Categories
ಆಡಿಯೋ ಕಾರ್ನರ್

ಬಿಗ್‌ ಬಾಸ್‌ ಖ್ಯಾತಿಯ ನಟಿ ಚೈತ್ರಾ ಕೋಟೂರ್‌ ಗೆ ಒಂಚೂರು ಹುಡುಗರ ಟೈಮ್‌ ಬೇಕಂತೆ !!

ಹುಡುಗರನ್ನು ಹಾಡಿ ಹೊಗಳಿದ ಬಿಗ್‌ ಬಾಸ್‌ ಖ್ಯಾತಿಯ ನಟಿ !!

“ಹುಡುಗರು ಬೇಕು, ನಂಗೆ ಹುಡುಗರು ಬೇಕುʼ ಅಂತ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಈ ಹಿಂದೆ ಆನ್‌ ಸ್ಕ್ರೀನ್‌ ಮೇಲೆ ಗೊಗರೆದಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗ ನಿಧಿ ಸುಬ್ಬಯ್ಯ ಅವರ ಹಾಗೆಯೇ ” ಹುಡುಗರು ತುಂಬಾ ಒಳ್ಳೆಯವ್ರು, ಟೈಮ್‌ ಬೇಕು ಒಂಚೂರು ʼ ಅಂತ ಹುಡುಗರ ಹಿಂದೆ ಬಿದಿದ್ದಾರೆ ಬಿಗ್‌ಬಾಸ್‌ ಖ್ಯಾತಿಯ ನಟಿ ಚೈತ್ರಾ ಕೋಟೂರ್.‌ ಅಂದ ಹಾಗೆ, ಅವರಿಗೇನಾಯ್ತು ? ಮದ್ವೆ- ಗಿದ್ವಿ ಅಂತ ಹುಡುಗ್ನ ಹುಡುಕುತಿದ್ದಾರಾ ಅಂತ ತಲೆ ಕೆಡಿಸಿಕೊಳ್ಳಬೇಡಿ, ಯಾಕಂದ್ರೆ ಇದು ರೀಲ್‌ ಮೇಲಿನ ಕತೆ.

 

ಬಿಗ್‌ಬಾಸ್‌ ಜನಪ್ರಿಯತೆಯ ಮೂಲಕ ಈಗ ನಟನೆಯತ್ತ ಹೆಚ್ಚು ಗಮನ ಹರಿಸಿರುವ ಚೈತ್ರಾ ಕೋಟೂರ್‌, ತಾವೇ ಸಾಹಿತ್ಯ ಬರೆದು ಹೊಸದೊಂದು ವಿಡಿಯೋ ಆಲ್ಬ ಸಾಂಗ್‌ ಹೊರ ತಂದಿದ್ದಾರೆ. “ಹುಡುಗರು ತುಂಬಾ ಒಳ್ಳೆಯವ್ರು ʼ ಎನ್ನುವುದು ಆ ವಿಡಿಯೋ ಆಲ್ಬಂ ಸಾಂಗ್‌ ಹೆಸರು. ಸಾಹಿತ್ಯ ದ ಜತೆಗೆ ಈ ಹಾಡಿಗೆ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ಅವರೇ ಆನ್‌ ಸ್ಕ್ರೀನ್‌ ಮೇಲೆ ಮಸ್ತ್‌ ಮಸ್ತ್‌ ಹಾಡಿ ಕುಣಿದಿರುವುದು ವಿಶೇಷ.


ಮೂಲತಃ ರಂಗಭೂಮಿ ನಟಿಯಾದ ಚೈತ್ರಾ ಕೋಟೂರ್‌, ಸಿನಿಮಾ ನಿರ್ದೇಶನದ ಕಲಿಕೆಯ ಜತೆಗೆಯೇ ನಟಿಯಾಗಿ ಕಾಣಿಸಿಕೊಂಡವರು. ಅದರ ಜತೆಗೆಯೇ ಬಿಗ್‌ಬಾಸ್‌ ಗೂ ಹೋಗಿ ಬಂದು ಒಂದಷ್ಟು ಫೇಮಸ್‌ ಆದರು. ಅಲ್ಲಿಂದ ಬಂದವರು ಒನ್ಸ್‌ ಏಗೇನ್‌ ಸಿನಿಮಾ ನಿರ್ದೇಶನ , ನಟನೆ ಅಂತ ಬ್ಯುಸಿ ಆಗಿರುವುದರ ನಡುವೆಯೇ ಈಗ ತಾವೇ ಒಂದು ವಿಡಿಯೋ ಆಲ್ಬಂ ಸಾಂಗ್‌ ಹೊರತಂದಿದ್ದಾರೆ. ಅದೀಗ ಆನಂದ್‌ ಆಡಿಯೋ ಮೂಲಕ ಹೊರ ಬಂದಿದೆ.

ಸಹಜವಾಗಿಯೇ ಡಾನ್ಸ್‌ ಹಾಗೂ ಮ್ಯೂಜಿಕ್‌ ನಲ್ಲೂ ಹೊಸತನ ಇರೋದ್ರಿಂದ ಸೋಷಲ್‌ ಮೀಡಿಯಾದಲ್ಲಿ ಹಾಡು ವೈರಲ್‌ ಆಗುತ್ತಿದೆ. ನಟಿ, ನಿರ್ದೇಶಕಿ ಚೈತ್ರಾ ಕೋಟೂರ್‌ ಅವರ ಇನ್ನೊಂದು ಮುಖ ಇಲ್ಲಿ ರಿವೀಲ್‌ ಆಗಿದ್ದು ಕಂಡು ಸಿನಿಮಾ ಪ್ರೇಮಿಗಳು ಶಾಕ್‌ ಆಗಿದ್ದಾರೆ.ರಾಪ್‌ ಸಾಂಗ್‌ ಶೈಲಿಯ ಈ ವಿಡಿಯೋ ಆಲ್ಬಂ ಸಾಂಗ್‌ ಮಜವಾಗಿದೆ. ” ಹುಡುಗರು ತುಂಬಾ ಒಳ್ಳೆಯವ್ರು, ಟೈಮ್‌ ಬೇಕು ಒಂಚೂರುʼ ಅಂತ ಹುಡುಗರಲ್ಲಿ ನಾಯಕಿ ಚೈತ್ರಾ ಕೋಟೂರ್‌ ರಿಕ್ವೆಸ್ಟ್‌ ಮಾಡುವ ಹಾಡಿನ ಸಾಲುಗಳೇ ಸೊಗಸಾಗಿವೆ. ಅಷ್ಟೇ ಅಲ್ಲ, ಅವರ ಪ್ರಕಾರ ಹುಡುಗರು ತುಂಬಾ ಒಳ್ಳೆಯವ್ರು. ನಿಯತ್ತಿನಿಂದ ದುಡಿಯೋವ್ರು ಅಂತೆಲ್ಲ ಹುಡುಗರನ್ನು ಹಾಡಿ ಹೊಗಳಿದ್ದಾರೆ.

 

ಸದ್ಯಕ್ಕೆ ಈ ವಿಡಿಯೋ ಆಲ್ಬಂ ಸಾಂಗ್‌ ಅನ್ನು ಹೊರ ತಂದಿರುವ ಉದ್ದೇಶವನ್ನು ಅವರು ರಿವೀಲ್‌ ಮಾಡಿಲ್ಲ. ಆದರೆ, ಸಾಂಗ್‌ ಕಾನ್ಸೆಪ್ಟ್‌ ಬಗ್ಗೆ ಹೇಳಿಕೊಂಡಿದ್ದಾರೆ.. ನನಗೆ ಇದು ಹೊಸ ಪ್ರಯತ್ನ’ ಇದು ನನ್ನ ಜೀವನದಲ್ಲಿ ವಿಶೇಷವಾದ ಪ್ರಯತ್ನ ಎಂದು ಹೇಳಿಕೊಂಡಿದ್ದಾರೆ ಚೈತ್ರಾ. ಈ ಹಾಡಿಗೆರಾಜ್ ರೋಹಿತ್ ಛಾಯಾಗ್ರಹಣ ಮಾಡಿದ್ದು, ಕಾವ್ಯಾ ಶಿವಮೊಗ್ಗ ನೃತ್ಯ ನಿರ್ದೇಶನ ಮಾಡಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ರಿಲೀಸ್‌ ಆಗಿದೆ. ಉಳಿದಂತೆ ಚೈತ್ರಾ ಕೋಟೂರ್ ‘ಹೇ ರಾಮ್‌’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಅಪ್ಪ ಮಗನ ಬಾಂಧವ್ಯದ ಹಾಡಿಗೆ ಅಪ್ಪು ಧ್ವನಿ

