Categories
ಸಿನಿ ಸುದ್ದಿ

ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್ ! ಹೀರೋ ಆಗೋಕೆ ನವೀನ ಸಜ್ಜು!!

ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್… ಇದು ರಾಕಿಂಗ್ ಸ್ಟಾರ್ ಯಶ್ ಅವರ ಎವರ್‌ಗ್ರೀನ್ ಡೈಲಾಗ್. ಡೈಲಾಗ್ ಹೊಡೆದಂತೆ ಗಂಧದ ಗುಡಿಯಲ್ಲಿ ನಾಯಕನ ಪಟ್ಟಕ್ಕೇರಿದರು. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಸೂಪರ್‌ಸ್ಟಾರ್ ಎನಿಸಿಕೊಂಡರು “ಕೆಜಿಎಫ್” ಮೂಲಕ ನ್ಯಾಷನಲ್ ಸ್ಟಾರ್ ಆದರು. ಇದೀಗ “ಕೆಜಿಎಫ್ ಚಾಪ್ಟರ್-2ʼ ಮೂಲಕ ಇಂಟರ್‌ನ್ಯಾಷನಲ್ ಸ್ಟಾರ್ ಆಗೋದಕ್ಕೆ ಹೊರಟಿದ್ದಾರೆ. ಅಷ್ಟಕ್ಕೂ, ಅಣ್ತಮ್ಮನ ಎವರ್‌ಗ್ರೀನ್ ಡೈಲಾಗ್‌ನ ನೆನಪು ಮಾಡಿಕೊಳ್ಳೋದಕ್ಕೆ ಕಾರಣ ಗಾಯಕ ನವೀನ್ ಸಜ್ಜು .

ಸ್ವರಮಾಧುರ್ಯದಿಂದಲೇ ಬ್ರ್ಯಾಂಡ್ ಆದವರು ನವೀನ್ ಸಜ್ಜು!

ನವೀನ್ ಸಜ್ಜು ಸ್ಯಾಂಡಲ್‌ವುಡ್‌ನ ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್. ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಕಂಠಸಿರಿಯಿಂದಲೇ ಸ್ವಂತ ಬ್ರ್ಯಾಂಡ್ ಆಗಿರೋ ನವೀನ್ ಸಜ್ಜು, ಈಗ ನಮಗೆ ನಾವೇ ಹೀರೋ ಆಗ್ಬೇಕ್ ಅಂತಿದ್ದಾರೆ. ನವೀನ್ ಹೀರೋ ಆಗ್ತಿದ್ದಾರೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. “ಬಿಗ್‌ಬಾಸ್” ರನ್ನರ್ ಅಪ್ ಪಟ್ಟಕ್ಕೇರಿದಾಗಿನಿಂದಲೂ ಮುಖಕ್ಕೆ ಬಣ್ಣ ಹಚ್ಚುತ್ತಾರೆ, ಹೀರೋ ಆಗಿ ಗಾಂಧಿನಗರದಲ್ಲಿ ಕಟೌಟ್ ಹಾಕಿಸಿಕೊಳ್ತಾರೆ ಅನ್ನೋ ಸುದ್ದಿ ಇತ್ತು. ಆದ್ರೆ, ಎಲ್ಲಾ ಅಂದುಕೊಂಡಂತೆ ಆಗಲಿಲ್ಲ ಹೀಗಾಗಿ ಸಿಂಗಿಂಗ್ ಕರಿಯರ್‌ನ ಕಂಟಿನ್ಯೂ ಮಾಡಿದರು. ಈ ನಡುವೆ “ದುನಿಯಾ” ವಿಜಯ್ ತಮ್ಮ ಕನಕ' ಚಿತ್ರದಲ್ಲಿ ನವೀನ್‌ರನ್ನ ಸಂಗೀತ ನಿರ್ದೇಶಕನ ಪಟ್ಟಕ್ಕೇರಿಸಿದರು.

ಮ್ಯೂಸಿಕ್ ಕಂಪೋಸರ್ ಆಗಿ ನವೀನ್ ಸೈ ಎನಿಸಿಕೊಂಡರು. "ಎಣ್ಣೆ ನಮ್ದು ಊಟ ನಿಮ್ದು" ಹಾಡಿನ ಮೂಲಕ ಮ್ಯೂಸಿಕ್ ಲೋಕದಲ್ಲಿ ಬ್ರ್ಯಾಂಡ್ ಆದರು. ಕನಕ’ ನಂತರ “ದುನಿಯಾ” ವಿಜಯ್ ನಿರ್ದೇಶನದ ಸಲಗ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.ಸಂಜನ ಐ ಲವ್ ಯೂ ಸಂಜನ’ ಹಾಡಿಗೆ ಕ್ಯಾಚಿ ಟ್ಯೂನ್ ಹಾಕಿ ಕುಣಿಸಿದ್ದಾರೆ. ಈಗಾಗಲೇ ಆ ಸಾಂಗ್ ಬಜಾರ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಿಜಯ್ ಹಾಗೂ ಸಂಜನಾ ಆನಂದ್ ಕಾಂಬಿನೇಷನ್ ಸಾಂಗ್ ಕಿಕ್ಕೇರಿಸ್ತಿದೆ. ಬಹದ್ದೂರ್ ಚೇತನ್ ಸಾಹಿತ್ಯವಿರುವ ಈ ಹಾಡು ಲವ್‌ಬರ್ಡ್ಸ್ ಹಾರ್ಟ್ನ ಮೆಲ್ಟ್ ಮಾಡ್ತಿದೆ.

ನವೀನ್ ಸಜ್ಜು ಈ ಹಾಡು ನಿಮ್ಮೆಲ್ಲರ ಹೃದಯ ತಟ್ಟುತ್ತೆ !

ಹೀಗೆ ಸಿಂಗರ್ ಆಗಿ ಮ್ಯೂಸಿಕ್ ಕಂಪೋಸರ್ ಆಗಿ ಹಲ್‌ಚಲ್ ಎಬ್ಬಿಸುತ್ತಿರುವ ನವೀನ್ ಸಜ್ಜು ಎಮೋಷನಲ್ ಹಾಡಿಗೆ ಧ್ವನಿಯಾಗಿ ಎಲ್ಲರ ಹಾರ್ಟ್ನ ಟಚ್ ಮಾಡಿದ್ದಾರೆ. “ಸೌದೆಯ ಮರೆಯಲ್ಲಿ ಸುಟ್ಟು ಕರುಕಾಗೋ ಜೀವಕ್ಕೆ.. ಬಯಕೆಗಳೆಷ್ಟೋ ಜೀವ ಕಂಡುಂಡ ಆಸೆಗಳೆಷ್ಟೋ…” ಲಿಂಗದೇವರ ಹಳೆಮನೆಯವರ ಸಾಹಿತ್ಯ ಜನಾರ್ಧನ್ ಜನ್ನಿಯವರ ಸಂಗೀತವಿರುವ ಈ ಹಾಡನ್ನು ನಾಟಕದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದೀಗ ಈ ಹಾಡನ್ನ ತಮ್ಮದೇ ಶೈಲಿಯಲ್ಲಿ ನವೀನ್ ಹಾಡಿದ್ದಾರೆ.

ಮೆರವಣಿಗೆ ಹೊರಡುವ ಮೊದಲೇ ಮೂರ‍್ಮೂರು ಸಿನಿಮಾ !

ಇಷ್ಟೆಲ್ಲಾ ಹೇಳಿದ್ಮೇಲೆ `ಇಲ್ಲಿ ಯಾರು ಹೀರೋ ಮಾಡಲ್ಲ ನಮಗೆ ನಾವೇ ಹೀರೋ ಆಗ್ಬೇಕ್’ ಹೀಗಂತಿರೋ ನವೀನ್ ಸಜ್ಜು ಅವರ ನಯಾ ಕಥೆಯನ್ನ ನಿಮಗೆ ಹೇಳಲೆಬೇಕು. ಯಸ್, ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಹೀರೋ ಆಗ್ತಿದ್ದಾರೆ. ನಾಯಕನಾಗಿ ಬೆಳ್ಳಿತೆರೆ ಮೇಲೆ ದಿಬ್ಬಣ ಹೊರಡುವುದಕ್ಕೆ ಮೊದಲೇ ನವೀನ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅರಸಿಕೊಂಡು ಬರುತ್ತಿವೆಯಂತೆ. ಮ್ಯಾನ್ಶನ್ ಹೌಸ್ ನವೀನ್ ಸಜ್ಜು ನಾಯಕರಾಗುತ್ತಿರುವ ಮೊದಲ ಚಿತ್ರ. ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಆದಿಚುಂಚನಗಿರಿಯಲ್ಲಿ ಮುಹೂರ್ತ ನೆರವೇರಿದೆ. ಪ್ರಕೃತಿ ಪ್ರೇಮಿಯಾಗಿ ನವೀನ್ ಇಲ್ಲಿ ಕಾಣಿಸಿಕೊಳ್ತಾರೆ. ಚಿತ್ರದ ತಾರಾಬಳಗ ನಾಯಕಿ ಆಯ್ಕೆ ಇನ್ನಷ್ಟೇ ಹೊರ ಬೀಳಬೇಕಿದೆ.
“ಮ್ಯಾನ್ಶನ್ ಹೌಸ್” ಜೊತೆ ಇನ್ನೂ ಎರಡು ಚಿತ್ರಗಳು ನವೀನ್ ಕೈಯಲ್ಲಿವೆ. ನಟನೆ ಜೊತೆಗೆ ಸಂಗೀತ ನಿರ್ದೇಶನ ಹಾಗೂ ಗಾಯಕರಾಗಿಯೂ ನವೀನ್ ಕೆಲಸ ಮಾಡೋದಕ್ಕೆ ಸಿದ್ದರಾಗಿದ್ದಾರೆ. ಇಲ್ಲಿವರೆಗೂ ೨೦೦ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಕನಕ ಹಾಗೂ ಸಲಗ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದಾರೆ. ಬೆಳ್ಳಿಪರದೆ ಮೇಲೆ ಸ್ವಂತ ಬ್ರ್ಯಾಂಡ್ ನವೀನ್ ಸಜ್ಜು ಅಬ್ಬರ ಆರ್ಭಟ ಹೇಗಿರುತ್ತೆ ? ವೇಯ್ಟ್ ಅಂಡ್ ಸೀ

