಗಿ ಅಪ್ರೋಚ್‌ ಮಾಡಿದ್ದೆ ಅನ್ನೋದಿಕ್ಕಿಂತ ಆ ಸಂಸ್ಥೆಯೇ ಆಸಕ್ತಿ ತೋರಿದೆ. ಇನ್ಸಿಯಲಿ ಒಂದಷ್ಟು ಮಾತುಕತೆ ನಡೆದಿದೆ. ಫೈನಲ್‌ ಅಂತ ಆಗಿಲ್ಲ. ಅದು ಯಾವಾಗೋ ನಂಗು ಗೊತ್ತಿಲ್ಲ. ಈ ನಡುವೆಯೇ ನಂಗೆ ಗೊತ್ತಿದ್ದ ನಿರ್ಮಾಪಕ ರೊಬ್ಬರು ಒಂದು ಆವರೇಜ್‌ ಬಜೆಟ್‌ ನಲ್ಲಿ ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಬಂದರು. ಆಗಲೇ ಒಂದು ಕಥೆ ಸಿದ್ದಪಡಿಸಿ ಟ್ಟುಕೊಂಡಿದ್ದೆ. ಅದನ್ನೆ ಅವರಿಗೆ ಹೇಳಿದೆ. ಅದು ಮಹಿಳಾ ಪ್ರಧಾನ ಕಥೆ. ಅದಕ್ಕೆ ಸಾಯಿ ಪಲ್ಲವಿಯಾದ್ರೆ ಚೆನ್ನಾಗಿತ್ತಲ್ವೇ ಅಂತ ಅವರೇ ಹೇಳಿದ್ರು. ಆ ಮೂಲಕ ಸಾಯಿ ಪಲ್ಲವಿ ಅವರನ್ನು ಫೋನ್‌ ಮೂಲಕ ಸಂಪರ್ಕ ಮಾಡಿ, ಸ್ಕ್ರಿಫ್ಟ್‌ ಕಳುಹಿಸಿದ್ದೇನೆ. ಅವರಿಗೆ ಇಷ್ಟವೂಆಗಿದೆ. ಆದರೆ ಫೈನಲಿ ನಮಗೆ ಹೊಂದಾಣಿಕೆ ಆಗುವಂತಹ ಬಜೆಟ್‌ ನಲ್ಲಿ ಅವರು ಅಭಿನಯಸಲು ಒಪ್ಪಿಕೊಳ್ಳಬೇಕು ಅಲ್ವಾ? ಅದಷ್ಟೇ ಬ್ಯಾಲೆನ್ಸ್‌ ಇದೆ ಎನ್ನುತ್ತಾರೆ ನಿರ್ದೇಶಕ ಮಂಸೋರೆ.

ಅವರೇ ಹೇಳುವ ಹಾಗೆ ಒಂದು ಲೆಕ್ಕದಲ್ಲಿ ಸೌತ್‌ ಬ್ಯುಟಿ, ಸಹಜ ಸುಂದರಿ ಸಾಯಿ ಪಲ್ಲವಿ ಕನ್ನಡಕ್ಕೆ ಬರುವುದು ಗ್ಯಾರಂಟಿ ಇದೆ. ಈಗಾಗಲೇ ಮಲಯಾಳಂ ಜತೆಗೆ ತಮಿಳು, ತೆಲುಗು ಅಂತ ಸಿಕ್ಕಾಪಟ್ಟೆ ಸೌಂಡ್‌ ಮಾಡಿರುವ ಈ ನಟಿ, ಕನ್ನಡದಲ್ಲಿ ಹೇಗೆಲ್ಲ ಸಂಚಲನ ಸೃಷ್ಟಿಸಬಹುದು ಎನ್ನುವುದು ಮುಂದಿನ ದೊಡ್ಡ ಕ್ಯೂರಿಯಾಸಿಟಿಯ ಸಂಗತಿ. ಉಳಿದಂತೆ ಮಂಸೋರೆ ನಿರ್ದೇಶನದ ಈ ಹೊಸ ಸಿನಿಮಾಕ್ಕೆ ಇನ್ನು ಟೈಟಲ್‌ ಫಿಕ್ಸ್‌ ಆಗಿಲ್ವಂತೆ. ಟೆಕ್ನಿಷಿಯನ್‌ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಆಗಬೇಕಿದೆಯಂತೆ. ಇದೆಲ್ಲ ಆದರೆ, ಶೂಟಿಂಗ್‌ ಶುರುವಾಗುವುದು ಖಚಿತವಂತೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ
Categories
ಸಿನಿ ಸುದ್ದಿ

ದಸರಾ- ದೀಪಾವಳಿ ಹಬ್ಬಕ್ಕಿಂತ ಅದ್ಧೂರಿ ಕಿಚ್ಚನ ಹುಟ್ದಬ್ಬ ; ಮಾಣಿಕ್ಯನಿಗೆ ಅಭಿಮಾನಿ ದೇವರುಗಳಿಂದ ಬಿಗ್ ಸಪ್ರೈಸ್ !

ನಟ ಸುದೀಪ್‌ ಫ್ಯಾನ್ಸ್‌ ರೆಡಿ ಆಗಿದ್ದಾರೆ. ಈ ಬಾರಿ ತಮ್ಮ ನೆಚ್ಚಿನ ಕಿಚ್ಚ ಸುದೀಪ್‌ ಅವರ ಹುಟ್ಟು ಹಬ್ಬವನ್ನು ತುಂಬಾ ಡಿಫೆರೆಂಟ್‌ ಆಗಿ ಆಚರಿಸಲು ಸಿದ್ಧತೆ ನಡೆಸಿದೆ. ಅದು ಹೇಗೆ? ಇಲ್ಲಿದೆ ಫುಲ್‌ ಡಿಟೈಲ್ಸ್.