ಮಂಗಳವಾರ ರಜಾ ದಿನ ಚಿತ್ರದ ಸಾಂಗ್‌ ಮಂಗಳವಾರವೇ ರಿಲೀಸ್‌

ಸಾಂಗ್‌ ರಿಲೀಸ್‌ ಮಾಡಿದ ಅಭಿಷೇಕ್‌ ಅಂಬರೀಶ್‌ 

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ, “ಮಂಗಳವಾರ ರಜಾದಿನ” ಸಿನಿಮಾ ಕೂಡ ಚಿತ್ರೀಕರಣಗೊಂಡು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.‌

ಹೌದು, ಚಂದನ್‌ ಆಚಾರ್‌ ಅಭಿನಯದ “ಮಂಗಳವಾರ ರಜಾ ದಿನ” ಚಿತ್ರದ ಹಾಡು ಇದೀಗ ಹೊರಬಂದಿದೆ. ಈ ಚಿತ್ರದ ಹಾಡನ್ನು ನಟ ಅಭಿಷೇಕ್‌ ಅಂಬರೀಶ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಅಂದಹಾಗೆ, ಈ ಚಿತ್ರದ ಹಾಡನ್ನು ಗೌಸ್‌ಪೀರ್‌ ಬರೆದಿದ್ದು, ನಟ ಪುನೀತ್‌ರಾಜಕುಮಾರ್‌ ಹಾಡಿದ್ದಾರೆ. ಲಹರಿ ಮ್ಯೂಸಿಕ್‌ ಸಂಸ್ಥೆ ಮೂಲಕ ಈ ಹಾಡನ್ನು ಹೊರ ತರಲಾಗಿದೆ.


“ನೀನೇ ಗುರು, ನೀನೇ ಗುರಿ, ನೀನೆ ಗುರುತು…’ ಎಂದು ಸಾಗುವ ಹಾಡನ್ನು ಅಭಿಷೇಕ್ ಅಂಬರೀಶ್ ಗಣರಾಜ್ಯೋತ್ಸವದ ದಿನ ಬಿಡುಗಡೆ ಮಾಡಿ, ಹಾಡಿನ ಬಗ್ಗೆ ಗುಣಗಾನ ಮಾಡಿದ್ದಾರೆ. ಈ ಹಾಡಿನ ಕುರಿತು ಮಾತನಾಡಿರುವ ಅಭಿಷೇಕ್‌ ಅಂಬರೀಷ್‌, “ತಂದೆ, ಮಗನ‌ ಭಾಂದವ್ಯದ ಹಾಡನ್ನು ಗೌಸ್‌ ಪೀರ್‌ ಚೆನ್ನಾಗಿ ಬರೆದಿದ್ದಾರೆ. ಹಾಗೆಯೇ ಪುನೀತ್‌ ರಾಜಕುಮಾರ್‌ ಕೂಡ ತುಂಬಾನೇ ಸೊಗಸಾಗಿ ಹಾಡಿದ್ದಾರೆ. ಇನ್ನು, ಈ ಹಾಡು ಕೇಳುವ ಪ್ರತಿಯೊಬ್ಬರಿಗೂ ತಮ್ಮ ತಂದೆ ನೆನಪಾಗುತ್ತಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದು ಶುಭಹಾರೈಸಿದ್ದಾರೆ ಅಭಿಷೇಕ್‌ ಅಂಬರೀಶ್‌.

ತ್ರಿವರ್ಗ ಫಿಲಂಸ್ ‌ನಿರ್ಮಾಣದ ಈ ಚಿತ್ರವನ್ನು ಯುವಿನ್ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದಹಾಗೆ, ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಋತ್ವಿಕ್ ಮುರಳಿಧರ್ ಸಂಗೀತ ನೀಡಿದ್ದಾರೆ.

 

Categories
ಆಡಿಯೋ ಕಾರ್ನರ್

ಈಗ ಕೃಷ್ಣ ಇನ್ನಷ್ಟು ಮನಮೋಹನ , ಕೇಳುವುದಕ್ಕೆ ಮತ್ತಷ್ಟು ಹೊಸತನ !

ಕೃಷ್ಣ ಟಾಕೀಸ್ ನಿಂದ ಲಾಂಚ್ ಆಯ್ತು ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ 

ನಟ ಅಜೇಯ ರಾವ್ ಅಭಿನಯದ ಬಹುನಿರೀಕ್ಷಿತ ಚಿತ್ರ  ‘ ಕೃಷ್ಣ ಟಾಕೀಸ್’ ‘‌ ನ‌ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಆಗಿದೆ. ಚಿತ್ರ ತಂಡ ಈ ಮೊದಲೇ ಪ್ರಕಟಿಸಿದ ಹಾಗೆ ‘ ಸಂಕ್ರಾಂತಿ ‘ ಹಬ್ಬದಂದು ನಟ ಅಜೇಯ ರಾವ್ ಪುತ್ರಿ ‌ಚೆರ್ರಿ, ಈ ಲಿರಿಕಲ್ ವಿಡಿಯೋ ಅನಾವರಣ ಗೊಳಿಸಿದರು. ನಿರ್ದೇಶಕ ವಿಜಯಾನಂದ್ ಸೇರಿದಂತೆ ಇಡೀ ಚಿತ್ರ ತಂಡ ಇದಕ್ಕೆ ಸಾಥ್ ನೀಡಿ ಸಂಭ್ರಮಿಸಿತು.

ನಿರ್ದೇಶಕ ವಿಜಯಾನಂದ ರಚನೆಯ ‘ ಮನಮೋಹನ, ಮನಮೋಹನ ‘ ಎನ್ನುವ ಗೀತೆಗೆ ರೊಮ್ಯಾಂಟಿಕ್ ಹಾಡುಗಳ ಸರದಾರ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಅನ್ವೇಷಾ ಮತ್ತು ವಿಹಾನ್ ಆರ್ಯ ಹಾಡಿದ್ದಾರೆ‌. ಮದನ ಹರಿಣಿ ನೃತ್ಯ ನಿರ್ದೇಶನ‌ ಮಾಡಿದ್ದು,
ಚಿತ್ರದ ನಾಯಕ ಅಜೇಯ್ ರಾವ್ ಹಾಗೂ ನಾಯಕಿ ಅಪೂರ್ವ ಜೋಡಿ ಇಲ್ಲಿ ಮನಸೋತು ಕುಣಿದಿರುವುದೇ ಮೋಹಕವಾಗಿದೆ.

ಈಗಾಗಲೇ ಕೃಷ್ಣ ಟಾಕೀಸ್ ಚಿತ್ರದ ಒಂದು ಹಾಡಿನ ಲಿರಿಕಲ್ ವಿಡಿಯೋ ಯುಟ್ಯೂಬ್ ಮೂಲಕ ಲಾಂಚ್ ಆಗಿತ್ತು. ಈಗ ಎರಡನೇ ಸಾಂಗ್ ಲಿರಿಕಲ್ ವಿಡಿಯೋ ಲಾಂಚ್ ಮಾಡುವ ಮೂಲಕ‌ ಚಿತ್ರ ತಂಡ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಲು ಸಜ್ಜಾಗಿದೆ. ಕೃಷ್ಣ ಟಾಕೀಸ್ ಎನ್ನುವ ಶೀರ್ಷಿಕೆ ಯೇ ಹೇಳುವ ಹಾಗೆ ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾ. ಕೃಷ್ಣ ಅಜೇಯ್ ರಾವ್, ಅಪೂರ್ವ ಹಾಗೂ ಸಿಂಧು ಲೋಕನಾಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆನಂದ ಪ್ರಿಯಾ ಅಲಿಯಾಸ್ ವರ್ಷದ ವಿಜಯಾನಂದ್ ನಿರ್ದೇಶನ ಮಾಡಿದ್ದು, ಗೋವಿಂದ ರಾಜು ಬಂಡವಾಳ ಹಾಕಿದ್ದಾರೆ.

