ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಆಲ್‌ಓವರ್ ಇಂಡ್ಯಾ ಗುರ್ತಿಸಿಕೊಂಡಿದ್ದಾರೆ. ಇಡೀ ಜಗತ್ತಿನ ತುಂಬೆಲ್ಲಾ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಅಭಿನಯದ ಮೂಲಕ ವಿಶ್ವವಿಖ್ಯಾತಿ ಪಡೆದಿರುವ ಪ್ರಭಾಸ್ ಎಲ್ಲರ ನೆಚ್ಚಿನ ಡಾರ್ಲಿಂಗೇ ಸರೀ. ಹೀಗಾಗಿ, ಒಬ್ಬೊಬ್ಬ ಅಭಿಮಾನಿಯೂ ಕೂಡ ಒಂದೊಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಇಲ್ಲೊಬ್ಬ ಅಭಿಮಾನಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಮೇಲಿನ ಪ್ರೀತಿಯನ್ನು ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ತೋರಿಸಿದ್ದಾನೆ.
ತಮ್ಮ ನೆಚ್ಚಿನ ಸ್ಟಾರ್‌ಗಳ ಮೇಲಿನ ಅಭಿಮಾನವನ್ನು ಟ್ಯಾಟೂ ಮೂಲಕ ವ್ಯಕ್ತಪಡಿಸುವುದು ಹೊಸದೇನಲ್ಲ. ಆದರೆ, ತಲೆಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ತರ‍್ಸೋದು ತೀರಾ ವಿರಳ. ಸಾಮಾನ್ಯವಾಗಿ ಫ್ಯಾನ್ಸ್ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ತಾರೆ. ಎದೆ-ಬೆನ್ನು-ದೇಹದ ಮೇಲೆ ತಾವು ಪ್ರೀತ್ಸೋ-ಆರಾಧಿಸೋ ಸ್ಟಾರ್‌ಗಳ ಭಾವಚಿತ್ರವನ್ನು-ಹೆಸರನ್ನು-ಸಿನಿಮಾದ ಟೈಟಲ್‌ಗಳನ್ನು ಕೆತ್ತಿಸಿಕೊಳ್ಳುತ್ತಾರೆ. ದೇವರು ನಮ್ಮೊಟ್ಟಿಗೆ ಸದಾ ಇರುತ್ತಾನೋ ಇಲ್ಲವೋ ಗೊತ್ತಿಲ್ಲ. ಆರಾಧ್ಯದೈವ ಮಾತ್ರ ಅಚ್ಚೆ ಮೂಲಕ ಸದಾ ನಮ್ಮೊಟ್ಟಿಗಿರಬೇಕು ಎಂದು ಬಯಸ್ತಾರೆ. ಇದಕ್ಕೆ ಬಾಹುಬಲಿ ಅಭಿಮಾನಿಗಳು ಕೂಡ ಹೊರತಾಗಿಲ್ಲ.
ಹೌದು, ಡಾರ್ಲಿಂಗ್‌ಗೆ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿದ್ದಾರೆ. ಈ ಅಭಿಮಾನಿಗಳ ಪೈಕಿ ಓರ್ವ ಡಾರ್ಲಿಂಗ್ ಅಭಿಮಾನಿ `ಪ್ರಭಾಸ್’ ಹೆಸರನ್ನು ತಲೆ ಮೇಲೆ ಕೆತ್ತಿಸಿಕೊಂಡಿದ್ದಾನೆ. ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಹೀಗೆ ಸೋಷಿಯಲ್ ಸಮುದ್ರದಲ್ಲಿ ವೈರಲ್ ಆದ ಫೋಟೋ ಅಮರೇಂದ್ರ ಬಾಹುಬಲಿಯನ್ನು ತಲುಪಿದೆ. ಮಾತ್ರವಲ್ಲ ಅಭಿಮಾನಿ ತೋರಿಸಿದ ಪ್ರೀತಿಯನ್ನು ಕಂಡು ಆದಿಪುರುಷನ ಕಣ್ಣಾಲಿಗೆಗಳು ಒದ್ದೆಯಾಗಿವೆ. ಆ ಅಭಿಮಾನಿಯನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವ ಮನಸ್ಸಾಗಿದೆ. ಹೀಗಾಗಿ, ತಮ್ಮ ಫ್ಯಾನ್‌ನ ಮನೆಗೆ ಕರೆಸಿ ಮಾತನಾಡಿದ್ದಾರೆ. ಪಕ್ಕದಲ್ಲೇ ಕೂರಿಸಿಕೊಂಡು ಕೆಲಕಾಲ ಟೈಮ್ ಸ್ಪೆಂಡ್ ಮಾಡುವುದರ ಜೊತೆಗೆ ಬೆಲೆಬಾಳುವ ವಾಚ್‌ನ ಉಡುಗೊರೆಯಾಗಿ ನೀಡಿದ್ದಾರಂತೆ.
ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಿಂದ ನೇರವಾಗಿ ಸೋಷಿಯಲ್ ಪ್ರಪಂಚಕ್ಕೆ ಲಗ್ಗೆ ಇಟ್ಟು ಎಲ್ಲರಿಗೂ ಸುದ್ದಿ ಮುಟ್ಟಿಸುತ್ತಿದೆ. ಪ್ರಭಾಸ್ ಮಿಸ್ಟರ್ ಪರ್ಫೆಕ್ಷನಿಸ್ಟ್- ಮಂಚಿ ಮನಸ್ಸುಳ್ಳ ಮನುಷಿ ಅಂತ ಬರೀ ಟಿಟೌನ್‌ಗೆ ಮಾತ್ರವಲ್ಲ ಇಡೀ ವಲ್ಡ್ಗೆ ಗೊತ್ತಾಗಿ ಯಾವುದೋ ಕಾಲವಾಗಿದೆ ಬಿಡಿ. ಎನಿವೇ, ಹೃದಯವಂತ ಪ್ರಭಾಸ್ ಇಂಟರ್‌ನ್ಯಾಷನಲ್ ಸ್ಟಾರ್ ಆಗಿ ಬೆಳಿಬೇಕು. ರಾಧೆಶ್ಯಾಮ್- ಸಲಾರ್- ಆದಿಪುರುಷ್ ಚಿತ್ರಗಳು ನಿರೀಕ್ಷೆಗೂ ಮೀರಿದ ಯಶಸ್ಸು ಸಿಗ್ಬೇಕು. ಇದು ಆಲ್‌ಓವರ್ ಇಂಡ್ಯಾದಲ್ಲಿರುವ ರೆಬೆಲ್ ಪ್ರಭಾಸ್ ಅಭಿಮಾನಿಗಳ ಒಂದೇ ಕೋರಿಕೆ..
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