ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನ ಕಟ್ಟಿಹಾಕಿದ ನಟಿ ಮಧುಬಾಲಾ ; ಬಾಲಿವುಡ್ ಮರ್ಲಿನ್ ಮನ್ರೋಗೆ ಸಿಎಂ ಮನಸೋತ ಕಥೆ ರಿವೀಲ್ ಆಯ್ತಲ್ಲಾ !

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನ ಬಾಲಿವುಡ್ ಜಗತ್ತು ಕಂಡ ಅತ್ಯಾದ್ಬುತ ನಟಿ ಮಧುಬಾಲ ಕಟ್ಟಿಹಾಕಿದ ಕಥೆ ಕೊನೆಗೂ ರಿವೀಲ್‌ ಆಗಿದೆ. ಅದು ಕಣ್ಣು ತಂಪಾಗಿಸುವ ಸೌಂದರ್ಯದಿಂದಲೋ ಅಥವಾ ಮನಸ್ಸು ಮುಟ್ಟುವ ಮನೋಜ್ಜ ಅಭಿನಯದಿಂದಲೋ ಎನ್ನುವ ರಹಸ್ಯ ಮಾತ್ರ ನಿಗೂಢವಾಗಿದೆ. ಆ ಗುಟ್ಟನ್ನು ಮಾತ್ರ ಸಿಎಂ ಬಿಟ್ಟುಕೊಟ್ಟಿಲ್ಲ. ಆದರೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಆಲ್‌ ಟೈಮ್‌ ಫೆವರೀಟ್‌ ಮಧುಬಾಲಾ ಅಂತೆ !
ಎಲ್ಲಾ ನಟಿಮಣಿಯರು ಒಂದೇ ರೀತಿಯಾಗಿ ಇರುವುದಿಲ್ಲ. ಎಲ್ಲರ ಕಣ್ಣಿಗೆ ಒಂದೇ ತರನಾಗಿ ಕಾಣುವುದೂ ಇಲ್ಲ. ಕೆಲವು ನಟಿಯರು ಮಾದಕ ಮೈಮಾಟದಿಂದ ನೋಡುಗರನ್ನು ಅಟ್ರ್ಯಾಕ್ಟ್ ಮಾಡ್ತಾರೆ. ಇನ್ನೂ ಕೆಲವರು ಕಣ್ಣೋಟದಿಂದ ಕಟ್ಟಿಹಾಕ್ತಾರೆ. ಉಳಿದವರು ಅಭಿನಯದಿಂದ ನೋಡುಗರ ಮನಸೂರೆಗೊಳ್ತಾರೆ. ಆ ಮೂಲಕ ಆಲ್ ಟೈಮ್ ಫೇವರಿಟ್ ನಟಿಯಾಗಿ ಉಳಿದುಬಿಡ್ತಾರೆ. ಹೀಗೆ ಅಚ್ಚಳಿಯದ ಛಾಪು ಒತ್ತಿದ ಸುಂದರಿ ಮಧುಬಾಲರನ್ನು ಬೊಮ್ಮಾಯಿ ಸಾಹೇಬ್ರು ಖಾಸಗಿ ಮನರಂಜನೆ ವಾಹಿನಿಯ ಸ್ಪೆಷಲ್‌ ಕಾರ್ಯಕ್ರಮದಲ್ಲಿ ನೆನಪು‌ ಮಾಡಿಕೊಂಡಿದ್ದಾರೆ.

ಹೌದು, ರಂಭೆ- ಊರ್ವಶಿ- ಮೇನಕೆಗಿಂತ ಮಿಗಿಲು ಅಂತ ಸಿಎಂ ಸಾಹೇಬ್ರು ಬಾಯ್ಬಿಟ್ಟು ಹೇಳಿಲ್ಲ ಅಷ್ಟೇ ಆದರೆ, ಮಧುಬಾಲ ಆಲ್‌ಟೈಮ್ ಫೇವರಿಟ್ ಹೀರೋಯಿನ್ ಎನ್ನುವುದನ್ನು ಜೀ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಹುಡುಗರು ನಿಮ್ಮ ಫೇವರಿಟ್ ನಾಯಕಿ ಬಗ್ಗೆ ಹೇಳಿ ಅಂದಾಗ ಕನ್ನಡದಲ್ಲಿ ಕಲ್ಪನಾ, ಭಾರತಿ, ಜಯಂತಿ. ಹಿಂದಿಯಲ್ಲಿ ಮಧುಬಾಲ ಎಂದಿದ್ದಾರೆ. ಇದೇ ವೇಳೆ ಡಾ. ರಾಜ್ ಕುಮಾರ್ ಅವರನ್ನೂ ಕೂಡ ಸ್ಮರಿಸಿಕೊಂಡಿದ್ದಾರೆ. ಮಧುಬಾಲ ಬಾಲಿವುಡ್ ಚಿತ್ರರಂಗ ಕಂಡ ಅಮೋಘ ಸುಂದರಿ, ಅತ್ಯದ್ಭುತ ನಟಿ.‌ ಈ‌ ನಟಿಯ ಹೆಸರು ಕೇಳಿದರೆ ಇವತ್ತಿನ ಅಂಕಲ್ ಗಳು ಮಾತ್ರವಲ್ಲ 16 ರ ಹದಿಹರೆಯದ ಯುವಕರು ಕೂಡ ದಡಕ್ಕನೆ ಎದ್ದುಕೂಡ್ತಾರೆ‌. ಕಣ್ಣುಕುಕ್ಕುವ ಚೆಲುವಿನಿಂದ- ನಯನ ಮನೋಹರ ಅಭಿನಯದಿಂದ ಬಾಲಿವುಡ್ ಆಳಿದ ಅಭಿನೇತ್ರಿಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಉತ್ಸುಕರಾಗ್ತಾರೆ.‌ ಅಷ್ಟರ ಮಟ್ಟಿಗೆ ಮಧುಬಾಲ ತಮ್ಮ ಛಾಪು‌ ಮೂಡಿಸಿ ಹೋಗಿದ್ದಾರೆ. ‌ಮಹಲ್,ಥರಾನಾ, ಮೊಘಲ್ ಇ ಅಜಾಮ್, ಲಾಲ್ ದುಪ್ಪಟ್ಟ ಅನಾರ್ಕಲಿ ಸಿನಿಮಾ ಮೂಲಕ ಜೀವಂತವಾಗಿದ್ದಾರೆ.