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಅವರದ್ದು. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಇದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

‘ ಸಲಗ’ ಟೈಟಲ್ ಟ್ರ್ಯಾಕ್ ಗೆ ಚೆನ್ನೈ‌ನಲ್ಲಿ ಫೈನಲ್ ಟಚ್

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಧೂಳೆಬ್ಬಿಸುವುದು ಖಾತರಿ ಆಗಿದೆ ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ

ನಟ ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ‘ಸಲಗ’ ರಿಲೀಸ್ ಗೆ ರೆಡಿಯಾಗುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರ ತಂಡ ಎಲ್ಲಾ ರೀತಿಯಲ್ಲೂ ರೆಡಿಯಾಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಚಿತ್ರದ ಟೈಟಲ್ ಟ್ರ್ಯಾಕ್ ಫೈನಲ್ ಕಂಪೋಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರ ತಂಡದ ಮಾಹಿತಿ ಪ್ರಕಾರ ಟ್ರೇಲರ್ ಲಾಂಚ್ ಗೂ ಮುನ್ನ ಟೈಟಲ್ ಟ್ರ್ಯಾಕ್ ಹೊರ ತಂದು, ಅದರದ್ದೇ ಒಂದು ಹವಾ ಸೃಷ್ಟಿಸಿದ ನಂತರವೇ ಚಿತ್ರ ತೆರೆಗೆ ಬರಲಿದೆಯಂತೆ. ಹಾಗಾಗಿಯೇ ಚಿತ್ರದ ನಿರ್ದೇಶಕ ಕಮ್ ನಾಯಕ ನಟ ದುನಿಯಾ ವಿಜಯ್,ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತತವರ ತಂಡ ಚೆನ್ನೈಗೆ ಪ್ರಯಾಣ ಬೆಳಸಿ, ಅಲ್ಲಿ ಟೈಟಲ್ ಟ್ರ್ಯಾಕ್ ಗೆ ಫೈನಲ್ ಟಚ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ಆ ಕೆಲಸದ ಒಂದು ಝಲಕ್ ಇಲ್ಲಿದೆ.


‘ ಟಗರು ‘ ಖ್ಯಾತಿಯ ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಚಿತ್ರೋದ್ಯಮದಲ್ಲಿ ಹಾಗೂ ಸಿನಿಮಾಸಕ್ತರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ದುನಿಯಾ ವಿಜಯ್ ಜತೆಗೆ ಸಂಗೀತ ನಿರ್ದೇಶಕ. ಚರಣ್ ರಾಜ್. ಇದುವರೆಗೂ ಬೆಳ್ಳಿತೆರೆಯಲ್ಲಿ ನಾಯಕರಾಗಿ ಅಬ್ಬರಿಸಿದ ನಟ ದುನಿಯಾ ವಿಜಯ್, ಇದೇ ಮೊದಲು ಆ್ಯಕ್ಷನ್ ಕಟ್ ಹೇಳಿದ ಸಿನಿಮಾ‌. ಹಾಗೆಯೇ ಟಗರು ಚಿತ್ರದೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೆಷನಲ್ ಸಂಗೀತ ನಿರ್ದೇಶಕ ಎಂದೆನಿಸಿಕೊಂಡ ಯುವ ಸಂಗೀತ ನಿರ್ದೇಶಕ ಚರಣ್ ರಾಜ್, ಸಲಗ ಮೂಲಕವೂ ದೊಡ್ಡ ಹವಾ ಎಬ್ಬಿಸುತ್ತಾರೆನ್ನುವ ನಿರೀಕ್ಷೆ ಇದೆ‌.

Categories
ಆಡಿಯೋ ಕಾರ್ನರ್

ಹೊಸವರ್ಷಕ್ಕೆ ಬಂತು ಮತ್ತೊಂದು ಆಲ್ಬಂ ಸಾಂಗ್, ಸಖತ್ ಆಗಿಯೇ ಮಿಂಚಿದ್ದಾರೆ ಬಿಗ್ ಬಾಸ್ ಖ್ಯಾತಿಯ ನಟಿ

ಕೃತಿಕಾ ರವೀಂದ್ರಗೆ ಸಾಥ್ ಕೊಟ್ಟ ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ

ಸ್ಟಾರ್ ಗಳೇ ಈಗ ಅದ್ದೂರಿ ವೆಚ್ಚದ ಆಲ್ಬಂಗಳಲ್ಲಿ ಕಾಣಿಸಿಕೊಳ್ಳುವುದು ಮಾಮೂಲಾಗುತ್ತದೆ.ಮೊನ್ನೆ ಮೊನ್ನೆಯಷ್ಟೇ ಲಾಂಚ್ ಆಗಿದ್ದ ಚಂದನ್ ಶೆಟ್ಟಿ ಅವರ ಮ್ಯೂಜಿಕ್ ವಿಡಿಯೋ ಆಲ್ಬಂ‌ನಲ್ಲಿ ನಟಿ ನಿಶ್ವಿಕಾ ನಾಯ್ಡ ಸೊಂಟ ಬಳುಕಿಸಿದ್ದನ್ನು ನೀವು ನೋಡಿದ್ರಿ. ಈಗ ಸುಕೃಶಿ ಕ್ರಿಯೇಷನ್ಸ್ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ಹೊರ ತಂದಿರುವ ಅಂತಹದೇ ಅದ್ದೂರಿ ವೆಚ್ಚದ ಆಲ್ಬಮ್ ಸಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಭರ್ಜರಿ ಯಾಗಿ ಮಿಂಚಿದ್ದಾರೆ.ಹ್ಯಾಂಡ್ ಸಮ್ ಗಾಯ್ ವರುಣ್ ಗೌಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಇದೊಂದು ಸಮಾನ ಮನಸ್ಕ ಯುವಕರು ನಿರ್ಮಾಣ ಮಾಡಿರುವ ಅದ್ದೂರಿ ವೆಚ್ಚದ ವಿನೂತನ ವಿಡಿಯೋ ಸಾಂಗ್ ಆಲ್ಬಂ.‌ ಒಲವೇ ಎನ್ನುವ ಹೆಸರಲ್ಲಿ ಹೊರ ಬಂದಿದೆ. ಸಿನಿಮಾ ಹಾಡಿನ ಹಾಗೆಯೇ  ಎಲ್ಲಾ  ರೀತಿಯಲ್ಲೂ ಗುಣಮಟ್ಟದೊಂದಿಗೆ‌ ನಿರ್ಮಾಣವಾಗಿದೆ. ಹಾಗೆಯೇ ನಾನಾ‌ ಬಗೆಯಲ್ಲಿ ಸಿನಿಮೀಯ ರೂಪುರೇಷೆ ಹೊಂದಿದೆ.

ಶಿವಾನಿ

ಯುವ ನಿರ್ದೇಶಕಿ ನಟಿ M S ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣ ಮಾಡಿದ್ದಾರೆ. ಆಲ್ಭಂ ಅದ್ಬುತವಾಗಿ ಮೂಡಿ ಬರುವಲ್ಲಿ ಇವರಿಬ್ಬರ ಕೈಚಳಕ ಕೂಡ ಪ್ಲಸ್ ಆಗಿದೆ.

ಕೆಜಿಎಫ್ ಚಿತ್ರ ದ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋ ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋಸ್ ಈ ಗೀತೆಯನ್ನು ಲಾಂಚ್ ಮಾಡುತ್ತಿದೆ. ಜ.3 ರಿಂದ ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಈ ಹಾಡು ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ವಿಡಿಯೋ‌ಸಾಂಗ್ ಆಲ್ಬಂ ಮೂಲಕ ಸದ್ದು‌ಮಾಡಲು ಹೊರಟಿರುವ ಸುಕೃಶಿ ಸಂಸ್ಥೆ‌ಮುಂದೆ ಸಿನಿಮಾ ನಿರ್ಮಾಣಕ್ಕೂ ಸಿದ್ಧತೆ ನಡೆಸಿದೆ ಎನ್ನುತ್ತಿವೆ ಸಂಸ್ಥೆಯ ಮೂಲಗಳು.

