ಟೈಟಲ್ ಹಾಗೂ ಪೋಸ್ಟರ್ ಫಸ್ಟ್ ಲುಕ್ ಮೂಲಕ ಸೌಂಡ್ ಮಾಡಿದ : ನೋಡಿದವರು ಏನಂತಾರೆ’

ಗುಲ್ಟು ನಂತರ‌ ಮತ್ತೆ ಕ್ಯಾಮೆರಾ ಮುಂದೆ ನವೀನ್ ಶಂಕರ್

ಹಿಪ್ಪೋ ಕಿಡ್ಡೋ ಸಂಸ್ಥೆಯಡಿ ಶೋಭಾ ಗೋಪಾಲ್‌ ಅರ್ಪಿಸಿ, ನಾಗೇಶ್‌ ಗೋಪಾಲ್‌ ಮತ್ತು ಮೋನಿಷಾ ಗೌಡ ನಿರ್ಮಿಸುತ್ತಿರುವ ʻನೋಡಿದವರು ಏನಂತಾರೆʼ ‌ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ. ಗುರುವಾರ ನಟ ಶ್ರೀ‌ಮುರಳಿ ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಮತ್ತು ‘ಅಯೋಗ್ಯ’ ಚಿತ್ರದ ನಿರ್ದೇಶಕ ಮಹೇಶ್‌‌‌ಸಮಾರಭದಲ್ಲಿ ಹಾಜರಿದ್ದು, ಚಿತ್ರ ತಂಡಕ್ಕೆ ಶುಭ ಕೋರಿದರು. ಕುಲದೀಪ್ ಕಾರಿಯಪ್ಪ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಗುಲ್ಟು ಖ್ಯಾತಿಯ ನವೀನ್ ಶಂಕರ್ ಹಾಗೂ ಅಪೂರ್ವ ಭಾರಾದ್ವಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಸದ್ಯಕ್ಕೆ‌ಚಿತ್ರವು ಚಿತ್ರೀಕರಣದ ಹಂತದಲ್ಲಿದೆ.

ಚಿಕ್ಕಮಗಳೂರು, ಮತ್ತು ಬೆಂಗಳೂರಿನಲ್ಲಿ ಎರಡು ಹಂತರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ. ಇಡೀ ಚಿತ್ರದಲ್ಲಿ ಪ್ರಯಾಣ ಹೆಚ್ಚಿರುವುದರಿಂದ ಲೊಕೇಷನ್ನುಗಳು ಕೂಡಾ ಸಾಕಷ್ಟಿವೆಯಂತೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್‌ ಕಾಯ್ಕಿಣಿ ಬರೆಯುತ್ತಿದ್ದಾರಂತೆ.

ಸಕ್ರೆಡ್‌ ಗೇಮ್ಸ್‌ ನಂಥಾ ವೆಬ್‌ ಸಿರೀಸ್‌ ಗೆ ಕೆಲಸ ಮಾಡಿದ್ದ, ಮುಂಬೈ ಉತ್ಸವ್ ಸ್ಟುಡಿಯೋದ ಮಯೂರೇಶ್‌ ಅಧಿಕಾರಿ ಸಂಗೀತ ಸಂಯೋಜನೆ, ಅಶ್ವಿನ್‌ ಕೆನ್ನೆಡಿ ಛಾಯಾಗ್ರಹಣ, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಸುನಿಲ್‌ ವೆಂಕಟೇಶ್‌ ಮತ್ತು ನಿರ್ದೇಶಕರು ಸೇರಿ ಸಂಭಾಷಣೆ ರಚಿಸಿದ್ದಾರೆ. ಕಾಡಿನ ನಡುವೆ ಹಳ್ಳಿ ಮನೆಯ ಸೆಟ್‌ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದ್ದು, ಇನ್ನು ಅರವತ್ತು ದಿನಗಳ ಶೂಟಿಂಗ್‌ ಬಾಕಿ ಇದೆ. ಅಪೂರ್ವ ಭಾರದ್ವಾಜ್, ಹೊಸ ಕಲಾವಿದೆ ರಮ್ಯ ಕೃಷ್ಣ ಮತ್ತು ಇತರರ ತಾರಾಗಣ ಈ ಚಿತ್ರದಲ್ಲಿದೆ.ಇನ್ನು ಚಿತ್ರದ ಟೈಟಲ್ ಕುರಿತು ವಿವರಣೆ ನೀಡುವ ನಿರ್ದೇಶಕ ಕಾರಿಯಪ್ಪ,

ʻನೋಡಿದವರು ಏನಂತಾರೆ?ʼ ಎನ್ನುವ ಕಾರಣಕ್ಕೆ ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ. ಇಷ್ಟೇನಾ ಜೀವನ ಅಂತಾ ಎಷ್ಟೋ ಸಲ ಅನ್ನಿಸುವುದುಂಟು. ಇಂಥಾ ಪ್ರಶ್ನೆಗಳಿಗೆ ಉತ್ತರ ನೀಡುವಂತಾ ಸಿನಿಮಾವಿದು ಎನ್ನುತ್ತಾರೆ.

Related Posts

error: Content is protected !!