Categories
ಸಿನಿ ಸುದ್ದಿ ಸೌತ್‌ ಸೆನ್ಸೇಷನ್

ಆಸ್ಕರ್ ರೇಸ್‌ನಿಂದ ಹೊರಬಿದ್ದ ‘ಜಲ್ಲಿಕಟ್ಟು’

ಭಾರತೀಯ ಸಿನಿಮಾಗಳಿಗೇಕೆ ಇಲ್ಲ ಮನ್ನಣೆ?  ಗಿರೀಶ್‌ ಕಾಸರವಳ್ಳಿ ವಿಶ್ಲೇಷಣೆ ಇಲ್ಲಿದೆ

  • ಲೇಖನ- ಶಶಿಧರ ಚಿತ್ರದುರ್ಗ

ಲಿಜೋ ಜೋಸ್ ಪೆಲ್ಲಿಸ್ಸರಿ ನಿರ್ದೇಶನದ ‘ಜಲ್ಲಿಕಟ್ಟು’ ಮಲಯಾಳಂ ಸಿನಿಮಾ 93ನೇ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮ ನಿರ್ದೇಶನಗೊಂಡಿತ್ತು. ಅತ್ಯುತ್ತಮ ಅಂತಾರಾಷ್ಟ್ರೀಯ ಫ್ಯೂಚರ್ ಸಿನಿಮಾ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿದ್ದ ಸಿನಿಮಾ ಅಂತಿಮ ಐದು ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುವಲ್ಲಿ ವಿಫಲವಾಗಿದೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆಯುವ ಭಾರತೀಯರ ಕನಸು ಮತ್ತೊಮ್ಮೆ ಕಮರಿ ಹೋಗಿದೆ. ಹಾಗೆ ನೋಡಿದರೆ ‘ಜೆಲ್ಲಿಕಟ್ಟು’ ಚಿತ್ರದ ಬಗ್ಗೆ ಹಿರಿಯ ಸಿನಿಮಾ ತಂತ್ರಜ್ಞರು ಭಾರಿ ಭರವಸೆಯಿಟ್ಟಿದ್ದರು. ಈ ಚಿತ್ರದೊಂದಿಗೆ ಭಾರತಕ್ಕೆ ಆಸ್ಕರ್‌ ಗೌರವ ಸಿಗಲಿದೆ ಎಂದೇ ಹೇಳಲಾಗಿತ್ತು.

ಆದರೆ ನಿರೀಕ್ಷೆ ಹುಸಿಯಾಗಿದೆ. ಇಲ್ಲಿಯವರೆಗೆ ಆಸ್ಕರ್‌ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಅಂತಿಮ ಐದರ ಪಟ್ಟಿಗೆ ಹೋಗಿರುವುದು ಮೂರು ಸಿನಿಮಾಗಳಷ್ಟೆ. “ಮದರ್ ಇಂಡಿಯಾ” (1958), “ಸಲಾಂ ಬಾಂಬೆ” (1989) ಮತ್ತು “ಲಗಾನ್‌” (2001) ಅಂತಿಮ ಐದು ಚಿತ್ರಗಳ ಪಟ್ಟಿಗೆ ಹೋದರೂ ಆಸ್ಕರ್ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿದ್ದವು. ಭಾರತೀಯ ಸಿನಿಮಾಗಳು ವಿವಿಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮನ್ನಣೆ ಗಳಿಸುವುದಿದೆ. ಆದರೆ ಆಸ್ಕರ್ ಸಂದರ್ಭದಲ್ಲಿ ಇದಾಗದು. ಕನ್ನಡದ ಹೆಮ್ಮೆಯ ಹಿರಿಯ ಚಿತ್ರನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರು ವಿಶ್ಲೇಷಿಸುವುದು ಹೀಗೆ –

ಗಿರೀಶ್‌ ಕಾಸರವಳ್ಳಿ

“ಈ ವಿಚಾರವನ್ನು ನಾವು ವಿವಿಧ ಆಯಾಮಗಳಲ್ಲಿ ಗಮನಿಸಬೇಕಾಗುತ್ತದೆ. ಅಲ್ಲಿನ ಮಾನ ದಂಡಗಳೇ ಬೇರೆ ಇರುತ್ತವೆ. ಅಲ್ಲಿ ಕತೆ ಹೇಳುವ ಕ್ರಮವೇ ಬೇರೆ ಇರುತ್ತದೆ. ನಾವು ನಮ್ಮನೆಯಲ್ಲಿ ಮಾಡಿದ ಅಡುಗೆಯೇ ಶ್ರೇಷ್ಠ ಎಂದುಕೊಳ್ಳಲಾಗದು. ಜೊತೆಗೆ ನಾವು ಅಲ್ಲಿಗೆ ರೆಕಮೆಂಡ್ ಮಾಡುವ ಸಿನಿಮಾಗಳು ಕೂಡ ಸರಿ ಇಲ್ಲದಿರಬಹುದು. ಆದರೆ ಈ ಬಾರಿಯ “ಜೆಲ್ಲಿಕಟ್ಟು” ಸಿನಿಮಾ ಉತ್ತಮ ಆಯ್ಕೆಯೇ ಆಗಿತ್ತು. ಆದಾಗ್ಯೂ ಅಲ್ಲಿನ ಜ್ಯೂರಿಗಳು ಚಿತ್ರದಲ್ಲಿ ಹುಡುಕುವ ವಸ್ತು ಬೇರೆಯದ್ದೇ ಆಗಿರುತ್ತದೆ. ಚಿತ್ರದಲ್ಲಿ ಪೊಲಿಟಿಕಲ್ ಟೋನ್‌, ಏಸ್ತಟಿಕ್ ಸೆನ್ಸ್ ನೋಡುತ್ತಾರೆ. ಹೀಗೆ ಹಲವು ಕಾರಣಗಳಿರುತ್ತವೆ. ಮುಖ್ಯವಾಗಿ ಅಲ್ಲಿ ವೋಟಿಂಗ್ ಇರುತ್ತದೆ. ಸಾಕಷ್ಟು ಹಣ ಖರ್ಚು ಮಾಡಿ ಜ್ಯೂರಿಗಳಿಗೆ ಸಿನಿಮಾ ತೋರಿಸಿ, ಅವರನ್ನು ಮೆಚ್ಚಿಸಬೇಕಾಗುತ್ತದೆ.