ಬಾದ್ ಷಾ ಎಷ್ಟು ಬ್ರಿಲಿಯಂಟ್ ಅಷ್ಟೇ ಕ್ಲೆವರ್ ಅವರ ಫ್ಯಾನ್ಸ್ ಅನ್ನೋದು ಮತ್ತೊಮ್ಮೆ ಪ್ರೂ‌ ಆಗಿದೆ.‌ ಕೊರೊನಾ ಅಟ್ಟಹಾಸ ಇನ್ನೂ ಕಮ್ಮಿಯಾಗದ ಕಾರಣ ಈ ವರ್ಷವೂ ಬರ್ತ್ ಡೇ ಆಚರಣೆ ಬೇಡ ಅಂತ ಕಿಚ್ಚ ಸುದೀಪ್ ಹೇಳುವ ಮೊದಲೇ ಅವರ ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದಾರೆ. ಗುಂಪು ಸೇರುವುದು ಬೇಡ, ಸರ್ಕಾರದ ನೀತಿ ನಿಯಮವನ್ನೂ ಉಲ್ಲಂಘಿಸುವುದು ಬೇಡ ಅಂತ ತೀರ್ಮಾನಕ್ಕೆ ಬಂದಿರುವ ಸಕಲ ಅಭಿಮಾನಿಗಳು ಮಾಣಿಕ್ಯನೇ ಹೆಮ್ಮೆ ಪಡುವಂತಹ ಕೆಲಸಕ್ಕೆ ಕೈಹಾಕಿದ್ದಾರೆ.

ಶಾಂತಿ ನಿವಾಸದ ಮುಂದೆ ಜಮಾಯಿಸೋಕೆ ಆಗಲ್ಲ, ಸಾಗರೋ ಪಾದಿಯಲ್ಲಿ ಜನ ಸೇರುವುದಕ್ಕೆ ಸರ್ಕಾರ ಪರ್ಮಿಷನ್ ಕೊಡಲ್ಲ. ದೀಪಣ್ಣನ ಹುಟ್ಟುಹಬ್ಬವನ್ನು ಆಚರಣೆ ಮಾಡೋದಕ್ಕೆ‌ ಅವಕಾಶ ಸಿಗಲ್ಲ. ಹಾಗಂತ, ಕೈಕಟ್ಟಿ ಕೂರೋದಕ್ಕೆ ಆಗುತ್ತಾ? ನೋ ವೇ ಚಾನ್ಸೇ ಇಲ್ಲ ಎಂದ ಬಾದ್ ಷಾ ಬಳಗ ಕರುನಾಡಿನ‌ ತುಂಬೆಲ್ಲಾ ಡಿಫೆರೆಂಟ್ ಆಗಿಮಾಣಿಕ್ಯನ ಹುಟ್ಟುಹಬ್ಬ ಆಚರಣೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಜಿಲ್ಲೆ,ತಾಲೂಕು ಮಾತ್ರವಲ್ಲ ಪ್ರತಿ ಹಳ್ಳಿಯಲ್ಲೂ ರನ್ನ ಭೂಮಿಗೆ ಬಂದ ದಿನವನ್ನು ಸಂಭ್ರಮಿಸುವುದಕ್ಕೆ ಸಿದ್ದತೆ ಮಾಡಿಕೊ ಳ್ಳುತ್ತಿದ್ದಾರೆ‌.

ಕೋಟಿಗೊಬ್ಬ ಕಿಚ್ಚನ ಜನ್ಮದಿನವನ್ನು ಪ್ರತಿವರ್ಷ ಅವರ ಫ್ಯಾನ್ಸ್ ಅದ್ದೂರಿಯಾಗಿ ಸೆಲಬ್ರೇಟ್ ಮಾಡ್ತಾರೆ. ದಸರಾ ಹಾಗೂ ದೀಪಾವಳಿ ‌ಹೀಗೆ ಇರುತ್ತೆ ಅಂತ ಜಡ್ಜ್ ಮಾಡಬಹುದು‌ ಆದರೆ ವೀರಮದಕರಿಯ ಬರ್ತ್ ಡೇ ಹೀಗೆ ಇರುತ್ತೆ ಅಂತ ಜಡ್ಜ್ ಮಾಡೋದಕ್ಕೆ ಆಗಲ್ಲ. ಯಾಕಂ ದ್ರೆ ದೀಪಣ್ಣನ ಫ್ಯಾನ್ಸ್ ನಿರೀಕ್ಷೆಗೂ‌ ಮೀರಿದ ಪ್ರಿಪ್ರೇಷನ್ ಮಾಡಿಕೊಂ ಡಿರ್ತಾರೆ. ಹಳ್ಳಿ ಹಳ್ಳಿಯಲ್ಲಿ ಈ‌ ಭಾರಿ ಯಾವ ರೀತಿ ಆಚರಣೆ ಮಾಡ್ತಾರೋ ಗೊತ್ತಿಲ್ಲ. ಆದರೆ,‌ ಹಸಿದವರಿಗೆ-ನೊಂದವರಿಗೆ- ಕಷ್ಟದಲ್ಲಿರುವವರಿಗೆ ನೆರವಾಗುವುದಂತೂ ಸತ್ಯ.ಈ ಬಗ್ಗೆ ಕಿಚ್ಚನ ಅಭಿಮಾನಿ ಸಂಘದ ಮುಖ್ಯ ಅಧ್ಯಕ್ಷರಾಗಿರುವ ನವೀನ್ ಹಾಗೂ ಜಗದೀಶ್ ಈಗಾಗಲೇ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾದಿಂದ ಸಿನಿಮಾಗೆ ತನ್ನ ಅಭಿಮಾನಿಗಳಿಗೆ ಕಿಚ್ಚ ಸಪ್ರೈಸ್ ಕೊಡ್ತಾರೆ. ಅದರಂತೇ ತಮ್ಮ ಬಾಸ್ ಗೋಸ್ಕರ ಫ್ಯಾನ್ಸ್ ಕೂಡ ಸ್ಪೆಷಲ್ ಗಿಫ್ಟ್ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ.‌ ಪ್ರತಿವರ್ಷ ಆರಾಧಕ ಸುದೀಪ್ ಹುಟ್ಟುಹಬ್ಬದಂದು ಫ್ಯಾನ್ಸ್ ಕಾಮನ್‌ ಡಿಪಿ ಡಿಸೈನ್ ಮಾಡಿಸ್ತಾರೆ.‌ ವಿಶೇಷ ಅತಿಥಿ ಕಡೆಯಿಂದ ಸಿಡಿಪಿ ರಿಲೀಸ್ ಮಾಡ್ಸಿ ಮಾಣಿಕ್ಯನಿಗೆ ಸಪ್ರೈಸ್ ಕೊಡ್ತಾರೆ. ಈ‌ಭಾರಿ ಕ್ರಿಕೆಟ್ ದಿಗ್ಗಜ ಅನಿಲ್‌ಕುಂಬ್ಳೆ ಅವ್ರಿಂದ ಕಾಮನ್‌ ಡಿಪಿ ಬಿಡುಗಡೆ ಮಾಡಿಸಲಿದ್ದಾರೆ. ಆಗಸ್ಟ್ 21 ರಂದು ಸೋಷಿಯಲ್ ಲೋಕದಲ್ಲಿ ಬಿಡುಗಡೆಯಾಗಲಿದ್ದು ವಿಕ್ರಾಂತ್ ರೋಣನ‌ ಕಾಮನ್ ಡಿಪಿ ಟ್ರೆಂಡ್ ಆಗಲಿದೆ.

ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ 12 ದಿನಗಳು ಬಾಕಿಯಿವೆ. ಸೆಪ್ಟೆಂಬರ್ 2 ರಂದು 49 ವರ್ಷ ಪೂರೈಸಲಿರುವ ಬಾದ್ ಷಾ, 50 ನೇ ವಸಂತಕ್ಕೆ ಕಾಲಿಡಲಿದ್ದಾರೆ. ದಸರಾ- ದೀಪಾವಳಿಯಷ್ಟೇ ರಂಗುರಂಗಾಗಿ ಬಚ್ಚನ್ ಬರ್ತ್ ಡೇ ನಡೆಯಲಿದೆ. ಮಾಣಿಕ್ಯ ಹೆಮ್ಮೆ ಪಡುವಂತಹ‌ ಕೆಲಸ ಕಾರ್ಯಗಳಿಗೆ ಅಭಿಮಾನಿ ದೇವರುಗಳು ಚಾಲನೆ ಕೊಡ್ತಾರೆ. ಇಡೀ ಸ್ಯಾಂಡಲ್ ವುಡ್ ತಿರುಗಿ‌ ನೋಡುವ ಕೆಲಸ ಮಾಡ್ತಾರೆ. ಸೋ ಸೆಪ್ಟೆಂಬರ್ 2 ರವರೆಗೂ ವೇಯ್ಟ್ ಅಂಡ್ ಸೀ.

  • ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ
Categories
ಸಿನಿ ಸುದ್ದಿ

ಸಿಟ್‌ ರಾಜ ಸಿಟ್‌ : ವರಮಹಾಲಕ್ಷ್ಮಿ ದಿನ ಗಾಂಧಿ ನಗರದ ಮಂದಿನಾ ಬೆಚ್ಚಿ ಬೀಳಿಸಿದ ರಾಜಾಸೀಟ್‌ !

ಕಾಂತ ಕನ್ನಳ್ಳಿ, ಸ್ಯಾಂಡಲ್‌ ವುಡ್‌ನಲ್ಲಿ ಈ ಹೆಸರು ಕೇಳಿದಾಕ್ಷಣ ನೆನಪಾಗೋದು ʼಇರುವುದೆಲ್ಲವ ಬಿಟ್ಟುʼ ಚಿತ್ರ. ಯಾಕಂದ್ರೆ ಅವರು ನಿರ್ದೇಶನದ ಈ ಚಿತ್ರದಲ್ಲಿನ ಅಭಿನಯಕ್ಕೆ ಮೇಘನಾ ರಾಜ್‌ ಗೆ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಬಂತು. ಆ ಚಿತ್ರದ ಒಂದಷ್ಟು ಗ್ಯಾಪ್‌ ನಂತರ ಯುವ ನಿರ್ದೇಶಕ ಕಾಂತ ಕನ್ನಳ್ಳಿ ಹೊಸದೊಂದು ಆಲೋಚನೆಯೊಂದಿಗೆ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದಿಕ್ಕೆ ರೆಡಿಯಾಗಿದ್ದಾರೆ. ಹೊಸದೊಂದು ಪ್ರೊಡಕ್ಷನ್ ಹೌಸ್ ನಡಿ ಹೊಸಬರ ಜತೆಗೆ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಶುಕ್ರವಾರವಷ್ಟೇ ಲಾಂಚ್ ಆಗಿದೆ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಇತ್ತು. ಅಂದು ಲಕ್ಷ್ಮಿ ಎಲ್ಲರ ಮನೆಗೆ ಬರ್ತಾಳೆ ಅನ್ನೋ ನಂಬಿಕೆ. ಶುಭ ದಿನ. ಅದೇ ಹಿನ್ನೆಲೆಯಲ್ಲಿ ಕಾಂತ ಕನ್ನಳ್ಳಿ ನಿರ್ದೇಶನದ ಹೊಸ ಸಿನಿಮಾದ ಫಸ್ಟ್ ಪೋಸ್ಟರ್ ರಿವೀಲ್ ಆಗಿದೆ.

