Categories
ಸಿನಿ ಸುದ್ದಿ

ಡಿಎನ್ಎ ಟೆಸ್ಟ್ ಗೆ ರೆಡಿ

ಸಿನಿಮಾ ಪ್ರೇಕ್ಷಕ ಡಿ ಎನ್ ಎ ಟೆಸ್ಟ್ ಗೆ ರೆಡಿ ಆಗಬೇಕಿದೆ. ಯಾಕಂದ್ರೆ ನಿರ್ದೇಶಕ ಪ್ರಕಾಶ್ ಮೇಹು ಡಿಎನ್ ಎ ಟೆಸ್ಟ್ ಮಾಡಿಸಲು ಬರುತ್ತಿದ್ದಾರೆ. ಅಂದ ಹಾಗೆ ಅವರೇನು ವೈದ್ಯರೇ ಅಂತ ಯೋಚಿಸಬೇಡಿ. ಅವರು ನಿರ್ದೇಶಿಸಿ, ತೆರೆಗೆ ತರಲು ಹೊರಟಿರುವ ‘ಡಿಎನ್ ಎ’ ಹೆಸರಿನ ಚಿತ್ರ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರದ ಸೆನ್ಸಾರ್ ಕೂಡ ಮುಗಿದಿದೆ. ಮೇಹು ಪ್ರಕಾರ ಅದಕ್ಲೆ ಸೆನ್ಸಾರ್ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆಯಂತೆ.

ಚಿ ತ್ರ ನೋಡಿದ ತಂತ್ರಜ್ಞರು ಅನೇಕರು ಬಹಳ ಮೆಚ್ಚುಗೆಯ ಮಾತನ್ನಾಡಿದ್ದಾರೆ, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ಕುತೂಹಲದಿಂದ ನೋಡಿಸಿಕೊಳ್ಳುವ ಭಾವನಾತ್ಮಕ ಚಿತ್ರ ಇದಾಗಿದೆ, ರಾಜಕುಮಾರ್,ಪುಟ್ಟಣ್ಣನವರ ಕಾಲದ ಕಥಾಪ್ರಧಾನ ಚಿತ್ರಗಳನ್ನು ನೆನಪಿಸಿಕೊಳ್ಳುವವರಿಗೆ ಈ ಚಿತ್ರ ರಸದೌತಣ ನೀಡಲಿದೆ ಅನ್ನುವುದು ನೋಡಿದವರ ಒಟ್ಟಾರೆ ಅಭಿಪ್ರಾಯ, ಪುನೀತ್ ರಾಜಕುಮಾರ್ ಅವರ “ರಾಜಕುಮಾರ” ನಂತರ ಆ ಜಾನರ್ನಲ್ಲಿ ಬರುತ್ತಿರುವ ಉತ್ತಮ ಚಿತ್ರ ಅನ್ನುವುದು ಸೆನ್ಸಾರ್ ಮಾಡಿದವರು ವ್ಯಕ್ತಪಡಿಸಿದ ಅಭಿಪ್ರಾಯ’ ಎನುತ್ತಾರೆ ನಿರ್ದೇಶಕ ಪ್ರಕಾಶ್ ಮೇಹು.

Categories
ಸಿನಿ ಸುದ್ದಿ

ಮಳೆಯ ಹಾಡಲ್ಲಿ ಮಿಂದೆದ್ದ ಸಲಗ

ದುನಿಯಾ ವಿಜಯ್ ಇದೇ ಮೊದಲ ಸಲ ನಿರ್ದೇಶನ ಮಾಡಿರುವ ಸಲಗ ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾಲ್ಕು ಕ್ವಾರ್ಟರ್ ಕುಡಿದ್ರು ಸ್ಟಡಿಯಾಗಿ ನಿಲ್ತಿದ್ದೆ ಸೂರಿಯಣ್ಣ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಮತ್ತೊದು ಮಳೆಯ ಹಾಡು ಹೊರ ಬಂದಿದೆ. ಮಳೆಯೇ ಮಳೆಯೇ ಲೊರಿಕಲ್ ಸಾಂಗ್ ರಿಲೀಸ್ ಆಗಿದ್ದು, ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ.

