Categories
ಸಿನಿ ಸುದ್ದಿ

ಹೊಸಬರ ಬ್ರೇಕ್‌ ಫೇಲ್ಯೂರ್‌;‌ ಮತ್ತೊಂದು ಹಾರರ್‌ ಸಿನಿಮಾ ರೆಡಿ

ಕನ್ನಡದಲ್ಲಿ ಹಾರರ್‌ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಇಲ್ಲಿ ಹೊಸಬರೇ ಹಾರರ್‌ ಅಂಶಗಳೊಂದಿಗೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಈಗ “ಬ್ರೇಕ್‌ ಫೇಲ್ಯೂರ್‌” ಸಿನಿಮಾ ಕೂಡ ಸೇರಿದೆ. ಹೌದು, ಇದು ಬಹುತೇಕ ಹೊಸಬರ ಚಿತ್ರ. ರಾಣಿಗಜ್ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ “ಬ್ರೇಕ್ ಫೇಲ್ಯೂರ್”‌ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಗೊಂಡಿವೆ.

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಒಂದು ಅಂಶ ಮಾಮೂಲಾಗಿರುತ್ತೆ. ಹುಡುಗರ ತಂಡವೊಂದು ಭಯಾನಕ ಕಾಡಿಗೆ ಹೋಗೋದು, ಅಲ್ಲಿ ಒಬ್ಬೊಬ್ಬರೇ ನಾಪತ್ತೆಯಾಗೋದು ಸಹಜ. ಅಲ್ಲಿ ಕಾಣದ ಕೈಯೊಂದು ಕೆಲಸ ಮಾಡುತ್ತೆ ಅನ್ನುವ ಸೂಚನೆ ಕೂಡ ಸಿಗುತ್ತಾ ಹೋಗುತ್ತೆ. ಇಂತಹ ಅಂಶವಿರುವ ಚಿತ್ರ “ಬ್ರೇಕ್‌ ಫೇಲ್ಯೂರ್‌”. ಬದುಕಿನ ದಾರಿಯಲ್ಲಿ ಭವಿಷ್ಯ ಎಂಬ ಬ್ರೇಕ್‌ ಫೇಲ್ಯೂರ್‌ ಆದಾಗ ಏನೆಲ್ಲಾ ಆಗಿಬಿಡುತ್ತೆ ಎಂಬ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ.

ಚಿತ್ರದುದ್ದಕ್ಕೂ ಕುತೂಹಲ ಸಾರವಿದೆ. ಪ್ರತಿ ದೃಶ್ಯದಲ್ಲೂ ಸಸ್ಪೆನ್ಸ್‌ ಥ್ರಿಲ್ಲರ್‌ ಅಂಶಗಳಿವೆ. ಬೆಚ್ಚಿ ಬೀಳಿಸುವ ಮುಖಗಳೂ ಇಲ್ಲುಂಟು. ಮುಖ್ಯವಾಗಿ, ಕಾಡು ಮೇಡು ಅಲೆಯುವ ತಂಡದ ಶ್ರಮ ವೀಡಿಯೋ ಸಾಂಗ್‌ನಲ್ಲಿ ನೋಡಬಹುದು. ಅದಿತ್ ನವೀನ್ ನಿರ್ದೇಶಕರು. ಅವರು ನಿರ್ದೇಶನದ ಜೊತೆಯಲ್ಲಿ ತೆರೆ ಮೇಲೂ ನಟಿಸಿದ್ದಾರೆ. ಅಬ್ದುಲ್ ಗಣಿ ತಾಳಿಕೋಟೆ ಅವರು ನಿರ್ಮಾಪಕರು. ಅವರ ಪ್ರಕಾರ ಹಣ ಇದ್ದಾಕ್ಷಣ ಸಿನಿಮಾ ಆಗೋದಿಲ್ಲ. ಒಗ್ಗಟ್ಟು, ಪ್ರೀತಿ, ಶ್ರಮ ಇದ್ದರೆ ಮಾತ್ರ ಒಂದೊಳ್ಳೆಯ ಚಿತ್ರ ಆಗುತ್ತೆ. ಅದು ಇಲ್ಲಾಗಿದೆ. ಸಣ್ಣ ಬಜೆಟ್‌ನಲ್ಲೇ ಅಚ್ಚುಕಟ್ಟಾದ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು.

ಇಡೀ ಚಿತ್ರತಂಡ ಕಾಡು ಮನುಷ್ಯರಂತೆ ಕಾಡು ಅಲೆದು ಶ್ರಮಿಸಿದ್ದಾರೆ. ಬಹುತೇಕ ದಾಂಡೇಲಿ ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ‌. ಮುಖ್ಯವಾಗಿ ನೀರಿಲ್ಲದೆ ಅಂತಹ ಕಾಡಿನಲ್ಲಿ ಬದುಕೋದೆ ಕಷ್ಟ ಅನ್ನೋದನ್ನು ತಿಳಿದು ಕೊಂಡೆವು‌. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿದೆ ಎನ್ನುತ್ತಾರೆ ಹೀರೋ ಅದಿತ್ ನವೀನ್. ಉಗ್ರಂ ರವಿ ಕೂಡ ಈ ವೇಳೆ ಮಾತನಾಡಿ, “ಕಾಡಲ್ಲಿ ಚಿತ್ರೀಕರಣ ಮಾಡುವ ಸಂದರ್ಭ ತುಂಬಾನೇ ಭಯವಾಗುತ್ತಿತ್ತು. ಕಾರಣ, ಕಾಡು ಪ್ರಾಣಿಗಳು ರಾತ್ರಿ ವೇಳೆ ನೀರು ಕುಡಿಯಲು ಬರುತ್ತಿದ್ದವು. ಅದನ್ನು ಕಂಡು ಭಯವಾಗಿದ್ದು ನಿಜ. ಒಟ್ಟಾರೆ ಒಳ್ಳೆಯ ಸಿನಿಮಾ ಮಾಡಿದ್ದೇವೆʼ ಎಂಬುದು ಉಗ್ರಂ ರವಿ ಮಾತು.

Categories
ಸಿನಿ ಸುದ್ದಿ

ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಲಹರಿ ವೇಲು !

