ಸ್ಟೋರಿ ಟೆಲ್ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್ ಅರವಿಂದ್ ಅವರ ಜೊತೆ ಸ್ಟೋರಿ ಟೆಲ್ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ ಹೊಸ ವರ್ಷದಲ್ಲಿ ಸ್ಟೋರಿಟೆಲ್‌ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್ ಅರವಿಂದ್ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು.
ಹೌದು, ಕಥೆ ಬರೆಯೋದು, ಓದೋದು ಅಂದರೆ ತುಂಬಾ ಖುಷಿಪಡುವಂತಹ ವಿಷಯ. ಇದುವರೆಗೆ ಯಾರೋ ಬರೆದ ಕಥೆಗಳನ್ನು ಓದುವುದರ ಜೊತೆಗೆ ಮನದಲ್ಲೇ ಸಂಭ್ರಮಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಕಾಲದ ಜೊತೆಗೆ ತಾಂತ್ರಿಕತೆಯೂ ಬೆಳೆದಿದೆ. ವಿಷಯ ಏನಪ್ಪಾ ಅಂದರೆ, ಸ್ಟೋರಿ ಟೆಲ್ ಕನ್ನಡದಲ್ಲಿ ಆಡಿಯೋ ಸರಣಿಯನ್ನು ಆರಂಭಿಸುತ್ತಿದೆ. ನಟ ರಮೇಶ್ ಅರವಿಂದ್ ಅವರ ಜೊತೆ ಸ್ಟೋರಿ ಟೆಲ್ ಹೊಸದೊಂದು ಸರಣಿ ಆರಂಭಿಸುತ್ತಿದೆ. ಅದೇ “ಮಾಸದ ಮಾತುಗಳುʼ.
ಈ ಬಾರಿಯ ಹೊಸ ವರ್ಷದಲ್ಲಿ ಸ್ಟೋರಿಟೆಲ್‌ನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ರಮೇಶ್ ಅರವಿಂದ್ ಅವರು, ಭರವಸೆ ನೀಡುವಂತಹ, ಬುದ್ಧಿವಂತಿಕೆ ಹೆಚ್ಚಿಸುವಂತಹ ಮತ್ತು ಬದುಕನ್ನು ರೂಪಿಸಿಕೊಳ್ಳುವಂತಹ ಸಲಹೆಗಳನ್ನು ನೀಡಲಿದ್ದಾರೆ. ಈ ಹೊಸ ಬಗೆಯ ಸ್ಟೋರಿ ಟೆಲ್ ಆಡಿಯೋ ಸರಣಿ ಮೂಲಕ ಹೊಸದೊಂದು ವೇದಿಕೆ ಕಲ್ಪಿಸುವ ಪ್ರಯತ್ನ ಅವರದು.
ಅಂದಹಾಗೆ, ಸ್ಟೋರಿಟೆಲ್ ಕನ್ನಡ ಸರಣಿಯಲ್ಲಿ ರಮೇಶ್ ಅರವಿಂದ್ ಅವರು, “ಮಾಸದ ಮಾತುಗಳು” ವಿತ್ ರಮೇಶ್ ಹೆಸರಲ್ಲಿ ಕೇಳುಗರಿಗೆ ಬದುಕಲ್ಲಿ ನೆರವಾಗಬಲ್ಲಂತಹ ಅನೇಕ ವಿಷಯಗಳಿರಲಿವೆ. ಆ ಸರಣಿ 2022r 12 ತಿಂಗಳ ಅವಧಿಯಲ್ಲಿ ಕಂತುಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
“ಮಾಸದ ಮಾತುಗಳು ವಿತ್ ರಮೇಶ್” ಸರಣಿಯ ಎಲ್ಲಾ ೧೨ ಕಂತುಗಳು ಜನವರಿ ೨ರಂದು ಬಿಡುಗಡೆಯಾಗಲಿದೆ. ರಮೇಶ್ ಅರವಿಂದ್ ಅವರು ಬರೆದಿರುವ ಈ ಸರಣಿ ವಿಶೇಷವಾಗಿ ಸ್ಟೋರಿಟೆಲ್‌ನಲ್ಲಿ ಮಾತ್ರ ಸಿಗಲಿದೆ. ರಮೇಶ್ ಅವರು ತಮ್ಮ ಅನುಭವಗಳು, ಬದುಕಿನಿಂದ ಕಲಿತ ಪಾಠಗಳು ಮತ್ತು ಜೀವನ ಮೌಲ್ಯಗಳನ್ನು ಬರಹಗಳ ರೂಪದಲ್ಲಿ ಹೆಣೆಯಲಾಗಿದೆ. ನಿತ್ಯ ಬದುಕಿನ ಸೊಬಗಿನ ಬಗ್ಗೆ ಅವರು ಮಾತಾಡಿದ್ದಾರೆ. ಎಲ್ಲಾ ವಯಸ್ಸಿನ ಓದುಗರಿಗೂ ಇದು ಇಷ್ಟವಾಗಲಿದ್ದು, ಲೈಫಲ್ಲಿ ಪ್ರೇರಣೆ ಸಿಗುವಂತಹ ಸರಣಿ ಇದಾಗಲಿದೆ ಎಂಬುದು ಸ್ಟೋರಿಟೆಲ್ ಸಂಸ್ಥೆಯ ಮಾತು.