Categories
ಸಿನಿ ಸುದ್ದಿ

ಕ್ರೇಜಿ ಪುತ್ರನ ಕಲರ್ ಫುಲ್ ಪೋಸ್ಟರ್ ರಿಲೀಸ್- ಮುಗಿಲ್ ಪೇಟೆಯಲ್ಲೊಂದು ಸುತ್ತು

#mugilpete

ಕ್ರೇಜಿ ಪುತ್ರನ ಚಿತ್ರದ ಕಲರ್ ಫುಲ್ ಪೋಸ್ಟರ್ ರಿಲೀಸ್

ಮನುರಂಜನ್ ಅಭಿನಯದ ಮುಗಿಲ್ ಪೇಟೆ ಚಿತ್ರತಂಡ
“ಗೌರಿ -ಗಣೇಶ” ಹಬ್ಬದಲ್ಲಿನಮ್ಮ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಭರತ್ ನಾವುಂದ ನಿರ್ದೇಶನದ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.
ರಕ್ಷಾ ವಿಜಯಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಸಾಧುಕೋಕಿಲ ಇತರರು ಇದ್ದಾರೆ.

Categories
ಸಿನಿ ಸುದ್ದಿ

ಮಳೆ‌ ಮಳೆ ಹಾಡಿಗೆ ಮೈ ಮನವೆಲ್ಲಾ ತಂಪು

ಯುವ ನಟ ಸೂರಜ್ ಗೌಡ ಅಭಿನಯದ ನಿನ್ನ ಸನಿಹಕೆ ಸಿನಿಮಾ ಈಗ ಮತ್ತೆ ಜೋರಾಗಿ ಸದ್ದು ಮಾಡುತ್ತಿದೆ. ಇದೇ ಮೊದಲ‌ ಸಲ ನಿರ್ದೇಶನ ಮಾಡಿರುವ ಸೂರಜ್ ಅವರ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮಳೆ ಮಳೆ ಎಂಬ ಬ್ಯೂಟಿಫುಲ್ ಹಾಡಿಗೆ ರಘುದೀಕ್ಷಿತ್ ಸಂಗೀತವಿದೆ. ಜೊತೆಗೆ ಆ ಹಾಡಿಗೆ ಧ್ವನಿಯನ್ನೂ ನೀಡಿದ್ದಾರೆ. ಇನ್ನು ವಾಸುಕಿ ವೈಭವ್ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿ.

Categories
ಸಿನಿ ಸುದ್ದಿ

ನಟ ರವಿಶಂಕರ್ ಗೌಡ ಪುತ್ರ ಈಗ ನಿರ್ದೇಶಕ

ನಟ ರವಿಶಂಕರ್ ಗೌಡ ಪುತ್ರ ಸೂರ್ಯ ತೇಜಸ್ವಿ ಈಗ ಸಿನಿಮಾರಂಗಕ್ಕೆ ಎಂಟ್ರಿಯಾಗಿದ್ದಾನೆ. ಹೌದು ಇದೇ ಮೊದಲ‌ಸಲ ಸೂರ್ಯ ತೇಜಸ್ವಿ ವೈ… ಫೈ? ಎಂಬ ಪುಟಾಣಿ ಹಾಸ್ಯ ಕಿರುಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ನಟನೆಯನ್ನೂ ಮಾಡಿದ್ದಾನೆ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ ನಲ್ಲಿ  ಕಿರುಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.ಈ ಕಿರುಚಿತ್ರದಲ್ಲಿ ಸೂರ್ಯ ಜೊತೆ ನಿಖಿಲ್ ನರೇಶ್ ನಟಿಸಿದ್ದಾರೆ. ಅಜಯ್ ಜಮದಗ್ನಿ ಸಂಕಲನವಿದೆ.