Categories
ಸಿನಿ ಸುದ್ದಿ

ಬುಕ್ ಮೈ ಶೋ ನಲ್ಲಿ ರಿವೈಂಡ್ ಶೋ ; ಇದನ್ನೇ ಅನುಸರಿಸಲು ನಿರ್ಮಾಪಕರ ಒಲವು

ಈಗಂತೂ ಓಟಿಟಿಗಳದ್ದೇ ಹವಾ. ಕನ್ನಡ ಸಿನಿಮಾಗಳಿಗೆ ಅದೊಂದು ರೀತಿ ನಿಟ್ಟುಸಿರಿನ ತಾಣ. ಹೌದು, ಕೆಲವು ಒಳ್ಳೆಯ ಚಿತ್ರಗಳು ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಇನ್ನೂ ಕೆಲವು ಸಿನಿಮಾಗಳು ನೇರವಾಗಿಯೇ ಓಟಿಟಿ ಫ್ಲಾಟ್‌ಫಾರಂನಲ್ಲಿ ಯಶಸ್ವಿಯಾಗಿವೆ. ಈಗ “ರಿವೈಂಡ್”‌ ಕೂಡ ಸೇರಿದೆ.

ಹೌದು, ತೇಜ್ ನಿರ್ಮಿಸಿ, ನಿರ್ದೇಶನ ಮಾಡಿ ನಾಯಕರಾಗಿ ಅಭಿನಯಿಸಿದ್ದ, “ರಿವೈಂಡ್” ಚಿತ್ರ ಲಾಕ್ ಡೌನ್ ಗೂ ಕೆಲವೇ ದಿನಗಳ ಮುಂಚೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಲಾಕ್ ಡೌನ್ ಜಾರಿಯಾದ ಕಾರಣ ಚಿತ್ರಮಂದಿರಗಳನ್ನು‌ ಮುಚ್ಚಲಾಯಿತು. ಇದರಿಂದ ಸಾಕಷ್ಟು ತೊಂದರೆಯಾಯಿತು.
ಇದಾದ ಕೆಲವು ದಿನಗಳಲ್ಲಿ ಬುಕ್ ಮೈ ಶೋ ಓಟಿಟಿ ಫ್ಲಾಟ್ ಫಾರಂ ತೆರೆದು ಅದರಲ್ಲಿ ‌ಚಿತ್ರ ಬಿಡುಗಡೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದು ಗೊತ್ತೇ ಇದೆ.

ಅಲ್ಲಿ ಇಂತಿಷ್ಟು ಟಿಕೇಟ್ ದರ ನಿಗದಿ ಪಡಿಸಿದ್ದಾರೆ. ಅದರಂತೆಯೇ ಈಗ ಬುಕ್ ಮೈ ಶೋನಲ್ಲಿ “ರಿವೈಂಡ್” ಚಿತ್ರ‌ ಬಿಡುಗಡೆಯಾಗಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುವರ್ಣ ವಾಹಿನಿಗೆ ಚಿತ್ರದ ಹಕ್ಕು ಮಾರಾಟವಾಯಿತು. ಈಗ ಚಿತ್ರ ಬಿಡುಗಡೆ ‌ಮಾಡಲು ನೆಟ್ ಫ್ಲಿಕ್ಸ್ ನಿಂದ ಆಫರ್ ಬಂದಿದೆ ಎಂಬುದು ತೇಜ ಅವರ ಮಾತು.


ಸೌದಿ ಹಾಗೂ ಅರಬ್ ರಾಷ್ಟಗಳಲ್ಲೂ “ರಿವೈಂಡ್” ರಿಲೀಸ್ ಆಗಲಿದೆ. ಈ ರೀತಿಯ ಬಿಡುಗಡೆ ವಿಷಯ ತಿಳಿದ ಸಾಕಷ್ಟು ಕನ್ನಡ ‌ ನಿರ್ಮಾಪಕರು‌ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ರಿವೈಂಡ್ ಚಿತ್ರದ ಯಶಸ್ಸನ್ನು ಹಂಚಿಕೊಳಲು‌ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ “ಗಣಿ ಬಿ ಕಾಂ”, ” ಗಜಾನನ ಗ್ಯಾಂಗ್ ” ಚಿತ್ರಗಳ ನಿರ್ಮಾಪಕ ಕುಮಾರ್ ಸೇರಿದಂತೆ,

“ಶಾರ್ದೂಲ” ಚಿತ್ರ ನಿರ್ಮಾಪಕ ರೋಹಿತ್, ಸಂಕಲನಕಾರ – ನಿರ್ದೇಶಕ ನಾಗೇಂದ್ರ ಅರಸ್, ನಿರ್ದೇಶಕ ಪ್ರವೀಣ್ ನಾಯಕ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ,ರಿವೈಂಡ್ ಚಿತ್ರವನ್ನು ದುಬೈನಲ್ಲಿ ಬಿಡುಗಡೆ ಮಾಡುತ್ತಿರುವ ಡಾ.ರಾಜನ್ ಅವರು ಹಾಜರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು. ತೇಜ್, ಚಂದನ, ಧರ್ಮ, ಸಂದೀಪ್ ಮಲಾನಿ “ರಿವೈಂಡ್” ಚಿತ್ರದ ಕುರಿತು ಹೇಳಿಕೊಂಡರು.

Categories
ಸಿನಿ ಸುದ್ದಿ

ಸಪ್ಲೈಯರ್‌ ಮೇಲೆ ಸಾರಥಿ ಕೈ ಮಾಡಿದ್ದು ನಿಜಾನಾ? ಅದು ಸುಳ್ಳು ಅಂತಾರೇ ಸಂದೇಶ್ ! ಸಾರಥಿ ಹೇಳಿದ್ದೇನು ಗೊತ್ತಾ ?

ಸ್ಯಾಂಡಲ್‌ವುಡ್ ಸಾರಥಿ ಕೋಟ್ಯಾಂತರ ಅಭಿಮಾನಿಗಳ ಪಾಲಿನ ಚಕ್ರವರ್ತಿ. ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನ ಮಾಲೀಕರಾದ ಸಂದೇಶ್ ಅವರು ಸಾರಥಿ ಅಂಡ್ ಸ್ನೇಹಿತರ ಮೇಲೆ ಕೇಳಿ ಬರುತ್ತಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಹಾಗಾದ್ರೆ, ಇಂದ್ರಜಿತ್ ಲಂಕೇಶ್ ಮಾಡ್ತಿರುವ ಆರೋಪದಲ್ಲಿ ಹುರುಳಿಲ್ಲವಾ? ಪ್ರಿನ್ಸ್ ಮಾಲೀಕರು ಬಿಚ್ಚಿಟ್ಟ ಸತ್ಯವೇನು? ಅಷ್ಟಕ್ಕೂ, ಸಾರಥಿ ಸುತ್ತಾಮುತ್ತಾ ಏನಾಗ್ತಿದೆ ಆ ಸುದ್ದಿಯ ಡಿಟೈಲ್ಸ್ ಇಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತ‌ಮುತ್ತಾ ಏನೇನ್ ನಡೆಯುತ್ತಿದೆಯೋ ಒಂದಕ್ಕೂ ಕ್ಲಾರಿಟಿ ಸಿಗ್ತಿಲ್ಲ. ಸಾರಥಿ ಹೆಸರಲ್ಲಿ ೨೫ ಕೋಟಿ ಎಗರಿಸೋದಕ್ಕೆ ಸ್ಕೆಚ್ ಹಾಕಿರೋ ಗ್ಯಾಂಗ್ ಬಗ್ಗೆ ಅಸಲಿಯತ್ತು ಹೊರ ಬೀಳುವುದಕ್ಕಾಗಿ ಎಲ್ಲರೂ ಕಾಯ್ತಿರುವ ಹೊತ್ತಲ್ಲಿ, ಒಡೆಯನ ವಿರುದ್ದವೇ ಗಂಭೀರ ಆರೋಪ ಕೇಳಿಬರುತ್ತಿದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನ ದಲಿತ ಸಪ್ಲೈಯರ್‌ಗೆ ಹೊಡೆದಿದ್ದಾರೆ ಅಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಹರ್ಷ ಮೆಲೆಂಟಾ, ರಾಕೇಶ್ ಪಾಪಣ್ಣ ಸೇರಿದಂತೆ ತಮ್ಮ ಮೈಸೂರಿನ ಸ್ನೇಹಿತರ ಜೊತೆಗೆ ಸೇರಿಕೊಂಡು ವೇಯ್ಟರ್ ವಿರುದ್ದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಪ್ಲೈಯರ್‌ಗೆ ಗಂಭೀರ ಗಾಯಗಳಾಗಿವೆ ಕಣ್ಣಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ಪ್ರಕರಣವನ್ನು ಮುಚ್ಚಿ ಹಾಕುವಂತಹ ಕೆಲಸ ಆಗಿದೆ. ಹೀಗಾಗಿ, ಸೂಕ್ತ ತನಿಖೆ ಆಗ್ಬೇಕು ಪ್ರಕರಣ ಸಾಬೀತಾದಲ್ಲಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಇಂದ್ರಜಿತ್ ಲಂಕೇಶ್ ಗೃಹಸಚಿವರಿಗೆ ದೂರು ನೀಡಿದ್ದಾರೆ.