ಚಿತ್ರದ ಹೆಸರು ʼರಾಜಾಸೀಟ್ʼ.‌ ನವರಸ ನಾಯಕ ಜಗ್ಗೇಶ್‌ ಅವರು ಈ ಪೋಸ್ಟರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ʼರಾಜಾಸೀಟ್‌ʼ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಮಡಿಕೇರಿಯ ರಾಜಾಸೀಟ್‌. ಕೊಡಗಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಇದು. ಹಾಗೆಯೇ ಇದಕ್ಕೆ ಹಿಸ್ಟ್ರಿಯ ಟಚ್‌ ಕೂಡ ಇದೆ. ಹಾಗಂತ ಈ ಚಿತ್ರ ತಂಡ ಅದೇ ʼರಾಜಾಸೀಟ್‌ʼ ಕುರಿತು ಸಿನಿಮಾ ಮಾಡ್ಲಿಕ್ಕೆ ಹೊರಟಿದೆಯಾ ? ಆ ಬಗೆಗಿನ ಕ್ಯೂರಿಯಾಟಿಸಿಗೆ ಇನ್ನು ಉತ್ತರ ಸಿಕ್ಕಿಲ್ಲ. ಆದರೆ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ನೋಡಿದರೆ ಮಡಿಕೇರಿ ʼರಾಜಾಸೀಟ್‌ʼಗೆ ಯಾವುದೇ ಕನೆಕ್ಷನ್‌ ಇದ್ದಂತೆ ಕಾಣುತ್ತಿಲ್ಲ. ಸುತ್ತಿಕೊಂಡಿರೋ ಕೈ, ಅದರಡಿ ಸಿಲುಕಿದ ಕಣ್ಣು, ಅಲ್ಲಿ ಗಮನ ಸೆಳೆಯುವ ನೀಲಿ ಆಕಾರದ ಕಣ್ಣು ಗುಡ್ಡೆ, ವಿಚಿತ್ರವಾಗಿರೋ ಅದರ ಲುಕ್ಕು….. ಹಾಗೆ ಸುಮ್ಮನ್ನೆ ಅದನ್ನೇ ದೃಷ್ಟಿಸಿ ನೋಡುತ್ತಾ ಹೋದರೆ ಒಂದು ಕ್ಷಣ ನಡುಕ ತರಿಸುವ ಹಾಗಿದೆ. ಇದೆಲ್ಲ ನೋಡಿದರೆ ಇದೊಂದು ಹಾರರ್‌ ಜಾನರ್‌ ಕಥೆ ಅನ್ನೋದು ನಿಮಗೂ ಅನ್ಸುತ್ತೆ. ಆ ಮಟ್ಟಿಗೆ ಈಗ ಸೋಷಲ್‌ ಮೀಡಿಯಾದಲ್ಲಿ ʼರಾಜಾಸೀಟ್‌ʼ ಚಿತ್ರದ ಪೋಸ್ಟರ್‌ ಸದ್ದು ಮಾಡುತ್ತಿದೆ.

ಎನ್‌ರೂಟ್‌ ಪ್ರೊಡಕ್ಷನ್‌ ಹೌಸ್‌ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದು. ಅಂದ ಹಾಗೆ ಎನ್‌ ರೂಟ್‌ ಪ್ರೊಡಕ್ಷನ್‌ ಹೌಸ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿರುವ ಹೊಸ ಸಂಸ್ಥೆ. ಮಾಧ್ಯಮ ಕ್ಷೇತ್ರದಲ್ಲಿಯೇ ಇದ್ದ ಶ್ರೀರಾಮ್‌ ಸೇರಿದಂತೆ ಎಳು ಜನ ಯುವಕರು ಇದರ ರೂವಾರಿಗಳು. ಸದ್ಯಕ್ಕೀಗ ಒಟಿಟಿ ನಲ್ಲಿ ಕನ್ನಡ ಸಿನಿಮಾಗಳ ಟ್ರೆಂಡ್‌ ಶುರುವಾಗಿದೆ. ಅದೇ ನಿಟ್ಟಿನಲ್ಲಿ ಒಟಿಟಿಗೆ ಅಂತಲೇ ರಾಜಾಸೀಟ್‌ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರಂತೆ. ಇನ್ನು ಸ್ಪೆಷಲ್‌ ಅಂದ್ರೆ ರಾಜಾಸೀಟ್‌ ಕಥೆ, ನಿರ್ಮಾಪಕರ ಶ್ರೀರಾಮ್‌ ಅವರದ್ದೇ. ನಿರ್ಮಾಣದ ಜತೆಗೆ ಈಗವರು ನಿರ್ದೇಶನಕ್ಕೂ ಬರುವ ಹಂಬಲ ಹೊತ್ತಿದ್ದಾರೆ. ಸದ್ಯಕ್ಕೆ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಯುವ ನಿರ್ದೇಶಕ ಕಾಂತ ಕನ್ನಳ್ಳಿಗೆ ಈ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊರಿಸಿದ್ದಾರಂತೆ.

