ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದ್ಲೇ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಮಾಡೋದು ಕಾಮನ್. ಆದ್ರೆ ಹೊಸಬರ ಸಿನಿಮಾಗಳು ಸಾಧ್ಯನಾ? ಖಂಡಿತ ಸಾಧ್ಯ ಅಂತಾ ಸಾಬೀತುಪಡಿಸಿದೆ ಅದೇ ಹೊಸಬರ ಜುಗಲ್ ಬಂದಿ ಚಿತ್ರ
ಹೌದು.. ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಜುಗಲ್ ಬಂದಿ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.
ಒಂದ್ಕಡೆ ಆಡಿಯೋ ರೈಟ್ಸ್ ಸೇಲ್ ಆದ ಖುಷಿಯಲ್ಲಿರುವ ಚಿತ್ರತಂಡ ಇವತ್ತು ಶುಭಘಳಿಗೆಯಲ್ಲಿ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿದೆ. ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ನಡೆದ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಮುಂತಾದವರು ಭಾಗಿಯಾಗಿದ್ದರು.
ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಜುಗಲ್ ಬಂದಿ ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್ ಕೆ ರಾವ್ ಕ್ಯಾಮೆರಾ ಸಿನಿಮಾದಲ್ಲಿರಲಿದೆ.
ದಿವಾಕರ್ ಡಿಂಡಿಮ ನಿರ್ದೇಶಕ
ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 22ನೇ ತಾರೀಖಿನಿಂದ ಜುಗಲ್ ಬಂದಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಸಖತ್… ಚಿನ್ನದ ಹುಡ್ಗ ಗಣೇಶ್ ಹಾಗೂ ಸಿಂಪಲ್ ಸುನಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ಸಖತ್. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ಸಂಸ್ಥೆ ಸಖತ್ ಚಿತ್ರಕ್ಕೆ ಬಂಡವಾಳ ಹೂಡಿದೆ. ಈಗಾಗಲೇ ಪ್ರಮೋಷನ್ ಕಹಳೆ ಬಾರಿಸಿರುವ ಸಖತ್ ಸಿನಿಮಾ ಇದೇ ತಿಂಗಳ 26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ.
ಕೆಲ ದಿನಗಳ ಹಿಂದಷ್ಟೇ ರ್ಯಾಂಪ್ ಸಾಂಗ್ ವೊಂದನ್ನು ರಿಲೀಸ್ ಮಾಡಿ ನಿರೀಕ್ಷೆ ಹುಟ್ಟಿಸಿದ್ದ ಸಖತ್ ಸಿನಿಮಾ ಅಂಗಳದಿಂದ ಇದೇ 22ಕ್ಕೆ ಮತ್ತೊಂದು ಹಾಡು ರಿಲೀಸ್ ಆಗಲಿದೆ. ಅರ್ಜುನ್ ಲೂಯಿಸ್ ಸಾಹಿತ್ಯ ಬರೆದು, ಸಿದ್ದಿ ಶ್ರೀರಾಮ್ ಕಂಠದಲ್ಲಿ “ಶುರುವಾಗಿದೆ” ಅನ್ನೋ ಬೊಂಬಾಟ್ ಸಾಂಗ್ ರಿವೀಲ್ ಆಗ್ತಿದೆ.
ಚಮಕ್ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಚಮಕ್ ಕೊಟ್ಟಿದ್ದ ಗಣಿ-ಸುನಿ ಈ ಬಾರಿ ಸಖತ್ ಸಿನಿಮಾ ಮೂಲಕ ಕಾಮಿಡಿ ಹೂರಣ ಬಡಿಸಲು ಸಕಲ ರೀತಿಯಿಂದ ತಯಾರಿಯಾಗಿದ್ದು, ಗಣಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ನಿಶ್ವಿಕಾ ನಾಯ್ಡು ಹಾಗೂ ಸುರಭಿ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.
ಟಿ.ವಿ. ರಿಯಾಲಿಟಿ ಶೋ ಹಾಗೂ ಕೋರ್ಟ್ ಕೇಸ್ ಸುತ್ತ ಸಿನಿಮಾ ಕಥೆ ಹೆಣೆಯಲಾಗಿದೆ. ಕೆವಿಎನ್ ಪ್ರೊಡಕ್ಷನ್ನಡಿ ತಯಾರಾಗಿರುವ ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಕೋನಾಂಕಿ ಹಾಗೂ ಸುಪ್ರಿತ್ ಬಂಡವಾಳ ಹೂಡಿದ್ದಾರೆ.
ಈಗಾಗ್ಲೇ ಸೆನ್ಸಾರ್ ನಿಂದ U/A ಸರ್ಟಿಫಿಕೆಟ್ ಪಡೆದು, ಪಾಸ್ ಆಗಿರುವ ಸಖತ್ ಸಿನಿಮಾ ಇದೇ 26 ಕ್ಕೆ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.
ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆ, ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅದು ಸಿನಿಮಾ ಮತ್ತು ಅದರಾಚೆಗಿನ ಸುದ್ದಿಯೂ ಹೌದು. ಈಗ ವಿಷಯ ಏನೆಂದರೆ, ಸಂಯುಕ್ತಾ ಹೆಗ್ಡೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಹೊತ್ತಿನ ಸುದ್ದಿ.
ಹೌದು, ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡ ಈ ನಟಿ, ಈಗ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಸೈ ಎಂದಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಶಿವು ಭೇರ್ಗಿ ಈ ಚಿತ್ರಕ್ಕೆ ಗೀತೆ ಬರೆದಿದ್ದಾರೆ.
ಕೆ.ಮಂಜು ಅವರ ಪುತ್ರ ಶ್ರೇಯಸ್ ಈ ಚಿತ್ರದ ಹೀರೋ. ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ವಿಶ್ವ , ಶಿವು ಕಲಾ ನಿರ್ದೇಶನ ಮತ್ತು ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.
