ರಕ್ಷಿತಾ-ದರ್ಶನ್ ಸ್ನೇಹ ಸೇತುವೆ ಸುಂಟರಗಾಳಿ ಬಿರುಗಾಳಿಗೆಲ್ಲ ಮುರಿದು‌‌ ಬೀಳಲ್ಲ ಗುರು !

  • ವಿಶಾಲಾಕ್ಷಿ

ರಕ್ಷಿತಾ ಪ್ರೇಮ್ ಅವರ ಸೋಷಿಯಲ್‌ ಮೀಡಿಯಾದಿಂದ ಹೊರಟು ಸಿನಿ ಲಹರಿ ವೆಬ್ ಸೈಟ್ ಗೆ ಬಂದಿರುವ ಇದೊಂದು ಫೋಟೋ ಸಾಕು ದರ್ಶನ್- ರಕ್ಷಿತಾ ಸ್ನೇಹ ಸೌಹಾರ್ದ ಸಂಬಂಧ ಎಷ್ಟು ಪವಿತ್ರವಾದದ್ದು ಮತ್ತು ಎಷ್ಟು ಶಕ್ತಿಯುತವಾದದ್ದು‌ ಅಂತ ಸಾರುವುದಕ್ಕೆ.

ಅಂದ್ಹಾಗೇ, ದರ್ಶನ್- ರಕ್ಷಿತಾರ ಈ ಫೋಟೋ ನೋಡಿ ಕೆಲವರು ಬಾದಾಮ್‌ ಮಿಲ್ಕ್ ಶೇಕ್ ಕುಡಿದಿರ್ತಾರಂತೆ ಇನ್ನೂ ಕೆಲವರು ಆಲ್ಕೋಹಾಲ್ ಕುಡಿದಿರ್ತಾರಂತೆ. ಅಷ್ಟಕ್ಕೂ ಹೀಗಂತ ನಾವು ಹೇಳ್ತಿಲ್ಲ ಗಾಂಧಿನಗರದ ಪಂಡಿತರ ಬಜಾರ್ ಮಾತುಕತೆ‌ ಅಷ್ಟೇ. ಅದು ಏನೇ ಇರಲಿ ದಚ್ಚು – ರಕ್ಷು ಸ್ನೇಹ- ಸಂಬಂಧಕ್ಕೆ ಯಾರ ಕಣ್ಣು ಬೀಳದೇ ಇರಲಿ ಅಂತ ಒಂದು ‌ದೃಷ್ಠಿ ತೆಗೆದು ಬಿಸಾಕಿ ಬಿಡೋಣ ಅಲ್ಲವೇ.

ಚಾಲೆಂಜಿಂಗ್ ಸ್ಟಾರ್ ಹಾಗೂ ರಕ್ಷಿತಾ‌ ಮೇಡಂ ರೀಲ್ ಲೈಫ್ ಕೋಸ್ಟಾರ್ಸ್ ಮಾತ್ರವಲ್ಲ ಬಹುಕಾಲದ ಫ್ರೆಂಡ್ಸ್ ಕೂಡ ಹೌದು. ಕಷ್ಟ- ದುಃಖ- ನೋವು- ನಲಿವು ಎಲ್ಲದರಲ್ಲೂ ಪರಸ್ಪರ ಭಾಗಿಯಾಗಿದ್ದಾರೆ. ಒಂದೇ ಕುಟುಂಬದಂತಿರುವ ಇವರಿಬ್ಬರು ಭರ್ತಿ 25 ವರ್ಷಗಳಿಂದ ತಮ್ಮ ಸ್ನೇಹ-ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು‌ ಬಂದಿದ್ದಾರೆ. ಬಿರುಗಾಳಿಯಲ್ಲ ಸುನಾಮಿ ಸುಂಟರಗಾಳಿ ಎದ್ದರೂ ಕೂಡ ತಮ್ಮ ಸ್ನೇಹಸೇತುವೆ ಕಳಚಿ ಬೀಳೋದಿರಲಿ, ಅಲುಗಾಡುವುದಕ್ಕೆ‌ ಬಿಡಲ್ಲ ಎನ್ನುವುದಕ್ಕೆ ರಕ್ಷಿತಾ ಪೋಸ್ಟ್ ಮಾಡಿರುವ ಈ ಫೋಟೋ ಹಾಗೂ ಬರೆದಿರುವ ಈ‌ ಸಾಲುಗಳೇ ಸಾಕ್ಷಿ.

‘ಕೆಲವು ಸಂಬಂಧಗಳು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ನೀನು ನನ್ನ ಜೊತೆ ಇರುತ್ತೀಯೆಂದು. ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ’ ಹೀಗಂತ ಟ್ವೀಟ್ ಮಾಡಿದ್ದಾರೆ ರಕ್ಷಿತಾ.