Categories
ಸಿನಿ ಸುದ್ದಿ

ವಾಸಂತಿ ನಲಿದಾಗ ಚಿತ್ರಕ್ಕೆ ಚಾಲನೆ

#ವಾಸಂತಿ_ನಲಿದಾಗ ಇದು ಹೊಸಬರ ಚಿತ್ರ. ಸೋಮವಾರ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.
ರವೀಂದ್ರ ವಂಶಿ ನಿರ್ದೇಶಕರು. ಜೇನುಗೂಡು ಕೆ.ಎನ್ ಶ್ರೀಧರ್ ಚಿತ್ರದ ನಿರ್ಮಾಪಕರು. ಶ್ರೀದೇವಿ ಮಂಜುನಾಥ ಸಂಭಾಷಣೆ ಇದೆ. ಶ್ರೀ ಗುರು ಸಂಗೀತವಿದೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ.

Categories
ಸಿನಿ ಸುದ್ದಿ

ಡಾಲಿ ಧನಂಜಯ ಹುಟ್ಟುಹಬ್ಬದ ಸಂಭ್ರಮ

Categories
ಸಿನಿ ಸುದ್ದಿ

ರಾಗಿಣಿ ಮನೆಯಲ್ಲಿ ಗಣಪತಿ ಹಬ್ಬ ಜೋರು

 

 

 

 

 

 

 

ಕೊರೋನಾ ನಡುವೆಯೂ ನೆಗಳಲ್ಲಿ ಗಣೇಶೋತ್ಸವ ಜೋರಾಗಿದೆ. ಕೊರೋನಾ ಕಾರಣ ಹಬ್ಬದ ಅಬ್ಬರ ಕಾಣಿಸದಿದ್ದರೂ, ಗಣೇಶ ವಿಗ್ರಹ ತಂದು ಸಡಗರ, ಸಂಭ್ರಮದಿಂದಲೇ ಆಚರಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ದಂತೆ ಈ ವರ್ಷ ವೂ ನಟಿ ರಾಗಿಣಿ ಅವರ ಮನೆಯಲ್ಲಿ ಹಬ್ಬದ ಸಡಗರ ಕಳೆಗಟ್ಟಿದೆ. ಸುರಕ್ಷತೆ ದೃಷ್ಟಿಯಿಂದ ನೆರೆ ಹೊರೆಯವರಿಗೆ ಅವಕಾಶ ಇಲ್ಲದಿದ್ದರೂ, ತಮ್ಮ ಮನೆಯ ಕುಟುಂಬದ ಸದಸ್ಯರ ನಡುವೆ ಹಬ್ಬವನ್ನು ಪೂಜೆಗಳ ಮೂಲಕ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

 