ರಾಜಕೀಯಕ್ಕೂ ಸಿನಿಮಾಕ್ಕೂ ಅತೀವ ನಂಟು. ಕನ್ನಡಕ್ಕಿಂತ ತಮಿಳುನಾಡಿನಲ್ಲಿ ಇದು ಇನ್ನಷ್ಟು ಜಾಸ್ತಿ ಅನ್ನೋದನ್ನು ವಿವರಿಸಿ ಹೇಳಬೇಕಿಲ್ಲ. ಅಲ್ಲೀಗ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಕೂಡ ಚುನಾವಣಾ ಪ್ರಚಾರದ ಅಬ್ಬರ ಆರಂಭಿಸಿದ್ದಾರೆ. ಹೌದು, ಲಹರಿ ವೇಲು ಅವರೀಗ ತಮಿಳುನಾಡು ಚುನಾವಣಾ ಪ್ರಚಾರದಲ್ಲಿದ್ದಾರೆ. ಮಧುರೈ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ವೇಲು ಅವರಿಗೆ ಉಸ್ತುವಾರಿಯ ಜವಾಬ್ದಾರಿ ನೀಡಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವರು ಪಣ ತೊಟ್ಟಿದ್ದಾರಂತೆ. ” ಚುನಾವಣೆ ಘೋಷಣೆಯಾದ ನಂತರದ ದಿನಗಳಲ್ಲಿ ಪಕ್ಷವು ನನಗೆ ಈ ಜವಾಬ್ದಾರಿ ನೀಡಿದೆ. ಪಕ್ಷದ ಉಸ್ತುವಾರಿ ಸಿ.ಟಿ. ರವಿ ಅವರು ನನ್ನನ್ನು ಗುರುತಿಸಿ ಈ ಕೆಲಸ ನೀಡಿದ್ದಾರೆ. ನಾನಂತೂ ಇದನ್ನು ತುಂಬಾ ಖುಷಿಯಿಂದಲೇ ವಹಿಸಿಕೊಂಡಿದ್ದೇನೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬಂದಾಗ ಅವರ ಬದ್ಧತೆಕಂಡು ಖುಷಿ ಆಯಿತುʼ ಅಂತ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಸಿನಿ ಲಹರಿಗೆ ಪ್ರತಿಕ್ರಿಯಿಸಿದರು.

ದೊಡ್ಡ ಜನಪ್ರಿಯತೆಯ ನಡುವೆಯೂ ಲಹರಿ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಅವರು ರಾಜಕೀಯದಿಂದ ತುಂಬಾನೆ ದೂರ ಇದ್ದವರು. ಆದರೆ ಈಗ ಅವರಿಗೂ ರಾಜಕಾರಣ ಬೇಕಾಗಿದೆ. ಅದಕ್ಕಂತಲೇ ಕಳೆದ ವಿಧಾನ ಸಭಾ ಚುನಾವಣೆ ಹೊತ್ತಿಗೆ ತಮ್ಮ ಮೂಲ ನೆಲೆ ಬೆಂಗಳೂರಿನ ಚಾಲರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆನ್ನುವ ಸುದ್ದಿ ಜೋರಾಗಿತ್ತು. ಕೊನೆಗದು ಏನಾಯ್ತೋ ಗೊತ್ತಿಲ್ಲ, ವೇಲು ಅವರಿಗೆ ಟಿಕೆಟ್‌ ಕೈ ತಪ್ಪಿತು. ಆದರೂ ಅವರ ರಾಜಕೀಯದಿಂದ ಹೊರ ಬರಲಿಲ್ಲ. ಟಿಕೆಟ್‌ ಸಿಗಲಿಲ್ಲ ಅಂತ ಬೇಸರ ಪಡದೆ, ಬಿಜೆಪಿಯ ಕಾರ್ತಕರ್ತರಾಗಿಯೇ ಉಳಿದುಕೊಂಡಿದ್ದರು. ಈಗ ಅದಕ್ಕೆ ಫಲ ಸಿಕ್ಕಿದೆ. ತಮಿಳುನಾಡು ಚುನಾವಣೆಯಲ್ಲಿ ಲಹರಿ ವೇಲು ಸಕ್ರಿಯವಾಗಿ ಪಾಲ್ಗೊಂಡಿದ್ದು, ಚುನಾವಣೆ ಮುಗಿದ ನಂತರವೇ ಬೆಂಗಳೂರಿಗೆ ವಾಪಾಸ್‌ ಆಗುವುದು ಅಂತಿದ್ದಾರೆ ಲಹರಿ ವೇಲು.

Categories
ಸಿನಿ ಸುದ್ದಿ

ಅದ್ಯಾಕೋ ಮನಸು ಭಾರವಾಯಿತು ಅಂತ ಅಪ್ಪು ಅಂದಿದ್ದೇಕೆ ? ಅಪ್ಪು ಭಾವುಕರಾಗುವಂತಹ ಘಟನೆ ಆಗಿದ್ದಾರೂ ಏನು?

ನಟ ಪುನೀತ್‌ ರಾಜ್‌ ಕುಮಾರ್‌ ಇವತ್ತು ಮಂತ್ರಾಲಯಕ್ಕೆ ಭೇಟಿ ಕೊಟ್ಟಿದ್ದರು. ಅವರೊಂದಿಗೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ಸೇರಿದಂತೆ ಇಡೀ “ಯುವರತ್ನʼ ಚಿತ್ರ ತಂಡವೇ ಇತ್ತು. ಎಲ್ಲದಕ್ಕಿಂತ ವಿಶೇಷ ಅಂದ್ರೆ, ಅಪ್ಪು ಅವರ ಮಂತ್ರಾಲಯ ಭೇಟಿಯಲ್ಲಿ ಪ್ರಮುಖವಾಗಿ ಕಾಣಸಿಕೊಂಡಿದ್ದು ಹಿರಿಯ ನಟ ನವರಸ ನಾಯಕ ಜಗ್ಗೇಶ್.‌ ಮಂತ್ರಾಲಯಕ್ಕೂ ರಾಜ್‌ ಕುಟುಂಬಕ್ಕೂ ಅಗಾದ ನಂಟು. ಅದೊಂಥರ ಅವಿನಾಭಾವ ಬೆಸುಗೆ. ವರನಟ ರಾಜ್‌ ಕುಮಾರ್‌ ಅವರಿಗೆ ಮಂತ್ರಾಲಯದ ರಾಯರು ಅಂದ್ರೆ ಪಂಚ ಪ್ರಾಣ. ಹಾಗೆಯೇ ಅವರ ಇಡೀ ಕುಟುಂಬಕ್ಕೂ ಮಂತ್ರಾಲಯದ ರಾಯರು ಅಂದ್ರೆ ಅತೀವ ಶ್ರದ್ಧಾ ಭಕ್ತಿ. ಜಗ್ಗೇಶ್‌ ಅವರಿಗೂ ಕೂಡ ಮಂತ್ರಾಲಯದ ರಾಯರ ಮೇಲೆ ಅತೀವ ನಂಬಿಕೆ. ಹಾಗೆಯೇ ರಾಯರ ಪರಮ ಶಿಷ್ಯ ಅವರು. ಅಂತೆಯೇ ಇವತ್ತು ಮಂತ್ರಾಲಯದ ರಾಯರ ಸನ್ನಿಧಾನಕ್ಕೆ ಅಪ್ಪು, ಜಗ್ಗೇಶ್‌ ಅವರೊಂದಿಗೆ ಹೋಗಿದ್ದರು.

ಇದೊಂಥರ ಕಾಕತಾಳೀಯ. “ರಾಬರ್ಟ್‌ʼ ಚಿತ್ರದ ಸಕ್ಸಸ್‌ ಆದ ಬೆನ್ನಲೇ ನಟ ದರ್ಶನ್‌ ಕೂಡ ಮಂತ್ರಾಲಯಕ್ಕೆ ಹೋಗಿದ್ದರು. ಅಲ್ಲಿ ರಾಯರ ದರ್ಶನದೊಂದಿಗೆ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಹಾಗೆಯೇ ದರ್ಶನ್‌, ಮಂತ್ರಾಲಯದಲ್ಲಿನ ಗೋಶಾಲೆಗೂ ಹೋಗಿ ಅಲ್ಲಿನ ಗೋವುಗಳನ್ನು ಮೈದಡವಿ ಬಂದಿದ್ದು ನಿಮಗೂ ಗೊತ್ತು. ಆ ನಂತರವೀಗ” ಯುವರತ್ನʼ ಚಿತ್ರದ ಸಕ್ಸಸ್‌ ಬೆನ್ನಲೇ ಅಪ್ಪು ಕೂಡ ಮಂತ್ರಾಲಯಕ್ಕೆ ಭೇಟಿ ಕೊಟ್ಟರು.ಈಗಾಗಲೇ ಅಲ್ಲಿ ಚಿತ್ರತಂಡಕ್ಕೆ ರಾಯರ ದರ್ಶನವೂ ಅಗಿದೆ. “ಯುವರತ್ನʼ ತಂಡವನ್ನು ರಾಯರು ಆಶೀರ್ವದಿಸಿ, ಹಾರೈಸಿದ್ದಾರೆ. ಅಲ್ಲಿಗೆ ಯವರತ್ನ ತಂಡ ಪುನೀತಗೊಂಡಿದೆ.

ಅಪ್ಪು ತಮ್ಮ ತಂಡದೊಂದಿಗೆ ಅತ್ತ ರಾಯರ ದರ್ಶನ ಪಡೆಯಲು ಮಂತ್ರಾಲಯಕ್ಕೆ ಹೊರಟ ಸಂದರ್ಭದಲ್ಲೇ ಒಂದು ಭಾವುಕ ಘಟನೆಗೆ ಪ್ರತಿಕ್ರಿಯಿಸಿದ್ದರು. ಅ ಸುದ್ದಿ ಕೇಳಿ ಅದ್ಯಾಕೋ ಮನಸು ಭಾರವಾಯಿತು ಅಂತ ಟ್ವಿಟ್‌ ಮಾಡಿದ್ದರು. ಅಷ್ಟಕ್ಕೂ ಕಾರಣವೇನು ?ಅವರ ಮನಸಿಗೆ ನೋವಾಗುವಂತಹ ಘಟನೆ ಇಲ್ಲಿ ನಡೆದಿದ್ದಾರೂ ಏನು? ಇದೇ ಅದಕ್ಕೆ ಕಾರಣವೂ ಇದೆ. ಅವರಿಗೆ ಮನಸ್ಸು ಭಾರವಾಗುವಂತಹ ಘಟನೆ ಭಾನುವಾರ ಮೈಸೂರಿನಲ್ಲಿ ನಡೆದಿತ್ತು. ಅದಕ್ಕವರು ಇಂದು ಅದ್ಯಕೋ ಮನಸು ಭಾರವಾಯಿತು ಅಂತ ಟ್ವಿಟ್‌ ಮಾಡಿದ್ದು.ಅರಮನೆ ನಗರಿ ಮೈಸೂರಿನಲ್ಲೊಂದು ಭಾನುವಾರ ಭಾವುಕ ಘಟನೆ ನಡೆಯಿತು. ಮೃತಪಟ್ಟ ಮಗನ ಫೊಟೋ ಇಟ್ಟುಕೊಂಡು ಪೋಷಕರು ‘ಯುವರತ್ನ’ ಸಿನಿಮಾ ನೋಡಿದ್ದರು. ಮೈಸೂರಿನ ಡಿ ಆರ್ ಸಿ‌ ಮಲ್ಟಿಫ್ಲೆಕ್ಸ್‌ ಅಂತಹದೊಂದು ಭಾವುಕ ಘಟನೆಗೆ ಸಾಕ್ಷಿ ಆಗಿತ್ತು. ಆ ಸುದ್ದಿ ಕೇಳಿ ಅಪ್ಪು ದಿಗ್ಬ್ರಾಂತರಾಗಿದ್ದರು. ರಾಯರ ದರ್ಶನಕ್ಕೆ ಅಂತ ಮಂತ್ರಾಲಯಕ್ಕೆ ಹೊರಟಿದ್ದ ಅಪ್ಪು, ತಕ್ಷಣಕ್ಕೆ ಆ ಘಟನೆಗೆ ಪ್ರತಿಕ್ರಿಯೆ ನೀಡಲು ಆಗಿರಲಿಲ್ಲ. ರಾಯರ ದರ್ಶನ ಪಡೆದು ವಾಪಾಸ್‌ ಹಿಂದಿರುಗುವಾಗ ಆ ಘಟನೆಗೆ ಪ್ರತಿ ಕ್ರಿಯಿಸಿ ಒಂದು ಟ್ವಿಟ್‌ ಮಾಡಿದರು. ಹಾಗಾದ್ರೆ ಅವರ ಟ್ವಿಟ್‌ ವಿವರ ಏನು? ಇಲ್ಲಿದೆ ನೋಡಿ.

ಮೈಸೂರಿನ ಮುರುಳಿಧರ್‌ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್‌ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ, ನನ್ನ ಮನಸು ಭಾರವಾಯಿತು. ಬಾಲಕ ಹರಿಕೃಷ್ಣನ್‌ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಅಪ್ಪು ತಮ್‌ ಟ್ವಿಟ್‌ ನಲ್ಲಿ ಹೇಳಿಕೊಂಡಿದ್ದಾರೆ. ಹಾಗಾದ್ರೆ ಈ ಹರಿಕೃಷ್ಣನ್‌ ಯಾರು ಗೊತ್ತಾ? ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರನೇ ಈ ಹರಿಕೃಷ್ಣನ್. ಪುಟ್ಟ ಹುಡುಗ. ಅಪ್ಪು ಅವರ ಅಪ್ಪಟ ಅಭಿಮಾನಿ. ಪುನೀತ್‌ ಅವರ ಸಿನಿಮಾ, ಡಾನ್ಸ್‌ ಅಂದ್ರೆ ವಿಪರೀತ ಕ್ರೇಜ್‌ ಅಂತೆ. ಸಿನಿಮಾವೋ ಅಥವಾ ಮನೆಯಲ್ಲಿ ಟಿವಿ ಮೇಲೋ ಪುನೀತ್‌ ರಾಜ್‌ ಕುಮಾರ್‌ ಕಾಣಿಸಿಕೊಂಡ್ರೆ, ಆತನಿಗೆ ಎಲ್ಲಿಲ್ಲದ ಖುಷಿ ಅಂತೆ. ಅಷ್ಟೇ ಅಲ್ಲ, ಅಪ್ಪು ಅಭಿನಯದ ಯುವರತ್ನ ನೋಡಲೇ ಬೇಕು ಅಂತ ಪಣ ತೊಟ್ಟಿದ್ನಂತೆ. ಇಂತಿಪ್ಪ ಬಾಲಕ ಕಳೆದ ಮೂರು ತಿಂಗಳ ಹಿಂದಷ್ಟೇ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ್ದ. ಯುವರತ್ನ ಸಿನಿಮಾ ನೋಡುವ ಆತನ ಆಸೆ ಕೊನೆಗೂ ಕೈ ಗೂಡಿರಲಿಲ್ಲ.