ಸ್ಟಾರ್ ನಟರುಗಳನ್ನು ಆರಾಧಿಸುವ-ಪ್ರೀತಿಸುವ-ಗೌರವಿಸುವ ಹಾಗೂ ತಲೆ ಮೇಲೆ ಹೊತ್ತು ಮೆರೆಸುವ ಅಭಿಮಾನಿ ದೇವರುಗಳು, ತಾವಿಷ್ಟ ಪಡುವ ನಟರುಗಳ ಹಾದಿಯಲ್ಲಿ ಸಾಗುತ್ತಾರೆ. ಅವರ ಒಳ್ಳೆಗುಣಗಳನ್ನು ಮೈಗೂಡಿಸಿಕೊಂಡು ಆದರ್ಶವಾಗಿ ಬದುಕೋದಕ್ಕೆ ಇಷ್ಟಪಡುತ್ತಾರೆ. ಮಾತ್ರವಲ್ಲ, ಸಿನಿಮಾದಿಂದ ಸಿನಿಮಾಗೆ ಬದಲಾಗುವ ನಟರುಗಳ ಲುಕ್-ಗೆಟಪ್ನ ಫಾಲೋ ಮಾಡುತ್ತಾರೆ. ಅವರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡು, ಅವರಂತೆ ಕಾಸ್ಟ್ಯೂಮ್ಧ ರಿಸಿಕೊಂಡು ತಮ್ಮಿಷ್ಟದ ಸ್ಟಾರ್ಗಳನ್ನು ಬೆಂಬಲಿಸುತ್ತಾರೆ. ಇದಕ್ಕೆ ಆಕ್ಷನ್ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಹೊರತಾಗಿಲ್ಲ…
ಇಂಟ್ರೆಸ್ಟಿಂಗ್ ಅಂದರೆ ಮಾರ್ಟಿನ್' ಲುಕ್-ಗೆಟಪ್ ನೋಡಿ ಸ್ವತಃ ಆಕ್ಷನ್ಪ್ರಿನ್ಸ್ ಕಳೆದು ಹೋಗಿರುವುದು. ಹೌದು, ಮಾಸ್ ಅಪೀಲ್ ಕೊಡುವ ಮಾರ್ಟಿನ್ ಹೇರ್ಸ್ಟೈಲ್ ಅಭಿಮಾನಿಗಳ ಹೃದಯವನ್ನು ಮಾತ್ರವಲ್ಲ ಅದ್ದೂರಿ ಹುಡುಗನ ಮನಸ್ಸನ್ನು ಗೆದ್ದು ಬಿಟ್ಟಿದೆ. ಹೀಗಾಗಿಯೇ ಬಹದ್ದೂರ್ ಬೆಂಕಿ ಚೆಂಡು ತಮ್ಮ ಸೋಷಿಯಲ್ ಸ್ಟೇಟಸ್ಗೆ ಅಪ್ಲೋಡ್ ಬಿಟ್ಟಿದ್ದಾರೆ. ಈಗಾಗಲೇ ಫ್ಯಾನ್ಸ್ ಟೀಸರ್ನಲ್ಲಿಮಾರ್ಟಿನ್’ ಲುಕ್ ನೋಡಿದ್ರೂ ಕೂಡ, ಧ್ರುವಾ ಸರ್ಜಾರ ಸ್ಟೇಟಸ್ನಿಂದ ಫೋಟೋನ ಎತ್ತಿಕೊಂಡು ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸುತ್ತಿದ್ದಾರೆ.
ಎ.ಪಿ ಅರ್ಜುನ್ ಡೈರೆಕ್ಟ್ ಮಾಡಿರುವ ಮಾರ್ಟಿನ್' ಕನ್ನಡದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನ್ಮಾ. ಸಿಂಪಲ್ಲಾಗಿ ನಾಲ್ಕು ಹೊಡೆದಿರುವ ಧ್ರುವಮಾರ್ಟಿನ್’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡ್ಯಾ ತುಂಬೆಲ್ಲಾ ಚಂಡಮಾರುತದ ಅಲೆ ಎಬ್ಬಿಸೋಕೆ ಸಿಡಿದು ನಿಂತಿದ್ದಾರೆ. ಗನ್ನ ನಾನ್ ಚೂಸ್ ಮಾಡಿಕೊಂಡಿಲ್ಲ ಬದಲಾಗಿ ಗನ್ನೇ ನನ್ನ ಚೂಸ್ ಮಾಡಿಕೊಂಡಿದೆ'. ಇದು ಜೋಕ್ ಅಲ್ಲ, ಇದೇ ಸತ್ಯ ಅಂತೇಳಿ ಕಣ್ಣುಬ್ಬಿನ ಮೇಲಿನ ರಕ್ತದ ಕಲೆ ಒರೆಸಿಕೊಂಡು ನೋಡುಗರ ಗಟ್ಟಿಗುಂಡಿಗೆ ಶೇಕ್ ಆಗುವಂತೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ನ 15 ಕೋಟಿಗೂ ಅಧಿಕ ಮಂದಿ ಕಣ್ತುಂಬಿಕೊಂಡಿರುವುದುಮಾರ್ಟಿನ್’ ಹವಾ ಹೆಂಗೈತಿ ಅನ್ನೋದನ್ನು ತೋರಿಸುತ್ತಿದೆ. ಆಕ್ಷನ್ಪ್ರಿನ್ಸ್ ತೋಳ್ಬಲದ ಮೇಲಿರುವ ಸೋಲ್ಡ್ಜರ್ಸ್ ಟ್ಯಾಟೂ `ಮಾರ್ಟಿನ್’ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಅಂದ್ಹಾಗೇ, ಮಾರ್ಟಿನ್' ಚಿತ್ರಕ್ಕಾಗಿ ಧ್ರುವ ಸಂಪೂರ್ಣವಾಗಿ ಬದಲಾಗಿದ್ದಾರೆ. ಬರೀ ಲುಕ್-ಗೆಟಪ್ ಮಾತ್ರವಲ್ಲ ಸ್ಕ್ರೀನ್ಪ್ರ ಸೆನ್ಸ್ ಇಂದ ಹಿಡಿದು ಡೈಲಾಗ್ ಡೆಲಿವರಿ ತನಕ ಎಲ್ಲವನ್ನೂ ಚೇಂಜ್ ಮಾಡಿಕೊಂಡಿದ್ದಾರೆ. ಅದ್ದೂರಿ-ಬಹದ್ದೂರ್-ಭರ್ಜರಿ-ಪೊಗರು ಚಿತ್ರದಲ್ಲಿ ಉದ್ದುದ್ದ ಡೈಲಾಗ್ಗಳಿದ್ವು ಆದರೆ ಮಾರ್ಟಿನ್’ ಸಿನಿಮಾದಲ್ಲಿ ಲೆಂಗ್ತಿ ಡೈಲಾಗ್ ಇರೋದಿಲ್ಲ ಅಂತ ಟೀಸರ್ ರಿಲೀಸ್ ಸಂದರ್ಭದಲ್ಲೇ ಧ್ರುವ ಹೇಳಿದ್ದಾರೆ. ಆದರೆ ಮಾರ್ಟಿನ್' ಮೂವೀಯಲ್ಲಿ ಬರುವ ಒಂದೊಂದು ಡೈಲಾಗ್ಗೆ ಅದರದ್ದೇ ಆದ ತೂಕ ಮತ್ತು ಮಹತ್ವವಿರುತ್ತಂತೆ. ಅಷ್ಟಕ್ಕೂ,ಮಾರ್ಟಿನ್’ ಚಿತ್ರದಲ್ಲಿ ಧ್ರುವ ಮಾರ್ಟಿನ್ ಅಲ್ವಂತೆ ಹಾಗಾದ್ರೆ ಮತ್ಯಾರು? ಈ ಪ್ರಶ್ನೆಗೆ ಉತ್ತರವನ್ನು ಚಿತ್ರತಂಡ ನಿಗೂಢವಾಗಿಟ್ಟಿದೆ. ಸ್ಟೈಲಿಷ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳಿವೆ. ಸೌತ್ನ ಫೇಮಸ್ಸ್ ಆಕ್ಷನ್ ಮಾಸ್ಟರ್ಗಳಾದ ರಾಮ್-ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಅದ್ದೂರಿ ಜೋಡಿಯ ಎರಡನೇ ಚಿತ್ರವಾದ ಮಾರ್ಟಿನ್' ಕೂಡ ಅದ್ಧೂರಿಯಾಗಿಯೇ ನಿರ್ಮಾಣವಾಗ್ತಿದೆ. ಐದು ಭಾಷೆಯಲ್ಲಿ ಸಿನಿಮಾ ನಿರ್ಮಾಣಕ್ಕೆ ಉದಯ್ ಕೆ. ಮೆಹ್ತಾ ಬಂಡವಾಳ ಹೂಡಿದ್ದಾರೆ. 2022ರ ಆರಂಭದಲ್ಲೇಮಾರ್ಟಿನ್’ ತೆರೆಗೆ ತರಬೇಕು ಎಂದು ಭರದಿಂದ ಶೂಟಿಂಗ್ ಮುಗಿಸ್ತಿದ್ದಾರೆ. ತಮಿಳಿನ ಅರವಿಂದ್ ಸಾಮಿ- ದೇವಯಾನಿ ಸೇರಿದಂತೆ ಪರಭಾಷಾ ಕಲಾವಿದರು ಕೂಡ ಮಾರ್ಟಿನ್' ಮೈಲೇಜ್ನ ಹೆಚ್ಚಿಸುತ್ತಿದ್ದಾರೆ. ಲವ್ ಅಂಡ್ ಎಮೋಷನ್ಸ್ ಫೀಲ್ ಇಟ್ಟು ಸಿನಿರಸಿಕರ ಹಾರ್ಟ್ನ ಬೀಟ್ ಮಾಡಿದ್ದಅದ್ದೂರಿ’ ಜೋಡಿ ಮಾರ್ಟಿನ್' ಮೂಲಕ ಬೆಳ್ಳಿತೆರೆ ರೂಲ್ ಮಾಡ್ಬೇಕು ಎಂದು ಹೊರಟಿದ್ದಾರೆ. ಪೊಗರು ಚಿತ್ರದ ಮೂಲಕ ಗಡಿದಾಟಿ ಘರ್ಜಿಸಿದ್ದ ಬಹದ್ದೂರ್ ಗಂಡುಮಾರ್ಟಿನ್’ ಮೂಲಕ ವಲ್ಡ್ವೈಡ್ ಜಗಮಗಿಸ್ತಾರೆ ಎನ್ನುವ ಕೂತೂಹಲ ಮತ್ತು ನಿರೀಕ್ಷೆ ಅಭಿಮಾನಿ ವಲಯದಲ್ಲಿದೆ.
ನಿರ್ದೇಶಕ ಶಿವತೇಜಸ್ ಅವರು “ದಿಲ್ ಪಸಂದ್” ಸಿನಿಮಾ ಕೈಗೆತ್ತಿಕೊಂಡಿರೋದು ಗೊತ್ತೇ ಇದೆ. ಈಗ ಆ ಸಿನಿಮಾದ ಹೊಸ ಸುದ್ದಿ ಅಂದರೆ, ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾದವರಿಗೆ ಶುಕ್ರವಾರ ಅಂದರೆ, ಶುಭ ದಿನ. ಹಾಗಾಗಿ, ಚಿತ್ರತಂಡ, ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು, ಪೋಸ್ಟರ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ನಿರ್ದೇಶಕ ಶಿವತೇಜಸ್, ಅವರು ಹೆಣೆದಿರುವ ಬ್ಯೂಟಿಫುಲ್ ಲವ್ಸ್ಟೋರಿಗೆ “ಡಾರ್ಲಿಂಗ್” ಕೃಷ್ಣ ಬೋಲ್ಡ್ ಆಗಿ, ಕ್ಯಾಮೆರಾ ಮುಂದೆ ನಿಂತಿದ್ದು ಆಗಿದೆ. ಚಿತ್ರಗಳಲ್ಲಿ ಹಲವು ವಿಶೇಷತೆಗಳಿವೆ. ಆ ಪೈಕಿ ಮೊದಲು ಇಲ್ಲಿ ಕಥೆ ವಿಶೇಷವಾಗಿದೆ. ಅಷ್ಟೇ ಅಲ್ಲ, ಒಬ್ಬ ಸಕ್ಸಸ್ಫುಲ್ ಹೀರೋ ಸ್ಪೆಷಲ್ ಸ್ಟೋರಿ ಮತ್ತು ರೋಲ್ ಒಪ್ಪಿಕೊಂಡು ಮಾಡುತ್ತಿರುವ ಸಿನಿಮಾ.
