Categories
ಸಿನಿ ಸುದ್ದಿ

ಸಂಚಾರಿ,ಕಮಾಂಡರ್ ಎಂಬ ಅತಿಥಿ ಅವತಾರಿ!

ಆಕ್ಟ್ 1978′ ಪಕ್ಕಾ ಮಾಸ್ ಸಿನಿಮಾ- ಸಂಚಾರಿ  ವಿಜಯ್ ವಿಶ್ವಾಸ

ಸಂಚಾರಿ ವಿಜಯ್ ಈಗ ಎನ್ ಎಸ್ ಜಿ ಕಮಾಂಡರ್. ಹೌದು , ಇದು ಅವರ ಹೊಸ ಅವತಾರ. ‘ಆಕ್ಟ್ 1978′ ಜಾರಿಗೆ ಅಂತ ಕಮಾಂಡರ್ ರೂಪದಲ್ಲಿ ಗಾಂಧಿನಗರಕ್ಕೆ ಅವರು ಹೊಸದಾಗಿ ಎಂಟ್ರಿ ಆಗುತ್ತಿದ್ದಾರೆ. ಆದರೆ, ಸರ್ಕಾರಿ ಸೇವೆಗಾಗಿ ಅವರು ಇಂತಹ ಯೂನಿಫಾರ್ಮ್ ಹಾಕಿರುವುದು ಇದು ಮೊದಲಲ್ಲ.‌‌’ಕಿಲ್ಲಿಂಗ್ ವೀರಪ್ಪನ್’ ಚಿತ್ರದಲ್ಲಿ ಎಸ್ ಟಿ ಎಫ್ ಇನ್ಸೆಸ್ಪೆಕ್ಟರ್ ಆಗಿದ್ದರು. ಆದಾದ‌ ನಂತರ ‘ಜಂಟಲ್ ಮೆನ್’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಮಿಂಚಿದ್ದರು. ಇದೀಗ ಎನ್ ಎಸ್ ಜಿ ಕಮಾಂಡರ್.

ಆಕ್ಟ್ 1978 ನ ಅವತಾರ !

ಅಂದ ಹಾಗೆ, ಇದು ಬಹುನಿರೀಕ್ಷಿತ ‘ಆಕ್ಟ್ 1978’ ಚಿತ್ರದಲ್ಲಿನ ಅವರ ಹೊಸ ಅವತಾರ . ಕನ್ನಡದ ಪ್ರತಿಭಾವಂತ ನಿರ್ದೇಶಕ ಮಂಸೋರೆ ನಿರ್ದೇಶನದ ಚಿತ್ರವಿದು. ಈಗಾಗಲೇ ಟ್ರೇಲರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ. ನವೆಂಬರ್ 20 ಕ್ಕೆ ರಿಲೀಸ್ ಆಗುತ್ತಿದೆ.


ಲಾಕ್ ಡೌನ್ ನಂತರ ಚಿತ್ರ ಮಂದಿರದಲ್ಲಿ ತೆರೆ ಕಾಣುತ್ತಿರುವ ಮೊದಲ ಕನ್ನಡ ಚಿತ್ರ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದಲ್ಲೆ ಮೊದಲು. ಈ ಮೂಲಕ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರಗಳ ರಿಲೀಸ್ ಮೆರವಣಿಗೆ ಶುರುವಾಗುತ್ತಿದೆ. ಕತೆ ಮತ್ತು ಮೇಕಿಂಗ್ ಕಾರಣಕ್ಕೆ ಸುದ್ದಿಯಾಗಿರುವ ಹಾಗೆಯೇ ಚಿತ್ರದಲ್ಲಿನ ದೊಡ್ಡ ತಾರಾಗಣವೇ ಇಲ್ಲಿನ‌ ಪ್ರಮುಖ‌ ಆಕರ್ಷಣೆ. ಅಷ್ಟು ಕಲಾವಿದರ ಜತೆಗೆ ಮತ್ತಷ್ಟು ಕುತೂಹಲ ಇರುವುದು ನಟ ಸಂಚಾರಿ ವಿಜಯ್ ಪಾತ್ರ ಬಗ್ಗೆ.

ಬಿಕ್ಕಟ್ಟಿನ ಸಂದರ್ಭಕ್ಕೆ ಎಂಟ್ರಿ…

‘ ಇದೊಂದು‌ ದೊಡ್ಡ ಕಲಾವಿದರ ಸಮಾಗಮದ ಚಿತ್ರ.‌ ಅಂದ್ರೆ ಸಾಕಷ್ಟು ಜನ ಕಲಾವಿದರು ಇಲ್ಲಿದ್ದಾರೆ. ಅಷ್ಟು ಪಾತ್ರಗಳಿಗೂ‌ ಸರಿ‌ ಸಮಾನದ ಪ್ರಾಮುಖ್ಯತೆ ಸಿಕ್ಕಿದೆ ಅನ್ನೋದು ಅದರ ಇನ್ನೊಂದು ವಿಶೇಷ. ಅಂತಹ ಪಾತ್ರಗಳ ಪೈಕಿ ಎನ್ ಎಸ್ ಜಿ ಕಮಾಂಡರ್ ಪಾತ್ರವು ಒಂದು. ಇದು ಚಿತ್ರದಲ್ಲಿನ ಗೆಸ್ಟ್ ರೋಲ್. ಇದಕ್ಕೆ ಬಣ್ಣ ಹಚ್ಚಿರುವುದು ನನ್ನ ಅದೃಷ್ಟ. ಒಂದು ಕ್ರೂಷಿಯಲ್ ಸಂದರ್ಭದಲ್ಲಿ ಕಮಾಂಡರ್ ಎಂಟ್ರಿ ಆಗುತ್ತೆ. ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರವೇ ಅಲ್ಲಿಗೆ ನನ್ನನ್ನು ನೇಮಕ‌ಮಾಡಿರುತ್ತದೆ.‌ ಆದರೆ ಅಲ್ಲಿಗೆ ಬಂದಾಗ ಪೊಲೀಸ್ ಇನ್ಸೆಸ್ಪೆಕ್ಟರ್ ‌ಪ್ರಮೋದ್ ಶೆಟ್ಟಿ ಮತ್ತು ನನಗೆ ಒಂದಷ್ಟು‌ಜಟಾಪಟಿ‌ ನಡೆಯುತ್ತೆ‌. ಅಲ್ಲಿನ ಸಂಭಾಷಣೆ ಅದ್ಬುತವಾಗಿದೆ. ಅದ್ಯಾಕೆ ಅನ್ನೊದು ಸಿನಿಮಾದ ಸಸ್ಪೆನ್ಸ್’ ಎನ್ನುತ್ತಾರೆ ನಟ‌ ಸಂಚಾರಿ ವಿಜಯ್.

ಮಂಸೋರೆ ಬದಲಾಗಿದ್ದು ಕಂಡೆ..

ಸಂಚಾರಿ ವಿಜಯ್ ಹಾಗೂ ನಿರ್ದೇಶಕ ಮಂಸೋರೆ ಮತ್ತೊಮ್ಮೆ ಒಂದಾಗಿರುವುದು‌ ಇಲ್ಲಿನ ಮಗದೊಂದು ವಿಶೇಷ. ಯಾಕಂದ್ರೆ ಅವರಿಬ್ಬರದು ಭಲೇ ಜೋಡಿ.‌ ಚೊಚ್ಚಲ ಸಿನಿಮಾದಿಂದಲೇ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು.‌ಸಿನಿ‌ದುನಿಯಾದಲ್ಲಿ ಜೊತೆಯಾಗಿ ಸಾಗಿ ಬರುತ್ತಿದ್ದಾರೆ. ಒಂದು ಹಂತದಲ್ಲಿ ಬದ್ದತೆಗೆ ಕಟ್ಟು ಬಿದ್ದು ಬದಲಾಗದೆ ಉಳಿದವರು ಈಗ ಬದಲಾಗಿದ್ದಾರೆ. ಸಂಚಾರಿ ವಿಜಯ್ ಕಮಾಂಡರ್ ಆಗಿದ್ದು ಕೂಡ ಹಾಗೆಯೆ.‌ಅದರಾಚೆ ಮಂಸೋರೆ ಕೂಡ ಕ್ಲಾಸ್ ಆಚೆ ಮಾಸ್ ಸಿನಿಮಾ ‌ಮಾಡಿದ್ದೇನೆಂದು ಹೇಳುತ್ತಿರುವುದು ಕೂಡ ಹಾಗೆಯೆ. ಹಾಗಾದ್ರೆ ಆ ಬದಲಾವಣೆ ಏನು? ಆ ಬಗ್ಗೆ ಸಂಚಾರಿ ವಿಜಯ್ ಕಂಡಿದ್ದೇನು?

ಪಕ್ಕಾ ಕಮರ್ಷಿಯಲ್  ಸಿನಿಮಾ‌..