೨೫ ಕೋಟಿ ವಂಚನೆಗೆ ಸಂಬಂಧಿಸಿದಂತೆ ಸಾರಥಿ ಹಾಗೂ ಸ್ನೇಹಿತರು ದೂರು ಕೊಡುವ ನಾಲ್ಕೈದು ದಿನ ಮುಂಚೆ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡ್ತಿದ್ದಾರೆ. ಹಲ್ಲೆಗೊಳಗಾದ ದಲಿತ ಸಪ್ಲೈಯರ್‌ ಯುವಕನ ಪತ್ನಿ ಪೊರಕೆ ಹಿಡಿದು ಪ್ರಿನ್ಸ್ ಹೋಟೆಲ್ ಬಳಿ ಹೋದಾಗ ದರ್ಶನ್ ಜೊತೆ ಪವಿತ್ರಾ ಗೌಡ, ಹರ್ಷಮೆಲೆಂಟಾ, ರಾಕೇಶ್ ಪಾಪಣ್ಣ ಸೇರಿದಂತೆ ಹಲವು ಸ್ನೇಹಿತರು ಇದ್ದರಂತೆ. ನ್ಯಾಯ ಕೇಳಿದ್ದಕ್ಕೆ ದುಡ್ಡು ಕೊಟ್ಟು ಸಮಾಧಾನ ಮಾಡುವಂತಹ ಹಾಗು ಪ್ರಕರಣವನ್ನು ಮುಚ್ಚಿ ಹಾಕುವಂತಹ ಕೆಲಸ ಮಾಡಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಗಳು ನನ್ನ ಬಳಿ ಇವೆ ಮೈಸೂರಿನ ಪೊಲೀಸರು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೈಸೂರು ಪೊಲೀಸರು ಯಾರದ್ದೋ ಕೈಗೊಂಬೆಯಾಗಿದ್ದಾರೋ ಅಥವಾ ಕೈಗೆ ಬಳೆತೊಟ್ಟುಕೊಂಡು ಕೂತಿದ್ದಾರೋ ನನಗಂತೂ ಅರ್ಥವಾಗ್ತಿಲ್ಲ ಸೂಕ್ತವಾದ ತನಿಖೆ ನಡೆಯಲಿಲ್ಲ ಅಂದರೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡೋದು ಸತ್ಯ ಎನ್ನುತ್ತಾರೆ ಇಂದ್ರಜಿತ್ ಲಂಕೇಶ್.

ಮೈಸೂರಿನ ಪ್ರಿನ್ಸ್ ಹೋಟೆಲ್ ಮಾಲೀಕರಾದ ಸಂದೇಶ್ ನಾಗರಾಜ್ ಇಂದ್ರಜಿತ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಪ್ಲೈಯರ್‌ ಮೇಲೆ ಹಲ್ಲೆ ನಡೆದಿಲ್ಲ, ನಮ್ಮ ಹೋಟೆಲ್‌ನಲ್ಲಿ ದಲಿತ ಸಪ್ಲೈಯರ್‌ಗಳೇ ಇಲ್ಲ. ಅಗತ್ಯವಿದ್ದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಲಿ ತನಿಖೆ ನಡೆಸಲಿ ಎಂದಿದ್ದಾರೆ. ಸಂದೇಶ್‌ ನಾಗರಾಜ್ ಅವರ ಪುತ್ರ ಸಂದೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಪ್ಲೈಯರ್‌ ಹಾಗೂ ದರ್ಶನ್ ನಡುವೆ ಮಾತಿನ ಚಕಮಖಿ ನಡೆದಿದ್ದು ಸತ್ಯ. ಈ ವೇಳೆ ಮಧ್ಯ ಪ್ರವೇಶಿಸಿ ದರ್ಶನ್‌ಗೆ ತಿಳಿ ಹೇಳಿದೆ. ವೇಯ್ಟರ್ ಮಹಾರಾಷ್ಟ್ರದವರಾಗಿದ್ದು ಭಾಷೆಯ ಸಮಸ್ಯೆಯಿದೆ. ಹೀಗಾಗಿ ಸಪ್ಲೆ ಮಾಡುವಾಗ ಕೆಲವೊಮ್ಮೆ ಮಾತಿನ ಚಕಮಖಿ ಆಗುತ್ತೆ ಅದೇ ರೀತಿ ಆಗಿದೆ ಅಷ್ಟೇ. ಅಷ್ಟಕ್ಕೂ, ಈ ಪ್ರಕರಣವನ್ನು ಮುಚ್ಚಿ ಹಾಕೋದ್ರಿಂದ ನನಗೇನು ಲಾಭವಿಲ್ಲ. ಹೋಟೆಲ್ ನಮ್ಮ ಹೊಟ್ಟೆ ಪಾಡು, ನಾವು ನಮ್ಮದೇ ಆದ ಕಷ್ಟದಲ್ಲಿದ್ದೇವೆ. ಇಂತಹ ಸಮಯದಲ್ಲಿ ಪಬ್ಲಿಸಿಟಿಗೋಸ್ಕರ ಹೋಟೆಲ್ ಹೆಸರು ಹೇಳುವುದು, ಆರೋಪ ಮಾಡುವುದು ಸರಿಯಲ್ಲ ಎನ್ನುತ್ತಾರೆ ಸಂದೇಶ್.

ನಿರ್ದೇಶಕ ಇಂದ್ರಜಿತ್ ಗಂಭೀರ ಆರೋಪಕ್ಕೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಊಟ ಸಪ್ಲೆ ಮಾಡುವಾಗ ಲೇಟಾಗಿರುತ್ತೆ. ಆ ಟೈಮ್‌ನಲ್ಲಿ ನಾನು ಏರು ಧ್ವನಿಯಲ್ಲಿ ಮಾತನಾಡಿರ್ತೇನೆ. ರೇಗಾಡಿರುತ್ತೇನೆ. ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ನಂದು ಸಂದೇಶ ಅವ್ರದ್ದು ಸಾವಿರ ಗಲಾಟೆ ಇದೆ, ವಿಷಯ ಎಲ್ಲೆಲ್ಲಿಗೋ ಹೋಗ್ತಿದೆ. ಹೆಂಗೆಗೋ ತಿರುಗಿಸುತ್ತಿದ್ದಾರೆ ತಿರುಗಿಸಲಿ ನೋ ಪ್ರಾಬ್ಲಮ್. ಇಂದ್ರಜಿತ್ ಅವರು ತುಂಬಾ ದೊಡ್ಡ ಇನ್ವೆಸ್ಟಿಗೇಟರ್ ಮಾಡಲಿ ಅವರು. ನನಗೆ ಅವರ ಮೇಲೆ ಬೇಜಾರೇನಿಲ್ಲ. ನನಗೆ ಒಂದು ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಈಗ ಆರೋಪ ಮಾಡ್ತಿದ್ದಾರೆ ಮಾಡಲಿ, ದೊಡ್ಡ ದೊಡ್ಡ ಕಾಂಟ್ಯಾಕ್ಟ್ಸ್‌ ಇದೆ ಅವರಿಗೆ ಮಾಡಿರುವ ಆರೋಪವನ್ನು ಪ್ರೂ ಮಾಡಲಿ ಎಂದಿದ್ದಾರೆ.