ಇನ್ನು, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿರೋದು ನಿರ್ಮಾಪಕ ಸುಮಂತ್ ಕ್ರಾಂತಿ ಇದು ಅವರ ರಶ್ಮಿ ಫಿಲಂಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿದೆ. ಸುಮಂತ್ ಕ್ರಾಂತಿ ನಿರ್ದೇಶಕರು. ಈಗ ಶಿವತೇಜಸ್ ಕಥೆಗೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಾಗಿದೆ. ಈ ಹಿಂದೆಯೇ ಸುಮಂತ್ ಕ್ರಾಂತಿ “ಕಾಲಚಕ್ರ” ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ಅನ್ನೋದು ವಿಶೇಷ.
ಶಿವತೇಜಸ್, ನಿರ್ದೇಶಕರು
ಹೌದು, “ದಿಲ್ ಪಸಂದ್” ಸಿನಿಮಾದ ಶೀರ್ಷಿಕೆಯೇ ಆಕರ್ಷಣೆಯಾಗಿದೆ. ಪೊಲೀಸ್ ಅಧಿಕಾರಿ ಚನ್ನಣ್ಣನವರ್ ಪೋಸ್ಟರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸದ್ಯ, ಚಿತ್ರದ ಚಿತ್ರೀಕರಣ ಮೊದಲ ಹಂತ ಮುಗಿದೆ. ಇಲ್ಲಿಯವರೆಗೆ ಹತ್ತು ದಿನಗಳ ಕಾಲ ಶೂಟಿಂಗ್ ನಡೆಸಿರುವ ನಿರ್ದೇಶಕ ಶಿವತೇಜಸ್, ಡಿಸೆಂಬರ್ ೧ರಿಂದ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಜೋರು ಮಳೆ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ಮುಂದೂಡಲಾಗಿದೆ.
ಸುಮಂತ್ ಕ್ರಾಂತಿ, ನಿರ್ಮಾಪಕರು
ಇನ್ನು, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಈಗಾಗಲೇ ಅರ್ಜುನ್ ಜನ್ಯಾ ಅವರ ಸ್ಟುಡಿಯೋದಲ್ಲಿ “ದಿಲ್ ಪಸಂದ್” ಚಿತ್ರದ ಹಾಡುಗಳಿಗೆ ಕೆಲಸ ನಡೆಯುತ್ತಿದೆ. ಮೊದಲ ಹಂತದ ಹತ್ತು ದಿನಗಳ ಚಿತ್ರೀಕರಣದಲ್ಲಿ ಶೇ.೩೦ ರಷ್ಟು ಚಿತ್ರೀಕರಣ ಮಾಡಲಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಡಾರ್ಲಿಂಗ್ ಕೃಷ್ಣ. ನಿಶ್ವಿಕಾ ನಾಯ್ಡು, ತಬಲಾ ನಾಣಿ, ರಂಗಾಯಣ ರಘು, ಚಿತ್ಕಲಾ, ಅರುಣ ಬಾಲರಾಜ್ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದಾರೆ.
ಈವರೆಗೆ ರಿಚ್ ಮನೆಗಳಲ್ಲೇ ಚಿತ್ರೀಕರಣ ನಡೆದಿದೆ. ಇನ್ನು, ಎರಡನೇ ಹಂತದ ಶೂಟಿಂಗ್ನಲ್ಲಿ ಪಬ್, ಟೆಂಪಲ್, ಸಾಫ್ಟ್ವೇರ್ ಕಂಪೆನಿ ಹೀಗೆ ಇತರೆ ಲೊಕೇಷನ್ಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎನ್ನುವ ನಿರ್ದೇಶಕರು, ಎರಡನೇ ಹಂತದಲ್ಲಿ ಕಾಮಿಡಿ ನಟ ಸಾಧುಕೋಕಿಲ, ಗಿರಿ ಇತರರು ಕೂಡ ಸೇರಿಕೊಳ್ಳಲಿದ್ದಾರೆ ಎಂದು ವಿವರ ಕೊಡುತ್ತಾರೆ. ಸದ್ಯ ಎರಡನೇ ಹಂತದಲ್ಲಿ ಮಾತಿನ ಭಾಗ ಮುಗಿಸಿ, ನಂತರ ಫೈಟ್ ಮತ್ತು ಸಾಂಗ್ ಪ್ಲಾನ್ ಮಾಡಲಿದೆ ಚಿತ್ರತಂಡ.
ತೆಲುಗು ಚಿತ್ರ ನಿರ್ಮಾಪಕರಿಂದ ಕನ್ನಡದ ನಟ-ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಮೋಸ ಆಗಿರುವ ಸುದ್ದಿ ಹೊರಬಿದ್ದಿದೆ. ತೆಲುಗಿನ ಚಿತ್ರವೊಂದನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಕರಾರಿನಲ್ಲಿ ವಂಚನೆಯಾಗಿದೆ ಎಂದು ಸಂಬರಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು.