Categories
ಸಿನಿ ಸುದ್ದಿ

ಅಮೆಜಾನ್ ಪ್ರೈಮ್ ನಲ್ಲಿ ಸೂರರೈ ಪಟ್ರು

ಗಳಿಕೆಯಲ್ಲಿ ೫ ಕೋಟಿ ಕೊರೋನಾ ವಾರಿಯರ್ಸ್ ಗೆ ಮೀಸಲು- ಸೂರ್ಯ

ಕಾಲಿವುಡ್ ನ ಸೂಪರ್ ಸ್ಟಾರ್ ಸೂರ್ಯ ಅಭಿನಯದ ಸೂರರೈ ಪಟ್ರು ನೇರವಾಗಿ ಡಿಜಿಟಲ್‌ ಫ್ಲಾಟ್ ಫಾರ್ಮ್ ಮೂಲಕ ರಿಲೀಸ್ ಆಗುತ್ತಿದೆ. ಅಕ್ಟೋಬರ್ ೩೦ ರಂದು ಈ ಚಿತ್ರವು ಅಮೆಜಾನ್ ಪ್ರೈಂ ಮೂಲಕ‌ ಜಾಗತಿಕವಾಗಿ‌ ಬಿಡುಗಡೆ ಆಗುತ್ತಿದೆ. ಇದೇ ಮೊದಲ ಸೂರ್ಯ ಅಭಿನಯದ ಸಿನಿಮಾ ಚಿತ್ರಮಂದಿರಗಳಾಚೆ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ತೆರೆ ಕಾಣುತ್ತಿದ್ದು, ಚಿತ್ರ ತಂಡ ರಲ್ಲಿ ಇದನ್ನು ಅಧಿಕೃತ ವಾಗಿ ಪ್ರಕಟಿಸಿದೆ. ಇದೇ ವೇಳೆ ಈ ಚಿತ್ರ ಗಳಿಸಲಿರುವ ಒಟ್ಟು ಕಲೆಕ್ಷನ್ ಪೈಕಿ‌ ೫ ಕೋಟಿ ಹಣವನ್ನು ಕೊರೋನಾ ವಾರಿಯರ್ಸ್‌ ಗೆ ನೀಡುವುದಾಗಿ ಸೂರ್ಯ ಪ್ರಕಟಿಸಿದ್ದಾರೆ. ಸೂರ್ಯ ನಿರ್ಮಾಣದ ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ.
‌‌‌‌‌‌‌‌‌…

Categories
ಸಿನಿ ಸುದ್ದಿ

ಕಾಮಿಡಿ‌‌ ಹಿಂದಿನ ಕೋಮಲ‌ ಮನಸ್ಸು ಎಷ್ಟು ನೊಂದಿರಬೇಡಾ?

ಕಾಮಿಡಿ ಟ್ರಂಪ್ ಕಾರ್ಡ್ ಗೆ ಮರಳಿದ ನಟ‌  ಕೋಮಲ್ ಅವರ ನೋವಿನ ಕತೆ ಇದು

………………………………………..

ನಟ ಕೋಮಲ್ ಮತ್ತೆ ಹಳೆ ಟ್ರ್ಯಾಕ್ ಗೆ ಮರಳಿದ್ದಾರೆ. ಹೀರೋ‌ ಎನ್ನುವ ಬದಲಿಗೆ  ಕಾಮಿಡಿ ಇಟ್ಟುಕೊಂಡೆ ಸಿನಿಮಾ‌‌ಮಾಡಲು ಮುಂದಾಗಿದ್ದಾರೆ. ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ನಿರ್ಮಾಣದ ಕಾಮಿಡಿ ಪ್ರಧಾನ ಚಿತ್ರಕ್ಕೆ ಕೋಮಲ್ ಹೀರೋ‌ ಆಗಿದ್ದಾರೆ. ಅಲ್ಲಿಗೆ ಹೊಸ  ಹುಡುಗನಿಗಿಂತ  ಹಳೇ ಗಂಡನ ಪಾದವೇ ಗತಿ ಎನ್ನುವಂತಾಗಿದೆ ಅವರ ಪರಿಸ್ಥಿತಿ. ಆ ಹಳೇ ಗಂಡ ಯಾರು? ನಿಮ್ಗೇ ಗೊತ್ತು ಅದು ಕಾಮಿಡಿ.‌‌ ಅದು ಕೋಮಲ‌ ಅವರ ಟ್ರಂಪ್ ಕಾರ್ಡ್ . ಯಾಕಂದ್ರೆ ಕೋಮಲ್ ನಟನಾಗಿ‌ ಬಂದಿದ್ದು, ಜನಪ್ರಿಯತೆ ಪಡೆದಿದ್ದು ಅದರಿಂದಲೇ. ಕಾಮಿಡಿ‌ ಮಾಡುವುದೇ ಅವರಿಗೆ ಇದುವರೆಗೂ‌ ನೇಮ್ ಆ್ಯಂಡ್ ಫೇಮ್ ತಂದುಕೊಟ್ಟಿದ್ದು. ಕೊನೆಗೊಮ್ಮೆ  ಏನಾಯ್ತು?