‘ ಮಂಸೋರೆ ಸಿ‌ನಿ‌ಜರ್ನಿಯಲ್ಲಿ ಆಕ್ಟ್ ೧೯೭೮ ಮಹತ್ತರವಾದ ಸಿನಿಮಾ. ಅದಕ್ಕೆ ಕಾರಣ ಹಲವು.‌ಕತೆ, ಅದರ ಮೇಕಿಂಗ್ ಶೈಲಿ ಇತ್ಯಾದಿ. ‘ಹರಿವು’ ಸಿನಿಮಾದಿಂದಲೂ ಪರಸ್ಪರ ಒಟ್ಟಿಗೆ ಕೆಲಸ‌ಮಾಡುತ್ತಾ ಬಂದಿದ್ದೇವೆ. ಅವರ ಸಿನಿಮಾ‌ ಮೇಕಿಂಗ್ ಶೈಲಿ ಎಂಥದ್ದು ಅಂತ‌ ನಂಗೊತ್ತು.‌ಹಾಗೆಯೇ ನನ್ನ ಆ್ಯಕ್ಟಿಂಗ್ ಟೆಸ್ಟ್ ಹೇಗೆ ಆಂತಲೂ‌ಅವರಿಗೆ ಗೊತ್ತು.‌ಆ ದೃಷ್ಟಿಯಲ್ಲಿ ನಾನಿಲ್ಲಿ ಸಾಕಷ್ಡು ಬದಲಾವಣೆ ಕಂಡಿದ್ದೇನೆ. ಅವರ ತಮ್ಮ ಮಾಮೂಲು ಶೈಲಿಯನ್ನು‌ಮೀರಿ‌ ಒಂದಷ್ಟು ಸಿನಿಮ್ಯಾಟಿಕ್ ರೂಪ ಬಳಸಿದ್ದಾರೆ. ಹಾಗೆಯೇ ಬಡ್ಜೆಟ್ ನಲ್ಲೂ‌ ರಾಜಿಯಾಗದೆ ಕತೆಯ ಡಿಮ್ಯಾಂಡ್ ಅನುಸಾರ ಸಿನಿಮಾ‌ ಮಾಡಿದ್ದಾರೆ.‌ಆದ್ದರಿಂದಲೇ ದೊಡ್ಡ ಮಟ್ಟದ ಸೆಟ್ ಹಾಕಿ‌ ಸಿನಿಮಾ‌ ಮಾಡಲು ಸಾಧ್ಯವಾಗಿದೆ. ಪಾತ್ರಗಳ ದಂಡೇ ಇಲ್ಲಿದ್ದರೂ, ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ‌ಸಿಗುವಂತೆ ಚಿತ್ರಕತೆ ಹೆಣೆದಿದ್ದಾರೆ. ಥ್ರಿಲ್ಲರ್ ಎಲಿಮೆಂಟ್ ಸಿನಿಮಾ‌ದೊಡ್ಡ‌ಶಕ್ತಿ‌ಆಗಿದೆ. ಹಾಗೆಯೇ ತಾಂತ್ರಿಕತೆ ಯಲ್ಲೂ ಯಾವುದೇ ರೀತಿ ರಾಜಿ ಆಗಿಲ್ಲ. ಇದೆಲ್ಲ‌ಮಾಸ್ ಸಿನಿಮಾವೊಂದರ ಸ್ಟೈಲ್ ಅಂತಾರೆ‌ ನಟ ಸಂಚಾರಿ‌ವಿಜಯ್.

Categories
ಸಿನಿ ಸುದ್ದಿ

ಲವ್‌ ಗುರು  ಹೆಸರಲ್ಲೊಂದು‌ ವಿಡಿಯೋ‌ ಸಾಂಗ್ ಆಲ್ಬಂ

ಕಾಗೆ ಹಾರಿಸಿ ಹೋದ್ಲು ಮಾಮ

ಕೈಗೆ ಸಿಗದೇ ಹೋಯ್ತು ಪ್ರೇಮ…

– ಹೀಗೆ ಶುರುವಾಗುವ ವಿಡಿಯೋ ಸಾಂಗ್‌ ಈಗ ಲೋಕಾರ್ಪಣೆಗೊಂಡಿದೆ. ಲಹರಿ ಮ್ಯೂಸಿಕ್‌ ಸಂಸ್ಥೆಯಿಂದ ಹೊರಬಂದಿರುವ ಮೊಟ್ಟಮೊದಲ ಮ್ಯೂಸಿಕ್‌ ವಿಡಿಯೋ ಇದಾಗಿದೆ. ಇದರ ಹೆಸರು ‘ಲವ್ ಗುರು’ . ಶುಕ್ರವಾರ ಸಂಜೆ ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಹಾಡು ಪ್ರದರ್ಶನ ಗೊಂಡಿತು.

ಈ ಹೆಸರು ಕೇಳಿದಾಕ್ಷಣ ತರುಣ್ ಚಂದ್ರ ನಟನೆಯ ಲವ್ ಗುರು ಸಿನಿಮಾ ನೆನಪಾದ್ರೂ ಅಚ್ಚರಿ ಇಲ್ಲ.ಹಾಗಂತ ಅದಕ್ಕೂ ಇದಕ್ಕೂ ಏನಾದ್ರೂ ಕನೆಕ್ಷನ್ ಉಂಟಾ ಅಂತ ನಿಮಗನಿಸಿದರೂ, ಅದೇನು ತಪ್ಪಲ್ಲ. ಯಾಕಂದ್ರೆ , ಅವರೆಡಕ್ಕೂ ಕನೆಕ್ಷನ್ ಇದೆ.‌ಲವ್ ಗುರು ಖ್ಯಾತಿಯ ನಟ ತರುಣ್ ಇದರ ಪ್ರಮುಖ ಆಕರ್ಷಣೆ. ಆ ಮೂಲಕ, ತರುಣ್ ಮತ್ತೆ ಬಣ್ಣ ಹಚ್ವಿ ಬಣ್ಣದ‌ ಲೋಕಕ್ಕೆ ಬಂದಿದ್ದಾರೆ.

ತರುಣ್ ಅವರ ಮಿತ್ರ ಹಾಗೂ ನಿರ್ಮಾಪಕ ಗಣೇಶ್‌ ಪಾಪಣ್ಣ ಈ ವಿಡಿಯೋ ಸಾಂಗ್ ನಿರ್ದೇಶಕರು. ಲಹರಿ ಮ್ಯೂಜಿಕ್ ಒರಿಜಿನಲ್ ಇದರ ನಿರ್ಮಾಣ ಸಂಸ್ಥೆ.
ಎಲ್ವಿನ್ ಜೋಷ್ವಾ ಸಂಗೀತ ನೀಡಿದ್ದಾರೆ. ಕೆಜಿಎಫ್ ಚಿತ್ರ ಖ್ಯಾತಿ‌ಯ ಖಳ ನಟ ಲಕ್ಕಿ‌ಲಕ್ಣ್ಮಣ್ ಈ‌‌ ಆಲ್ಬಂ‌ಮೂಲಕ ಗಾಯಕರಾಹಿಯೂ ಪರಿಚಯವಾಗುತ್ತಿದ್ದಾರೆಹೆಸರಾಂತ ಮಾಡೆಲ್ ಹಾಗೂ‌ ಬಾಲಿವುಡ್ ನಟಿ ನುತಶ್ರೀ ಜಗತಪ್‌ ಈ ಹಾಡಿನಲ್ಲಿ ನಟಿಸಿದ್ದಾರೆ. ಆಲ್ಬಂ ಲಾಂಚ್ ಗೆ ಅವರು ಗೈರಾಗಿದ್ದರು.


‘ ಅವರ ಹಾಜರಿ ಎಂಟು ಸೆಕೆಂಡುಗಳಷ್ಟೇ ಇತ್ತು. ಆದರೂ ಅವರು ಬೆಂಗಳೂರಿಗೆ ಬಂದು ಖುಷಿಯಿಂದ ಶೂಟಿಂಗ್‌ನಲ್ಲಿ ಪಾಲ್ಗೊಂಡರು. ಅಷ್ಟು ದೂರದಿಂದ ಬಂದರು ಎನ್ನುವ ಕಾರಣಕ್ಕೆ ಮತ್ತೆ ಎಂಟು ಸೆಕೆಂಡುಗಳನ್ನು ಹೆಚ್ಚಿಗೆ ಮಾಡಿದ್ದೇನೆ ‘ ಅಂತ ನಿರ್ದೇಶಕ ಗಣೇಶ್ ಪಾಪಣ್ಣ ಹೇಳಿದರು. ‘ಫ್ರೆಂಚ್‌ ಬಿರಿಯಾನಿ ‘ಚಿತ್ರದಲ್ಲಿ ಮಸಲ್‌ ಮಣಿ ಈ ಆಲ್ಬಂ ನಲ್ಲಿದ್ದಾರೆ. ನಟ ತರುಣ್ ಹಾಜರಿದ್ದರು.

ಲಹರಿ ಮ್ಯೂಸಿಕ್‌ ಸಂಸ್ಥೆಯ ನವೀನ್‌ ಮನೋಹರನ್‌ ಈ ಒರಿಜಿನಲ್‌ ಆಲ್ಬಂ ಅನ್ನು ನಿರ್ಮಾಣ ಮಾಡಿದ್ದಾರೆ. ಗೌಸ್‌ ಪೀರ್‌ ಬರೆದಿರುವ ಹಾಡಿಗೆ ಎಲ್ವಿನ್‌ ಜೋಷ್ವಾ ಸಂಗೀತ, ಆರ್.ಜೆ. ರಘು ನೃತ್ಯ ನಿರ್ದೇಶನ, ಅರುಣ್‌ ರಾಚಪುಟಿ ಛಾಯಾಗ್ರಹಣವಿದೆ.

Categories
ಸಿನಿ ಸುದ್ದಿ

ಇಷ್ಟರಲ್ಲಿಯೇ ಒಂದ್ ಸಿನ್ಮಾ ಅನೌನ್ಸ್ ಮಾಡ್ತೀನಿ !

