ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಗಣ” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಆರ್ ಪಿ ಸಿ ಲೇಔಟ್ ನ ಸಂಕಷ್ಟ ಹರ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ವಿತರಕ ದೇವೇಂದ್ರ ರೆಡ್ಡಿ ಕ್ಲಾಪ್ ಮಾಡಿದರು. ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಕ್ಯಾಮೆರಾ ಚಾಲನೆ ಮಾಡಿದ್ದಾರೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಹರಿ ಪ್ರಸಾದ್ ಜಕ್ಕ ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಹರಿಪ್ರಸಾಸ್ ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ .
ಚರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ.
ಪ್ರಜ್ವಲ್ ಅವರಿಗೆ ನಾಯಕಿಯಾಗಿ ಸಾರಾ ಹರೀಶ್(ಭರತ ಬಾಹುಬಲಿ ಖ್ಯಾತಿ) ನಟಿಸುತ್ತಿದ್ದಾರೆ. ಸಂಪತ್ ಕುಮಾರ್, ರವಿ ಕಾಳೆ, ಶಿವರಾಜ್ ಕೆ ಆರ್ ಪೇಟೆ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ನಟ ಪುನೀತ್ ಅವರ ಕುರಿತಂತೆ ಸಾಕಷ್ಟು ಹಾಡುಗಳು ಬಂದಿವೆ. ಆ ಸಾಲಿಗೆ ಈಗ ಹೊಸಬರು ಹೊಸದೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಅದಕ್ಕೆ “ಯಾರೋ ನೀನು” ಎಂಬ ಹೆಸರಿಡಲಾಗಿದೆ. ಇತ್ತೀಚೆಗೆ ರಾಘವೇಂದ್ರ ರಾಜಕುಮಾರ್ ಅವರು ಸಾಂಗ್ ರಿಲೀಸ್ ಮಾಡಿ, ಹೊಸಬರ ತಂಡಕ್ಕೆ ಶುಭಕೋರಿದರು. ಈ ವೇಳೆ ರಾಘವೇಂದ್ರ ರಾಜಕುಮಾರ್ ಅವರು ಮಾತನಾಡಿದ್ದಿಷ್ಟು. “ನನಗೆ ಇಂತಹ ದಿನ ಬರುತ್ತದೆ ಎಂದು ಊಹಿಸಿರಲಿಲ್ಲ. ನಾನು ಅಪ್ಪು ಇದ್ದಾಗ, ಅನೇಕ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದೀವಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟ್ಯಾಂತರ ಅಭಿಮಾನಿಗಳು ಕಾಣುತ್ತಿದ್ದಾರೆ. ಈ ಹಾಡಿನ ರಾಜ್ ಕಿಶೋರ್ ಅವರ ಸಾಹಿತ್ಯ- ಸಂಗೀತ ಚೆನ್ನಾಗಿದೆ. ಶಶಿಕುಮಾರ್ ಅದ್ಭುತವಾಗಿ ಹಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ಹಾಡಿನಲ್ಲಿ ಕಾಣಿಸುತ್ತಿದೆ. ಇದನ್ನು ನಾನು ಬಿಡುಗಡೆ ಅನ್ನುವುದಿಲ್ಲ. ಅರ್ಪಣೆ ಎನ್ನುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಕನ್ನಡದ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಮತ್ತು ಈಗ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ “ಡಾಟರ್ ಆಫ್ ಇಂಡಿಯಾ” ಚಿತ್ರದ ಸಂಗೀತ ನಿರ್ದೇಶಕ ರಾಜ್ ಕಿಶೋರ್ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ನೀಡಿದ್ದಾರೆ. ಒಬ್ಬ ನಾಯಕನ ಚಿತ್ರಕ್ಕೋ ಹುಟ್ಟುಹಬ್ಬಕ್ಕೋ ಅಥವಾ ಮತ್ತಾವುದೋ ಸಂದರ್ಭಕ್ಕೋ ಹಾಡು ಬರೆದು ಬಿಡುಗಡೆ ಮಾಡುವುದೇ ಬೇರೆ. ಈ ಸಂದರ್ಭವೇ ಬೇರೆ. ಅವರ ಮನೆಯವರು , ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ದುಃಖ ಆಗುವುದು ಸಹಜ. ಆದರೆ, ಬರೀ ಈ ಊರು, ಈ ದೇಶವಲ್ಲದೇ, ಹೊರ ದೇಶಗಳಲ್ಲೂ ಇವರ ನಿಧನಕ್ಕೆ ನಮ್ಮವರನೇ ಕಳೆದುಕೊಂಡಿದ್ದೀವಿ ಎಂದು ದುಃಖಿಸುತ್ತಿದ್ದಾರಲ್ಲಾ ಇದೇ ನಾನು ಹಾಡು ಬರೆಯೋಕೆ ಕಾರಣವಾಯ್ತು. ಇದಕ್ಕೆ ಪ್ರೋತ್ಸಾಹ ನೀಡಿದ್ದ ನಿರ್ಮಾಪಕಿ ಭೈರವಿ ಅವರಿಗೆ, ಗಾಯಕ ಶಶಿಕುಮಾರ್ ಅವರಿಗೆ ಹಾಗೂ ಹಾಡು ಬಿಡುಗಡೆ ಮಾಡಿರುವ ರಾಘವೇಂದ್ರ ರಾಜಕುಮಾರ್ ಅವರಿಗೆ ನಾನು ಧನ್ಯವಾದ ಹೇಳ್ತೀನಿ ಅಂದರು ರಾಜ್ ಕಿಶೋರ್.