ಮಿತ ವೆಚ್ಚದಲ್ಲಿ ಸಿನಿಮಾ ಮಾಡುವ ನಮಗೆ ಅದೆಲ್ಲವೂ ಕೈಗೆಟುಕದು. ಬಹುಶಃ ಆ ಪ್ರಕ್ರಿಯೆಯಲ್ಲೂ ಭಾರತೀಯ ಸಿನಿಮಾಗಳು ಹಿಂದೆ ಉಳಿಯುವಂತಾಗುತ್ತದೆ. ಮೊದಲೆಲ್ಲಾ ಆಸ್ಕರ್‌ಗೆ ಹಾಡು, ಕುಣಿತದ ಸಾಕಷ್ಟು ಭಾರತೀಯ ಸಿನಿಮಾಗಳನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡಲಾಗಿದೆ. ಇಂತಹ ಚಿತ್ರಗಳನ್ನು ನೋಡಿರುವ ಜ್ಯೂರಿಗಳು ಭಾರತೀಯ ಸಿನಿಮಾಗಳ ಬಗ್ಗೆಯೇ ಒಂದು ಪೂರ್ವಾಗ್ರಹ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿರುತ್ತವೆ.
ಬೆಂಗಾಲಿ ನಿರ್ದೇಶಕ ಸತ್ಯಜಿತ್ ರೇ ಸಿನಿಮಾಗಳು ಆಸ್ಕರ್ ಗೌರವ ಪಡೆಯುವ ಯೂನಿವರ್ಸಲ್ ವಸ್ತು ಇದ್ದಂಥವು. ರೇ ಅವರ ‘ಚಾರುಲತ’ ಸೇರಿದಂತೆ ಮತ್ತೊಂದೆರೆಡು ಚಿತ್ರಗಳು ಅಂತಹ ಗುಣ ಹೊಂದಿದ್ದವು. ಆದರೆ ಅವರ ಚಿತ್ರಗಳನ್ನು ನಾಮನಿರ್ದೇಶನ ಮಾಡುವಲ್ಲಿ ಹಿಂದೆ ಉಳಿದರು. ಕೊನೆಗೆ ಆಸ್ಕರ್ ಕಮಿಟಿಯವರೇ ಬಂದು ಸತ್ಯಜಿತ್ ರೇ ಅವರ ಕೊನೆಗಾಲದಲ್ಲಿ ಅವರಿಗೆ ಗೌರವ ಸಲ್ಲಸಿದರು. ಬರ್ಲಿನ್‌, ಫ್ರಾನ್ಸ್ ಸೇರಿದಂತೆ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಆಯ್ಕೆಯ ಮಾನದಂಡಗಳೇ ಬೇರೆಯಾಗಿರುತ್ತವೆ. ಆಸ್ಕರ್ ಕೂಡ ಇದಕ್ಕೆ ಹೊರತಲ್ಲ” ಎಂಬುದು ಅವರ ಮಾತು.

Categories
ಸಿನಿ ಸುದ್ದಿ

ಜಿಮ್‌ ರವಿ ಈಗ ಹೀರೋ

ಬಾಡಿಬಿಲ್ಡರ್‌  ಪುರುಷೋತ್ತಮ

ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗಮನಸೆಳೆದಿದ್ದ ಜಿಮ್‌ ರವಿ ಈಗ ಹೀರೋ. ಹೌದು, ಜಿಮ್‌ ರವಿ ಅವರಿಗೆ ಸಿನಿಮಾ ಹೊಸದಲ್ಲ. ಕನ್ನಡ ಚಿತ್ರರಂಗದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜಿಮ್ ರವಿ, ಪೋಷಕ ಪಾತ್ರಗಳಲ್ಲೇ ಜನಮನ ಗೆದ್ದವರು.


ಇವರಿಗೆ ಜಿಮ್‌ ರವಿ ಅನ್ನೋ ಹೆಸರಿನ ಬಗ್ಗೆ ಹೇಳುವುದಾದರೆ, ಇವರು ಅಂತರಾಷ್ಟ್ರೀಯ ಬಾಡಿ ಬಿಲ್ಡರ್. ಹಲವು ದೇಶಗಳಲ್ಲಿ ಸ್ಪರ್ಧಿಸಿ, ಗೆಲುವು ಕಂಡವರು. ಸಾಕಷ್ಟು ಪ್ರಶಸ್ತಿಗಳಿಗೂ ಕಾರಣರಾದವರು. ಸಣ್ಣಪುಟ್ಟ ಪಾತ್ರಗಳ ಮೂಲಕವೇ ಗಮನ ಸೆಳೆದಿದ್ದ ಜಿಮ್‌ ರವಿ ಅವರಿಗೆ ಸಿನಿಮಾ ಮೇಲೆ ಅಪಾರ ಪ್ರೀತಿ ಇದೆ. ಈಗ ನಾಯಕನಾಗಿ ವೀಕ್ಷಕರ ಮುಂದೆ ಬರುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು ಸ್ಯಾಂಡಲ್ವುಡ್ ನಲ್ಲಿ ಜಿಮ್ ರವಿ ಅವರೀಗ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಚಿತ್ರಕ್ಕೆ “ಪುರುಷೋತ್ತಮ” ಎಂದು ನಾಮಕರಣ ಮಾಡಲಾಗಿದೆ. ರವೀಸ್ ಜಿಮ್ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರಕ್ಕೆ ಜಿಮ್ ರವಿ ಅವರೇ ನಾಯಕ ಅನ್ನೋದು ಸುದ್ದಿ. ಅಂದಹಾಗೆ, ಫೆ.೧೪ ರಂದು ಮುಹೂರ್ತ ನಡೆಯಲಿದೆ. ಈ ಚಿತ್ರವನ್ನು ಅಮರ್ನಾಥ್ ಎಸ್.ವಿ ನಿರ್ದೇಶಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ನಟಿಯರಿಗೆ ಸವಾಲೊಡ್ಡಿದ ಬಾಲಿವುಡ್‌ ನಟಿ ಕಂಗನಾ!

ಹಾಲಿವುಡ್‌ ತಾರೆಯರಿಗೆ ತಮ್ಮನ್ನು ಹೋಲಿಸಿ ಟ್ವೀಟ್ ಮಾಡಿದ  ಕ್ವೀನ್‌!

 

