‘ನಾನೊಂಥರ ‘ಅಂತ ಬರ್ತಿದ್ದಾನೆ ಡಾಕ್ಟರ್ ಸನ್, ಹೆಸರು ಜೈ ಸನ್
ಬಣ್ಣದ ಜಗತ್ತೇ ಹಾಗೆ. ಇದೊಂಥರ ಮ್ಯಾಗ್ನೆಟ್ ಇದ್ದಂತೆ. ಎಂತವರಿಗೂ ಇದು ಒಂಥರ ತಲೆ ಗಿಮ್ಮ್ ಎನ್ನಿಸದೆ ಇರದು. ಹಾಗೆಯೇ ಸಿನಿಮಾ ಎನ್ನುವ ಸೊಜಿಗಲ್ಲಿನ ಆಕರ್ಷಣೆ ಮೂಲಕ ಬೆಳ್ಳಿತೆರೆಗೆ ನಟನಾಗಿಬರುತ್ತಿದ್ದಾರೆ ಯುವ ಪ್ರತಿಭೆ ಜೈಸನ್. ಈತ ಡಾಕ್ಟರ್ ಸನ್. ಯು ರಮೇಶ್ ನಿರ್ದೇಶನದ ‘ ನಾನೊಂಥರ ‘ಚಿತ್ರದ ನಿರ್ಮಾಪಕಿ ಡಾ. ಜಾಕ್ಲಿನ್ ಫ್ರಾನ್ಸಿಸ್ ಅವರ ಪುತ್ರ.
ಹೊಸಬರ ಚಿತ್ರ ಎನ್ನುವುದರ ಜತೆಗೆ ಹಲವು ಕಾರಣಕ್ಕೆ ಸಿನಿಮಾ ಪ್ರೇಕ್ಷಕ ರಲ್ಲಿ ಕುತೂಹಲ ಹುಟ್ಟಿಸಿರುವ ‘ ನಾನೊಂಥರ ‘ ಚಿತ್ರವು ಇದೇ ವಾರ ತೆರೆಗೆ ಬರುತ್ತಿದೆ. ಇದೇ ಶುಕ್ರವಾರ( ಡಿ.18) ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ ಸರಿ ಸುಮಾರು 82 ಚಿತ್ರ ಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಯುವ ನಟ ಜೈಸನ್ ಸೆಕೆಂಡ್ ಹೀರೋ. ಅಂದ್ರೆ ನಾಯಕನ ಸಹೋದರನ ಪಾತ್ರ. ಈ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಇದೇ ಮೊದಲು ನಟನಾಗಿ ಕಾಣಿಸಿಕೊಳ್ಳು ತ್ತಿರುವ ನಿರ್ಮಾಪಕಿ ಜಾಕ್ಲಿನ್ ಫ್ರಾನ್ಸಿಸ್ ಪುತ್ರ ಜೈಸನ್ ಗೆ ಸಿನಿಮಾ ಅಂದ್ರೆ ಅಮ್ಮನೇ ಮೊದಲ ಪ್ರೇರಣೆ ಅಂತೆ.
ಅಮ್ಮನ ಒತ್ತಾಯಕ್ಕೆ ನಾನು ಅಂದು ಧ್ರುವತಾರೆ ಸಿನಿಮಾ ಮೂಲಕ ಬಾಲನಟಿಯಾಗಿ ಅಭಿನಯಿಸಿದ್ದೆ. ಅದೊಂದು ಒಳ್ಳೆಯ ಅನುಭವ.ದೊಡ್ಡ ಕಲಾವಿದರ ನಡುವೆ ಕಾಣಿಸಿಕೊಂಡೆ. ಮುಂದೆ ಮಲಯಾಳಂ ಚಿತ್ರದಲ್ಲೂ ಅಭಿನಯಿಸುವ ಅವಕಾಶ ಬಂತು.ಆದರೆ ಆಗ ನಮಗೆಸರಿಯಾದ ಮಾರ್ಗದರ್ಶನ ನೀಡುವವರು ಸಿಗಲಿಲ್ಲ.ಹಾಗಾಗಿ ಸಿನಿಮಾ ಬಿಟ್ಟು ಶಿಕ್ಷಣ ದ ಕಡೆ ಗಮನಕೊಟ್ಡೆ.ಹಾಗಾಗಿಯೇ ಡಾಕ್ಟರ್ ಆದೆ. ಈಗ ಸಿನಿಮಾ ಬಗ್ಗೆ ನಂಗೊಂದಿಷ್ಟು ಗೊತ್ತಿದೆ. ವೈದ್ಯೆಯಾಗಿ ಗೆದ್ದವಳಿಗೆ ಇಲ್ಲೋ ಗೆಲುವು ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಅದೇ ಕಾರಣಕ್ಕೆ ನಾನೊಂಥರ ಸಿನಿಮಾಮಾಡಿದ್ದೇನೆ. ಮುಂದೆ ಮಗನನ್ನು ಹೀರೋ ಆಗಿ ಪರಿಚಯಿಸಬೇಕೆನ್ನುವ ಆಸೆಇದೆ.
