ನಿರ್ದೇಶಕ ಮಂಸೋರೆ ಮತ್ತೊಂದು ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಸೌತ್ ಇಂಡಸ್ಟ್ರಿಯ ಫೇಮಸ್ ನಟಿ ಸಾಯಿ ಪಲ್ಲವಿ ಬರ್ತಿದ್ದಾರೆ. ಹಾಗಾದ್ರೆ ಆ ಸಿನಿಮಾ ಯಾವುದು? ಅದರಲ್ಲಿ ಸಾಯಿ ಪಲ್ಲವಿ ಕ್ಯಾರೆಕ್ಟರ್ ಏನು? ಆ ಡಿಟೈಲ್ಸ್ ಇಲ್ಲಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಮೊನ್ನೆಯಷ್ಟೇ ಮದುವೆಯಾದರು. ಅವರ ಮದುವೆಯ ಜತೆಗೆಯೇ ಮತ್ತೊಂದು ಕಾರಣಕ್ಕೂ ಸಿಕ್ಕಾಪಟ್ಟೆ ಸುದ್ದಿಯಾದರು. ಅದು ಸೌತ್ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ವಿಚಾರಕ್ಕೆ. ಹಾಗಂತ ಅದೇನಾದ್ರೂ ಮಂಸೋರೆ ಅವರ ಮದುವೆಗೆ ಲಿಂಕ್ ಇತ್ತಾ ಅಂತ ಕಿವಿ ಅರಳಿಸಬೇಡಿ, ಸಾಯಿ ಪಲ್ಲವಿ ವಿಚಾರ ಇಲ್ಲಿ ಸುದ್ದಿ ಆಗಿದ್ದು ಮಂಸೋರೆ ನಿರ್ದೇಶನದ ಹೊಸ ಸಿನಿಮಾಕ್ಕೆ ಸಂಬಂಧಿಸಿದಂತೆ. ಹೌದು, ಅವರ ಹೊಸ ಸಿನಿಮಾದ ಮೂಲಕ ʼಪ್ರೇಮ್ಂʼ ಚಿತ್ರದ ಖ್ಯಾತಿಯ ಸೌತ್ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ. ಮಂಸೋರೆ ಸಿನಿಮಾ, ಸಾಯಿ ಪಲ್ಲವಿ ಎಂಟ್ರಿ ಅಂದಾಕ್ಷಣ ʼರಾಣಿ ಅಬ್ಬಕ್ಕʼ ಸಿನಿಮಾಕ್ಕಾ ಅಂತ ಕುತೂಹಲ ಮೂಡುವುದು ಇಲ್ಲಿ ಅಷ್ಟೇ ಸಹಜ. ಯಾಕಂದ್ರೆ ʼಆಕ್ಟ್ ೧೯೭೮ʼ ಚಿತ್ರದ ನಂತರ ನಿರ್ದೇಶಕ ಮಂಸೋರೆ ಅವರು ಅನೌನ್ಸ್ ಮಾಡಿದ ಸಿನಿಮಾ ʼರಾಣಿ ಅಬ್ಬಕ್ಕʼ.