ಇತ್ತ ಇಂದ್ರಜಿತ್ ಲಂಕೇಶ್ ಅವರು ಪುನಃ ಮಾಧ್ಯಮಗಳ ಜೊತೆ ಮಾತನಾಡುತ್ತಾ, `ಆರ್ಡರ್ ಮಾಡಿದ್ದ ಊಟವನ್ನು ತಡವಾಗಿ ತಂದುಕೊಟ್ಟ ಎಂಬ ಕಾರಣಕ್ಕೆ ಪ್ರಿನ್ಸ್ ಹೋಟೆಲ್‌ನಲ್ಲಿ ದಲಿತ ವೇಯ್ಟರ್ ಮೇಲೆ ಹಲ್ಲೆ ನಡೆದಿರುವುದು ಸತ್ಯ. ಪ್ರಿನ್ಸ್ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳ ತನಿಖೆ ಮಾಡಿದ್ರೆ ಗೊತ್ತಾಗುತ್ತೆ ವೇಯ್ಟರ್ ಮೇಲೆ ಹಲ್ಲೆ ನಡೆದಾಗ ಇತರೆ ಸಪ್ಲೈಯರ್‌ಗಳು ಪ್ರತಿಭಟನೆ ಮಾಡಿದ್ದಾರೆ. ಒಂದು ವೇಳೆ ಹಲ್ಲೆ ನಡೆದಿಲ್ಲವೆಂದು ಸಾಬೀತು ಮಾಡೋದಕ್ಕೆ ಹೊರಟರೆ, ಮೈಸೂರು ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದರೆ, ತನಿಖೆಯಾಗಲಿಲ್ಲ ಎಂದರೆ, ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿಲ್ಲ ಅಂದರೆ ನಾನು ನನ್ನ ಬಳಿ ಇರುವ ಸಾಕ್ಷಾಧಾರಗಳನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ ಇಂದ್ರಜಿತ್ ಅವರು

Categories
ಸಿನಿ ಸುದ್ದಿ

ಜನಪದ ಕಲಾವಿದರ ಪರ ಧ್ವನಿ ಎತ್ತಿದ ಚೇತನ್ !

“ಆ ದಿನಗಳು” ಖ್ಯಾತಿಯ ನಟ ಚೇತನ್ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರ‍್ತಾರೆ. ಅನ್ಯಾಯ-ಅಕ್ರಮದ ವಿರುದ್ದ ಧ್ವನಿ ಎತ್ತುತ್ತಾ, ದಮನಿತರು, ಶ್ರಮಿಕರು, ಕಾರ್ಮಿಕರು ಸೇರಿದಂತೆ ನ್ಯಾಯದ ಪರವಾಗಿ ಹೋರಾಟ ಮಾಡುತ್ತಾರೆ. ಈಗ ಹಿಂದುಳಿದ ಜನಪದ ಕಲಾವಿದರ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಇವತ್ತಿನ ಆಧುನಿಕ ಯುಗದಲ್ಲೂ ನೀರಿಲ್ಲದೆ, ವಿದ್ಯುತ್ ಸೌಲಭ್ಯ ಇಲ್ಲದೇ, ಎಲ್ಲದಕ್ಕಿಂತ ಮಿಗಿಲಾಗಿ ನೆಮ್ಮದಿಯ ನಿಟ್ಟುಸಿರು ಬಿಡೋದಕ್ಕೆ ಸೂರು ಕೂಡ ಇಲ್ಲದೇ ಟೆಂಟ್‌ಗಳಲ್ಲೇ ವಾಸಿಸುತ್ತಿರುವ ಜನಪದ ಕಲಾವಿದರಿಗೆ ಮೂಲ ಸೌಲಭ್ಯ ಒದಗಿಸಬೇಕು ಅಂತ ಚೇತನ್ ಫೀಲ್ಡಿಗಿಳಿದಿದ್ದಾರೆ.


ಹೌದು, ಕೆ ಆರ್ ಪುರಂ ವಡ್ಡರಪಾಳ್ಯದಲ್ಲಿ ಸುಮಾರು ೫೩ಕ್ಕೂ ಹೆಚ್ಚು ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ಮೂಲ ಸೌಲಭ್ಯ ಸಿಕ್ಕಿಲ್ಲ. ಒಂದಲ್ಲ.. ಎರಡಲ್ಲ.. ಭರ್ತಿ ಹದಿನೈದು ವರ್ಷಗಳಿಂದ ಈ ಜನಪದ ಕಲಾವಿದರು ಟೆಂಟ್‌ಗಳಲ್ಲಿ ಬದುಕು ಕಟ್ಟಿ ಕೊಟ್ಟಿದ್ದಾರೆ. ಭಾರತೀಯ ಕಲಾ ಸಂಸ್ಕೃತಿಯಲ್ಲಿ ಜನಪದ ಕಲೆಗೆ ವಿಶೇಷವಾದ ಸ್ಥಾನಮಾನವಿದೆ. ಆದರೆ, ಆ ಕಲಾಪರಂಪರೆಯನ್ನು ಉಳಿಸಿಕೊಂಡುವ ಹೋಗ್ತಿರುವ ಕಲಾವಿದರು ಮನೆಯಿಲ್ಲದೇ, ಮಠ ಇಲ್ಲದೇ ಬೀದಿಗೆ ಬಿದ್ದಿದ್ದಾರೆ.

ಇದೆಲ್ಲವನ್ನೂ ಗಮನಿಸಿದ ನಟ ಚೇತನ್, ಸಚಿವ ಭೈರತಿ ಬಸವರಾಜ್‌ಗೆ ಪತ್ರ ಬರೆದಿದ್ದಾರೆ. ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಕೆ ಆರ್ ಪುರಂ ಸಮೀಪದ ೫೩ ಜನಪದ ಕಲಾವಿದರ ಕುಟುಂಬಕ್ಕೆ ಆಶ್ರಯದ ಜೊತೆಗೆ ಜಾನುವಾರುಗಳಿಗೆ ಸ್ಥಳ ನೀಡುವ ಮೂಲಕ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಪುಸ್ತಕ ರೂಪದಲ್ಲಿ ಸಂಚಾರಿ ವಿಜಯ್ ಜೀವನ ಕಥನ; ಅನಂತವಾಗಿರು…

ನಟ ಸಂಚಾರಿ ವಿಜಯ್‌ ಈಗಿಲ್ಲ. ಆದರೆ, ಅವರು ಅದ್ಭುತ ಸಿನಿಮಾಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅವರ ಗೆಳೆಯರು ಒಗ್ಗೂಡಿ ಇದೀಗ ಅವರ ಕುರಿತು ಗೊತ್ತಿರುವ ಒಂದಷ್ಟು ವಿಷಯಗಳನ್ನು ತಮ್ಮ ಬರಹಗಳ ಮೂಲಕ ಪುಸ್ತಕವೊಂದನ್ನು ಹೊರತರುವ ಪ್ರಯತ್ನ ಮಾಡಿದ್ದಾರೆ. ಆ ಪ್ರಯತ್ನಕ್ಕೆ ಪತ್ರಕರ್ತ, ಲೇಖಕ ಡಾ. ಶರಣುಹುಲ್ಲೂರು ಅವರು ಮುಂದಾಳತ್ವ ವಹಿಸಿದ್ದಾರೆ ಈ ಹಿಂದೆ ಅಂಬರೀಶ್, ಸುದೀಪ್ ಅವರ ಬಯೋಗ್ರಫಿ ಬರೆದು, ರಾಜ್ಯ ಪ್ರಶಸ್ತಿ ಪಡೆದ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಬರುತ್ತಿರುವುದು ವಿಶೇಷತೆಗಳಲ್ಲೊಂದು.

ಹೌದು, ವಿಜಯ್‌ ಅವರ ಜೀವನ ಕಥನ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಆ ಪುಸ್ತಕಕ್ಕೆ “ಅನಂತವಾಗಿರು” ಎಂದ ಹೆಸರಿಡಲಾಗಿದೆ. ಈ ಕುರಿತಂತೆ ಸ್ವತಃ ಲೇಖಕ ಡಾ.ಶರಣು ಹುಲ್ಲೂರು ಹೇಳೋದು ಹೀಗೆ.
“ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟು ಹಬ್ಬವನ್ನು ಜುಲೈ 17 ಕ್ಕೆ ಅರ್ಥಪೂರ್ಣವಾಗಿ ಆಚರಿಸಲು ಹೊರಟಿದ್ದೇವೆ. ವಿಜಯ್ ಅವರು ಸಿನಿಮಾದಷ್ಟೇ ಪುಸ್ತಕವನ್ನು ಪ್ರೀತಿಸುತ್ತಿದ್ದರು. ಆ ಪುಸ್ತಕಗಳ ಕುರಿತು ಇತರರ ಜತೆ ಹಂಚಿಕೊಳ್ಳುತ್ತಿದ್ದರು. ಹಾಗಾಗಿ ಅವರ ಕುರಿತಾದ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಅದನ್ನು ಈ ಬಾರಿಯ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನೀಡುತ್ತಿದ್ದೇವೆ. ಇದೊಂದು ಬಯೋಗ್ರಫಿ ಮಾದರಿಯಲ್ಲೇ ರೂಪಗೊಂಡ ಪುಸ್ತಕ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಮಾತನಾಡಿದ್ದಾರೆ.

ಅವರ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು, ಪತ್ರಕರ್ತರು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರ ಮೊದಲುಗಳಿಗೆ ಸಾಕ್ಷಿಯಾದವರು ಕೂಡ ಈ ಪುಸ್ತಕದ ಜತೆಗಿರುವುದು ಮತ್ತೊಂದು ವಿಶೇಷ.