ಅದರಾಚೆಗೂ ಜಿಗಿಯುವ ಆಸೆ ಬಂತು. ಅಷ್ಟೊತ್ತಿಗೆ ಕೆಲವು ಕಾಮಿಡಿ‌ನಟರೂ ಹೀರೋ ಆಗಿ‌ ಮಿಂಚುತ್ತಿದ್ದರು. ಶರಣ್ ಅವರಂತೂ ಸಕ್ಸಸ್ ಫುಲ್ ಸ್ಟಾರ್ ಆಗಿದ್ದರು. ವಿಕ್ಟರಿ ಭರ್ಜರಿ ವಿಕ್ಟರಿ  ಸಾಧಿಸಿತ್ತು.‌ಅವರಂತೆಯೇ ತಾವು ಯಾಕೆ ಒಂದ್ ಕೈ‌ ನೋಡಬಾರದು ಅಂತ  ಗೋವಿಂದಾಯ ನಮ: ಅಂತ ಹೀರೋ ಗೆದ್ದರು ಕೂಡ. ಆದರೆ ಮುಂದೆ ಹಾಗಾಗಲಿಲ್ಲವೇ? ಸೋಲು ಅವರನ್ನು‌ಕಂಗೆಡಿಸಿತು.‌ ಸಾಕಷ್ಟು ಸಿನಿಮಾ‌ಬಂದವು. ಬಂಡವಾಳ ಹಾಕಿದ ನಿರ್ಮಾಪಕರು ಕೈ ಖಾಲಿ ಮಾಡಿಕೊಂಡರು. ಕೊನೆಗೆ ಕೋಮಲ‌ ಕೂಡ ಅವಕಾಶಗಳಿಲ್ಲದೆ ಕೂತರು.‌ಹಾಗಂತೆ ಸ್ಟಾರ್ ಸಿನಿಮಾಗಳಲ್ಲಿ  ಸಹ‌ನಟನಾಗಿ‌ ಕಾಮಿಡಿ‌ಮಾಡಲು ಅದೀತೆ?  ಅವಕಾಶ ಇಲ್ಲದೆ ಕುತಾಗಲೂ ಕೋಮಲ‌್ ಹಿಂದೆ ಮುಂದೆ ನೋಡಿದರು. ನಿರ್ದೇಶಕರು ಕೂಡ ಅವರನ್ನು ಸಹನಟನನ್ನಾಗಿ ಆಯ್ಕೆ ಮಾಡಿಕೊಳ್ಳಲು ನಿರಾಕರಿಸಿದರು. ಪರಿಣಾಮ ಅತ್ತ ದರಿ,ಇತ್ತ ಪುಲಿ ಎನ್ನುವಂತಾಗಿದ್ದ ಕೋಮಲ್ ಗೆ ನಾಯಕನಾಗುವುದು ಮುಂದೆ ಸವಾಲಾಯಿತು.‌ ಪಿಜಿಕಲ್ ಚೇಂಜ್ ಬಯಸಿದರು. ಕೆಂಪೇಗೌಡ ೨ ಅವತಾರ ತಾಳಲು‌ ಸಿಕ್ಸ್ ಪ್ಯಾಕ್‌ ಮಾಡಿಕೊಂಡರು.‌ಆ‌ ಹೊತ್ತಿಗೆ ಹೀರೋ ಒಬ್ಬನಿಗೆ ಸಿಕ್ಸ್ ಪ್ಯಾಕ್ ಅಗತ್ಯ ಎನ್ನುತಿತ್ತು‌ ಇಂಡಸ್ಟ್ರಿ. ‌ಪರಿಸ್ಥಿತಿಯ ಬೆನ್ನು‌ಬಿದ್ದರು. ಹೇಗಿದ್ದ ಕೋಮಲ್ ಹೇಗಾದ್ರೂ‌ ಅಂತ ಜನ ಬೆಚ್ವಿ ಬಿದ್ದರು. ಅದೇ ಗುಂಗು, ಹುಮ್ಮಸ್ಸಿನಲ್ಲಿ ಕೆಂಪೇ ಗೌಡ ೨ ಶುರುವಾಯಿತು.‌ಅಲ್ಲಿ‌ಸುದೀಪ್, ಇಲ್ಲಿ‌ಕೋಮಲ್. ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಯಿತು. ‌ಆದರೆ ದುರಾದೃಷ್ಟವಶಾತ್ ಕೋಮಲ್ ಗೆ ಗ್ರಹಚಾರ ಒಕ್ಕರಿಸಿಕೊ‌ಂಡಿತು.‌ಶೂಟಿಂಗ್ ವೇಳೆ  ಗಾಯಗೊಂಡು ಮನೆ‌ಹಿಡಿದರು. ಅದು ಯಾವ ರೀತಿ‌ ಅವರನ್ನು‌ ಭಾದಿಸಿತು ಅಂದರೆ, ವರ್ಷವೀಡಿ ಕೋಮಲ್  ಕಾಣಿಸಿಕೊಳ್ಳಲಿಲ್ಲ.

