ಸ್ಟಾರ್ ನಟರುಗಳನ್ನು ಆರಾಧಿಸುವ-ಪ್ರೀತಿಸುವ-ಗೌರವಿಸುವ ಹಾಗೂ ತಲೆ ಮೇಲೆ ಹೊತ್ತು ಮೆರೆಸುವ ಅಭಿಮಾನಿ ದೇವರುಗಳು, ತಾವಿಷ್ಟ ಪಡುವ ನಟರುಗಳ ಹಾದಿಯಲ್ಲಿ ಸಾಗುತ್ತಾರೆ. ಅವರ ಒಳ್ಳೆಗುಣಗಳನ್ನು ಮೈಗೂಡಿಸಿಕೊಂಡು ಆದರ್ಶವಾಗಿ ಬದುಕೋದಕ್ಕೆ ಇಷ್ಟಪಡುತ್ತಾರೆ. ಮಾತ್ರವಲ್ಲ, ಸಿನಿಮಾದಿಂದ ಸಿನಿಮಾಗೆ ಬದಲಾಗುವ ನಟರುಗಳ ಲುಕ್-ಗೆಟಪ್‌ನ ಫಾಲೋ ಮಾಡುತ್ತಾರೆ. ಅವರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡು, ಅವರಂತೆ ಕಾಸ್ಟ್ಯೂಮ್ಧ ರಿಸಿಕೊಂಡು ತಮ್ಮಿಷ್ಟದ ಸ್ಟಾರ್‌ಗಳನ್ನು ಬೆಂಬಲಿಸುತ್ತಾರೆ. ಇದಕ್ಕೆ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಕೂಡ ಹೊರತಾಗಿಲ್ಲ…
ಇಂಟ್ರೆಸ್ಟಿಂಗ್ ಅಂದರೆ ಮಾರ್ಟಿನ್' ಲುಕ್-ಗೆಟಪ್ ನೋಡಿ ಸ್ವತಃ ಆಕ್ಷನ್‌ಪ್ರಿನ್ಸ್ ಕಳೆದು ಹೋಗಿರುವುದು. ಹೌದು, ಮಾಸ್ ಅಪೀಲ್ ಕೊಡುವ ಮಾರ್ಟಿನ್ ಹೇರ್‌ಸ್ಟೈಲ್ ಅಭಿಮಾನಿಗಳ ಹೃದಯವನ್ನು ಮಾತ್ರವಲ್ಲ ಅದ್ದೂರಿ ಹುಡುಗನ ಮನಸ್ಸನ್ನು ಗೆದ್ದು ಬಿಟ್ಟಿದೆ. ಹೀಗಾಗಿಯೇ ಬಹದ್ದೂರ್ ಬೆಂಕಿ ಚೆಂಡು ತಮ್ಮ ಸೋಷಿಯಲ್ ಸ್ಟೇಟಸ್‌ಗೆ ಅಪ್‌ಲೋಡ್ ಬಿಟ್ಟಿದ್ದಾರೆ. ಈಗಾಗಲೇ ಫ್ಯಾನ್ಸ್ ಟೀಸರ್ನಲ್ಲಿ
ಮಾರ್ಟಿನ್’ ಲುಕ್ ನೋಡಿದ್ರೂ ಕೂಡ, ಧ್ರುವಾ ಸರ್ಜಾರ ಸ್ಟೇಟಸ್‌ನಿಂದ ಫೋಟೋನ ಎತ್ತಿಕೊಂಡು ಸೋಷಿಯಲ್ ಸಮುದ್ರದಲ್ಲಿ ಸುನಾಮಿ ಎಬ್ಬಿಸುತ್ತಿದ್ದಾರೆ.
ಎ.ಪಿ ಅರ್ಜುನ್ ಡೈರೆಕ್ಟ್ ಮಾಡಿರುವ ಮಾರ್ಟಿನ್' ಕನ್ನಡದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನ್ಮಾ. ಸಿಂಪಲ್ಲಾಗಿ ನಾಲ್ಕು ಹೊಡೆದಿರುವ ಧ್ರುವ
ಮಾರ್ಟಿನ್’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮಾತ್ರವಲ್ಲ ಪ್ಯಾನ್ ಇಂಡ್ಯಾ ತುಂಬೆಲ್ಲಾ ಚಂಡಮಾರುತದ ಅಲೆ ಎಬ್ಬಿಸೋಕೆ ಸಿಡಿದು ನಿಂತಿದ್ದಾರೆ. ಗನ್‌ನ ನಾನ್ ಚೂಸ್ ಮಾಡಿಕೊಂಡಿಲ್ಲ ಬದಲಾಗಿ ಗನ್ನೇ ನನ್ನ ಚೂಸ್ ಮಾಡಿಕೊಂಡಿದೆ'. ಇದು ಜೋಕ್ ಅಲ್ಲ, ಇದೇ ಸತ್ಯ ಅಂತೇಳಿ ಕಣ್ಣುಬ್ಬಿನ ಮೇಲಿನ ರಕ್ತದ ಕಲೆ ಒರೆಸಿಕೊಂಡು ನೋಡುಗರ ಗಟ್ಟಿಗುಂಡಿಗೆ ಶೇಕ್ ಆಗುವಂತೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ನ 15 ಕೋಟಿಗೂ ಅಧಿಕ ಮಂದಿ ಕಣ್ತುಂಬಿಕೊಂಡಿರುವುದು