ರಾಜಾಸೀಟ್‌ ಗೆ ಈಗ ಹೀರೋ ಮಾತ್ರ ಎಂಟ್ರಿ ಆಗಿದ್ದಾರೆ. ಆರವ್‌ ಗೌಡ ಅಲಿಯಾಸ್‌ ಆರವ್‌ ಲೋಕೇಶ್‌ ಈ ಚಿತ್ರದ ಮುಖ್ಯ ಮಾತ್ರಕ್ಕೆ ಸೆಲೆಕ್ಟ್‌ ಆಗಿದ್ದು, ಉಳಿದ ಕ್ಯಾರೆಕ್ಟರ್‌ ಗಳಿಗೆ ಇಷ್ಟರಲ್ಲಿಯೇ ಆರ್ಟಿಸ್ಟ್‌ ಸೆಲೆಕ್ಷನ್‌ ನಡೆಯಲಿದೆಯಂತೆ. ಬಹುತೇಕ ಹೊಸ ಆರ್ಟಿಸ್ಟ್‌ ಗಳನ್ನೇ ಪರಿಚಯಿ ಸುವ ಇರಾದೆ ಚಿತ್ರ ತಂಡಕ್ಕಿದೆ. ಟೆಕ್ನಿಷನ್‌ ಅಂತ ಬಂದಾಗ ಛಾಯಾಗ್ರ ಹಣಕ್ಕೆ ರಾಘವ್‌ ಎನ್ನುವವರನ್ನು ಸೆಲೆಕ್ಟ್‌ ಮಾಡಿಕೊಳ್ಳಲಾಗಿದೆ. ಇನ್ನು ಹದಿನೈದು ದಿನಗಳೊಳಗೆ ಚಿತ್ರಕ್ಕೆ ಬೇಕಾಗಿರುವ ಕಲಾವಿದರು ಹಾಗೂ ತಂತ್ರಜ್ಜರನ್ನು ಆಯ್ಕೆ ಮಾಡಿಕೊಂಡು, ಒಂದೇ ಶೆಡ್ಯೂಲ್‌ ನಲ್ಲಿ ಬೆಂಗಳೂರು, ಮೈಸೂರು ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿ ಲಹರಿ
Categories
ಸಿನಿ ಸುದ್ದಿ

ಅಭಿಮಾನಿ ದೇವರಿಗೆ ಶಿವಣ್ಣ ಕೊಟ್ಟರಲ್ಲ ಕಾಲ್ ಶೀಟ್ : ಸೆಂಚುರಿಸ್ಟಾರ್ 127 ಚಿತ್ರಕ್ಕೆ ಅಭಿಮಾನಿಯೇ ಆಕ್ಷನ್ ಕಟ್ !

ಅಭಿಮಾನಿಗಳೇ ನಮ್ಮನೆ ದೇವರು ಅಂತ ಅಣ್ಣಾವ್ರು ಹೇಳಿಕೊಟ್ಟು ಹೋಗಿದ್ದಾರೆ. ಅಪ್ಪಾಜಿಯ ಮಕ್ಕಳು ಕೂಡ ಅಭಿಮಾನಿಗಳಲ್ಲಿ ದೇವರನ್ನು ಕಾಣ್ತಿದ್ದಾರೆ. ಅದರಂತೇ ಭಕ್ತ ಸಮೂಹ ಕೂಡ ದೊಡ್ಮನೆ ಯ‌‌ನ್ನು ಹಾಗೂ‌‌ ದೊಡ್ಮನೆಯ ಕಲಾವಿದರನ್ನು ಆರಾಧಿಸಿಕೊಂಡು ಪೂಜಿಸಿಕೊಂಡು‌ ಹೋಗ್ತಿದ್ದಾರೆ. ಈ ದಿವ್ಯ ಅನುಬಂಧದ ಪಯಣದಲ್ಲಿ ಅಭಿಮಾನಿ‌ಯೊಬ್ಬರಿಗೆ ಶಿವಣ್ಣನನ್ನು ಡೈರೆಕ್ಟ್ ಮಾಡುವ ಅವಕಾಶ ಸಿಕ್ಕಿದೆ. ಅಷ್ಟಕ್ಕೂ, ಆ ಅದೃಷ್ಟವಂತ ಅಭಿಮಾನಿ ಬೇರಾರು ಅಲ್ಲ ಮಮ್ಮಿ ಖ್ಯಾತಿಯ ಯುವ ನಿರ್ದೇಶಕ ಕಮ್ ಶಿವಣ್ಣನ ಅಪ್ಪಟ‌ ಅಭಿಮಾನಿ ಲೋಹಿತ್.

ಪ್ರತಿಯೊಬ್ಬ ಅಭಿಮಾನಿಗೂ ಒಂದೊಂದು‌ ಕನಸು ಇರುತ್ತೆ. ಅದರಂತೇ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಆರಾಧಿಸುವ ಲೋಹಿತ್ ಗೂ ಒಂದು ಡ್ರೀಮ್ ಇತ್ತು. ಕರುನಾಡ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳಬೇಕು ಎನ್ನುವ ದಿವ್ಯಕನಸಿತ್ತು. ಆ ಕನಸು ಇಷ್ಟು ಬೇಗ ನೆರವೇರುತ್ತೆ ಅಂತ ಸ್ವತಃ ಲೋಹಿತ್ ಕೂಡ ಊಹೆ ಮಾಡಿರಲಿಲ್ಲ. ನಿರೀಕ್ಷೆಗೂ ಮೀರಿದ, ಊಹೆಗೂ ನಿಲುಕದ ಘಟನೆ ನಡೆಯಿತು. ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷವಾಗಿ ಶಿವಣ್ಣ ಹಾಗೂ ಲೋಹಿತ್ ಕಾಂಬಿನೇಷನ್‌ನಲ್ಲಿ ʼಸತ್ಯಮಂಗಳʼ ಸಿನಿಮಾ ಅನೌನ್ಸ್ ಕೂಡ ಆಗಿದೆ.

