Categories
ಸಿನಿ ಸುದ್ದಿ

ಸಂಜಯ್‌ ದತ್‌ ಹುಟ್ಟುಹಬ್ಬಕ್ಕೆ ಕೆಜಿಎಫ್‌ ಟೀಮ್‌ ಹೊಸ ಪೋಸ್ಟರ್‌ ರಿಲೀಸ್;‌ ಸಂತಸ ಹಂಚಿಕೊಂಡ ಬಾಲಿವುಡ್‌ ನಟ

ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲೇ ಜೋರು ಸದ್ದು ಮಾಡಿರುವ “ಕೆಜಿಎಫ್‌-೨” ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇಷ್ಟರಲ್ಲೇ ಸಿನಿಮಾ ಬಿಡುಗಡೆಯ ಅಧಿಕೃತ ಘೋಷಣೆಯಾಗಲಿದೆ. ಈ ಮಧ್ಯೆ ಚಿತ್ರತಂಡ ಸಂಜಯ್‌ ದತ್‌ ಅವರ ಮತ್ತೊಂದು ಭರ್ಜರಿ ಪೋಸ್ಟರ್‌ ಬಿಡುಗಡೆ ಮಾಡಿದೆ.


ಹೌದು, ಜುಲೈ ೨೯ರಂದು ಸಂಜಯ್‌ದತ್‌ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡ, ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಆ ಪೋಸ್ಟರ್‌ಗೆ ಸಖತ್‌ ಮೆಚ್ಚುಗೆ ಸಿಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತುತ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿರುವ “ಕೆಜಿಎಫ್-‌೨” ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಅಂದಹಾಗೆ, ಪೋಸ್ಟರ್ ರಿಲೀಸ್ ಮಾಡಿ, “ಯುದ್ಧವು ಪ್ರಗತಿಗಾಗಿ ಆಗಿದೆ. ರಣಹದ್ದುಗಳು ಕೂಡ ನನ್ನೊಂದಿಗೆ ಒಪ್ಪುತ್ತವೆ” ಎಂಬ ಬರಹದೊಂದಿಗೆ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಸಂಜಯ್‌ ದತ್ ಅವರ ಹೊಸ ಪೋಸ್ಟರ್ ಈಗ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಪೋಸ್ಟರ್‌ ನೋಡಿದವರಿಗೆ ಅವರ ಪಾತ್ರ ನಿಜಕ್ಕೂ ಕುತೂಹಲ ಮೂಡಿಸೋದು ನಿಜ. ಕೈಯಲ್ಲೊಂದು ಖಡ್ಗ, ಕಣ್ಣಿಗೊಂದು ಬ್ಲಾಕ್‌ ಗ್ಲಾಸ್‌, ಕಣ್‌ಸೆಳೆಯೋ ಹೇರ್‌ಸ್ಟೈಲ್‌, ಪೆಪ್ಪರ್‌ ಸಾಲ್ಟ್‌ ದಾಡಿ, ಖದರ್‌ ಲುಕ್‌ನೊಂದಿಗಿರುವ ಪೋಸ್ಟರ್‌ ಸದ್ಯ ಜೋರು ಸುದ್ದಿ ಮಾಡುತ್ತಿದೆ.

ಇನ್ನು ಈ ಪೋಸ್ಟರ್ ಅನ್ನು ನಟ ಸಂಜಯ್ ದತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಧನ್ಯವಾದ ತಿಳಿಸಿದ್ದಾರೆ. “ಕೆಜಿಎಫ್-2ನಲ್ಲಿ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ. ನನಗೆ ಗೊತ್ತು ನೀವು ಸಿನಿಮಾ ಬಿಡುಗಡೆಗೆ ಬಹಳ ಸಮಯದಿಂದ ಕಾಯುತ್ತಿದ್ದೀರಿ ಅಂತ. ನಾನು ನಿಮಗೆ ಭರವಸೆ ನೀಡುತ್ತೇನೆ ಕಾಯಲು ಯೋಗ್ಯವಾಗಿರುತ್ತದೆ” ಎಂದು ದತ್ ಹೇಳಿದ್ದಾರೆ.

Categories
ಸಿನಿ ಸುದ್ದಿ

ರಕ್ಷಿತಾ-ದರ್ಶನ್ ಸ್ನೇಹ ಸೇತುವೆ ಸುಂಟರಗಾಳಿ ಬಿರುಗಾಳಿಗೆಲ್ಲ ಮುರಿದು‌‌ ಬೀಳಲ್ಲ ಗುರು !

  • ವಿಶಾಲಾಕ್ಷಿ

ರಕ್ಷಿತಾ ಪ್ರೇಮ್ ಅವರ ಸೋಷಿಯಲ್‌ ಮೀಡಿಯಾದಿಂದ ಹೊರಟು ಸಿನಿ ಲಹರಿ ವೆಬ್ ಸೈಟ್ ಗೆ ಬಂದಿರುವ ಇದೊಂದು ಫೋಟೋ ಸಾಕು ದರ್ಶನ್- ರಕ್ಷಿತಾ ಸ್ನೇಹ ಸೌಹಾರ್ದ ಸಂಬಂಧ ಎಷ್ಟು ಪವಿತ್ರವಾದದ್ದು ಮತ್ತು ಎಷ್ಟು ಶಕ್ತಿಯುತವಾದದ್ದು‌ ಅಂತ ಸಾರುವುದಕ್ಕೆ.

ಅಂದ್ಹಾಗೇ, ದರ್ಶನ್- ರಕ್ಷಿತಾರ ಈ ಫೋಟೋ ನೋಡಿ ಕೆಲವರು ಬಾದಾಮ್‌ ಮಿಲ್ಕ್ ಶೇಕ್ ಕುಡಿದಿರ್ತಾರಂತೆ ಇನ್ನೂ ಕೆಲವರು ಆಲ್ಕೋಹಾಲ್ ಕುಡಿದಿರ್ತಾರಂತೆ. ಅಷ್ಟಕ್ಕೂ ಹೀಗಂತ ನಾವು ಹೇಳ್ತಿಲ್ಲ ಗಾಂಧಿನಗರದ ಪಂಡಿತರ ಬಜಾರ್ ಮಾತುಕತೆ‌ ಅಷ್ಟೇ. ಅದು ಏನೇ ಇರಲಿ ದಚ್ಚು – ರಕ್ಷು ಸ್ನೇಹ- ಸಂಬಂಧಕ್ಕೆ ಯಾರ ಕಣ್ಣು ಬೀಳದೇ ಇರಲಿ ಅಂತ ಒಂದು ‌ದೃಷ್ಠಿ ತೆಗೆದು ಬಿಸಾಕಿ ಬಿಡೋಣ ಅಲ್ಲವೇ.

ಚಾಲೆಂಜಿಂಗ್ ಸ್ಟಾರ್ ಹಾಗೂ ರಕ್ಷಿತಾ‌ ಮೇಡಂ ರೀಲ್ ಲೈಫ್ ಕೋಸ್ಟಾರ್ಸ್ ಮಾತ್ರವಲ್ಲ ಬಹುಕಾಲದ ಫ್ರೆಂಡ್ಸ್ ಕೂಡ ಹೌದು. ಕಷ್ಟ- ದುಃಖ- ನೋವು- ನಲಿವು ಎಲ್ಲದರಲ್ಲೂ ಪರಸ್ಪರ ಭಾಗಿಯಾಗಿದ್ದಾರೆ. ಒಂದೇ ಕುಟುಂಬದಂತಿರುವ ಇವರಿಬ್ಬರು ಭರ್ತಿ 25 ವರ್ಷಗಳಿಂದ ತಮ್ಮ ಸ್ನೇಹ-ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು‌ ಬಂದಿದ್ದಾರೆ. ಬಿರುಗಾಳಿಯಲ್ಲ ಸುನಾಮಿ ಸುಂಟರಗಾಳಿ ಎದ್ದರೂ ಕೂಡ ತಮ್ಮ ಸ್ನೇಹಸೇತುವೆ ಕಳಚಿ ಬೀಳೋದಿರಲಿ, ಅಲುಗಾಡುವುದಕ್ಕೆ‌ ಬಿಡಲ್ಲ ಎನ್ನುವುದಕ್ಕೆ ರಕ್ಷಿತಾ ಪೋಸ್ಟ್ ಮಾಡಿರುವ ಈ ಫೋಟೋ ಹಾಗೂ ಬರೆದಿರುವ ಈ‌ ಸಾಲುಗಳೇ ಸಾಕ್ಷಿ.