ಮಗ ಹೋದ ಅಂತ ಅತೀವ ದುಖದಲ್ಲಿದ್ದ ಮುರುಳಿಧರ್‌ ಕುಟುಂಬ ಈ ಕ್ಷಣಕ್ಕೆ ಕಾಯುತ್ತಿತಂತೆ. ಮಗನ ಆಸೆ ಈಡೇರಿಸಬೇಕಾದರೆ ಯುವರತ್ನ ರಿಲೀಸ್‌ ಆಗಬೇಕು. ಮಗನ ಜತೆಗೆ ಸಿನಿಮಾ ನೋಡಬೇಕು ಅಂತ ಕಾಯಿತ್ತದ್ದರಂತೆ. ಅಂತೆಯೇ ಭಾನುವಾರ ಮುರುಳಿಧರ್‌ ಕುಟುಂಬ ಸಮೇತ ಯುವರತ್ನ ಚಿತ್ರ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದರು. ತಮ್ಮಿಂದ ದೂರವಾಗಿರೋ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಅಪ್ಪ-ಅಮ್ಮ, ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮಗನ ಆಸೆಯಂತೆ ಪೋಷಕರು ಆತನ ಫೋಟೋದೊಂದಿಗೆ ‘ಯುವರತ್ನ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇದು ನಿನ್ನೆ ದೊಡ್ಡ ಸುದ್ದಿಯೂ ಅಗಿತ್ತು. ಅದಕ್ಕೀಗ ಅಪ್ಪು ಪ್ರತಿಕ್ರಿಯಿಸಿ, ಮನಸು ಭಾರವಾಯಿತು ಅಂದಿದ್ದಾರೆ. ಸಿನಿಮಾ, ಭಾವುಕತೆ, ಅಭಿಮಾನ ಅಂದ್ರೆ ಇದೆ ಅಲ್ವಾ?

Categories
ಸಿನಿ ಸುದ್ದಿ

ನಂದಕಿಶೋರ್ ಹೊಸ ಚಿತ್ರಕ್ಕೆ ಶ್ರೇಯಸ್‌ ಹೀರೋ; ಹೆಸರಿಡದ ಚಿತ್ರದಲ್ಲಿ ಕೆ.ಮಂಜು ಪುತ್ರ

ನಿರ್ದೇಶಕ ನಂದಕಿಶೋರ್ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ನಂದಕಿಶೋರ್‌ ಅವರಿಗೆ ಸ್ಟಾರ್‌ ಸಿನಿಮಾಗಳನ್ನು ಮಾಡೋದು ಗೊತ್ತು. ಗೆಲ್ಲೋದು ಗೊತ್ತು. ಹಾಗೆಯೇ ಹೊಸಬರ ಸಿನಿಮಾಗಳ ಮೂಲಕ ಸದ್ದು ಮಾಡೋದು ಕೂಡ ಗೊತ್ತು. ಈಗಾಗಲೇ ಸಾಬೀತು ಮಾಡಿದ್ದಾರೆ ಕೂಡ. ಅವರೀಗ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ.

ಶ್ರೇಯಸ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಚಿತ್ರ ಅನೌನ್ಸ್‌ ಮಾಡಲಾಗಿದೆ. ಆದರೆ, ಈ ಸಿನಿಮಾ ಯಾವಾಗ ಅನ್ನೋದು ಗೊತ್ತಿಲ್ಲ. ಈಗ ಸದ್ಯ ಶ್ರೇಯಸ್‌ “ವಿಷ್ಣುಪ್ರಿಯ” ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಈಗ ರಿಲೀಸ್‌ಗೆ ರೆಡಿಯಾಗಿದೆ. ಅತ್ತ ನಂದಕಿಶೋರ್‌ ಕೂಡ “ಪೊಗರು” ಸಿನಿಮಾ ನಂತರ ಧ್ರುವ ಸರ್ಜಾ ಅವರಿಗೆ ಮತ್ತೊಂದು ಸಿನಿಮಾ ಮಾಡಲು ಅಣಿಯಾಗಿದ್ದಾರೆ. ಆದರೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತೇ ಅನ್ನೋದು ಮಾತ್ರ ಗೌಪ್ಯ.

ಯುಗಾದಿ ಹಬ್ಬದ ಬಳಿಕ ಈ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಗುಜ್ಜಲ್ ಟಾಕೀಸ್ ಬ್ಯಾನರ್‌ನಲ್ಲಿ ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡುತ್ತಿದ್ದಾರೆ. ಇವರು ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ “ಟಗರು” ಚಿತ್ರದಲ್ಲಿ ‌ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ಸದ್ಯಕ್ಕೆ “ಪ್ರೊಡಕ್ಷನ್ ನಂ ೧” ಹೆಸರಲ್ಲಿ ಚಿತ್ರದ ಚಟುವಟಿಕೆಗಳು ಆರಂಭವಾಗಿದ್ದು, ಸದ್ಯದಲ್ಲೇ ಶೀರ್ಷಿಕೆ ಅನಾವರಣಗೊಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಧರ್ಮವಿಶ್ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

Categories
ಸಿನಿ ಸುದ್ದಿ

ಕಣ್ಣೇ ಅಧಿರಿಂದಿ ಅಂತ ಹಾಡಿದ ಗಾಯಕಿ ಮಂಗ್ಲಿ ಕನ್ನಡಕ್ಕೆ ಬಂದ್ರು ; ಕರಿಯ ಐ ಲವ್‌ ಯು ಸಿನಿಮಾಗೆ ಧ್ವನಿ ಕೊಟ್ರು…

