ಶ್ರೀರಾಮ ಧಗಧಗಿಸಿದ ಮೇಲೆ ಶೆಹಜಾದ್ ಅಖಾಡಕ್ಕೆ ಎಂಟ್ರಿ ; ಮಾನ್ ಸ್ಟಾರ್ ವಿರುದ್ಧ ತೊಡೆತಟ್ಟುವವರಾರು ?

ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟಾರ್.. ಲೇಟಾದರೂ ಸಿಂಗಲ್ಲಾಗಿ ಒಬ್ಬನೇ ಬರೋನು ಮಾನ್ ಸ್ಟಾರ್. ಹೌದು, ಕೆಜಿಎಫ್‌ 2 ಲೇಟಾಗಿಯೇ ಬರ್ತಿದೆ. ಬರೋದಿಕ್ಕೆ ಡೇಟ್‌ ಕೂಡ ಫಿಕ್ಸ್‌ ಆಗಿದೆ. ಹಾಗಂತ ನಾಳೆಯೇ ಬರುತ್ತಾ? ಇಲ್ಲ, ಅದಕ್ಕೂ ಇನ್ನು ಕಾಯಬೇಕಿದೆ ಆ ಏಳು ತಿಂಗಳು. ಹಾಗಾದ್ರೆ ಅದು ಬರುವ ದಿನವಾದರೂ ಯಾವಾಗ? ಇಲ್ಲಿದೆ ಡಿಟೈಲ್ಸ್.
ಇದೊಂದು ದಿನಕ್ಕಾಗಿ.. ಇದೊಂದು ಕ್ಷಣಕ್ಕಾಗಿ..ಇದೊಂದು ಶುಭಗಳಿಗೆಗಾಗಿ.. ಇಡೀ ಜಗತ್ತು ಎದುರುನೋಡ್ತಿದೆ. ಆ ದಿನ ಆ ಕ್ಷಣ ಆ ಶುಭಗಳಿಗೆ ಯಾವಾಗ ಬರುತ್ತೆ ಎನ್ನುವುದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ರಾಕಿಂಗ್ ಸ್ಟಾರ್ ದಿವ್ಯ ದರ್ಶನಕ್ಕೆ ಮುಹೂರ್ತ ಫಿಕ್ಸಾಗಿದೆ.‌ ಆದರೆ, ಆ ಸುವರ್ಣಗಳಿಗೆ ಸನ್ನಿಹಿತವಾಗುವುದಕ್ಕೆ ಯುಗಾದಿ ಮುಗಿಬೇಕು, ಶ್ರೀರಾಮನನ್ನು ಇಡೀ ಜಗತ್ತು ಸ್ಮರಿಸಬೇಕು. ಒಟ್ನಲ್ಲಿ ಏಳು ತಿಂಗಳು‌ ಕಾಯಲೇಬೇಕು. ಅಯ್ಯೋ ಇನ್ನೂ ಏಳು ತಿಂಗಳು ಕಾಯಬೇಕಾ ಹೀಗಂತ ಉದ್ಘಾರ ಎತ್ತುವವರು ಎಷ್ಟು ಜನರು ಇದ್ದಾರೋ ಅಷ್ಟೇ ಜನರು ಕಾಯೋಣ ಬಿಡಿ ಅಂತಿದ್ದಾರೆ.