ಇದು ಮತ್ತೆ ಬಂದ ತರುಣ್ ಚಂದ್ರ ಕೊಟ್ಟ ಭರವಸೆ 

ಡೈರೆಕ್ಷನ್ ಮಾಡೋಣ ಅಂತ ಗ್ಯಾಪ್ ತಗೊಂಡೆ, ಆ ನಡುವೆ ಆಕ್ಸಿಡೆಂಟ್ ಆಯ್ತು, ಅದೇ ಇಷ್ಟು ಸಮಯ ತೆಗೆದುಕೊಳ್ತು…
– ಐದು ವರ್ಷಗಳ ನಟನೆಯ ಗ್ಯಾಪ್ಗೆ ಹೀಗೆ ಕಾರಣ ಕೊಟ್ಟು ನಕ್ಕರು’ ಗೆಳೆಯ ‘ಖ್ಯಾತಿಯ ನಟ ತರುಣ್ ಅಲಿಯಾಸ್ ತರುಣ್ ಚಂದ್ರ.

ಹೌದು , ಲವ್ ಗುರು ಖ್ಯಾತಿ ನಟ ತರುಣ್ ನಟನೆಗೆ ಗ್ಯಾಪ್ ಕೊಟ್ಟು ಇಲ್ಲಿಗೆ ಐದು ವರ್ಷ. ಇಷ್ಟು ಟೈಮ್ ಸಿನಿಮಾ ಚಟುವಟಿಕೆಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೆ, ತೆರೆಮರೆಯಲ್ಲೆ ಇದ್ದರು. ಆ ಗ್ಯಾಪ್ ಗೆ ವಿದಾಯ ಹೇಳಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಲವ್ ಗುರು ಹೆಸರಿನ ವಿಡಿಯೋ ಸಾಂಗ್ ಆಲ್ಬಂವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕ್ಯಾಮೆರಾ ಎದುರಿಸಿದ್ದಾರೆ. ಆ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಮಾತಿಗೆ ಸಿಕ್ಕ ತರುಣ್ , ಇಷ್ಟು ವರ್ಷ ಯಾಕಾಯ್ತು ಗ್ಯಾಪ್? ಈ ಟೈಮ್ನ್ ನಲ್ಲಿ ಏನ್ ಮಾಡಿದ್ರು? ಮತ್ತೆ ಕಲರ್ ಫುಲ್ ದುನಿಯಾಕ್ಕೆ ಹೇಗೆ ಬರ್ತೀದ್ದಾರೆ? ಅದರ ಸಿದ್ದತೆಗಳೇನು? ಇತ್ಯಾದಿ ಕುರಿತ ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡಿದರು.

‘ ಗೋವಾ ಸಿನಿಮಾ ರಿಲೀಸ್ ಆಗಿದ್ದು 2015, ಆದೇ ಲಾಸ್ಟ್ ಸಿನಿಮಾ. ಅಲ್ಲಿಂದ ಇಲ್ಲಿ ತನಕ ಐದು ವರ್ಷಗಳ ಗ್ಯಾಪ್. ಅದ್ಯಾಕಾಯ್ತು ಅಂತ ಅನೇಕ‌ ಜನರಿಗೆ ಕುತೂಹಲ. ಹಾಗೆಯೇ ಹಲವು ಪ್ರಶ್ನೆ. ಅದಕ್ಕೆ ನಾನು ಹೇಳೋದು ನನ್ನದೇ ಕೆಲವು ಕಾರಣ. ಡೈರೆಕ್ಷನ್ ಮೇಲೆ ನನಗೆ ಮೊದಲನಿಂದಲೂ‌ ಆಸಕ್ತಿ ಇತ್ತು. 2015ರ ಹೊತ್ತಿಗೆ ನಂಗ್ಯಾಕೋ ಅದು ಇನ್ನು ಹೆಚ್ಚಾಗಿ ಕಾಡತೊಡಗಿತ್ತು. ಡೈರೆಕ್ಷನ್ ಕಲಿಬೇಕು ಅಂತ ಗ್ಯಾಪ್ ತಗೊಂಡೆ. ಅಮೆರಿಕದ ಪ್ರತಿಷ್ಟಿತ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡೈರೆಕ್ಷನ್ ಕೊರ್ಸ್ ಮುಗಿಸಿಕೊಂಡು ಬಂದೆ.‌ ಅಲ್ಲಿ‌ಂದ ಸ್ಕ್ರಿಪ್ಟ್ ವರ್ಕ್ ಮಾಡಿ, ಇನ್ನೇನು ಡೈರೆಕ್ಷನ್ ಗೆ ಇಳಿಬೇಕು ಎನ್ನುವಾಗ ಸಣ್ಣದೊಂದು ಆಕ್ಸಿಡೆಂಟ್ವಾಯ್ತು. ಅದು ಇಷ್ಟು ಗ್ಯಾಪ್ ಗೆ ಕಾರಣ ಎನ್ನುವ ಮೂಲಕ ಸತತ ಐದು ವರ್ಷಗಳ ಗ್ಯಾಪ್ ಹಿಂದಿನ ಕಾರಣ ಏನು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು ನಟ ತರುಣ್.

ಐದು ವರ್ಷಗಳ ಗ್ಯಾಪ್ ಗೆ ಇದು ಕಾರಣ ಹೌದು. ಆದರೆ ಈ ಐದು ವರ್ಷದಲ್ಲಿ ತರುಣ್ ಸಿನಿಮಾಕ್ಕೆ ಸಂಬಂಧಿಸಿದಂತೆ ಗ್ರಾಫಿಕ್ಸ್ ವರ್ಕ್ ,ಅನಿಮೇಷನ್ ಕಲಿತುಕೊಂಡಿದ್ದಾರಂತೆ. ಹಾಗೆಯೇ ವರ್ಕ್ಔಟ್ ಮಾಡಿ ವ್ಹೆಟ್ ಲಾಸ್ ಮಾಡಿಕೊಂಡಿದ್ದಾರಂತೆ. ಅದರ ಜತೆಗೆ ಐದಾರು ಕತೆ ರೆಡಿಯಾಗಿವೆಯಂತೆ. ಅವರ ಜತೆಗೆ ಇತರೆ ಸ್ಟಾರ್ ಗೂ ಮುಂದೆ ಸಿನಿಮಾ ಮಾಡೋ ಆಲೋಚನೆ‌ ಇದೆ ಎನ್ನುತ್ತಾರೆ. ಹಾಗೆಯೇ ಇಷ್ಟರಲ್ಲಿ ಒಂದು ಸಿನಿಮಾ ಶುರುವಾಗುತ್ತೆ ಅಂತ ಭರವಸೆ ನೀಡಿದ್ದಾರೆ. ಮತ್ತೆ ಗ್ಯಾಪ್ ಆಗೋಲ್ಲ ಎನ್ನುವ ಮಾತನ್ನು ಒತ್ತಿ ಹೇಳಿದರು.

Categories
ಸಿನಿ ಸುದ್ದಿ

ನವೆಂಬರ್ 20ಕ್ಕೆ ಆ್ಯಕ್ಟ್ 1978 ಜಾರಿ !

 

ಲಾಕ್ ಡೌನ್ ತೆರವಿನ ನಂತರ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವ ಮೊಟ್ಟ ಮೊದಲ ಫ್ರೆಶ್ ಸಿನಿಮಾ


ಲಾಕ್ ಡೌನ್ ತೆರವಾದ ನಂತರ ಸಿನಿಮಾ ರಿಲೀಸ್ ಆಗಿವೆ.‌ ಅಕ್ಟೋಬರ್‌ 15 ರಿಂದಲೇ ರಾಜ್ಯದಲ್ಲಿ ಚಿತ್ರಮಂದಿರಗಳು ಒಪನ್ ಆಗಿವೆ‌. ಅಲ್ಲಿಂದ ಒಂದಷ್ಟು ಸಿನಿಮಾಗಳು ಕೂಡ ತೆರೆಕಂಡಿವೆ.‌ ಆದರೆ ಅವ್ಯಾವ ಫ್ರೆಶ್ ಸಿನಿಮಾ ಅಲ್ಲ. ಅದಾಗಲೇ, ಅಂದರೆ ಲಾಕ್ ಡೌನ್ ಮುಂಚೆ ತೆರೆ ಕಂಡಿದ್ದ ಸಿನಿಮಾಗಳೇ ರೀ ರಿಲೀಸ್ ಆಗಿವೆ‌.ಆದರೆ ಈಗ ಮಂಸೋರೆ ನಿರ್ದೇಶನದ ಆ್ಯಕ್ಟ್ 1978 ಚಿತ್ರ ಹೊಸ ದಾಖಲೆ ಬರೆಯಲು ಹೊರಟಿದೆ. ಟೈಟಲ್, ಟ್ರೇಲರ್ ಮೂಲಕ ತೀವ್ರ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರ ನವೆಂಬರ್20 ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಲಾಕ್ ಡೌನ್ ನಂತರ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲೇ ತೆರೆ ಕಾಣುತ್ತಿರುವ ಮೊದಲ ಸಿನಿಮಾ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಹೊಸದಾಗಿ ಸಿನಿಮಾ ರಿಲೀಸ್ ಮಾಡುವವರಿಗೆ ಚಿತ್ರಮಂದಿರಗಳ ಸ್ಥಿತಿ ಗತಿ ಬಗ್ಗೆ ಆತಂಕ ಇದೆ.ಆದರೆ ಆ್ಯಕ್ಟ್ 1978ಚಿತ್ರಕ್ಕೆ ಸಾಕಷ್ಟು ಚಿತ್ರ ಮಂದಿರಗಳು ಸಿಕ್ಕಿವೆ. ಚಿತ್ರ ತಂಡ ದೊಡ್ಡ ಸಾಹಸ ಮಾಡಿಯೇ ಸಿನಿಮಾ ರಿಲೀಸ್ ಮಾಡುತ್ತಿದೆ. ಆ ಮೂಲಕ ರಿಲೀಸ್ ಯಾವಾಗ ಎನ್ನುವ ದೊಡ್ಡ ಕುತೂಹಲಕ್ಕೆ ತೆರೆ ಏಳೆದು ಗುರುವಾರ ತಡ ರಾತ್ರಿ ದಿನಾಂಕ ಪ್ರಕಟಿಸಿದೆ.
ಚಿತ್ರದ ರಿಲೀಸ್ ಪ್ರಕಟಣೆ ಕುರಿತು ನಿರ್ದೇಶಕ ಮಂಸೋರೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡ ವಿವರ ಇಲ್ಲಿದೆ.