ಖ್ಯಾತ ಲೇಖಕರಾದ ವಸುಧೇಂದ್ರ, ಜೋಗಿ, ಸಂಧ್ಯಾರಾಣಿ, ನಿರ್ದೇಶಕರಾದ ಬಿ.ಎಸ್. ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂ.ಎಸ್ ರಮೇಶ್, ರಂಗ ನಿರ್ದೇಶಕಿ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ರಾಷ್ಟ್ರ ಪ್ರಶಸ್ತಿ ವಿಜೇತ ಲೇಖಕ ಕೆ. ಪುಟ್ಟಸ್ವಾಮಿ ಹೀಗೆ ಸಿನಿಮಾ ರಂಗದ ಹಾಗೂ ವಿಜಯ್ ಅವರನ್ನು ಬಲ್ಲ 32 ಕ್ಕೂ ಹೆಚ್ಚು ಲೇಖಕರು ಬರೆದ ಬರಹಗಳು ಇದರಲ್ಲಿವೆ. ಅಂದಹಾಗೆ, ಜಿ.ಎನ್. ಮೋಹನ್ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಬೆಂಗಳೂರಿನ ಕಾಯಕ ಪ್ರಕಾಶನದಿಂದ ಈ ಕೃತಿ ಹೊರಬರುತ್ತಿದೆ. ಜು.17 ರಂದು ಪುಸ್ತಕ ಬಿಡುಗಡೆ ಆಗಲಿದೆ.

Categories
ಸಿನಿ ಸುದ್ದಿ

ಯಜಮಾನನ ಜೊತೆ ಮತ್ತೆ ಹರಿಕೃಷ್ಣ ಸಿನ್ಮಾ ; ದಚ್ಚು 55ನೇ ಸಿನಿಮಾಗೆ ಶೈಲಜಾ ನಾಗ್ ನಿರ್ಮಾಪಕಿ

ಕನ್ನಡದ ಮಟ್ಟಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದವರು. ಸದ್ಯಕ್ಕೆ ಅವರ ಕೈಯಲ್ಲಿ ಒಂದಷ್ಟು ಸಿನಿಮಾಗಳಿವೆ. “ರಾಬರ್ಟ್‌” ನಂತರ 53 ನೇ ಚಿತ್ರ “ರಾಜವೀರ ಮದಕರಿನಾಯಕ” ಚಿತ್ರ ಮಾಡುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರ ಕೂಡ ಸೆಟ್ಟೇರಿದ್ದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ, “ರಾಬರ್ಟ್‌” ತಂಡದ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಈಗಾಗಲೇ ದರ್ಶನ್‌ ಅನೌನ್ಸ್‌ ಮಾಡಿದ್ದಾಗಿದೆ.

ಹಾಗಾದರೆ 54ನೇ ಚಿತ್ರ ಯಾರೊಂದಿಗೆ ಮಾಡ್ತಾರೆ ಅನ್ನೋದು ಪಕ್ಕಾ ಆಗಿಲ್ಲ. ಆದರೂ, ಉಮಾಪತಿ ಅವರಿಗೆ ಕಾಲ್‌ಶೀಟ್‌ ಕೊಟ್ಟಿದ್ದು ಕೂಡ ಸುದ್ದಿಯಾಗಿದೆ. ಇವುಗಳ ಜೊತೆಯಲ್ಲಿ ದರ್ಶನ್‌ಗೆ ಮತ್ತೊಂದು ಸಿನಿಮಾ ಕೂಡ ಆಗುತ್ತಿದೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ದರ್ಶನ್‌ ಅವರಿಗೆ ಹೊಸ ಸಿನಿಮಾ ಕಥೆ ರೆಡಿಯಾಗುತ್ತಿದೆ. ಮತ್ತೊಂದು ಅದ್ಧೂರಿ ಬಜೆಟ್‌ನ ಚಿತ್ರ ಆಗಲಿದೆ ಎಂಬುದು ವಿಶೇಷತೆಗಳಲ್ಲೊಂದು. ಅದು ಅವರ ೫೫ನೇ ಸಿನಿಮಾ ಅನ್ನೋದು ವಿಶೇಷ.


ನಟ ದರ್ಶನ್‌ ಅವರಿಗೆ ನಿರ್ಮಾಪಕಿ ಶೈಲಜಾ ನಾಗ್‌ ಅವರು ಮತ್ತೆ ಸಿನಿಮಾವೊಂದನ್ನು ನಿರ್ಮಿಸುವ ಉತ್ಸಾಹ ತೋರಿದ್ದಾರೆ. ಅದು ದರ್ಶನ್‌ ಅವರ 55ನೇ ಸಿನಿಮಾ ಆಗಲಿದೆ ಎಂಬುದು ವಿಶೇಷ. ಈ ವಿಷಯವನ್ನು ಸ್ವತಃ ಶೈಲಜಾ ನಾಗ್‌ ಅವರೇ ತಮ್ಮ ಮುಖಪುಟದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಈಗ ಎಲ್ಲೆಡೆಯಿಂದಲೂ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಈ ಹಿಂದೆ ದರ್ಶನ್‌ ಅವರಿಗೆ “ಯಜಮಾನ” ಚಿತ್ರ ನಿರ್ಮಿಸಿದ್ದ ಶೈಲಜಾ ನಾಗ್‌ ಅವರೇ ದರ್ಶನ್‌ ಅವರಿಗೆ ಮತ್ತೊಂದು ದೊಡ್ಡ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಹಾಗೆ ನೋಡಿದರೆ, “ಯಜಮಾನ” ಸಿನಿಮಾ ಆಗುವ ಸಂದರ್ಭದಲ್ಲೇ ನಿರ್ಮಾಪಕರು ದರ್ಶನ್‌ ಅವರಿಗೆ ಅಡ್ವಾನ್ಸ್‌ ಕೊಟ್ಟಿದ್ದರು.

ಆ ಚಿತ್ರದ ಕಥೆಯ ಕೆತ್ತನೆಯ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ದರ್ಶನ್‌ ಅವರ ಮುಂದಿನ ಸಿನಿಮಾಗೆ “ಯಜಮಾನ” ಚಿತ್ರವನ್ನು ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರೇ ದರ್ಶನ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಹರಿಕೃಷ್ಣ ಅವರು ತಮ್ಮದ್ದೊಂದು ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಯಾವಾಗ ಸಿನಿಮಾ ಸೆಟ್ಟೇರಲಿದೆ ಎಂಬುದಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ.
ಇದರ ಜೊತೆ ಜೊತೆಯಲ್ಲೇ ಅವರು “ರಾಜವೀರ ಮದಕರಿನಾಯಕ” ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದ್ದು,

ಆ ಬಳಿಕ ಅವರು, ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಮುಂದಾಗುತ್ತಾರೋ ಅಥವಾ ಹರಿಕೃಷ್ಣ ಅವರ ಹೊಸ ಚಿತ್ರದಲ್ಲಿ ಎಂಟ್ರಿಯಾಗುತ್ತಾರೋ ಎಂಬುದು ಗೌಪ್ಯ. ಆದರೆ, ಹರಿಕೃಷ್ಣ ಅವರೊಂದಿಗೆ ಮತ್ತೊಂದು ಸಿನಿಮಾ ಆಗುತ್ತಿರುವುದಂತೂ ನಿಜ. “ಯಜಮಾನ” ಬಳಿಕ ಹೊಸ ಸಿನಿಮಾ ಇನ್ನೂ ಹೊಸತನದಲ್ಲಿರಲ್ಲಿದ್ದು, ಪಕ್ಕಾ ಮಾಸ್‌ ಅಂಶಗಳೊಂದಿಗೆ ಪಡ್ಡೆಗಳೂ ಸೇರಿದಂತೆ ದರ್ಶನ್ ಅಭಿಮಾನಿಗಳಿಗೊಂದು ರಗಡ್‌ ಸಿನಿಮಾ ಮಾಡಬೇಕೆಂಬ ಹಠದಲ್ಲೇ ಹರಿಕೃಷ್ಣ ಸದ್ಯಕ್ಕೆ ಸ್ಕ್ರಿಪ್ಟ್‌ನಲ್ಲಿ ಮಗ್ನರಾಗಿದ್ದಾರೆ.

Categories
ಸಿನಿ ಸುದ್ದಿ

ಬಿಕಿನಿಯಲ್ಲಿ ನಟಿ ರಮ್ಯಾ ಸ್ವಿಮ್ಮಿಂಗ್! ಪೋಸ್ಟ್‌‌ ವಿಡಿಯೋಗೆ ಪಡ್ಡೆಗಳ ಸಖತ್‌ ಸ್ಪಂದನೆ!!


ಮೋಹಕತಾರೆ ಖ್ಯಾತಿಯ ಚಂದನವನದ ಎವರ್‌ಗ್ರೀನ್ ಚೆಲುವೆ. ರಮ್ಯಾ ಮೇಡಂ ಏನೇ ಮಾಡಿದ್ರು ಅದು ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಅದರಲ್ಲೂ ಸೋಶಿಯಲ್‌ ಮೀಡಿಯಾದಲ್ಲಂತೂ ಮೇಡಂ ಸಖತ್‌ ಸುದ್ದಿಯಲ್ಲಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಸ್ಟ್ಯಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಲೈವ್ ಬಂದಾಗ ರಮ್ಯಾಗೆ ಸೋನು ಒಂದಷ್ಟು ಪ್ರಶ್ನೆಗಳ ಸುರಿಮಳೆಗೈದಿದ್ದು ಗೊತ್ತೇ ಇದೆ. ಆ ಪ್ರಶ್ನೆಗಳಿಗೆ ಅವರು ಸಾಕಷ್ಟು ಉತ್ತರ ಕೊಟ್ಟು, ಅಚ್ಚರಿ ಮೂಡಿಸಿದ್ದೂ ಗೊತ್ತು.