ವಿವಾದಿತ ಹೇಳಿಕೆ, ಟ್ವೀಟ್‌ಗಳ ಮೂಲಕ ಸುದ್ದಿಯಾಗುವ ಕಂಗನಾ ಮತ್ತೊಂದು ಇಂಥದ್ದೇ ಟ್ವೀಟ್‌ನೊಂದಿಗೆ ಹಾಜರಾಗಿದ್ದಾರೆ. “ಸದ್ಯ ನನ್ನಂತೆ ವಿಭಿನ್ನ ಪಾತ್ರಗಳಿಗೆ ನ್ಯಾಯ ಸಲ್ಲಿಸುವಂಥ ಮತ್ತೊಬ್ಬ ನಟಿ ಈ ಭೂಮಿ ಮೇಲಿಲ್ಲ. ಹಾಲಿವುಡ್‌ ನಟಿ ಮೆರಿಲ್ ಸ್ಟ್ರೀಪ್‌ ಅವರಂತೆ ನಾನು ‘ಕಚ್ಛಾ ಪ್ರತಿಭೆ’. ಅಲ್ಲದೆ ನಟಿ ಗಾಲ್‌ ಗ್ಯಾಡೋಟ್‌ ಅವರಂತೆ ಆಕ್ಷನ್‌ ಮತ್ತು ಗ್ಲಾಮರ್ ಪಾತ್ರಗಳಿಗೂ ನಾನು ಸೈ” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಕಂಗನಾ ಪ್ರಸ್ತುತ ವಿಭಿನ್ನ ಪಾತ್ರಗಳ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಕ್ಷನ್‌-ಥ್ರಿಲ್ಲರ್‌ ‘ಧಾಕಡ್‌’, ಬಯೋಪಿಕ್‌ ‘ತಲೈವಿ’ ಸಿನಿಮಾಗಳ ಆಶ್‌ಟ್ಯಾಗ್‌ಗಳೊಂದಿಗೆ ಅವರು ಈ ಟ್ವೀಟ್ ಮಾಡಿದ್ದಾರೆ. ಕಂಗನಾ ಟ್ವೀಟ್‌ಗೆ ನೆಟ್ಟಿಗರು ಹತ್ತಾರು ರೀತಿ ತಮಾಷೆಯ ಟ್ವೀಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ‘ಸುದ್ದಿಯಲ್ಲಿರಲು, ತಮ್ಮ ಸಿನಿಮಾ ಪ್ರಚಾರಕ್ಕಾಗಿ ಕಂಗನಾ ಏನು ಬೇಕಾದರೂ ಮಾಡುತ್ತಾರೆ, ಈ ಟ್ವೀಟ್‌ಗಳಲ್ಲಿ ನಾನು, ನಾನು ಎನ್ನುವುದನ್ನು ಸಾಕಷ್ಟು ಬಾರಿ ಬಳಕೆ ಮಾಡಿರುವ ನಿಮಗೆ ಮಾನಸಿಕ ವೈದ್ಯರ ಅವಶ್ಯಕತೆ ಇದೆ!” ಎನ್ನುವ ಪ್ರತಿಕ್ರಿಯೆಯ ಒಕ್ಕಣಿಯ ಟ್ವೀಟ್‌ಗಳು ಕಾಣಿಸುತ್ತಿವೆ.

ಇದೊಂದು ಟ್ವೀಟ್‌ಗೆ ಸುಮ್ಮನಾಗದ ಕಂಗನಾ ಮತ್ತೊಂದು ಟ್ವೀಟ್ ಮಾಡಿ, “ಈ ವಿಚಾರವಾಗಿ ನಾನು ಚರ್ಚೆಗೆ ಸಿದ್ಧಳಿದ್ದೇನೆ. ಜಗತ್ತಿನ ಯಾವುದೇ ಭಾಗದಲ್ಲಿ ಯಾರಾದರೂ ನನ್ನಂತೆ ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿ ಯಶಸ್ವಿಯಾಗಿರುವುದನ್ನು ತೋರಿಸಲಿ. ಆಗ ನಾನು ಅವರಿಗೆ ಶರಣಾಗುತ್ತೇನೆ” ಎಂದು ಸವಾಲು ಹಾಕಿದ್ದಾರೆ.

‘ಧಾಕಡ್‌’ ಚಿತ್ರೀಕರಣದಲ್ಲಿರುವ ಕಂಗನಾ ಅವರು ನಟಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ ‘ತಲೈವಿ’ಯಲ್ಲೂ ನಟಿಸುತ್ತಿದ್ದಾರೆ. ‘ತೇಜಸ್‌’ ಮತ್ತು ‘ಮಣಿಕರ್ಣಿಕಾ2’ ಅವರ ಮುಂದಿನ ಸಿನಿಮಾಗಳು. ಸೆಟ್ಟೇರಲಿರುವ ಮತ್ತೊಂದು ಪೊಲಿಟಿಕಲ್ ಡ್ರಾಮಾ ಹಿಂದಿ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ಅವರು ಆ ಪಾತ್ರದಲ್ಲಿನ ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ್ದರು.

Categories
ಸಿನಿ ಸುದ್ದಿ

ಸ್ಕೇರಿ ಫಾರೆಸ್ಟ್‌ನಲ್ಲಿ ಭಾವನೆಗಳ ಪಯಣ

ಫೆ.28ಕ್ಕೆ ಸಿನಿಮಾ ಬಿಡುಗಡೆ

ಕನ್ನಡಕ್ಕೆ ಥ್ರಿಲ್ಲರ್‌ ಸಿನಿಮಾಗಳು ಹೊಸದೇನಲ್ಲ. ದಿನ ಕಳೆದಂತೆ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಥ್ರಿಲ್ಲರ್‌ ಸಿನಿಮಾ ನೋಡುವ ವರ್ಗವೇ ದೊಡ್ಡದಿದೆ. ಹಾಗಾಗಿ, ಹೊಸಬಗೆಯ ಥ್ರಿಲ್ಲರ್‌ ಚಿತ್ರಗಳು ಇಲ್ಲಿ ಬರುತ್ತಲೇ ಇವೆ. ಆ ಸಾಲಿಗೆ ಈಗ “ಸ್ಕೇರಿ ಫಾರೆಸ್ಟ್‌” ಎಂಬ ಹೊಸಬರ ಚಿತ್ರ ಕೂಡ ಸೇರಿದೆ. ಸಂಜಯ್ ಅಬೀರ್ ನಿರ್ದೇಶನದ ಈ ಚಿತ್ರ ಫೆ.೨೮ ರಂದು ಬಿಡುಗಡೆಯಾಗುತ್ತಿದೆ.

 

 

 

 

ಚಿತ್ರದ ಬಗ್ಗೆ ಹೇಳುವುದಾದರೆ, ಕಾಲೇಜು ಸ್ಟೂಡೆಂಟ್ಸ್‌ ಸೇರಿ ಸಂಶೋಧನೆಗೆ ಕಾಡಿಗೆ ತೆರಳಿ ಅಲ್ಲಿ ಯಾವುದೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಾರೆ ಅನ್ನೋದು ಈ ಸಿನಿಮಾದ ಕಥೆ. ಮನುಷ್ಯನೋ, ಆತ್ಮನೋ ಎನ್ನುವ ಕುತೂಹಲ ಈ ಸಿನಿಮಾದಲ್ಲಿ ‌ಕ್ಯೂರಿಯಾಸಿಟಿ ಈ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.

 

 

 

 

 

 

 

ಸಿನಿಮಾದಲ್ಲಿ ಆರು ಹಾಡುಗಳಿವೆ. ಎಲ್ಲಾ ಜಾನರ್‌ ಹಾಡುಗಳು ಇಲ್ಲಿ ಕಾಣಬಹುದು. ನಿರ್ದೇಶಕ ಸಂಜಯ್ ಅಬೀರ್ ಸಿನಿಮಾ ಬಗ್ಗೆ ಹೇಳುವುದಿಷ್ಟು. ಇದೊಂದು ಭಾವನೆಗಳ ಗುಚ್ಛವಿರುವ ಚಿತ್ರ. ಒಳ್ಳೆಯ ತಂಡದೊಂದಿಗೆ ಉತ್ಸಾಹದಿಂದ ಈ ಸಿನಿಮಾ ಮಾಡಲಾಗಿದೆ, ಎಲ್ಲಾ ವರ್ಗಕ್ಕೂ ಇದು ಇಷ್ಟವಾಗಲಿದೆ ಎನ್ನುತ್ತಾರೆ ಅವರು. ಜಯಪ್ರಭ ಚಿತ್ರದ ಹೀರೋ.