“ಕಣ್ಣೇ ಅಧಿರಿಂದಿ…
ಬಹುಶಃ ಈ ಹಾಡು ಕೇಳದವರಿಲ್ಲ. ಇಂಥದ್ದೊಂದು ಸೂಪರ್‌ ಹಿಟ್‌ ಹಾಡಿಗೆ ಧ್ವನಿಯಾಗಿದ್ದು ಗಾಯಕಿ ಮಂಗ್ಲಿ. ದರ್ಶನ್‌ ಅಭಿನಯದ “ರಾಬರ್ಟ್”‌ ಚಿತ್ರದ ತೆಲುವು ಅವರತಣಿಕೆಗೆ “ಕಣ್ಣೇ ಅಧಿರಿಂದಿ..” ಹಾಡು ಹಾಡಿ ಕನ್ನಡಿಗರ ಮನವನ್ನೂ ಗೆದ್ದಿದ್ದ ಮಂಗ್ಲಿ, ಕನ್ನಡದಲ್ಲಿ ಹಾಡೋದು ಯಾವಾಗ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಂಗ್ಲಿ ಒಳ್ಳೆಯ ಗಾಯಕಿ. ಇವರ ಈ ಗಾಯನದ ಹಿಂದೆ ದೊಡ್ಡ ಕಥೆಯೇ ಇದೆ. ತಮ್ಮ ಕಂಠದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಂಗ್ಲಿ, “ರಾಬರ್ಟ್” ಚಿತ್ರಕ್ಕೆ ಹಾಡಿದ ಆ ಹಾಡು, ನಿಜಕ್ಕೂ ದೊಡ್ಡ ಹೆಸರು ತಂದುಕೊಟ್ಟಿದೆ. ಇನ್ನು, “‘ರಾಬರ್ಟ್” ಸಿನಿಮಾದ ತೆಲುಗು ವರ್ಷನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲೂ ಮಂಗ್ಲಿ ವೇದಿಕೆಯಲ್ಲಿ “ಕಣ್ಣೇ ಅಧಿರಿಂದಿ” ಹಾಡು ಹಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು.

ಈಗಲೂ ಈ ಹಾಡು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇಂಥದ್ದೊಂದು ಹಾಡು ಹಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮಂಗ್ಲಿ, ಕನ್ನಡದಲ್ಲೊಂದು ಹಾಡು ಹಾಡಿದ್ದಾರೆ. “ಕರಿಯಾ ಐ ಲವ್ ಯು” ಎಂಬ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ ಕೂಡ.

ಅಂದಹಾಗೆ, ಚಿತ್ರದ “ಬಿಟ್ ಬಂದ್ ಹಳ್ಳಿಯಿಂದ ಬಿಟ್ಯಾಕ್ ಬಂದೆ…” ಎನ್ನುವ ಹಾಡನ್ನು ಹಾಡಿದ್ದಾರೆ. ಲೋಕೇಶ್‌ ಸಂಗೀತ ನೀಡಿರುವ ಈ ಹಾಡಿಗೆ ಗಾಯಕ ನವೀನ್ ಸಜ್ಜು ಕೂಡ ಸಾಥ್‌ ನೀಡಿದ್ದಾರೆ. ಚಿತ್ರದ ನಾಯಕ ಮಂಜುನಾಥ್‌, ಈ ಗಾಯಕಿಯನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಈಗಾಗಲೇ ಸಾಂಗ್‌ ರೆಕಾರ್ಡಿಂಗ್ ಮುಗಿದಿದೆ. ಹಾಡು ಕೂಡ ಚೆನ್ನಾಗಿ ಮೂಡಿಬಂದಿರುವ ಖುಷಿ ಚಿತ್ರತಂಡಕ್ಕಿದೆ.

Categories
ಸಿನಿ ಸುದ್ದಿ

ಟೀಸರ್‌ ನಂತರ ಮೇಕಿಂಗ್ ವಿಡಿಯೋ ಹಾಗೂ ಟೈಟಲ್‌ ಸಾಂಗ್ ಲಾಂಚ್‌ ಮೂಲಕ ಸೌಂಡ್‌ ಮಾಡಲು ಹೊರಟ ಕಟಿಂಗ್‌ ಶಾಪ್‌ ಚಿತ್ರ ತಂಡ

ಟೀಸರ್‌ ಮೂಲಕ ಸ್ಯಾಂಡಲ್‌ ವುಡ್‌ ನಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಹೊಸಬರʼ ಕಟಿಂಗ್‌ ಶಾಪ್‌ʼ ಸಿನಿಮಾ ಈಗ ಇನ್ನೊಂದು ಹಂತದಲ್ಲಿ ಸುದ್ದಿ ಮಾಡಲು ಹೊರಟಿದೆ. ರಿಲೀಸ್‌ ಪೂರ್ವ ಪ್ರಚಾರದ ಅಂಗವಾಗಿ ಈಗ ಚಿತ್ರ ತಂಡ ಎಪ್ರಿಲ್‌ 7 ರಂದು ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್ ಲಾಂಚ್‌ ಗೆ ಮುಂದಾಗಿದೆ. ಅಂದು ಸಂಜೆ 6 ಗಂಟೆಗೆ ಪ್ರತಿಷ್ಟಿತ ಪಿಆರ್‌ ಕೆ ಆಡಿಯೋ ಸಂಸ್ಥೆಯ ಮೂಲಕ ಚಿತ್ರದ ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್‌ ಹೊರ ಬರುತ್ತಿದೆ. ಯುವ ಪ್ರತಿಭೆ ಪವನ್‌ ಭಟ್‌ ನಿರ್ದೇಶನ ಈ ಚಿತ್ರದಲ್ಲಿ ಪ್ರವೀಣ್‌, ದೀಪಕ್‌ ಭಟ್‌, ಹಾಗೂ ನಟಿ ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಗೆಯೇ ಅಭಿಷೇಕ್‌ ಸಾವಳಗಿ, ನವೀನ್‌ ಕೃಷ್ಣ, ಹಿರಿಯ ನಿರ್ದೇಶಕರಾದ ದೊರೆ ಭಗವಾನ್‌, ಓಂ ಪ್ರಕಾಶ್‌ ರಾವ್‌, ವತ್ಸಲಾ ಮೋಹನ್ ಕೂಡ ಚಿತ್ರದಲ್ಲಿದ್ದಾರೆ. ಹಳೇ ಬೇರು ಹೊಸ ಚಿಗುರು ಎನ್ನುವ ಹಾಗೆ ಚಿತ್ರ ತಂಡ ಹಳಬರೊಂದಿಗೆ ಹೊಸಬರನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ‌

ಗುರಪುರ ಕೆ. ಉಮೇಶ್‌ ಹಾಗೂ ಕೆ. ಗಣೇಶ ಐತಾಳ್‌ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕಟಿಂಗ್‌ ಶಾಪ್‌ ಎನ್ನುವ ಚಿತ್ರದ ಶೀರ್ಷಿಕೆಯೇ ಇಲ್ಲಿ ಕೂತೂಹಲಕಾರಿ ಆಗಿದೆ. ಟೈಟಲ್‌ ನೋಡಿದಾಕ್ಷಣ ಇದು ಯಾವುದರ ಕುರಿತ ಸಿನಿಮಾ ಅಂತಂದುಕೊಳ್ಳುವುದು ಕೂಡ ಅಷ್ಟೇ ಸಹಜ. ಆದರೆ ಇದು ಒಬ್ಬ ಸಿನಿಮಾ ಸಂಕಲನಕಾರನ ಕುರಿತ ಸಿನಿಮಾ. ಈಗಾಗಲೇ ಕನ್ನಡದಲ್ಲಿ ಡೈರೆಕ್ಟರ್‌ ಕುರಿತು ಸಿನಿಮಾ ಬಂದಿದೆ. ಹಾಗೆಯೇ ಸ್ಟಾರ್‌ ಕುರಿತು ಸಿನಿಮಾ ಬಂದಿದೆ. ಆದರೆ ಫಸ್ಟ್‌‌ ಟೈಮ್‌ ಒಬ್ಬ ಸಂಕಲನಕಾರನ ಕುರಿತು ಸಿನಿಮಾ ಮಾಡಿದ್ದಾರೆ ಯುವ ನಿರ್ದೇಶಕ ಪವನ್‌ ಭಟ್.‌ ಟೀಸರ್‌ ನಂತರವೀಗ ಚಿತ್ರ ತಂಡ ಮೇಕಿಂಗ್‌ ವಿಡಿಯೋ ಹಾಗೂ ಟೈಟಲ್‌ ಸಾಂಗ್‌ ಮೂಲಕ ಸೌಂಡ್‌ ಮಾಡಲು ಹೊರಟಿದೆ.

