ನಿರೀಕ್ಷೆಯ ಆರ್‌ಆರ್‌ಆರ್‌ ಬಿಡುಗಡೆ ಮುಂದಕ್ಕೆ; ಚಿತ್ರತಂಡ ಸ್ಪಷ್ಟನೆ

ದೇಶಾದ್ಯಂತ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಆರ್‌ಆರ್‌ಆರ್‌ ಇನ್ನೇನು ಈ ವಾರದಲ್ಲಿ ಪ್ರೇಕ್ಷಕರ ಮುಂದೆ ಅಪ್ಪಳಿಸಬೇಕಿತ್ತು. ಆದರೆ, ಇದೀಗ ಚಿತ್ರತಂಡದಿಂದ ಸುದ್ದಿಯೊಂದು ಹೊರಬಿದ್ದಿದ್ದು, ಆರ್‌ಆರ್‌ಆರ್‌ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಚಿತ್ರ ಜನವರಿ ೭ರಂದು ಬಿಡುಗಡೆಯಾಗಬೇಕಿತ್ತು. ಅ ಕುರಿತು ಪ್ರಚಾರ ಕೂಡ ನಡೆದಿತ್ತು. ಆದರೆ, ಚಿತ್ರತಂಡ ಟ್ವೀಟ್‌ ಮಾಡುವ ಮೂಲಕ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರುವುದನ್ನು ಸ್ಪಷ್ಟಪಡಿಸಿದೆ.

ಅದಕ್ಕೆ ಕಾರಣ, ಮತ್ತೆ ಕೊರನಾ ಅವತಾರ. ಹೌದು, ಕೊರೊನಾ ಈಗ ಮತ್ತೆ ಆತಂಕ ತಂದೊಡ್ಡಿದೆ. ಮಹಾರಾಷ್ಟ್ರದಲ್ಲಿ ಅಬ್ಬರ ಶುರುವಾಗುತ್ತಿದೆ. ಅಲ್ಲೂ ಚಿತ್ರಮಂದಿರಗಳಿಗೆ ಸಮಸ್ಯೆ ಇದೆ. ದೆಹಲಿಯಲ್ಲೂ ಅದಾಗಲೇ ಸಮಸ್ಯೆ ಎದುರಾಗಿದೆ. ಅತ್ತ ಕೇರಳದಲ್ಲೂ ಕೂಡ ಹೆಚ್ಚಾಗಿಯೇ ಇದೆ.

ಹಾಗಾಗಿ ಚಿತ್ರತಂಡ ಈ ಸಮಯದಲ್ಲಿ ಸಿನಿಮಾ ಬಿಡುಗಡೆಯಾದರೆ, ಪ್ರೇಕ್ಷಕರು ಬಂದರೂ, ಆಸನ ಭರ್ತಿ ಸಮಸ್ಯೆಯಿಂದ ಚಿತ್ರಕ್ಕೆ ಪೆಟ್ಟು ಬೀಳಬಹುದು ಎಂಬ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ಆದರೆ, ಆರ್‌ಆರ್‌ಆರ್‌ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಫೆಬ್ರವರಿ ಅಥವಾ ಏಪ್ರಿಲ್‌ ವೇಳೆಗೆ ಸಿನಿಮಾ ಬರಬಹುದು.

Related Posts

error: Content is protected !!