ಮುಖಕ್ಕೆ ಬಣ್ಣ ಹಚ್ಚಬೇಕು, ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬೇಕು. ಬೆಳ್ಳಿಪರದೆ ಮೇಲೆ ದಿಬ್ಬಣ ಹೊರಡಬೇಕು. ಅಭಿಮಾನಿ ದೇವರುಗಳ ಹೃದಯಕ್ಕೆ ಲಗ್ಗೆ ಇಡಬೇಕು. ಬಿಗ್ ಸ್ಕ್ರೀನ್ ಹೀರೋ ಆಗಿ ಧಗಧಗಿಸಬೇಕು ಅನ್ನೋದು ಅದೆಷ್ಟೋ ಕಲಾವಿದರ ದಿವ್ಯಕನಸು. ಆ ಕನಸಿನ ಸಾಕಾರಕ್ಕಾಗಿ ಬೆವರಲ್ಲ ರಕ್ತ ಸುರಿಸುವುದಕ್ಕೂ ರೆಡಿಯಿರುತ್ತಾರೆ. ಇದೆಲ್ಲದಕ್ಕೂ ತಯಾರಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ರ ಅಣ್ಣನ ಮಗ ನಿರಂಜನ್ ಸುಧೀಂದ್ರ ʼಸೂಪರ್ ಸ್ಟಾರ್ʼ ಆಗಿ ಅಖಾಡಕ್ಕೆ ಧುಮ್ಕಿದ್ದಾರೆ. ಮೊದಲ ನೋಟದಲ್ಲೇ ನೋಡುಗರನ್ನ ಅಟ್ರ್ಯಾಕ್ಟ್ ಮಾಡಿದ್ದಾರೆ.
ಅಂದ ಹಾಗೆ ‘ಸೂಪರ್ ಸ್ಟಾರ್’ ಅನ್ನೋದು ನಿರಂಜನ್ ಸುಧೀಂದ್ರ ಅಭಿನಯದ ಎರಡನೇ ಚಿತ್ರ. ʼನಮ್ಮ ಹುಡುಗರುʼ ಸಿನಿಮಾ ಮೂಲಕ ಡೆಬ್ಯೂ ಮಾಡ್ತಿದ್ದಾರೆ. ಈ ಮಧ್ಯೆ ʼಸೂಪರ್ ಸ್ಟಾರ್ʼ ಆಗಿ ಫೀಲ್ಡಿಗಿಳಿದಿದ್ದು, ವರಮಹಾಲಕ್ಷ್ಮಿ ಹಬ್ಬ ಪ್ಲಸ್ ನಿರಂಜನ್ ಹುಟ್ಟುಹಬ್ಬದ ವಿಶೇಷವಾಗಿ ‘ ಸೂಪರ್ ಸ್ಟಾರ್’ ಟೀಸರ್ ರಿಲೀಸ್ ಆಗಿದೆ.ಕ್ಲ್ಯಾಸಿ ಲುಕ್ ನಲ್ಲಿ ಕನ್ನಡಕ್ಕೊಬ್ಬ ಕ್ಲ್ಯಾಸಿಕ್ ಸ್ಟಾರ್ ಥರ ಕಾಣುವ ನಿರಂಜನ್ ನ ನೋಡಿ ರಿಯಲ್ ಸ್ಟಾರ್ ಉಪ್ಪಿ ಫಿದಾ ಆಗಿದ್ದಾರೆ.ಯಂಗ್ ರಿಯಲ್ ಸ್ಟಾರ್ ನಿರಂಜನ್ ಹೈಟ್- ಪರ್ಸನಾಲಿಟಿ ಪಕ್ಕಾಯಿದೆ. ಸ್ಟೈಲಿಷ್ ಲುಕ್ ನಲ್ಲಿ ಮ್ಯಾಚೋಮ್ಯಾನ್ ರೀತಿ ಕಾಣುವ ನಿರಂಜನ್ ತಮ್ಮ ಕುಟುಂಬ ಮಾತ್ರವಲ್ಲ ಸಿನಿಪ್ರೇಮಿಗಳು ಕೂಡ ಕ್ಲೀನ್‌ಬೋಲ್ಡ್ ಆಗುವಂತೆ ಮಾಡಿದ್ದಾರೆ. ನಿರ್ದೇಶಕ ವೆಂಕಟೇಶ್ ಬಾಬು ನಿರಂಜನ್ ರನ್ನ ಹೈಕ್ಲಾಸ್ ಆಗಿ ತೋರಿಸಿದ್ದಾರೆ.