Categories
ಸಿನಿ ಸುದ್ದಿ

ಕರಾವಳಿ ಪ್ರತಿಭೆಗಳ ಹೊಸ ಪೆನ್ಸಿಲ್ ಬಾಕ್ಸ್, ಏಪ್ರಿಲ್‌ 9 ಕ್ಕೆ ರಾಜ್ಯಾದ್ಯಂತ ಗ್ರಾಂಡ್‌ ‌ ರಿಲೀಸ್‌

“ಪೆನ್ಸಿಲ್‌ ಬಾಕ್ಸ್‌ʼ ಹೆಸರಿನಲ್ಲೊಂದು ಮಕ್ಕಳ ಸಿನಿಮಾ ರೆಡಿಯಾಗಿದೆ. ದೃಶ್ಯ ಮೂವೀಸ್ ಬ್ಯಾನರಿನಲ್ಲಿ ಇದು ನಿರ್ಮಾಣಗೊಂಡಿದೆ. ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆಯ ವಸ್ತು ಸ್ಥಿತಿ, ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಬೇಕು ಎಂಬ ಬಯಕೆ. ಇದಾವುದರ ಪರಿವೇ ಇಲ್ಲದೆ ಮುಗ್ಧ ಮಕ್ಕಳ ಮುಗ್ಧ ಪ್ರಪಂಚ, ನಗು ತರಿಸುವ ಹಾಸ್ಯ ಸನ್ನಿವೇಶಗಳೊಂದಿಗೆ ಸಾಗುವ ಕಥೆ ಇದಾಗಿದೆಯಂತೆ. ಸಿನಿಮಾ ಈಗ ರಿಲೀಸ್‌ ಗೆ ರೆಡಿ ಆಗಿದೆ. ಅ ನಿಟ್ಟಿನಲ್ಲಿಯೇ ಚಿತ್ರ ತಂಡ ಸಿದ್ಧತೆ ನಡೆಸಿದೆ. ಅದೇ ನೆಪದಲ್ಲಿ ಚಿತ್ರದ ತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.

ಈ ಚಿತ್ರಕ್ಕೆ ದಯಾನಂದ ಎಸ್‌ ರೈ ಬೆಟ್ಟಂಪಾಡಿ ನಿರ್ಮಾಪಕರು. ರಝಾಕ್‌ ಪತ್ತೂರು ಇದರ ನಿರ್ದೇಶಕರು. ಬಹುತೇಕ ಹೊಸಬರು. ಒಂದೊಳ್ಳೆಯ ಕಥೆಯ ಮೂಲಕ ಮಕ್ಕಳ ಸಿನಿಮಾ ಮಾಡ್ಬೇಕು ಅಂತ ಚಿತ್ರರಂಗಕ್ಕೆ ಕಾಲಿಟ್ಟಿದೆ. ತುಳುನಾಡಿನ ಹಾಸ್ಯ ಕಲಾವಿದರ ಕನ್ನಡದ ಝಲಕ್ ಇಲ್ಲಿದೆ. ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮತ್ತು ನವರಸ ರಾಜ ಭೋಜರಾಜ ವಾಮಂಜೂರು ಅವರ ಪಂಚಿಂಗ್ ಡೈಲಾಗ್ ಈ ಚಿತ್ರದಲ್ಲಿದೆ. ಕಾಮಿಡಿ ಅನ್ನೋದಕ್ಕಿಂತ ಕಥಾ ವಸ್ತು ಇಲ್ಲಿ ಗಮನಾರ್ಹವಾಗಿದೆ. ” ಕಥೆ ಇಲ್ಲಿ ಪ್ರಮುಖ. ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸದಲ್ಲೇ ಮಕ್ಕಳು ನೊಂದು ಹೋಗುತ್ತಿದ್ದಾರೆ. ಅದೆಲ್ಲ ಹೇಗೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ʼ ಅಂತ ನಿರ್ದೇಶಕ ರೈಝಾಕ್‌ ಪುತ್ತೂರು ಹೇಳಿದರು.

ಚಿತ್ರದಲ್ಲಿ ಡಾ. ಅಭಿಷೇಕ್ ರಾವ್ , ವೈಷ್ಣವಿ ರವಿ, ಕ್ಷಿತಿ ಕೆ.ಜನ್ಯ ಪ್ರಸಾದ್, ಅಪೇಕ್ಷಾ ಪೈ, ಶಿವಾನಿ ಕೊಪ್ಪ ಮುಂತಾದವರು ಹಾಡಿದ್ದಾರೆ. ದೀಕ್ಷಾ ಡಿ‌ ರೈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮಂಗಳೂರು, ಕುಂದಾಪುರ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಎಪ್ರಿಲ್‌ ೯ ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Categories
ಸಿನಿ ಸುದ್ದಿ

ನಟಿ ಎಸ್ಟರ್‌ ನರೋನ್ಹಾ ಈಗ ಸಂಗೀತ ನಿರ್ದೇಶಕಿ! ದಿ ವೇಕೆಂಟ್‌ ಹೌಸ್‌ ಮೂಲಕ ಡೈರೆಕ್ಟರ್‌ ಎನಿಸಿಕೊಂಡ ಶ್ರೇಯಸ್‌ ಚಿಂಗ

ಸಿನಿಮಾ ಅನ್ನೋದೇ ಹಾಗೆ. ಇಲ್ಲಿ ಒಮ್ಮೆ ಎಂಟ್ರಿಯಾದರೆ ಮುಗೀತು. ಒಂದು ವಿಭಾಗದಲ್ಲಿ ಕಲಿತವರು ಮೆಲ್ಲನೆ ಒಂದೊಂದೇ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮೇಲೇಳಬೇಕು, ಗುರುತಿಸಿಕೊಂಡು ಏನಾದರೊಂದು ಸಾಧನೆ ಮಾಡಬೇಕು ಅನ್ನುವ ಛಲ ಬಂದೇ ಬರುತ್ತೆ. ಈ ನಿಟ್ಟಿನಲ್ಲಿ ಯುವ ನಟ ಶ್ರೇಯಸ್‌ ಚಿಂಗ ಕೂಡ ಸೇರಿದ್ದಾರೆ.