ಮಾರ್ಟಿನ್’ ಹವಾ ಹೆಂಗೈತಿ ಅನ್ನೋದನ್ನು ತೋರಿಸುತ್ತಿದೆ. ಆಕ್ಷನ್‌ಪ್ರಿನ್ಸ್ ತೋಳ್‌ಬಲದ ಮೇಲಿರುವ ಸೋಲ್ಡ್ಜರ್ಸ್ ಟ್ಯಾಟೂ `ಮಾರ್ಟಿನ್’ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಅಂದ್ಹಾಗೇ, ಮಾರ್ಟಿನ್' ಚಿತ್ರಕ್ಕಾಗಿ ಧ್ರುವ ಸಂಪೂರ್ಣವಾಗಿ ಬದಲಾಗಿದ್ದಾರೆ. ಬರೀ ಲುಕ್-ಗೆಟಪ್ ಮಾತ್ರವಲ್ಲ ಸ್ಕ್ರೀನ್ಪ್ರ ಸೆನ್ಸ್ ಇಂದ ಹಿಡಿದು ಡೈಲಾಗ್ ಡೆಲಿವರಿ ತನಕ ಎಲ್ಲವನ್ನೂ ಚೇಂಜ್ ಮಾಡಿಕೊಂಡಿದ್ದಾರೆ. ಅದ್ದೂರಿ-ಬಹದ್ದೂರ್-ಭರ್ಜರಿ-ಪೊಗರು ಚಿತ್ರದಲ್ಲಿ ಉದ್ದುದ್ದ ಡೈಲಾಗ್‌ಗಳಿದ್ವು ಆದರೆ
ಮಾರ್ಟಿನ್’ ಸಿನಿಮಾದಲ್ಲಿ ಲೆಂಗ್ತಿ ಡೈಲಾಗ್ ಇರೋದಿಲ್ಲ ಅಂತ ಟೀಸರ್ ರಿಲೀಸ್ ಸಂದರ್ಭದಲ್ಲೇ ಧ್ರುವ ಹೇಳಿದ್ದಾರೆ. ಆದರೆ ಮಾರ್ಟಿನ್' ಮೂವೀಯಲ್ಲಿ ಬರುವ ಒಂದೊಂದು ಡೈಲಾಗ್‌ಗೆ ಅದರದ್ದೇ ಆದ ತೂಕ ಮತ್ತು ಮಹತ್ವವಿರುತ್ತಂತೆ. ಅಷ್ಟಕ್ಕೂ,
ಮಾರ್ಟಿನ್’ ಚಿತ್ರದಲ್ಲಿ ಧ್ರುವ ಮಾರ್ಟಿನ್ ಅಲ್ವಂತೆ ಹಾಗಾದ್ರೆ ಮತ್ಯಾರು? ಈ ಪ್ರಶ್ನೆಗೆ ಉತ್ತರವನ್ನು ಚಿತ್ರತಂಡ ನಿಗೂಢವಾಗಿಟ್ಟಿದೆ. ಸ್ಟೈಲಿಷ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳಿವೆ. ಸೌತ್‌ನ ಫೇಮಸ್ಸ್ ಆಕ್ಷನ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಅದ್ದೂರಿ ಜೋಡಿಯ ಎರಡನೇ ಚಿತ್ರವಾದ ಮಾರ್ಟಿನ್' ಕೂಡ ಅದ್ಧೂರಿಯಾಗಿಯೇ ನಿರ್ಮಾಣವಾಗ್ತಿದೆ. ಐದು ಭಾಷೆಯಲ್ಲಿ ಸಿನಿಮಾ ನಿರ್ಮಾಣಕ್ಕೆ ಉದಯ್ ಕೆ. ಮೆಹ್ತಾ ಬಂಡವಾಳ ಹೂಡಿದ್ದಾರೆ. 2022ರ ಆರಂಭದಲ್ಲೇ
ಮಾರ್ಟಿನ್’ ತೆರೆಗೆ ತರಬೇಕು ಎಂದು ಭರದಿಂದ ಶೂಟಿಂಗ್ ಮುಗಿಸ್ತಿದ್ದಾರೆ. ತಮಿಳಿನ ಅರವಿಂದ್ ಸಾಮಿ- ದೇವಯಾನಿ ಸೇರಿದಂತೆ ಪರಭಾಷಾ ಕಲಾವಿದರು ಕೂಡ ಮಾರ್ಟಿನ್' ಮೈಲೇಜ್‌ನ ಹೆಚ್ಚಿಸುತ್ತಿದ್ದಾರೆ. ಲವ್ ಅಂಡ್ ಎಮೋಷನ್ಸ್ ಫೀಲ್ ಇಟ್ಟು ಸಿನಿರಸಿಕರ ಹಾರ್ಟ್ನ ಬೀಟ್ ಮಾಡಿದ್ದ
ಅದ್ದೂರಿ’ ಜೋಡಿ ಮಾರ್ಟಿನ್' ಮೂಲಕ ಬೆಳ್ಳಿತೆರೆ ರೂಲ್ ಮಾಡ್ಬೇಕು ಎಂದು ಹೊರಟಿದ್ದಾರೆ. ಪೊಗರು ಚಿತ್ರದ ಮೂಲಕ ಗಡಿದಾಟಿ ಘರ್ಜಿಸಿದ್ದ ಬಹದ್ದೂರ್ ಗಂಡು
ಮಾರ್ಟಿನ್’ ಮೂಲಕ ವಲ್ಡ್ವೈಡ್ ಜಗಮಗಿಸ್ತಾರೆ ಎನ್ನುವ ಕೂತೂಹಲ ಮತ್ತು ನಿರೀಕ್ಷೆ ಅಭಿಮಾನಿ ವಲಯದಲ್ಲಿದೆ.
ವಿಶಾಲಾಕ್ಷಿ, ಎಂಟರ್‌ಟೈನ್ಮೆAಟ್ ಬ್ಯೂರೋ ಸಿನಿಲಹರಿ