ಮಧುಬಾಲ ಹಿಂದಿ ಚಿತ್ರರಂಗದ ಮೋಸ್ಟ್ ಬ್ಯೂಟಿಫುಲ್ ಆಕ್ಟ್ರೆಸ್.‌ ಬಾಲಿವುಡ್ ಮಲ್ರಿನ್ ಮನ್ರೋ‌ ಅಂತನೇ ಖ್ಯಾತಿಗಳಿಸಿಕೊಂಡ ಮಧುಬಾಲ, ಭರ್ತಿ 20 ವರ್ಷಗಳ‌ ಕಾಲ‌ ಬೆಳ್ಳಿ ತೆರೆಯನ್ನಾಳಿದರು. 70 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ರಾಜ್ ಕಪೂರ್, ದೇವಾನಂದ್, ದಿಲೀಪ್ ಕುಮಾರ್, ಅಶೋಕ್ ಕುಮಾರ್ ರಂತಹ ದಿಗ್ಗಜರೊಟ್ಟಿಗೆ ಕುಣಿದರು. ಕೋಟ್ಯಾಂತರ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟರು. ಅಟ್ ದಿ ಸೇಮ್ ಟೈಮ್ ಪಡ್ಡೆಹೈಕ್ಳು- ಹುಡುಗರು- ಅಂಕಲ್ ಗಳ ನಿದ್ದೆಗೆಡಿಸಿದರು.

ಬಾಲನಟಿಯಾಗಿ‌ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟ ಮಧುಬಾಲ‌,‌ ಅತೀ ಚಿಕ್ಕ ಅವಧಿಯಲ್ಲಿ ಒಂದಿಡೀ ಜನ್ಮಕ್ಕಾಗುವಷ್ಟು ಹೆಸರು ಮಾಡಿದರು. ನೇಮ್- ಫೇಮ್- ಆಸ್ತಿ- ಅಂತಸ್ತು- ಐಶ್ವರ್ಯ ಎಲ್ಲವೂ ಸಂಪಾದಿಸಿದರು. ಲವ್ ಲೈಫ್ ನಲ್ಲಿ ಮುಳುಗಿ ಮುಳುಗಿ ಎದ್ದರು. ಎಷ್ಟು ಲವ್ವಾಯ್ತೋ ಅಷ್ಟೇ ಬ್ರೇಕಪ್ಸ್ ಆಯ್ತು.‌ ಕಿಶೋರ್ ಕುಮಾರ್ ಜೊತೆ ಸಂಸಾರವೂ ನಡೆಸಿದರು. ಕೊನೆಗೆ ಪರ್ಸನಲ್ ಲೈಫ್ ಕೂಡ ಚಿಂದಿ ಚಿತ್ರಾನ್ನ‌ ಆಗೋಯ್ತು. ಖಿನ್ನತೆಗೊಳಗಾದ ಮಧುಬಾಲ ಒಂಭತ್ತು ವರ್ಷಗಳ ಕಾಲ ಹಾಸಿಗೆಯಲ್ಲೇ ನರಳಿದರು.

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಿ ಬೆಂಡಾದರು. 36 ನೇ ವಯಸ್ಸಿಗೆ ಜಗತ್ತಿಗೆ ಗುಡ್ ಬೈ ಹೇಳುವಂತಾಯ್ತು. ಪ್ರೀತಿ ಪ್ರೇಮ ಪ್ರಣಯ ಅಂತ ಪದೇ ಪದೇ ಹಾರ್ಟ್ ನ ಸೇಲ್ ಗಿಟ್ಟಿದ್ದೇ ಬಿಟೌನ್ ಮಲ್ರಿನ್ ಮನ್ರೋ ಬಾಳಿಗೆ ಮುಳುವಾಯ್ತು. ದುರಂತ ಅಂತ್ಯಕಾಣುವಂತಾಯ್ತು. ಆದರೆ, ಮಧುಬಾಲ ಸದಾ ಜೀವಂತ ದಂತಕತೆ ಎನ್ನುವುದು ಮಾತ್ರ ಸತ್ಯಸ್ಯಸತ್ಯ. ಇಂತಹ ಚಿರಕಾಲದ ಜವ್ವನೆ ಮಧುಬಾಲ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಮನಸು ಗೆದಿದ್ದು ಕೂಡ ವಿಶೇಷ.

  • ಎಂಟರ್ ಟೈನ್ಮೆಂಟ್‌‌ ಬ್ಯೂರೋ ಸಿನಿಲಹರಿ

Related Posts

error: Content is protected !!