 

Categories
ಆಡಿಯೋ ಕಾರ್ನರ್

ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಚಂದನ್ ಶೆಟ್ಟಿ ಪಾರ್ಟಿ ಫ್ರೀಕ್ ಮ್ಯೂಜಿಕ್ ಆಲ್ಬಂ !

ಯುನೈಟೆಡ್ ಆಡಿಯೋ ಮೂಲಕ ಹೊರ ಬಂದ ಮೊದಲ ಕೊಡುಗೆ

ಬಿಗ್ ಬಾಸ್ ರಿಯಾಲಿಟಿ ಶೋ ಜತೆಗೆ ಪಾರ್ಟಿ ಸಾಂಗ್ ಆಲ್ಬಂ ಮೂಲಕ ಸಿಕ್ಕಾಪಟ್ಟೆ ಪಾಪ್ಯುಲರ್ ಆದ ಹೆಸರು ಚಂದನ್ ಶೆಟ್ಟಿ. ಅವರೀಗ ಮತ್ತೊಂದು ಹೊಚ್ಚ ಹೊಸ ಮ್ಯೂಜಿಕ್ ವಿಡಿಯೋ ಆಲ್ವಂ ಲಾಂಚ್ ಮಾಡಿದ್ದಾರೆ. ‘ ಒಂದೇ ಒಂದು ಪೆಗ್ ಗೆ ತಲೆ ಗಿರ ಗಿರ ಅಂತಿದೆ ‘ ಅಂತ ಈ ಹಿಂದೆ ಸಂಗೀತ ಪ್ರಿಯರ ತಲೆ ಗಿಮ್ಮ್ ಎನಿಸಿದ್ದ ಚಂದನ್ ಶೆಟ್ಟಿ ,ಈಗಲೂ ಅಂತಹದೇ ಒಂದು ಕಿಕ್ ಕೊಡುವ ಸಾಂಗ್ ಅನ್ನೇ ಸಂಗೀತ ಪ್ರಿಯರಿಗೆ ಕೊಟ್ಟಿದ್ದಾರೆ.ಈ ಆಲ್ಬಂ ಹೆಸರು ‘ಪಾರ್ಟಿ ಫ್ರೀಕ್”. ಇದು ಕೂಡ ಒಂದು ಪಾರ್ಟಿ ಸಾಂಗ್ ಅನ್ನೋದು ವಿಶೇಷ. ನ್ಯೂ ಈಯರ್ ಪಾರ್ಟಿಗೆ ಅಂತಲೇ ಸಾಹಿತ್ಯ ಬರೆದು , ಸಂಗೀತ ನೀಡಿ, ಅದರಲ್ಲಿ ತಾವೇ ಕುಣಿದು ಕುಪ್ಪಳಿಸಿ ಸಖತ್ ಕಿಕ್ ನೀಡುವಂತೆ ಮಾಡಿದ್ದಾರೆ ಚಂದನ್ ಶೆಟ್ಟಿ.

ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಮೂಡಿಬಂದ ‘ ಪಾರ್ಟಿ ಫ್ರೀಕ್ ‘ಹಾಡು ಶನಿವಾರ ಯೂನೈಟೆಡ್​ ಆಡಿಯೋಸ್ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿದೆ. ಇದು ಅದ್ದೂರಿ ವೆಚ್ಚದಲ್ಲಿ ಮೂಡಿ ಬಂದ ‌ಮ್ಯೂಜಿಕ್ ಆಲ್ಬಂ. ಒಂದು ಸ್ಟಾರ್ ನಟರ ಸಿನಿಮಾ ದ ಹಾಡಿನ ಹಾಗೆಯೇ ರಿಚ್ ಆಗಿ ಬಂದಿದೆ. ಭಜರಂಗಿ ಮೂಹನ್ ನೃತ್ಯ ನಿರ್ದೇಶನದ ಈ ಹಾಡಿನಲ್ಲಿ ಚಂದನ್ ಶೆಟ್ಟಿ, ಅವರ ಪತ್ನಿ ನಿವೇದಿತಾ ಗೌಡ, ನಟಿ ನಿಶ್ವಿಕಾ ನಾಯ್ಡ, ನಟ ಧರ್ಮ ಸೇರಿದಂತೆ ದೊಡ್ಡ ತಂಡವೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದೆ.

ಹಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದಲೇ ಶನಿವಾರ ಸುದ್ದಿಗೋಷ್ಟಿ ಕರೆದಿದ್ದ ತಂಡ, ಹಾಡಿನ ಹುಟ್ಟು ಮತ್ತು ಅದರ ಹಿನ್ನೆಲೆಯನ್ನು ಬಿಚ್ಚಿಟ್ಟಿತು.

ಚೈತನ್ಯ ಲಕಂಸಾನಿ ಈ ಹಾಡಿಗೆ ಬಂಡವಾಳ ಹೂಡಿದ್ದಾರೆ. ಮೂಲತಃ ಆಂಧ್ರದವರಾದ ಚೈತನ್ಯ, ಸಿನಿಮಾ ಕ್ಷೇತ್ರದಲ್ಲಿ ನೆಲೆಯೂರಬೇಕೆಂದು ಯೂನೈಟೆಡ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರ ಎಂಟ್ರಿಗೆ ಈ ಆಲ್ಬಂ ನಿರ್ಮಾಣ ಮಾಡಿದ್ದಾರಂತೆ. ಕನ್ನಡ ಮತ್ತು ತೆಲುಗಿನಲ್ಲಿ ಹೊಸ ವರ್ಷಾಚರಣೆಗೆ ಉಡುಗೊರೆ ರೂಪದಲ್ಲಿ ಮತ್ತು ಬ್ಯಾನರ್ ಲಾಂಚ್ ಮಾಡುವ ಉದ್ದೇಶಕ್ಕೆ ಪಾರ್ಟಿ ಫ್ರೀಕ್​ ಹೊರ ಬಂದಿದೆ.

ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನೀಡಿ ಧ್ವನಿಯನ್ನೂ ನೀಡಿರುವ ಚಂದನ್​ ಶೆಟ್ಟಿ ಮಾತನಾಡಿ, ‘ ಒಂದು ವಾರದ ಹಿಂದಷ್ಟೇ ಈ ಆಡಿಯೋ ಸಂಸ್ಥೆ ಲಾಂಚ್ ಆಗಿದೆ. ಒಂದೇ ವಾರದಲ್ಲಿ ಯೂಟ್ಯೂಬ್‌ನಲ್ಲಿ ಒಳ್ಳೇ ರೀಚ್ ಸಿಕ್ಕಿದೆ. ಹೊಸ‌ಹೊಸ ಪ್ರತಿಭೆಗಳಿಗೋಸ್ಕರ ಈ ಚಾನೆಲ್ ತೆರೆಯಲಾಗಿದೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ, 3 ದಿನಗಳ ಕಾಲ ಶೆರ್ಟನ್ ಹೊಟೇಲ್​ನಲ್ಲಿ ಶೂಟಿಂಗ್ ಮಾಡಲಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಹಾಡು ಮೂಡಿಬಂದಿದ್ದು, ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ’ ಎಂದರು. ಜನಕ

ಪಾರ್ಟಿ ಫ್ರೀಕ್ ಹಾಡಿನ ಚಿತ್ರೀಕರಣಕ್ಕೆ ಬರೋಬ್ಬರಿ 36 ಲಕ್ಷ ಮೊತ್ತವನ್ನು ಖರ್ಚು ಮಾಡಲಾಗಿದೆ. ಮೂರು ದಿನದಲ್ಲಿ ಚಿತ್ರೀಕರಣ ಮುಗಿಸಿಕೊಂಡ ಈ ಹಾಡಿನಲ್ಲಿ 80ಕ್ಕೂ ಅಧಿಕ ರಷ್ಯನ್​ ಡಾನ್ಸರ್​ಗಳಿದ್ದಾರೆ. 100ಕ್ಕೂ ಅಧಿಕ ಇಲ್ಲಿನ ನೃತ್ಯಗಾರರಿದ್ದಾರೆ. ಟಾಲಿವುಡ್ ನೃತ್ಯ ನಿರ್ದೇಶಕಿ ಅನ್ನಿ ಮಾಸ್ಟರ್ ಜತೆಗೆ ನಿಶ್ವಿಕಾ ನಾಯ್ಡು, ನಿವೇದಿತಾ ಗೌಡ ಸಹ ಈ ಹಾಡಿನಲ್ಲಿದ್ದಾರೆ. ಛಾಯಾಗ್ರಹಣ ಶ್ರೀಶ ಕುದುವಳ್ಳಿ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ರಂಜಿತ್ ಸಂಕಲನ ಮಾಡಿದ್ದಾರೆ.