‘ ಲಾಕ್ ಡೌನ್ ಶುರುವಾದಾಗ ಹುಟ್ಟಿದ ಈ ಪ್ರಶ್ನೆಗೆ ಈಗ ನಿಮ್ಮ ಮುಂದೆ ನಮ್ಮ ಉತ್ತರ. ಪ್ರಶ್ನೆ ನಿಮ್ಮದಷ್ಟೇ ಅಲ್ಲಾ, ನಮ್ಮದೂ ಕೂಡ ಆಗಿತ್ತು.. ನನಗೇ ನಾನೇ ಅದೆಷ್ಟು ಬಾರಿ ಕೇಳಿಕೊಂಡೆನೋ, ಈ ಸಿನೆಮಾ ಯಾವಾಗ ಬಿಡುಗಡೆಯಾಗುತ್ತದೆ? ಎಲ್ಲಿ ಬಿಡುಗಡೆಯಾಗುತ್ತದೆ? ಇವತ್ತಿನವರೆಗೂ ಇದರ ಬಗ್ಗೆ ನಡೆದದ್ದು ಅದೆಷ್ಟೋ ಚರ್ಚೆಗಳು. ಸಂಪರ್ಕಿಸಿದ್ದು ಸಾಕಷ್ಟು ಜನರನ್ನು. ಹಿರಿಯರು, ಕಿರಿಯರು, ಚಿತ್ರರಂಗದ ಒಳಗೆ, ಹೊರಗೆ, ಅನುಭವಿಗಳು, ಯುವಕರು, ಮಹಿಳೆಯರು, ಪತ್ರಕರ್ತರು, ಥಿಯೇಟರುಗಳ ಮಾಲೀಕರು, ಹೀಗೆ ಸಾಧ್ಯವಾದ ವಲಯದಲ್ಲೆಲ್ಲಾ ಇದರ ಬಗ್ಗೆ ಚರ್ಚೆ ಮಾಡಿ ಕೊನೆಗೂ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್ 20 ರಂದು ನಮ್ಮ ಸಿನೆಮಾ ‘ಥಿಯೇಟರ್’ನಲ್ಲಿ ತೆರೆಕಾಣಲಿದೆ. ನೂರಾರು ಜನರ ಶ್ರಮ, ನಮ್ಮೆಲ್ಲರ ಕನಸು ನಿಮ್ಮ ಮುಂದೆ ಬರಲಿದೆ.

ಈ ಸಿನೆಮಾ ತೆರೆಗೆ ಬರುವುದು ಬರೀ ಸಿನೆಮಾವಾಗಿ ಮಾತ್ರವಲ್ಲಾ, ಸಾವಿರಾರು ಮಂದಿ ಸಿನೆಮಾ ಕುಟುಂಬದ ಭರವಸೆಯ ನಿರೀಕ್ಷೆಯಂತೆ ಇದು ತೆರೆಕಾಣುತ್ತಿದೆ. ಇದರ ಫಲಿತಾಂಶದ ಮೇಲೆ ಸಾವಿರಾರು ಮಂದಿ ಕಾರ್ಮಿಕರು ಮುಂದಿನ ದಿನಗಳ ಭವಿಷ್ಯದ ಕುರಿತು ಇರುವ ಆತಂಕದ ಕಾರ್ಮೋಡ ಸರಿಯುವುದೆಂಬ ನಿರೀಕ್ಷೆಯಲ್ಲಿ ಈ ಸಿನೆಮಾದ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
ಪ್ರೇಕ್ಷಕ ಪ್ರಭುಗಳು ಆ ಕಾರ್ಮೋಡವನ್ನು ಸರಿಸುವಿರಿ ಎಂಬ ನಿರೀಕ್ಷೆಯಲ್ಲಿ ನಾನು ಹಾಗೂ ನಮ್ಮ ತಂಡ.

ತಪ್ಪದೇ ಚಿತ್ರಮಂದಿರಗಳಲ್ಲಿ ನೋಡಿ, ಹರಿಸಿ, ಹಾರೈಸಲು ಪ್ರೇಕ್ಷಕ ಪ್ರಭುಗಳಲ್ಲಿ ಕೋರುವ ACT-1978 ಚಿತ್ರತಂಡ’

Categories
ಸಿನಿ ಸುದ್ದಿ

ಟೈಟಲ್ ಹಾಗೂ ಪೋಸ್ಟರ್ ಫಸ್ಟ್ ಲುಕ್ ಮೂಲಕ ಸೌಂಡ್ ಮಾಡಿದ : ನೋಡಿದವರು ಏನಂತಾರೆ’

ಗುಲ್ಟು ನಂತರ‌ ಮತ್ತೆ ಕ್ಯಾಮೆರಾ ಮುಂದೆ ನವೀನ್ ಶಂಕರ್

ಹಿಪ್ಪೋ ಕಿಡ್ಡೋ ಸಂಸ್ಥೆಯಡಿ ಶೋಭಾ ಗೋಪಾಲ್‌ ಅರ್ಪಿಸಿ, ನಾಗೇಶ್‌ ಗೋಪಾಲ್‌ ಮತ್ತು ಮೋನಿಷಾ ಗೌಡ ನಿರ್ಮಿಸುತ್ತಿರುವ ʻನೋಡಿದವರು ಏನಂತಾರೆʼ ‌ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ. ಗುರುವಾರ ನಟ ಶ್ರೀ‌ಮುರಳಿ ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಮತ್ತು ‘ಅಯೋಗ್ಯ’ ಚಿತ್ರದ ನಿರ್ದೇಶಕ ಮಹೇಶ್‌‌‌ಸಮಾರಭದಲ್ಲಿ ಹಾಜರಿದ್ದು, ಚಿತ್ರ ತಂಡಕ್ಕೆ ಶುಭ ಕೋರಿದರು. ಕುಲದೀಪ್ ಕಾರಿಯಪ್ಪ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಗುಲ್ಟು ಖ್ಯಾತಿಯ ನವೀನ್ ಶಂಕರ್ ಹಾಗೂ ಅಪೂರ್ವ ಭಾರಾದ್ವಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯಕ್ಕೆ‌ಚಿತ್ರವು ಚಿತ್ರೀಕರಣದ ಹಂತದಲ್ಲಿದೆ.

ಚಿಕ್ಕಮಗಳೂರು, ಮತ್ತು ಬೆಂಗಳೂರಿನಲ್ಲಿ ಎರಡು ಹಂತರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ. ಇಡೀ ಚಿತ್ರದಲ್ಲಿ ಪ್ರಯಾಣ ಹೆಚ್ಚಿರುವುದರಿಂದ ಲೊಕೇಷನ್ನುಗಳು ಕೂಡಾ ಸಾಕಷ್ಟಿವೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್‌ ಕಾಯ್ಕಿಣಿ ಬರೆಯುತ್ತಿದ್ದಾರಂತೆ.

ಸಕ್ರೆಡ್‌ ಗೇಮ್ಸ್‌ ನಂಥಾ ವೆಬ್‌ ಸಿರೀಸ್‌ ಗೆ ಕೆಲಸ ಮಾಡಿದ್ದ, ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್‌ ಅಧಿಕಾರಿ ಸಂಗೀತ ಸಂಯೋಜನೆ, ಅಶ್ವಿನ್‌ ಕೆನ್ನೆಡಿ ಛಾಯಾಗ್ರಹಣ, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಸುನಿಲ್‌ ವೆಂಕಟೇಶ್‌ ಮತ್ತು ನಿರ್ದೇಶಕರು ಸೇರಿ ಸಂಭಾಷಣೆ ರಚಿಸಿದ್ದಾರೆ. ಕಾಡಿನ ನಡುವೆ ಹಳ್ಳಿ ಮನೆಯ ಸೆಟ್‌ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದ್ದು, ಇನ್ನು ಅರವತ್ತು ದಿನಗಳ ಶೂಟಿಂಗ್‌ ಬಾಕಿ ಇದೆ. ಅಪೂರ್ವ ಭಾರದ್ವಾಜ್, ಹೊಸ ಕಲಾವಿದೆ ರಮ್ಯ ಕೃಷ್ಣ ಮತ್ತು ಇತರರ ತಾರಾಗಣ ಈ ಚಿತ್ರದಲ್ಲಿದೆ.ಇನ್ನು ಚಿತ್ರದ ಟೈಟಲ್ ಕುರಿತು ವಿವರಣೆ ನೀಡುವ ನಿರ್ದೇಶಕ ಕಾರಿಯಪ್ಪ,

ʻನೋಡಿದವರು ಏನಂತಾರೆ?ʼ ಎನ್ನುವ ಕಾರಣಕ್ಕೆ ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ. ಇಷ್ಟೇನಾ ಜೀವನ ಅಂತಾ ಎಷ್ಟೋ ಸಲ ಅನ್ನಿಸುವುದುಂಟು. ಇಂಥಾ ಪ್ರಶ್ನೆಗಳಿಗೆ ಉತ್ತರ ನೀಡುವಂತಾ ಸಿನಿಮಾವಿದು ಎನ್ನುತ್ತಾರೆ.

