ಸಹ ಕಲಾವಿದರ ಕಷ್ಟಕ್ಕೆ ಮಿಡಿದ ಹೊಂಬಾಳೆ ಫಿಲಂಸ್ ನ ನಿರ್ಮಾಪಕ ವಿಜಯ್ ಕಿರಂಗದೂರು

ಕೊರೋನ ಸಮಯದಲ್ಲಿ ಸಂಕಷ್ಟಕ್ಕೆ ತುತ್ತಾಗಿದ್ದ, ಕರ್ನಾಟಕ ಚಲನಚಿತ್ರ ಸಹ ಕಲಾವಿದರಿಗೆ ನಿರ್ಮಾಪಕ ವಿಜಯ್ ಕಿರಂಗದೂರು ನೆರವಾಗಿದ್ದಾರೆ. ಕರ್ನಾಟಕ ಚಲನಚಿತ್ರ ಸಹ ಕಲಾವಿದರ ಹಾಗೂ ಪ್ರತಿನಿಧಿಗಳ ಸಂಘಕ್ಕೆ ನಾಲ್ಕು ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ.


ಈ ಹಣದಿಂದ ಸುಮಾರು 600 ಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಸಾರಿಗೆ ಭತ್ಯೆ ಅಂತ ಎರಡು ನೂರು ರೂಪಾಯಿ ನೀಡಿದ್ದಾರೆ. ಎಂದು ಕರ್ನಾಟಕ ಸಹ ಕಲಾವಿದರ ಸಂಘದ ಖಜಾಂಚಿ ದಿವಾಕರ್ ಆರಗ ತಿಳಿಸಿದ್ದಾರೆ.

ನಮ್ಮ ಸಂಘದ ಸದಸ್ಯರ ಸಂಕಷ್ಟಕ್ಕೆ ಮಿಡಿದ ವಿಜಯ್ ಕಿರಂಗದೂರು ಅವರಿಗೆ ಹಾಗೂ ಸಹಕಾರ ನೀಡಿದ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು,

ಕಾರ್ಯದರ್ಶಿ ರವೀಂದ್ರನಾಥ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಅವರಿಗೆ ದಿವಾಕರ್ ಆರಗ ಅವರು ಸಂಫದ ಎಲ್ಲಾ ಸದಸ್ಯರ ಪರವಾಗಿ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

Related Posts

error: Content is protected !!