‘ಸತ್ಯಮಂಗಳ’ ಅಲಿಯಾಸ್‌ ʼಸತ್ಯ ಮಂಗಲʼ ಅನ್ನೋದು ತಮಿಳು ನಾಡಿನ ಗಡಿಯಲ್ಲಿರುವಂತಹ ಒಂದು ಕಾಡು ಪ್ರದೇಶ. ಆ ಕಾಡಿನ‌ ಹೆಸರನ್ನೇ ಟೈಟಲ್ಲಾಗಿಸಿರುವ ನಿರ್ದೇಶಕ ಲೋಹಿತ್, ಥ್ರಿಲ್ಲರ್ ಜಾನ್ನರ್‌ ನಲ್ಲಿ ಸಿನಿಮಾ ಕಟ್ಟಿಕೊಡುವುದಕ್ಕೆ ಹೊರಟಂತಿದೆ. ದಟ್ಟ ಅಭಯಾರಣ್ಯ ಹಾಗೂ ಕರಿಚಿರತೆ ಇರುವ ಪೋಸ್ಟರ್ ನೋಡಿದರೆ ಇದೊಂದು ಫ್ಯಾಂಟ ಮ್ ರೀತಿಯ ಸಿನಿಮಾ ಎಂದೆನಿಸುತ್ತೆ. ಈ ಹಿಂದೆ ಹಾರರ್- ಥ್ರಿಲ್ಲರ್ ಸಿನಿಮಾ ಮಾಡಿ ಗೆದ್ದಿರುವ, ʼಮಮ್ಮಿ ಸೇವ್ ಮೀʼ ಹಾಗೂ ʼದೇವಕಿʼ ಚಿತ್ರ ಮಾಡಿ ಸೈ‌ ಎನಿಸಿಕೊಂಡಿರುವ ನಿರ್ದೇಶಕ ಲೋಹಿತ್ ‘ಸತ್ಯಮಂಗಳ’ ಸಿನಿಮಾ ಮೂಲಕ ಬೆಚ್ಚಿಬೀಳಿಸ್ತಾರಾ ಕಾದುನೋಡಬೇಕು.

ಇನ್ನೂ ʼಸತ್ಯಮಂಗಳ ʼಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡ್ತಿದ್ದಾರೆ. ಶಿವಣ್ಣನ 123 ನೇ ʼಬೈರಾಗಿʼ ಚಿತ್ರಕ್ಕೆ ಇವರೇ ನಿರ್ಮಾಪ ಕರು. ಇನ್ನೇನು ಸಿನಿಮಾ ಮುಗಿತ್ತಲ್ಲ ಮುಂದೆ ಯಾವ ಸಿನಿಮಾ ಮಾಡ್ತೀರಾ ಸಾರ್ಥಕ್ ಅಂತ ಸೆಟ್ ನಲ್ಲಿ‌ ಶಿವಣ್ಣ ಕೇಳಿದ್ರಂತೆ. ಆಗ ನಿರ್ದೇಶಕ ಲೋಹಿತ್ ಹೇಳಿದ್ದ ಒನ್ ಲೈನ್ ಸ್ಟೋರಿನಾ ಸಾರ್ಥಕ್ ಶಿವಣ್ಣನಿಗೆ ಹೇಳಿದ್ರಂತೆ. ಕಥೆ ಕೇಳಿ ಥ್ರಿಲ್ಲಾದ ಹ್ಯಾಟ್ರಿಕ್ ಹೀರೋ ಲೋಹಿತ್ ನ ಕರೆಸಿ ಮಾತನಾಡಿದ್ದಾರೆ. ಸ್ಪಾಟ್ ನಲ್ಲೇ ಕಾಲ್ ಶೀಟ್ ಕೊಟ್ಟು ಮೂವೀ ಅನೌನ್ಸ್ ಮಾಡೋದಕ್ಕೆ ಹೇಳಿದ್ದಾರೆ. ಹೀಗಾಗಿ, ವರಮಹಾಲಕ್ಷ್ಮಿ ಹಬ್ಬದಂದು ಶಿವಣ್ಣನ 127 ನೇ ಚಿತ್ರವಾಗಿ ʼಸತ್ಯಮಂಗಳʼ ಘೋಷಣೆಯಾಗಿದೆ.‌

ಇಷ್ಟೆಲ್ಲಾ ಹೇಳಿದ್ಮೇಲೆ ಈ ಮ್ಯಾಟರ್ ಹೇಳಲೇಬೇಕು. ನಿರ್ದೇಶಕ ಲೋಹಿತ್ ಗೆ ಬಾಲ್ಯದಿಂದಲೂ ಸಿನಿಮಾ ಮೇಲೆ ಹುಚ್ಚಿತ್ತು .ನಿಧಾನಕ್ಕೆ ಸಿನಿಮಾನೇ ಉಸಿರು ಎನ್ನುವಂತಾಯ್ತು. ಲೋಹಿತ್ ಇಷ್ಟರ ಮಟ್ಟಿಗೆ ಮೂವೀ ಮೇಲೆ ವ್ಯಾಮೋಹ ಬೆಳೆಸಿಕೊಳ್ಳಲಿಕ್ಕೆ, ಮಾಯಲೋಕದ ಕಡೆ ಆಕರ್ಷಿತರಾಗಲಿಕ್ಕೆ ಕಾರಣ ಮತ್ತದೇ ಶಿವಣ್ಣ. ಹ್ಯಾಟ್ರಿಕ್ ಹೀರೋ ಸಿನಿಮಾಗಳು ಲೋಹಿತ್ ಮೇಲೆ ಗಾಡ ಪರಿಣಾಮ ಬೀರಿವೆಯಂತೆ. ಮುತ್ತಣ್ಣನ ಮೂವೀ ನೋಡಲಿಕ್ಕೆ ಥಿಯೇಟರ್ ಗೆ ಹೋಗಿ ಗಂಟೆಗಟ್ಟಲೆ ಕಾದು ಟಿಕೆಟ್ ಪಡೆಯುತ್ತಿದ್ದರಂತೆ. ಈ ಸಂಗತಿಯನ್ನ ತಮ್ಮ ಸೋಷಿಯಲ್ ಪೇಜ್ ನಲ್ಲಿ ಬರೆದುಕೊಂಡಿರುವ ಡೈರೆಕ್ಟರ್ ಲೋಹಿತ್, ನನ್ನ ಮುಂದಿನ ಸಿನಿಮಾ ಸತ್ಯಮಂಗಳಕ್ಕೆ ಶಿವಣ್ಣನೇ ಹೀರೋ. ಇಂತಹ ಕ್ಷಣಕ್ಕಾಗಿಯೇ ಚಿತ್ರರಂಗಕ್ಕೆ ಬಂದಿದ್ದು. ಈ ಅದ್ಬುತ ಖುಷಿಯ ಕ್ಷಣವನ್ನು ವರ್ಣಿಸೋಕೆ ಪದಗಳಿಂದ ಸಾಧ್ಯವಿಲ್ಲ ಎಂದಿದ್ದಾರೆ. ಮಹದಾಸೆ ಈಡೇರಿಸಿದ ಶಿವಣ್ಣನಿಗೆ ಸಲಾಂ ಎಂದಿರುವ ಅಭಿಮಾನಿ ಲೋಹಿತ್, ʼಸತ್ಯಮಂಗಳʼ ಮೂಲಕ ಅದ್ಯಾವ ರೀತಿ ಸುನಾಮಿ ಎಬ್ಬಿಸ್ತಾರೆ ಅಂತ ವೇಯ್ಟ್ ಮಾಡಿ‌ ನೋಡಬೇಕು.
– ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಾಯಬಜಾರ್ ಗೆ ನಯಾ‌ ‘ಸೂಪರ್ ಸ್ಟಾರ್’ ಎಂಟ್ರಿ; Class- mass ಅಷ್ಟೇ ಅಲ್ಲಮ್ಮಾ ಹೈಕ್ಲಾಸ್ M acho m an-ಸ್ಯಾಂಡಲ್ವುಡ್ ಸೆನ್ಸೇಷನ್ !