‘ಕೆಲವು ಸಂಬಂಧಗಳು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ನೀನು ನನ್ನ ಜೊತೆ ಇರುತ್ತೀಯೆಂದು. ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ’ ಹೀಗಂತ ಟ್ವೀಟ್ ಮಾಡಿದ್ದಾರೆ ರಕ್ಷಿತಾ.

ಪ್ರೇಮ್ ಏನ್ ದೊಡ್ಡ ಪುಡಾಂಗುನಾ .. ನಾನು‌ ನೋಡಿದ್ದೀನಿ ಕರಿಯ ಟೈಮ್ ನಿಂದ ಹೀಗಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಡುಗಿದ್ದೇ ಬಂತು
ಗಾಂಧಿನಗರದಲ್ಲಿ ಬೆಂಕಿಕಡ್ಡಿ ಗೀರೋರ್ ಸಂಖ್ಯೆ ಏಕ್ದಮ್ ಜಾಸ್ತಿಯಾಯ್ತು.‌
ಪ್ರೇಮ್ ಅಂಡ್ ರಕ್ಷಿತಾಗೆ ಫೋನ್ ಮೇಲ್ ಫೋನ್.
ಏನೇ ಆಗಲಿ ಪ್ರೇಮ್‌ ಅವರೇ ದರ್ಶನ್ ನಿಮ್ಮನ್ನ ಪುಡಾಂಗುನಾ‌ ಎನ್ನಬಾರದಿತ್ತು. ಏನೇ ಆಗಲಿ ಮೇಡಂ‌ ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಗಂಡನ ಬಗ್ಗೆ ಇಷ್ಟು ಚೀಪಾಗಿ ಮಾತನಾಡಬಾರದಿತ್ತು ಹೀಗಂತ ಫೋನ್ ಮಾಡಿ ಹೇಳಿ ಹೇಳಿ ಪ್ರೇಮ್ ಹಾಗೂ ರಕ್ಷಿತಾರ ನೆಮ್ಮದಿ ಕದಡಿದರು. ಹೀಗಾಗಿ, ರಕ್ಷಿತಾ ಹಾಗೂ ಪ್ರೇಮ್ ಇಬ್ಬರು ಕೂಡ ಬೇಸರದಿಂದಲೇ ತಮ್ಮ ಪ್ರತಿಕ್ರಿಯೆ ಹೊರ ಹಾಕಿದ್ದರು.

ಸುದ್ದಿ ಗೋಷ್ಠಿ ‌ಮಾಡಿದ ಪ್ರೇಮ್ ದರ್ಶನ್ ಹೇಳಿಕೆಯಿಂದ
ನನ್ನ ಮನಸ್ಸಿಗೆ ಬೇಜಾರಾಗಿದೆ. ನನ್ನ ಕೆಲಸದ ಬಗ್ಗೆ ರಾಜ್ ಕುಮಾರ್ ಹಾಗೂ‌‌ ರಜನಿಕಾಂತ್ ರಂತಹ ದಿಗ್ಗಜರೆಲ್ಲ‌ ಕೊಂಡಾಡಿದ್ದಾರೆ. ನನಗೂ ನನ್ನದೇ ಆದ ಅಭಿಮಾನಿಗಳಿದ್ದಾರೆ ಅವರೆಲ್ಲರಿಗೂ ಬೇಜಾರಾಗಿದೆ. ಹೀಗಾಗಿ ಬಹಿರಂಗವಾಗಿ ಪ್ರೆಸ್ಮೀಟ್ ಮಾಡ್ತಿದ್ದೇನೆಂದು ಪ್ರೇಮ್ ತಮ್ಮ ಅಸಮಾಧಾನ ಹೊರಹಾಕಿದ್ದರು.

ಅದರಂತೇ ರಕ್ಷಿತಾ ಕೂಡ ಕೊಂಚ ಗರಂ ಆಗಿಯೇ ದಚ್ಚು ಪುಡಾಂಗು ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದರು. ಖಾಸಗಿ‌ ಚಾನಲ್ ಜೊತೆ ಮಾತನಾಡುತ್ತಾ, ನಾನು ಪ್ರೇಮ್‌ ಪರವಾಗಿ ನಿಂತಿದ್ದೀನಿ ಅಂದ ಮಾತ್ರಕ್ಕೆ ನಾನು‌ ದರ್ಶನ್ ವಿರುದ್ದ ಅಂತಲ್ಲ‌ . ಇಬ್ಬರ ಪರವಾಗಿಯೂ ಇರುತ್ತೇನೆಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ, ರಕ್ಷಿತಾ ಹೇಳಿಕೆಯನ್ನು ಕಿವಿಗೆ ಹಾಕಿಕೊಳ್ಳದ ಮಂದಿ ದಚ್ಚು – ರಕ್ಷಿತಾ ಗೆಳೆತನ ಮುರಿದು ಬಿತ್ತು ಬಿಡು ಗುರು. ಇನ್ಮುಂದೆ ಅವರಿಬ್ಬರು ಒಂದಾಗೋದು ಡೌಟು ಅಂತ ಮಾತನಾಡಿಕೊಂಡಿದ್ದರು. ಅವರೆಲ್ಲರೂ ಈಗ ಗಪ್‌ಚುಪ್ ಆಗಿದ್ದಾರೆ. ಯಾಕಂದ್ರೆ, ದರ್ಶನ್ – ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಒಬ್ಬರಿಗೊಬ್ಬರು ಕುಳಿತು ಕಷ್ಟ ಸುಖ ಮಾತನಾಡಿದ್ದಾರೆ. ಫ್ಯಾಮಿಲಿಯೊಟ್ಟಿಗೆ ಒಂದೊಳ್ಳೆ ಊಟ ಮಾಡಿ ಸೆಲ್ಫಿಗೆ ಪೋಜು ಕೊಟ್ಟಿದ್ದಾರೆ. ಕೊನೆ ಉಸಿರು ಇರುವವರೆಗೆ ನಾವಿಬ್ಬರು ಸ್ನೇಹಿತರಾಗಿರೋಣವೆಂದು ಶೇಕ್ ಹ್ಯಾಂಡ್ ಮಾಡಿ ಸಂಭ್ರಮಿಸಿದ್ದಾರೆ. ಸ್ನೇಹ ಅಜರಾಮರವೆಂದು ಸಾರಿದ್ದಾರೆ.

ಸಿನಿಲಹರಿ ಎಂಟರ್ ಟೈನ್ಮೆಂಟ್ ಬ್ಯೂರೋ

Categories
ಸಿನಿ ಸುದ್ದಿ

ಯೋಗಿಯ ಯೋಗಾ ಯೋಗ! ವರ ಮಹಾಲಕ್ಷ್ಮಿ ಹಬ್ಬಕ್ಕೆ ಲಂಕೆಯ ಲಂಕಾಧಿಪತಿಯ ಆಗಮನ!!

ಅಂತೂ ಇಂತೂ ಚಿತ್ರರಂಗ ಈಗ ಗರಿಗೆದರಿದೆ. ಕೊರೊನಾ ಹೊಡೆತಕ್ಕೆ ಬಣ್ಣ ಕಳಚಿಕೊಂಡಿದ್ದ ಕನ್ನಡ ಚಿತ್ರರಂಗ ಈಗ ಕಲರ್ ಫುಲ್ ಆಗಿದೆ. ಈಗ ಮೆಲ್ಲನೆ ಒಂದೊಂದೇ ಸಿನಿಮಾಗಳು ಥಿಯೇಟರ್ ನತ್ತ ಮುಖ ಮಾಡಲು ಸಜ್ಜಾಗಿವೆ. ಆ ಸಾಲಿಗೆ ಈಗ ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಚಿತ್ರವೂ ಸೇರಿದೆ.

