ಈಗ ಕೃಷ್ಣ ಇನ್ನಷ್ಟು ಮನಮೋಹನ , ಕೇಳುವುದಕ್ಕೆ ಮತ್ತಷ್ಟು ಹೊಸತನ !

ಕೃಷ್ಣ ಟಾಕೀಸ್ ನಿಂದ ಲಾಂಚ್ ಆಯ್ತು ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ 

ನಟ ಅಜೇಯ ರಾವ್ ಅಭಿನಯದ ಬಹುನಿರೀಕ್ಷಿತ ಚಿತ್ರ  ‘ ಕೃಷ್ಣ ಟಾಕೀಸ್’ ‘‌ ನ‌ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಆಗಿದೆ. ಚಿತ್ರ ತಂಡ ಈ ಮೊದಲೇ ಪ್ರಕಟಿಸಿದ ಹಾಗೆ ‘ ಸಂಕ್ರಾಂತಿ ‘ ಹಬ್ಬದಂದು ನಟ ಅಜೇಯ ರಾವ್ ಪುತ್ರಿ ‌ಚೆರ್ರಿ, ಈ ಲಿರಿಕಲ್ ವಿಡಿಯೋ ಅನಾವರಣ ಗೊಳಿಸಿದರು. ನಿರ್ದೇಶಕ ವಿಜಯಾನಂದ್ ಸೇರಿದಂತೆ ಇಡೀ ಚಿತ್ರ ತಂಡ ಇದಕ್ಕೆ ಸಾಥ್ ನೀಡಿ ಸಂಭ್ರಮಿಸಿತು.

ನಿರ್ದೇಶಕ ವಿಜಯಾನಂದ ರಚನೆಯ ‘ ಮನಮೋಹನ, ಮನಮೋಹನ ‘ ಎನ್ನುವ ಗೀತೆಗೆ ರೊಮ್ಯಾಂಟಿಕ್ ಹಾಡುಗಳ ಸರದಾರ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಅನ್ವೇಷಾ ಮತ್ತು ವಿಹಾನ್ ಆರ್ಯ ಹಾಡಿದ್ದಾರೆ‌. ಮದನ ಹರಿಣಿ ನೃತ್ಯ ನಿರ್ದೇಶನ‌ ಮಾಡಿದ್ದು,
ಚಿತ್ರದ ನಾಯಕ ಅಜೇಯ್ ರಾವ್ ಹಾಗೂ ನಾಯಕಿ ಅಪೂರ್ವ ಜೋಡಿ ಇಲ್ಲಿ ಮನಸೋತು ಕುಣಿದಿರುವುದೇ ಮೋಹಕವಾಗಿದೆ.

ಈಗಾಗಲೇ ಕೃಷ್ಣ ಟಾಕೀಸ್ ಚಿತ್ರದ ಒಂದು ಹಾಡಿನ ಲಿರಿಕಲ್ ವಿಡಿಯೋ ಯುಟ್ಯೂಬ್ ಮೂಲಕ ಲಾಂಚ್ ಆಗಿತ್ತು. ಈಗ ಎರಡನೇ ಸಾಂಗ್ ಲಿರಿಕಲ್ ವಿಡಿಯೋ ಲಾಂಚ್ ಮಾಡುವ ಮೂಲಕ‌ ಚಿತ್ರ ತಂಡ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಲು ಸಜ್ಜಾಗಿದೆ. ಕೃಷ್ಣ ಟಾಕೀಸ್ ಎನ್ನುವ ಶೀರ್ಷಿಕೆ ಯೇ ಹೇಳುವ ಹಾಗೆ ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾ. ಕೃಷ್ಣ ಅಜೇಯ್ ರಾವ್, ಅಪೂರ್ವ ಹಾಗೂ ಸಿಂಧು ಲೋಕನಾಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆನಂದ ಪ್ರಿಯಾ ಅಲಿಯಾಸ್ ವರ್ಷದ ವಿಜಯಾನಂದ್ ನಿರ್ದೇಶನ ಮಾಡಿದ್ದು, ಗೋವಿಂದ ರಾಜು ಬಂಡವಾಳ ಹಾಕಿದ್ದಾರೆ.

ಅಜೇಯ ರಾವ್ ನಟನೆಯ ಕೃಷ್ಣ ಸಿರೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಸಾಂಗ್ ಕೊಟ್ಟ ಖ್ಯಾತಿ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಅವರದ್ದು. ಈಗ ಕೃಷ್ಣ ಟಾಕೀಸ್ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿ ಆಗಿದ್ದಾರೆ. ಸದ್ಯಕ್ಕೀಗ ಲಿರಿಕಲ್ ವಿಡಿಯೋ ದೊಂದಿಗೆ ಹವಾ ಎಬ್ಬಿಸಲು ಬರುತ್ತಿದ್ದಾರೆ‌. ಕೃಷ್ಷ ಟಾಕೀಸ್ ಎನ್ನುವ ಹೆಸರೇ ಹೇಳುವಂತೆ, ಇದು ಕೃಷ್ಷ ಹೆಸರಿನ ಟಾಕೀಸ್ ವೊಂದರಲ್ಲಿ‌ನಡೆಯುವ ಕತೆ. ಅದೇನು? ಯಾರಿಗೂ ಗೊತ್ತಿಲ್ಲ.‌ಅದು ಗೊತ್ತಾಗುವುದು ತೆರೆ ಮೇಲೆಯೇ. ಇದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.

Related Posts

error: Content is protected !!