“ದುನಿಯಾ” ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸುತ್ತಿರುವ “ಸಲಗ” ಚಿತ್ರ ಈಗಾಗಾಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಒಂದಷ್ಟು ಕುತೂಹಲಕ್ಕೂ ಕಾರಣವಾಗಿದೆ. ಆ ಬಗ್ಗೆ ಹೇಳುವುದಾದರರೆ, ಮೊದಲ ಸಲ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆಂಬುದು ಒಂದೆಡೆಯಾದರೆ, “ಸಲಗ” ಒಂದೊಳ್ಳೆಯ ಮಾಸ್ ಫೀಲ್ ಕಥಾಹಂದರ ಇರುವ ಚಿತ್ರ ಅನ್ನೋದು ಇನ್ನೊಂದೆಡೆ, ಮತ್ತೊಂದೆಡೆ ಸಖತ್ ಹಿಟ್ ಆಗಿ, ವೈರಲ್ ಆಗಿರುವ ಹಾಡುಗಳು ಬೇರೆ. ಪೋಸ್ಟರ್‌ನಲ್ಲೇ ಸಿಕ್ಕಾಪಟ್ಟೆ ಹವಾ ಎಬ್ಬಿಸಿರುವ “ಸಲಗ” ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ.
ಅದೇನೆಂದರೆ, ಮತ್ತೊಂದು ದುಬಾರಿ ವೆಚ್ಚದಲ್ಲಿ ಹಾಡು ತಯಾರಾಗುತ್ತಿದೆ. ಹೌದು, ಈ ಬಾರಿ “ದುನಿಯಾ” ದೊಡ್ಡ ಯಶಸ್ಸನ್ನು ಬೆನ್ನತ್ತಿ ಹೊರಟಿದ್ದಾರೆ. ಆ ಗುರಿ ಕೂಡ ಹತ್ತಿರವಿದೆ. ಆ ನಿಟ್ಟಿನಲ್ಲಿ ಅವರು “ಸಲಗ” ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ, ಎಲ್ಲವನ್ನೂ ಮಾಡುತ್ತಿದ್ದಾರೆ.
ಚಿತ್ರದ ಪ್ರಮೋಷನಲ್ ಸಾಂಗ್‌ಗಾಗಿ ದುಬಾರಿ ವೆಚ್ಚ ಮಾಡುತ್ತಿದ್ದಾರೆ ಅನ್ನೋದು ವಿಶೇಷ. ಈ ಹಾಡಲ್ಲಿ ಸಾಕಷ್ಟು ವಿಶೇಷತೆಗಳಿವೆ ಅನ್ನೋದು ಕೂಡ ವಿಶೇಷವೇ.
ಈ ಪ್ರಚಾರದ ಹಾಡಲ್ಲಿ ಸಿದ್ಧಿ ಜನರೊಂದಿಗೆ “ದುನಿಯಾ” ವಿಜಯ್ ಬೆರೆತು, ಮಾಸ್ ಲುಕ್‌ನಲ್ಲಿ ಸ್ಟೆಪ್ ಹಾಕಲಿದ್ದಾರೆ. ಸುಮಾರಿ 70 ಜನರ ನೃತ್ಯ ಕಲಾವಿದರು ವಿಜಯ್ ಜೊತೆ ಸ್ಟೆಪ್ ಹಾಕುತ್ತಿದ್ದಾರೆ.
ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶೆರ್ಟಾನ್ ಹೋಟೆಲ್‌ನಲ್ಲಿ ಈ ಪ್ರಮೋಷನಲ್ ಸಾಂಗ್ ಚಿತ್ರೀಕರಣಗೊಳ್ಳುತ್ತಿದೆ. ಸುಮಾರು ೭೫ ಜನ ಸಿದ್ಧಿ ಕಲಾವಿದರೊಂದಿಗೆ ವಿಜಯ್ ವಿಶಿಷ್ಠ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.ಈ ಹಾಡಿಗೆ, ಮುರಳಿ ಮಾಸ್ಟರ್ ಸ್ಟೆಪ್ ಹೇಳಿಕೊಡಲಿದ್ದಾರೆ. ಏಪ್ರಿಲ್‌ನಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿರುವ “ಸಲಗ” ಈಗ ಪ್ರಚಾರಕ್ಕೂ ತಯಾರಾಗಿದೆ.