ಪೃಥ್ವಿ ಅಂಬರ್‌ ಈಗ ಗಾಯಕ – ಸಾಂಗ್‌ ಈಸ್‌ ಬ್ಯೂಟಿಫುಲ್!

ಮೊದಲ ಬಾರಿಗೆ ಹಾಡಿದ ಹೀರೋ

ಈ ಚಿತ್ರರಂಗವೇ ಹಾಗೆ. ಇಲ್ಲಿ ಯಾರು ಏನ್‌ ಬೇಕಾದರೂ ಆಗಬಹುದು. ನಿರ್ಮಾಪಕ ನಿರ್ದೇಶಕರಾಗಿದ್ದಾರೆ, ನಿರ್ದೇಶಕ ಹೀರೋ ಆಗಿದ್ದಾರೆ, ಹೀರೋ, ನಿರ್ದೇಶಕರಾಗಿದ್ದಾರೆ, ಒಮ್ಮೊಮ್ಮೆ ಒಬ್ಬರೇ ಎಲ್ಲವೂ ಆಗಿ ಹೋಗಿದ್ದಾರೆ. ಈಗಾಗಲೇ ಅನೇಕ ನಾಯಕರು ಗಾಯಕರೂ ಆಗಿದ್ದಾರೆ. ಆ ಸಾಲಿಗೆ ಈಗ ಯುವ ನಟ ಪೃಥ್ವಿ ಅಂಬರ್‌ ಕೂಡ ಗಾಯಕರಾಗಿದ್ದಾರೆ.


ಹೌದು, “ಲೈಫ್‌ ಈಸ್‌ ಬ್ಯೂಟೀಫುಲ್‌” ಸಿನಿಮಾಗೆ ಪೃಥ್ವಿ ಅಂಬರ್‌ ಹಾಡಿದ್ದಾರೆ. ಈ ಚಿತ್ರಕ್ಕೆ ಮೊದಲ ಬಾರಿಗೆ ಹಾಡುವ ಮೂಲಕ ಗಾಯಕ ಎನಿಸಿಕೊಂಡಿದ್ದಾರೆ. “ಖುಷಿಗಾಗಿ ಈವರೆಗೂ ಗುನುಗುತ್ತಿದ್ದವರು, ಮೊದಲ ಬಾರಿಗೆ ಚಿತ್ರವೊಂದಕ್ಕೆ ಹಾಡಿರುವುದೇ ಈ ಹೊತ್ತಿನ ವಿಶೇಷ. ತಮ್ಮ ಮೊದಲ ಹಾಡಿನ ಕುರಿತು ಹೇಳುವ ಪೃಥ್ವಿ, “ನಾನು ಸಂಗೀತ ಕಲಿತಿಲ್ಲ. ಆದರೆ, ಆಗಾಗ ಅವಕಾಶ ಸಿಕ್ಕಾಗ ಆರ್ಕೆಸ್ಟ್ರಾದಲ್ಲಿ ಖುಷಿಗಾಗಿ ಹಾಡುತ್ತಿದ್ದೆ ಅಷ್ಟೇ. ಮೈಕಲ್ ಜಾಕ್ಸನ್ ನನಗೆ ಅಚ್ಚುಮೆಚ್ಚು. ಅವರಂತೆ ಡಾನ್ಸ್ ಮಾಡುವುದು ಮತ್ತು ಹಾಡುವುದನ್ನು ಪ್ರಾಕ್ಟಿಸ್ ಮಾಡುತ್ತಿದ್ದೆ. ಅವರ ಮೇಲಿ ಆ ಪ್ರೀತಿಯೇ ಇಂದು ನನ್ನದೇ ಚಿತ್ರಕ್ಕೆ ಹಾಡಲು ಅವಕಾಶ ಸಿಕ್ಕಿದೆ” ಎಂಬುದು ಪೃಥ್ವಿ ಅಂಬರ್‌ ಮಾತು.


ನೊಬಿನ್ ಪೌಲ್ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಟ್ಯೂನ್‌ ಕೇಳಿದ ಕೂಡಲೇ ಪೃಥ್ವಿ ಅಂಬರ್, ಸ್ವತಃ ತಾವೇ ಒಂದು ಸಾಹಿತ್ಯ ಬರೆದು ಹಾಡಿದ್ದಾರೆ. ಇವರ ಹಾಡು ಕೇಳಿದ ಚಿತ್ರತಂಡಕ್ಕೂ ಖುಷಿಯಾಗಿದೆ. ಸಂಗೀತ ನಿರ್ದೇಶಕರಿಗೂ ಇವರ ಹಾಡಿನ ಮೇಲೆ ಪ್ರೀತಿ ಮೂಡಿದ್ದರಿಂದ ಅವರಿಂದಲೇ ಹಾಡಿಸಿದ್ದಾರೆ. ಹೀಗಾಗಿ ಬಯಸದೇ ಬಂದ ಅವಕಾಶ ಆಗಿದ್ದರಿಂದ ನನ್ನ ಲೈಫ್‌ನಲ್ಲಿ ಮೊದಲ ಹಾಡು ಹಾಡಿರುವ ಖುಷಿ ಎನ್ನುತ್ತಾರೆ ಪೃಥ್ವಿ. ಮದನ್ ಬೆಳ್ಳಿಸಾಲು ಈ ಹಾಡಿಗೆ ಸಾಹಿತ್ಯವಿದೆ. ಅರುಣ್ ಕುಮಾರ್ ಎಂ. ಮತ್ತು ಸಾಬು ಅಲೋಶಿಯಸ್ ಜಂಟಿಯಾಗಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಕಿಶೋರ್ ನರಸಿಂಹಯ್ಯ ನಿರ್ಮಾಪಕರು.
ಫ್ರೈಡೆ ಫಿಲ್ಮ್ಸ್ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷಿನಲ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

 

Related Posts

error: Content is protected !!