ಪ್ರೇಮ್ ಏನ್ ದೊಡ್ಡ ಪುಡಾಂಗುನಾ .. ನಾನು‌ ನೋಡಿದ್ದೀನಿ ಕರಿಯ ಟೈಮ್ ನಿಂದ ಹೀಗಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುಡುಗಿದ್ದೇ ಬಂತು
ಗಾಂಧಿನಗರದಲ್ಲಿ ಬೆಂಕಿಕಡ್ಡಿ ಗೀರೋರ್ ಸಂಖ್ಯೆ ಏಕ್ದಮ್ ಜಾಸ್ತಿಯಾಯ್ತು.‌
ಪ್ರೇಮ್ ಅಂಡ್ ರಕ್ಷಿತಾಗೆ ಫೋನ್ ಮೇಲ್ ಫೋನ್.
ಏನೇ ಆಗಲಿ ಪ್ರೇಮ್‌ ಅವರೇ ದರ್ಶನ್ ನಿಮ್ಮನ್ನ ಪುಡಾಂಗುನಾ‌ ಎನ್ನಬಾರದಿತ್ತು. ಏನೇ ಆಗಲಿ ಮೇಡಂ‌ ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಗಂಡನ ಬಗ್ಗೆ ಇಷ್ಟು ಚೀಪಾಗಿ ಮಾತನಾಡಬಾರದಿತ್ತು ಹೀಗಂತ ಫೋನ್ ಮಾಡಿ ಹೇಳಿ ಹೇಳಿ ಪ್ರೇಮ್ ಹಾಗೂ ರಕ್ಷಿತಾರ ನೆಮ್ಮದಿ ಕದಡಿದರು. ಹೀಗಾಗಿ, ರಕ್ಷಿತಾ ಹಾಗೂ ಪ್ರೇಮ್ ಇಬ್ಬರು ಕೂಡ ಬೇಸರದಿಂದಲೇ ತಮ್ಮ ಪ್ರತಿಕ್ರಿಯೆ ಹೊರ ಹಾಕಿದ್ದರು.

ಸುದ್ದಿ ಗೋಷ್ಠಿ ‌ಮಾಡಿದ ಪ್ರೇಮ್ ದರ್ಶನ್ ಹೇಳಿಕೆಯಿಂದ
ನನ್ನ ಮನಸ್ಸಿಗೆ ಬೇಜಾರಾಗಿದೆ. ನನ್ನ ಕೆಲಸದ ಬಗ್ಗೆ ರಾಜ್ ಕುಮಾರ್ ಹಾಗೂ‌‌ ರಜನಿಕಾಂತ್ ರಂತಹ ದಿಗ್ಗಜರೆಲ್ಲ‌ ಕೊಂಡಾಡಿದ್ದಾರೆ. ನನಗೂ ನನ್ನದೇ ಆದ ಅಭಿಮಾನಿಗಳಿದ್ದಾರೆ ಅವರೆಲ್ಲರಿಗೂ ಬೇಜಾರಾಗಿದೆ. ಹೀಗಾಗಿ ಬಹಿರಂಗವಾಗಿ ಪ್ರೆಸ್ಮೀಟ್ ಮಾಡ್ತಿದ್ದೇನೆಂದು ಪ್ರೇಮ್ ತಮ್ಮ ಅಸಮಾಧಾನ ಹೊರಹಾಕಿದ್ದರು.

ಅದರಂತೇ ರಕ್ಷಿತಾ ಕೂಡ ಕೊಂಚ ಗರಂ ಆಗಿಯೇ ದಚ್ಚು ಪುಡಾಂಗು ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದರು. ಖಾಸಗಿ‌ ಚಾನಲ್ ಜೊತೆ ಮಾತನಾಡುತ್ತಾ, ನಾನು ಪ್ರೇಮ್‌ ಪರವಾಗಿ ನಿಂತಿದ್ದೀನಿ ಅಂದ ಮಾತ್ರಕ್ಕೆ ನಾನು‌ ದರ್ಶನ್ ವಿರುದ್ದ ಅಂತಲ್ಲ‌ . ಇಬ್ಬರ ಪರವಾಗಿಯೂ ಇರುತ್ತೇನೆಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಆದರೆ, ರಕ್ಷಿತಾ ಹೇಳಿಕೆಯನ್ನು ಕಿವಿಗೆ ಹಾಕಿಕೊಳ್ಳದ ಮಂದಿ ದಚ್ಚು – ರಕ್ಷಿತಾ ಗೆಳೆತನ ಮುರಿದು ಬಿತ್ತು ಬಿಡು ಗುರು. ಇನ್ಮುಂದೆ ಅವರಿಬ್ಬರು ಒಂದಾಗೋದು ಡೌಟು ಅಂತ ಮಾತನಾಡಿಕೊಂಡಿದ್ದರು. ಅವರೆಲ್ಲರೂ ಈಗ ಗಪ್‌ಚುಪ್ ಆಗಿದ್ದಾರೆ. ಯಾಕಂದ್ರೆ, ದರ್ಶನ್ – ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಒಬ್ಬರಿಗೊಬ್ಬರು ಕುಳಿತು ಕಷ್ಟ ಸುಖ ಮಾತನಾಡಿದ್ದಾರೆ. ಫ್ಯಾಮಿಲಿಯೊಟ್ಟಿಗೆ ಒಂದೊಳ್ಳೆ ಊಟ ಮಾಡಿ ಸೆಲ್ಫಿಗೆ ಪೋಜು ಕೊಟ್ಟಿದ್ದಾರೆ. ಕೊನೆ ಉಸಿರು ಇರುವವರೆಗೆ ನಾವಿಬ್ಬರು ಸ್ನೇಹಿತರಾಗಿರೋಣವೆಂದು ಶೇಕ್ ಹ್ಯಾಂಡ್ ಮಾಡಿ ಸಂಭ್ರಮಿಸಿದ್ದಾರೆ. ಸ್ನೇಹ ಅಜರಾಮರವೆಂದು ಸಾರಿದ್ದಾರೆ.

ಸಿನಿಲಹರಿ ಎಂಟರ್ ಟೈನ್ಮೆಂಟ್ ಬ್ಯೂರೋ

Related Posts

error: Content is protected !!