ಬೆಂಗಳೂರಿನ ವಾಣಿಜ್ಯ ನ್ಯಾಯಲಯವೊಂದು ಈಗ ಸಂಬರಗಿ ಪರವಾಗಿ ಆದೇಶ ಹೊರಡಿಸಿದ್ದು, ತೆಲುಗಿನ ಬಾಲಾಜಿ ಸಿನಿ ಮೀಡಿಯಾ ಕಂಪನಿಯ ಜೆ.ಭಗವಾನ್ ಮತ್ತು ಜೆ.ಫುಲ್ಲ ರಾವ್ ಅವರುಗಳಿಗೆ ಸಂಬರಿಗೆ ಕೊಡಬೇಕಾದ ರೂ 1,28,31,500 ಜೊತೆಗೆ ಬಡ್ಡಿಯನ್ನು ಸೇರಿಸಿ ಹಿಂದಿರುಗಿಸಬೇಕೆಂದು ಆದೇಶ ಮಾಡಿದೆ. ಎರಡು ದಿನಗಳ ಹಿಂದೆ ಇದೇ ನ್ಯಾಯಾಲಯ ಆದೇಶದ ಜಾರಿಗೆ ಎಕ್ಸಿಕ್ಯೂಷನ್ ಪಿಟೀಷನ್ ಅನ್ನು ಹೈದರಾಬಾದಿನ ನ್ಯಾಯಾಲಯಕ್ಕೆ ಕಳುಹಿಸಿದೆ.
ಗೋಪಿಚಂದ್ ಮತ್ತು ಹನ್ಸಿಕ ಮೋಟ್ವಾನಿ ನಟನೆಯ ತೆಲುಗಿನ ಗೌತಮಾನಂದ, ಜುಲೈ 27, 2017 ರಲ್ಲಿ ಬಿಡುಗಡೆಯಾಗಿತ್ತು. ಅದನ್ನು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು, ಸಂಬರಗಿ ತೆಲುಗು ನಿರ್ಮಾಪಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ರೂ 90 ಲಕ್ಷ ಅವರ ಖಾತೆಗೆ ಪಾವತಿಸಿದ್ದರು. ತೆಲುಗು ನಿರ್ಮಾಪಕರು ಆ ಚಿತ್ರದ ಹಕ್ಕನ್ನು ಮತ್ತೊಬ್ಬರಿಗೆ ಮಾರಿದ್ದರಿಂದ ಸಂಬರಗಿಗೆ ಡಬ್ಬಿಂಗ್ ಹಕ್ಕನ್ನು ಹಸ್ತಾಂತರ ಮಾಡಿರಲಿಲ್ಲ. ಈ ಕಾರಣಕ್ಕೆ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಇಪ್ಪತ್ತು ತಿಂಗಳಿಗೂ ಅಧಿಕ ದಿನ ನಡೆದ ಕೇಸ್ ಕೊನೆಗೆ ಆಗಸ್ಟ್ 31, 2021 ರಂದು ಸಂಬರಗಿ ಪರವಾಯಿತು. ರೂ 1,28,31,500 ಮತ್ತು ಬಡ್ಡಿ ಅವರಿಗೆ ತೆಲುಗು ನಿರ್ಮಾಪಕರು ಕೊಡಬೇಕೆಂದು ಬೆಂಗಳೂರಿನ ನ್ಯಾಯಾಲಯ ಆದೇಶ ಮಾಡಿತು. ಈ ನಡುವೆ ಅದೇ ತೆಲುಗು ನಿರ್ಮಾಪಕರ ರಿಪಬ್ಲಿಕ್ ಎನ್ನುವ ಮತ್ತೊಂದು ತೆಲುಗು ಚಿತ್ರ ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಬಿಡುಗಡೆಯಾಯಿತು.
ಆಗಸ್ಟ್ 31 ರ ಆದೇಶವನ್ನು ಅನುಷ್ಠಾನ ಮಾಡಲು ಹೈದರಾಬಾದಿನ ನ್ಯಾಯಾಲಯಕ್ಕೆ ಈಗ ಮೊರೆ ಹೋಗಿದ್ದಾರೆ.ಈ ರೀತಿ ಮೋಸ ಹೋಗಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ನಾಚಿಯಾಗುತ್ತಿದೆ. ಈಗಲೂ ಕೂಡ ಸಿನೆಮಾ ವಿತರಣೆ ಒಂದು ವ್ಯವಸ್ಥಿತ ವ್ಯಾಪಾರವಲ್ಲ. ಅದರಲ್ಲೂ ಡಬ್ಬಿಂಗ್ ವಿಷಯದಲ್ಲಿ ಸಾಕಷ್ಟು ಗೊಂದಲವಿದೆ. ಡಬ್ಬಿಂಗ್ ಸಿನೆಮಾಗಳ ವಿತರಣೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶವಿದೆ,” ಎನ್ನುತ್ತಾರೆ ಸಂಬರಗಿ. ಈ ಹಿನ್ನಡೆ ಹೊರತಾಗಿಯೂ, ಕನ್ನಡಕ್ಕೆ ಒಳ್ಳೆ ಪರಬಾಷ ಸಿನೆಮಾಗಳನ್ನು ಡಬ್ಬಿಂಗ್ ಮಾಡಿಸಿ ಬಿಡುಗಡೆ ಮಾಡುವ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆ.
ಮೂಲತಃ ವ್ಯಾಪಾರಿಯಾದ ಸಂಬರ್ಗಿ, ಸಿನೆಮಾ ವಿತರಣೆ, ಇನ್-ಬ್ರಾಂಡಿಂಗ್ ಮತ್ತು ನಟನೆಯಲ್ಲೂ ಗುರುತಿಸಿಕೊಂಡಿದ್ದು ಕಳೆದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಕೊನೆಯ ಹಂತದವರೆಗೂ ಪೈಪೋಟಿಯಲ್ಲಿದ್ದರು.
ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆಲ್ಓವರ್ ಇಂಡ್ಯಾ ಗುರ್ತಿಸಿಕೊಂಡಿದ್ದಾರೆ. ಇಡೀ ಜಗತ್ತಿನ ತುಂಬೆಲ್ಲಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅಭಿನಯದ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಪ್ರಭಾಸ್ ಎಲ್ಲರ ನೆಚ್ಚಿನ ಡಾರ್ಲಿಂಗೇ ಸರೀ. ಹೀಗಾಗಿ, ಒಬ್ಬೊಬ್ಬ ಅಭಿಮಾನಿಯೂ ಕೂಡ ಒಂದೊಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇಲ್ಲೊಬ್ಬ ಅಭಿಮಾನಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಮೇಲಿನ ಪ್ರೀತಿಯನ್ನು ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ತೋರಿಸಿದ್ದಾನೆ.
ತಮ್ಮ ನೆಚ್ಚಿನ ಸ್ಟಾರ್ಗಳ ಮೇಲಿನ ಅಭಿಮಾನವನ್ನು ಟ್ಯಾಟೂ ಮೂಲಕ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ, ತಲೆಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ತರ್ಸೋದು ತೀರಾ ವಿರಳ. ಸಾಮಾನ್ಯವಾಗಿ ಫ್ಯಾನ್ಸ್ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಎದೆ-ಬೆನ್ನು-ದೇಹದ ಮೇಲೆ ತಾವು ಪ್ರೀತ್ಸೋ-ಆರಾಧಿಸೋ ಸ್ಟಾರ್ಗಳ ಭಾವಚಿತ್ರವನ್ನು-ಹೆಸರನ್ನು-ಸಿನಿಮಾದ ಟೈಟಲ್ಗಳನ್ನು ಕೆತ್ತಿಸಿಕೊಳ್ಳುತ್ತಾರೆ. ದೇವರು ನಮ್ಮೊಟ್ಟಿಗೆ ಸದಾ ಇರುತ್ತಾನೋ ಇಲ್ಲವೋ ಗೊತ್ತಿಲ್ಲ. ಆರಾಧ್ಯದೈವ ಮಾತ್ರ ಅಚ್ಚೆ ಮೂಲಕ ಸದಾ ನಮ್ಮೊಟ್ಟಿಗಿರಬೇಕು ಎಂದು ಬಯಸ್ತಾರೆ. ಇದಕ್ಕೆ ಬಾಹುಬಲಿ ಅಭಿಮಾನಿಗಳು ಕೂಡ ಹೊರತಾಗಿಲ್ಲ.
ಹೌದು, ಡಾರ್ಲಿಂಗ್ಗೆ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳ ಪೈಕಿ ಓರ್ವ ಡಾರ್ಲಿಂಗ್ ಅಭಿಮಾನಿ `ಪ್ರಭಾಸ್’ ಹೆಸರನ್ನು ತಲೆ ಮೇಲೆ ಕೆತ್ತಿಸಿಕೊಂಡಿದ್ದಾನೆ. ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಹೀಗೆ ಸೋಷಿಯಲ್ ಸಮುದ್ರದಲ್ಲಿ ವೈರಲ್ ಆದ ಫೋಟೋ ಅಮರೇಂದ್ರ ಬಾಹುಬಲಿಯನ್ನು ತಲುಪಿದೆ. ಮಾತ್ರವಲ್ಲ ಅಭಿಮಾನಿ ತೋರಿಸಿದ ಪ್ರೀತಿಯನ್ನು ಕಂಡು ಆದಿಪುರುಷನ ಕಣ್ಣಾಲಿಗೆಗಳು ಒದ್ದೆಯಾಗಿವೆ. ಆ ಅಭಿಮಾನಿಯನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವ ಮನಸ್ಸಾಗಿದೆ. ಹೀಗಾಗಿ, ತಮ್ಮ ಫ್ಯಾನ್ನ ಮನೆಗೆ ಕರೆಸಿ ಮಾತನಾಡಿದ್ದಾರೆ. ಪಕ್ಕದಲ್ಲೇ ಕೂರಿಸಿಕೊಂಡು ಕೆಲಕಾಲ ಟೈಮ್ ಸ್ಪೆಂಡ್ ಮಾಡುವುದರ ಜೊತೆಗೆ ಬೆಲೆಬಾಳುವ ವಾಚ್ನ ಉಡುಗೊರೆಯಾಗಿ ನೀಡಿದ್ದಾರಂತೆ.
ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಿಂದ ನೇರವಾಗಿ ಸೋಷಿಯಲ್ ಪ್ರಪಂಚಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದೆ. ಪ್ರಭಾಸ್ ಮಿಸ್ಟರ್ ಪರ್ಫೆಕ್ಷನಿಸ್ಟ್- ಮಂಚಿ ಮನಸ್ಸುಳ್ಳ ಮನುಷಿ ಅಂತ ಬರೀ ಟಿಟೌನ್ಗೆ ಮಾತ್ರವಲ್ಲ ಇಡೀ ವಲ್ಡ್ಗೆ ಗೊತ್ತಾಗಿ ಯಾವುದೋ ಕಾಲವಾಗಿದೆ ಬಿಡಿ. ಎನಿವೇ, ಹೃದಯವಂತ ಪ್ರಭಾಸ್ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬೆಳಿಬೇಕು. ರಾಧೆಶ್ಯಾಮ್- ಸಲಾರ್- ಆದಿಪುರುಷ್ ಚಿತ್ರಗಳು ನಿರೀಕ್ಷೆಗೂ ಮೀರಿದ ಯಶಸ್ಸು ಸಿಗ್ಬೇಕು. ಇದು ಆಲ್ಓವರ್ ಇಂಡ್ಯಾದಲ್ಲಿರುವ ರೆಬೆಲ್ ಪ್ರಭಾಸ್ ಅಭಿಮಾನಿಗಳ ಒಂದೇ ಕೋರಿಕೆ..
