ಸಿನಿ ಲಹರಿ ಲಾಂಚ್‌ ಮಾಡಿದ ಶ್ರೀಮುರಳಿ

ಸಿನಿಮಾ ಮಾಧ್ಯಮ ಲೋಕಕ್ಕೆ “ಸಿನಿ ಲಹರಿ ʼ ಎಂಟ್ರಿ

 ರಾಜ್ಯೋತ್ಸವದಂದು  ಸಿನಿ ಲಹರಿ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ

ಸಿನಿ ಲಹರಿ ಲಾಂಚ್‌ ಗೆ ಶ್ರೀ ಮುರಳಿ ಎಂಟ್ರಿ

ಒಂದು ಹೆಜ್ಜೆ ಇಟ್ಟಾಯಿತು. ಬಹು ದಿನದ  ಕನಸು ನನಸಾಯಿತು. ಮಾಧ್ಯಮ ಕ್ಷೇತ್ರದಲ್ಲಿದ್ದು,  ಸಿನಿಮಾಕ್ಕೆ ಸಂಬಂಧಿಸಿದಂತೆ ನಾವೇ ಒಂದು ವೆಬ್‌ ಸೈಟ್‌ ಶುರು ಮಾಡಬೇಕೆನ್ನುವ ಆಸೆಯಿತ್ತು. ಕೊನೆಗೂ ಅದು ಈಡೇರಿದ್ದು  ಈ ವರ್ಷದ ನೆವೆಂಬರ್‌ ೧ ಕ್ಕೆ .ವಿಶೇಷ  ಅಂದ್ರೆ, ಅವತ್ತು ಕನ್ನಡ ರಾಜ್ಯೋತ್ಸವ. ಕಾಕತಾಳೀಯ ಎನ್ನುವಂತೆ ಅಂದೇ ʼ ಸಿನಿ ಲಹರಿʼ  ವೆಬ್‌ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಎರಡು ಉದ್ಘಾಟನೆಗೊಂಡವು.

ಸಿನಿ ಲಹರಿ ವೆಬ್‌ ಸೈಟ್‌ ಲಾಂಚ್‌

ಅಂದು ಸಂಜೆ ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋ ಸಭಾಂಗಣದಲ್ಲಿʼ ಸಿನಿ ಲಹರಿʼ ಉದ್ಘಾಟನೆಯ ವರ್ಣರಂಜಿತ ಕಾರ್ಯಕ್ರಮ ನಡೆಯಿತು. ಅಧಿಕೃತವಾಗಿ ಆಹ್ವಾನಿಸಿದ್ದಕ್ಕಿಂತ ಹೆಚ್ಚೇ ಸ್ನೇಹಿತರು, ಬಂಧುಗಳು, ಒಡನಾಡಿಗಳು , ಹಿತೈಷಿಗಳು  ಬಂದರು. ಕೊರೋನಾ ಕಾರಣಕ್ಕೆ ಹೆಚ್ಚು ಜನರೇ ಬೇಡ ಎಂದುಕೊಂಡಿದ್ದೆವು. ಆದರೆ ದೊಡ್ಡ ಸಂಖ್ಯೆಯ ಜನರೇ ಆಗಮಿಸಿ, ಸಿನಿ ಲಹರಿಗೆ ಮನ ದುಂಬಿ ಹಾರೈಸಿದ್ದನ್ನು ಮರೆಯಲಾಗದು.

ಕಾರ್ಯಕ್ರಮದ ಮುಖ್ಯ ಆಕರ್ಷಣೆ   ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ.  ಆರಂಭದಿಂದಲೂ ಅವರು ನಮ್ಮ ಜತೆಗಿದ್ದರು.  ಹಾಗಾಗಿ ಅವರೇ ಉದ್ಘಾಟನೆ ಮಾಡಬೇಕೆನ್ನುವುದು ನಮ್ಮಗಿದ್ದಆಸೆ. ಅಂತೆಯೇ ನಟ ಶ್ರೀಮುರಳಿ ಅಂದು ಹಾಜರಿದ್ದು “ಸಿನಿ ಲಹರಿ” ವೆಬ್ ಸೈಟ್‌ ಹಾಗೂ ಯುಟ್ಯೂಬ್‌ ಚಾನೆಲ್‌ ಉದ್ಘಾಟಿಸಿದರು. ” ತುಂಬಾ ಆಪ್ತರು ಶುರುಮಾಡಿದ ಸಂಸ್ಥೆ. ಆವರು ಆಹ್ವಾನಿಸದ್ದೇ ಇದಿದ್ದರೂ ನಾನಿಲ್ಲಿಗೆ ಬರುತ್ತಿದ್ದೆ. ಇದು ನನ್ನದೇ ಕಾರ್ಯಕ್ರಮ ಎನ್ನುವಷ್ಟು ಖುಷಿಯಿದೆ. ಈ ಸಂಸ್ಥೆ ದೊಡ್ಡ ಮಟ್ಟಕ್ಕೆ ಬೆಳೆಯಲಿ ʼ ಅಂತ ಹಾರೈಸಿದರು.