Categories
ಸಿನಿ ಸುದ್ದಿ

ಹೀರೋ ಆಗಿ ಬರ್ತಿದ್ದಾರೆ ಅಚ್ಯುತ್ ಕುಮಾರ್!

ಪೋರ್ ವಾಲ್ಸ್, ಆ್ಯಂಡ್  ಟೂ ನೈಟೀಸ್’‌ನಲ್ಲಿ ಅಚ್ಯುತ್ ಕುಮಾರ್ ನಾಯಕ ನಟ

ಅಪ್ಪ, ದೊಡ್ಡಪ್ಪ , ಚಿಕ್ಕಪ್ಪ , ವಿಲನ್ , ಕಾಮಿಡಿಯನು ಹಿಂಗೆ ವೆರೈಟಿ ವೆರೈಟಿ ಪಾತ್ರಗಳನ್ನ ಮಾಡಿ ಸೈ ಜೈ ಎನ್ನಿಸಿಕೊಂಡ‌ನಟ ಅಚ್ಯುತ್ ಕುಮಾರ್. ಈಗ ಅವರು ಹೀರೋ ಆಗಿದ್ದಾರೆ. ಸದ್ದು ಗದ್ದಲ್ಲ  ಇಲ್ಲದೆ ಹೀರೋ ಆಗಿ ಬಣ್ಣ ಹಚ್ಚಿ ಕ್ಯಾಮೆರಾಗೆ ಕೈ ಮುಗಿದ್ದಿದ್ದಾರೆ.‌ಅದಕ್ಕೀಗ ಶೂಟಿಂಗ್ ಕೂಡ ಮುಗಿದಿದೆ. ಚಿತ್ರ ತಂಡ ರಿಲೀಸ್ ಗೆ ರೆಡಿಯಾಗಿದೆ. ಹಾಗಾದ್ರೆ  ಆ ಸಿನಿಮಾ ಎನ್ನುವ ಕುತೂಹಲದ ಪ್ರಶ್ನೆಗೆ  ಬ್ಯುಟಿಫುಲ್ ಉತ್ತರವೇ‘ಫೋರ್ ವಾಲ್ಸ್ ಆ್ಯಂಡ್ ಟೂ ನೈಟೀಸ್.

ನಟ ಅಚ್ಯುತ್ ಕುಮಾರ್ ಹೀರೋ ಆಗಿದ್ದಾರೆ.  ಅರೆ ಹೌದಾ?  ಹೌದು, ಇದು ರಿಯಲ್ ಸ್ಟೋರಿ. ಸ್ಯಾಂಡಲ್ವುಡ್ ನಲ್ಲಿ ಇದುವರೆಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ‌ ಜನ‌ಮನಗೆದ್ದ ಖ್ಯಾತಿ ಅವರದು. ಅಪ್ಪ, ದೊಡ್ಡಪ್ಪ , ಚಿಕ್ಕಪ್ಪ , ವಿಲನ್ , ಕಾಮಿಡಿಯನ್ ಸೇರಿದಂತೆ ಹತ್ತಾರು ಬಗೆಯ ಪಾತ್ರಗಳಿಗೆ ಬಣ್ಣಹಚ್ಚಿ ಸೈ ಜೈ ಎನಿಸಿಕೊಂಡವರು ಅಚ್ಯುತ್ ಕುಮಾರ್.

ರಂಗಭೂಮಿ ಅಥವಾ ಸಿನಿಮಾ‌ ಯಾವುದೇ ಕ್ಷೇತ್ರದಲ್ಲಿ ಯಾವುದೇ ಪಾತ್ರ ಸಿಕ್ಕರು  ಅಚ್ಚುಕಟ್ಟಾದ ಅಭಿನಯಕ್ಕೆ ಅಚ್ಯುತ್ ಕುಮಾರ್ ಅವರದ್ದು  ಮನೆ‌‌ಮಾತಾದ ಹೆಸರು.‌ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿ ಹೀರೋ ಎದುರು‌ನಿಂತರು ಹೀರೋ ರೈಂಜ್ಗೆ ಸೌಂಡ್ ಮಾಡಿ ಸೈ ಎನಿಸಿಕೊಂಡ ಅಭಿನಯ ಮೂರ್ತಿ‌ಅಚ್ಯುತ್ ಕುಮಾರ್. ಈಗ ಅವರೇ ಹೀರೋ ಅಂದ್ರೆ ನೀವು ನಂಬಲೇ ಬೇಕು.

ಅಂದಹಾಗೆ, ‘ಪೋರ್ ವಾಲ್ಸ್, ಆ್ಯಂಡ್  ಟೂ ನೈಟೀಸ್’ ಎನ್ನುವುದು  ಅಚ್ಯುತ್ ಕುಮಾರ್ ಹೀರೋ ಆಗಿ ನಟಿಸಿರುವ ಹೊಸ ಸಿನಿಮಾ. ಮುಹೂರ್ತ , ಶೂಟಿಂಗು, ಎಡಿಟಿಂಗು , ಡಬಿಂಗು ಅಂತೆಲ್ಲ ಸದ್ದು ಮಾಡದೇ‌ ಚಿತ್ರ ತಂಡ ಶೂಟಿಂಗ್ ಮುಗಿಸಿಕೊಂಡು ಬಂದು ರಿಲೀಸ್ ಗೆ ರೆಡಿ ಆಗಿದೆ. ಈ ಹಂತಲ್ಲೀಗ ಚಿತ್ರದ ಕೆಲವು  ಪೋಸ್ಟರ್ ರಿವೀಲ್ ಆಗಿವೆ. ಅವೀಗ ಭಾರೀ ಕುತೂಹಲ ಕೆರಳಿಸಿವೆ.

‘ಮಂತ್ರಂ’ ಹೆಸರಿನ ಚಿತ್ರ  ನಿರ್ದೇಶಿಸಿದ್ದ ಬಹುಮುಖ ಪ್ರತಿಭೆ ಎಸ್.ಎಸ್.ಸಜ್ಜನ್  ‘ಫೋರ್ ವಾಲ್ಸ್‌‌ ಆ್ಯಂಡ್ ಟೂ ನೈಟೀಸ್’ ಸಿನಿಮಾದ ಒನ್ ಆಂಡ್ ಓನ್ಲಿ ಸೂತ್ರಧಾರ. ಅಂದ್ರೆ ನಿರ್ದೇಶಕ. ಅಚ್ಯುತ್ ಕುಮಾರ್  ಇದರ ಹೀರೋ.‌‌ಅವರ ಜೊತೆಗೆ ದತ್ತಣ್ಣ , ಸುಜಯ್ ಶಾಸ್ತ್ರಿ , ಭಾಸ್ಕರ್ ನೀನಾಸಂ , ರಘು ರಾಮನಕೊಪ್ಪ , ಡಾ.ಪವಿತ್ರಾ ಈ ಚಿತ್ರದ ಪಾತ್ರದಾರರು.

ಸಿನಿಮಾ ಈಗ ರಿಲೀಸ್ಗೆ ಸಿದ್ದವಾಗಿದೆ. ಎರಡು ಹಾಡಗಳು ಚಿತ್ರದಲ್ಲಿವೆ. ಇನೇನು ಕೆಲವೇ ದಿನಗಳಲ್ಲಿ  ಅವು ಚಿತ್ರಪ್ರೇಮಿಗಳ ಕರಣಗಳನ್ನ ಸ್ಪರ್ಶಿಸಲಿವೆ. ಅಚ್ಯುತ್ ಕುಮಾರ್ ಚಿತ್ರದ ಹೀರೋ ಎನ್ನುವ ಸಂಗತಿಯ ಹಾಗೆ ಅನೇಕ ಕುತೂಹಲ‌ಕಾರಿ ಸಂಗತಿ ಈ ಚಿತ್ರದ ಸುತ್ತ ಇವೆ.ಅವೆಲ್ಲವನ್ಜು  ಚಿತ್ರತಂಡ ಮುಂದಿನ ದಿನಗಳಲ್ಲಿ ರಿವೀಲ್ ಮಾಡಲಿದೆಯಂತೆ.

Categories
ಸಿನಿ ಸುದ್ದಿ

ಮಂಸೋರೆ ಮುಂದೆ ಮಾಸ್‌ ಮನ ಸೂರೆ !?

ಮಂಸೋರೆ ಎನ್ನುವುದಕ್ಕೆ ಮತ್ತೊಂದು ಹೆಸರೇ ” ಮಾಸ್‌ ಅಂದ್ರು ಅವಾರ್ಡ್‌ ವಿನ್ನರ್‌ ಡೈರೆಕ್ಟರ್

ಸಕತ್ ಸದ್ದು ಮಾಡುತ್ತಿದೆ “ಆ್ಯಕ್ಟ್ 1978” ಟ್ರೇಲರ್

ಮಂಸೋರೆ ಅಂದ್ರೆ ಕನ್ನಡದ ಪ್ರತಿಭಾವಂತ ನಿರ್ದೇಶಕ. ಚಿತ್ರ ನಿರ್ದೇಶನದಲ್ಲಿ ಎಲ್ಲರದೂ ಒಂದು ದಾರಿಯಾದರೆ, ಮಂಸೋರೆ ಆಯ್ದುಕೊಂಡಿದ್ದೇ ಹೊಸತಾದ ಹಾದಿ. ಆ ಮೂಲಕವೇ ಚೊಚ್ಚಲ ಚಿತ್ರದಿಂದ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ನಿರ್ದೇಶಕ ಎನ್ನುವ ಹೆಗ್ಗಳಿಕೆ ಅವರದು. ಅಷ್ಟೇ ಅಲ್ಲ “ನಾತಿಚೆರಾಮಿʼ ಚಿತ್ರದೊಂದಿಗೆ ಕನ್ನಡಕ್ಕೆ ಐದು ರಾಷ್ಟ್ರ ಪ್ರಶಸ್ತಿ ಬಂದಿದ್ದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಈಗವರು ಬದಲಾಗಿದ್ದಾರೆ. ಬದಲಾಗುವ ಕಾಲ ಅವರಿಗೂ ಬಂದಿದೆ. ಆರ್ಟ್ ಸಿನಿಮಾ ಮೇಕರ್ಸ್ ಎನ್ನುವ ಟಾರ್ಗೆಟ್ ಸಿಂಡ್ರೋಮಕ್ಕೆ ಈಗ ಸರ್ಜರಿ ಗ್ಯಾರಂಟಿ ಆಗಿದೆ. ಯಾಕಂದ್ರೆ ‘ಆ್ಯಕ್ಟ್‌ 1978’ ಚಿತ್ರ ಮಂಸೋರೆ ಸಿನಿ ಬದುಕಿನಲ್ಲಿ ಹೊಸ ಭಾಷೆ ಬರೆಯುವುದು ಖಾತರಿ ಆಗಿದೆ.