– ಡಾ.ಜಾಕ್ಲಿನ್ ಫ್ರಾನ್ಸಿಸ್,ನಿರ್ಮಾಪಕಿ
‘ ನಂಗೆ ನಟ ಆಗ್ಬೇಕು, ಸಿನಿಮಾ ಮಾಡ್ಬೇಕು ಅನ್ನೋದಕ್ಕೆ ಕಾರಣವೇ ಅಮ್ಮ. ಯಾಕಂದ್ರೆ ಅಮ್ಮ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು. ಡಾ. ರಾಜ್ ಕುಮಾರ್ ಅಭಿನಯದ ಧ್ರುವತಾರೆ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಅದಕ್ಕೆ ಕಾರಣ ನನ್ನಜ್ಜಿ. ಅವರಿಗೆ ಅಮ್ಮನಟಿ ಆಗ್ಬೇಕು ಅನ್ನೋ ಆಸೆ ಇತ್ತಂತೆ. ಅವರ ಒತ್ತಾಯಕ್ಕೆ ಅಮ್ಮ ಬಾಲನಟಿಯಾಗಿ ಅವತ್ತು ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ್ರಂತೆ. ಅಮ್ಮ ನಂಗೂ ಆಗಾಗ ಅದನ್ನುಹೇಳುತ್ತಿದ್ದರು. ಅದರ ಪ್ರಭಾವವೋ ಏನೋ ನಂಗೂ ನಟ ಆಗ್ಬೇಕು ಅನ್ನೋದು ಬಾಲ್ಯದಿಂದಲೇ ಶುರುವಾಯಿತು. ಈಗ ಆ ಕನಸು ನನಸಾಗುತ್ತಿದೆ. ಫಸ್ಟ್ ಟೈಮ್ ಬಣ್ಣ ಹಚ್ಚಿ ಪ್ರೇಕ್ಷಕ ರ ಮುಂದೆ ಬರುತ್ರಿರುವುದು ಒಂದೆಡೆ ಖುಷಿ, ಮತ್ತೊಂದೆಡೆ ಆತಂಕ ‘ಎನ್ನುತ್ತಾರೆ ಜೈಸನ್.
ಸದ್ಯಕ್ಕೆ ಈತ ಪದವಿ ವಿದ್ಯಾರ್ಥಿ. ಬೆಂಗಳೂರಿನ ಬಸವನಗುಡಿ ಬಿಎಂಎಸ್ ಕಾಲೇಜಿನಲ್ಲಿ ಫಸ್ಟ್ ಈಯರ್ ಡಿಗ್ರಿ ಓದುತ್ತಿದ್ದಾನೆ. ಆದರೆ ಓದಿನ ಜತೆಗೆಯೇ ಈಗ ನಾನೊಂಥರ ಚಿತ್ರದೊಂದಿಗೆ ನಟನಾಗಿಯೂ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾನೆ.ಮುಂದೆ ಹೇಂಗೆ ಅಂತ ಪ್ರಶ್ನಿಸಿದರೆ ನಂಗೆ ಎರಡು ಮುಖ್ಯ ಅಂತಾರೆ ಜೈಸನ್.