ಇವರೊಬ್ಬರೇ ಅಲ್ಲ, ಇವರೊಂದಿಗೆ ನಟಿ ಎಸ್ಟರ್‌ ನರೋನ್ಹಾ ಕೂಡ ಸೇರಿದ್ದಾರೆ ಅನ್ನೋದು ಈ ಹೊತ್ತಿನ ವಿಶೇಷ. ಹೌದು, ನಟನಾಗಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೇಯಸ್‌ ಚಿಂಗ ಈಗ ಮೊದಲ ಬಾರಿಗೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ನಟಿಯಾಗಿದ್ದ ಎಸ್ಟರ್‌ ನರೋನ್ಹಾ ಅವರು ಕೂಡ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂದಹಾಗೆ, ಶ್ರೇಯಸ್‌ ಚಿಂಗ ನಿರ್ದೇಶನದ ಚಿತ್ರಕ್ಕೆ “ದಿ ವೇಕೆಂಟ್‌ ಹೌಸ್‌” ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರ ಕನ್ನಡದ ಜೊತೆಯಲ್ಲಿ ಕೊಂಕಣಿ ಭಾಷೆಯಲ್ಲೂ ತಯಾರಾಗುತ್ತಿದೆ ಎಂಬುದು ವಿಶೇಷ.

ಚಿತ್ರವನ್ನು ಜಾನೆಟ್ ನೊರೊನ್ಹಾ ಪ್ರೊಡಕ್ಷನ್ಸ್‌ ಮೂಲಕ ಜಾನೆಟ್‌ ನೊರೊನ್ಹಾ ನಿರ್ಮಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಏಪ್ರಿಲ್‌ ೫ರಂದು ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಆಗಿದೆ.
ನಿರ್ದೇಶಕ ಶ್ರೇಯಸ್‌ ಚಿಂಗ ಅವರು ನಟನೆ ಜೊತೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಅವರು ಸುಮಾರು 150೦ಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವುದರಿಂದ ಅವರಿಗೆ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಇನ್ನು ನಟಿ ಎಸ್ಟರ್‌ ನರೋನ್ಹಾ ಅವರಿಗೂ ಇದು ಮೊದಲ ಸಂಗೀತ ನಿರ್ದೇಶನದ ಅನುಭವ. ಅವರಿಗೂ ಒಳ್ಳೆಯ ಕಥೆ ಇರುವ ಚಿತ್ರಕ್ಕೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ.

ನಿರ್ಮಾಪಕ ಜಾನೆಟ್‌ ನೊರೊನ್ಹಾ ಅವರಿಗೆ ಇದು ಮೂರನೇ ನಿರ್ಮಾಣದ ಸಿನಿಮಾ. ಈ ಹಿಂದೆ ಅವರು “ಸೋಫಿಯಾ ಎ ಡ್ರೀಮ್‌ ಗರ್ಲ್”‌ ಎಂಬ ಸಿನಿಮಾ ಮಾಡಿದ್ದರು. ಇದಕ್ಕೆ 2018ರಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ನಂತರ ಜಾಕಿಶ್ರಾಫ್ ಮತ್ತು ಎಸ್ಟರ್ ನೊರೊನ್ಹಾ ನಟಿಸಿದ “ಕಾಂತಾರ್” ೆಂಬ ಕೊಂಕಣಿ ಸಿನಿಮಾ ಕೂಡ ನಿರ್ಮಿಸಿದ್ದರು. ವಿದೇಶದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿತ್ತು. ಈಗ “ದಿ ವೇಕೆಂಟ್‌ ಹೌಸ್‌” ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಎಸ್ಟರ್‌ ನರೋನ್ಹಾ ಅವರು ಸಂಗೀತದ ಜೊತೆ ಸಾಹಿತ್ಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಿರ್ದೇಶಕರೂ ಇಲ್ಲಿ ನಿರ್ದೇಶನದ ಜೊತೆ ಮಾತುಗಳನ್ನು ಪೋಣಿಸಿದ್ದಾರೆ. ವಿಜಯ್‌ ರಾಜ್‌ ಸಂಕಲನವಿದೆ. ಸದ್ಯ ಮೊದಲ ಪೋಸ್ಟರ್‌ ರಿಲೀಸ್‌ ಆಗಿದ್ದು, ಇಷ್ಟರಲ್ಲೇ ಸಿನಿಮಾದ ಪೂರ್ಣ ಮಾಹಿತಿ ಕೊಡುವುದಾಗಿ ನಿರ್ದೇಶಕ ಶ್ರೇಯಸ್‌ ಚಿಂಗ ಹೇಳಿದ್ದಾರೆ.

Categories
ಸಿನಿ ಸುದ್ದಿ

ಬೆಳ್ಳಿತೆರೆ ಮೇಲೆ ಬಳ್ಳಾರಿ ಸೀಮೆಯ ಅರುಣ್ ನ ಅಮರ ಪ್ರೇಮ – ಕುತೂಹಲದ ರೋಮ್ – ಕಾಮ್ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಪ್ರವೀಣ್ !

ಯುವ ಲೇಖಕ ಹಾಗೂ ಕಥೆಗಾರ ಜಿ.ಪ್ರವೀಣ್‌ ಕುಮಾರ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಪ್ರವೀಣ್‌ ಸಿನಿಮಾಕ್ಕೆ ಬರಹಗಾರರಾಗಿ, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭವದಲ್ಲೀಗ “ಅಮರ ಪ್ರೇಮಿ ಅರುಣ್‌ʼ ಹೆಸರಿನ ಚಿತ್ರಕ್ಕೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಜತೆಗೆ ಸಂಭಾಷಣೆ ಕೂಡ ಅವರದ್ದೆ. ಬೆಂಗಳೂರಿನ ಬನಶಂಕರಿ ಧರ್ಮಗಿರಿ ಮಂಜುನಾಥ್‌ ಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೆ ಚಿತ್ರದ ಟೈಟಲ್‌ ಲಾಂಚ್‌ ಹಾಗೂ ಮುಹೂರ್ತ ಕಾರ್ಯಕ್ರಮ ನಡೆಯಿತು.