ಸದ್ಯಕ್ಕೆ ಮಂಸೋರೆ ನಿರ್ದೇಶಿಸಿ ತೆರೆಗೆ ತರುತ್ತಿರುವ ಚಿತ್ರ’ ಆ್ಯಕ್ಟ್ 1978′ ಚಿತ್ರ. ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿದ್ದ ಚಿತ್ರವೀಗ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ಗೆ ಸಿದ್ದತೆ ನಡೆಸಿರುವ ಚಿತ್ರ ತಂಡ ಈಗ ಟ್ರೇಲರ್‌ ಮೂಲಕ ಪ್ರಚಾರ ಆರಂಭಿಸಿದೆ. ಕೆಲವೇ ದಿನಗಳ ಹಿಂದಷ್ಟೆ ‌ಥೀಮ್ ಸಾಂಗ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ ವೀಗ  ಟ್ರೇಲರ್‌ ಮೂಲಕ ಸಖತ್‌ ಸದ್ದು ಮಾಡುತ್ತಿದೆ. 2 ನಿಮಿಷ 44 ಸೆಕೆಂಡಿಗಳ ಅವದಿಯ ಈ ಚಿತ್ರದ ಅಧಿಕೃತ ಟ್ರೇಲರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎಲ್ಲಾ ಕಡೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಟ್ರೇಲರ್‌ ಲಾಂಚ್‌ ಆದ 24 ಗಂಟೆಗಳಲ್ಲಿ ಅದರ ವೀಕ್ಷಕರ ಸಂಖ್ಯೆ 1 ಲಕ್ಷ ದಾಟಿತ್ತು. ಎರಡನೇ ದಿನಕ್ಕೆ 2
ಲಕ್ಷ ಆಗಿದೆ. ಚಿತ್ರ ರಸಿಕರಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಅದೇ ವಿಶ್ವಾಸದ ಲ್ಲೀಗ ತಾವು ಬದಲಾಗಿದ್ದರ ಸುಳಿವು ನೀಡುತ್ತಾರೆ ನಿರ್ದೇಶಕ ಮಂಸೋರೆ. “ಹೌದು, ಇದೊಂಥರ ಸವಾಲಿನ ಸಂದರ್ಭ. ಬರೀ ಆರ್ಟ್‌ ಸಿನಿಮಾ ಡೈರೆಕ್ಟರ್‌ ಎನ್ನುವ ನನ್ನ ಮೇಲಿನ ಟಾರ್ಗೆಟ್‌ ಸಿಂಡ್ರೊಮ್‌ ಕ್ಕೆ ಸರ್ಜರಿ ಮಾಡಬೇಕಂತಲೇ ಈ ಸಿನಿಮಾ ಮಾಡಿದ್ದೇನೆ. ಮಂಸೋರೆ ಎನ್ನುವ ಇನ್ನೊಂದು ಹೆಸರೇ ಮಾಸ್‌ ಅಂತಾಗಬೇಕುʼ ಎನ್ನುವ ಮನದಾಳದ ಮಾತುಗಳನ್ನು ಆಪ್ತವಾಗಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಮಂಸೋರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ತಾವು ಬದಲಾಗಿದ್ದು, ಬದಲಾಗಿದ್ದರ ಕುರಿತು ಹೀಗೆ ಹೇಳಿಕೊಳ್ಳುವುದಕ್ಕೂ ಕಾರಣ ತಮ್ಮ ಕ್ರಿಯೇಟಿವಿಟಿಯ ಮೇಲಿದ್ದ ಅಪನಂಬಿಕೆಯ ಟಾರ್ಗೆಟ್ ಸಿಂಡ್ರೋಮಾ.ಹೌದು, ಪ್ರಶಸ್ತಿ, ಪುರಸ್ಕಾರಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮುಕುಟ ಪ್ರಾಯ. ದುರಂತ ಅಂದ್ರೆ ಸಿನಿದುನಿಯಾದಲ್ಲಿ ಇದು ಪಕ್ಕಾ ಉಲ್ಟಾ. ಆರ್ಟ್ ಸಿನಿಮಾ‌ ಮಾಡಿ ದೊಡ್ಡ ಮಟ್ಟದ ಪ್ರಶಸ್ತಿ ಪಡೆದವರು, ಕಮರ್ಷಿಯಲ್‌ ಸಿನಿಮಾ ಮಾಡೋದು ಕಷ್ಟ ಎನ್ನುವ ಆರೋಪಕ್ಕೆ ಸಿಲುಕುತ್ತಾರೆ. ಬಹಳಷ್ಟು ದಿನ ಅಂತಹ ಅಪ ನಂಬಿಕೆಯ ಸಿಂಡ್ರೋಮ್‌ ಕ್ಕೆ ಗುರಿಯಾಗಿ ನೋವು ಅನುಭವಿಸಿದವರ ಪೈಕಿ ಪ್ರತಿಭಾವಂತ ನಿರ್ದೇಶಕ ಮಂಸೋರೆ ಕೂಡ ಒಬ್ಬರು.

ಈಗ ಅದು ಗತಕಾಲಕ್ಕೆ ಜಾರುವುದು ಗ್ಯಾರಂಟಿ. ಸದ್ಯಕ್ಕೆ ಆಕ್ಟ್ 1978 ಸದ್ದು ಮಾಡುತ್ತಿರುವ ಪರಿ ನೋಡಿದರೆ, ಮಂಸೋರೆ ಮಾಸ್ ಪ್ರೇಕ್ಷಕರ ಮನ ಸೂರೆ ಗೊಂಡು ಮಾಸ್ ಮಂಸೋರೆ ಅಂತ ಜನಪ್ರಿಯತೆ ಪಡೆದುಕೊಂಡರು ಅಚ್ಚರಿ ಇಲ್ಲ. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ತೀವ್ರ ಕುತೂಹಲ ಹುಟ್ಟಿಸಿದೆ. ಒಂದು ಹೊಸತಾದ ತಾಜಾ ಕತೆ ಇಲ್ಲಿದೆ. ಅದೆಲ್ಲಕ್ಕಿಂತ ಥ್ರಿಲ್ಲರ್ ಕಥಾ ಹಂದರವೇ ಇಲ್ಲಿ ರೋಚಕವಾಗಿದೆ. ದಂಡೀ ಪಾತ್ರಗಳು ಇಲ್ಲಿವೆ. ದೊಡ್ಡ ತಾರಾಗಣ ಇಲ್ಲಿದೆ.

ಟ್ರೇಲರ್ ನಲ್ಲಿ ಹಲವು ವಿಷಯಗಳು ರಿವೀಲ್ ಆಗಿವೆ. ಒಂದು ಸಮಸ್ಯೆಯ ಇತ್ಯರ್ಥಕ್ಕೆ’ ಆ್ಯಕ್ಟ್ 1978′ ಬೇಕಿತ್ತು ಎನ್ನುವುದನ್ನು ಈ ಸಿನಿಮಾ ಹೇಳ ಹೊರಟಿದೆ ಎನ್ನುವುದನ್ನು ಟ್ರೇಲರ್ ಬಿಚ್ಚಿಟ್ಟಿದೆ. ಇದರಾಚೆ ಈ ಸಿನಿಮಾದ ಟೆಕ್ನಿಕಲ್ ಪ್ರದರ್ಶನ ಕೂಡ ಆಗಿದೆ. ಪತ್ರಕರ್ತ ಹಾಗೂ ಸಿನಿಮಾ ಪ್ರೇಮಿ ದಿನೇಶ್ ಕುಮಾರ್ ( ದಿನೂಸಚಂ) ಸಿನಿಮಾ ನೋಡಿದ್ದಾರೆ. ಅವರ ಪ್ರಕಾರ ಇದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಕನ್ನಡದ ಮಟ್ಟಿಗೆ ಇದೊಂಥರ ಲ್ಯಾಂಡ್ ಮಾರ್ಕ್ ಸಿನಿಮಾ ಮೂವೀ.
ರಿಲೀಸ್ ಮುನ್ನವೇ ‘ಆ್ಯಕ್ಟ್ 1978 ‘ಈ ಮಟ್ಟಕ್ಕೆ ಸದ್ದು ಮಾಡುತ್ತಿರುವುದರ ಹಿಂದೆ ಮಂಸೋರೆ ಅವರ ಸಿನಿಮಾ ಕಟ್ಟುವಿಕೆಯೇ ಕಾರಣ. ಹಾಗೆಯೇ ಒಂದು ಸಿನಿಮಾ ಮಾಡುವಾಗ ವಹಿಸುವ ಜಾಗ್ರತೆ, ಎಚ್ಚರವೂ ಕಾರಣ.