ಮುಖಕ್ಕೆ ಬಣ್ಣ ಹಚ್ಚಬೇಕು, ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬೇಕು.‌ ಬೆಳ್ಳಿಪರದೆ ಮೇಲೆ ದಿಬ್ಬಣ ಹೊರಡಬೇಕು.‌ ಅಭಿಮಾನಿ ದೇವರುಗಳ ಹೃದಯಕ್ಕೆ ಲಗ್ಗೆ ಇಡಬೇಕು.‌ ಬಿಗ್ ಸ್ಕ್ರೀನ್ ಹೀರೋ ಆಗಿ ಧಗಧಗಿಸಬೇಕು‌ ಅನ್ನೋದು ಅದೆಷ್ಟೋ ಕಲಾವಿದರ ದಿವ್ಯಕನಸು. ಆ ಕನಸಿನ ಸಾಕಾರಕ್ಕಾಗಿ ಬೆವರಲ್ಲ ರಕ್ತ ಸುರಿಸುವುದಕ್ಕೂ ರೆಡಿಯಿರುತ್ತಾರೆ. ಇದೆಲ್ಲದಕ್ಕೂ ತಯಾರಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ರ ಅಣ್ಣನ ಮಗ ನಿರಂಜನ್ ಸುಧೀಂದ್ರ ʼಸೂಪರ್‌ ಸ್ಟಾರ್‌ʼ ಆಗಿ ಅಖಾಡಕ್ಕೆ ಧುಮ್ಕಿದ್ದಾರೆ. ಮೊದಲ ನೋಟದಲ್ಲೇ‌ ನೋಡುಗರನ್ನ ಅಟ್ರ್ಯಾಕ್ಟ್ ಮಾಡಿದ್ದಾರೆ.

https://youtu.be/NEe5POu5qLQ

ಅಂದ ಹಾಗೆ ‘ಸೂಪರ್ ಸ್ಟಾರ್’ ಅನ್ನೋದು ನಿರಂಜನ್ ಸುಧೀಂದ್ರ ಅಭಿನಯದ ಎರಡನೇ ಚಿತ್ರ. ʼನಮ್ಮ ಹುಡುಗರುʼ ಸಿನಿಮಾ ಮೂಲಕ ಡೆಬ್ಯೂ ಮಾಡ್ತಿದ್ದಾರೆ. ಈ ಮಧ್ಯೆ ʼಸೂಪರ್ ಸ್ಟಾರ್ʼ ಆಗಿ ಫೀಲ್ಡಿಗಿಳಿದಿದ್ದು, ವರಮಹಾಲಕ್ಷ್ಮಿ ಹಬ್ಬ ಪ್ಲಸ್ ನಿರಂಜನ್ ಹುಟ್ಟುಹಬ್ಬದ ವಿಶೇಷವಾಗಿ ‘ ಸೂಪರ್ ಸ್ಟಾರ್’ ಟೀಸರ್ ರಿಲೀಸ್ ಆಗಿದೆ.‌ಕ್ಲ್ಯಾಸಿ ಲುಕ್ ನಲ್ಲಿ ಕನ್ನಡಕ್ಕೊಬ್ಬ ಕ್ಲ್ಯಾಸಿಕ್ ಸ್ಟಾರ್ ಥರ ಕಾಣುವ ನಿರಂಜನ್ ನ ನೋಡಿ ರಿಯಲ್ ಸ್ಟಾರ್ ಉಪ್ಪಿ ಫಿದಾ‌ ಆಗಿದ್ದಾರೆ.ಯಂಗ್ ರಿಯಲ್ ಸ್ಟಾರ್ ನಿರಂಜನ್ ಹೈಟ್- ಪರ್ಸನಾಲಿಟಿ ಪಕ್ಕಾಯಿದೆ. ಸ್ಟೈಲಿಷ್ ಲುಕ್ ನಲ್ಲಿ ಮ್ಯಾಚೋಮ್ಯಾನ್ ರೀತಿ‌ ಕಾಣುವ ನಿರಂಜನ್ ತಮ್ಮ ಕುಟುಂಬ ಮಾತ್ರವಲ್ಲ ಸಿನಿಪ್ರೇಮಿಗಳು ಕೂಡ ಕ್ಲೀನ್‌ಬೋಲ್ಡ್ ಆಗುವಂತೆ ಮಾಡಿದ್ದಾರೆ. ನಿರ್ದೇಶಕ ವೆಂಕಟೇಶ್ ಬಾಬು ನಿರಂಜನ್ ರನ್ನ ಹೈಕ್ಲಾಸ್ ಆಗಿ ತೋರಿಸಿದ್ದಾರೆ.

