ಇಷ್ಟರಲ್ಲಿಯೇ ಒಂದ್ ಸಿನ್ಮಾ ಅನೌನ್ಸ್ ಮಾಡ್ತೀನಿ !

ಇದು ಮತ್ತೆ ಬಂದ ತರುಣ್ ಚಂದ್ರ ಕೊಟ್ಟ ಭರವಸೆ 

ಡೈರೆಕ್ಷನ್ ಮಾಡೋಣ ಅಂತ ಗ್ಯಾಪ್ ತಗೊಂಡೆ, ಆ ನಡುವೆ ಆಕ್ಸಿಡೆಂಟ್ ಆಯ್ತು, ಅದೇ ಇಷ್ಟು ಸಮಯ ತೆಗೆದುಕೊಳ್ತು…
– ಐದು ವರ್ಷಗಳ ನಟನೆಯ ಗ್ಯಾಪ್ಗೆ ಹೀಗೆ ಕಾರಣ ಕೊಟ್ಟು ನಕ್ಕರು’ ಗೆಳೆಯ ‘ಖ್ಯಾತಿಯ ನಟ ತರುಣ್ ಅಲಿಯಾಸ್ ತರುಣ್ ಚಂದ್ರ.

ಹೌದು , ಲವ್ ಗುರು ಖ್ಯಾತಿ ನಟ ತರುಣ್ ನಟನೆಗೆ ಗ್ಯಾಪ್ ಕೊಟ್ಟು ಇಲ್ಲಿಗೆ ಐದು ವರ್ಷ. ಇಷ್ಟು ಟೈಮ್ ಸಿನಿಮಾ ಚಟುವಟಿಕೆಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೆ, ತೆರೆಮರೆಯಲ್ಲೆ ಇದ್ದರು. ಆ ಗ್ಯಾಪ್ ಗೆ ವಿದಾಯ ಹೇಳಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಲವ್ ಗುರು ಹೆಸರಿನ ವಿಡಿಯೋ ಸಾಂಗ್ ಆಲ್ಬಂವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕ್ಯಾಮೆರಾ ಎದುರಿಸಿದ್ದಾರೆ. ಆ ಹಾಡಿನ ಬಿಡುಗಡೆ ಸಂದರ್ಭದಲ್ಲಿ ಮಾತಿಗೆ ಸಿಕ್ಕ ತರುಣ್ , ಇಷ್ಟು ವರ್ಷ ಯಾಕಾಯ್ತು ಗ್ಯಾಪ್? ಈ ಟೈಮ್ನ್ ನಲ್ಲಿ ಏನ್ ಮಾಡಿದ್ರು? ಮತ್ತೆ ಕಲರ್ ಫುಲ್ ದುನಿಯಾಕ್ಕೆ ಹೇಗೆ ಬರ್ತೀದ್ದಾರೆ? ಅದರ ಸಿದ್ದತೆಗಳೇನು? ಇತ್ಯಾದಿ ಕುರಿತ ಕುತೂಹಲದ ಪ್ರಶ್ನೆಗಳಿಗೆ ಉತ್ತರ ನೀಡಿದರು.

‘ ಗೋವಾ ಸಿನಿಮಾ ರಿಲೀಸ್ ಆಗಿದ್ದು 2015, ಆದೇ ಲಾಸ್ಟ್ ಸಿನಿಮಾ. ಅಲ್ಲಿಂದ ಇಲ್ಲಿ ತನಕ ಐದು ವರ್ಷಗಳ ಗ್ಯಾಪ್. ಅದ್ಯಾಕಾಯ್ತು ಅಂತ ಅನೇಕ‌ ಜನರಿಗೆ ಕುತೂಹಲ. ಹಾಗೆಯೇ ಹಲವು ಪ್ರಶ್ನೆ. ಅದಕ್ಕೆ ನಾನು ಹೇಳೋದು ನನ್ನದೇ ಕೆಲವು ಕಾರಣ. ಡೈರೆಕ್ಷನ್ ಮೇಲೆ ನನಗೆ ಮೊದಲನಿಂದಲೂ‌ ಆಸಕ್ತಿ ಇತ್ತು. 2015ರ ಹೊತ್ತಿಗೆ ನಂಗ್ಯಾಕೋ ಅದು ಇನ್ನು ಹೆಚ್ಚಾಗಿ ಕಾಡತೊಡಗಿತ್ತು. ಡೈರೆಕ್ಷನ್ ಕಲಿಬೇಕು ಅಂತ ಗ್ಯಾಪ್ ತಗೊಂಡೆ. ಅಮೆರಿಕದ ಪ್ರತಿಷ್ಟಿತ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡೈರೆಕ್ಷನ್ ಕೊರ್ಸ್ ಮುಗಿಸಿಕೊಂಡು ಬಂದೆ.‌ ಅಲ್ಲಿ‌ಂದ ಸ್ಕ್ರಿಪ್ಟ್ ವರ್ಕ್ ಮಾಡಿ, ಇನ್ನೇನು ಡೈರೆಕ್ಷನ್ ಗೆ ಇಳಿಬೇಕು ಎನ್ನುವಾಗ ಸಣ್ಣದೊಂದು ಆಕ್ಸಿಡೆಂಟ್ವಾಯ್ತು. ಅದು ಇಷ್ಟು ಗ್ಯಾಪ್ ಗೆ ಕಾರಣ ಎನ್ನುವ ಮೂಲಕ ಸತತ ಐದು ವರ್ಷಗಳ ಗ್ಯಾಪ್ ಹಿಂದಿನ ಕಾರಣ ಏನು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು ನಟ ತರುಣ್.

ಐದು ವರ್ಷಗಳ ಗ್ಯಾಪ್ ಗೆ ಇದು ಕಾರಣ ಹೌದು. ಆದರೆ ಈ ಐದು ವರ್ಷದಲ್ಲಿ ತರುಣ್ ಸಿನಿಮಾಕ್ಕೆ ಸಂಬಂಧಿಸಿದಂತೆ ಗ್ರಾಫಿಕ್ಸ್ ವರ್ಕ್ ,ಅನಿಮೇಷನ್ ಕಲಿತುಕೊಂಡಿದ್ದಾರಂತೆ. ಹಾಗೆಯೇ ವರ್ಕ್ಔಟ್ ಮಾಡಿ ವ್ಹೆಟ್ ಲಾಸ್ ಮಾಡಿಕೊಂಡಿದ್ದಾರಂತೆ. ಅದರ ಜತೆಗೆ ಐದಾರು ಕತೆ ರೆಡಿಯಾಗಿವೆಯಂತೆ. ಅವರ ಜತೆಗೆ ಇತರೆ ಸ್ಟಾರ್ ಗೂ ಮುಂದೆ ಸಿನಿಮಾ ಮಾಡೋ ಆಲೋಚನೆ‌ ಇದೆ ಎನ್ನುತ್ತಾರೆ. ಹಾಗೆಯೇ ಇಷ್ಟರಲ್ಲಿ ಒಂದು ಸಿನಿಮಾ ಶುರುವಾಗುತ್ತೆ ಅಂತ ಭರವಸೆ ನೀಡಿದ್ದಾರೆ. ಮತ್ತೆ ಗ್ಯಾಪ್ ಆಗೋಲ್ಲ ಎನ್ನುವ ಮಾತನ್ನು ಒತ್ತಿ ಹೇಳಿದರು.

Related Posts

error: Content is protected !!