ದಚ್ಚುಗೆ 25 ಕೋಟಿ ದೋಖಾ ಕೇಸ್; `ಅಜ್ಞಾತಸ್ಥಳ’ದಿಂದಲೇ ಅರುಣ ಕುಮಾರಿ ವಿಡಿಯೋ ರಿಲೀಸ್ !

  • ವಿಶಾಲಾಕ್ಷಿ

ಬಾಕ್ಸ್ಆಫೀಸ್ ಸುಲ್ತಾನನ ಹೆಸರಲ್ಲಿ 25ಕೋಟಿ ವಂಚನೆ ಯತ್ನಕ್ಕೆ ಸಂಬಂಧಿಸಿದಂತೆ ಅರುಣಕುಮಾರಿ ಎಂಬುವವರು ಆರೋಪಿ ಸ್ಥಾನದಲ್ಲಿರುವ ಸಂಗತಿ ನಿಮಗೆಲ್ಲ ಗೊತ್ತೇ ಇದೆ. ಮೊದಲು ಹರ್ಷ ಮೆಲಂಟಾ, ರಾಕೇಶ್ ಪಾಪಣ್ಣ ಹಾಗೂ ರಾಕೇಶ್ ಶರ್ಮಾರ ಹೆಸರು ಹೇಳಿ ಈ ಮೂವರನ್ನು ಆರೋಪಿ ಸ್ಥಾನದಲ್ಲಿ ತಂದು ನಿಲ್ಲಿಸಿದ್ದ ಅರುಣ ಕುಮಾರಿ, ಮೈಸೂರಿನ ಎಸಿಪಿ ಪೊಲೀಸರ ಮುಂದೆ ಹಾಜರಾದಾಗ ಇಷ್ಟೆಲ್ಲಾ ಮಾಡಿಸಿದ್ದು ನಿರ್ಮಾಪಕ ಉಮಾಪತಿಯವರು ಅಂತೇಳಿ “ರಾಬರ್ಟ್” ಪ್ರೊಡ್ಯೂಸರ್‌ನ ಆರೋಪಿ ಸ್ತಾನದಲ್ಲಿ ನಿಲ್ಲಿಸಿದ್ದಾರೆ. ಸದ್ಯಕ್ಕೆ ತನಿಖೆ ನಡೆಯುತ್ತಿದೆ. ಈ ನಡುವೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ತಮ್ಮ ಸ್ಮೇಹಿತರೊಟ್ಟಿಗೆ ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿ ಒಂದಿಷ್ಟು ಸತ್ಯಗಳನ್ನ ಬಿಚ್ಚಿಟ್ಟಿದ್ದರು. ಇತ್ತ ನಿರ್ಮಾಪಕ ಉಮಾಪತಿಯವರು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದರು. ಇದೀಗ ಅರುಣ ಕುಮಾರಿ ಸರದಿ. ಮಾಧ್ಯಮಗಳ ಮುಂದೆ ಹಾಜರಾಗದ ಅರುಣಕುಮಾರಿ ಅಜ್ಞಾತಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ.

ಅರುಣಕುಮಾರಿ ಕಿಂಗ್‌ಕ್ವೀನಾ ಅಥವಾ ಕೀಕೊಟ್ಟ ಗೊಂಬೆನಾ ?
`ಉಮಾಪತಿ’ ನನ್ನ ಬಳಸಿಕೊಂಡುಬಿಟ್ರು; ಅರುಣ ಆರೋಪ !

