ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್ ಚಾನೆಲ್ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ…
2020 ನಂವೆಬರ್ 1ಕ್ಕೆ “ಸಿನಿ ಲಹರಿ” ವೆಬ್ ಸೈಟ್ ಶುರುವಾಗಿದ್ದು ಎಲ್ಲರಿಗೂ ಗೊತ್ತು. ಅಂದು ಎಲ್ಲವೂ ಹರಿಬಿರಿ, ಅವಸರ, ಆತುರ, ಸಣ್ಣ ಭಯ ಮತ್ತು ಒಂದಷ್ಟು ಗೊಂದಲದಲ್ಲಿಯೇ ಒಂದೊಳ್ಳೆಯ ಕಾರ್ಯಕ್ರಮ ನಡೆಯಿತು. ಅಂದು ಯಾರೆಲ್ಲ ಬರುತ್ತಾರೋ ಎಂಬ ಸಣ್ಣ ಭಯದಲ್ಲೇ ಆಹ್ವಾನಿಸಿದರೆಲ್ಲರೂ ಬಂದು ಹೃದಯ ತುಂಬಿ ಹರಿಸಿದರು. ಅದ್ಯಾವ ಸಂದರ್ಭವೋ ಏನೋ ಗೊತ್ತಿಲ್ಲ. ಬಂದವರೆಲ್ಲ ಬೊಗಸೆ ತುಂಬಿ ಕೊಟ್ಟ ಪ್ರೀತಿ, ಹಾರೈಕೆ , ಧೈರ್ಯದಿಂದ ನಾವು ಯುಟ್ಯೂಬ್ ಚಾನೆಲ್‌ಗೂ ಕೈ ಹಾಕಿದೆವು.
ಸಿನಿಲಹರಿ ವೆಬ್ಸೈಟ್ ಶುರುವಾಗಿ ನಾಲ್ಕು ತಿಂಗಳು ಕಳೆಯವ ಹೊತ್ತಿಗೆ ಒಂದು ವ್ಯವಸ್ಥಿತವಾದ ಸ್ಟುಡಿಯೋ, ಆಫೀಸು, ಕ್ಯಾಮೆರಾಗಳು, ಅಗತ್ಯ ಸಿಬ್ಬಂದಿ ಮೂಲಕ ಒಂದು ಯುಟ್ಯೂಬ್ ಚಾನೆಲ್ ಶುರುವಾಯ್ತು. ಇಷ್ಟೆಲ್ಲಾ ಆಗಿದ್ದು, ಆತ್ಮೀಯ ಗೆಳೆಯರ ಸಹಕಾರ, ಪ್ರೋತ್ಸಾಹ ಮತ್ತು ನಮ್ಮೊಳಗಿದ್ದ ಆತ್ಮವಿಶ್ವಾಸ. ಮಿತ್ರರು ಹಾಗು ಉದ್ಯಮಿ ಪಿ. ಕೃಷ್ಣ ಅವರು ನಮ್ಮೊಂದಿಗೆ ಸಾಥ್ ಕೊಟ್ಟರು. ಹಾಗಾಗಿ ಯುಟ್ಯೂಬ್ ಚಾನೆಲ್ ಯಾವುದೇ ಅಡೆತಡೆಗಳಿಲ್ಲದೆ ಶುರುವಾಯ್ತು.
ನಾವಿಬ್ಬರು ಸೇರಿ ಶುರು ಮಾಡಿದ ಸಿನಿಲಹರಿಗೆ ಪ್ರೀತಿಯ ಹಾರೈಕೆಗಳು ಅಪ್ಪಳಿಸಿದವು. ಸಿನಿಲಹರಿ ಸಂಸ್ಥೆ ಕೊರೊನಾ ಹೊಡೆತಕ್ಕೆ ಮುಗ್ಗರಿಸಿತಾದರೂ, ನಾವು ಅದನ್ನು ನಿಲ್ಲಲು ಬಿಡಲಿಲ್ಲ. ಎಲ್ಲರಿಗೂ ಆದಂತೆ ನಮಗೂ ಒಂದಷ್ಟು ಸಮಸ್ಯೆಗಳು ಎದುರಾದವು. ಅದನ್ನು ಮೆಟ್ಟಿ ನಿಂತೆವು. ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಇದ್ದುದರಿಂದಲೇ ಸಿನಿಲಹರಿ ಯುಟ್ಯೂಬ್ ಚಾನೆಲ್ ಯಶಸ್ವಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದೆ.
ಚಿತ್ರೋದ್ಯಮಕ್ಕಾಗಿಯೇ ಶುರುವಾದ ಸಿನಿಲಹರಿ, ಚಿತ್ರರಂಗ ಒಪ್ಪುವ ಮತ್ತು ಅಪ್ಪುವಂತೆ ಕೆಲಸ ಮಾಡಿಕೊಂಡು ಹೋಗಬೇಕೆನ್ನುವ ಧ್ಯೇಯವಿದೆ. ಅದೇ ಹಾದಿಯಲ್ಲಿ ಸಾಗುತ್ತಿದೆ. ಸಿನಿಲಹರಿ ಅಂದರೆ ಒಂದಷ್ಟು ನಂಬಿಕೆ ಹುಟ್ಟ ಬೇಕೆನ್ನುವ ಹಾಗೆ ವೃತ್ತಿಯನ್ನು ಪ್ರದರ್ಶಿಸೋಣ ಅನ್ನೋದು ನಮ್ಮ ಆಸೆ. ಇದೆಲ್ಲ ಕೈ ಗೂಡಬೇಕಾದರೆ, ನೀವುಗಳೇ ಮುಖ್ಯ. ನಿಮ್ಮ ಬೆಂಬಲ ನಮಗೆ ಸದಾ ಇರಬೇಕು.
ಕೊನೆಯ ಮಾತು: ಪ್ರತಿಯೊಬ್ಬರ ಬದುಕಿನ ಸಾಹಸಗಳು ಸುಮ್ಮನೆ ಶುರುವಾಗೋದಿಲ್ಲ. ಅವುಗಳ ಹಿಂದೆ ಹುಮ್ಮಸ್ಸು ಇರುತ್ತೆ, ಛಲ ಇರುತ್ತೆ, ದರ್ದು ಇರುತ್ತೆ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಅಲ್ಲಿ ನೋವು, ಅವಮಾನಗಳು ಇರುತ್ತವೆ. ಸಿನಿಲಹರಿ ಆರಂಭವೂ ಕೂಡ ಇದರಿಂದ ಹೊರತಲ್ಲ.
ವಿಜಯ್ ಭರಮಸಾಗರ, ದೇಶಾದ್ರಿ ಹೊಸ್ಮನೆ