ಹೌದು, ಮನೆದೇವರ ದರ್ಶನಕ್ಕೂ ಜನ ಇಷ್ಟೊಂದು ತಾಳ್ಮೆಯಿಂದ ಕಾಯ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ರಾಕಿಂಗ್ ಸ್ಟಾರ್ ಯಶ್ ದರ್ಶನಕ್ಕಾಗಿ ಆಸೆಯ ಕಣ್ ಗಳಿಂದ ಎದುರುನೋಡ್ತಿದ್ದಾರೆ. ಎರಡೂವರೆ ವರ್ಷಾನೇ ಕಳೆದಿದ್ದೇವೆ ಇನ್ನೂ ಏಳು ತಿಂಗಳು ಯಾವ್ ಲೆಕ್ಕ ಕಾಯ್ತೀವಿ. ಸೆಲ್ಫ್ ಮೇಡ್ ಷೆಹಜಾದ್ ಆಗಮನಕ್ಕೆ ಒಂಟಿಕಾಲಿನಲ್ಲಿ ನಿಂತಿದ್ದೇವೆ, ಮುಂದೆಯೂ ನಿಲ್ಲುತ್ತೇವೆ ಎನ್ನುತ್ತಿದ್ದಾರೆ ರಾಕಿಂಗ್ ಭಕ್ತರು.‌ ಚೀನಿ ಕ್ರಿಮಿ ಕೊರೊನಾ ಅಟ್ಟಹಾಸ ಇರಲಿಲ್ಲ ಅಂದರೆ ಇಷ್ಟೊತ್ತಿಗೆ ಅಣ್ತಮ್ಮ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಿ‌ ಬೊಬ್ಬಿರಿಯುತ್ತಿದ್ದರು. ಇಂಟರ್ ನ್ಯಾಷನಲ್ ಪಟ್ಟಕ್ಕೇರಿ ಧಗಧಗಿಸುತ್ತಿದ್ದರು. ಗಂಧದಗುಡಿಗೆ ವಜ್ರದ ಕಿರೀಟವನ್ನೇ ತೊಡಿಸಿ‌ ಮುನ್ನುಗುತ್ತಿದ್ದರು.‌ ಇದೆಲ್ಲಾ ಮಾಡೋದಕ್ಕೆ ಕೊರೊನಾ ಅಡ್ಡಿಯಾಯ್ತು. ಈಗಲೂ ಕೊರೊನಾಂತಕ ಇರುವುದರಿಂದ ಕೆಜಿಎಫ್ ಬಿಡುಗಡೆ ದಿನಾಂಕವನ್ನು ಭರ್ತಿ ಏಳು ತಿಂಗಳು‌ ಮುಂದೂಡಿದೆ.

2022 ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ತೆರೆಗೆ ಅಪ್ಪಳಿಸಲಿದೆ. ಇಲ್ಲಿವರೆಗೂ ಎರಡು ಭಾರಿ ಕೆಜಿಎಫ್ ಚಾಪ್ಟರ್ 2 ರಿಲೀಸ್ ಡೇಟ್ ಕ್ಯಾನ್ಸಲ್ ಆಗಿದೆ. ಆದರೆ‌ ಏಪ್ರಿಲ್‌14 ಕ್ಯಾನ್ಸಲ್ ಮಾಡುವ ಪ್ರಮಯನೇ ಇಲ್ಲ ಅಂತ ರಾಕಿಭಾಯ್ ಭರವಸೆ ಕೊಟ್ಟಿದ್ದಾರೆ. ರಾಕಿ- ಅಧೀರನ ಹೋರಾಟದ ಜೊತೆಗೆ ಚಿನ್ನದ ಸಾಮ್ರಾಜ್ಯಕ್ಕೆ ಷೆಹಜಾದ್ ರಾಜಗಾಂಭೀ ರ್ಯದಿಂದ ಎಂಟ್ರಿಕೊಡುವ ದೃಶ್ಯ ನೋಡುವುದಕ್ಕೆ ಚಿತ್ರ ಪ್ರೇಮಿಗಳು ಕಾತುರರಾಗಿದ್ದಾರೆ. ಆ ನಿರೀಕ್ಷೆಗೂ‌ ಮೀರಿ ನರಾಚಿ ಲೋಕ ತೆರೆದುಕೊ ಳ್ಳುವುದು ಸತ್ಯ ಎನ್ನುವದಕ್ಕೆ ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್, ಸ್ಯಾಟ್ ಲೈಟ್ ರೈಟ್ಸ್, ದುಬಾರಿ ಮೊತ್ತಕ್ಕೆ ಸೇಲಾಗಿರುವುದೇ ಸಾಕ್ಷಿ.