ಹಾಡಿನ ನಿರ್ಮಾಣದಲ್ಲಿ ತಾವು ಒಬ್ಬರಾದ ನಟ ಧರ್ಮ, ಹಾಡು ಮತ್ತು ಈ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು. ‘ಸಿನಿಮಾ ಬಗ್ಗೆ ಮಾತನಾಡುತ್ತ ಯೂನೈಟೆಡ್ ಪ್ರೊಡಕ್ಷನ್ಸ್ ಬ್ಯಾನರ್ ರಿಜಿಸ್ಟರ್ ಆಯ್ತು. ಅದನ್ನು ರೀಚ್ ಮಾಡಿಸುವ ಸಲುವಾಗಿ ಚಂದನ್ ಶೆಟ್ಟಿ ಅವರಿಂದ ಆಲ್ಬಂ ಮಾಡುವ ಬಗ್ಗೆ ನಿರ್ಧಾರವಾಯ್ತು. ಆಗ ಯುನೈಟೆಡ್ ಆಡಿಯೋ ಕಂಪನಿ ತೆರೆದೆವು.‌ ಈ ಸಂಸ್ಥೆಯಲ್ಲಿ ನಾನೂ ಸಹ ಪಾಲುದಾರನಾಗಿದ್ದೇನೆ. ಅಂದುಕೊಂಡಿದ್ದಕ್ಕಿಂತ ಚೆಂದವಾಗಿ ಹಾಡು ಮೂಡಿಬಂದಿದೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆಯಿಂದ ಸಿನಿಮಾ ಸಹ ನಿರ್ಮಾಣವಾಗಲಿದೆ ಎಂದರು.

Categories
ಆಡಿಯೋ ಕಾರ್ನರ್

ದಾವಣಗೆರೆ ಹುಡುಗರಂದ್ರೆ ಸುಮ್‌ ಸುಮ್ನೆ ಅಲ್ಲ! ಡಿ-ವೈರಸ್‌ ಸ್ಟನ್ನರ್ಸ್‌ ಹುಡುಗರ ಸಖತ್ ಹಿಪ್ಪಪ್‌‌ ಸ್ಟೆಪ್‌

ವೈರಲ್‌ ಆಯ್ತು ಬೆಣ್ಣೆದೋಸೆ ನಗರಿ ಡ್ಯಾನ್ಸರ್ಸ್‌ 

ರ್ಯಾಪ್‌ ಸಾಂಗ್‌

ದಿ – ವೈರಸ್‌ ಸ್ಟನ್ನರ್ಸ್‌ ಡ್ಯಾನ್ಸ್‌ ಗ್ರೂಪ್

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹೊಸಬರ ಆಲ್ಬಂ ಸಾಂಗ್‌ ಹೊರಬಂದಿವೆ. ಇದಷ್ಟೇ ಅಲ್ಲ, ಬಹಳಷ್ಟು ಯುವಕರು ಹಿಪ್ಪಪ್‌ ಸಾಂಗ್‌, ರ್ಯಾಪ್‌ ಸಾಂಗ್‌ಗಳನ್ನೂ ಬಿಡುಗಡೆ ಮಾಡುತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಸಾಂಗ್‌ ಕಂಪೋಸ್‌ ಮಾಡಿ, ಅದಕ್ಕೊಂದು ಚಂದದ ನೃತ್ಯ ನಿರ್ದೇಶನ ಮಾಡಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಅಂತಹ ಪ್ಯಾಷನ್‌ ಇರೋ ಡ್ಯಾನ್ಸರ್ಸ್‌ ಸಾಲಿಗೆ ದಾವಣಗೆರೆ ಹುಡುಗರೂ ಸೇರಿದ್ದಾರೆ ಅನ್ನೋದೇ ವಿಶೇಷ.
ಹೇಳಿ ಕೇಳಿ ದಾವಣಗೆರೆ ಅಂದಾಕ್ಷಣ ನೆನಪಾಗೋದೇ ವಿದ್ಯಾನಗರಿ ಅನ್ನೋದು. ಅಲ್ಲಿ ವಿದ್ಯೆಯ ಜೊತೆಗೆ ಕಲೆಗೂ ಸಾಕಷ್ಟು ನಂಟು ಇದೆ. ರಂಗಭೂಮಿಯ ಅನೇಕ ಕಲಾವಿದರು ಬೀಡುಬಿಟ್ಟಿರುವ ನಗರವದು. ವಾಣಿಜ್ಯ ನಗರಿ ಎಂದೇ ಕರೆಸಿಕೊಳ್ಳುವ ದಾವಣಗೆರೆ ಮೊದಲಿನಿಂದಲೂ ಎಲ್ಲಾ ಪ್ರಾಕಾರಗಳಲ್ಲೂ ಸೈ ಎನಿಸಿಕೊಂಡಿದೆ. ಅಲ್ಲಿ, ಲಲಿತಕಲೆ, ನಾಟಕ, ಸಾಹಿತ್ಯ, ಕಲೆ, ಕ್ರೀಡೆ, ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕಲೆಯನ್ನು ಹೊಂದಿರುವ ನೆಲವದು. ಈಗಾಗಲೇ ದಾವಣಗೆರೆ ಮಂದಿ ಈ ಕಲಾಕ್ಷೇತ್ರದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದುಂಟು. ಈಗ ಅಲ್ಲೊಂದು ಯುವಕರ ಗುಂಪು ರ್ಯಾಪ್‌ ಸಾಂಗ್‌ವೊಂದಕ್ಕೆ ಹಿಪ್ಪಪ್‌ ಸ್ಟೆಪ್‌ ಹಾಕುವ ಮೂಲಕ ಜೋರು ಸುದ್ದಿ ಮಾಡುತ್ತಿದೆ. ಅದೇ ಈ ಹೊತ್ತಿನ ವಿಶೇಷ.

ದಾವಣಗೆರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದಲೂ ನಡೆಯುತ್ತಿರುವ ಡಿ-ವೈರಸ್‌ ಸ್ಟನ್ನರ್ಸ್‌ ಎಂಬ ಹೆಸರಿನ ಡ್ಯಾನ್ಸ್‌ ಶಾಲೆಯ ಹುಡುಗರು ಸೇರಿಕೊಂಡು “ಸುಮ್‌ ಸುಮ್ನೆ..” ಎಂಬ ಅಫಿಶಿಯಲ್‌ ಕನ್ನಡ ರ್ಯಾಪ್‌ ಡ್ಯಾನ್ಸ್‌ ಕವರ್” ಸಾಂಗ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಸುಮಾರು ೩.೨೦ ನಿಮಿಷ ಅವಧಿಯ ಈ ಹಾಡು “ಡಿ-ವೈರಸ್‌ ಸ್ಟನ್ನರ್ಸ್‌ ಡ್ಯಾನ್ಸ್‌ ಅಕಾಡೆಮಿ” ಹೆಸರಿನ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಗಂಟೆಗಳಲ್ಲೇ ಒಳ್ಳೆಯ ಮೆಚ್ಚುಗೆಗೂ ಪಾತ್ರವಾಗಿದೆ.