 

 

 

 

 

 

ಸಿನ್ಮಾ ಕುರಿತು ಹೇಳುವ ಅವರು, “ನಾನು ಹುಟ್ಟಿನಿಂದಲೇ ರಾಜ್ ಕುಮಾರ್ ಅಭಿಮಾನಿ‌. ಬಾಲಿವುಡ್ ನನಗೆ ಬೇಸ್ ಆಯಿತು. ಒಂದೊಳ್ಳೆಯ ಕಥೆಯಲ್ಲಿ ನಾನಿದ್ದೇನೆ ಅನ್ನೋದು ಹೆಮ್ಮೆ ಎಂಬುದು ಅವರ ಮಾತು. ನಾಯಕಿ ಟೀನಾ ಪೊನ್ನಪ್ಪ. ಕೂಡ ಪಾತ್ರದ ಬಗ್ಗೆ ಹೇಳಿಕೊಂಡು, ಶೇ. 90 ರಷ್ಟುಚಿತ್ರೀಕರಣ ಸಿದ್ಧಗಂಗಾ ಮಠದಲ್ಲಿ ನಡೆದಿದೆ.

 

 

 

 

 

 

 

ಅಮ್ರಿನಾ ಕಲ್ಪನಾ ಅವರಿಲ್ಲಿ 22 ವರ್ಷದ ಹುಡುಗಿಯ ಪಾತ್ರ ನಿರ್ವಹಿಸಿದ್ದಾರಂತೆ. “ಪ್ರೀತಿಯ ಬಲೆಯಲ್ಲಿ ಹೇಗೆ ಬೀಳ್ತೀನಿ, ಹೀರೋನ ಇಷ್ಟ ಪಟ್ಟರೆ, ಹೀರೋ ಮತ್ತೊಬ್ಬಳ ಪ್ರೀತಿಯ ಬಲೆಯಲ್ಲಿ ಬೀಳ್ತಾಳೆ. ನನಗೆ ಆಮೇಲೆ ಏನೆಲ್ಲಾ ಸಮಸ್ಯೆ ಎದುರಾಗುತ್ತೆ ಅನ್ನೋದು ಕಥೆ. ಈ ಸಿನಿಮಾಗೆ ದೇವರಾಜ್, ಪ್ರಕಾಶ ಹಾಡನ್ನು ಬರೆದು ಹಾಡಿದ್ದಾರೆ. “ಪ್ರೀತಿ, ಭಯ, ಆತ್ಮ” ಎಂಬ ಅಡಿಬರಹವಿದೆ. ಪಂಚಾಕ್ಷರಿ, ಬೇಬಿ ಪೂಜಾ, ಪರಶಿವಯ್ಯ, ಸಾಹಿತಿ ದೇವರಾಜ್ ಪ್ರಕಾಶ್ ಇತರರು ಸಿನಿಮಾ ಬಗ್ಗೆ ಹೇಳಿಕೊಂಡರು.

 

Categories
ಸಿನಿ ಸುದ್ದಿ

ರಿಲೀಸ್‌ ಆಯ್ತು ಆಕ್ಷನ್‌-ಥ್ರಿಲ್ಲಿಂಗ್‌ ‘ಎಫ್‌9’ ಟೀಸರ್‌ !

ಜನಪ್ರಿಯ ‘ಫಾಸ್ಟ್‌ ಅಂಡ್‌ ಫ್ಯೂರಿಯಸ್‌’ ಹಾಲಿವುಡ್‌ ಸರಣಿ ಸಿನಿಮಾ ತೆರೆಗೆ ರೆಡಿ

ಹಾಲಿವುಡ್‌ನ ಅತ್ಯಂತ ಜನಪ್ರಿಯ ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ನೂತನ ಸಿನಿಮಾ ‘ಎಫ್‌9’ ಟೀಸರ್ ಬಿಡುಗಡೆಯಾಗಿದೆ. ಮೂವತ್ತು ಸೆಕೆಂಡ್‌ಗಳ ಚಿಕ್ಕ ಅವಧಿಯ ಟೀಸರ್ ಎನ್ನುವುದು ವಿಶೇ‍ಷ! ಭರಪೂರ ಆಕ್ಷನ್ ಜೊತೆ ಇಲ್ಲಿ ಫ್ಯಾಮಿಲಿ ಸೆಂಟಿಮೆಂಟ್‌ ಕೂಡ ಯತೇಚ್ಛವಾಗಿ ಇರುವಂತಿದೆ. ಕಳೆದ ಸರಣಿ ಸಿನಿಮಾಗಳಿಗಿಂತ ಕೊಂಚ ಭಿನ್ನವಾಗಿರಲಿದೆ ಎಂದು ನಿರ್ದೇಶಕ ಜಸ್ಟಿನ್ ಲಿನ್ ಮೊದಲೇ ಹೇಳಿಕೊಂಡಿದ್ದರು. ಅದರ ಸೂಚನೆ ಟೀಸರ್‌ನಲ್ಲಿ ಕಾಣಿಸುತ್ತದೆ. ಕುಟುಂಬದ ಸೀನ್‌, ಔತಣಕೂಟದೊಂದಿಗೆ ಆರಂಭವಾಗುವ ಟೀಸರ್‌ ಆಕ್ಷನ್‌ಗೆ ತೆರೆದುಕೊಳ್ಳುತ್ತದೆ. ಜಾನ್‌ ಸೆನಾ, ಹೆಲನ್ ಮಿರನ್‌ರ ನಗು, ಚಾರ್ಲ್ಸ್‌ ಥೆರೋನ್‌ ಕಣ್ಣು ಹೊಡೆವುದೇಕೆ ಎನ್ನುವುದು ಸಸ್ಪೆನ್ಸ್‌!

“ಬದಲಾವಣೆ ಜಗದ ನಿಯಮ. ಆದರೆ ಒಂದು ವಿಚಾರದಲ್ಲಿ ಬದಲಾವಣೆ ಕಾಣಿಸಲು ಸಾಧ್ಯವೇ ಇಲ್ಲ” ಎನ್ನುತ್ತಾರೆ ವಿನ್‌ ಡೀಸೆಲ್‌. ಈ ಸಂಭಾಷಣೆ, ಪಾತ್ರದೊಂದಿಗೆ ನಿರ್ದೇಶಕರು ಏನು ಹೇಳಲು ಹೊರಟಿರಬಹುದು ಎನ್ನುವ ಕುತೂಹಲ ಉಳಿಯುತ್ತದೆ. ಡೇನಿಯಲ್ ಕೇಸಿ ಅವರೊಡಗೂಡಿ ಜಸ್ಟಿನ್ ಲಿನ್ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.