ಗಾಯಕ ಶಶಿಕುಮಾರ್ ಅವರು ಈ ಹಾಡು ಹಾಡಿದ್ದಾರೆ. “ದೇವರಿಗಾಗಿ ನಾನು ಯಾವುದೇ ವ್ರತ ಮಾಡಿಲ್ಲ. ಆದರೆ, ನಾನು ಅಪ್ಪು ಅವರಿಗಾಗಿ ಈ ಹಾಡನ್ನು ಹಾಡುವಾಗ ವ್ರತ ಮಾಡಿ ಹಾಡಿದ್ದೇನೆ. ಅವರು ನನ್ನ ಪಾಲಿನ ದೇವರು ಎಂದರೂ ತಪ್ಪಿಲ್ಲ. ಅವಕಾಶ ನೀಡಿದ ರಾಜ್ ಕಿಶೋರ್ ಹಾಗೂ ಭೈರವಿ ಅವರಿಗೆ ಧನ್ಯವಾದ ಎಂದರು ಶಶಿಕುಮಾರ್. ಇನ್ನು, ಈ ಹಾಡಿಗೆ ಭೈರವಿ ನಿರ್ಮಾಪಕರು. ಅವರು ಹೇಳಿದ್ದಿಷ್ಟು, ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಪ್ಪು ಸರ್ ಅವರ ಸಾವಿನಿಂದ ಆಗುತ್ತಿರುವ ತಳಮಳ ಈ ಹಾಡನ್ನು ನಿರ್ಮಿಸಲು ಮುಖ್ಯ ಕಾರಣ. ಈ ಹಾಡು ನಿರ್ಮಾಣವಾಗಲು ಸಹಕಾರ ನೀಡಿದ ತಂಡಕ್ಕೆ ಥ್ಯಾಂಕ್ಸ್ ಹೇಳಿದರು. ಈ ವೇಳೆ ಎಸ್.ಮಹೇಶ್ ಇತರರು ಇದ್ದರು.
ದೇಶಾದ್ಯಂತ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಆರ್‌ಆರ್‌ಆರ್ ಇನ್ನೇನು ಈ ವಾರದಲ್ಲಿ ಪ್ರೇಕ್ಷಕರ ಮುಂದೆ ಅಪ್ಪಳಿಸಬೇಕಿತ್ತು. ಆದರೆ, ಇದೀಗ ಚಿತ್ರತಂಡದಿಂದ ಸುದ್ದಿಯೊಂದು ಹೊರಬಿದ್ದಿದ್ದು, ಆರ್‌ಆರ್‌ಆರ್ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಚಿತ್ರ ಜನವರಿ ೭ರಂದು ಬಿಡುಗಡೆಯಾಗಬೇಕಿತ್ತು. ಅ ಕುರಿತು ಪ್ರಚಾರ ಕೂಡ ನಡೆದಿತ್ತು. ಆದರೆ, ಚಿತ್ರತಂಡ ಟ್ವೀಟ್ ಮಾಡುವ ಮೂಲಕ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರುವುದನ್ನು ಸ್ಪಷ್ಟಪಡಿಸಿದೆ.
ಅದಕ್ಕೆ ಕಾರಣ, ಮತ್ತೆ ಕೊರನಾ ಅವತಾರ. ಹೌದು, ಕೊರೊನಾ ಈಗ ಮತ್ತೆ ಆತಂಕ ತಂದೊಡ್ಡಿದೆ. ಮಹಾರಾಷ್ಟ್ರದಲ್ಲಿ ಅಬ್ಬರ ಶುರುವಾಗುತ್ತಿದೆ. ಅಲ್ಲೂ ಚಿತ್ರಮಂದಿರಗಳಿಗೆ ಸಮಸ್ಯೆ ಇದೆ. ದೆಹಲಿಯಲ್ಲೂ ಅದಾಗಲೇ ಸಮಸ್ಯೆ ಎದುರಾಗಿದೆ. ಅತ್ತ ಕೇರಳದಲ್ಲೂ ಕೂಡ ಹೆಚ್ಚಾಗಿಯೇ ಇದೆ.
ಹಾಗಾಗಿ ಚಿತ್ರತಂಡ ಈ ಸಮಯದಲ್ಲಿ ಸಿನಿಮಾ ಬಿಡುಗಡೆಯಾದರೆ, ಪ್ರೇಕ್ಷಕರು ಬಂದರೂ, ಆಸನ ಭರ್ತಿ ಸಮಸ್ಯೆಯಿಂದ ಚಿತ್ರಕ್ಕೆ ಪೆಟ್ಟು ಬೀಳಬಹುದು ಎಂಬ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಆದರೆ, ಆರ್‌ಆರ್‌ಆರ್ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಫೆಬ್ರವರಿ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ಬರಬಹುದು.
ಹೊಸ ವರ್ಷ ಶುರುವಾಗಿದೆ. ಎಲ್ಲರೂ ಶುಭಾಶಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕನ್ನಡದ ಬಹುತೇಕ ಸ್ಟಾರ್ ನಟರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಡಾಲಿ ಧನಂಜಯ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಸೇರಿದಂತೆ ಕನ್ನಡದ ಬಹುತೇಕ ನಟ,ನಟಿಯರು, ನಿರ್ದೇಶಕರು ಕೂಡ ಹೊಸ ವರ್ಷ ಎಲ್ಲರಿಗೂ ಒಳ್ಳೆಯದ್ದನ್ನು ತರಲಿ ಎಂದು ಶುಭಾಶಯ ಕೋರಿದ್ದಾರೆ.