ಆನಂದ್‌  ಡಿವಿಎಸ್‌, ನೃತ್ಯ ನಿರ್ದೇಶಕ

 

ಅಂದಹಾಗೆ, ಮಾರ್ಟಿನ್‌ ಯೊ, ಲೇಜಿ, ಬಿ ಅವರು ಬರೆದಿರುವ “ರ್ಯಾಪ್‌ ಅಂದ್ರೆ ಹೇಳೋದಲ್ಲ ಸುಮ್‌ಸುಮ್ನೆ… ಎಲ್ಲ ಗೊತ್ತು ಅನ್ನಬೇಡಿ ಸುಮ್‌ ಸುಮ್ನೆ.. ಹಾಡಲ್ಲಿ ಒಂದೊಳ್ಳೆಯ ತಾತ್ಪರ್ಯವಿದೆ. ಈಗಿನ ಯೂಥ್‌ಗೆ ಹೇಳುವಂತಹ ಸಂದೇಶವೂ ಇದೆ. ವಾಸ್ತವತೆಯ ಚಿತ್ರಣವೂ ಇದೆ. ಈ ಹಾಡಿಗೆ ಆನಂದ್‌ ಡಿವಿಎಸ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ತಮ್ಮ ಡ್ಯಾನ್ಸ್‌ ಶಾಲೆಯ ಸ್ಟುಡೆಂಟ್‌ ಇಟ್ಟುಕೊಂಡೇ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ಈ ಹುಡುಗರ ರ್ಯಾಪ್‌ ಸಾಂಗ್‌ ಸ್ಟೆಪ್‌ಗೆ ವಿಜಯಕುಮಾರ್‌ ಜೆ.ಎಸ್.‌ ಅವರು ಕ್ಯಾಮೆರಾ ಹಿಡಿದಿದ್ದಾರೆ. ಓಂಕಾರ್‌ ಅವರ ಸಂಕಲನವಿದೆ.

ವಿಜಯಕುಮಾರ್‌ ಜೆ.ಎಸ್.‌ ಛಾಯಾಗ್ರಾಹಕ

ಗೆಳೆಯರ ಪ್ರೀತಿ ಗೀತಿ ಇತ್ಯಾದಿ…
ಇಷ್ಟಕ್ಕೂ ಇಂಥದ್ದೊಂದು ರ್ಯಾಪ್‌ ಸಾಂಗ್‌ ಮಾಡೋಕೆ ಕಾರಣ, ಗೆಳೆತನ. ಆನಂದ್‌ ಡಿವಿಎಸ್‌, ವಿಜಯಕುಮಾರ್‌ ಗೆಳೆಯರು. ಆ ಗೆಳೆತನ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಇನ್ನು, ಕೋರಿಯೋಗ್ರಾಫರ್‌ ಆನಂದ್‌ ಡಿವಿಎಸ್‌ ಕುರಿತು ಹೇಳುವುದಾದರೆ, ಆನಂದ್‌ ಒಬ್ಬ ಪ್ರೊಫೆಷನಲ್‌ ಡ್ಯಾನ್ಸರ್.‌ ಅಷ್ಟೇ ಅಲ್ಲ, ಡ್ಯಾನ್ಸನ್ನೇ ಬದುಕನ್ನಾಗಿಸಿಕೊಂಡಿದ್ದಾರೆ. ಇವರ ತಂದೆ ಆಟೋ ಓಡಿಸುತ್ತಿದ್ದಾರೆ. ಮಗನಿಗೆ ಡ್ಯಾನ್ಸ್‌ ಮೇಲಿರುವ ಪ್ರೀತಿ ಕಂಡು ಅವನಿಷ್ಟಕ್ಕೆ ಬಿಟ್ಟು ಬಿಟ್ಟಿದ್ದಾರೆ. ಸದಾ ಡ್ಯಾನ್ಸ್‌ ಮೇಲೆ ಪ್ರೀತಿ ಇಟ್ಟುಕೊಂಡಿರುವ ಆನಂದ್‌, ಈಗಾಗಲೇ ದಾವಣಗೆರೆ ಮಟ್ಟಿಗೆ ಸಾಕಷ್ಟು ಗುರುತಿಸಿಕೊಂಡಿದ್ದಾರೆ.

ಅಪ್ಪಟ ಕನ್ನಡಿಗನಾದರೂ ತೆಲುಗಿನ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಿ ಜೋಡಿ ರಿಯಾಲಿಟಿ ಶೋನಲ್ಲಿ ಅಸಿಸ್ಟೆಂಟ್‌ ಕೋರಿಯಾಗ್ರಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವ ಮಹಾದಾಸೆ ಹೊಂದಿದ್ದಾರೆ. ಇತ್ತೀಚೆಗೆ ವಾಹಿನಿಯೊಂದರ ಡ್ಯಾನ್ಸ್‌ ಆಡಿಷನ್‌ನಲ್ಲೂ ಭಾಗವಹಿಸಿ ಗಮನಸೆಳೆದಿದ್ದಾರೆ. ಇನ್ನಷ್ಟೇ ವಾಹಿನಿಯಿಂದ ಕರೆ ಬರುವುದನ್ನು ನಿರೀಕ್ಷೆಯಲ್ಲಿದ್ದಾರೆ.

ದಯಾನಂದ್‌, ಮಾಸ್ಟರ್  

ಡ್ಯಾನ್ಸ್‌ ಪ್ರಿಯರಿಗೆ ಉಚಿತ ತರಬೇತಿ

ಈ ನಡುವೆ ದಾವಣಗೆರೆಯಲ್ಲಿ ಕಳೆದ ಏಳು ವರ್ಷಗಳ ಹಿಂದೆ ಶುರುವಾದ “ಡಿ-ವೈರಸ್‌ ಸ್ಟನ್ನರ್ಸ್‌ ಡ್ಯಾನ್ಸ್‌ ಅಕಾಡೆಮಿ”ಯಲ್ಲಿ ಕೋರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡ್ಯಾನ್ಸ್‌ ಶಾಲೆ ಹುಟ್ಟು ಹಾಕಿದ್ದು, ದಯಾನಂದ್‌ ಎಸ್.ನಾಯಕ ಇವರು ಈ ಡ್ಯಾನ್ಸ್‌ ಶಾಲೆಯ ಮಾಸ್ಟರ್.‌ ಸದ್ಯ ಬೆಂಗಳೂರಲ್ಲಿ ನೆಲೆಸಿರುವ ದಯಾನಂದ್‌ ಅವರು, ಆನಂದ್‌ ಡಿವಿಎಸ್‌ ಅವರಿಗೆ ಆ ಡ್ಯಾನ್ಸ್‌ ಶಾಲೆ ಒಪ್ಪಿಸಿದ್ದಾರೆ.

ಓಂಕಾರ್‌, ಸಂಕಲನಕಾರ

ಆನಂದ್‌ ಕೂಡ ಮಧ್ಯಮ ವರ್ಗದ ಹುಡುಗನಾಗಿದ್ದರಿಂದ ಡ್ಯಾನ್ಸ್‌ ಮೇಲೆ ಪ್ರೀತಿ ಇರುವ, ಶಾಲೆಗೆ ಶುಲ್ಕ ಕಟ್ಟಲು ಸಾಧ್ಯವಾಗದ ಹುಡುಗರಿಗೆ ಉಚಿತವಾಗಿಯೇ ಡ್ಯಾನ್ಸ್‌ ಕಲಿಕೆಯ ತರಬೇತಿ ಕೊಡುತ್ತಿದ್ದಾರೆ. ಅವರನ್ನೇ ಇಟ್ಟುಕೊಂಡು ಈಗ “ಸುಮ್‌ ಸುಮ್ನೆ” ಎಂಬ ರ್ಯಾಪ್‌ ಸಾಂಗ್‌ ಮಾಡಿದ್ದಾರೆ. ‌

ಈ ಸಾಂಗ್‌ ಸ್ಪೆಷಾಲಿಟಿ ಅಂದರೆ,‌ ಸಾಮಾನ್ಯವಾಗಿ ಈ ರ್ಯಾಪ್ ಸಾಂಗ್‌ನಲ್ಲಿ ಡ್ಯಾನ್ಸ್‌ ಕಮ್ಮಿ. ಬರೀ ಕೈ ಮೂವ್‌ಮೆಂಟ್‌ ಇರುತ್ತೆ. ಈ ಹಾಡಿಗೆ ಆನಂದ್‌ ತಮ್ಮ ತಂಡ ಕಟ್ಟಿಕೊಂಡು ಹಿಪ್ಪಪ್‌ ಸ್ಟೆಪ್‌ ಹಾಕಿದ್ದಾರೆ. ಈ ಹಾಡಲ್ಲಿ ರಜತ್‌ ತೆರದಾಳ್‌, ಪ್ರೀತಮ್‌, ಭರತ್‌, ಗುಣಶ್ರೀ, ಸೌಮ್ಯ ಕಾಣಿಸಿಕೊಂಡಿದ್ದು, ಹಾಡಿಗೆ ತಕ್ಕಂತೆ ಕಲರ್‌ಫುಲ್‌ ಸ್ಟೆಪ್‌ ಹಾಕಿದ್ದಾರೆ. ಅದೇನೆ ಇರಲಿ, ದಾವಣಗೆರೆ ಹುಡುಗರ ಈ ರ್ಯಾಪ್‌ ಸಾಂಗ್‌ ನೋಡುವುದರ ಜೊತೆಗೆ ಒಂದು ಮೆಚ್ಚುಗೆ ಇರಲಿ.