ಸಾಕಷ್ಟು ರಿಸರ್ಚ್ ಮಾಡಿಯೇ ಈ ಸಿನಿಮಾದ ಕತೆ ಬರೆದು, ಗೆಳೆಯರ ಜತೆ ಚರ್ಚಿಸಿ ಈ ಸಿನಿಮಾ ಮಾಡಿದ್ದು ಇವತ್ತು, ಒಂದಷ್ಟು ಸದ್ದು ಮಾಡಲು ಕಾರಣವಾಗಿದೆ. ಚಿತ್ರೋದ್ಯಮದಲ್ಲಿ ದೊಡ್ಡ ಬೆಂಬಲವೂ ಸಿಗುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಮಾಡಿ ಶುಭ ಹಾರೈಸಿದ ಬೆನ್ನಲೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ರೇಲರ್ ಲಾಂಚ್ ಮಾಡಿ ಶುಭ ಹಾರೈಸಿದರು. ಇದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ. ಮಂಸೋರೆ ಹೆಸರು ಮಾಸ್ ಮಂಸೋರೆ ಅಂತಾಗುವುದು ಗ್ಯಾರಂಟಿ ಎನ್ನುವ ವಿಶ್ವಾಸ ಅವರಲ್ಲೂ ಇದೆ. ಬದಲಾವಣೆ ಜಗದ ನಿಯಮ.ಆಲ್ ದಿ ಬೆಸ್ಟ್ ಮಂಸೋರೆ.

Categories
ಸಿನಿ ಸುದ್ದಿ

ಪಲ್ಸ್‌ ರೆಕಾರ್ಡಿಂಗ್‌ ಸ್ಟುಡಿಯೋ ಶುರು ಮಾಡಿದ ಪಳನಿಸೇನಾಪತಿ

ಶಿಷ್ಯ ಟೂಲ್ಸ್‌ ಬಂದಿದೆ, ಪಲ್ಸ್‌  ಕೂತಿದೆ ಶುರು ಹಚ್ಚು ಅಂದ್ರು  ಹಂಸಲೇಖ 

ಟೂಲ್ಸ್‌  ಬಂದಿದೆ, ಪಲ್ಸ್ ಕೂತಿದೆ. ಟೂಲ್ಸ್ ಆ್ಯಂಡ್ ಫಲ್ಸ್ ಉತ್ತಮವಾಗಿದೆ. ಇನ್ನೇಕೆ ತಡ ಎಲ್ಲವೂ ಸರಿ ಹೋಗ್ತಿದೆ..!

– ಸಂಗೀತ ನಿರ್ದೇಶಕ ಹಂಸಲೇಖ ಇಷ್ಟು ಹೇಳಿದ್ದೇ ತಡ ಅಲ್ಲಿದ್ದವರು ಜೋರಾಗಿ ನಕ್ಕು , ಸಂಭ್ರಮಿಸಿದರು.

ಇದು ಆಗಿದ್ದು ಸಂಗೀತ ನಿರ್ದೇಶಕ ಪಳನಿ ಸೇನಾಪತಿ ಅವರ ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆ ಕಾರ್ಯಕ್ರಮದಲ್ಲಿ. ನಾದಬ್ರಹ್ಮ ಹಂಸಲೇಖ ಅವರ ಶಿಷ್ಯ ಪಳನಿ ಸೇನಾಪತಿ . ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ.ಈಗ ಅವರೇ ಸಂಗೀತ ನಿರ್ದೇಶಕ ರಾಗಿ ಹೊಸದೊಂದು ಸ್ಟುಡಿಯೋ ಆರಂಭಿಸಿದ್ದು ಗುರುವಾರ ಅದರ ಉದ್ಘಾಟನೆ ಹಂಸಲೇಖ ಬಂದಿದ್ದರು.

ಹಂಸಲೇಖ ಇರುವ ಕಡೆ ಆಡುಭಾಷೆಗೆ ಬರವಿಲ್ಲ.‌ಹಾಗೆಯೇ ಶಬ್ದಕ್ಕೂ ಬರವಿಲ್ಲ.‌ಮಾತು ಶುರು ಮಾಡಿದರೆ ನಗಿಸುವ, ಗಂಭೀರವಾಗಿ ಅಲೋಚಿಸುವಂತೆ ಮಾತನಾಡುವ ಕಲೆ ಅವರಿಗೆ ಸಿದ್ದಿಸಿದೆ.‌ಶಿಷ್ಯ ಪಳನಿಯವರ ’ಪಲ್ಸ್ ರೆರ್ಕಾಡಿಂಗ್ ಸ್ಟುಡಿಯೋ’ ಉದ್ಘಾಟಿಸಿ ಮಾತನಾಡಿದ ಅವರು, ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ತೆಗದುಕೊಳ್ಳಬೇಕಿದೆ. ಟೂಲ್ಸ್ ಅಂಡ್ ಪಲ್ಸ್ ಉತ್ತಮವಾಗಿದೆ. ಅಂಥಾ ಪಲ್ಸ್ ಪಳನಿಗೆ ಒಳ್ಳೆಯದಾಗಲಿ ಎಂದರು.


ಪಳನಿಸೇನಾಪತಿ ಇಲ್ಲಿಯವರೆಗೂ ೧೦೦೦ಕ್ಕೂ ಹೆಚ್ಚು ಚಿತ್ರಗಳಿಗೆ ಹಿನ್ನಲೆ ಶಬ್ದ ಒದಗಿಸಿ, ಇಂದು ಸಂಗೀತ ನಿರ್ದೇಶಕರಾಗಿದ್ದಾರೆ. ಪಲ್ಸ್ ಹೆಸರಲ್ಲಿ ಹೊಸದೊಂದು ರೆಕಾರ್ಡಿಂಗ್‌ ಸ್ಟುಡಿಯೋ ಶುರು ಮಾಡಿದ್ದು, ಆ ಬಗ್ಗೆ‌ಮಾತನಾಡಿದರು. ಹಿರಿಯ ನಿರ್ದೇಶಕ ಭಗವಾನ್, ಲಹರಿವೇಲು, ವಿ.ಮನೋಹರ್, ನಟ ವಿಜಯ್‌ಮಹೇಶ್, ನಿರ್ಮಾಪಕರುಗಳು ಶುಭಸಂದರ್ಭದಲ್ಲಿ ಹಾಜರಿದ್ದರು.

Categories
ಸಿನಿ ಸುದ್ದಿ

ಇಬ್ಬರ ನಡುವಿನ ಮುದ್ದಿನ ರಾಣಿ’ಗೆ ರೆಡಿ ಅಂದ್ರು ವೆಂಕಟ ರೆಡ್ಡಿ

ಬೆಳ್ಳಿತೆರೆಗೆ ಸೌರಭ್ ಕಿಶೋರ್ ಹೀರೋ ಆಗಿ ಎಂಟ್ರಿ

ಕೊರೋನಾ‌ ಆತಂಕ ದೂರವಾಗುತ್ತಿರುವ ಬೆನ್ಮಲೇ ಸಾಲು ಸಾಲು ಸಿನಿಮಾಗಳು ಸೆಟ್ಟೇರುತ್ತಿವೆ. ಇವೆಲ್ಲವೂ ಹೊಸಬರ ಸಿನಿಮಾ ಎನ್ನುವುದು ಇನ್ನೊಂದು ವಿಶೇಷ. ಈಗ ಆ ಸಾಲಿಗೆ ಮತ್ತೊಂದು ಸಿನಿಮಾ.ಅದರ ಹೆಸರು ‘ಇಬ್ಬರ ನಡುವಿನ ಮುದ್ದಿನ ರಾಣಿ‌’.
ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸೌರಭ್ ಕಿಶೋರ್ ಈ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದು, ಪಿ.ಎಂ.ಆರ್ ಕೋಣ್ಣಾರೆಡ್ಡಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ವಿಜಯ್ ಕುಮಾರ್ ಹಾಗೂ ಮಧುಬಾಬು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ದೊಡ್ಡ ಬಳ್ಳಾಪುರದ ಅಂಗಸಾನ ರೆಸಾರ್ಟ್ ನಲ್ಲಿ ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ಮೂರು ವೆಂಕಟ ರೆಡ್ಡಿ ಆರಂಭ ಫಲಕ ತೋರುವ ಮೂಲಕ ಚಾಲನೆ ‌ನೀಡಿದರು. ಈ ಚಿತ್ರವೂ ಕನ್ನಡ ‌ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ರೊಮ್ಯಾಂಟಿಕ್ ಲವ್ ಸ್ಟೋರಿ ಆಧಾರಿತ ಕಥಾಹಂದರ ಹೊಂದಿರುವ ಈ‌‌ ಚಿತ್ರವನ್ನು ಎಂ.ಎಸ್.ಎನ್ ರಾಜಾ ನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ರಾಜಾ ಅವರು ಹೇಳುವ ಪ್ರಕಾರ, ಬೆಂಗಳೂರು, ದೊಡ್ಡಬಳ್ಳಾಪುರ, ಮಡಿಕೇರಿ ಮುಂತಾದ ಕಡೆ 15 ‌ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

ನಾಲ್ಕು ಹಾಡುಗಳಿರುವ ಈ‌ ಚಿತ್ರಕ್ಕೆ ಎಂ.ಎಂ.ಮೋಹನ್ ಸಂಗೀತ ನೀಡುತ್ತಿದ್ದಾರೆ. ಬಾಲು‌ ಸುರೇಶ್ ಛಾಯಾಗ್ರಹಣ, ಸತ್ಯಬಾಬು ಸಂಕಲನ ಹಾಗೂ ಭೂಪತಿ ಯಾದಗಿರಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಚಿತ್ರಕ್ಕೆ ನಿರ್ಮಾಪಕ ಸೌರಭ್ ಕಿಶೋರ್ ನಾಯಕರಾಗಿ ನಟಿಸುತ್ತಿದ್ದು , ಅವರೊಂದಿಗೆ ಚಿತ್ರದ ತಾರಾಬಳಗದಲ್ಲಿ ಆಕಾಶ್ ಆರಾಧ್ಯ, ದಿವ್ಯ ರಾವ್, ರೂಪ ರಾಯಪ್ಪ, ಸಂಜನ ನಾಯ್ಡು, ಮಹೇಂದರ್, ವಿಕ್ಟರಿ ವಾಸು, ಶೇಷಗಿರಿ,ರೆಡ್ಡಿ, ಲೋರ ಇದ್ದಾರೆ.