ಇದು ‘ಫಾಸ್ಟ್‌ ಅಂಡ್ ಫ್ಯೂರಿಯಸ್‌’ ಸರಣಿಯ ಒಂಬತ್ತನೇ ಸಿನಿಮಾ. ಈ ಸರಣಿಯ ಮುಂದಿನ ಎರಡು ಚಿತ್ರಗಳನ್ನೂ ಜಸ್ಟಿನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನುವ ಘೋಷಣೆ ಈಗಾಗಲೇ ಹೊರಬಿದ್ದಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಚಿತ್ರ 2020ರ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಚಿತ್ರದ ಬಿಡುಗಡೆ ದಿನಾಂಕ 2021ರ ಮೇ 28ಕ್ಕೆ ನಿಗಧಿಯಾಗಿದೆ. ಟೈರಿಸ್ ಗಿಬ್ಸನ್‌, ಕ್ರಿಸ್‌ ಲ್ಯುಡಾಕ್ರಿಸ್‌, ಸಂಗ್ ಕಾಂಗ್‌, ಚಾರ್ಲ್ಸ್‌ ಥೆರೋನ್‌, ಹೆಲನ್ ಮಿರನ್‌, ಜೋರ್ಡಾನ್ ಬ್ರ್ಯೂಸ್ಟರ್‌, ಜಾನ್ ಸೆನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Categories
ಸೌತ್‌ ಸೆನ್ಸೇಷನ್

ಮಮ್ಮೂಟಿ ಭೀಷ್ಮ ಫಸ್ಟ್‌ಲುಕ್‌ ಔಟ್‌!

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ತಾರಾಪುತ್ರ ದುಲ್ಕರ್ ಸಲ್ಮಾನ್‌

ನಟ ದುಲ್ಕರ್ ಸಲ್ಮಾನ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ತಂದೆ ಮಮ್ಮೂಟಿ ಅವರ ಹೊಸ ಸಿನಿಮಾ ‘ಭೀಷ್ಮ’ ಫಸ್ಟ್‌ಲುಕ್‌ ಶೇರ್ ಮಾಡಿದ್ದಾರೆ. ಅಲ್ಲಿ ಮಮ್ಮೂಟಿಯ ಎರಡು ಫೋಟೋಗಳಿವೆ. ಕಪ್ಪು ಷರ್ಟ್‌ ತೊಟ್ಟ ಅವರ ದಿಟ್ಟ ನೋಟ ಪಾತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ. “ನಿಮಗೆ ಚಿತ್ರದ ಫಸ್ಟ್‌ಲುಕ್‌ ತೋರಿಸುತ್ತಿದ್ದೇನೆ. ನಿರ್ದೇಶಕ ಅಮಲ್ ನೀರದ್‌ ಮತ್ತು ಅಪ್ಪನ ಕಾಂಬಿನೇಷನ್‌ ಎಂದಾಕ್ಷಣ ನನಗೆ ‘ಬಿಗ್ ಬಿ’ ಚಿತ್ರ ನೆನಪಾಗುತ್ತದೆ. ಇವರಿಬ್ಬರೂ ಮತ್ತೊಮ್ಮೆ ‘ಭೀಷ್ಮ’ ಚಿತ್ರದಲ್ಲಿ ಮನರಂಜನೆ ಒದಗಿಸುವ ಸಂಪೂರ್ಣ ವಿಶ್ವಾಸ ನನಗಿದೆ. ಚಿತ್ರತಂಡದ ಎಲ್ಲರಿಗೂ ಶುಭವಾಗಲಿ” ಎಂದು ದುಲ್ಕರ್ ಬರೆದಿದ್ದಾರೆ.

ಅಮಲ್‌ ನೀರದ್ ನಿರ್ದೇಶನದಲ್ಲಿ ಮಮ್ಮೂಟಿ ಅವರ ಎರಡನೇ ಚಿತ್ರವಿದು. ಈ ಹಿಂದೆ 2007ರಲ್ಲಿ ತೆರೆಕಂಡಿದ್ದ ಈ ಜೋಡಿಯ ಸಿನಿಮಾ ‘ಬಿಗ್ ಬಿ’ ದೊಡ್ಡ ಯಶಸ್ಸು ಕಂಡಿತ್ತು. ಮಮ್ಮೂಟಿ ಕೂಡ ಫೋಟೋಗಳನ್ನು ‘ಭೀಷ್ಟ ಪರ್ವ’ ಆಶ್‌ಟ್ಯಾಗ್‌ ಅಡಿ ಶೇರ್ ಮಾಡಿದ್ದಾರೆ. ಚಿತ್ರದ ಇತರೆ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬೀಳಬೇಕಿದೆ. ಇನ್ನು ಮಾರ್ಚ್‌ 4ರಂದು ಮಮ್ಮೂಟಿ ‘ದಿ ಪ್ರೀಸ್ಟ್‌’ ಸಿನಿಮಾದೊಂದಿಗೆ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಮಿಸ್ಟರಿ ಥ್ರಿಲ್ಲರ್‌ ಎನ್ನಲಾಗುತ್ತಿರುವ ಈ ಚಿತ್ರದ ನಿರ್ದೇಶಕ ಜಾಫಿನ್‌ ಟಿ.ಚಾಕೋ. ಮಂಜು ವಾರಿಯರ್‌, ನಿಖಿಲಾ ವಿಮಲ್‌, ಶ್ರೀನಾಥ್ ಭಾಸಿ, ಸಾನಿಯಾ ಅಯ್ಯಪ್ಪನ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

Categories
ಸಿನಿ ಸುದ್ದಿ

ಶ್ಯಾಡೊ ನಿರ್ಮಾಪಕರ ವಿರುದ್ಧ ವಿನೋದ್‌ ಬೇಸರ

ನನ್‌ ಮಾತು ಕೇಳದೇ ಮನಸ್ಸಿಗೆ ಬಂದಂತೆ ನಡೆದುಕೊಂಡರು!

 

“ಈ ಸಮಯದಲ್ಲಿ ಚಿತ್ರ ರಿಲೀಸ್‌ ಮಾಡೋದು ಬೇಡ ಅಂತ ಹೇಳಿದ್ದೆ. ಆದರೆ, ನಿರ್ಮಾಪಕರು ಮಾತ್ರ ನನ್ನ ಮಾತು ಕೇಳದೆ, ಹೇಳದೆಯೇ ಚಿತ್ರ ರಿಲೀಸ್‌ ಮಾಡಿದ್ದಾರೆ. ನಾನು, ನನ್ನದು ಅಂತ ಹೋದರೆ ಏನೂ ಲಾಭವಿರೋದಿಲ್ಲ…”


– ಇದು ನಟ ವಿನೋದ್‌ಪ್ರಭಾಕರ್‌ ಅವರ ಬೇಸರದ ನುಡಿ. ಇಷ್ಟಕ್ಕೂ ವಿನೋದ್‌ ಪ್ರಭಾಕರ್‌ ಹೀಗೆ ನೋವಿನ ಮಾತುಗಳಲ್ಲಿ ಹೇಳಿಕೊಂಡಿದ್ದು, ತಮ್ಮ “ಶ್ಯಾಡೊ” ಸಿನಿಮಾ ಬಗ್ಗೆ. ಹೌದು, “ಶ್ಯಾಡೊ” ಫೆ.೫ರಂದು ರಿಲೀಸ್‌ ಆಗಿತ್ತು. ಇದಕ್ಕೂ ಮುನ್ನ, ವಿನೋದ್‌ ಪ್ರಭಾಕರ್‌ ರಾಂಗ್‌ ಟೈಮ್‌ನಲ್ಲಿ ರಿಲೀಸ್‌ ಬೇಡ ಅಂತಾನೇ ಹೇಳಿದ್ದರಂತೆ. ಆದರೆ, ನಿರ್ಮಾಪಕರು ಮಾತ್ರ ಮಾತು ಕೇಳದೆ ರಿಲೀಸ್‌ ಮಾಡಿದ್ದಾರೆ.