ದೇವರ ಮೇಲೆ ಸೆರೆಹಿಡಿಯಲಾದ ಚಿತ್ರದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆರಂಭ ಫಲಕ ತೋರಿದರು. ನಿರ್ದೇಶಕ ಯೋಗರಾಜ್ ಭಟ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್  ಸೇರಿದಂತೆ  ಆರು ಜನ ನಿರ್ದೇಶಕರು ಶೀರ್ಷಿಕೆ ಅನಾವರಣ ಮಾಡಿದರು. ಟೈಟಲ್‌ ಲಾಂಚ್‌ ಹಾಗೂ ಚಿತ್ರದ ಮುಹೂರ್ತದ ನಂತರ ಚಿತ್ರ ತಂಡವು ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ನಿರ್ದೇಶಕ ಜಿ. ಪ್ರವೀಣ್‌ ಕುಮಾರ್ ಪ್ರಕಾರ ಶುದ್ಧ ರೊಮ್ಯಾಂ ಟಿಕ್‌ ಹಾಗೂ ಕಾಮಿಡಿ ಕಥಾ ಹಂದರದ ಚಿತ್ರ. ಇಡೀ ಕಥೆ ಬಳ್ಳಾರಿ ಸುತ್ತಮುತ್ತ ನಡೆಯಲಿದೆಯಂತೆ. ಕಥೆ ಅಲ್ಲಿಗೆ ಸಂಬಂಧಿಸಿ ದ್ದರಿಂದ ಅಲ್ಲಿನ ಭಾಷೆಯ ಸೊಗಡು ಚಿತ್ರದ ಸಂಭಾಷಣೆ ಯಲ್ಲಿದೆಯಂತೆ.

ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು ಎಂದ ಪ್ರವೀಣ್ ಕುಮಾರ್, ಯುಗಾದಿ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂದರು. ಪ್ರವೀಣ್‌ ಅವರಿಗೆ ಇದು ಚೊಚ್ಚಲ ಚಿತ್ರ. ಕಥೆಗಾರರಾಗಿ ಸಿನಿಮಾ ರಂಗಕ್ಕೆ ಪರಿಚಯವಾದ ಪ್ರವೀಣ್‌ ಕುಮಾರ್‌ ಇದುವರೆಗೂ ಗಿರೀಶ್‌ ಕಾಸರವಳ್ಳಿ, ಯೋಗಾರಾಜ್‌ ಭಟ್‌, ಅಭಯ್‌ ಸಿಂಹ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹಾಗಾಗಿ ಶಿಷ್ಯನನ್ನು ಶುಭ ಹಾರೈಸಲು ಅವರೆಲ್ಲರೂ ಬಂದಿದ್ದರು. ಪ್ರವೀಣ್‌ ಗೆ ಒಳ್ಳೆಯದಾಗಲಿ ಅಂದರು.

ಚಿತ್ರಕ್ಕೆ  ಕಿರಣ್ ರವೀಂದ್ರನಾಥ್‌ ಅವರ ಸಂಗೀತ ನಿರ್ದೇಶನವಿದೆ. ಪ್ರವೀಣ್‌ ಎಸ್‌ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಸಾಗಿತ್ಯವಿದೆ. ಮಂಡ್ಯ ಮಂಜು ಇದರ ಕಾರ್ಯಕಾರಿ ನಿರ್ಮಾಪಕರು. ನಿರಂಜನ್ ದೇವರಮನೆ ಸಂಕಲನ ಹಾಗೂ ಷಣ್ಮುಖ ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಉಳಿದಂತೆ  ಹರಿಶರ್ವಾ ಇದರ ಹೀರೋ. ದೀಪಿಕಾ ಆರಾಧ್ಯ ನಾಯಕಿ . ಭೂಮಿಕಾ  ರಘು, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು  ಚಿತ್ರದಲ್ಲಿದ್ದು, ಯುಗಾದಿ ನಂತರ ಚಿತ್ರದ ಚಿತ್ರೀಕರಣ ಶುರುವಾಗುತ್ತಿದೆ. ಒಂದೇ ಹಂತದಲ್ಲಿ ಚಿತ್ರ ತಂಡ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ಮುಗಿಸಿಕೊಂಡು ಬರಲಿದೆಯಂತೆ. ಒಲವು ಸಿನಿಮಾ ಬ್ಯಾನರ್‌ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ದೇಶಕ ಪ್ರವೀಣ್‌ ಕುಮಾರ್‌ ಸೇರಿದಂತೆ ಅವರ ಗೆಳೆಯರು ಇದರ ರೂವಾರಿಗಳು. ತಂಡಕ್ಕೆ ಒಳ್ಳೆಯದಾಗಲಿ.

Categories
ಸಿನಿ ಸುದ್ದಿ

ಪ್ಲೀಸ್‌ ಸಿಎಂ ಸರ್‌ ಯುವರತ್ನ ನೋಡೋದಿಕ್ಕೆ ಅವಕಾಶ ಮಾಡಿ ಕೊಡಿ-ಆ ಮೂವರು ಮುದ್ದು ಮಕ್ಕಳು ಮಾಡಿಕೊಂಡರು ಮನವಿ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಯುವರತ್ನ ಚಿತ್ರದ ರಿಲೀಸ್‌ ಬೆನ್ನಲೇ ಸರ್ಕಾರ ಚಿತ್ರಮಂದಿರದಲ್ಲಿನ ಶೇ. ೫೦ ರಷ್ಟು ಸೀಟು ಭರ್ತಿಗೆ ಆದೇಶಿಸಿದೆ. ಸಹಜವಾಗಿಯೇ ಇದು ಪವರ್‌ ಸ್ಟಾರ್‌ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಫ್ಯಾನ್ಸ್‌ ಯುವರತ್ನಕ್ಕೆ ಹಂಡ್ರಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಸಿಗಲಿ ಅಂತ ಒತ್ತಾಯಿಸುತ್ತಿದ್ದಾರೆ. ವಿಶೇಷವಾಗಿ ಮೂವರು ಮುದ್ದು ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

” ಪ್ಲೀಸ್‌ ಸರ್‌ ಯುವರತ್ನ ಚಿತ್ರಕ್ಕೆ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಿ, ನಾವು ಮಾಸ್ಕ್‌ ಹಾಕ್ಕೊಂಡು ಸ್ಯಾನಿಟೈಸ್‌ ಮಾಡಿಕೊಂಡು ಸಿನಿಮಾ ನೋಡುತ್ತೇವೆʼ ಅಂತ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಾಳೆ( ಭಾನುವಾರ) ನಮ್ಮ ಪೋಷಕರು ಯುವರತ್ನ ಸಿನಿಮಾಗೆ ಟಿಕೆಟ್‌ ಬುಕ್‌ ಮಾಡಿದ್ದಾರೆ. ಅಪ್ಪು ಅಂದ್ರೆ ನಮಗೆ ತುಂಬಾ ಇಷ್ಟ , ನಾವು ಸಿನಿಮಾ ನೋಡಬೇಕು, ಟಿಕೆಟ್‌ ಕ್ಯಾನ್ಸಲ್‌ ಆಗಬಾರದು ಅಂತ ಆ ಮೂವರು ಮಕ್ಕಳೂ ವಿಡಿಯೋದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.

ಮತ್ತೊಂದೆಡೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡ ವಿನೂತನವಾಗಿ ಹಂಡ್ರೆಡ್‌ ಪರ್ಸೆಂಟ್‌ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದೆ. ಅದಕ್ಕಂತಲೇ ವಿನೂತನವಾದ ಪೋಸ್ಟರ್‌ ಲಾಂಚ್‌ ಮಾಡಿದೆ.

error: Content is protected !!