ಅಪ್ಪು ಮರೆಯಾದ್ಮೇಲೆ ದೊಡ್ಮನೆಯಲ್ಲಿ ಎಷ್ಟು ಕತ್ತಲು ಕವಿದಿದೆಯೋ, ಅದೆಷ್ಟು ದುಃಖ- ನೋವು ತುಂಬಿಕೊಂಡಿದೆಯೋ, ಅದೆಷ್ಟು ಅನಾಥಭಾವ ದೊಡ್ಮನೆಗೆ ಕಾಡುತ್ತಿದೆಯೋ, ಅದೆಷ್ಟು ಕಣ್ಣೀರು ಹನಿಯಾಗಿ ಹರಿದಿದೆಯೋ ಅಷ್ಟೇ ದುಃಖ-ನೋವು- ಸಂಕಟವನ್ನು ಶಕ್ತಿಧಾಮವೂ ಅನುಭವಿಸಿದೆ. ಶಕ್ತಿಧಾಮ ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ನಡೆಸುತ್ತಿದ್ದಂತಹ ಅನಾಥಾಶ್ರಮ. ಅಣ್ಣಾವ್ರು ಮತ್ತು ಅಮ್ಮಾವ್ರು ಹೋದ್ಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮದ ಬೆನ್ನಿಗೆ ನಿಂತರು. ವೃದ್ದರು- ಅನಾಥರು- ನಿರ್ಗತಿಕರು- ಅಶಕ್ತರು ಸೇರಿದಂತೆ ಸಾವಿರಾರು ಜನರ ಜವಬ್ದಾರಿಯನ್ನು ವಹಿಸಿಕೊಂಡರು. ಊಟ-ವಸತಿ- ಶಿಕ್ಷಣ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡರು.ಹೀಗೆ ಅಪ್ಪು ಆಸರೆಯಲ್ಲಿ ನಿಶ್ಚಿಂತರಾಗಿ ಬದುಕುತ್ತಿದ್ದ ಜೀವಗಳಿಗೆ ದೊಡ್ಮನೆ ರಾಜಕುಮಾರನ ಸಾವು ಬರಸಿಡಿಲು ಬಡಿದಂತಾಗಿದೆ. ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವ ಮೊದಲೇ ಶಕ್ತಿಧಾಮಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಸರೆಯಾಗಿ ನಿಂತಿದ್ದಾರೆ.
ಹೌದು, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮವನ್ನು ಮುನ್ನಡೆಸಲಿದ್ದಾರೆ. ತಮ್ಮನ ಸಮಾಜ ಸೇವೆಗೆ ಬೆನ್ನೆಲುಬಾಗಿ ಶಿವಣ್ಣ- ರಾಘಣ್ಣ ನಿಂತ್ಕೊಳ್ಳಲಿದ್ದಾರೆ. ಹೀಗಾಗಿ, ಶಕ್ತಿಧಾಮದ ಸಕಲರೂ ನಿರಾಳರಾಗಿದ್ದಾರೆ. ಆದರೆ, ನಟಸಾರ್ವಭೌಮನಿಲ್ಲದ ನೋವು ಮಾತ್ರ ಶಕ್ತಿಧಾಮದ ಸಕಲರನ್ನೂ ಹೈರಣಾಗಿಸಿದೆ. ಕನ್ನಡ ಚಿತ್ರರಂಗ ಹಮ್ಮಿಕೊಂಡಿದ್ದ ‘ ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಕ್ತಿಧಾಮದ ಮಕ್ಕಳು ಪರಮಾತ್ಮನ ಸ್ಮರಣೆ ಮಾಡಿ ಹೃದಯ ಗೀತೆಯ ಮೂಲಕ ತಮ್ಮ ಭಾವಾಂಜಲಿಯನ್ನು ಅರ್ಪಿಸಿದರು.
ಶಕ್ತಿಧಾಮದ ಹೆಸರು ಎಷ್ಟು ಸುಂದರ…ಮುಕ್ತಿ ನೀಡುವ ನಮಗೆ ಭವ್ಯಮಂದಿರ…
ಅಂಬೆಗಾಲ ಇಡುತ ನಾವು ಬದುಕುತ್ತಿದೆವು…ಅಮ್ಮ ನಿಮ್ಮ ಶಕ್ತಿಯಿಂದ ಎದ್ದುನಿಂತೆವು…
ಕರವ ಮುಗಿದು ನಮಿಸಬೇಕು ಇಂಥ ಶಕ್ತಿಗೆ…ಜಯವಾಗಲಿ ಎಂದೆಂದೂ ಶಕ್ತಿಧಾಮಗೆ…
ಒಂದೇ ಬಳ್ಳಿ ಹೂಗಳಂತೆ ನಾವು ಎಲ್ಲರು…ನಗುನಗುತ ಬಾಳಬೇಕು ಇಲ್ಲಿ ಎಲ್ಲರು…
ಇದು ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಶಕ್ತಿಧಾಮದಲ್ಲಿ ಆಸರೆ ಪಡೆಯುತ್ತಿರುವ ಮಕ್ಕಳು ಸಾಮೂಹಿಕವಾಗಿ ಒಟ್ಟಾಗಿ ಹಾಡಿದಂತಹ ಹಾಡು. ಇದು ಕೇವಲ ಹಾಡಲ್ಲ. ಅವರೆಲ್ಲರ ಹೃದಯದ ಮಾತು- ದೊಡ್ಮನೆ ಮೇಲೆ ಅವರಿಗಿರುವ ಪ್ರೀತಿ- ಗೌರವ- ಹೆಮ್ಮೆ- ವಿಶ್ವಾಸ- ನಂಬಿಕೆ- ಭರವಸೆಯನ್ನು ತುಂಬಿಕೊಂಡಿದ್ದ ಗೀತೆ ಇದು. ಈ ಹಾಡು ಅರಸು ಆರಾಧನೆಯಲ್ಲಿ ಮಕ್ಕಳು ಹಾಡುತ್ತಿದ್ದಾಗ ಕಣ್ಣಾಲಿಗೆಗಳು ಒದ್ದೆಯಾದ್ವು, ರಾಜರತ್ನ ಅಪ್ಪು ಮೇಲಿದ್ದ ಪ್ರೀತಿ ಮತ್ತು ಗೌರವ ಒಂದು ತೂಕ ಹೆಚ್ಚಾಯ್ತು. ನಮ್ಮ ಅಪ್ಪು ನಮಗೆ ಬೇಕು ಎಂದು ಹಠ ಹಿಡಿದುಕೊಳ್ಳುವಂತಾಯ್ತು. ಆದರೆ ಏನ್ಮಾಡೋದು ಕ್ರೂರ ವಿಧಿ ರಾಜಕುಮಾರನ ಹೃದಯ ವೈಶ್ಯಾಲ್ಯತೆಯನ್ನು ನೋಡಿ ಅಸೂಹೆ ಪಟ್ಟು ಕಿತ್ಕೊಂಡಿದ್ದಾನೆ. ಅವನೇ ಬೆಟ್ಟದ ಹೂ ನ ಭೂಮಿಗೆ ಮತ್ತೆ ವಾಪಾಸ್ ಕಳುಹಿಸಿಕೊಡಬೇಕು. ದೊಡ್ಮನೆಯಲ್ಲಿ ಅಪ್ಪು ಮತ್ತೆ ಹುಟ್ಟಿ ಬರಬೇಕು. ಇದೇ ಕೋಟಿ ಮಂದಿಯ ಕೊನೆಯ ಆಸೆ
ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ – ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ “ಬನಾರಸ್”. ಈ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿಯ ಮುಂದೆ ಬಿಡುಗಡೆ ಮಾಡಲಾಗಿದೆ.