ಹೊಸ ವರ್ಷದ ಪ್ರತೀ ಕ್ಷಣವೂ ಸಂತಸ ತುಂಬಿರಲಿ ನಟ ದರ್ಶನ್ ಟ್ವೀಟ್ ಮಾಡುವ ಮೂಲಕ ನಾಡಿನ ಜನರಿಗೆ ಹಾಗು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. “ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು”. ಎಂದು ಟ್ವೀಟ್ ಮಾಡಿದ್ದಾರೆ. ಅವರ ಬರಹ ಇರುವ ಟ್ವೀಟ್‌ನಲ್ಲಿ ಅವರದ್ದೊಂದು ಫೋಟೋವನ್ನೂ ಹಂಚಿಕೊಂಡಿದ್ದಾರೆ. ಕೆಟ್ಟದ್ದು ಬಿಡಿ, ಒಳ್ಳೆಯದ್ದು ತಗೊಂಡ್ ಮುಂದೆ ಸಾಗಿ ನಟ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಟ್ವೀಟ್‌ನಲ್ಲಿ ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡು ಮುಂದುವರೆಯಬೇಕು ಎಂದಿದ್ದಾರೆ.
ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. “ಉತ್ತಮ ಮತ್ತು ಉತ್ತಮವಲ್ಲದ ಘಟನೆಗಳು, ಸಂದರ್ಭಗಳು ಪ್ರತಿ ವರ್ಷ ಬರುತ್ತವೆ. ನಾವೆಲ್ಲರೂ ಉತ್ತಮ ಅಲ್ಲದನ್ನು ಹಿಂದೆ ಬಿಟ್ಟು, ಉತ್ತಮ ಆಗಿರುವುದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಸುಂದರವಾದ ಸೂರ್ಯೋದಯದೊಂದಿಗೆ ನಾವು 2022ಕ್ಕೆ ಕಾಲಿಟ್ಟದ್ದೇವೆ. ಮತ್ತು ಈ ವರ್ಷ ಉತ್ತಮವಾದದನ್ನು ಮಾಡೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರು ನಮ್ಮೊಂದಿಗಿಲ್ಲ. ಆದರೆ, ಅದ್ಭುತ ಸಿನಿಮಾಗಳ ಮೂಲಕ ಅವರಿನ್ನೂ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ಇಲ್ಲ ಎಂಬ ಭಾವನೆ ಯಾರಲ್ಲೂ ಇಲ್ಲ. ಅವರು ನಿಧನರಾಗಿ ಎರಡು ತಿಂಗಳಾದರೂ ಪ್ರತಿ ದಿನ ಸಮಾಧಿಗೆ ಸಾವಿರಾರು ಜನ ಭೇಟಿ ನೀಡಿ ಪೂಜಿಸುತ್ತಿದ್ದಾರೆ. ಅವರ ಮನೆಗೂ ಭೇಟಿ ನೀಡುವ ಸ್ಟಾರ್ ನಟರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ನಟ ಪ್ರಭಾಸ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಜನವರಿ ೧ರಂದು ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅವರು ವಿಕ್ರಂ ಸಿನಿಮಾದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ಅವರು ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೊತೆ ಮಾತನಾಡಿ, ಚರ್ಚಿಸಿ ಸಾಂತ್ವನ ಹೇಳಿದ್ದಾರೆ.
ಪುನೀತ್ ಅವರು ನಿಧನರಾದಾಗ ಕಮಲ್ ಹಾಸನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು. ಪುನೀತ್ ಅವರ ಅಂತಿಮ ದರ್ಶನಕ್ಕೆ ಅವರು ಆಗಮಿಸಿರಲಿಲ್ಲ. ಈಗ ಪುನೀತ್ ನಿವಾಸಕ್ಕೆ ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಿದ್ದಾರೆ. ಈಗಾಗಲೇ ಸ್ಟಾರ್ ನಟ-ನಟಿಯರು ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಚಿರಂಜೀವಿ, ರಾಮ್ ಚರಣ್ ತೇಜ, ಜೂ ಎನ್‌ಟಿಆರ್, ಬಾಲಕೃಷ್ಣ, ನಾಗಾರ್ಜುನ, ಮೋಹನ್‌ಬಾಬು, ತಮಿಳು ನಟ ವಿಶಾಲ್, ಸೂರ್ಯ, ಸಿದ್ಧಾರ್ಥ್ ಸೇರಿದಂತೆ ಹಲವರು ಆಗಮಿಸಿ ಸಾಂತ್ವನ ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಭಜರೇ ಭಜರಂಗಿ-2 ಓಟಿಟಿಗೆ ಬಂದ ಮೂರೇ ದಿನಗಳಲ್ಲಿ 5 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಅಧಿಕ ವೀಕ್ಷಣೆ ಕಂಡ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಭಜರಂಗಿ 2’ ಪಾತ್ರವಾಗಿದೆ. ಇದು ಭಜರಂಗಿ ಬಳಗಕ್ಕೆ ಹಾಗೂ ಶಿವಣ್ಣ ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ.
ಅಭಿಮಾನಿಗಳೊಟ್ಟಿಗೆ ‘ಭಜರಂಗಿ-2’ ಸೆಲೆಬ್ರೇಷನ್!
ಭಜರಂಗಿ-2 ಸಿನಿಮಾ ಡಿಸೆಂಬರ್ 23ಕ್ಕೆ ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ದೊಡ್ಡ ರೆಕಾರ್ಡ್ ಬರೆದ ಭಜರಂಗಿ-2 ಸಿನಿಮಾವನ್ನು ಜೀ5 ಒಟಿಟಿಯಲ್ಲಿ ನೋಡಿವರಿಗೆ ಶಿವಣ್ಣನನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಬಂಗಾರದಂತಹ ಅವಕಾಶವನ್ನು ಜೀ5 ಕಲ್ಪಿಸಿತ್ತು. ಮೂರೇ ದಿನದಲ್ಲಿ 5 ಕೋಟಿ ವೀಕ್ಷಣೆ ಮಾಡಿದ ಪ್ರೇಕ್ಷಕರಲ್ಲಿ ಆಯ್ದ 10 ಮಂದಿಗಳಿಗೆ ಜೀ5 ಶಿವಣ್ಣನೊಟ್ಟಿಗೆ ಮಾತುಕತೆ ನಡೆಸುವ ಸುವರ್ಣಾವಕಾಶ ನೀಡಿತ್ತು. ಅದರಂತೆ ಅಭಿಮಾನಿಗಳು ಶಿವಣ್ಣನೊಟ್ಟಿಗೆ ಬೆರೆತು ಸಮಯ ಕಳೆದಿದ್ದಾರೆ. ಭಜರಂಗಿ-2ಗೆ ಜೈಕಾರ ಹಾಕಿದ್ದಾರೆ. ಅಲ್ಲದೇ ಭಜರಂಗಿ-3ಗೆ ಎದುರು ನೋಡುತ್ತಿರುವುದಾಗಿ ಆಸೆ ವ್ಯಕ್ತಪಡಿಸಿದ್ದಾರೆ.