ಹೌದು, ಅನ್ ಲಾಕ್ 4.0 ಆದರೂ ಇನ್ನು ಸಿನಿಮಾ ಥಿಯೆಟರ್ ಪೂರ್ತಿ ಓಪನ್ ಆಗಿಲ್ಲಾ. ಸರ್ಕಾರ ಶೇ.50 ರಷ್ಟು ಮಾತ್ರ ಅನುಮತಿ ನೀಡಿದೆ. ಹೀಗಿದ್ದರೂ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಾಲುಗಟ್ಟಿವೆ. ರೆಡಿಯಾಗಿ ನಿಂತಿವೆ. ಈ ನಡುವೆಯೇ ಯೋಗಿ‌ಅಭಿನಯದ ‘ಲಂಕೆ’ ಬಿಡುಗಡೆಗೆ ರೆಡಿಯಾಗಿದೆ. ರಿಲೀಸ್ ಗೂ ಮುನ್ನವೇ ‘ಲಂಕೆ’ ಚಿತ್ರದ ವಿಡಿಯೋ ಸಾಂಗ್ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆನಂದ್ ಆಡಿಯೋ ಯುಟ್ಯಬ್ ಚಾನೆಲ್ ನಲ್ಲಿ ನಯನಕೆ ನಯನ… ಎಂಬ ಬ್ಯೂಟಿಫುಲ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಪಡೆದುಕೊಂಡಿದೆ.

ಸದ್ಯ ಸಿನಿಮಾ ಪ್ರಚಾರ ಶುರು ಮಾಡಿರುವ ಚಿತ್ರತಂಡ, ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಇಲ್ಲಿ ಲೂಸ್ ಮಾದ ಯೋಗಿ ಲಂಕಾಧಿಪತಿಯಾಗಿ ಅಬ್ಬರಿಸಲಿದ್ದಾರೆ. ಇನ್ನು, ಅವರಿಗೆ ಕ್ರಿಷಿ ತಾಪಂಡ ಹಾಗು ಕಾವ್ಯಾ ಶೆಟ್ಟಿ ಜೋಡಿಯಾಗಿದ್ದಾರೆ. ನಟ ಸಂಚಾರಿ ವಿಜಯ್ ಅವರು ಕೂಡ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

ಈ ಚಿತ್ರಕ್ಕೆ ರಾಮ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಗ್ಗೆ ಹೇಳುವ ಅವರು, ‘ಸ್ವಲ್ಪ ದುಃಖ ಹಾಗೂ ಹೆಚ್ಚಿನ ಸಂತೋಷವನ್ನು ಹಾಡಿನ ಮೂಲಕ ಹೇಳಬೇಕೆಂದುಕೊಂಡೆ.
ಈ ವಿಷಯವನ್ನು ಗೀತರಚನೆಕಾರ ಗೌಸ್ ಫಿರ್ ಅವರ ಬಳಿ ಹೇಳಿದಾಗ “ನಯನಕ್ಕೆ ನಯನ ಸೇರೋ ಕ್ಷಣ” ಎಂಬ ಸುಂದರ ಗೀತೆ ಬರೆದುಕೊಟ್ಟರು. ಅಷ್ಟೇ ಮಧುರವಾಗಿ ಕಾರ್ತಿಕ್ ಶರ್ಮ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಯೋಗಿ ಹಾಗೂ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎಂದರು.


ತುಂಬಾ ದಿನಗಳ ನಂತರ ಎಲ್ಲರನ್ನೂ ನೋಡಿ ಸಂತಸವಾಗುತ್ತಿದೆ ಎಂದು ಮಾತು ಆರಂಭಿಸಿದ, ನಾಯಕಿ ಕೃಷಿ ತಾಪಂಡ ಈ ಹಾಡು ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವದ ಮಾತುಗಳಾಡಿದರು.

ಸುರೇಖ ರಾಮ್ ಪ್ರಸಾದ್ ಹಾಗು ಪಟೇಲ್ ಶ್ರೀನಿವಾಸ್ ಅವರು ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಲಂಕೆಗೆ ಕಾರ್ತಿಕ್ ಶರ್ಮ ಅವರ ಸಂಗೀತದ ಸ್ಪರ್ಶವಿದೆ.

ಇಲ್ಲಿ ಇನ್ನೊಂದು ವಿಶೇಷ ಅಂದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ ‘ಸಲಗ’ ಕೂಡ ಅನೌನ್ಸ್ ಆಗಿದ್ದು, ಅಂದೇ ಲಂಕೆಯ ಲಂಕಾಧಿಪತಿಯ ಎಂಟ್ರಿಯಾಗಲಿದೆ. ಒಟ್ಟಾರೆ ಭಾವ-ಬಾಮೈದ ಒಟ್ಟಿಗೆ ಬರ‍್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

ಚಿತ್ರದ ನಾಲ್ಕು ಹಾಡುಗಳು ಬೇರೆ ಬೇರೆ ಶೈಲಿಯಲ್ಲಿದೆ. ಈ ಹಾಡು ಸೂಫಿ ಹಾಗೂ ಕವಾಲಿ ಶೈಲಿಯಲ್ಲಿದೆ. ಗೌಸ್ ಫಿರ್ ಅವರ ಸಾಹಿತ್ಯ ಸೊಗಸಾಗಿದೆ ಹಾಗೂ ಈ ಹಾಡನ್ನು ಕನ್ನಡದವರೇ ಆದ ಧನುಷ್ ಜಗದೀಶ್ ಹಾಗೂ ರಕ್ಷಿತ ಸುರೇಶ್ ಹಾಡಿದ್ದಾರೆ ಎಂದು ಚಿತ್ರದ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕಾರ್ತಿಕ ಶರ್ಮ ಮಾಹಿತಿ ನೀಡಿದರು.

ಗೀತರಚನೆಕಾರ ಗೌಸ್ ಫಿರ್ ಅವರು ತಾವು ಬರೆದಿರುವ ಈ ಹಾಡಿನ ಬಗ್ಗೆ ಮಾತನಾಡಿ, ಸಂಗೀತ ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.

Categories
ಸಿನಿ ಸುದ್ದಿ

ಸುದೀಪ್ ಬರ್ತ್ ಡೇಗೆ ಕೋಟಿಗೊಬ್ಬ -3 !; ಹಾಗೇನಾದ್ರೂ ಆದರಂತೂ ಕಿಚ್ಚನ ಫ್ಯಾನ್ಸ್ ಫುಲ್ ಖುಷ್!!

ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಹೀಗೊಂದು ಸಂತಸದ ಸುದ್ದಿ. ಅದೇನಪ್ಪಾ ಅಂದ್ರೆ, ಅವರ ಅಭಿನಯದ ‘ಕೋಟಿಗೊಬ್ಬ 3’ ಬಿಡುಗಡೆ ಸುದ್ದಿ.
ಹೌದು, ಕೊರೊನಾ ಹಾವಳಿಯಿಂದಾಗಿ ಇಡೀ ಚಿತ್ರರಂಗವೇ ನಲುಗಿತ್ತು. ಈಗ ಚಿತ್ರಮಂದಿರಗಳಲ್ಲಿ ಸರ್ಕಾರ ಶೇ.50ರಷ್ಟು ಭರ್ತಿಗೆ ಅವಕಾಶ ಕೊಟ್ಟಿದೆ. ಇದರ ಬೆನ್ನಲ್ಲೇ ಶಿವರಾಜ ಕುಮಾರ್ ಅಭಿನಯದ ‘ಭಜರಂಗಿ -2’ ‘ದುನಿಯಾ’ವಿಜಯ್ ಅಭಿನಯದ ‘ಸಲಗ’, ‘ಡಾಲಿ’ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾಗಳು ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಸುದೀಪ್ ಫ್ಯಾನ್ಸ್ ಕೂಡ ‘ಕೋಟಿಗೊಬ್ಬ 3’ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಯಾವಾಗ ರಿಲೀಸ್ ಆಗುತ್ತೋ ಏನೋ ಅಂತಂದುಕೊಂಡಿದ್ದ ಫ್ಯಾನ್ಸ್ ಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.

ಸೆಪ್ಟೆಂಬರ್ 2 ಸುದೀಪ್ ಅವರ ಹುಟ್ಟುಹಬ್ಬ. ಅಂದು ಅವರ ಅಭಿನಯದ ‘ಕೋಟಿಗೊಬ್ಬ 3’ ರಿಲೀಸ್ ಆಗಲಿದೆ ಎಂಬ ಸುದ್ದಿ ಹರಡಿದೆ. ನಿರ್ಮಾಪಕ ಸೂರಪ್ಪ ಬಾಬು ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ. ಈಗಾಗಲೇ ಚಿತ್ರ ಪೂರ್ಣ ರೆಡಿಯಾಗಿ ಬಿಡುಗಡೆಗೆ ಸಜ್ಜಾಗಿದೆ. ಇನ್ನೇನಿದ್ದರೂ ಥಿಯೇಟರ್ ಕಡೆ ಲಗ್ಗೆ ಇಡಬೇಕಷ್ಟೆ.
ಈ ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿದ ಬಳಿಕ ಸುದೀಪ್ ಇಷ್ಟರಲ್ಲೆ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದರು. ಇನ್ನು ಈ ಚಿತ್ರ ಬಹುತೇಕ ವಿದೇಶದಲ್ಲೇ ಚಿತ್ರೀಕರಣಗೊಂಡಿದೆ.


ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ 2 ರಂದು ಚಿತ್ರ ಬಿಡುಗಡೆ ಆಗಲಿದೆ. ಕಿಚ್ಚನ ಹುಡುಗರು ಸದ್ಯ ಸುದೀಪ್ ಹುಟ್ಟುಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಅಂದೇಎ ಕೋಟಿಗೊಬ್ಬನ ದರ್ಶನ ಮಾಡುವ ಉತ್ಸಾಹದಲ್ಲಿದ್ದಾರೆ.

Categories
ಸಿನಿ ಸುದ್ದಿ

‌ಶ್ರೀನಗರ ಕಿಟ್ಟಿ ಎದುರು ತೊಡೆ ತಟ್ತಾರೆ ‍ಯಶ್ ಶೆಟ್ಟಿ;‌ ಗೌಳಿ ಸಿನಿಮಾಗೆ ಶೆಟ್ರು ಖಡಕ್ ವಿಲನ್

ಕನ್ನಡದಲ್ಲಿ ನಾಯಕ ನಟರಷ್ಟೇ ಖಳನಟರು ಕೂಡ ತೆರೆಯ ಮೇಲೆ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಆ ಸಾಲಿಗೆ ಈಗ ಯಶ್‌ ಶೆಟ್ಟಿ ಕೂಡ ಬೇಡಿಕೆಯ ಖಳನಟರಾಗುತ್ತಿರುವುದು ನಿಜಕ್ಕೂ ಹೊಸ ಬೆಳವಣಿಗೆಯೇ ಸರಿ. ಹೌದು, ಯಶ್‌ ಶೆಟ್ಟಿ ಅವರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಬಹುತೇಕ ಸಿನಿಮಾಗಳಲ್ಲಿ ಅವರು ಖಳರಾಗಿಯೇ ತಮ್ಮ ಹೊಸ ಖದರ್‌ ತೋರಿಸಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಹೊಸ ಸುದ್ದಿಯೆಂದರೆ, ಯಶ್‌ಶೆಟ್ಟಿ ಅವರು ಸದ್ದಿಲ್ಲದೆಯೇ ಮತ್ತೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ‌

ಆ ಚಿತ್ರದಲ್ಲಿ ಅವರು ಮುಖ್ಯ ಖಳನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. ಹೌದು, ನಟ ಶ್ರೀನಗರ ಕಿಟ್ಟಿ ಅವರು ಇತ್ತೀಚೆಗಷ್ಟೇ ಭರ್ಜರಿ ಸಿನಿಮಾ ಮೂಲಕ ಎಂಟ್ರಿಯಾಗುತ್ತಿದ್ದಾರೆ ಅನ್ನೋ ವಿಷಯವನ್ನು ಇದೇ “ಸಿನಿಲಹರಿ”ಯಲ್ಲಿ ಹೇಳಲಾಗಿತ್ತು. ಅದು ಅವರ “ಗೌಳಿ” ಸಿನಿಮಾ ಅಂತಾನೂ ಹೇಳಲಾಗಿತ್ತು. ಈ ಮೊದಲೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿತ್ತು. ಪೋಸ್ಟರ್‌ ನೋಡಿದವರಿಗೆ ಅದೊಂದು ಮಾಸ್‌ ಫೀಲ್‌ ಸಿನಿಮಾ ಅಂತ ಗೊತ್ತಾಗದೇ ಇರದು. ಅಂದಹಾಗೆ, “ಗೌಳಿ” ಸಿನಿಮಾದಲ್ಲಿ ಈಗ ಯಶ್‌ ಶೆಟ್ಟಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದೇ ವಿಶೇಷ. ಇಲ್ಲಿ ಯಶ್‌ ಶೆಟ್ಟಿ ಪಕ್ಕಾ ಖಡಕ್‌ ವಿಲನ್.‌ ಅದರಲ್ಲೂ ಅವರದು ಫುಲ್‌ ರಾ… ಕ್ಯಾರೆಕ್ಟರ್‌ ಅಂತೆ. ಇದುವರೆಗೂ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಯಶ್‌ ಶೆಟ್ಟಿ, ಈಗ “ಗೌಳಿ” ಸಿನಿಮಾದಲ್ಲೂ‌ ಖರಾಬ್‌ ಲುಕ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಅದೊಂದು ಹೊಸ ಕಥೆ ಹೇಳಲಿರುವ ಚಿತ್ರ ಅನ್ನುವುದು ಪಕ್ಕಾ ಆಗಿದೆ. ಈ ಚಿತ್ರಕ್ಕೆ ರಘು ಸಿಂಗಂ, ನಿರ್ಮಾಪಕರು. ಸೂರ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಮೂಲತಃ ಫೋಟ್ರೋಗ್ರಫಿ ಮಾಡಿಕೊಂಡಿದ್ದ ಇವರು, ನಿರ್ದೇಶನ ವಿಭಾಗಕ್ಕೆ ಜಿಗಿದು, ಅಲ್ಲೊಂದಷ್ಟು ಕೆಲಸ ಕಲಿತು ಆ ಅನುಭವ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಆಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡೇ ಫೀಲ್ಡ್‌ಗಿಳಿದಿದ್ದಾರೆ.
ಚಿತ್ರಕ್ಕೆ ಶಶಾಂಕ್‌ ಶೇಷಗಿರಿ ಅವರ ಸಂಗೀತವಿದೆ. ಉಳಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇರಲಿದೆ.

Categories
ಸಿನಿ ಸುದ್ದಿ

ಗೌಡ್ರಿಗೆ ಡಿ ಬಾಸ್ ವಿಶ್ ಮಾಡಿದ್ರಾ; ಡಬ್ಬಲ್ ಕಾಲ್‌ಶೀಟ್ ಕಥೆ ಏನಾಯ್ತು?

  • ವಿಶಾಲಾಕ್ಷಿ

ಇಡೀ ಗಾಂಧಿನಗರದ ಮಂದಿಯ ಕಣ್ಣು ಇವತ್ತು ಡಿ ಬಾಸ್ ಮೇಲಿದೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. 25 ಕೋಟಿ ಮ್ಯಾಟರ್‌ಗೆ ಕ್ಲ್ಯಾರಿಟಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ ಆದರೆ, ಸಾರಥಿ ಹಾಗೂ ಉಮಾಪತಿಯ ನಡುವೆ ಎಲ್ಲವೂ ಚೆನ್ನಾಗಿದೆ ಎಂಬುದಕ್ಕಂತೂ ಕನ್‌ಕ್ಲೂಶನ್ ಸಿಗುತ್ತೆ ಅಂತ ಕಾಯ್ತಿದ್ದಾರೆ. ಆದರೆ, ಮಂಗಳವಾರ ಮಾರ್ನಿಂಗ್ ಮುಗಿದು ಮಧ್ಯಾಹ್ನ ಬಂದರೂ ಕೂಡ ಯಾವುದೂ ಸೂಚನೆ ಸಿಗುತ್ತಿಲ್ಲ. ಹೀಗಾಗಿ, ಕೆಲವರು ಕೇಕೆ ಹೊಡೆಯುತ್ತಿದ್ದಾರೆ ಇನ್ನೂ ಕೆಲವರು ಬೇಸರಪಟ್ಟಿಕೊಳ್ಳುತ್ತಿದ್ದಾರೆ.