ಇನ್ನು ಸಿನಿಲಹರಿಯ ಬೆನ್ನೆಲಬು ಪ್ರತಿಷ್ಟಿತ ಲಹರಿ ಆಡಿಯೋ ಸಂಸ್ಥೆಯ ಮಾಲೀಕ ಲಹರಿ ವೇಲು ಅವರು. ಅವರು ಕೂಡ ಹಾಜರಿದ್ದು ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು.  ಸಂಸ್ಥೆಯ ಆರಂಭಕ್ಕೆ ಅವರೇ ಕಾರಣವಾಗಿದ್ದರಿಂದ, ಆರಂಭದ ದಿನಗಳಲ್ಲಿ ಸಂಸ್ಥೆಯ ರೂವಾರಿಗಳು ಪಟ್ಟ ಪರಿಶ್ರಮ ನೆನಪಿಸಿಕೊಂಡು ಭಾವುಕರಾದರು. ನಟ ರವಿಶಂಕರ್‌ ಗೌಡ, ನಟಿ ಆರೋಹಿನಾರಾಯಣ್‌, ನಿರ್ಮಾಪಕ ಪಿ. ಕೃಷ್ಣ, ಕೆಪಿಸಿಸಿ ಕೋ ಆರ್ಡಿನೇಟರ್‌ ಟಿ. ನಾಗರಾಜ್‌ ವೇದಿಕೆಯಲ್ಲಿದ್ದು , ಉದ್ಘಾಟನೆಗೆ ಮೆರಗು ತಂದರು. ಕೊನೆಯಲ್ಲಿ ರಾಷ್ಟ್ರಪಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಎಂಟ್ರಿ ಕೊಟ್ಟು ನಮ್ಮ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.

ಅಷ್ಟೇ ಅಲ್ಲ, ನಾವು ವೇದಿಕೆಗೆ ಆಹ್ವಾನಿಸಲೇ ಬೇಕಿದ್ದ ಹಲವರು  ಸಭಿಕರ ಸಾಲಿನಲ್ಲಿದ್ದರು. ಅವೆಲ್ಲರೂ ತಾವು ಸೆಲಿಬ್ರಿಟಿಗಳು ಎನ್ನುವ ಯಾವುದೇ ಅಹಂ ಇಲ್ಲದೆ ಕೇವಲ ನಮ್ಮ ಮೇಲಿನ ಪ್ರೀತಿಗೆ ಬಂದಿದ್ದು, ವಿಶೇಷ. ಆ  ಪೈಕಿ ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇ ಗೌಡ,  ನಿರ್ಮಾಪಕ ಕಮ್‌ ನಿರ್ದೇಶಕ ರಘುವರ್ಧನ್‌,  ಹೇಮಂತ್‌ ಕುಮಾರ್‌, ನಿರ್ದೇಶಕರಾದ ಮಂಸೋರೆ, ನಾಗಚಂದ್ರ,  ನೂತನ್‌ ಉಮೇಶ್‌, ಮಾ. ಚಂದ್ರು,  ನಟರಾದ ಮಧು, ‌ ಕಾಕ್ರೋಚ್‌ ಸುಧಿ, ಬೆನಕ ಗುಬ್ಬಿ ವೀರಣ್ಣ, ಯಶ್‌ ರಾಜ್‌,  ಪ್ರಸಾದ್‌, ಸಂಗೀತ ನಿರ್ದೇಶಕ ವೀರ್‌ ಸಮರ್ಥ್‌, ಸಂಕಲನ ಕಾರ ಕಿರಣ್‌ ಕುಮಾರ್‌, ಪಿಆರ್‌ ಒ ವೆಂಕಟೇಶ್‌, ವಿಜಯ್‌ ಕುಮಾರ್‌ , ಚಿತ್ರತಾರಾ ಮನು ಸೇರಿದಂತೆ ಹಲವರು ಹಾಜರಿದ್ದು,  ಸಿನಿ ಲಹರಿ ಉದ್ಘಾಟನೆಗೆ ಸಾಕ್ಷಿಯಾದರು. ಇನ್ನು ಮುಂದೆ  ತಾಜಾ ಸುದ್ದಿಗಳೊಂದಿಗೆ ಸಿನಿ ಲಹರಿ ನಿಮ್ಮ ಮುಂದೆ.

ಕಾರ್ಯಕ್ರಮದ ಫೋಟೋ ಝಲಕ್…

Related Posts

error: Content is protected !!