ಜೀ ಕನ್ನಡ ಈಗಾಗ್ಲೇ ಹಲವು ವಿಭಿನ್ನ ಪ್ರಯತ್ನಗಳಿಗೆ ಮುನ್ನುಡಿ ಬರೆದಿದೆ. ಅದೇ ರೀತಿ ಸ್ಟಾರ್ಸ್ ಗಳೊಟ್ಟಿಗೆ ಅಭಿಮಾನಿಗಳನ್ನು ಬೆರೆಸುವ ಕೆಲಸ ಮಾಡ್ತಿದೆ. ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ಜೀ5 ಮೂಲಕ ಪ್ರಪಂಚದೆದುರು ತೆರೆದಿಡ್ತಿದ್ದು, ಇದು ಜಸ್ಟ್ ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ-ವಿಶೇಷ ಯೋಜನೆಗಳನ್ನು ಜೀ5 ಹಾಕಿಕೊಂಡಿದ್ದು, ಅದು ಪ್ರತಿ ಪ್ರೇಕ್ಷಕರಿಗೆ ತಲುಪಿಸಿದೆ ಕನ್ನಡದ ನಂಬರ್ 1 ಮನರಂಜನಾ ಚಾನೆಲ್ ಜೀ ಕನ್ನಡ. ಹೀಗೆ ಸಾಗಲಿ ಈ ಯಶಸ್ವಿನ ಹಾದಿ.
ಸ್ಟೋರಿ ಟೆಲ್ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್ ಅರವಿಂದ್ ಅವರ ಜೊತೆ ಸ್ಟೋರಿ ಟೆಲ್ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ ಹೊಸ ವರ್ಷದಲ್ಲಿ ಸ್ಟೋರಿಟೆಲ್‌ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್ ಅರವಿಂದ್ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು.
ಹೌದು, ಕಥೆ ಬರೆಯೋದು, ಓದೋದು ಅಂದರೆ ತುಂಬಾ ಖುಷಿಪಡುವಂತಹ ವಿಷಯ. ಇದುವರೆಗೆ ಯಾರೋ ಬರೆದ ಕಥೆಗಳನ್ನು ಓದುವುದರ ಜೊತೆಗೆ ಮನದಲ್ಲೇ ಸಂಭ್ರಮಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಕಾಲದ ಜೊತೆಗೆ ತಾಂತ್ರಿಕತೆಯೂ ಬೆಳೆದಿದೆ. ವಿಷಯ ಏನಪ್ಪಾ ಅಂದರೆ, ಸ್ಟೋರಿ ಟೆಲ್ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್ ಅರವಿಂದ್ ಅವರ ಜೊತೆ ಸ್ಟೋರಿ ಟೆಲ್ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ. ಈ ಬಾರಿಯ ಹೊಸ ವರ್ಷದಲ್ಲಿ ಸ್ಟೋರಿಟೆಲ್‌ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್ ಅರವಿಂದ್ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು. ಅಂದಹಾಗೆ, ಸ್ಟೋರಿಟೆಲ್ ಕನ್ನಡ ಸರಣಿಯಲ್ಲಿ ರಮೇಶ್ ಅರವಿಂದ್ ಅವರು, “ಮಾಸದ ಮಾತುಗಳು” ವಿತ್ ರಮೇಶ್ ಹೆಸರಲ್ಲಿ ಕೇಳುಗರಿಗೆ ಬದುಕಲ್ಲಿ ನೆರವಾಗಬಲ್ಲಂತಹ ಅನೇಕ ವಿಷಯಗಳಿರಲಿವೆ. ಆ ಸರಣಿ 2022r 12 ತಿಂಗಳ ಅವಧಿಯಲ್ಲಿ ಕಂತುಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
“ಮಾಸದ ಮಾತುಗಳು ವಿತ್ ರಮೇಶ್” ಸರಣಿಯ ಎಲ್ಲಾ ೧೨ ಕಂತುಗಳು ಜನವರಿ ೨ರಂದು ಬಿಡುಗಡೆಯಾಗಲಿದೆ. ರಮೇಶ್ ಅರವಿಂದ್ ಅವರು ಬರೆದಿರುವ ಈ ಸರಣಿ ವಿಶೇಷವಾಗಿ ಸ್ಟೋರಿಟೆಲ್‌ನಲ್ಲಿ ಮಾತ್ರ ಸಿಗಲಿದೆ. ರಮೇಶ್ ಅವರು ತಮ್ಮ ಅನುಭವಗಳು, ಬದುಕಿನಿಂದ ಕಲಿತ ಪಾಠಗಳು ಮತ್ತು ಜೀವನ ಮೌಲ್ಯಗಳನ್ನು ಬರಹಗಳ ರೂಪದಲ್ಲಿ ಹೆಣೆಯಲಾಗಿದೆ. ನಿತ್ಯ ಬದುಕಿನ ಸೊಬಗಿನ ಬಗ್ಗೆ ಅವರು ಮಾತಾಡಿದ್ದಾರೆ. ಎಲ್ಲಾ ವಯಸ್ಸಿನ ಓದುಗರಿಗೂ ಇದು ಇಷ್ಟವಾಗಲಿದ್ದು, ಲೈಫಲ್ಲಿ ಪ್ರೇರಣೆ ಸಿಗುವಂತಹ ಸರಣಿ ಇದಾಗಲಿದೆ ಎಂಬುದು ಸ್ಟೋರಿಟೆಲ್ ಸಂಸ್ಥೆಯ ಮಾತು.