ಸಾರಥಿ ಹಾಗೂ ಉಮಾಪತಿ ಒಂದಾಗಬೇಕು ಅಂತ ಎಷ್ಟು ಮಂದಿ ಬಯಸ್ತಿದ್ದಾರೋ ಅಷ್ಟೇ ಮಂದಿ ಇಬ್ಬರು ದೂರ ಆಗ್ಬೇಕು ಅಂತ ಬಯಸ್ತಿದ್ದಾರೆ. ಇದು ಗಾಂಧಿನಗರದ ಕೆಲವು ಮಂದಿಯ ಸಹಜ ಪ್ರಕ್ರಿಯೆ ಬಿಡಿ. ಆಕ್ಟರ್ ಆಕ್ಟರ್ ಆಗಿದ್ದರೆ, ಪ್ರೊಡ್ಯೂಸರ್ ಪ್ರೊಡ್ಯೂಸರ್ ಆಗಿದ್ದರೆ ಮಾತ್ರ ಸಹಿಸಿಕೊಳ್ತಾರೆ ಅದನ್ನು ಬಿಟ್ಟು ನಾವು ರಾಮ-ಲಕ್ಷ್ಮಣರಂತಿರ‍್ತೀವಿ ಅಂತ ಹೊರಟರೆ ಮುಗೀತು ಸಂಬಂಧ ಮುರಿಯೋಕೆ, ಸ್ನೇಹ ಸೇತುವೆಯನ್ನು ಉರುಳಿಸೋಕೆ ಕಾಯ್ತಾ ಇರ್ತಾರೆ. ಹೀಗೆ, ಯಾರೋ ಹಾಕಿದ ಗಾಳದಿಂದ ಸಾರಥಿ-ಉಮಾಪತಿ ಸಂಬಂಧದ ಸೇತುವೆ ಉರುಳುತ್ತಿದೆಯೋ ಅಥವಾ ಸದ್ದಿಲ್ಲದೇ ಗಟ್ಟಿಯಾಗ್ತಿದೆಯೋ ಗೊತ್ತಾಗ್ತಿಲ್ಲ.

ದಚ್ಚು ಹೆಸರಲ್ಲಿ 25 ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗಿನಿಂದ ದರ್ಶನ್ ಹಾಗೂ ಉಮಾಪತಿಯವರ ನಡುವೆ ಮನಸ್ತಾಪ ಮೂಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ಸತ್ಯ. ಆರೋಪ-ಪ್ರತ್ಯಾರೋಪ ಏನೇ ಇದ್ದರೂ ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡ್ತಿಲ್ಲ ಎಂಬುದು ಕೂಡ ಅಷ್ಟೇ ದಿಟ. ಮೊದಲು, 25 ಕೋಟಿ ವಂಚನೆಯ ಪ್ರಕರಣದ ಸತ್ಯಾಸತ್ಯತೆ ಆಚೆ ಬರಲಿ ಮುಂದೇನಾಗ್ಬೇಕೋ ಅದಾಗುತ್ತೆ ಅಂತ ಇಬ್ಬರು ತೀರ್ಮಾನ ಮಾಡಿದ್ದಾರೆ.

ಆದರೆ, ಅಲ್ಲಿವರೆಗೂ ತಾಳ್ಮೆಯಿಂದ ಕಾಯೋದಕ್ಕೆ ತಯ್ಯಾರಿಲ್ಲದ ಕೆಲವು ಮಂದಿ ಕಳೆದ ವರ್ಷ ರಾಬರ್ಟ್' ಪ್ರೊಡ್ಯೂಸರ್ ಬರ್ತ್ಡೇಗೆ ಡಿಬಾಸ್ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದರು. ಆದರೆ ಈ ವರ್ಷ ಉಮಾಪತಿಯವರ ಹುಟ್ಟುಹಬ್ಬಕ್ಕೆ ಶುಭಕೋರಿಲ್ಲ. ಹೀಗಾಗಿ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗ್ತಿದೆಯೆಂದು ಮಾತನಾಡಿಕೊಳ್ತಿದ್ದಾರೆ. ಅಲ್ಲಾ ಗುರು ಡಿಬಾಸ್ ವಿಶ್ ಮಾಡುವುದು ಊರವರಿಗೆಲ್ಲಾ ಗೊತ್ತಾಗ್ಬೇಕು ಅಂತೇನಿಲ್ಲವಲ್ಲ, ನೇರವಾಗಿ ಫೋನ್ ಮಾಡಿ ಶುಭಾಷಯ ತಿಳಿಸಿರಬಹುದು.ನಿರ್ಮಾಪಕರೇ ತಂದಿಟ್ಟು ತಮಾಷೆ ನೋಡ್ತಿರುವವರು ಆದಷ್ಟು ಬೇಗ ತಗಲಾಕಿಕೊಳ್ಳಲಿ ಆ ಮೇಲೆ ಆಟ ಶುರುವಿಟ್ಟುಕೊಳ್ಳೋಣ’ ಹೀಗಂತ ಡಿಬಾಸ್ ಹೇಳಿದ್ದರೂ ಹೇಳಿರಬಹುದು ಯಾರಿಗೂ ಗೊತ್ತು ಸ್ವಾಮಿ.

ಸಾರಥಿ ಹಾಗೂ ಉಮಾಪತಿಯವರ ನಡುವಿನ ಸಂಬಂಧದ ಬಗ್ಗೆ ಸುಮ್‌ಸುಮ್ಮನೇ ಸುಳ್‌ಸುದ್ದಿ ಹಬ್ಬಿಸುವವರು ಹಳೆಯ ಇನ್ಸಿಡೆಂಟ್‌ನ ಒಮ್ಮೆ ರೀಕಾಲ್ ಮಾಡಿಕೊಳ್ಳಿ. ಪರಸ್ಪರ ಇಬ್ಬರು ಏನೇ ಆರೋಪ ಮಾಡಿದರೂ ಕೂಡ ಖಾಸಗಿ ಹೋಟೆಲ್ ನಲ್ಲಿ ಇಬ್ಬರು ಸಿಟ್ಟಿಂಗ್ ಕೂತು ಕ್ಯಾಮೆರಾಗೆ ಒಂದು ಫೋಸ್ ಕೊಟ್ಟರು. ನಮ್ಮ ನಿರ್ಮಾಪಕರು ನಿರ್ಮಾಪಕರೇ ಅಂತ ದಚ್ಚು ಸ್ಟೇಟ್‌ಮೆಂಟ್ ಕೊಟ್ಟರೆ, `ಸಿನಿಮಾ ಆಂಗಲ್‌ನಲ್ಲಿ ಹೇಳೋದಾದರೆ ದರ್ಶನ್ ಇಂಜಿನ್ ಇದ್ದ ಹಾಗೇ, ನಾವು ಹಿಂದೆ ಇರುವ ಭೋಗಿಗಳು.. ಅವರು ಮುಂದೆ ಹೋದರೆ ನಾನು ಹಿಂದೆ ಇರುವುದಾಗಿ ನಿರ್ಮಾಪಕ ಉಮಾಪತಿಯವರು ಹೇಳಿಕೊಂಡಿದ್ದಾರೆ.

ಈ ಮಧ್ಯೆ ದೊಡ್ಮನೆ ಆಸ್ತಿ ವಿಚಾರದ ಸಂಗತಿಯ ಹೇಳಿಕೆಯಲ್ಲಿ ಕೊಂಚ ಆಚೀಚೆ ಆಗಿದೆ ಅದೇನು ಎಂಬುದು ಅವರಿಬ್ಬರು ಕೂತ್ಕೊಂಡು ಬಗೆಹರಿಸಿಕೊಳ್ತಾರಾ ಅನ್ನೋದರ ಜೊತೆಗೆ ಇಬ್ಬರು ಒಂದಾಗಿ ಸಿನಿಮಾ ಮಾಡ್ತಾರಾ ಇಲ್ಲವಾ ಎಂಬುದು ಕೂಡ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಆ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ತಾಳ್ಮೆಯಲ್ಲಿ ಶ್ರೀರಾಮನಂತೆ ಕಾಯದೇ ಬೇರೆದಾರಿಯಿಲ್ಲ. ಕಾಯಿರಿ ಕಾದಷ್ಟು ಒಳ್ಳೆಯದೇ ಅಲ್ಲವಾ

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಶಾರ್ದೂಲ ಹಾಡಿಗೆ ಮೆಚ್ಚುಗೆ; ಸಂಚಿತ್ ಹೆಗಡೆ ಕಂಠದಲ್ಲಿ ಲಿರಿಕಲ್‌ ವಿಡಿಯೊ ರಿಲೀಸ್

ತಮ್ಮ ಅಮೋಘ ಕಂಠದಿಂದ ಕೇಳುಗರ ಮನಗೆದ್ದಿರುವ ಸಂಚಿತ್ ಹೆಗಡೆ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ “ಶಾರ್ದೂಲ” ಚಿತ್ರದ “ಒಂದು ಸಣ್ಣ ತಪ್ಪನ್ನು ಮಾಡಿ ಬಿಡಲೇ ನಾನು” ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಅರವಿಂದ್ ಕೌಶಿಕ್ ಬರೆದಿರುವ ಈ ಹಾಡಿಗೆ ಸತೀಶ್ ಬಾಬು ಸಂಗೀತ ನೀಡಿದ್ದಾರೆ.


ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಬ್ಯಾನರ್‌ನಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿರ್ಮಿಸಿರುವ ಈ ಚಿತ್ರ ಆಗಸ್ಟ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.
ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.


ಈ ಹಿಂದೆ “ನಮ್ ಏರಿಯಾಲ್ಲೊಂದು‌ ದಿನ” “ತುಘಲಕ್” ಹಾಗೂ “ಹುಲಿರಾಯ” ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಅರವಿಂದ್ ಕೌಶಿಕ್‌, ಈ ಚಿತ್ರಕ್ಕೆ “ದೆವ್ವ ಇರಬಹುದಾ” ಎಂಬ ಅಡಿಬರಹ ಕೊಟ್ಟಿದ್ದಾರೆ.

ವೈ.ಜಿ.ಆರ್ ಮನು ಛಾಯಾಗ್ರಹಣವಿದೆ. ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಶಿವರಾಜ್ ಮೇಹು ಸಂಕಲನ ಮಾಡಿದರೆ, ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ‌ ಸಾಹಸ ನಿರ್ದೇಶನವಿದೆ.

ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Categories
ಸಿನಿ ಸುದ್ದಿ

ದುಬಾರಿ ಮೊತ್ತಕ್ಕೆ ಆರ್ ಆರ್ ಆರ್ ಆಡಿಯೋ ರೈಟ್ಸ್ ಸೇಲ್; ಕೆಜಿಎಫ್- 2 ದಾಖಲೆ ಮುರೀತು ರಾಜಮೌಳಿ ಚಿತ್ರ !

ಜಕ್ಕಣ್ಣ ಅಲಿಯಾಸ್ ರಾಜಮೌಳಿಯವರು ಇಂಡಿಯನ್ ಸಿನಿಮಾ ಇತಿಹಾಸದಲ್ಲಿ ಹಿಂದ್ಯಾರು ಬರೆಯದ ಐತಿಹಾಸಿಕ ದಾಖಲೆಯನ್ನು ಬರಿಬೇಕು ಅಂತ ಫಿಕ್ಸಾಗಿ ಫೀಲ್ಡ್ ಗೆ ಇಳಿಯುತ್ತಾರೆ ಅಂತ ಕಾಣುತ್ತೆ. ಬಾಹುಬಲಿ ಮೂಲಕ ಭಾರತೀಯ ಚಿತ್ರರಂಗದಲ್ಲಿ ನಯಾ ದಾಖಲೆ ಕೆತ್ತಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ ಮೌಳಿ ಸಾರಥ್ಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ ಆರ್ ಆರ್ ಆರ್ ಹೊಸ ರೆಕಾರ್ಡ್ ಮಾಡಿದೆ. ಭಾರತೀಯ ಚಿತ್ರರಂಗದ ಐತಿಹಾಸಿಕ ಪುಟದಲ್ಲಿ ಯಾವೊಂದು ಚಿತ್ರವೂ ಬರೆಯದ ಇತಿಹಾಸಕ್ಕೆ ಆರ್ ಆರ್ ಆರ್ ಸಾಕ್ಷಿಯಾಗಿದೆ.

ಆರ್ ಆರ್ ಆರ್ ಇಡೀ ವಿಶ್ವವೇ ಕಣ್ಣರಳಿಸಿ ಕಾಯ್ತಿರುವ‌ ಚಿತ್ರ. ಸೆಟ್ಟೇರಿದಾಗಲೇ ಸುಂಟರಗಾಳಿ ಎಬ್ಬಿಸಿದ್ದ ಈ‌ಚಿತ್ರ ಮೇಕಿಂಗ್ ನಿಂದ ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವುದು ಗೊತ್ತೆಯಿದೆ. ಇದೀಗ ಆಡಿಯೋ ರೈಟ್ಸ್ ವಿಚಾರಕ್ಕೆ ಭಾರತೀಯ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದೆ. ಆರ್ ಆರ್ ಆರ್ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಭರ್ತಿ 25 ಕೋಟಿ ಕೊಟ್ಟು ಆಡಿಯೋ ಹಕ್ಕುಗಳನ್ನು ಖರೀದಿ ಮಾಡಿದೆ ಎನ್ನಲಾಗ್ತಿದೆ. ಫ್ರೆಂಡ್ ಶಿಪ್ ಡೇಯಂದು ಸ್ಪೆಷಲ್ ಸಾಂಗ್ ರಿಲೀಸ್ ಆಗಲಿದೆ.

ಇತ್ತೀಚೆಗೆ ಲಹರಿ ಸಂಸ್ಥೆ ಕೆಜಿಎಫ್‌ ಚಾಪ್ಟರ್ 2 ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. 7.2 ಕೋಟಿಗೆ ಕೆಜಿಎಫ್ 2 ಆಡಿಯೋ ರೈಟ್ಸ್ ಸೇಲ್ ಆಗಿತ್ತು. ಈ‌ ಮೂಲಕ ಬಾಹುಬಲಿ 2 ಚಿತ್ರದ ಆಡಿಯೋ ದಾಖಲೆಯನ್ನ ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗಿತ್ತು. ಇದೀಗ, ಕೆಜಿಎಫ್ ರೆಕಾರ್ಡ್ ನ ಆರ್ ಆರ್ ಆರ್ ಬೀಟ್ ಮಾಡಿದೆ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಆರ್ ಆರ್ ಆರ್ ಆಡಿಯೋ ಹಕ್ಕುಗಳನ್ನು ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಬಾಚಿಕೊಂಡಿದೆ. 25 ಕೋಟಿ ಸುರಿದು ಆಡಿಯೋ ರೈಟ್ಸ್ ಪಡೆದಿವೆ ಅಂದರೆ ನೀವೇ ಲೆಕ್ಕಹಾಕಿ
ಎಂ ಎಂ ಕೀರವಾಣಿ ಸಂಯೋಜಿಸಿರುವ ಹಾಡುಗಳು ಹೇಗಿರಬಹುದೆಂದು.

ಆರ್ ಆರ್ ಆರ್ ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾ. ಕೋಮರಾಮ್ ಭೀಮ್ ಪಾತ್ರಕ್ಕೆ ಜೂನಿಯರ್ ಎನ್ ಟಿಆರ್ ಜೀವತುಂಬಿದರೆ, ಅಲ್ಲುರಿ ಸೀತರಾಮ ರಾಜು ಪಾತ್ರಕ್ಕೆ ರಾಮ್ ಚರಣ್ ತೇಜಾ ಬಣ್ಣ ಹಚ್ಚಿದ್ದಾರೆ.

ಬಿಟೌನ್ ಬ್ಯೂಟಿ ಅಲಿಯಾ ನಾಯಕಿಯಾಗಿ ಮಿಂಚಿದ್ದಾರೆ. ಅಜಯ್ ದೇವಗನ್ ಮುಖ್ಯಪಾತ್ರದಲ್ಲಿದ್ದು ವಿದೇಶಿ ಕಲಾವಿದರು ಕೂಡ ಚಿತ್ರದಲ್ಲಿದ್ದಾರೆ. ಡಿ.ವಿ.ವಿ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ 400 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13 ರಂದು ತೆರೆಗೆ ತರೋದಕ್ಕೆ ಸಕಲ ತಯ್ಯಾರಿ ನಡೀತಿದೆ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪವರ್ ಪಕ್ಕದಲ್ಲಿ ನಿಲ್ಲೋಕೆ ತಮನ್ನಾ ರೆಡಿಯಿದ್ದಾರೆ; ನೋಡು ಯೋಚನೆ ಮಾಡು ತ್ರಿಷಾ !?

ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಪಕ್ಕದಲ್ಲಿ ನಿಲ್ಲಬೇಕು ಅಂತ ಕಾಯ್ತಿರುವವರು ಒಬ್ಬರಾ..ಇಬ್ಬರಾ…ಲೆಕ್ಕಾನೇ ಇಲ್ಲ ಬುಡು ಗುರು. ಅಪ್ಪು ಜೊತೆ ಆಕ್ಟ್ ಮಾಡೋದಕ್ಕೆ ಒಂದೇ ಒಂದು ಚಾನ್ಸ್ ಸಿಕ್ಕರೆ ಸಾಕು ಅಂತ ಅದೆಷ್ಟೋ ಹೀರೋಯಿನ್ಸ್ ಮನೆದೇವರಿಗೆ ಹರಕೆ ಬೇರೆ ಕಟ್ಟಿಕೊಂಡಿದ್ದಾರೆ. ಅಣ್ಣಾಬಾಂಡ್‌ಗೆ ಜೊತೆಯಾಗ್ಬೇಕು ಮುತ್ತಿನ ತೇರಲ್ಲಿ ದೊಡ್ಮನೆ ಹುಡುಗನ ಜೊತೆ ಮೆರವಣಿಗೆ ಹೊರಡಬೇಕು ಅಂತ ಕನಸು ಕಟ್ಟಿಕೊಂಡಿದ್ದಾರೆ. ಇಂತಹದ್ದೊಂದು ಕನಸಿನ ಸಾಕಾರಕ್ಕಾಗಿ ಜಿಮ್-ವರ್ಕೌಟ್-ಡಯಟ್ ಅಂತ ಫಿಗರ್‌ನ ಮೆಂಟೇನ್ ಮಾಡೋದಲ್ಲದೇ ಆಕ್ಟಿಂಗ್‌ನಲ್ಲಿ ಪರ್ಫೆಕ್ಟ್ ಆಗೋದಕ್ಕೆ ಬೆವರು ಸುರಿಸುತ್ತಿದ್ದಾರೆ. ಅಸಲಿಯತ್ತು ಹೀಗಿರುವಾಗ, ಯುವರತ್ನನ ಹವಾ ಹೃದಯ ಗೆದ್ದಿರುವಾಗ ಸೌತ್ ಸುಂದರಿ ನೋ ಅನ್ನೋದಕ್ಕೆ ಚಾನ್ಸ್ ಇದೆಯಾ ಸದ್ಯಕ್ಕಂತೂ ಗೊತ್ತಿಲ್ಲ.

ಕಳೆದ ಎರಡು ದಿನಗಳಿಂದ ಬಜಾರ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿರುವ `ಪವರ್’ ಹೀರೋಯಿನ್ ಮ್ಯಾಟರ್ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ. ಪವರ್ ಕಾಂಬಿನೇಷನ್ ಮತ್ತೆ ಒಂದಾಗುವ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಮಾತ್ರವಲ್ಲ ಗಾಂಧಿನಗರದ ಮಂದಿ ಕೂಡ ಥ್ರಿಲ್ಲಾಗಿದ್ದಾರೆ. ಪವರ್ ಜೋಡಿಯನ್ನು ಮತ್ತೆ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಆದರೆ, ದ್ವಿತ್ವ ಚಿತ್ರತಂಡ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸೌತ್ ಸುಂದರಿ ಹೇಳಿದ್ದೇನು ಎಂಬದನ್ನು ಇನ್ನೂ ರಿವೀಲ್ ಮಾಡಿಲ್ಲ.

ಹೌದು, ದ್ವಿತ್ವ ಚಿತ್ರದ ನಾಯಕಿಯ ಬಗ್ಗೆ ಬಜಾರ್‌ನಲ್ಲಿ ಸಾಕಷ್ಟು ಚರ್ಚೆಗಳಾಗ್ತಿದೆ. ಸೌತ್ ಸುಂದರಿ ತ್ರಿಷಾ ಅಪ್ಪುಗೆ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಟೂಪೀಸ್ ಧರಿಸಿಕೊಂಡು
ಸ್ಯಾಂಡಲ್‌ವುಡ್ ಅಂಗಳದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. `ಪವರ್’ ಚಿತ್ರದಲ್ಲಿ ಅಣ್ಣಾಬಾಂಡ್‌ಗೆ ಜತೆಯಾಗಿ ಕಿಕ್ಕೇರಿಸಿದ್ದ ತ್ರಿಷಾ ಮತ್ತೆ ದ್ವಿತ್ವ ಚಿತ್ರದಲ್ಲಿ ಅಪ್ಪು ಪಕ್ಕದಲ್ಲಿ ನಿಲ್ತಾರೆನ್ನುವ ಸುದ್ದಿ ಹಬ್ಬಿದೆ. ಅಂದ್ಹಾಗೇ, ತ್ರಿಷಾ ಜೊತೆ ಸಿಟ್ಟಿಂಗ್ ಕೂತು ಬೈಟು ಕಾಫಿ ಕುಡಿಯುತ್ತಾ ನಿರ್ದೇಶಕ ಪವನ್ ಕುಮಾರ್ ಕಥೆ ಹೇಳಿದ್ದಾರಂತೆ. ದ್ವಿತ್ವ ಕಥೆ ಕೇಳಿ ಥ್ರಿಲ್ಲಾಗಿರುವ ತ್ರಿಷಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರಂತೆ.

ಹಾಗಾದ್ರೆ ತ್ರಿಷಾ ಏನಂದ್ರು? ಓಕೆ ಅಂದರಂತಾ? ಪವರ್ ಬಗಲಲ್ಲಿ ನಿಲ್ತಾರಂತಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ ಯಾಕಂದ್ರೆ ಚಿತ್ರತಂಡ ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಅಂದ್ಹಾಗೇ, ತ್ರಿಷಾ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ ಈ ಕಾರಣದಿಂದ ತ್ರಿಷಾ ಗ್ರೀನ್ ಸಿಗ್ನಲ್ ಕೊಡೋದಕ್ಕೆ ಹಿಂದೇಟು ಹಾಕ್ತಾರೋ ಅಥವಾ ಪವರ್‌ಗೋಸ್ಕರ ಜಿಗಿಜಿಗಿದು ಬರ‍್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ಹುಡುಗನ ಪಕ್ಕದಲ್ಲಿ ನಿಲ್ಲೋದಕ್ಕೆ ನಾನ್ ಯಾವಾಗ್ಲೂ ರೆಡಿ ಅಂತ ಮಿಲ್ಕಿಬ್ಯೂಟಿ ತಮನ್ನಾ ಬಹಳ ದಿನದ ಹಿಂದೆಯೇ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ, ತ್ರಿಷಾ ನೋ ಅನ್ನೋದಕ್ಕೂ ಮೊದಲು ಕೊಂಚ ಯೋಚನೆ ಮಾಡಿದರೆ ಒಳ್ಳೆಯದು ಎಂಬುದು ಅಪ್ಪು ಫ್ಯಾನ್ಸ್ ಅಭಿಪ್ರಾಯ

ಉಳಿದಂತೆ ದ್ವಿತ್ವ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಫಸ್ಟ್ ಟೈಮ್ ಪವನ್‌ಕುಮಾರ್-ಪವರ್‌ಸ್ಟಾರ್ ಜೊತೆಯಾಗ್ತಿದ್ದಾರೆ. ಪೋಸ್ಟರ್‌ನಿಂದಲೇ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿರುವ ದ್ವಿತ್ವ ಈಗ ಸಿನಿಮಾ ನಾಯಕಿ ವಿಚಾರಕ್ಕೆ ಸಾಕಷ್ಟು ಸುದ್ದಿಮಾಡ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ಹೊರತುಪಡಿಸಿ ಉಳಿದ ತಾರಾಗಣದ ಬಗ್ಗೆ ಪವನ್ ಇನ್ನಷ್ಟೇ ರಿವೀಲ್ ಮಾಡ್ಬೇಕಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು `ದ್ವಿತ್ವ’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮಿನುಗುವ ನಕ್ಷತ್ರವೊಂದು ಜಾರಿಬಿದ್ದ ಸಂಕಟ, ತೆರೆ ಮೇಲಿನ ಒನಕೆ ಒಬವ್ವ ಈಗ ಬರೀ ನೆನಪು ಮಾತ್ರ !