Categories
ಸಿನಿ ಸುದ್ದಿ

ಸಿನಿ ಲಹರಿ ಲಾಂಚ್‌ ಮಾಡಿದ ಶ್ರೀಮುರಳಿ

ಸಿನಿಮಾ ಮಾಧ್ಯಮ ಲೋಕಕ್ಕೆ “ಸಿನಿ ಲಹರಿ ʼ ಎಂಟ್ರಿ

 ರಾಜ್ಯೋತ್ಸವದಂದು  ಸಿನಿ ಲಹರಿ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ

ಸಿನಿ ಲಹರಿ ಲಾಂಚ್‌ ಗೆ ಶ್ರೀ ಮುರಳಿ ಎಂಟ್ರಿ

ಒಂದು ಹೆಜ್ಜೆ ಇಟ್ಟಾಯಿತು. ಬಹು ದಿನದ  ಕನಸು ನನಸಾಯಿತು. ಮಾಧ್ಯಮ ಕ್ಷೇತ್ರದಲ್ಲಿದ್ದು,  ಸಿನಿಮಾಕ್ಕೆ ಸಂಬಂಧಿಸಿದಂತೆ ನಾವೇ ಒಂದು ವೆಬ್‌ ಸೈಟ್‌ ಶುರು ಮಾಡಬೇಕೆನ್ನುವ ಆಸೆಯಿತ್ತು. ಕೊನೆಗೂ ಅದು ಈಡೇರಿದ್ದು  ಈ ವರ್ಷದ ನೆವೆಂಬರ್‌ ೧ ಕ್ಕೆ .ವಿಶೇಷ  ಅಂದ್ರೆ, ಅವತ್ತು ಕನ್ನಡ ರಾಜ್ಯೋತ್ಸವ. ಕಾಕತಾಳೀಯ ಎನ್ನುವಂತೆ ಅಂದೇ ʼ ಸಿನಿ ಲಹರಿʼ  ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಎರಡು ಉದ್ಘಾಟನೆಗೊಂಡವು.

ಸಿನಿ ಲಹರಿ ವೆಬ್‌ ಸೈಟ್‌ ಲಾಂಚ್‌

ಅಂದು ಸಂಜೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋ ಸಭಾಂಗಣದಲ್ಲಿʼ ಸಿನಿ ಲಹರಿʼ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಅಧಿಕೃತವಾಗಿ ಆಹ್ವಾನಿಸಿದ್ದಕ್ಕಿಂತ ಹೆಚ್ಚೇ ಸ್ನೇಹಿತರು, ಬಂಧುಗಳು, ಒಡನಾಡಿಗಳು , ಹಿತೈಷಿಗಳು  ಬಂದರು. ಕೊರೋನಾ ಕಾರಣಕ್ಕೆ ಹೆಚ್ಚು ಜನರೇ ಬೇಡ ಎಂದುಕೊಂಡಿದ್ದೆವು. ಆದರೆ ದೊಡ್ಡ ಸಂಖ್ಯೆಯ ಜನರೇ ಆಗಮಿಸಿ, ಸಿನಿ ಲಹರಿಗೆ ಮನ ದುಂಬಿ ಹಾರೈಸಿದ್ದನ್ನು ಮರೆಯಲಾಗದು.

ಕಾರ್ಯಕ್ರಮದ ಮುಖ್ಯ ಆಕರ್ಷಣೆ   ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ.  ಆರಂಭದಿಂದಲೂ ಅವರು ನಮ್ಮ ಜತೆಗಿದ್ದರು.  ಹಾಗಾಗಿ ಅವರೇ ಉದ್ಘಾಟನೆ ಮಾಡಬೇಕೆನ್ನುವುದು ನಮ್ಮಗಿದ್ದಆಸೆ. ಅಂತೆಯೇ ನಟ ಶ್ರೀಮುರಳಿ ಅಂದು ಹಾಜರಿದ್ದು “ಸಿನಿ ಲಹರಿ” ವೆಬ್ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಉದ್ಘಾಟಿಸಿದರು. ” ತುಂಬಾ ಆಪ್ತರು ಶುರುಮಾಡಿದ ಸಂಸ್ಥೆ. ಆವರು ಆಹ್ವಾನಿಸದ್ದೇ ಇದಿದ್ದರೂ ನಾನಿಲ್ಲಿಗೆ ಬರುತ್ತಿದ್ದೆ. ಇದು ನನ್ನದೇ ಕಾರ್ಯಕ್ರಮ ಎನ್ನುವಷ್ಟು ಖುಷಿಯಿದೆ. ಈ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಲಿ ʼ ಅಂತ ಹಾರೈಸಿದರು.

ಇನ್ನು ಸಿನಿಲಹರಿಯ ಬೆನ್ನೆಲಬು ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯ ಮಾಲೀಕ ಲಹರಿ ವೇಲು ಅವರು. ಅವರು ಕೂಡ ಹಾಜರಿದ್ದು ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು.  ಸಂಸ್ಥೆಯ ಆರಂಭಕ್ಕೆ ಅವರೇ ಕಾರಣವಾಗಿದ್ದರಿಂದ, ಆರಂಭದ ದಿನಗಳಲ್ಲಿ ಸಂಸ್ಥೆಯ ರೂವಾರಿಗಳು ಪಟ್ಟ ಪರಿಶ್ರಮ ನೆನಪಿಸಿಕೊಂಡು ಭಾವುಕರಾದರು. ನಟ ರವಿಶಂಕರ್‌ ಗೌಡ, ನಟಿ ಆರೋಹಿನಾರಾಯಣ್‌, ನಿರ್ಮಾಪಕ ಪಿ. ಕೃಷ್ಣ, ಕೆಪಿಸಿಸಿ ಕೋ ಆರ್ಡಿನೇಟರ್‌ ಟಿ. ನಾಗರಾಜ್‌ ವೇದಿಕೆಯಲ್ಲಿದ್ದು , ಉದ್ಘಾಟನೆಗೆ ಮೆರಗು ತಂದರು. ಕೊನೆಯಲ್ಲಿ ರಾಷ್ಟ್ರಪಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಎಂಟ್ರಿ ಕೊಟ್ಟು ನಮ್ಮ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.

ಅಷ್ಟೇ ಅಲ್ಲ, ನಾವು ವೇದಿಕೆಗೆ ಆಹ್ವಾನಿಸಲೇ ಬೇಕಿದ್ದ ಹಲವರು  ಸಭಿಕರ ಸಾಲಿನಲ್ಲಿದ್ದರು. ಅವೆಲ್ಲರೂ ತಾವು ಸೆಲಿಬ್ರಿಟಿಗಳು ಎನ್ನುವ ಯಾವುದೇ ಅಹಂ ಇಲ್ಲದೆ ಕೇವಲ ನಮ್ಮ ಮೇಲಿನ ಪ್ರೀತಿಗೆ ಬಂದಿದ್ದು, ವಿಶೇಷ. ಆ  ಪೈಕಿ ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ,  ನಿರ್ಮಾಪಕ ಕಮ್‌ ನಿರ್ದೇಶಕ ರಘುವರ್ಧನ್‌,  ಹೇಮಂತ್‌ ಕುಮಾರ್‌, ನಿರ್ದೇಶಕರಾದ ಮಂಸೋರೆ, ನಾಗಚಂದ್ರ,  ನೂತನ್‌ ಉಮೇಶ್‌, ಮಾ. ಚಂದ್ರು,  ನಟರಾದ ಮಧು, ‌ ಕಾಕ್ರೋಚ್‌ ಸುಧಿ, ಬೆನಕ ಗುಬ್ಬಿ ವೀರಣ್ಣ, ಯಶ್‌ ರಾಜ್‌,  ಪ್ರಸಾದ್‌, ಸಂಗೀತ ನಿರ್ದೇಶಕ ವೀರ್‌ ಸಮರ್ಥ್‌, ಸಂಕಲನ ಕಾರ ಕಿರಣ್‌ ಕುಮಾರ್‌, ಪಿಆರ್‌ ಒ ವೆಂಕಟೇಶ್‌, ವಿಜಯ್‌ ಕುಮಾರ್‌ , ಚಿತ್ರತಾರಾ ಮನು ಸೇರಿದಂತೆ ಹಲವರು ಹಾಜರಿದ್ದು,  ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು. ಇನ್ನು ಮುಂದೆ  ತಾಜಾ ಸುದ್ದಿಗಳೊಂದಿಗೆ ಸಿನಿ ಲಹರಿ ನಿಮ್ಮ ಮುಂದೆ.

ಕಾರ್ಯಕ್ರಮದ ಫೋಟೋ ಝಲಕ್…

error: Content is protected !!