ದಚ್ಚುಗೆ 25 ಕೋಟಿ ದೋಖಾ ಮಾಡೋದಕ್ಕೆ ಹೊರಟ ಅರುಣಕುಮಾರಿ ಪ್ರಕರಣದ ಕಿಂಗ್‌ ಕ್ವೀನಾ ಅಥವಾ ಯಾರೋ ಕೀ ಕೊಟ್ಟು ಆಡಿಸುತ್ತಿರುವ ಗೊಂಬೆನಾ? ಈ ಎರಡು ಪ್ರಶ್ನೆಗೆ ಸ್ಪಷ್ಟವಾದ ಉತ್ತರವಿಲ್ಲ. ಸದ್ಯಕ್ಕೆ ಆರೋಪಿ ಸ್ಥಾನದಲ್ಲಿರುವ ಅರುಣಕುಮಾರಿ ಅಡಗಿ ಕುಳಿತಿರೋದಂತೂ ಸತ್ಯ. ಪ್ರಕರಣ ಪೊಲೀಸ್‌ಠಾಣೆ ಮೆಟ್ಟಿಲೇರುತ್ತಿದ್ದಂತೆ ಮನೆಗೆ ಬೀಗ ಜಡಿದಿದ್ದಾರೆ. ಜಂಬೂ ಸವಾರಿ ದಿನ್ನೆಯ ಬಾಡಿಗೆ ಮನೆಯಲ್ಲಿ ತಂದೆ-ತಾಯಿ ಹಾಗೂ ಮಕ್ಕಳ ಜೊತೆ ವಾಸವಿದ್ದರು ಎಂದು ಹೇಳಲಾಗ್ತಿದೆ. ಸದ್ಯಕ್ಕೆ, ಅರುಣಕುಮಾರಿ ಯಾರ ಕೈಗೂ ಸಿಗುತ್ತಿಲ್ಲ ಆದರೆ ಅಜ್ಞಾತಸ್ಥಳದಿಂದಲೇ ವಿಡಿಯೋ ರಿಲೀಸ್ ಮಾಡಿದ್ದಾರೆ. ಉಮಾಪತಿಯವರು ಮಾಡಿದ್ದು ತಪ್ಪು ಅಂತ ನೇರವಾಗಿ ರಾಬರ್ಟ್ ಪ್ರೊಡ್ಯೂಸರ್ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಮಾರ್ಚ್ 30 ರಿಂದ ಉಮಾಪತಿಯವರ ಕಾಂಟ್ಯಾಕ್ಟ್‌ ನಲ್ಲಿದ್ದೀನಿ!


ಲೋನ್ ಹಾಗೂ ಶ್ಯೂರಿಟಿ ಸಂಬಂಧ ಅರುಣಕುಮಾರಿಯವರು ನನಗೆ ಫೋನ್ ಮಾಡಿದ್ದರು ಅಂತ ಉಮಾಪತಿಯವರು ಸ್ಟೇಟ್ಮೆಂಟ್ ಕೊಟ್ಟಿದ್ದರು. ಇದಕ್ಕೆ ಅರುಣಕುಮಾರಿಯವರು ರಿಯಾಕ್ಟ್ ಮಾಡಿದ್ದು ಕಳೆದ ಎರಡು ತಿಂಗಳಿಂದ ಮಾತ್ರವಲ್ಲ ಮಾರ್ಚ್ ೩೦ರಿಂದಲೂ ನಾನು ಅವರ ಕಾಂಟ್ಯಾಕ್ಟ್‌ನಲ್ಲಿದ್ದೇನೆ. ಉಮಾಪತಿಯವರನ್ನ ಭೇಟಿ ಮಾಡಿದ್ದೇನೆ, ಜನರಲ್ ಮೆಸೇಜ್- ಚಾಟಿಂಗ್ ಕೂಡ ಮಾಡಿದ್ದೇನೆ. ಹರ್ಷ ಮೆಲಂಟಾ ಅವರಿಂದ ದರ್ಶನ್‌ಗೆ ಮೋಸ ಆಗ್ತಿದೆ ಎಂಬ ಸುದ್ದಿ ಗೊತ್ತಾದ್ಮೇಲೆ ನೇರವಾಗಿ ದರ್ಶನ್ ಸರ್ ಬಳಿ ಉಮಾಪತಿಯವರು ಹೇಳಿದ್ದರು ಮ್ಯಾಟರ್ ಕ್ಲಿಯರ್ ಆಗ್ತಿತ್ತು. ಅದನ್ನು ಬಿಟ್ಟು ನಡುವೆ ನನ್ನನ್ನು ಎಳೆದು ತಂದರು. ಒಂದು ಹೆಣ್ಣು ಅಂತಾನೂ ನೋಡದೇ ನನ್ನ ಅವರ ಕೆಲಸಕ್ಕೆ ಉಪಯೋಗಿಸಿಕೊಂಡು ಈಗ ನನ್ನ ವಿರುದ್ದ ಹೇಳಿಕೆ ಕೊಡ್ತಿದ್ದಾರೆ. ನಿರ್ಮಾಪಕ ಉಮಾಪತಿಯವರು ಮಾಡ್ತಿರುವುದು ತಪ್ಪು ಇದರಿಂದ ಅವರಿಗೇನ್ ಉಪಯೋಗ ಇದೆಯೋ, ಅವರಿಗೇನ್ ಲಾಭ ಇದೆಯೋ ನನಗೆ ಗೊತ್ತಿಲ್ಲ. ಆದರೆ, ನನ್ನ ಮಾನ-ಮರ್ಯಾದೆ ಬೀದಿಲಿ ಹರಾಜ್ ಆಗ್ತಿದೆ. ಊರಲ್ಲಿ ತಲೆ ಎತ್ತಿಕೊಂಡು ತಿರುಗಾಡೋದು ಹೇಗೆ, ನನ್ನ ಮಗನ ಭವಿಷ್ಯ ಹೇಗೆ ಅಂತ ಚಿಂತೆಯಾಗ್ತಿದೆ ಎಂದಿದ್ದಾರೆ.