ಕಲಾವಿದರಿಗೆ ʼಸ್ಟಾರ್‌ʼ ಅಂತಾರೆ. ಸ್ಟಾರ್‌ ಅಂದ್ರೆ ಮಿನುಗುವ ನಕ್ಷತ್ರ ಅನ್ನೋದು ನಿಮಗೂ ಗೊತ್ತಿದೆ. ನಿಜವಾದ ನಕ್ಷತ್ರಗಳು ಆಗಸದಲ್ಲಿ ಮಿನುಗಿದರೆ, ಕಲಾವಿದರು ಬೆಳ್ಳಿಪರದೆ ಮೇಲೆ ಮಿನುಗುವ ನಕ್ಷತ್ರ ಗಳು.ಅಂತೆಯೇ ಸ್ಟಾರ್‌ ಎನಿಸಿಕೊಂಡ ಈಗಿನ ಕಲಾವಿದರೆಲ್ಲ ಅದೆಷ್ಟು ಮಿನುಗು ತ್ತಾರೋ ಗೊತ್ತಿಲ್ಲ, ಆದರೆ ಕನ್ನಡ ಚಿತ್ರರಂಗ ಕಂಡ ಅತ್ಯಾ ದ್ಭುತ ನಟಿ, ಅಭಿನಯ ಶಾರದೆ ಜಯಂತಿ ಅಂದ್ರೆ ಬೆಳ್ಳಿ ಪರದೆ ಮೇಲೆ ನಿರಂತರವಾಗಿ ಮಿನುಗಿದ ನಕ್ಷತ್ರ. ಅಂತಹ ಬೆಳ್ಳಿ ನಕ್ಷತ್ರವೇ ಈಗ ಕಳಚಿ ಬಿದ್ದಿದೆ. ಅವರಿನ್ನು ನೆನಪು ಮಾತ್ರ ಎನ್ನುವ ಸಂಕಟ ಇಡೀ ಸಿನಿಮಾ ರಸಿಕರಲ್ಲಿ ಮನೆ ಮಾಡಿದೆ.

ಹಿರಿಯ ನಟಿ ಜಯಂತಿ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿ. ಈಗಿನ ತಲೆಮಾರಿಗೆ ಇಂತಹ ನಟಿಯರನ್ನು ಇನ್ನೆಂದೂ ಕಾಣಲು ಸಾಧ್ಯವೇ ಇಲ್ಲ. ಪಂಡರಿಬಾಯಿ, ಲೀಲಾವತಿ, ಸರೋಜದೇವಿ, ಕಲ್ಪನಾ , ಭಾರತಿ ಹಾಗೂ ಜಯಂತಿ ಅವರೆಲ್ಲ ಆ ಕಾಲದಲ್ಲಿ ನಾಯಕಿಯರಾಗಿ ಕನ್ನಡ ಚಿತ್ರರಂಗ ಬಹುಕಾಲ ಆಳಿದವರು. ನಿರಂತರವಾದ ಅವರ ಅಳ್ವಿಕೆಗೆ ಕಾರಣವಾಗಿದ್ದೇ ನಟನೆಯ ಮೇಲಿದ್ದ ಅವರ ಆಸಕ್ತಿ ಮತ್ತು ಬದ್ಧತೆ. ನೇಮ್‌ ಅಂಡ್‌ ಫೇಮ್‌ ಎನ್ನುವುದಕ್ಕಿಂದ ನಟನೆಯ ಹಸಿವಿಗಾಗಿಯೇ ಅವರೆಲ್ಲ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದು ಇದೆ. ಈ ಕಾಲಕ್ಕೆ ಅದೆಲ್ಲ ಸಾಧ್ಯವೇ? ಅದೆಲ್ಲಕ್ಕಿಂದ ಮುಖ್ಯವಾಗಿ ಖಾಸಗಿ ಬದುಕಿನಲ್ಲಿ ಸಂತೋಷಕ್ಕಿಂತ ನೋವನ್ನೇ ಉಂಡ ನಟಿ ಜಯಂತಿ ಅವರಂತೂ ತಮ್ಮ ಇಡೀ ಜೀವನವನ್ನೂ ನಟನೆಗಾಗಿಯೇ ಮೀಸಲಿ ಟ್ಟಿದ್ದರೂ ಎನ್ನುವುದಕ್ಕೆ ಅವರು ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಸಾಕ್ಷಿ.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 5೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಮಹಾನಟಿ ಅವರು. ಸಿನಿಮಾ ಅಂದ್ರೆ ಆಗ ಒಂದಷ್ಟು ಮಡಿ, ಮೈಲಿಗೆಗಳು ಇದ್ದ ಕಾಲದಲ್ಲೇ ನಾಯಕಿ ಆಗಿ ಬಂದವರು ನಟಿ ಜಯಂತಿ. ಒಂದ್ರೀತಿ ಅವರ ಹಾದಿಯ ಆರಂಭವೇ ಸಂಪ್ರಾದಾಯಗಳನ್ನು ಧಿಕ್ಕರಿಸಿ ಬಂದಿದ್ದು. ಸಿನಿಮಾ ಅಂದ್ರೆ ಹೀಗೆಯೇ ಅಂತ ಬೇಲಿ ಹಾಕಿಕೊಂಡಿದ್ದಾಗ ಹದಿ ಹರೆಯದ ಯುವತಿಯೊಬ್ಬಳು ಕ್ಯಾಮೆರಾ ಮುಂದೆ ಈಜುಡುಗೆ ತೊಡುವುದೆಂದರೆ ಅದು ಅಷ್ಟು ಸುಲಭ ವೇನು ಆಗಿರಲಿಲ್ಲ, ಹಾಗೆಲ್ಲ ಮಾಡಿದರೆ ದೊಡ್ಡ ಪ್ರತಿರೋಧವೇ ವ್ಯಕ್ತವಾಗಲಿದ್ದ ಕಾಲವದು. ಅಂತಹ ದಿನಮಾನದಲ್ಲೇ ನಟಿ ಜಯಂತಿ ಅವರು ಮಿಸ್‌ ಲೀಲಾವತಿ ಚಿತ್ರದಲ್ಲಿಈಜುಡುಗೆ ತೊಟ್ಟು ಕ್ಯಾಮೆರಾ ಮುಂದೆ ನಿಂತಿದ್ದರು ಎನ್ನುವುದಕ್ಕೆ ನೇಮ್‌ ಅಂಡ್‌ ಫೇಮ್‌ ಕಾರಣ ಅಂತೆನ್ನಲಾಗದು.ಆ ಮೂಲಕ ದೊಡ್ಡ ಕ್ರಾಂತಿಗೆ ಕಾರಣವಾದರು ಅನ್ನೋ ದು ಈಗ ಸುಲಭವಾಗಿ ಹೇಳುವ ಮಾತಾದರೂ, ಆಗ ಅದನ್ನ ವರು ಅರಗಿಸಿಕೊಂಡಿದ್ದೇ ಬಹುದೊಡ್ಡ ಸಾಹಸ. ಪಾತ್ರ ಯಾವು ದದಾರೂ ಸರಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಜಯಂತಿ ಅವರಿಗೆ ನಟನೆಯೇ ಸಂಗಾತಿಯಂತಾಗಿತ್ತು. ಹಾಗಾಗಿ ಪಾತ್ರಗಳನ್ನ ಅರಸಿ, ಪರಭಾಷೆಗಳಿಗೂ ಹೋದರು. ಅಲ್ಲೂ ತಮ್ಮ ಮನೋಜ್ಜ ಅಭಿನಯದ ಮೂಲಕ ಮನೆ ಮಾತಾಗಿದ್ದರು ಎನ್ನುವುದು ಕನ್ನಡದ ಹೆಮ್ಮೆಯೇ ಹೌದು.

ಮಿಸ್‌ ಲೀಲಾವತಿ ಚಿತ್ರದಲ್ಲಿನ ಅವರ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂತು ಎನ್ನುವುದು ನಿಜವೇ ಆಗಿದ್ದರೂ, ಜಯಂತಿ ಅವರು ಕನ್ನಡಿಗರ ಮನೆ ಮಾತಾಗಿದ್ದು ನಾಗರಾಹಾವು ಚಿತ್ರದಲ್ಲಿನ ಒನಕೆ ಒಬವ್ವ ಪಾತ್ರದ ಮೂಲಕ. ಈಗಲೂ ಜಯಂತಿ ಅಂದ್ರೆ ಕನ್ನಡಿಗರ ಮನದಲ್ಲಿ ಚಿತ್ರದುರ್ಗದ ಕಲ್ಲಿನಕೋಟೆ, ಅಲ್ಲಿಗೆ ದೆಂಡೆತ್ತಿ ಬಂದಿದ್ದ ಹೈದರಾಲಿ ಸೈನ್ಯ, ಆ ಸೈನ್ಯವನ್ನು ಬಗ್ಗ ಬಡಿದ ವೀರ ವನಿತೆ ಒನಕೆ ಒಬವ್ವ ಳ ಪರಾಕ್ರ ಮವೇ ನದಿಯಂತೆ ಹರಿದುಹೋಗುತ್ತದೆ. ಅಂತಹದೊಂದು ಬೆಳ್ಳಿ ಪರದೆಯ ನಕ್ಷತ್ರವೇ ಈಗ ಕಳಚಿ ಬಿದ್ದಿದೆ.

error: Content is protected !!