‘ ನಂಗೆ ಕೆರಿಯರ್ ಕೂಡ ಮುಖ್ಯ. ಸದ್ಯಕ್ಕೆ ಎಜುಕೇಶನ್ ಮುಗಿಯೋವರೆಗೂ ಎಜುಕೇಷನ್ ಜತೆಗೆಯೇ ಆ್ಯಕ್ಟಿಂಗ್ ಕಡೆ ಗಮನಹರಿಸುತ್ತಿದ್ದೇನೆ. ಅಮ್ಮನ ನಿರ್ಧಾರ ಕೂಡ ಹಾಗೆಯೇ ಇದೆ. ಏಜುಕೇಷನ್ ಮುಗಿದ ಮೇಲೆ ಫುಲ್ ಟೈಮ್ ಸಿನಿಮಾಕಡೆಯೇ ಯೋಚಿಸೋಣ ಅಂತಲೂ ಇದೆ. ಯಾಕಂದ್ರೆ ಅಮ್ಮ ಪ್ರಡ್ಯೂಸರ್. ಇವತ್ತಲ್ಲ ನಾಳೆ ಸಿನಿಮಾನಿರ್ಮಾಣ ಮಾಡೆ ಮಾಡುತ್ತಾರೆ. ನಾನು ಹಿರೋ ಆಗ್ಬೇಕು ಅನ್ನೋದು ನನಗಿರುವಷ್ಟೇ ಆಸೆ ಅವರಿಗೂ ಇದೆ. ಹಾಗಾಗಿ ನಿಧಾನವಾಗಿಯೇ ಎಜುಕೇಶನ್ ಮುಗಿಸಿಕೊಂಡುಸಿನಿಮಾಕ್ಕೆ ಫುಲ್ ಟೈಮ್ ಆಗಿ ಬರುತ್ತೇನೆ ಅಂತ ನಗು ಬೀರುತ್ತಾರೆ ಜೈಸನ್.
ಜೈಸನ್ ಗೆ ಇಗಷ್ಟೇ 18 ವರ್ಷ. ಕಟ್ಟು ಮಸ್ತು ದೇಹದೊಂದಿಗೆ ನೋಡುವುದಕ್ಕೂ ಹ್ಯಾಂಡ್ ಸಮ್ ಆಗಿದ್ದಾನೆ. ಅದಕ್ಕೆ ತಕ್ಕಂತೆ ಈಗ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರಂತೆ. ಹಾಗೆಯೇ ಸಿನಿಮಾ ಸಂಬಂಧಿತ ಎಲ್ಲಾ ತರಬೇತಿ ಕೂಡ ಶುರುವಾಗಿದೆಯಂತೆ.’ ಸಿನಿಮಾ ನಂಗೆ ಹೊಸದು. ತುಂಬಾ ಬ್ಲಾಂಕ್ ಆಗಿಯೇ ಮೊದಲ ಸಿನಿಮಾದಲ್ಲಿ ನಟಿಸಿದ್ದೇನೆ. ನಿರ್ದೇಶಕರು ಎಲ್ಲವನ್ನು ಹೇಳಿಕೊಟ್ಟರು. ಮುಂದೆ ಅಮ್ಮ ನನಗಾಗಿಯೇ ಸಿನಿಮಾ ಮಾಡೋಆಲೋಚನೆಯಲ್ಲಿದ್ದಾರೆ. ಆ ಹೊತ್ತಿಗೆ ನಾನು ಎಲ್ಲ ರೀತಿಯಲ್ಲೂ ರೆಡಿ ಆಗಿರೋಣ ಅಂತ, ಈಗ ಜಿಮ್ ಗೆ ಹೋಗುತ್ತಿದ್ದೇನೆ. ಫೈಟ್ ಅಭ್ಯಾಸವು ನಡೆದಿದೆ. ಇಷ್ಟರಲ್ಲಿಯೇ ಆ್ಯಕ್ಟಿಂಗ್ ತರಬೇತಿಯೂ ನಡೆಯಲಿದೆ. ಒಟ್ಟಿನಲ್ಲಿ ಹೀರೋ ಆಗಲು ಏನ್ ಬೇಕು ಅದನ್ನುಶ್ರದ್ದೆಯಿಂದ ಕಲಿಯಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದು ಜೈ ಸನ್, ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತಮಗೆ ನಟ ಯಶ್ ಅಂದ್ರೆ ಅಚ್ಚು ಮೆಚ್ಚು ಅಂತಾರೆ. ಅದೇ ರೀತಿ ಜೈಸನ್ ಕೂಡ ಬೆಳೆಯಲಿ ಎನ್ನುವುದು ‘ಸಿನಿಲಹರಿ ‘ಹಾರೈಕೆ.