ನಿರಂಜನ್ ಸುಧೀಂದ್ರ ಈಗ ಹಂಟರ್ : ಟೈಟಲ್ ಲಾಂಚ್ ಮಾಡಿ ಶುಭ ಕೋರಿದ ಸೂಪರ್ ಸ್ಟಾರ್ !

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ ಸುದೀಂದ್ರ ಹೀರೋ ಆಗಿ ಎಂಟ್ರಿ ಆಗುತ್ತಿರುವುದು ಹಳೇ ಮಾತು. ಈಗಾಗಲೇ ನಿರಂಜನ್ ಸುಧೀಂದ್ರ ಅಭಿನಯದ ‘ಸೂಪರ್ ಸ್ಟಾರ್’ ರಿಲೀಸ್ ಗೆ ರೆಡಿಯಿದೆ. ಅದರ ನಡುವೆ ಯೇ ನಿರಂಜನ್ ಪಾಲಿಗೆ ಅದೃಷ್ಟ ಖುಲಾಯಿಸಿದೆ. ಡೆಬ್ಯೂ ಚಿತ್ರ ರಿಲೀಸ್ ಮುನ್ನವೇ ಹಂಟರ್ ಆಗಿಯೂ ನಿರಂಜನ್ ಸುಧೀಂದ್ರ ಬೆಳ್ಳಿತೆರೆಗೆ ಎಂಟ್ರಿಆಗುತ್ತಿದ್ದಾರೆ. ಹೌದು, ನಿರಂಜನ್ ಸುಧೀಂದ್ರ ಈಗ ಹಂಟರ್ ಹೆಸರಿನ ಚಿತ್ರವೊಂದರಲ್ಲೂ ಹೀರೋ ಆಗಿ ಅಭಿನಯಸುತ್ತಿದ್ದು, ಆ ಚಿತ್ರದ ಟೈಟಲ್ ಮೊನ್ನೆಯಷ್ಟೇ ನಿರಂಜನ ಹುಟ್ಟು ಹಬ್ಬದಂದು ಲಾಂಚ್ ಆಗಿದೆ. ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆಯನ್ನು ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅನಾವರಣಗೊಳಿಸಿ ಶುಭ ಕೋರಿದ್ದಾರೆ.

ಸದ್ಯಕ್ಕೆ ಚಿತ್ರ ತಂಡ ನೀಡಿದ ಮಾಹಿತಿ ಪ್ರಕಾರ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ. ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡುತ್ತಿದ್ದು, ವಿನಯ್ ಕೃಷ್ಣ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ ಇವರು’ಸೀಜರ್’ ಹೆಸರಿನ ಚಿತ್ರ ನಿರ್ದೇಶಿಸಿದ್ದರು. ಆನಂತರವೀಗ ಇದು ಅವರ ಎರಡನೇ ಚಿತ್ರ. ಹಾಗೆಯೇ ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಅವರಿಗೂ ಇದು ಮೂರನೇ ಚಿತ್ರ. ಪರಿ ಹಾಗೂ ಸೀಜರ್ ನಂತರ ಈಗ ಹಂಟರ್. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಈ ಚಿತ್ರ ನಿರ್ಮಾಣವಾಗುತ್ತಿದೆ. ಹೆಸರಾಂತ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶುರುವಾಗಲಿದೆ. ಕೇರಳದ ಸೌಮ್ಯ ಮೆನನ್ ಈ ಚಿತ್ರದ ನಾಯಕಿ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

Related Posts

error: Content is protected !!