ಕಳೆದ ವರ್ಷ ನಿರಂಜನ್ ಹುಟ್ಟಿದ ಹಬ್ಬಕ್ಕೆ ‘ ಸೂಪರ್ ಸ್ಟಾರ್’ ಟೈಟಲ್ ಜೊತೆಗೆ ಟೀಸರ್ ಲಾಂಚ್ ಮಾಡಲಾಗಿತ್ತು. ಯಶ್ ವಾಯ್ಸ್ ಕೊಟ್ಟಿದ್ದರು, ನಿರಂಜನ್ ತಮ್ಮ ಫಿಸಿಕ್ ನ ಎಕ್ಸ್ ಪೋಸ್ ಮಾಡಿದ್ದರು. ಆಗ ಎಲ್ಲರೂ ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂಟ್ರಿ ಅಂತ ಮಾತನಾಡಿಕೊಂಡಿದ್ದರು. ಇಂದು ಅದೇ ಮಂದಿ ನಿರಂಜನ್ ಕ್ಲಾಸ್ ಗೂ ಸೈ ಮಾಸ್ ಗೂ ಜೈ ಮಟೀರಿಯಲ್ ಎನ್ನುತ್ತಿದ್ದಾರೆಸೂಪರ್ ಸ್ಟಾರ್ ಚಿತ್ರದಲ್ಲಿ ನಿರಂಜನ್ ಇಂಟರ್ ನ್ಯಾಷನಲ್ ಡ್ಯಾನ್ಸರ್ ಆಗಿ ಕಿಕ್ಕೇರಿಸಲಿದ್ದಾರೆ. ಮಾಡೆಲ್ ಕಮ್ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಕ್ವೀನ್ ಜಾರಾ ಯಾಸ್ಮೀನ್ ನಿರಂಜನ್ ಗೆ ಜೋಡಿಯಾಗಿದ್ದಾರೆ. ಡ್ಯಾನ್ಸ್ ಧಮಾಕ- ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ – ಫ್ಯಾಮಿಲಿ ಸೆಂಟಿಮೆಂಟ್ ನ ಬ್ಲೆಂಡ್ ಮಾಡಿ ಒಂದೊಳ್ಳೆ ಕಮರ್ಷಿಯಲ್ ಎಂಟರ್ ಟೈನ್ಮೆಂಟ್ ಸಿನಿಮಾ ಮಾಡಲಿದ್ದಾರೆ. ಮೈಲಾರಿ ಎಂ ನಿರ್ಮಾಣದಲ್ಲಿ ಅದ್ದೂರಿಯಾಗಿಯೇ ಚಿತ್ರ ಮೂ ಡಿಬರಲಿದೆ. 50 ಪರ್ಸೆಂಟ್ ಚಿತ್ರೀಕರಣ ಮುಗಿದಿದ್ದು, ಸೆಪ್ಟೆಂಬರ್ ನಿಂದ ಮತ್ತೆ ಶೂಟಿಂಗ್ ಅಖಾಡಕ್ಕೆ ಧುಮ್ಕಲಿದ್ದಾರೆ.
ಕೊನೆಯಲ್ಲಿ ಒಂದು ಮಾತು, ಸಿನಿ ದುನಿಯಾದಲ್ಲಿ ಬೇಜಾನ್ ಸೈಕಲ್ ಹೊಡೆದು ಸಕ್ಸಸ್ ಆದ್ಮೇಲೆ ಕೆಲವು ಸೂಪರ ಸ್ಟಾರ್ ಆಗ್ತಾರೆ. ಆಗಿದ್ದಾರೆಯೂ ಕೂಡ. ಬಟ್ ಎಂಟ್ರಿಯಲ್ಲಿಯೇ ಸೂಪರ್ ಸ್ಟಾರ್ ಅಂತ ಫೋಸು ನೀಡಿದ್ದಾರೆ ನಿರಂಜನ್ ಸುಧೀಂದ್ರ. ಹಾಗಂತ, ಮಾಯಲೋಕದ ಮೇಲೆ ಆಕರ್ಷಣೆಗೊಳಗಾದ ಎಲ್ಲರಿಗೂ ‘ ಸೂಪರ್ ಸ್ಟಾರ್’ ಆಗಿ ಕಣಕ್ಕಿಳಿಯುವ ಅವಕಾಶ ಸಿಗೋದಿಲ್ಲ. ಫೀಲ್ಡ್ ನಲ್ಲಿ ಬೇಜಾನ್ ಸೈಕಲ್ ಹೊಡಿಬೇಕಾಗುತ್ತೆ. ಒಂಟಿ ಸಲಗದಂತೆ ಹೋರಾಡಬೇಕಾಗುತ್ತೆ. ಆನಂತರವಷ್ಟೇ ಮಿನುಗುವ ಲೋಕದಲ್ಲಿ ಎಲ್ಲವೂ ಸಾಧ್ಯ. ಆದರೆ ನಿರಂಜನ್ ವಿಚಾರದಲ್ಲಿ ಹಾಗಾಗಲಿಲ್ಲ ಚಿಕ್ಕಪ್ಪ ರಿಯಲ್ ಸ್ಟಾರ್ ಆಗಿರೋದ್ರಿಂದ ‘ ಸೂಪರ್ ಸ್ಟಾರ್’ ಟೈಟಲ್ ಇಟ್ಟು ತೊಡೆತಟ್ಟುವುದಕ್ಕೆ ಸಾಧ್ಯವಾಗಿದೆ. ಅಟ್ ದಿ ಸೇಮ್ ಟೈಮ್ ನವತಾರೆ ನಿರಂಜನ್ ಗೂ ಜವಾಬ್ದಾರಿ ಹೆಚ್ಚಿಸಿದೆ ಅನ್ನೋದು ಕೂಡ ಅಷ್ಟೇ ಸತ್ಯ.
- ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