ಈಗ ಹೊಸ ವಿಷಯವೆಂದರೆ, ಅವರು ಬಿಕಿನಿಯಲ್ಲಿ ಸ್ಮಿಮ್ಮಿಂಗ್‌ ಪೂಲ್‌ ಒಳಗೆ ಸ್ವಿಮ್‌ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಪೋಸ್ಟ್‌ ನೋಡಿರುವ ಪಡ್ಡೆಗಳು ಸಿಕ್ಕಾಪಟ್ಟೆ ಕಾಮೆಂಟ್ಸ್‌ ಮಾಡಿದ್ದಾರೆ. ಜಾಲಿಯಾಗಿಯೇ ಸ್ವಿಮ್‌ ಮಾಡುತ್ತಿರುವ ರಮ್ಯಾ ಅವರ ಆ ವಿಡಿಯೋ ಈಗ ಸಖತ್‌ ವೈರಲ್‌ ಆಗಿದೆ.

ಅದೇನೆ ಇರಲಿ, ಹುಡುಗರ ಪಾಲಿನ ಹಾಟ್‌ ಫೇವರಿಟ್ ಹಾಗೂ ಆಲ್‌ ಟೈಮ್ ಕ್ರಷ್ ಎನಿಸಿಕೊಂಡಿರುವ ರಮ್ಯಾ ಸದ್ಯಕ್ಕೆ ಸಖತ್‌ ಸುದ್ದಿಯಲ್ಲಿರುವುದಂತೂ ನಿಜ.


ಬಣ್ಣದ ಲೋಕದಿಂದ ದೂರ ಉಳಿದರೂ ಕೂಡ ಸ್ಯಾಂಡಲ್‌ವುಡ್ ಪಾಲಿಗೆ ಗೋಲ್ಡನ್ ಕ್ವೀನ್ ಅವರು. ಗಂಧದಗುಡಿಗೆ ಎಷ್ಟೇ ಗ್ಲಾಮರ್‌ ಬೊಂಬೆಗಳು ಜಿಗಿಜಗಿದು ಬಂದರೂ ಕೂಡ ಊರಿಗೊಬ್ಳೆ ಪದ್ಮಾವತಿಯ ಚಾರ್ಮ್ ಕಮ್ಮಿಯಾಗಿಯಿಲ್ಲ ಅನ್ನೋದ್ದಕ್ಕೆ ಕಾರಣ, ಅವರು ಏನೇ ಮಾತಾಡಿದರೂ, ಏನೇ ಪೋಸ್ಟ್‌ ಮಾಡಿದರೂ ಸಿಗುತ್ತಿರುವ ಮೆಚ್ಚುಗೆಯೇ ಕಾರಣ.

Categories
ಸಿನಿ ಸುದ್ದಿ

ತೋತಾಪುರಿಗೆ ಜಗ್ಗೇಶ್‌ ಮಾತು! ಡಬ್ಬಿಂಗ್‌ ಕೆಲಸ ಆರಂಭಿಸಿದ ವಿಜಯ್‌ ಪ್ರಸಾದ್…

ಲಾಕ್‌ಡೌನ್‌ ನಂತರ ಚಿತ್ರರಂಗ ಗರಿಗೆದರಿದ ಬೆನ್ನಲ್ಲೇ, ಸಿನಿಮಾಗಳು ತಮ್ಮ ಕೆಲಸಗಳನ್ನು ಆರಂಭಿಸಿವೆ. ಅಂತೆಯೇ, ಜಗ್ಗೇಶ್‌ ಅಭಿನಯದ “ತೋತಾಪುರಿ” ಇದೀಗ ತನ್ನ ಕಾರ್ಯಚಟುವಟಿಕೆ ಶುರುವಿಟ್ಟುಕೊಂಡಿದೆ. ಹೌದು, “ತೋತಾಪುರಿ 2 ” ಚಿತ್ರತಂಡ ಡಬ್ಬಿಂಗ್ ಕಾರ್ಯ ಆರಂಭಿಸಿದೆ. ‌

ಎರಡನೇ ಅಲೆ ಲಾಕ್ ಡೌನ್ ಬಳಿಕ ಸಿನಿ ಕೆಲಸಕ್ಕೆ ಮುಂದಾಗಿದ್ದು, ಈಗಾಗಲೇ ನವರಸ ನಾಯಕ ಜಗ್ಗೇಶ್‌ ಅವರು ಡಬ್ಬಿಂಗ್ ಕಾರ್ಯದಲ್ಲಿ ತೊಡಗಿ‌ದ್ದಾರೆ. ಸಹಜವಾಗಿಯೇ ಇದು, ಚಿತ್ರತಂಡಕ್ಕೆ ಖುಷಿ ನೀಡಿದೆ. ನಿರ್ದೇಶಕ ವಿಜಯ್‌ ಪ್ರಸಾದ್‌ ಈ ಹಿಂದೆ ಜಗ್ಗೇಶ್‌ ಅವರಿಗಾಗಿಯೇ “ನೀರ್‌ದೋಸೆ” ಸಿನಿಮಾ ಮಾಡಿದ್ದರು. ಹರಿಪ್ರಿಯಾ ಮತ್ತು ಜಗ್ಗೇಶ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದ ಆ ಚಿತ್ರ ಸೂಪರ್‌ ಹಿಟ್‌ ಆಗಿತ್ತು.

ಅದೇ ಖುಷಿಯ ಅಲೆಯಲ್ಲಿದ್ದ ವಿಜಯ್‌ ಪ್ರಸಾದ್‌ ಇದೀಗ “ತೋತಾಪುರಿ” ಸಿನಿಮಾ ಮಾಡಿದ್ದಾರೆ. ಸುರೇಶ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕೊರೊನಾ ದೂರವಾದರೆ, ಲಾಕ್‌ಡೌನ್‌ ಇಲ್ಲವಾದರೆ, ಚಿತ್ರಮಂದಿರಗಳು ಶೇ.100 ರಷ್ಟು ಆರಂಭಗೊಂಡರೆ “ತೋತಾಪುರಿ” ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

Categories
ಸಿನಿ ಸುದ್ದಿ

ಸಹ ಕಲಾವಿದರ ಕಷ್ಟಕ್ಕೆ ಮಿಡಿದ ಹೊಂಬಾಳೆ ಫಿಲಂಸ್ ನ ನಿರ್ಮಾಪಕ ವಿಜಯ್ ಕಿರಂಗದೂರು

ಕೊರೋನ ಸಮಯದಲ್ಲಿ ಸಂಕಷ್ಟಕ್ಕೆ ತುತ್ತಾಗಿದ್ದ, ಕರ್ನಾಟಕ ಚಲನಚಿತ್ರ ಸಹ ಕಲಾವಿದರಿಗೆ ನಿರ್ಮಾಪಕ ವಿಜಯ್ ಕಿರಂಗದೂರು ನೆರವಾಗಿದ್ದಾರೆ. ಕರ್ನಾಟಕ ಚಲನಚಿತ್ರ ಸಹ ಕಲಾವಿದರ ಹಾಗೂ ಪ್ರತಿನಿಧಿಗಳ ಸಂಘಕ್ಕೆ ನಾಲ್ಕು ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ.


ಈ ಹಣದಿಂದ ಸುಮಾರು 600 ಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಸಾರಿಗೆ ಭತ್ಯೆ ಅಂತ ಎರಡು ನೂರು ರೂಪಾಯಿ ನೀಡಿದ್ದಾರೆ. ಎಂದು ಕರ್ನಾಟಕ ಸಹ ಕಲಾವಿದರ ಸಂಘದ ಖಜಾಂಚಿ ದಿವಾಕರ್ ಆರಗ ತಿಳಿಸಿದ್ದಾರೆ.

ನಮ್ಮ ಸಂಘದ ಸದಸ್ಯರ ಸಂಕಷ್ಟಕ್ಕೆ ಮಿಡಿದ ವಿಜಯ್ ಕಿರಂಗದೂರು ಅವರಿಗೆ ಹಾಗೂ ಸಹಕಾರ ನೀಡಿದ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು,

ಕಾರ್ಯದರ್ಶಿ ರವೀಂದ್ರನಾಥ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಅವರಿಗೆ ದಿವಾಕರ್ ಆರಗ ಅವರು ಸಂಫದ ಎಲ್ಲಾ ಸದಸ್ಯರ ಪರವಾಗಿ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ದಚ್ಚುಗೆ 25 ಕೋಟಿ ದೋಖಾ ಕೇಸ್; `ಅಜ್ಞಾತಸ್ಥಳ’ದಿಂದಲೇ ಅರುಣ ಕುಮಾರಿ ವಿಡಿಯೋ ರಿಲೀಸ್ !

