ಭೀಕರ ರಣಭಯಂಕರ ರಾಜಮನಾರ್ : ಸಲಾರ್‌ ಅಡ್ಡದಲ್ಲಿ ಜಗ್ಗು ಸುನಾಮಿ !

ಮನುಷ್ಯನಿಗೆ ಎರಡ್ಸಲ ಮೈ ನಡುಗುತ್ತೆ, ಒಂದು ತುಂಬಾ ಚಳಿ ಅಂದಾಗ, ಇನ್ನೊಂದು ತುಂಬಾ ಭಯ ಅದಾಗ … ಹೀಗಂತ ಬೆಂಕಿ ಡೈಲಾಗ್‌ ಉಗುಳಿ ಕಣ್ಣು ಹುಬ್ಬು ಹಾರಿಸಿದ್ದ ಖಡಕ್‌ ವಿಲನ್‌ ಜಗಪತಿ ಬಾಬು ಈಗ ಮೂಗಿಗೆ ರಿಂಗ್‌ ಸಿಕ್ಕಿಸಿಕೊಂಡು ಬಾಯಲ್ಲಿ ಸಿಗರೇಟ್‌ ಹಚ್ಚಿ ಹೊಗೆ ಬಿಡುತ್ತಾ ಎದುರಾಳಿಯನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದಾರೆ. ಜಗ್ಗು ಲುಕ್‌ ನೋಡಿದರವೆಲ್ಲ ದೆವುಡಾ ಅಂತ ನಿಬ್ಬೆರಗಾಗಿ ನೋಡ್ತಿದ್ದಾರೆ.

ರಾಜಮನಾರ್ ಅಂದರೆ ಏನು ? ರಾಜಮನಾರ್ ಅಂದರೆ ಯಾರು ? ಹೀಗೆ ತಲೆಗೆ ಹುಳ‌ಬಿಟ್ಕೊಂಡು ಸೌತ್ ಸಿನಿಮಾದ‌ ಎಲ್ಲಾ ಸಿನಿಮಾ ಪ್ರೇಕ್ಷಕರು ಕೂತೂಹಲದಿಂದ ಕಾಯ್ತಿದ್ದರು. ಸಲಾರ್ ಚಿತ್ರತಂಡ ಪರಿಚಯಿಸ ಲಿರುವ ‘ರಾಜಮನಾರ್’ ಗಾಗಿ ಕಣ್ಣರಳಿಸಿ‌ ಕಾಯ್ತಿದ್ದರು. ಹೀಗೆ ಕೂತೂಹಲ ದಿಂದ ಕಾಯ್ತಿದ್ದವರಿಗೆ ‘ಸಲಾರ್’ ಚಿತ್ರತಂಡ ಭರ್ಜರಿ ಸಪ್ರೈಸ್ ಕೊಟ್ಟಿದೆ. ರಾಜಮನಾರ್ ಬೇರಾರು ಅಲ್ಲ ಒನ್ ಆಂಡ್ ಓನ್ಲೀ ಜಗಪತಿ ಬಾಬು ಅನ್ನೋದನ್ನ‌ ರಿವೀಲ್ ಮಾಡಿದೆ. ಭೀಕರ ರಣಭಯಂ ಕರ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಮಾಯಬಜಾರ್ ನಲ್ಲಿ‌ ಸಂಚಲನ ಸೃಷ್ಟಿಸಿದೆ.

ಜಗಪತಿ ಬಾಬು ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್ ಶೇಕ್ ಆಗುವಂತಹ ಖಡಕ್ ಖಳನಾಯಕ. ಜಗಪತಿ ಬಾಬು ಹೆಸರು ಕೇಳಿದರೆ ಸಿನಿಮಾ ಸೌತ್‌ ಸಿನಿಮಾ ಜಗತ್ತೇ ಕೇಕೆ ಹಾಕುತ್ತೆ ಅಷ್ಟರ ಮಟ್ಟಿಗೆ ಖಡಕ್‌ ವಿಲನ್‌ ಕ್ಯಾರೆಕ್ಟರ್‌ ಗೆ ಬ್ರ್ಯಾಂಡ್ ಆಗಿರೋ ಜಗಪತಿ‌ ಬಾಬು ರಾಜಮನಾರ್ ಪಾತ್ರದ ಮೂಲಕ ʼಸಲಾರ್ʼ ಸಿನಿಮಾದಲ್ಲಿ ಸುನಾಮಿ ಎಬ್ಬಿಸಲಿದ್ದಾರೆ. ಅಮರೇಂದ್ರ ಬಾಹುಬಲಿ ಅಖಾಡದಲ್ಲಿ ಕಾದಾಡಲಿದ್ದಾರೆ.

ನ್ಯಾಷನಲ್ ಸ್ಟಾರ್ ಪ್ರಭಾಸ್, ನ್ಯಾಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್’ ಸಲಾರ್’ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಹವಾ ಕ್ರಿಯೇಟ್ ಮಾಡಿಕೊಂಡಿರುವ ಖಳನಾಯಕ ಜಗಪತಿ ಬಾಬು ‘ಸಲಾರ್’ ಅಡ್ಡಕ್ಕೆ ಎಂಟ್ರಿಕೊಟ್ಟಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಒಂದು ತೂಕ ಜಾಸ್ತಿಯಾಗಿದೆ.‌ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ, ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ನಿರ್ಮಾಣದ‌ ‘ಸಲಾರ್’ ವರ್ಲ್ಡ್‌ ವೈಡ್ ಮತ್ತೊಮ್ಮೆ ಧೂಳೆಬ್ಬಿಸೋದು ಖಚಿತ ಎನ್ನುವುದು ಪಾತ್ರವರ್ಗ ಹಾಗೂ ಮೇಕಿಂಗ್ ನಿಂದಲೇ ಗೊತ್ತಾಗ್ತಿದೆ. ʼಸಲಾರ್ʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಇನ್ನಷ್ಟು ಬಿಗ್ ಅಪ್ ಡೇಟ್ ಒನ್ ಬೈ ಒನ್ ರಿವೀಲ್ ಆಗಲಿದೆ.

  • ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿಲಹರಿ

Related Posts

error: Content is protected !!