ಕಡಲ ತಡಿಯ ಉಲ್ಲಾಳದ ರಾಣಿ ಅಬ್ಬಕ್ಕನ ಇತಿಹಾಸ ಕುರಿತು ಅವರು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅಬ್ಬಕ್ಕನ ಪಾತ್ರ ಅಂದ್ರೆ ಅದೊಂದು ಸಖತ್ ಪವರ್ ಫುಲ್‌ಕ್ಯಾರೆಕ್ಟರ್. ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಯೋಧೆ. ಹಾಗಾಗಿ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬಾರದೇಕೆ ಅನ್ನೋ ಲೆಕ್ಕಚಾರದಲ್ಲಿ ಮಂಸೋರೆ ಇದ್ದಾರೆ. ಹಾಗಾಗಿ ಸೌತ್ ಸುಂದರಿ ಸಾಯಿ ಪಲ್ಲವಿ ಅವರನ್ನು ಸ್ಯಾಂಡಲ್‌ವುಡ್‌ಗೆ ಕರೆತರೋದಿಕ್ಕೆ ಹೊರಟಿರಬಹುದಾ ಎನ್ನುವ ಸುದ್ದಿಗಳು ಹರದಾಡಿದವು. ಯಾಕಂದ್ರೆ ʼರಾಣಿ ಅಬ್ಬಕ್ಕʼ ಅನ್ನೋದು ಬಿಗ್ ಪ್ರಾಜೆಕ್ಟ್. ಹಾಗೆಯೇ ಬಿಗ್ ಬಜೆಟ್ ಸಿನಿಮಾ ಕೂಡ. ಮಂಸೋರೆ ಅವರೇ ಹೇಳಿಕೊಂಡ ಪ್ರಕಾರ, ಕಥೆ ಮತ್ತು ನಿರ್ಮಾಣದಲ್ಲಿ ದೊಡ್ಡ ಕ್ಯಾನ್ವಾಸ್ ಇರುವಂತಹ ಸಿನಿಮಾ. ಸದ್ಯಕ್ಕೆ ಅದೇ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆಯೇ ಅವರ ನಿರ್ದೇಶನದ ಸಿನಿಮಾಕ್ಕೆ ಸಾಯಿ ಪಲ್ಲವಿ ಬರ್ತಿದ್ದಾರೆ ಅಂದಾಗ ತಕ್ಷಣಕ್ಕೆ ಎಲ್ಲರಿಗೂ ನೆನಪಾಗಿದ್ದು ಮಂಸೋರೆ ಅವರ ಫ್ಯೂಚರ್ ಪ್ರಾಜೆಕ್ಟ್ ರಾಣಿ ಅಬ್ಬಕ್ಕ .
ಅಧಿಕೃತ ಮಾಹಿತಿ ಪ್ರಕಾರ ಸಾಯಿ ಪಲ್ಲವಿ ಮತ್ತೊಂದು ಹೊಸ ಸಿನಿಮಾಕ್ಕಾಗಿ. ಬರ್ತಿದ್ದಾರೆನ್ನುವುದು ಸುದ್ದಿ. ಆದರೆ ಅದೆನ್ನು ಮಾತುಕತೆ ಹಂತದಲ್ಲಿದೆ ಅನ್ನೋದು ನಿರ್ದೇಶಕ ಮಂಸೋರೆ ಹೇಳುವ ಮಾತು. ” ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಹೊತ್ತಿಗೆ ನಾನು ಈಗಾಗಲೇ ಅನೌನ್ಸ್ ಮಾಡಿದ್ದ ʼರಾಣಿ ಅಬ್ಬಕ್ಕʼ ಸಿನಿಮಾವೇ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಅದು ಒಂದಷ್ಟು ತಡವಾಗುತ್ತಿದೆ. ಹಾಗಾದ್ರೆ ಶುರುವಾಗೋದದ್ರು ಯಾವಾಗ, ಅದಿನ್ನುನನಗೂ ಅಂಂದಾಜು ಆಗುತ್ತಿಲ್ಲ. ಕೊರೋನಾ ಕಾರಣ ಮೊದಲು ಬಂದಿದ್ದ ನಿರ್ಮಾಪಕರು ಅಷ್ಟು ದೊಡ್ಡ ಪ್ರಾಜೆಕ್ಟ್ ಈಗ ಬೇಡ ಅಂತಿದ್ದಾರೆ. ಹಾಗಂತ ನಂಗೆ ಅದನ್ನು ಬಿಡೋದಿಕ್ಕೆ ಮನಸಿಲ್ಲ. ಅದೇ ಕಾರಣಕ್ಕೆ ಈಗ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜತೆಗೆ ಮಾತುಕತೆ ನಡೆದಿದೆ. ನಾನು ಹೋಗಿ ಅಪ್ರೋಚ್ ಮಾಡಿದ್ದೆ ಅನ್ನೋದಿಕ್ಕಿಂತ ಆ ಸಂಸ್ಥೆಯೇ ಆಸಕ್ತಿ ತೋರಿದೆ. ಇನ್ಸಿಯಲಿ ಒಂದಷ್ಟು ಮಾತುಕತೆ ನಡೆದಿದೆ. ಫೈನಲ್ ಅಂತ ಆಗಿಲ್ಲ. ಅದು ಯಾವಾಗೋ ನಂಗು ಗೊತ್ತಿಲ್ಲ. ಈ ನಡುವೆಯೇ ನಂಗೆ ಗೊತ್ತಿದ್ದ ನಿರ್ಮಾಪಕ ರೊಬ್ಬರು ಒಂದು ಆವರೇಜ್ ಬಜೆಟ್ ನಲ್ಲಿ ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಬಂದರು. ಆಗಲೇ ಒಂದು ಕಥೆ ಸಿದ್ದಪಡಿಸಿ ಟ್ಟುಕೊಂಡಿದ್ದೆ. ಅದನ್ನೆ ಅವರಿಗೆ ಹೇಳಿದೆ. ಅದು ಮಹಿಳಾ ಪ್ರಧಾನ ಕಥೆ. ಅದಕ್ಕೆ ಸಾಯಿ ಪಲ್ಲವಿಯಾದ್ರೆ ಚೆನ್ನಾಗಿತ್ತಲ್ವೇ ಅಂತ ಅವರೇ ಹೇಳಿದ್ರು. ಆ ಮೂಲಕ ಸಾಯಿ ಪಲ್ಲವಿ ಅವರನ್ನು ಫೋನ್ ಮೂಲಕ ಸಂಪರ್ಕ ಮಾಡಿ, ಸ್ಕ್ರಿಫ್ಟ್ ಕಳುಹಿಸಿದ್ದೇನೆ. ಅವರಿಗೆ ಇಷ್ಟವೂಆಗಿದೆ. ಆದರೆ ಫೈನಲಿ ನಮಗೆ ಹೊಂದಾಣಿಕೆ ಆಗುವಂತಹ ಬಜೆಟ್ ನಲ್ಲಿ ಅವರು ಅಭಿನಯಸಲು ಒಪ್ಪಿಕೊಳ್ಳಬೇಕು ಅಲ್ವಾ? ಅದಷ್ಟೇ ಬ್ಯಾಲೆನ್ಸ್ ಇದೆ ಎನ್ನುತ್ತಾರೆ ನಿರ್ದೇಶಕ ಮಂಸೋರೆ.
ಅವರೇ ಹೇಳುವ ಹಾಗೆ ಒಂದು ಲೆಕ್ಕದಲ್ಲಿ ಸೌತ್ ಬ್ಯುಟಿ, ಸಹಜ ಸುಂದರಿ ಸಾಯಿ ಪಲ್ಲವಿ ಕನ್ನಡಕ್ಕೆ ಬರುವುದು ಗ್ಯಾರಂಟಿ ಇದೆ. ಈಗಾಗಲೇ ಮಲಯಾಳಂ ಜತೆಗೆ ತಮಿಳು, ತೆಲುಗು ಅಂತ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ಈ ನಟಿ, ಕನ್ನಡದಲ್ಲಿ ಹೇಗೆಲ್ಲ ಸಂಚಲನ ಸೃಷ್ಟಿಸಬಹುದು ಎನ್ನುವುದು ಮುಂದಿನ ದೊಡ್ಡ ಕ್ಯೂರಿಯಾಸಿಟಿಯ ಸಂಗತಿ. ಉಳಿದಂತೆ ಮಂಸೋರೆ ನಿರ್ದೇಶನದ ಈ ಹೊಸ ಸಿನಿಮಾಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ವಂತೆ. ಟೆಕ್ನಿಷಿಯನ್ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಆಗಬೇಕಿದೆಯಂತೆ. ಇದೆಲ್ಲ ಆದರೆ, ಶೂಟಿಂಗ್ ಶುರುವಾಗುವುದು ಖಚಿತವಂತೆ.
- ಎಂಟರ್ ಟೈನ್ ಮೆಂಟ್ ಬ್ಯುರೋ ಸಿನಿ ಲಹರಿ