  • ವಿಶಾಲಾಕ್ಷಿ

ಬಾಕ್ಸ್ಆಫೀಸ್ ಸುಲ್ತಾನನ ಹೆಸರಲ್ಲಿ 25ಕೋಟಿ ವಂಚನೆ ಯತ್ನಕ್ಕೆ ಸಂಬಂಧಿಸಿದಂತೆ ಅರುಣಕುಮಾರಿ ಎಂಬುವವರು ಆರೋಪಿ ಸ್ಥಾನದಲ್ಲಿರುವ ಸಂಗತಿ ನಿಮಗೆಲ್ಲ ಗೊತ್ತೇ ಇದೆ. ಮೊದಲು ಹರ್ಷ ಮೆಲಂಟಾ, ರಾಕೇಶ್ ಪಾಪಣ್ಣ ಹಾಗೂ ರಾಕೇಶ್ ಶರ್ಮಾರ ಹೆಸರು ಹೇಳಿ ಈ ಮೂವರನ್ನು ಆರೋಪಿ ಸ್ಥಾನದಲ್ಲಿ ತಂದು ನಿಲ್ಲಿಸಿದ್ದ ಅರುಣ ಕುಮಾರಿ, ಮೈಸೂರಿನ ಎಸಿಪಿ ಪೊಲೀಸರ ಮುಂದೆ ಹಾಜರಾದಾಗ ಇಷ್ಟೆಲ್ಲಾ ಮಾಡಿಸಿದ್ದು ನಿರ್ಮಾಪಕ ಉಮಾಪತಿಯವರು ಅಂತೇಳಿ “ರಾಬರ್ಟ್” ಪ್ರೊಡ್ಯೂಸರ್‌ನ ಆರೋಪಿ ಸ್ತಾನದಲ್ಲಿ ನಿಲ್ಲಿಸಿದ್ದಾರೆ. ಸದ್ಯಕ್ಕೆ ತನಿಖೆ ನಡೆಯುತ್ತಿದೆ. ಈ ನಡುವೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ತಮ್ಮ ಸ್ಮೇಹಿತರೊಟ್ಟಿಗೆ ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿ ಒಂದಿಷ್ಟು ಸತ್ಯಗಳನ್ನ ಬಿಚ್ಚಿಟ್ಟಿದ್ದರು. ಇತ್ತ ನಿರ್ಮಾಪಕ ಉಮಾಪತಿಯವರು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದರು. ಇದೀಗ ಅರುಣ ಕುಮಾರಿ ಸರದಿ. ಮಾಧ್ಯಮಗಳ ಮುಂದೆ ಹಾಜರಾಗದ ಅರುಣಕುಮಾರಿ ಅಜ್ಞಾತಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ.

ಅರುಣಕುಮಾರಿ ಕಿಂಗ್‌ಕ್ವೀನಾ ಅಥವಾ ಕೀಕೊಟ್ಟ ಗೊಂಬೆನಾ ?
`ಉಮಾಪತಿ’ ನನ್ನ ಬಳಸಿಕೊಂಡುಬಿಟ್ರು; ಅರುಣ ಆರೋಪ !

ದಚ್ಚುಗೆ 25 ಕೋಟಿ ದೋಖಾ ಮಾಡೋದಕ್ಕೆ ಹೊರಟ ಅರುಣಕುಮಾರಿ ಪ್ರಕರಣದ ಕಿಂಗ್‌ ಕ್ವೀನಾ ಅಥವಾ ಯಾರೋ ಕೀ ಕೊಟ್ಟು ಆಡಿಸುತ್ತಿರುವ ಗೊಂಬೆನಾ? ಈ ಎರಡು ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿಲ್ಲ. ಸದ್ಯಕ್ಕೆ ಆರೋಪಿ ಸ್ಥಾನದಲ್ಲಿರುವ ಅರುಣಕುಮಾರಿ ಅಡಗಿ ಕುಳಿತಿರೋದಂತೂ ಸತ್ಯ. ಪ್ರಕರಣ ಪೊಲೀಸ್‌ಠಾಣೆ ಮೆಟ್ಟಿಲೇರುತ್ತಿದ್ದಂತೆ ಮನೆಗೆ ಬೀಗ ಜಡಿದಿದ್ದಾರೆ. ಜಂಬೂ ಸವಾರಿ ದಿನ್ನೆಯ ಬಾಡಿಗೆ ಮನೆಯಲ್ಲಿ ತಂದೆ-ತಾಯಿ ಹಾಗೂ ಮಕ್ಕಳ ಜೊತೆ ವಾಸವಿದ್ದರು ಎಂದು ಹೇಳಲಾಗ್ತಿದೆ. ಸದ್ಯಕ್ಕೆ, ಅರುಣಕುಮಾರಿ ಯಾರ ಕೈಗೂ ಸಿಗುತ್ತಿಲ್ಲ ಆದರೆ ಅಜ್ಞಾತಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ. ಉಮಾಪತಿಯವರು ಮಾಡಿದ್ದು ತಪ್ಪು ಅಂತ ನೇರವಾಗಿ ರಾಬರ್ಟ್ ಪ್ರೊಡ್ಯೂಸರ್ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಮಾರ್ಚ್ 30 ರಿಂದ ಉಮಾಪತಿಯವರ ಕಾಂಟ್ಯಾಕ್ಟ್‌ ನಲ್ಲಿದ್ದೀನಿ!


ಲೋನ್ ಹಾಗೂ ಶ್ಯೂರಿಟಿ ಸಂಬಂಧ ಅರುಣಕುಮಾರಿಯವರು ನನಗೆ ಫೋನ್ ಮಾಡಿದ್ದರು ಅಂತ ಉಮಾಪತಿಯವರು ಸ್ಟೇಟ್ಮೆಂಟ್ ಕೊಟ್ಟಿದ್ದರು. ಇದಕ್ಕೆ ಅರುಣಕುಮಾರಿಯವರು ರಿಯಾಕ್ಟ್ ಮಾಡಿದ್ದು ಕಳೆದ ಎರಡು ತಿಂಗಳಿಂದ ಮಾತ್ರವಲ್ಲ ಮಾರ್ಚ್ ೩೦ರಿಂದಲೂ ನಾನು ಅವರ ಕಾಂಟ್ಯಾಕ್ಟ್‌ನಲ್ಲಿದ್ದೇನೆ. ಉಮಾಪತಿಯವರನ್ನ ಭೇಟಿ ಮಾಡಿದ್ದೇನೆ, ಜನರಲ್ ಮೆಸೇಜ್- ಚಾಟಿಂಗ್ ಕೂಡ ಮಾಡಿದ್ದೇನೆ. ಹರ್ಷ ಮೆಲಂಟಾ ಅವರಿಂದ ದರ್ಶನ್‌ಗೆ ಮೋಸ ಆಗ್ತಿದೆ ಎಂಬ ಸುದ್ದಿ ಗೊತ್ತಾದ್ಮೇಲೆ ನೇರವಾಗಿ ದರ್ಶನ್ ಸರ್ ಬಳಿ ಉಮಾಪತಿಯವರು ಹೇಳಿದ್ದರು ಮ್ಯಾಟರ್ ಕ್ಲಿಯರ್ ಆಗ್ತಿತ್ತು. ಅದನ್ನು ಬಿಟ್ಟು ನಡುವೆ ನನ್ನನ್ನು ಎಳೆದು ತಂದರು. ಒಂದು ಹೆಣ್ಣು ಅಂತಾನೂ ನೋಡದೇ ನನ್ನ ಅವರ ಕೆಲಸಕ್ಕೆ ಉಪಯೋಗಿಸಿಕೊಂಡು ಈಗ ನನ್ನ ವಿರುದ್ದ ಹೇಳಿಕೆ ಕೊಡ್ತಿದ್ದಾರೆ. ನಿರ್ಮಾಪಕ ಉಮಾಪತಿಯವರು ಮಾಡ್ತಿರುವುದು ತಪ್ಪು ಇದರಿಂದ ಅವರಿಗೇನ್ ಉಪಯೋಗ ಇದೆಯೋ, ಅವರಿಗೇನ್ ಲಾಭ ಇದೆಯೋ ನನಗೆ ಗೊತ್ತಿಲ್ಲ. ಆದರೆ, ನನ್ನ ಮಾನ-ಮರ್ಯಾದೆ ಬೀದಿಲಿ ಹರಾಜ್ ಆಗ್ತಿದೆ. ಊರಲ್ಲಿ ತಲೆ ಎತ್ತಿಕೊಂಡು ತಿರುಗಾಡೋದು ಹೇಗೆ, ನನ್ನ ಮಗನ ಭವಿಷ್ಯ ಹೇಗೆ ಅಂತ ಚಿಂತೆಯಾಗ್ತಿದೆ ಎಂದಿದ್ದಾರೆ.

ಹಾರ್ಟ್ ಎಮೋಜಿ ಕಳುಹಿಸಿದ್ದಕ್ಕೆ ಸಂಬಂಧ ಕಟ್ಟು ಬಿಟ್ಟರಲ್ಲ !