ಅಲ್ಲಿಂದ ಚೇತರಿಸಿಕೊಂಡು‌ಬರುವ ಹೊತ್ತಿಗೆ ಕೆಂಪೇಗೌಡಮ ಆರ್ಥಿಕ ಭಾರ ಅವರ ಮೇಲಿತ್ತು. ಗೆಲ್ಲುವ ಧೈರ್ಯ ಅವರಲ್ಲಿತ್ತು.‌ಸ್ಟಾರ್ ಹೋಟೆಲ್ ಗಳಲ್ಲಿಯೇ ರಿಲೀಸ್ ಮುಂಚಿನ ಸಭೆ- ಸಮಾರಂಭ ಮಾಡಿದರು. ಸಿನಿಮಾ‌ ಬಿಡುಗಡೆ ಆದಾಗ ಆ ಸಂಭ್ರಮ ಕಾಣದಂತಾಯಿತು.‌ಸಿನಿಮಾ‌‌ ಸೋತು ಹಾಕಿದ ಬಂಡವಾಳ‌ವಾಪಾಸ್ ಪಡೆಯುವುದಕ್ಕೂ ಪರದಾಡಬೇಕಾಯಿತು. ಕೋಮಲ್ ಪರಿಸ್ಥಿತಿ ಹೀಗಿತ್ತೆಂದರೆ, ಇದೆಲ್ಲ ಬೇಕಾ‌ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತಾಯಿತು.

ಇದೊಂದು ಕೆಟ್ಟ ಸಮಯ‌ ಕಳೆದಿದೆ. ಕೊರೋನಾ ಕಾಲ‌ ತೆರೆಗೆ ಸರಿಯುತ್ತಿರುವ ಹಾಗೆ ನಟ‌ ಕೋಮಲ್‌ಅವರಿಗೂ ಒಳೆಯ ದಿನಗಳು‌ ಬರುತ್ತಿವೆ. ಬಹುತೇಕ ಮುಂದಿನ ವರ್ಷ ಕನ್ನಡ‌ ಸಿನಿಮಾ‌ ಲೋಕದಲ್ಲಿ ಕೋಮಲ್‌ ಕಮಾಲ್ ಮಾಡುವುದು ಗ್ಯಾರಂಟಿ‌ಆಗಿದೆ. ಅವರಿಗೆ ಯಶಸ್ಸು ಸಿಗಲಿ.‌

error: Content is protected !!