ಚಿತ್ರದ ಬಗ್ಗೆ ಒಳ್ಳೆಯ ಮಾತು ಕೇಳಿಬಂದರೂ, ಕಲೆಕ್ಷನ್‌ ವಿಚಾರದಲ್ಲಿ ಏನೂ ಆಗಿಲ್ಲ. ನಾನು ಇರುವೆಯ ರೀತಿ ಸಾಮ್ರಾಜ್ಯ ಕಟ್ಟಿದ್ದೇನೆ‌. ಆದರೆ, ಎಲ್ಲರೂ ಅದನ್ನು ಕೆಡವಿದರು. ಎಲ್ಲಾ ಅವರವರೇ ಡಿಸೈಡ್ ಮಾಡ್ತಾರೆ, ನಾನು ಅನ್ನೋದು ಇಲ್ಲಿ ಶಾಶ್ವತ ಅಲ್ಲ. ಈ ಸಿನಿಮಾದಲ್ಲಿ ಟೀಂ ವರ್ಕ್ ಇರಲಿಲ್ಲ. ಫ್ಯಾಮಿಲಿ ತರಹ ನಾವೆಲ್ಲ ಒಂದೇ ಎನ್ನುವ ಭಾವನೆ ಕಿಂಚಿತ್ತೂ ಇದ್ದಿಲ್ಲ. ಮುಖ್ಯವಾಗಿ, ಕಮ್ಯೂನಿಕೇಷನ್ ಗ್ಯಾಪ್ ಸಮಸ್ಯೆ ಎಂದು ಬೇಸರಿಸಿಕೊಂಡೇ ಹೇಳಿಕೊಂಡರು ವಿನೋದ್.


“ಶ್ಯಾಡೊ” ಬಿಡುಗಡೆ ಮಾಡುವ ಸಮಯದಲ್ಲಿ ನನ್ನನ್ನು ಒಂದು ಮಾತೂ ಪ್ರೊಡ್ಯೂಸರ್ ಕೇಳಲೇ ಇಲ್ಲ. ಬಿಡುಗಡೆ ಯಾವಾಗ ಅನ್ನೋದು ಪತ್ರಿಕೆಗಳಲಲಿ ಓದಿ ಗೊತ್ತಾಯ್ತು. ಹಾಗಂತ ನಾನು ದುರಹಂಕಾರಿ ಮನುಷ್ಯನಲ್ಲ. ಮುಂದೆ ನನ್ನದೇ ಆದ ಹೊಸ ಟೀಂ ಕಟ್ಟಿ, ಸಿನಿಮಾ ರಂಗದಲ್ಲಿ ತಂದೆಯಾದ ಪ್ರಭಾಕರ್ ಹೆಸರನ್ನು ಬೆಳೆಸುವುದೊಂದೇ ನನ್ನಾಸೆ” ಎಂಬುದು ವಿನೋದ್‌ ಹೇಳಿಕೆ. ಅಂದಹಾಗೆ, ರವಿಗೌಡ “ಶ್ಯಾಡೊ” ಸಿನಿಮಾದ ನಿರ್ದೇಶಕರು. ಇದು ಮಲಯಾಳಂನಲ್ಲಿ ಬಂದ ಚಿತ್ರ. ತೆಲುಗಿಗೂ ಡಬ್‌ ಆಗಿದ್ದ “ನೆಪೋಲಿಯನ್‌” ಚಿತ್ರದ ರೀಮೇಕ್. ಚಕ್ರವರ್ತಿಸಿ.ಎಚ್. ನಿರ್ಮಾಣವಿದೆ.

Categories
ಸಿನಿ ಸುದ್ದಿ

ಬುರ್ಜ್‌ ಖಲೀಫ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ಹೇಗೆ – ಒಂದೊಂದು ವಿಷಯವೂ ರೋಚಕ…

ವಿಕ್ರಾಂತ್‌ ರೋಣ ಅನಾವರಣ ಹಿಂದಿನ ಕಥೆ

ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಶೀರ್ಷಿಕೆ ಜಗತ್ತಿನ ಅತೀ ಎತ್ತರದ ಕಟ್ಟಡದ ಖ್ಯಾತಿ ಪಡೆದಿರುವ ದುಬೈನ “ಬುರ್ಜ್‌ ಖಲೀಫ” ಮೇಲೆ ಅನಾವರಣಗೊಂಡಿದ್ದು ಎಲ್ಲರಿಗೂ ಗೊತ್ತು. ಅತ್ಯಂತ ಎತ್ತರದ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣಗೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲ, ಅದೊಂದು ಐತಿಹಾಸಿಕ ಕ್ಷಣವಂತೂ ಹೌದು. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣ ಮಾಡುವುದು ಅಂದರೆ ತುಸು ಶ್ರಮದ ಕೆಲಸವೇ ಅಂಥದ್ದೊಂದು ಕೆಲಸಕ್ಕೆ “ವಿಕ್ರಾಂತ್‌ ರೋಣ” ಚಿತ್ರತಂಡ ಸಾಕ್ಷಿಯಾಗಿದೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ವಿಶೇಷವೇ ಸರಿ. ಆ ಕುರಿತು ಒಂದಷ್ಟು ರೋಚಕ ವಿಷಯಗಳಿವೆ. ಹಾಗೆ ಹೇಳುವುದಾದರೆ…


ಬುರ್ಜ್‌ ಖಲೀಫ ಕಟ್ಟಡದಲ್ಲಿ ಬೇರೆ ಬೇರೆ ದೇಶಗಳ ಧ್ವಜಗಳನ್ನು ಹಾರಿಸಬಹುದು. ಹಾಗೆಯೇ, “ವಿಕ್ರಾಂತ್‌ ರೋಣ” ಚಿತ್ರದ ನಿರ್ಮಾಪಕ ಜಾಕ್‌ ಮಂಜು ಅವರು ಇಂಡಿಯನ್‌ ಫ್ಲಾಗ್‌ ಹಾರಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಅಲ್ಲಿ ಬೇಗನೇ ಅನುಮತಿ ಸಿಗಲಿಲ್ಲ. ಯಾಕೆಂದರೆ, ಎಂಬೆಸ್ಸಿ ಮೂಲಕ ಅನುಮತಿ ಪಡೆಯಬೇಕಿತ್ತು. ಅದಕ್ಕೆಲ್ಲ ಸಮಯವೂ ಇರಲಿಲ್ಲ. ಕಡಿಮೆ ಅವಧಿ ಇದ್ದುದರಿಂದ ನಿರ್ಮಾಪಕ ಜಾಕ್‌ ಮಂಜು, ಏನಾದರೂ ಸರಿ, ಕನ್ನಡ ಧ್ವಜ ಹಾರಿಸಬೇಕು ಅಂದುಕೊಂಡು ಮುಂದಾದರು. ಎರಡು ವಾರದಲ್ಲಿ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ಸಮಯ ಕಡಿಮೆ ಇದ್ದುರಿಂದ ಎಂಬೆಸ್ಸಿ ಅನುಮತಿ ಅಸಾಧ್ಯ. ಹಾಗಾಗಿ ಅಲ್ಲಿ ಕನ್ನಡ ಧ್ವಜ ಹಾರಿಸಿಬಿಟ್ಟರು. ಆದರೆ, ಕನ್ನಡಿಗರನ್ನು ಹೊರತುಪಡಿಸಿ ಅಲ್ಲಿರುವ ಮಂದಿಗೆ ಕನ್ನಡ ಧ್ವಜದ ಬಣ್ಣದ ಬಗ್ಗೆ ಅಷ್ಟೇನೂ ಐಡಿಯಾ ಇರಲಿಲ್ಲ. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿತು.