ರಮೇಶ್ ಅರವಿಂದ್ ತಮ್ಮ ವಿಶೇಷ ಮಾತಿನ ಮೂಲಕ ಅವರ ಸ್ನೇಹಪರ ವ್ಯಕ್ತಿತ್ವ ಎದ್ದು ಕಾಣಲಿದೆ. ಅವರು ನೇರ ನಮ್ಮ ಜೊತೆಯಲ್ಲೇ ಮಾತಾಡುತ್ತಿದ್ದಾರೇನೋ ಎಂದೆನಿಸುವುದು ನಿಜ. ಇತ್ತೀಚಿನ ದಿನಗಳಲ್ಲಿ ಅವರು ಒಬ್ಬ ಪ್ರೇರಣಾದಾಯಕರಾಗಿ, ವಾಗ್ಮಿಯಾಗಿದ್ದು, ಬದುಕನ್ನು ಎಲ್ಲಾ ದೃಷ್ಟಿಕೋನದಿಂದ ನೋಡುವಂತೆ ತಮ್ಮ ಕೇಳುಗರನ್ನು ಪ್ರೋತ್ಸಾಹಿಸುತ್ತದ ಬಂದಿದ್ದಾರೆ. ಶಿಕ್ಷಣ, ವೃತ್ತಿ, ಉದ್ಯಮ ಹೀಗೆ ಇತರೆ ರಂಗಗಳ ಕುರಿತು ಮಾತಾಡಿದ್ದಾರೆ.
ಸ್ಟೋರಿಟೆಲ್ ಎಲ್ಲಾ ಬಗೆಯ ಚಿಂತನೆಗಳಿರುವ ಓದುಗರಿಗೆ, ವಿಭಿನ್ನ ಪ್ರಾಕಾರಗಳ ಪುಸ್ತಕ ಓದುವ ಓದುಗರಿಗೂ ಇಷ್ಟವಾಗಲಿದೆ. ಕನ್ನಡದಲ್ಲೂ ಇದು ನೆಲದ ಕಥೆಗಳಿಗೆ ಹತ್ತಿರವಾಗಿಸುವ ಸಲುವಾಗಿಯೇ ಸ್ಟೋರಿಟೆಲ್ ಇಂಡಿಯಾ ಪ್ರಾದೇಶಿಕ ಭಾಷೆಗಳಲ್ಲೂ ಆಡಿಯೋ ಪುಸ್ತಕ ಪ್ರಕಟಿಸಲು ಶ್ರಮಿಸುತ್ತಿದೆ. ಈ ಮೂಲಕ ಅನೇಕ ಖ್ಯಾತ ಲೇಖಕರ ಕೃತಿಗಳ ಆಡಿಯೋ ಬುಕ್‌ಗಳನ್ನಿಲ್ಲಿ ಪ್ರಕಟಿಸಲಾಗುತ್ತಿದೆ. ಈಗಾಗಲೇ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ವೈದೈಹಿ, ಅನುಪಮಾ ನಿರಂಜನ, ವಿವೇಕ ಶಾನಭಾಗ, ವಸುಧೇಂದ್ರ ಸೇರಿದಂತೆ ಅನೇಕ ಲೇಖಕರ ಕೃತಿಗಳನ್ನು ಒಳಗೊಂಡಿದೆ. ಚಂದ್ರಶೇಖರ ಕಂಬಾರ, ಆರ್.ಕೆ.ನಾರಾಯಣ್, ಶಾಂತಿನಾಥ ದೇಸಾಯಿ, ಎಚ್.ಎಸ್.ಶಿವಪ್ರಕಾಶ್ ಲೇಖಕರು ಹಾಗು ಸಮಕಾಲೀನ ಲೇಖಕರ ಕೃತಿಗಳು ಕೂಡ ಶೀಘ್ರದಲ್ಲೇ ಸ್ಟೋರಿಟೆಲ್‌ನಲ್ಲಿ ಸಿಗಲಿವೆ.
ವಿಶೇಷವೆಂದರೆ, ಕಲಾವಿದರಾದ ಬಿ.ಜಯಶ್ರೀ, ಬಿ.ಸುರೇಶ, ಮಂಡ್ಯ ರಮೇಶ, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಅರವಿಂದ್ ಕುಪ್ಳೀಕರ್, ರವಿಭಟ್,ರಘು ಶಿವಮೊಗ್ಗ, ಬಿ.ಎಂ.ಗಿರಿರಾಜ, ಶೃಂಗ, ಪ್ರಶಾಂತ್ ಸಿದ್ಧಿ, ಕಿರಣ್ ನಾಯಕ್, ಚಿತ್ಕಲಾ ಬಿರಾದಾರ್, ರಂಜನಿ ರಾಘವನ್, ಪಿ.ಡಿ.ಸತೀಶ್ ಇತರರು ಸ್ಟೋರಿಟೆಲ್ ಕನ್ನಡಕ್ಕೆ ಧ್ವನಿ ನೀಡಿದ್ದಾರೆ.
ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಸಾಂಗ್ ರಿಲೀಸ್ ಮಾಡೋದು ಎಲ್ಲರಿಗೂ ಗೊತ್ತೇ ಇದೆ. ಆ ಸಾಲಿಗೆ ಈ ವರ್ಷವೂ ಸಹ ಹೊಸದೊಂದು ವಿಡಿಯೋ ಆಲ್ಬಂ ರಿಲೀಸ್ ಮಾಡಿದ್ದಾರೆ. ಹೌದು ಬಿಂದ್ಯಾ ಮೂವೀಸ್ ಮೂಲಕ ಅವರು “ಲಕಲಕ ಲ್ಯಾಂಬರ್ಗಿನಿ” ಎಂಬ ವಿಡಿಯೋ ಆಲ್ಬಂ ರಿಲೀಸ್ ಮಾಡಿದ್ದಾರೆ. ವಿಶೇಷವೆಂದರೆ, ಈ ಆಲ್ಬಂ ಸಾಂಗ್‌ನಲ್ಲಿ ಚಂದನ್ ಶೆಟ್ಟಿ ಜೊತೆ ನಟಿ ರಚಿತಾರಾಮ್ ಕೂಡ ಹೆಜ್ಜೆ ಹಾಕಿದ್ದಾರೆ.
ಕನ್ನಡದಲ್ಲಿ ತಮ್ಮದೇ ಗಾಯನದ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನೀಡಿ, ಹಾಡಿ, ಅಭಿನಯಿಸಿರುವ “ಲಕ ಲಕ ಲ್ಯಾಂಬರ್ಗಿನಿ” ಹಾಡು ಬಿಡುಗಡೆಯಾಗಿದೆ. ಬಿಂದ್ಯಾ ಮೂವೀಸ್ ಬ್ಯಾನರ್‌ನಲ್ಲಿ ಆರ್. ಕೇಶವ್ ಈ ಹಾಡಿನ ನಿರ್ಮಾಪಕರು. ನಂದಕಿಶೋರ್ ಇದರ ನಿರ್ದೇಶಕರು. ನಟಿ ರಚಿತಾರಾಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕೆ.ಮಂಜು ಹಾಡು ಬಿಡುಗಡೆ ಮಾಡಿ ಶುಭ ಕೋರಿದರು.
ಹೊಸವರ್ಷದ ಆರಂಭದಲ್ಲಿ ಹೊಸ ಗೀತೆ ಬಿಡುಗಡೆ ಮಾಡುವುದು ವಾಡಿಕೆ. ಕಳೆದ ನಾಲ್ಕು ವರ್ಷಗಳಿಂದ ಹೊಸವರ್ಷಕ್ಕೆ ಟಕೀಲ, ಬ್ಯಾಡ್ ಬಾಯ್, ತ್ರಿ ಪೇಗ್ಈ ಈಗ “ಲಕಲಕ ಲ್ಯಾಂಬರ್ಗಿನಿ” ಎಂಬ ಆಲ್ಬಂ ಸಾಂಗ್ ರಿಲೀಸ್ ಮಾಡಲಾಗಿದೆ. ಮೂಲತಃ ರೈತರಾಗಿರುವ ಕೇಶವ್ ಅವರು ತಮ್ಮ ಪುತ್ರಿ ಬಿಂದ್ಯಾ ಹುಟ್ಟುಹಬ್ಬದ ನೆನಪಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಹಾಗೆ ನೋಡಿದರೆ ಈ ಹಾಡು ಜುಲೈ ತಿಂಗಳಲ್ಲಿ ಆರಂಭವಾಗಬೇಕಿತ್ತು. ದುಬೈನಲ್ಲಿ ಚಿತ್ರೀಕರಣ ಮಾಡುವ ಯೋಚನೆ ತಂಡಕ್ಕಿತ್ತು. ಆದರೆ, ಕೊರೊನಾ ಅಡ್ಡಿಯಾಯಿತು. ಕಾಕತಾಳೀಯ ಎಂಬಂತೆ ಹೊಸವರ್ಷಕ್ಕೆ ಈ ಹಾಡು ಬಿಡುಗಡೆಯಾಗಿದೆ. ಹಾಡಿನಲ್ಲಿ ಅಭಿನಯಿಸಿರುವ ರಚಿತಾರಾಂ ಅವರಿಗೆ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಇಡೀ ತಂತ್ರಜ್ಞರಿಗೆ, ಹೆಚ್ಚಾಗಿ ನಾನು ಇಲ್ಲಿಯವರೆಗೂ ಮಾಡಿರುವ ಸಾಂಗ್ ನಲ್ಲೇ ಅಪಾರ ವೆಚ್ಚದ ಈ ಹಾಡನ್ನು ನಿರ್ಮಿಸಿದ ನಿರ್ಮಾಪಕರಿಗೆ ನನ್ನ ಧನ್ಯವಾದ. ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡನ್ನು ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಿ ಎಂದರು ಚಂದನ್ ಶೆಟ್ಟಿ.
ನಿರ್ಮಾಪಕ ಕೇಶವ್ ಅವರಿಗೆ ಈ ಹಾಡು ಮಾಡಿದ್ದು ಖುಷಿ ಕೊಟ್ಟಿದೆಯಂತೆ. ನನ್ನ ಆಲೋಚನೆಯಲ್ಲಿ ಇದು ಇರಲ್ಲಿಲ್ಲ. ನನ್ನ ಮಗಳು ಬಿಂದ್ಯಾಳನ್ನು ಹುಟ್ಟು ಹಬ್ಬಕ್ಕೆ ಏನು ಬೇಕು ಎಂದು ಕೇಳಿದಾಗ, ಚಂದನ್ ಶೆಟ್ಟಿ ಜೊತೆ ಡ್ಯಾನ್ಸ್ ಮಾಡಬೇಕು ಎಂದು ಆಸೆಪಟ್ಟಳು. ನಂತರ ಕೆ.ಮಂಜು ಅವರ ಮುಂದೆ ಹೇಳಿದೆ. ಅವರ ಮೂಲಕ ಎಲ್ಲರನ್ನು ಸಂಪರ್ಕಿಸಿ, ಈ ಹಾಡು ನಿರ್ಮಾಣವಾಗಿದೆ. ಇದಕ್ಕೆ ನನ್ನ ಮಗಳು ಬಿಂದ್ಯಾ ಕಾರಣ. ಚಂದನ್ ಶೆಟ್ಟಿ , ರಚಿತಾರಾಂ ಜೊತೆ ನನ್ನ ಮಗಳು ಬಿಂದ್ಯಾ ಕೂಡ ಈ ಹಾಡಿನಲ್ಲಿ ಅಭಿನಯಿಸಿದ್ದಾಳೆ ಎಂದು ಸಂತಸ ಪಟ್ಟರು ನಿರ್ಮಾಪಕ ಕೇಶವ್.