ಹಾರ್ಟ್ ಎಮೋಜಿ ಕಳುಹಿಸಿದ್ದಕ್ಕೆ ಸಂಬಂಧ ಕಟ್ಟು ಬಿಟ್ಟರಲ್ಲ !

ಒಂದು ಹೆಣ್ಣು ಅಂತಾನೂ ನೋಡದೇ ನನ್ನನ್ನ ತೇಜೋವಧೆ ಮಾಡುವಂತಹ ಕೆಲಸ ನಡೀತಿದೆ. ಉಮಾಪತಿಯವರಿಗೆ ನಾನು ಕಳುಹಿಸಿರುವ ಹಾರ್ಟ್ ಸಿಂಬಲ್‌ನ ಇಟ್ಕೊಂಡು ಸಂಬಂಧ ಕಲ್ಪಿಸುವ ಕೆಲಸ ಆಗ್ತಿದೆ. ಹಾರ್ಟ್ ಎಮೋಜಿನಾ ಲವ್ವರ್‌ಗೆ ಮಾತ್ರ ಕಳುಹಿಸಲ್ಲಾರೀ, ಅಣ್ಣ-ತಮ್ಮನಿಗೆ ಲವ್ ಎಮೋಜಿ ಕಳುಹಿಸ್ತಾರೆ. ಅದನ್ನು ಅರ್ಥ ಮಾಡ್ಕೊಳ್ಳಿ ಅಂತ ಕಿಡಿಕಾರಿದ್ದಾರೆ.

ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ

ಇಷ್ಟಕ್ಕೆ ಸುಮ್ಮನಾಗದ ಅರುಣಕುಮಾರಿ, ದರ್ಶನ್ ಸಾರ್ ಅಂಡ್ ಅವರ ಸ್ನೇಹಿತರು ಅವರುಗಳ ಮನೆಗೆ ಕರೆಸಿಕೊಂಡು ನಾಲ್ಕು ಏಟು ಹೊಡೆದು ಬುದ್ದಿ ಹೇಳಿದ್ದರೆ ನಾನು ಮಾಡಿದ್ದು ತಪ್ಪಾಯ್ತು ಸಾರ್, ಅವರು ಹೇಳಿದ್ಹಂಗೆ ನಾನು ಕೇಳಿದ್ದು ತಪ್ಪು ಅಂತ ಸಾರಿ ಕೇಳಿ ಸುಮ್ಮನಾಗುತ್ತಿದ್ದೆ. ಅಷ್ಟಕ್ಕೂ, ದರ್ಶನ್ ಸರ್ ಮನೆಗೆ ಹಾಗೂ ಅವರ ತೋಟಕ್ಕೆ ಹೋಗಿ ಬಂದಿದ್ದೇನೆ. ಹಾಗಂತ ನಾನೇನು ಅಲ್ಲಿ ಕಳ್ಳತನ ಮಾಡಿಕೊಂಡು ಬಂದಿಲ್ಲ, ದುಡ್ಡು ದೋಚಿಕೊಂಡು ಬಂದಿಲ್ಲ. ಅಷ್ಟಕ್ಕು, ನಾನು ನಿಮ್ಮೆ ಹೆಸರಲ್ಲಿ ಲೋನ್‌ಗೆ ಅಪ್ರೋಚ್ ಮಾಡೋದಕ್ಕೆ ಬಂದಿದ್ದರು ನಿಮ್ಮ ಸ್ಮೇಹಿತರು ಅಂತ ಹೇಳಿದ್ದೇನೆ ಹೊರತು, ಲೋನ್‌ಗೆ ಅಪ್ಲೈ ಮಾಡಿದ್ದಾರೆ ಅಂತ ಹೇಳಿಲ್ಲ. ಸುಖಾ ಸುಮ್ಮನೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಆಗ್ತಿದೆ. ಈ ಪ್ರಕರಣದಿಂದ ನನ್ನ ಈಚೆ ಕರ‍್ಕೊಂಡು ಬನ್ನಿ. ನನ್ನ ಮೇಲೆ ಕೇಳಿ ಬರುತ್ತಿರುವ ಆರೋಪವನ್ನು ಕೇಳಿ ಕೇಳಿ ನಾನು ಡಿಪ್ರೆಶನ್‌ಗೆ ಹೋಗಿದ್ದೇನೆ. ನನಗೆ ಇದನ್ನೆಲ್ಲಾ ಕೇಳಿಸಿಕೊಂಡು ಕೂರೋದಕ್ಕೆ ಆಗಲ್ಲ ಇಡೀ ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಂಡು ಸಾಯುವ ಹಂತಕ್ಕೆ ಬಂದಿದ್ದೇವೆ.

ದಚ್ಚುಗೆ ಟಾಂಗ್‌ ಕೊಟ್ಟರಲ್ಲ ಅರುಣಕುಮಾರಿ !