ಕಳೆದ ವರ್ಷ ನಿರಂಜನ್ ಹುಟ್ಟಿದ ಹಬ್ಬಕ್ಕೆ ‘ ಸೂಪರ್ ಸ್ಟಾರ್’ ಟೈಟಲ್ ಜೊತೆಗೆ ಟೀಸರ್ ಲಾಂಚ್ ಮಾಡಲಾಗಿತ್ತು. ಯಶ್ ವಾಯ್ಸ್ ಕೊಟ್ಟಿದ್ದರು, ನಿರಂಜನ್ ತಮ್ಮ ಫಿಸಿಕ್ ನ ಎಕ್ಸ್ ಪೋಸ್ ಮಾಡಿದ್ದರು. ಆಗ ಎಲ್ಲರೂ ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಅಂತ ಮಾತನಾಡಿಕೊಂಡಿದ್ದರು. ಇಂದು ಅದೇ ಮಂದಿ‌ ನಿರಂಜನ್ ಕ್ಲಾಸ್ ಗೂ ಸೈ ಮಾಸ್ ಗೂ ಜೈ‌ ಮಟೀರಿಯಲ್ ಎನ್ನುತ್ತಿದ್ದಾರೆಸೂಪರ್ ಸ್ಟಾರ್ ಚಿತ್ರದಲ್ಲಿ ನಿರಂಜನ್ ಇಂಟರ್ ನ್ಯಾಷನಲ್ ಡ್ಯಾನ್ಸರ್ ಆಗಿ ಕಿಕ್ಕೇರಿಸಲಿದ್ದಾರೆ. ಮಾಡೆಲ್ ಕಮ್ ಸೋಷಿಯಲ್‌ ಮೀಡಿಯಾ ಸೆನ್ಸೇಷನ್ ಕ್ವೀನ್ ಜಾರಾ ಯಾಸ್ಮೀನ್ ನಿರಂಜನ್ ಗೆ ಜೋಡಿಯಾಗಿದ್ದಾರೆ. ಡ್ಯಾನ್ಸ್ ಧಮಾಕ- ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ – ಫ್ಯಾಮಿಲಿ ಸೆಂಟಿಮೆಂಟ್ ನ ಬ್ಲೆಂಡ್ ಮಾಡಿ ಒಂದೊಳ್ಳೆ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾ ಮಾಡಲಿದ್ದಾರೆ. ಮೈಲಾರಿ ಎಂ ನಿರ್ಮಾಣದಲ್ಲಿ ಅದ್ದೂರಿಯಾಗಿಯೇ ಚಿತ್ರ ಮೂ ಡಿಬರಲಿದೆ. 50 ಪರ್ಸೆಂಟ್ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್ ನಿಂದ ಮತ್ತೆ ಶೂಟಿಂಗ್ ಅಖಾಡಕ್ಕೆ ಧುಮ್ಕಲಿದ್ದಾರೆ.

ಕೊನೆಯಲ್ಲಿ ಒಂದು ಮಾತು, ಸಿನಿ ದುನಿಯಾದಲ್ಲಿ ಬೇಜಾನ್‌ ಸೈಕಲ್‌ ಹೊಡೆದು ಸಕ್ಸಸ್‌ ಆದ್ಮೇಲೆ ಕೆಲವು ಸೂಪರ ಸ್ಟಾರ್‌ ಆಗ್ತಾರೆ. ಆಗಿದ್ದಾರೆಯೂ ಕೂಡ. ಬಟ್‌ ಎಂಟ್ರಿಯಲ್ಲಿಯೇ ಸೂಪರ್‌ ಸ್ಟಾರ್‌ ಅಂತ ಫೋಸು ನೀಡಿದ್ದಾರೆ ನಿರಂಜನ್‌ ಸುಧೀಂದ್ರ. ಹಾಗಂತ, ಮಾಯಲೋಕದ ಮೇಲೆ ಆಕರ್ಷಣೆಗೊಳಗಾದ ಎಲ್ಲರಿಗೂ ‘ ಸೂಪರ್ ಸ್ಟಾರ್’ ಆಗಿ ಕಣಕ್ಕಿಳಿಯುವ ಅವಕಾಶ ಸಿಗೋದಿಲ್ಲ.‌ ಫೀಲ್ಡ್ ನಲ್ಲಿ ಬೇಜಾನ್ ಸೈಕಲ್ ಹೊಡಿಬೇಕಾಗುತ್ತೆ. ಒಂಟಿ ಸಲಗದಂತೆ ಹೋರಾಡಬೇಕಾಗುತ್ತೆ. ಆನಂತರವಷ್ಟೇ ಮಿನುಗುವ ಲೋಕದಲ್ಲಿ ಎಲ್ಲವೂ ಸಾಧ್ಯ.‌ ಆದರೆ ನಿರಂಜನ್‌ ವಿಚಾರದಲ್ಲಿ ಹಾಗಾಗಲಿಲ್ಲ ಚಿಕ್ಕಪ್ಪ ‌ರಿಯಲ್ ಸ್ಟಾರ್ ಆಗಿರೋದ್ರಿಂದ ‘ ಸೂಪರ್ ಸ್ಟಾರ್’ ಟೈಟಲ್ ಇಟ್ಟು ತೊಡೆತಟ್ಟುವುದಕ್ಕೆ ಸಾಧ್ಯವಾಗಿದೆ. ಅಟ್ ದಿ ಸೇಮ್ ಟೈಮ್ ನವತಾರೆ ನಿರಂಜನ್‌ ಗೂ ಜವಾಬ್ದಾರಿ ಹೆಚ್ಚಿಸಿದೆ ಅನ್ನೋದು ಕೂಡ ಅಷ್ಟೇ ಸತ್ಯ.

  • ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ‌ಸಿನಿಲಹರಿ

error: Content is protected !!