ರಮೇಶ್ ಅರವಿಂದ್ ತಮ್ಮ ವಿಶೇಷ ಮಾತಿನ ಮೂಲಕ ಅವರ ಸ್ನೇಹಪರ ವ್ಯಕ್ತಿತ್ವ ಎದ್ದು ಕಾಣಲಿದೆ. ಅವರು ನೇರ ನಮ್ಮ ಜೊತೆಯಲ್ಲೇ ಮಾತಾಡುತ್ತಿದ್ದಾರೇನೋ ಎಂದೆನಿಸುವುದು ನಿಜ. ಇತ್ತೀಚಿನ ದಿನಗಳಲ್ಲಿ ಅವರು ಒಬ್ಬ ಪ್ರೇರಣಾದಾಯಕರಾಗಿ, ವಾಗ್ಮಿಯಾಗಿದ್ದು, ಬದುಕನ್ನು ಎಲ್ಲಾ ದೃಷ್ಟಿಕೋನದಿಂದ ನೋಡುವಂತೆ ತಮ್ಮ ಕೇಳುಗರನ್ನು ಪ್ರೋತ್ಸಾಹಿಸುತ್ತದ ಬಂದಿದ್ದಾರೆ. ಶಿಕ್ಷಣ, ವೃತ್ತಿ, ಉದ್ಯಮ ಹೀಗೆ ಇತರೆ ರಂಗಗಳ ಕುರಿತು ಮಾತಾಡಿದ್ದಾರೆ.
ಸ್ಟೋರಿಟೆಲ್ ಎಲ್ಲಾ ಬಗೆಯ ಚಿಂತನೆಗಳಿರುವ ಓದುಗರಿಗೆ, ವಿಭಿನ್ನ ಪ್ರಾಕಾರಗಳ ಪುಸ್ತಕ ಓದುವ ಓದುಗರಿಗೂ ಇಷ್ಟವಾಗಲಿದೆ. ಕನ್ನಡದಲ್ಲೂ ಇದು ನೆಲದ ಕಥೆಗಳಿಗೆ ಹತ್ತಿರವಾಗಿಸುವ ಸಲುವಾಗಿಯೇ ಸ್ಟೋರಿಟೆಲ್ ಇಂಡಿಯಾ ಪ್ರಾದೇಶಿಕ ಭಾಷೆಗಳಲ್ಲೂ ಆಡಿಯೋ ಪುಸ್ತಕ ಪ್ರಕಟಿಸಲು ಶ್ರಮಿಸುತ್ತಿದೆ. ಈ ಮೂಲಕ ಅನೇಕ ಖ್ಯಾತ ಲೇಖಕರ ಕೃತಿಗಳ ಆಡಿಯೋ ಬುಕ್‌ಗಳನ್ನಿಲ್ಲಿ ಪ್ರಕಟಿಸಲಾಗುತ್ತಿದೆ. ಈಗಾಗಲೇ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ವೈದೈಹಿ, ಅನುಪಮಾ ನಿರಂಜನ, ವಿವೇಕ ಶಾನಭಾಗ, ವಸುಧೇಂದ್ರ ಸೇರಿದಂತೆ ಅನೇಕ ಲೇಖಕರ ಕೃತಿಗಳನ್ನು ಒಳಗೊಂಡಿದೆ. ಚಂದ್ರಶೇಖರ ಕಂಬಾರ, ಆರ್.ಕೆ.ನಾರಾಯಣ್, ಶಾಂತಿನಾಥ ದೇಸಾಯಿ, ಎಚ್.ಎಸ್.ಶಿವಪ್ರಕಾಶ್ ಲೇಖಕರು ಹಾಗು ಸಮಕಾಲೀನ ಲೇಖಕರ ಕೃತಿಗಳು ಕೂಡ ಶೀಘ್ರದಲ್ಲೇ ಸ್ಟೋರಿಟೆಲ್‌ನಲ್ಲಿ ಸಿಗಲಿವೆ.
ವಿಶೇಷವೆಂದರೆ, ಕಲಾವಿದರಾದ ಬಿ.ಜಯಶ್ರೀ, ಬಿ.ಸುರೇಶ, ಮಂಡ್ಯ ರಮೇಶ, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಅರವಿಂದ್ ಕುಪ್ಳೀಕರ್, ರವಿಭಟ್,ರಘು ಶಿವಮೊಗ್ಗ, ಬಿ.ಎಂ.ಗಿರಿರಾಜ, ಶೃಂಗ, ಪ್ರಶಾಂತ್ ಸಿದ್ಧಿ, ಕಿರಣ್ ನಾಯಕ್, ಚಿತ್ಕಲಾ ಬಿರಾದಾರ್, ರಂಜನಿ ರಾಘವನ್, ಪಿ.ಡಿ.ಸತೀಶ್ ಇತರರು ಸ್ಟೋರಿಟೆಲ್ ಕನ್ನಡಕ್ಕೆ ಧ್ವನಿ ನೀಡಿದ್ದಾರೆ.