ಚಾಲೆಂಜಿಂಗ್ ಸ್ಟಾರ್ ಮೈಸೂರಿನಲ್ಲಿ ಸುದ್ದಿಗೋಷ್ಟಿ ಮಾಡಿದಾಗ ಅರುಣಕುಮಾರಿಯವರ ಪತಿ ಕುಮಾರ್ ಅವರು ಹಾಜರಿದ್ದರು. ನನ್ನ ಹೆಂಡ್ತಿ ಪಿಯುಸಿ ಪಾಸ್ ಆಗಿಲ್ಲ, ಬ್ಯಾಂಕ್ ಮ್ಯಾನೇಜರ್ ಆಗೋದಕ್ಕೆ ಸಾಧ್ಯನೇ ಇಲ್ಲ. ಅಷ್ಟಕ್ಕೂ, ಆಕೆ ಜೊತೆಗೆ ನಾನು ಸಂಬಂಧ ಕಡಿದುಕೊಂಡಿದ್ದೇನೆ. ನಾವಿಬ್ಬರು ಬೇರೆಯಾಗಿ ಎಂಟು ವರ್ಷ ಆಗಿದೆ ಎಂದರು. ಇದೇ ವೇಳೆ ಮಾತನಾಡಿದ ದಚ್ಚು, ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿಕೊಂಡು ನಿಮಗೆ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದೆ. ಅದಕ್ಕೆ ೨ ಲಕ್ಷ ಲಂಚ ಕೊಡಬೇಕು ಅಂತ ೨೬ ವರ್ಷದ ಯುವಕನೊಬ್ಬನ ಬಳಿ ಹಣ ಪೀಕಿರುವ ಸತ್ಯವನ್ನು ಜಗಜ್ಜಾಹೀರು ಮಾಡಿದರು. ಇದಕ್ಕೆ ಅಜ್ಞಾತವಾಸದಿಂದ ಅರುಣಕುಮಾರಿ ಟಾಂಗ್ ಕೊಟ್ಟಿದ್ದಾರೆ. ನನ್ನ ಲೈಫ್ ಸಾರ್ ಏನ್ ಬೇಕಾದರೂ ಮಾಡ್ತೀನಿ ಹೇಗೆ ಬೇಕಾದರೂ ನಿಭಾಯಿಸಿಕೊಳ್ತೀನಿ' ಅದನ್ನು ಕೇಳೋ ಹಕ್ಕು ಯಾರಿಗೂ ಇಲ್ಲ ಎನ್ನುವಂತೆ ಮಾತನಾಡಿದ ಅರುಣಕುಮಾರಿ,ನನ್ನ ಲೈಫ್ ಹಾಳಾದರೆ ದರ್ಶನ್ ಅವರಾಗಲಿ ಉಮಾಪತಿಯಾಗಲಿ ಬರೋದಿಲ್ಲ’ ಈಗ ನಮ್ಮನ್ನ ನಮ್ಮ ಪಾಡಿಗೆ ಬದುಕೋದಕ್ಕೆ ಬಿಟ್ಟು ಬಿಡಿ. ಕಷ್ಟಾನೋ-ಸುಖಾನೋ ಎಲ್ಲೋ ಜೀವನ ಮಾಡ್ತೀವಿ ಎಂದಿದ್ದಾರೆ.

ಅರುಣಕುಮಾರಿಗೆ ಒತ್ತಡ ಹೇರಿದ್ರಾ ?

ನನ್ನಂಥ ಅಮಾಯಕಿಯನ್ನ ಕರ‍್ಕೊಂಡು ಹೋಗಿ ಇದರಲ್ಲಿ ತಗಲಾಕಿ ಉಮಾಪತಿಯವರು ದೊಡ್ಡ ತಪ್ಪು ಮಾಡಿದ್ದಾರೆ. ದೊಡ್ಡವರು ಹೆಂಗ್ ಬೇಕಾದರೂ ಮಾತು ತಿರುಗಿಸುತ್ತಿದ್ದಾರೆ. ಆದರೆ, ನಾವು ಹಂಗಲ್ಲ. ನನ್ನ ಹತ್ತಿರ ಏನೆಲ್ಲಾ ಸಾಕ್ಷಿ ಇದೆಯೋ ಅದೆಲ್ಲವನ್ನೂ ನಿಮ್ಮ ಮುಂದೆ ಇಟ್ಟಿದ್ದೇನೆ ಇದನ್ನ ತಗೊಂಡು ಹೋಗಿ ಚಾನೆಲ್‌ಗಾದರೂ ಕೊಡಿ ಎಲ್ಲಿಗಾದರೂ ಕೊಡಿ ಅಂತ ಅರುಣಕುಮಾರಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಅರುಣಕುಮಾರಿ ಅಜ್ಞಾತವಾಸದಿಂದ ವಿಡಿಯೋ ರಿಲೀಸ್ ಮಾಡೋದಕ್ಕೆ ಕಾರಣಕರ್ತರು ಯಾರು? ಯಾರಾದರೂ ಒತ್ತಡ ಹೇರಿದ್ರಾ ಅಥವಾ ಅರುಣಕುಮಾರಿಯೇ ಸ್ವತಃ ತಮ್ಮ ಮೇಲೆ ಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ಕೊಡೋದಕ್ಕೆ ವಿಡಿಯೋ ರಿಲೀಸ್ ಮಾಡಿದ್ರಾ ಅನ್ನೋದು ಕೂತೂಹಲದ ಪ್ರಶ್ನೆ.

Related Posts

error: Content is protected !!