 

Categories
ಆಡಿಯೋ ಕಾರ್ನರ್

ಪೃಥ್ವಿ ಅಂಬರ್‌ ಈಗ ಗಾಯಕ – ಸಾಂಗ್‌ ಈಸ್‌ ಬ್ಯೂಟಿಫುಲ್!

ಮೊದಲ ಬಾರಿಗೆ ಹಾಡಿದ ಹೀರೋ

ಈ ಚಿತ್ರರಂಗವೇ ಹಾಗೆ. ಇಲ್ಲಿ ಯಾರು ಏನ್‌ ಬೇಕಾದರೂ ಆಗಬಹುದು. ನಿರ್ಮಾಪಕ ನಿರ್ದೇಶಕರಾಗಿದ್ದಾರೆ, ನಿರ್ದೇಶಕ ಹೀರೋ ಆಗಿದ್ದಾರೆ, ಹೀರೋ, ನಿರ್ದೇಶಕರಾಗಿದ್ದಾರೆ, ಒಮ್ಮೊಮ್ಮೆ ಒಬ್ಬರೇ ಎಲ್ಲವೂ ಆಗಿ ಹೋಗಿದ್ದಾರೆ. ಈಗಾಗಲೇ ಅನೇಕ ನಾಯಕರು ಗಾಯಕರೂ ಆಗಿದ್ದಾರೆ. ಆ ಸಾಲಿಗೆ ಈಗ ಯುವ ನಟ ಪೃಥ್ವಿ ಅಂಬರ್‌ ಕೂಡ ಗಾಯಕರಾಗಿದ್ದಾರೆ.


ಹೌದು, “ಲೈಫ್‌ ಈಸ್‌ ಬ್ಯೂಟೀಫುಲ್‌” ಸಿನಿಮಾಗೆ ಪೃಥ್ವಿ ಅಂಬರ್‌ ಹಾಡಿದ್ದಾರೆ. ಈ ಚಿತ್ರಕ್ಕೆ ಮೊದಲ ಬಾರಿಗೆ ಹಾಡುವ ಮೂಲಕ ಗಾಯಕ ಎನಿಸಿಕೊಂಡಿದ್ದಾರೆ. “ಖುಷಿಗಾಗಿ ಈವರೆಗೂ ಗುನುಗುತ್ತಿದ್ದವರು, ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದೇ ಈ ಹೊತ್ತಿನ ವಿಶೇಷ. ತಮ್ಮ ಮೊದಲ ಹಾಡಿನ ಕುರಿತು ಹೇಳುವ ಪೃಥ್ವಿ, “ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾದಲ್ಲಿ ಖುಷಿಗಾಗಿ ಹಾಡುತ್ತಿದ್ದೆ ಅಷ್ಟೇ. ಮೈಕಲ್ ಜಾಕ್ಸನ್ ನನಗೆ ಅಚ್ಚುಮೆಚ್ಚು. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಅವರ ಮೇಲಿ ಆ ಪ್ರೀತಿಯೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಸಿಕ್ಕಿದೆ” ಎಂಬುದು ಪೃಥ್ವಿ ಅಂಬರ್‌ ಮಾತು.


ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಟ್ಯೂನ್‌ ಕೇಳಿದ ಕೂಡಲೇ ಪೃಥ್ವಿ ಅಂಬರ್, ಸ್ವತಃ ತಾವೇ ಒಂದು ಸಾಹಿತ್ಯ ಬರೆದು ಹಾಡಿದ್ದಾರೆ. ಇವರ ಹಾಡು ಕೇಳಿದ ಚಿತ್ರತಂಡಕ್ಕೂ ಖುಷಿಯಾಗಿದೆ. ಸಂಗೀತ ನಿರ್ದೇಶಕರಿಗೂ ಇವರ ಹಾಡಿನ ಮೇಲೆ ಪ್ರೀತಿ ಮೂಡಿದ್ದರಿಂದ ಅವರಿಂದಲೇ ಹಾಡಿಸಿದ್ದಾರೆ. ಹೀಗಾಗಿ ಬಯಸದೇ ಬಂದ ಅವಕಾಶ ಆಗಿದ್ದರಿಂದ ನನ್ನ ಲೈಫ್‌ನಲ್ಲಿ ಮೊದಲ ಹಾಡು ಹಾಡಿರುವ ಖುಷಿ ಎನ್ನುತ್ತಾರೆ ಪೃಥ್ವಿ. ಮದನ್ ಬೆಳ್ಳಿಸಾಲು ಈ ಹಾಡಿಗೆ ಸಾಹಿತ್ಯವಿದೆ. ಅರುಣ್ ಕುಮಾರ್ ಎಂ. ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರು.
ಫ್ರೈಡೆ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷಿನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

 

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಹೊಸ ವರ್ಷಕ್ಕೆ ಚಂದನ್‌ ಶೆಟ್ಟಿ ಹೊಸ ಕಿಕ್‌ – ಪಾರ್ಟಿ ಫ್ರೀಕ್ ಹಾಡಲ್ಲಿ ನಿಶ್ವಿಕಾ ನಾಯ್ಡು ಸ್ಟೆಪ್‌

ಡಿಸೆಂಬರ್‌ 26ರಂದು ಯುನೈಟ್ ಆಡಿಯೋ ಮೂಲಕ ಬಿಡುಗಡೆ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಅಲ್ಬಂ ಸಾಂಗ್‌ ಬಂದಿವೆ. ಈಗಲೂ ಬರುತ್ತಿವೆ. ಆ ಸಾಲಿಗೆ ಈಗ ಮತ್ತೊಂದು ಹೊಸ ವಿಡಿಯೊ ಆಲ್ಬಂ ಸಾಂಗ್‌ ಬರಲು ಸಜ್ಜಾಗುತ್ತಿದೆ. ಅಂದಹಾಗೆ, ಅದೊಂದು ಪಾರ್ಟಿ ಫ್ರೀಕ್‌ ಹಾಡು. ಈ ಹಾಡಿನ ಮೂಲಕ ಹೊಸ ವರ್ಷದಲ್ಲಿ ಪಡ್ಡೆ ಹುಡುಗರಿಗೆ ಕಿಕ್‌ ಏರಿಸುವ ಪ್ರಯತ್ನ ನಡೆಯುತ್ತಿದೆ. ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿರೋದು, ಗಾಯಕ ಕಮ್‌ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ.

ಚಂದನ್‌ ಶೆಟ್ಟಿ

ಈ ಹಿಂದೆ ಚಂದನ್‌ ಶೆಟ್ಟಿ “ಮೂರೇ ಮೂರು ಪೆಗ್ಗಿಗೆ…” ., “ಟಕೀಲಾ…” ಎಂಬ ಪಾರ್ಟಿ ಸಾಂಗ್‌ ಮಾಡುವ ಮೂಲಕ ಸುದ್ದಿಯಾಗಿದ್ದರು. ಆ ಬಳಿಕ ಅವರು ಬೇರೆ ಜಾನರ್‌ ಹಾಡುಗಳನ್ನು ಮಾಡಿ, ಬಿಡುಗಡೆ ಮಾಡಿದ್ದರು. ಆದರೆ, ಚಂದನ್‌ ಶೆಟ್ಟಿ ಅವರು, ಪಾರ್ಟಿ ಸಾಂಗ್‌ ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಅವರು ಹಲವು ವಿಶೇಷಗಳೊಂದಿಗೆ ಬರುತ್ತಿದ್ದಾರೆ. ಈ ಹಾಡಿನ ವಿಶೇಷವೆಂದರೆ, ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿ ಬರಲಿದ್ದು, ಅದ್ಧೂರಿ ವೆಚ್ಚದಲ್ಲಿ, ಕಲಲರ್‌ ಫುಲ್‌ ಆಗಿ ಎರಡು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಲು ತಯಾರಿ ನಡೆದಿದೆ. ಶೂಟಿಂಗ್ ನಡೆಯಲಿದೆ. ಸ್ಟಾರ್‌ ಹೋಟೆಲ್ ಮತ್ತು ಪಬ್‌ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.