ಇನ್ನು ಈ ಹಾಡಿಗೆ ನಂದಕಿಶೋರ್ ನಿರ್ದೇಶಕರು. “ನಾನು ಎಷ್ಟೋ ಚಿತ್ರಗಳಿಗೆ ಸಹ ನಿರ್ದೇಶಕನಾಗಿ, ನಿರ್ದೇಶಕನಾಗಿ ಕೆಲಸ ಮಾಡಿದ್ದೀನಿ. ಆಲ್ಬಂ ಸಾಂಗ್ ಇದೇ ಮೊದಲು ನಿರ್ದೇಶನ ಮಾಡಿದ್ದೀನಿ. ನಿಜಕ್ಕೂ ಮಕ್ಕಳು ಹುಟ್ಟುಹಬ್ಬಕ್ಕೆ ಚಾಕೊಲೇಟ್, ಬಿಸ್ಕೇಟ್ ಕೇಳುತ್ತಾರೆ. ಆದರೆ ಈ ಹುಡುಗಿ ಅವರ ಅಪ್ಪನ ಬಳಿ ಆಲ್ಬಂ ಸಾಂಗ್ ಮಾಡಲು ಕೇಳಿ, ನೂರಾರು ಜನಕ್ಕೆ ಅನ್ನ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಂತಹ ಗುಣ ಇರುವುದು ನಿಜಕ್ಕೂ ಶ್ಲಾಘನೀಯ ಎಂದರು ನಿರ್ದೇಶಕ ನಂದ ಕಿಶೋರ್.
ಶೇಖರ್ ಚಂದ್ರ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ , ಮುರಳಿ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಹಾಡಿಗಿದೆ. ಈ ವೇಳೆ ನಿವೇದಿತಾ, ನಿರ್ಮಾಪಕ ಕೇಶವ್ ಅವರ ಪತ್ನಿ ಇಂದಿರಾ ಇದ್ದರು.
ಎಸ್.ಎಸ್.ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಜನವರಿ 7ರಂದು ಸಿನಿಮಾ ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯುತ್ತಿರುವ ಜಕ್ಕಣ್ಣಗಾರು ಟೀಂ, ಕೇರಳದಲ್ಲಿ ಅದ್ಧೂರಿ ಇವೆಂಟ್ ಗೆ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ದೇಶದಲ್ಲಿ ಕೊರೋನಾ ಕೇಸ್ ಗಳು ಹೆಚ್ಚುತ್ತಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತದೆಯೇ ಅನ್ನೋ ಟಾಕ್ ಸಿನಿ ಜಗತ್ತಿನಲ್ಲಿ ಓಡಾಡ್ತಿದೆ.
ದೇಶದಲ್ಲಿ ಕೊರೋನಾ ರೂಪಾಂತರಿ ಪ್ರಕರಣಗಳು ಹೆಚ್ಚಾಗ್ತಿವೆ. ಜನವರಿಯಲ್ಲಿ ಕೋವಿಡ್ ಪ್ರಕರಣ ಮತ್ತಷ್ಟು ಹೆಚ್ಚಾಗಲಿವೆ ಎನ್ನಲಾಗ್ತಿದೆ. ಹೀಗಾಗಿ, ದೇಶದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ದೆಹಲಿಯಲ್ಲಿ ಥಿಯೇಟರ್ ಬಂದ್ ಮಾಡಲಾಗಿದೆ. ಇದರಿಂದ ಶಾಹಿದ್ ಕಪೂರ್ ಅಭಿನಯದ ಸಿನಿಮಾ ‘ಜೆರ್ಸಿ’ ರಿಲೀಸ್ ದಿನಾಂಕವನ್ನು ಪೋಸ್ಟ್ ಪೋನ್ ಮಾಡಿದೆ. ಡಿಸೆಂಬರ್ 31ರಂದು ತೆರೆಗೆ ಬರಬೇಕಿದ್ದ ಜೆರ್ಸಿ ತನ್ನ ಮಾರ್ಗ ಬದಲಾಯಿಸಿದೆ. ಹೀಗಾಗಿ ಆರ್ ಆರ್ ಆರ್ ತಂಡ ಕೂಡ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ಆರ್ ಆರ್ ಆರ್ ಸಿನಿಮಾ ಮುಂದಕ್ಕೆ ಹೋಗುವ ಚಾನ್ಸ್ ಇಲ್ಲ. ಯಾಕಂದ್ರೆ ಈಗಾಗ್ಲೇ ಸೆನ್ಸಾರ್ ಮುಗಿಸಿ ಥಿಯೇಟರ್ ಗೆ ಬರೋದಿಕ್ಕೆ ಸಕಲ ರೀತಿಯಿಂದಲೂ ಸಿನಿಮಾ ತಂಡ ತಯಾರಾಗಿದೆ. ಇದು ಸುಳ್ಳು ಸುದ್ದಿ ಅಂತ ಚಿತ್ರತಂಡ ಸ್ಪಷ್ಟಪಡಿಸಿದೆ.
ಜನವರಿ 7ರಂದೇ ಸಿನಿಮಾ ಥಿಯೇಟರ್ ಗೆ ಬರುತ್ತೇ ಅನ್ನೋ ಒಂದಷ್ಟು ಟ್ರೆಂಡ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡೋದಿಲ್ಲ. ಅಂದುಕೊಂಡ ದಿನವೇ ಬರುತ್ತೇವೆ ಅಂತಾ ರಾಜಮೌಳಿ ಭರವಸೆ ನೀಡಿದ್ದಾರೆ. ಜ.7ರಂದು ವಿಶ್ವಾದ್ಯಂತ ತೆರೆಗಪ್ಪಳಿಸಲಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಸೌತ್ ಸಿನಿ ದುನಿಯಾದ ಇಬ್ಬರು ಘಟಾನುಘಟಿ ನಾಯಕರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿಆರ್ ನಟಿಸಿದ್ದು, ಬಾಲಿವುಡ್ ನ ಅಜಯ್ ದೇವಗನ್, ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ.
ಟ್ರೇಲರ್ ಹಾಗೂ ಹಾಡುಗಳ ಮೂಲಕ ಕಿಚ್ಚು ಹಚ್ಚಿರುವ ರಾಜಮೌಳಿ ಸಿನಿಮಾ ಪಂಚ ಭಾಷೆಯಲ್ಲಿ ತೆರೆಗೆ ಬರ್ತಿದೆ. ಕನ್ನಡದಲ್ಲಿ ಈ ಸಿನಿಮಾವನ್ನು, ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ರಾಜ್ಯಾದ್ಯಂತ ತೆರೆಗೆ ತರುವ ಜವಾಬ್ದಾರಿ ಹೊತ್ತುಕೊಂಡಿದೆ. ಈಗಾಗ್ಲೇ ಹಲವು ಸ್ಟಾರ್ ನಟರಿಗೆ ಸಿನಿಮಾ ಮಾಡ್ತಿರುವ ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾವನ್ನು ಕನ್ನಡದಲ್ಲಿ ತರುತ್ತಿದ್ದು, ಇದೇ ಜನವರಿ 7ಕ್ಕೆ ವರ್ಲ್ಡ್ ವೈಡ್ ರೌದ್ರ ರಣ ರುಧೀರನ ಆರ್ಭಟ ಶುರುವಾಗಲಿದೆ.
ನಿರ್ಮಾಪಕ ರಾಮು ಅವರು ರವಿಚಂದ್ರನ್ ಅವರಿಗೆ “ಮಲ್ಲ” ಸಿನಿಮಾ ಮಾಡಿದ್ದು ಯಾಕೆ ಗೊತ್ತಾ? ಆ ಸಿನಿಮಾ ಆಗೋಕೆ ಕಾರಣ ಯಾರು? ಈ ಪ್ರಶ್ನೆಗೆ ರವಿಚಂದ್ರನ್ ಉತ್ತರ ಕೊಟ್ಟಿದ್ದಾರೆ. ಹೌದು, “ಮಲ್ಲ” ಸಿನಿಮಾ ಆಗೋಕೆ ಕಾರಣವನ್ನು ಸ್ವತಃ ರವಿಚಂದ್ರನ್ ಬಿಡಿಸಿ ಹೇಳಿದ್ದಾರೆ.
ವಿಷಯ ಏನೆಂದರೆ, ಈ ಹಿಂದೆ ರವಿಚಂದ್ರನ್ ಅವರಿಗೆ “ಶಕುನಿ” ಸಿನಿಮಾ ಶುರುಮಾಡಿದ್ದರು ರಾಮು. ಆ ಸಿನಿಮಾ ಅದಾಗಲೇ ಶೇ.೪೦ರಷ್ಟು ಚಿತ್ರೀಕರಣ ಕೂಡ ನಡೆದಿತ್ತು. ಒಂದು ಇದ್ದಕ್ಕಿದ್ದಂತೆಯೇ ಏನಾಯ್ತೋ ಏನೋ ರಾಮು ಅವರು ರವಿಚಂದ್ರನ್ ಮನೆಗೆ ಹೋಗಿ, ಶಕುನಿ ಗೆಟಪ್ ಇಷ್ಟವಿಲ್ಲ ಅಂದಿದ್ದಾರೆ. ಅರೆ, ಈಗಾಗಲೇ ಶೇ.೪೦ರಷ್ಟು ಚಿತ್ರೀಕರಣವಾಗಿದೆ. ಈಗ ನೋಡಿದರೆ, ಗೆಟಪ್ ಚೆನ್ನಾಗಿಲ್ಲ ಅಂದರೆ ಹೇಗೆ? ಅಂದಿದ್ದಾರೆ ರವಿಚಂದ್ರನ್.
ಆಗ ರಾಮು ಅವರು, ನೀವು ಹೀಗೆ ಉದ್ದ ಕೂದಲು ಬಿಟ್ಟುಕೊಂಡಿರುವುದು ಇಷ್ಟ ಕಾಣುತ್ತಿಲ್ಲ ಅಂದಿದ್ದಾರೆ ರಾಮು. ಸರಿ, ಶಕುನಿನ ಪಕ್ಕಕ್ಕಿಟ್ಟು, ನಾನೊಂದು ಸಿನಿಮಾ ಮಾಡಿಕೊಡ್ತೀನಿ. ನನ್ನ ಇಷ್ಟಕ್ಕೆ ಬಿಟ್ಟು ಬಿಡು ಅಂತ ಹೇಳಿದರಂತೆ ರವಿಚಂದ್ರನ್. ಆಗ ಶುರುವಾಗಿದ್ದೇ, “ಮಲ್ಲ” ಸಿನಿಮಾವಂತೆ. ಶಕುನಿ ನಿಂತು ಹೋಗಿದ್ದಕ್ಕೆ ಕಾರಣ ಕೊಡುತ್ತಲೇ, ಮಲ್ಲ ಶುರುವಾದ ಬಗೆಯನ್ನೂ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಅಂದಹಾಗೆ, ರವಿಚಂದ್ರನ್ ಈ ವಿಷಯ ಹಂಚಿಕೊಂಡಿದ್ದು, “ಅರ್ಜುನ್ ಗೌಡ” ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನಲ್ಲಿ.