ಸ್ಕ್ರೀನಿಂಗ್‌ ಆಗಿದ್ದು 6 ಕಿಮೀ ದೂರದಿಂದ...
ಎಲ್ಲರೂ ಬುರ್ಜ್‌ ಖಲೀಫ ಮೇಲೆ ನಮ್ಮ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ನೋಡಿ ಹೆಮ್ಮೆ ಎನಿಸಿದ್ದು ನಿಜ. ಕನ್ನಡ ಧ್ವಜ ಕಾಣಿಸಿಕೊಂಡಿದ್ದೂ ಕೂಡ ಅಷ್ಟೇ ಸಂಭ್ರಮ ಎನಿಸಿತು. ಆದರೆ, ಆ ಕಟ್ಟಡದ ಮೇಲೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ, ಎಲ್ಲವೂ ಸುಲಭವಾಗಿರಲಿಲ್ಲ. ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಚಿತ್ರದ ಶೀರ್ಷಿಕೆ ಮೂಡಲು, ಕನ್ನಡ ಧ್ವಜ ರಾರಾಜಿಸಲು ಸುಮಾರು 6  ಕಿ.ಮೀ ದೂರದಲ್ಲೇ ಪ್ರೊಜೆಕ್ಟರ್ ಸೆಟಪ್‌ ಮಾಡಿ ಆ ನಂತರ ಲೇಸರ್‌ ಮೂಲಕ ಸ್ಕ್ರಿನಿಂಗ್‌ ಮಾಡಲಾಗಿದೆ.

ದೊಡ್ಡ ಕಟ್ಟಡದ ಮೇಲೆ ಇಷ್ಟೆಲ್ಲಾ ಬರಬೇಕಾದರೆ, ದೂರದಿಂದಲೇ ಪ್ರೊಜೆಕ್ಟರ್ ಸೆಟಪ್‌ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಕಿಲೋಮೀಟರ್‌ಗೊಂದೊಂದು ಕ್ಯಾಮೆರಾ ಸೆಟಪ್‌ ಮಾಡಿ ಸುಮಾರು ನಾಲ್ಕೈದು ಪ್ರೊಜೆಕ್ಟರ್‌ಗಳ ಮೂಲಕ ಆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕೋವಿಡ್‌ ಇದ್ದುದರಿಂದ ಆರು ಜನರ ಮೇಲೆ ಗುಂಪಾಗಲು ಅಲ್ಲಿ ಅವಕಾಶವೂ ಇರಲಿಲ್ಲ. ಹೇಗೋ, “ವಿಕ್ರಾಂತ್‌ ರೋಣ” ತಂಡ, ಇಷ್ಟಿಷ್ಟು ಜನರನ್ನು ಇಟ್ಟುಕೊಂಡು ಅಸಾಧ್ಯವಾದದ್ದನ್ನು ಸಾಧಿಸಿದೆ. ವಿಶೇಷ ಕಾರ್ಯಕ್ರಮ ವೀಕ್ಷಿಸಲು ದುಬೈ ಕನ್ನಡಿಗರು ಬರುತ್ತಾರಾ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕಿತ್ತು. ಆದರೆ, ಅವರ ನಿರೀಕ್ಷೆ ಮೀರಿ ಜನರು ಸೇರಿದ್ದು ಮರೆಯಲಾರದ ವಿಷಯ ಎಂಬುದು ಚಿತ್ರತಂಡದ ಮಾತು.

ಬುರ್ಜ್‌ ಖಲೀಫಗೆ ಮಾಡಿದ ಖರ್ಚಲ್ಲಿ ನಾಲ್ಕು ಕಲಾತ್ಮಕ ಚಿತ್ರ ಮಾಡಬಹುದಿತ್ತು!
ಇಂಥದ್ದೊಂದು ಸಾಹಸಕ್ಕೆ ಮುಂದಾದ ಜಾಕ್‌ ಮಂಜು, ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಟೈಟಲ್‌ ಜೊತೆ ಕನ್ನಡ ಧ್ವಜ ರಾರಾಜಿಸಬೇಕೆನಿಸಿದ್ದು ನವೆಂಬರ್‌ನಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡುವಾಗ, ಕನ್ನಡ ಬಗ್ಗೆ, ಧ್ವಜದ ಬಗ್ಗೆ ಮಾತುಕತೆ ನಡೆಸುತ್ತಿದ್ದರಂತೆ.

ಅತೀ ಎತ್ತರದಲ್ಲಿ ಬಾವುಟ ಹಾರಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ, ಜಾಕ್‌ಮಂಜು ಅವರಿಗೊಂದು ಯೋಚನೆ ಬಂದಿದೆ. ಯಾಕೆ ದುಬೈನಲ್ಲಿರುವ ಬುರ್ಜ್‌ ಖಲೀಫ ಮೇಲೆ ಇದನ್ನೆಲ್ಲಾ ಮಾಡಬಾರದು ಅಂತಂದುಕೊಂಡು ಇಷ್ಟೆಲ್ಲಾ ಮಾಡಲು ಕಾರಣವಾಯಿತು ಎನ್ನುತ್ತಾರೆ ಜಾಕ್‌ ಮಂಜು. ಅಂದಹಾಗೆ, ಅದಕ್ಕೆಲ್ಲಾ ಕೋಟಿಗಟ್ಟಲೆ ಖರ್ಜು ಬೇಕೇ ಬೇಕು. ಆದರೆ, ದೊಡ್ಡ ಮಟ್ಟದಲ್ಲೇ ಸುದೀಪ್‌ ಅವರ ಚಿತ್ರದ ಟೈಟಲ್‌ ಲಾಂಚ್‌ ಮಾಡಬೇಕು ಅಂದುಕೊಂಡು, ಈ ಕೆಲಸ ಮಾಡಿದ್ದಾರೆ. ಇನ್ನು, ಅಲ್ಲಿಗೆ ಖರ್ಚು ಮಾಡಿದ ಹಣದಲ್ಲಿ ನಾಲ್ಕು ಕಲಾತ್ಮಕ ಚಿತ್ರಗಳನ್ನು ಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ದರ್ಶನ್‌ ಫ್ಯಾನ್ಸ್‌ಗೆ ಇದು ಸಂಭ್ರಮದ ಸುದ್ದಿ – ಮೆಜೆಸ್ಟಿಕ್‌ ಚಿತ್ರ ಬಂದು ಹತ್ತೊಂಬತ್ತು ವರ್ಷ