ಒಂದು ಹೆಣ್ಣು ಅಂತಾನೂ ನೋಡದೇ ನನ್ನನ್ನ ತೇಜೋವಧೆ ಮಾಡುವಂತಹ ಕೆಲಸ ನಡೀತಿದೆ. ಉಮಾಪತಿಯವರಿಗೆ ನಾನು ಕಳುಹಿಸಿರುವ ಹಾರ್ಟ್ ಸಿಂಬಲ್‌ನ ಇಟ್ಕೊಂಡು ಸಂಬಂಧ ಕಲ್ಪಿಸುವ ಕೆಲಸ ಆಗ್ತಿದೆ. ಹಾರ್ಟ್ ಎಮೋಜಿನಾ ಲವ್ವರ್‌ಗೆ ಮಾತ್ರ ಕಳುಹಿಸಲ್ಲಾರೀ, ಅಣ್ಣ-ತಮ್ಮನಿಗೆ ಲವ್ ಎಮೋಜಿ ಕಳುಹಿಸ್ತಾರೆ. ಅದನ್ನು ಅರ್ಥ ಮಾಡ್ಕೊಳ್ಳಿ ಅಂತ ಕಿಡಿಕಾರಿದ್ದಾರೆ.

ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ

ಇಷ್ಟಕ್ಕೆ ಸುಮ್ಮನಾಗದ ಅರುಣಕುಮಾರಿ, ದರ್ಶನ್ ಸಾರ್ ಅಂಡ್ ಅವರ ಸ್ನೇಹಿತರು ಅವರುಗಳ ಮನೆಗೆ ಕರೆಸಿಕೊಂಡು ನಾಲ್ಕು ಏಟು ಹೊಡೆದು ಬುದ್ದಿ ಹೇಳಿದ್ದರೆ ನಾನು ಮಾಡಿದ್ದು ತಪ್ಪಾಯ್ತು ಸಾರ್, ಅವರು ಹೇಳಿದ್ಹಂಗೆ ನಾನು ಕೇಳಿದ್ದು ತಪ್ಪು ಅಂತ ಸಾರಿ ಕೇಳಿ ಸುಮ್ಮನಾಗುತ್ತಿದ್ದೆ. ಅಷ್ಟಕ್ಕೂ, ದರ್ಶನ್ ಸರ್ ಮನೆಗೆ ಹಾಗೂ ಅವರ ತೋಟಕ್ಕೆ ಹೋಗಿ ಬಂದಿದ್ದೇನೆ. ಹಾಗಂತ ನಾನೇನು ಅಲ್ಲಿ ಕಳ್ಳತನ ಮಾಡಿಕೊಂಡು ಬಂದಿಲ್ಲ, ದುಡ್ಡು ದೋಚಿಕೊಂಡು ಬಂದಿಲ್ಲ. ಅಷ್ಟಕ್ಕು, ನಾನು ನಿಮ್ಮೆ ಹೆಸರಲ್ಲಿ ಲೋನ್‌ಗೆ ಅಪ್ರೋಚ್ ಮಾಡೋದಕ್ಕೆ ಬಂದಿದ್ದರು ನಿಮ್ಮ ಸ್ಮೇಹಿತರು ಅಂತ ಹೇಳಿದ್ದೇನೆ ಹೊರತು, ಲೋನ್‌ಗೆ ಅಪ್ಲೈ ಮಾಡಿದ್ದಾರೆ ಅಂತ ಹೇಳಿಲ್ಲ. ಸುಖಾ ಸುಮ್ಮನೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗ್ತಿದೆ. ಈ ಪ್ರಕರಣದಿಂದ ನನ್ನ ಈಚೆ ಕರ‍್ಕೊಂಡು ಬನ್ನಿ. ನನ್ನ ಮೇಲೆ ಕೇಳಿ ಬರುತ್ತಿರುವ ಆರೋಪವನ್ನು ಕೇಳಿ ಕೇಳಿ ನಾನು ಡಿಪ್ರೆಶನ್‌ಗೆ ಹೋಗಿದ್ದೇನೆ. ನನಗೆ ಇದನ್ನೆಲ್ಲಾ ಕೇಳಿಸಿಕೊಂಡು ಕೂರೋದಕ್ಕೆ ಆಗಲ್ಲ ಇಡೀ ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಂಡು ಸಾಯುವ ಹಂತಕ್ಕೆ ಬಂದಿದ್ದೇವೆ.

ದಚ್ಚುಗೆ ಟಾಂಗ್‌ ಕೊಟ್ಟರಲ್ಲ ಅರುಣಕುಮಾರಿ !

ಚಾಲೆಂಜಿಂಗ್ ಸ್ಟಾರ್ ಮೈಸೂರಿನಲ್ಲಿ ಸುದ್ದಿಗೋಷ್ಟಿ ಮಾಡಿದಾಗ ಅರುಣಕುಮಾರಿಯವರ ಪತಿ ಕುಮಾರ್ ಅವರು ಹಾಜರಿದ್ದರು. ನನ್ನ ಹೆಂಡ್ತಿ ಪಿಯುಸಿ ಪಾಸ್ ಆಗಿಲ್ಲ, ಬ್ಯಾಂಕ್ ಮ್ಯಾನೇಜರ್ ಆಗೋದಕ್ಕೆ ಸಾಧ್ಯನೇ ಇಲ್ಲ. ಅಷ್ಟಕ್ಕೂ, ಆಕೆ ಜೊತೆಗೆ ನಾನು ಸಂಬಂಧ ಕಡಿದುಕೊಂಡಿದ್ದೇನೆ. ನಾವಿಬ್ಬರು ಬೇರೆಯಾಗಿ ಎಂಟು ವರ್ಷ ಆಗಿದೆ ಎಂದರು. ಇದೇ ವೇಳೆ ಮಾತನಾಡಿದ ದಚ್ಚು, ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿಕೊಂಡು ನಿಮಗೆ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದೆ. ಅದಕ್ಕೆ ೨ ಲಕ್ಷ ಲಂಚ ಕೊಡಬೇಕು ಅಂತ ೨೬ ವರ್ಷದ ಯುವಕನೊಬ್ಬನ ಬಳಿ ಹಣ ಪೀಕಿರುವ ಸತ್ಯವನ್ನು ಜಗಜ್ಜಾಹೀರು ಮಾಡಿದರು. ಇದಕ್ಕೆ ಅಜ್ಞಾತವಾಸದಿಂದ ಅರುಣಕುಮಾರಿ ಟಾಂಗ್ ಕೊಟ್ಟಿದ್ದಾರೆ. ನನ್ನ ಲೈಫ್ ಸಾರ್ ಏನ್ ಬೇಕಾದರೂ ಮಾಡ್ತೀನಿ ಹೇಗೆ ಬೇಕಾದರೂ ನಿಭಾಯಿಸಿಕೊಳ್ತೀನಿ' ಅದನ್ನು ಕೇಳೋ ಹಕ್ಕು ಯಾರಿಗೂ ಇಲ್ಲ ಎನ್ನುವಂತೆ ಮಾತನಾಡಿದ ಅರುಣಕುಮಾರಿ,ನನ್ನ ಲೈಫ್ ಹಾಳಾದರೆ ದರ್ಶನ್ ಅವರಾಗಲಿ ಉಮಾಪತಿಯಾಗಲಿ ಬರೋದಿಲ್ಲ’ ಈಗ ನಮ್ಮನ್ನ ನಮ್ಮ ಪಾಡಿಗೆ ಬದುಕೋದಕ್ಕೆ ಬಿಟ್ಟು ಬಿಡಿ. ಕಷ್ಟಾನೋ-ಸುಖಾನೋ ಎಲ್ಲೋ ಜೀವನ ಮಾಡ್ತೀವಿ ಎಂದಿದ್ದಾರೆ.

ಅರುಣಕುಮಾರಿಗೆ ಒತ್ತಡ ಹೇರಿದ್ರಾ ?

ನನ್ನಂಥ ಅಮಾಯಕಿಯನ್ನ ಕರ‍್ಕೊಂಡು ಹೋಗಿ ಇದರಲ್ಲಿ ತಗಲಾಕಿ ಉಮಾಪತಿಯವರು ದೊಡ್ಡ ತಪ್ಪು ಮಾಡಿದ್ದಾರೆ. ದೊಡ್ಡವರು ಹೆಂಗ್ ಬೇಕಾದರೂ ಮಾತು ತಿರುಗಿಸುತ್ತಿದ್ದಾರೆ. ಆದರೆ, ನಾವು ಹಂಗಲ್ಲ. ನನ್ನ ಹತ್ತಿರ ಏನೆಲ್ಲಾ ಸಾಕ್ಷಿ ಇದೆಯೋ ಅದೆಲ್ಲವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ ಇದನ್ನ ತಗೊಂಡು ಹೋಗಿ ಚಾನೆಲ್‌ಗಾದರೂ ಕೊಡಿ ಎಲ್ಲಿಗಾದರೂ ಕೊಡಿ ಅಂತ ಅರುಣಕುಮಾರಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಅರುಣಕುಮಾರಿ ಅಜ್ಞಾತವಾಸದಿಂದ ವಿಡಿಯೋ ರಿಲೀಸ್ ಮಾಡೋದಕ್ಕೆ ಕಾರಣಕರ್ತರು ಯಾರು? ಯಾರಾದರೂ ಒತ್ತಡ ಹೇರಿದ್ರಾ ಅಥವಾ ಅರುಣಕುಮಾರಿಯೇ ಸ್ವತಃ ತಮ್ಮ ಮೇಲೆ ಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ಕೊಡೋದಕ್ಕೆ ವಿಡಿಯೋ ರಿಲೀಸ್ ಮಾಡಿದ್ರಾ ಅನ್ನೋದು ಕೂತೂಹಲದ ಪ್ರಶ್ನೆ.

error: Content is protected !!