ಹೌದು, ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್ 7 ಲಕ್ಷಕ್ಕೆ, ಸ್ಯಾಟ್ ಲೈಟ್ ರೈಟ್ಸ್ ಸರಿಸುಮಾರು 120 ಕೋಟಿಗೆ ಬಿಕರಿಯಾಗಿದೆ. ಪ್ರಶಾಂತ್ ನೀಲ್‌ ಕೆತ್ತನೆಯ ಕೆಜಿಎಫ್ ಶಿಲೆಯನ್ನ ಕೊಂಡುಕೊಳ್ಳುವುದಕ್ಕೆ ಪ್ರಭಲರು ಮುಂದೆ ಬರ್ತಿದ್ದಾರೆ. ಓಟಿಟಿಯವರು ಬಂದು ವಾಪಾಸ್ ಹೋಗಿದ್ದಾರೆ.. ಸಿನಿಮಾ ಪ್ರೇಕ್ಷಕರಿಗೆ ಹಾಗೂ ಫ್ಯಾನ್ಸ್ ಗೆ ನಿರಾಸೆಯಾಗಬಾರದು ಅಂತ ಕೆಜಿಎಫ್‌ ಫಿಲ್ಮ್‌ಟೀಮ್ ಏಳು ತಿಂಗಳು ಲೇಟಾದರೂ ಪರವಾಗಿಲ್ಲ ಥಿಯೇಟರ್ ನಲ್ಲೇ ರಿಲೀಸ್ ಮಾಡೋದಕ್ಕೆ ಫಿಕ್ಸಾಗಿದ್ದಾರೆ. ಮುಂದಿನ ವರ್ಷ ಏಪ್ರಿಲ್ 14 ರಂದು ರಾಕಿಂಗ್ ಸ್ಟಾರ್ ಗೆ ಪೈಪೋಟಿ ಕೊಡುವುದಕ್ಕೆ ಯಾರು ಹುಟ್ಟಿಕೊಳ್ತಾರೋ‌? ಅದ್ಯಾವ ಸ್ಟಾರ್ ಚಿತ್ರಗಳು ರಿಲೀಸ್ ಗೆ ಸಜ್ಜಾಗುತ್ತವೋ? ಬೆಳ್ಳಿಪರದೆ ಹಾಗೂ ಬಾಕ್ಸ್ ಆಫೀಸ್ ಅಂಗಳದಲ್ಲಿ ಅದೆಂತಾ ವಾರ್ ನಡೆಯಲಿದೆಯೋ ಗೊತ್ತಿಲ್ಲ. ಕೆಜಿಎಫ್ ಚಾಪ್ಟರ್ 2 ಬರುವಾಗ ದೊಡ್ಡ ಜಟಾಪಟಿಯಂತೂ ನಡೆಯಲಿದೆ. ಅದೇನೆ ಆಗಲಿ, ಸಿಲ್ವರ್ ಸ್ಕ್ರೀನ್ ಗೆ ಸಿಂಗಲ್ಲಾಗಿ ಕಣಕ್ಕಿಳಿಯೋ ಮಾನ್ ಸ್ಟಾರ್ ನ ಸ್ವಾಗತಿಸೋಕೆ ಗುಂಪು ಕಟ್ಟಿಕೊಂಡು ಗ್ಯಾಂಗ್ ಸ್ಟಾರ್ ಗಳು ಚಿತ್ರಮಂದಿ ರಕ್ಕೆ ಬಂದರೆ ಅಷ್ಟೇ ಸಾಕು. ಮುಂದಾಗುವುದೆಲ್ಲವೂ ಮರೆಯಲಾಗದ ಇತಿಹಾಸ ಇದು ಅಕ್ಷರಶಃ ಸತ್ಯ ಎನ್ನುತ್ತಿದೆ ಗಾಂಧಿನಗರ.

  • ವಿಶಾಲಾಕ್ಷಿ, ಎಂಟರ್ ಟೈ ನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!