ಇದಕ್ಕೂ ಮುನ್ನ ಚಿತ್ರತಂಡ ಡಾ.ರಾಜಕುಮಾರ್, ಪಾರ್ವತಮ್ಮ ರಾಜ್ಕುಮಾರ್, ಅಂಬರೀಶ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿದ್ದರು. ಕಂಠೀರವ ಸ್ಟುಡಿಯೋದಿಂದ, ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಸಮಾಧಿಗೂ ಪೂಜೆ ಸಲ್ಲಿಸಿ, ಲಕ್ಷ್ಮೀ ಪೂಜೆ ಮಾಡಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಸಂಸ್ಥೆಯ ಕಡೆಯಿಂದ ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಈ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್ ಗೆ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಯಾರೂ ನಿರೀಕ್ಷಿಸದಂಥಾ ದುರಂತ ಘಟಿಸದಿದ್ದರೆ ಈ ದಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರೇ ಖುದ್ದಾಗಿ ಬನಾರಸ್ನ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ಕನ್ನು ಬಿಡುಗಡೆಗೊಳಿಸ ಬೇಕಿತ್ತು.. ದುರಾದೃಷ್ಟವಶಾತ್ ಅವರು ಮರೆಯಾಗಿದ್ದಾರೆ. ಅವರು ತೋರಿದ ಪ್ರೀತಿಯನ್ನು ಮನಸಲ್ಲಿಟ್ಟುಕೊಂಡು ಅವರ ಪುಣ್ಯಭೂಮಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಗಿದೆ.
ಅಲ್ಲಿಂದಲೇ ಅಪ್ಪು ಖುಷಿಗೊಳ್ಳುತ್ತಾರೆ, ಹರಸುತ್ತಾರೆಂಬ ತುಂಬು ನಂಬಿಕೆ ಚಿತ್ರ ತಂಡಕ್ಕಿದೆ. ಈ ಪೂಜೆ ಮತ್ತು ಫಸ್ಟ್ ಲುಕ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕ ಜಯತೀರ್ಥ, ನಾಯಕ ನಾಯಕಿಯರಾದ ಝೈದ್ ಖಾನ್, ಸೋನಲ್ ಮಾಂಟೆರೊ, ಖ್ಯಾತ ಹಾಸ್ಯ ನಟ ಸುಜಯ್ ಮುಂತಾದವರು ಉಪಸ್ಥಿತರಿದ್ದರು. ಇಡೀ ಚಿತ್ರ ಮೂಡಿ ಬಂದಿರುವ ಅದ್ಧೂರಿತನ ಮತ್ತು ವಿಭಿನ್ನ ಕಥಾನಕದ ಸುಳಿವನ್ನು ಈ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್ ನೀಡಲಿದೆ.
ಹಲವಾರು ಅದ್ಭುತಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಈ ಚಿತ್ರದ ೯೦ ಭಾಗದ ಚಿತ್ರೀಕರಣವನ್ನು ಬನಾರಸ್ನ ಮನಮೋಹಕ ಪರಿಸರದಲ್ಲಿ ನಡೆಸಲಾಗಿದೆ. ಇಲ್ಲಿನ 84 ಘಾಟ್ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿರುವುದು ಬನಾರಸ್ನ ಮತ್ತೊಂದು ಪ್ರಧಾನ ಅಂಶ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಏಕಕಾಲದಲ್ಲಿಯೇ ಐದು ಭಾಷೆಗಳಲ್ಲಿ ತಯಾರಾಗಿರುವ ಬನಾರಸ್, ದೇಶವ್ಯಾಪಿ ಸದ್ದು ಮಾಡಲಿದೆ.
ಈಗಾಗಲೇ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳೂ ಕೂಡಾ ದೇಶವ್ಯಾಪಿ ಹಬ್ಬಿಕೊಂಡಿದೆ. ಅದೆಲ್ಲಕ್ಕೂ ಕಳಶವಿಟ್ಟಂತೆ ಈಗ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಅನಾವರಣಗೊಂಡಿದೆ. ಇದಕ್ಕೆ ಸಿಗುತ್ತಿರುವ ಭರಪೂರ ಪ್ರತಿಕ್ರಿಯೆ ಚಿತ್ರತಂಡದಲ್ಲಿ ಹೊಸಾ ಹುರುಪು ಮೂಡಿಸಿದೆ. ಹೊಸಾ ಪ್ರತಿಭೆಯ ಆಗಮನಕ್ಕೆ ಮತ್ತು ಹೊಸತನದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸದಾ ಕಾಲವೂ ಇರಲಿ ಎನ್ನುವುದು ಚಿತ್ರತಂಡದ ಮನವಿ.