ನಿವೇದಿತಾ ಗೌಡ

ಈ ಹೊಸ ವಿಡಿಯೋ ಆಲ್ಬಂ ಸಾಂಗ್‌ಗೆ “ಪಾರ್ಟಿ ಫ್ರೀಕ್” ಎಂಬ ಹೆಸರಿಟ್ಟಿದ್ದಾರೆ. ಇನ್ನು, ಚೈತನ್ಯ ಲಕಂಸಾನಿ ಅವರು ಈ ವಿಡಿಯೋ ಸಾಂಗ್‌ ನಿರ್ಮಾಣ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡಿ, ಸಾಹಿತ್ಯ ಬರೆದು ಹಾಡಿದ್ದಾರೆ ಕೂಡ. ಅಷ್ಟೇ ಅಲ್ಲ, ಆ ಹಾಡಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಈ ಹಾಡಲ್ಲಿ ಸ್ಟೆಪ್‌ ಹಾಕುತ್ತಿರುವುದು ಮತ್ತೊಂದು ವಿಶೇಷ. ಇನ್ನೊಂದು ವಿಶೇಷವೆಂದರೆ, ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಅವರು ಕೂಡ ಈ ಹಾಡಲ್ಲಿ ಹೆಜ್ಜೆ ಹಾಕಲಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡಿಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸ ಮಾಡಲಿದ್ದಾರೆ. ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಾಡನ್ನು ಡಿಸೆಂಬರ್‌ 26 ರಂದು ಯುನೈಟ್ ಆಡಿಯೋದಲ್ಲಿ ಬಿಡುಗಡೆಯಾಗಲಿದೆ.

ನಿಶ್ವಿಕಾ ನಾಯ್ಡು
Categories
ಆಡಿಯೋ ಕಾರ್ನರ್

ಕಾಶ್ಮೀರದಲ್ಲಿ ಜೋಗಿ ಪ್ರೇಮ್ – ಏಕ್‌ ಲವ್‌ ಯಾ ಚಿತ್ರದ ಹಾಡಲ್ಲಿ ಬಿಝಿ

ಟ್ವೀಟ್‌ ಮಾಡಿ ಖುಷಿ ಹಂಚಿಕೊಂಡ ನಿರ್ದೇಶಕ

“ಜೋಗಿ” ಖ್ಯಾತಿಯ ನಿರ್ದೇಶಕ ಪ್ರೇಮ್‌ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಸಿನಿಮಾ ಅನೌನ್ಸ್‌ ಮಾಡುವುದರಿಂದ ಹಿಡಿದು, ಅವರು ತಮ್ಮ ಚಿತ್ರಕ್ಕೆ ಇಡುವ ಹೆಸರು, ಹೊರ ಬಿಡುವ ಪೋಸ್ಟರ್‌,‌ ಟೀಸರ್‌, ಟ್ರೇಲರ್ ಹೀಗೆ ಆಯಾ ಸಿನಿಮಾ ಮೂಲಕ ಸುದ್ದಿಯಾಗುತ್ತಾರೆ ಮತ್ತು ಆ ಚಿತ್ರವನ್ನೂ ಸದಾ ಸುದ್ದಿಯಲ್ಲಿಡುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಪ್ರೇಮ್‌ ಇದೀಗ “ಏಕ್‌ ಲವ್‌ ಯಾ” ಸಿನಿಮಾ ಜಪ ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರೇಮ್‌ ಕೊರೊನಾ ಬಳಿಕ ಈ ಚಿತ್ರದ ಚಿತ್ರೀಕರಣಕ್ಕೆ ಹೊರಟಿದ್ದಾರೆ.

ಲಾಕ್‌ಡೌನ್‌ ಬಳಿಕ ಪ್ರೇಮ್‌ ಅವರು ಊಟಿ ಸುತ್ತಮುತ್ತ ಸುಂದರ ತಾಣಗಳಲ್ಲಿ ಹಾಡೊಂದರ ಚಿತ್ರೀಕರಣ ನಡೆಸಿದ್ದರು. ಅಲ್ಲಿಂದ ಸ್ವಲ್ಪ ದಿನಗಳ ಕಾಲ ಬ್ರೇಕ್‌ ಕೊಟ್ಟಿದ್ದ ಪ್ರೇಮ್‌, ನಂತರದ ದಿನಗಳಲ್ಲಿ ಮತ್ತೊಂದು ಹಾಡಿಗೆ ಒಳ್ಳೆಯ ತಾಣಗಳನ್ನು ಗುರುತಿಸುವ ಸಲುವಾಗಿಯೇ ಅವರು, ಕಾಶ್ಮೀರ, ಲಡಾಕ್‌, ಗುಜರಾತ್‌, ರಾಜಸ್ಥಾನಕಕೆ ಹೋಗಿ ಬಂದಿದ್ದರು. ಅಂತಿಮವಾಗಿ ಅವರೀಗ ಕಾಶ್ಮೀರದಲ್ಲಿ ತಮ್ಮ ಚಿತ್ರದ ಹಾಡನ್ನು ಚಿತ್ರೀಕರಿಸುತ್ತಿದ್ದಾರೆ. ಈ ಕುರಿತು, ಸ್ವತಃ ಪ್ರೇಮ್‌ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.


” ನಾವು ಈ ಹಾಡನ್ನು ವಿದೇಶದಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಿದ್ವಿ. ಆದರೆ, ನಮ್ಮ ಕಾಶ್ಮೀರದ ಮುಂದೆ ಬೇರೆ ಯಾವುದು ಇಲ್ಲ ಅನಿಸಿದೆ. ಇಲ್ಲಿನ ಜನರ ಸಹಾಯದಿಂದ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ್ದೇವೆ” ಎಂದು ಬರೆದುಕೊಳ್ಳುವ ಮೂಲಕ ತಮ್ಮ ಖುಷಿ ಹೊರಹಾಕಿದ್ದಾರೆ. ಈ ವೇಳೆ ಜಮ್ಮು ಕಾಶ್ಮೀರದ ಪೊಲೀಸರಿಗೆ, ಸೈನಿಕರಿಗೆ ವಿಶೇಷವಾದ ಧನ್ಯವಾದ ತಿಳಿಸಿರುವ ಪ್ರೇಮ್‌, ಕಾಶ್ಮೀರದಿಂದ ಮುಂದಕ್ಕೆ ಲೆಹ್ ಲಡಾಕ್, ಗುಜರಾತ್ ಮತ್ತು ರಾಜಸ್ಥಾನಕ್ಕೆ ತೆರಳಿದ್ದಾಗಿಯೂ ವಿವರ ಹಂಚಿಕೊಂಡಿದ್ದಾರೆ ಪ್ರೇಮ್.‌ ಈ ವೇಳೆ ಹೀರೋ ರಾಣಾ, ನಾಯಕಿ ರೇಶ್ಮಾ ಜೊತೆಗೆ ಚಿತ್ರತಂಡ ಜೊತೆಗಿದೆ.


ಈ ಚಿತ್ರದಲ್ಲಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಕ್ಷಿತಾ ಪ್ರೇಮ್‌ ಅವರ ಸಹೋದರ ರಾಣಾ ಈ ಚಿತ್ರದ ಹೀರೋ. ಹಾಗಾಗಿ ಸ್ವತಃ ರಕ್ಷಿತಾ ಪ್ರೇಮ್‌ ಅವರೇ, ಸಾಕಷ್ಟು ಆಸಕ್ತಿ ವಹಿಸಿ, ಅದ್ಧೂರಿಯಾಗಿಯೇ ಈ ಚಿತ್ರ ಮೂಡಿಬರಲು ಕಾಳಜಿ ವಹಿಸಿದ್ದಾರೆ. ಮೆಹನ್ ಸಿಂಹ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಅರ್ಜುನ್ ಜನ್ಯ ಅವರ ಸಂಗೀತವಿದೆ.

error: Content is protected !!