ಸಂತಸದಲ್ಲಿ ಮಿಂದೆದ್ದ ದಚ್ಚು ಹುಡುಗರು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಹೌದು, ದರ್ಶನ್‌ ಅವರ “ರಾಬರ್ಟ್‌” ಸಿನಿಮಾ ಬಿಡುಗಡೆ ದಿನವನ್ನು ಈಗಾಗಲೇ ಅನೌನ್ಸ್‌ ಮಾಡಿದೆ. ತೆಲುಗಿನಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಇದು ಅವರ ಫ್ಯಾನ್ಸ್‌ಗೆ ದೊಡ್ಡ ಖುಷಿಯ ವಿಷಯವೆಂದರೆ, ಇನ್ನೊಂದು ಸಂತಸದ ಸುದ್ದಿಯೂ ಇದೆ. ಹೌದು, ದರ್ಶನ್‌ ಅಭಿನಯದ “ಮೆಜೆಸ್ಟಿಕ್‌” ಚಿತ್ರ ಬಿಡುಗಡೆಯಾಗಿ ಇಂದಿಗೆ ೧೯ ವರ್ಷಗಳು ಸಂದಿವೆ.

“ಮೆಜಸ್ಟಿಕ್‌” ಅವರ ಬದುಕಿನ ದಿಕ್ಕನ್ನೇ ಬದಲಿಸಿದ ಚಿತ್ರ. “ಮೆಜೆಸ್ಟಿಕ್‌” ಬಳಿಕ ಅವರು ಇದುವರೆಗೂ ತಿರುಗಿ ನೋಡಿದವರೇ ಅಲ್ಲ, ಅಲ್ಲಿಂದ ಬಣ್ಣದ ಲೋಕದಲ್ಲಿ ಮಿಂದೆದ್ದ ದರ್ಶನ್‌ ಈಗ‌ ಕನ್ನಡದ ಪಾಲಿಗೆ ಬಹುದೊಡ್ಡ ಸ್ಟಾರ್‌ನಟ. ಕ್ರಮೇಣ ಒಳ್ಳೆಯ ಚಿತ್ರಗಳ ಮೂಲಕವೇ ಅವರು ಸದ್ದು ಮಾಡುತ್ತಲೇ ಬಂದರು. “ಕಲಾಸಿಪಾಲ್ಯ”, “ಗಜ”, “ಚಿಂಗಾರಿ”, “ಬೃಂದಾವನ”, “ಸರ್ದಾರ್”, “ಜಗ್ಗುದಾದ”, “ದಾಸ” ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡ ಕಲಾರಸಿಕರಿಗೆ ನೀಡಿದ್ದಾರೆ. “ಮೆಜೆಸ್ಟಿಕ್‌” ಪಕ್ಕಾ ಮಾಸ್‌ ಸಿನಿಮಾ. ಅಲ್ಲಿಂದಲೇ ದರ್ಶನ್‌ ಅವರಿಗೆ ಮಾಸ್‌ ಫ್ಯಾನ್ಸ್‌ ಹುಟ್ಟುಕೊಂಡರು.

ಈಗ ಎಲ್ಲಿ ನೋಡಿದರೂ ದರ್ಶನ್‌ ಅವರ ಅಭಿಮಾನಿಗಳದ್ದೇ ಸುದ್ದಿ. ಅದರಲ್ಲೂ ದರ್ಶನ್‌ ಅಂದಾಕ್ಷಣ ನೆನಪಾಗೋದೇ ಮಾಸ್‌ ಫೀಲ್.‌ ಸದಾ ಸದಭಿರುಚಿಯ ಚಿತ್ರ ಕೊಡುತ್ತ ಬಂದಿರುವ ದರ್ಶನ್‌ ಅವರ “ಮೆಜೆಸ್ಟಿಕ್‌” ಚಿತ್ರದ ಬಗ್ಗೆಯೇ ಈಗ ಎಲ್ಲರ ಮಾತು. ಮತ್ತೆ ಮತ್ತೆ “ಮೆಜಸ್ಟಿಕ್‌” ನೆನಪಾಗುತ್ತೆ ಅಂದರೆ, ಅದರೊಳಗಿರುವ ಕಂಟೆಂಟ್.‌

ಅದೇನೆ ಇರಲಿ, ಇಂಥದ್ದೊಂದು ಸಿನಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ದರ್ಶನ್‌ ಇಂದಿಗೂ ಮಾಸ್‌ ಹೀರೋ ಆಗಿಯೇ ಗಟ್ಟಿನೆಲೆ ಕಂಡಿದ್ದಾರೆ. ಅಂದಹಾಗೆ, ಪಿ.ಎನ್.ಸತ್ಯ ನಿರ್ದೇಶಿಸಿದ ಸಿನಿಮಾ ಇದು. ರಾಮಮೂರ್ತಿ, ಬಾ.ಮ.ಹರೀಶ್‌ ಇದರ ಹಿಂದೆ ಇದ್ದು, ತಯಾರು ಮಾಡಿದವರು.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೋಟಿಗೊಬ್ಬನ ಹಾಡು ಪಾಡು- ಮಾರ್ಚ್‌ 28ಕ್ಕೆ ಹಾಡುಗಳ ಬಿಡುಗಡೆ

ಸಾಂಗ್‌ ಎದುರು ನೋಡುತ್ತಿರುವ ಫ್ಯಾನ್ಸ್‌ 

ಕೋಟಿಗೊಬ್ಬ ಅಂದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್.‌ ಈಗ ಅದೇ ಕೋಟಿಗೊಬ್ಬ ಹೆಸರಲ್ಲಿ ಸುದ್ದಿಯಾದವರು ಕಿಚ್ಚ ಸುದೀಪ್.‌ ಹೌದು, ಸುದೀಪ್‌ ಈಗಾಗಲೇ “ಕೋಟಿಗೊಬ್ಬ” ಸೀರೀಸ್‌ನಲ್ಲಿ ಸಿನಿಮಾ ಮಾಡಿರುವ ಸುದೀಪ್‌, “ಕೋಟಿಗೊಬ್ಬ ೩” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಅದಕ್ಕೆ ಕಾರಣ, ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರೋದು. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳ ಸ್ಟಾರ್‌ ನಟ ಎನಿಸಿರುವ ಸುದೀಪ್‌ ಅವರ “ಕೋಟಿಗೊಬ್ಬ” ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮಾ.೨೮ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹೌದು, ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ ೩” ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ, ಟ್ವೀಟ್‌ ಮೂಲಕ ಚಿತ್ರತಂಡ ಹಾಡುಗಳ ಬಿಡುಗಡೆ ಕುರಿತು ಹೇಳಿಕೊಂಡಿದೆ.

error: Content is protected !!