ರಾಣ ಜೊತೆ ಕಿರಿಕ್‌ ಹುಡ್ಗಿ! ಹಾಡಿಗೆ ಸ್ಟೆಪ್‌ ಹಾಕ್ತಾರೆ ಸಂಯುಕ್ತಾ ಹೆಗ್ಡೆ!!

ಕಿರಿಕ್‌ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆ, ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅದು ಸಿನಿಮಾ ಮತ್ತು ಅದರಾಚೆಗಿನ ಸುದ್ದಿಯೂ ಹೌದು. ಈಗ ವಿಷಯ ಏನೆಂದರೆ, ಸಂಯುಕ್ತಾ ಹೆಗ್ಡೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಹೊತ್ತಿನ ಸುದ್ದಿ.

ಹೌದು, ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡ ಈ ನಟಿ, ಈಗ ಸಿನಿಮಾವೊಂದರಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲು ಸೈ ಎಂದಿದ್ದಾರೆ. ನಂದಕಿಶೋರ್‌ ನಿರ್ದೇಶನದ ಈ ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತ ನೀಡಿದ್ದಾರೆ. ಶಿವು ಭೇರ್ಗಿ ಈ ಚಿತ್ರಕ್ಕೆ ಗೀತೆ ಬರೆದಿದ್ದಾರೆ.

ಕೆ.ಮಂಜು ಅವರ ಪುತ್ರ ಶ್ರೇಯಸ್‌ ಈ ಚಿತ್ರದ ಹೀರೋ. ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ವಿಶ್ವ , ಶಿವು ಕಲಾ ನಿರ್ದೇಶನ ಮತ್ತು ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Related Posts

error: Content is protected !!