ಮಂಸೋರೆ ಮುಂದೆ ಮಾಸ್‌ ಮನ ಸೂರೆ !?

ಮಂಸೋರೆ ಎನ್ನುವುದಕ್ಕೆ ಮತ್ತೊಂದು ಹೆಸರೇ ” ಮಾಸ್‌ ಅಂದ್ರು ಅವಾರ್ಡ್‌ ವಿನ್ನರ್‌ ಡೈರೆಕ್ಟರ್

ಸಕತ್ ಸದ್ದು ಮಾಡುತ್ತಿದೆ “ಆ್ಯಕ್ಟ್ 1978” ಟ್ರೇಲರ್

ಮಂಸೋರೆ ಅಂದ್ರೆ ಕನ್ನಡದ ಪ್ರತಿಭಾವಂತ ನಿರ್ದೇಶಕ. ಚಿತ್ರ ನಿರ್ದೇಶನದಲ್ಲಿ ಎಲ್ಲರದೂ ಒಂದು ದಾರಿಯಾದರೆ, ಮಂಸೋರೆ ಆಯ್ದುಕೊಂಡಿದ್ದೇ ಹೊಸತಾದ ಹಾದಿ. ಆ ಮೂಲಕವೇ ಚೊಚ್ಚಲ ಚಿತ್ರದಿಂದ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾದ ನಿರ್ದೇಶಕ ಎನ್ನುವ ಹೆಗ್ಗಳಿಕೆ ಅವರದು. ಅಷ್ಟೇ ಅಲ್ಲ “ನಾತಿಚೆರಾಮಿʼ ಚಿತ್ರದೊಂದಿಗೆ ಕನ್ನಡಕ್ಕೆ ಐದು ರಾಷ್ಟ್ರ ಪ್ರಶಸ್ತಿ ಬಂದಿದ್ದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ. ಈಗವರು ಬದಲಾಗಿದ್ದಾರೆ. ಬದಲಾಗುವ ಕಾಲ ಅವರಿಗೂ ಬಂದಿದೆ. ಆರ್ಟ್ ಸಿನಿಮಾ ಮೇಕರ್ಸ್ ಎನ್ನುವ ಟಾರ್ಗೆಟ್ ಸಿಂಡ್ರೋಮಕ್ಕೆ ಈಗ ಸರ್ಜರಿ ಗ್ಯಾರಂಟಿ ಆಗಿದೆ. ಯಾಕಂದ್ರೆ ‘ಆ್ಯಕ್ಟ್‌ 1978’ ಚಿತ್ರ ಮಂಸೋರೆ ಸಿನಿ ಬದುಕಿನಲ್ಲಿ ಹೊಸ ಭಾಷೆ ಬರೆಯುವುದು ಖಾತರಿ ಆಗಿದೆ.

ಸದ್ಯಕ್ಕೆ ಮಂಸೋರೆ ನಿರ್ದೇಶಿಸಿ ತೆರೆಗೆ ತರುತ್ತಿರುವ ಚಿತ್ರ’ ಆ್ಯಕ್ಟ್ 1978′ ಚಿತ್ರ. ಟೈಟಲ್‌ ಮೂಲಕವೇ ಕುತೂಹಲ ಮೂಡಿಸಿದ್ದ ಚಿತ್ರವೀಗ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ಗೆ ಸಿದ್ದತೆ ನಡೆಸಿರುವ ಚಿತ್ರ ತಂಡ ಈಗ ಟ್ರೇಲರ್‌ ಮೂಲಕ ಪ್ರಚಾರ ಆರಂಭಿಸಿದೆ. ಕೆಲವೇ ದಿನಗಳ ಹಿಂದಷ್ಟೆ ‌ಥೀಮ್ ಸಾಂಗ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ ವೀಗ  ಟ್ರೇಲರ್‌ ಮೂಲಕ ಸಖತ್‌ ಸದ್ದು ಮಾಡುತ್ತಿದೆ. 2 ನಿಮಿಷ 44 ಸೆಕೆಂಡಿಗಳ ಅವದಿಯ ಈ ಚಿತ್ರದ ಅಧಿಕೃತ ಟ್ರೇಲರ್‌ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎಲ್ಲಾ ಕಡೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಟ್ರೇಲರ್‌ ಲಾಂಚ್‌ ಆದ 24 ಗಂಟೆಗಳಲ್ಲಿ ಅದರ ವೀಕ್ಷಕರ ಸಂಖ್ಯೆ 1 ಲಕ್ಷ ದಾಟಿತ್ತು. ಎರಡನೇ ದಿನಕ್ಕೆ 2
ಲಕ್ಷ ಆಗಿದೆ. ಚಿತ್ರ ರಸಿಕರಲ್ಲಿ ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿದೆ. ಅದೇ ವಿಶ್ವಾಸದ ಲ್ಲೀಗ ತಾವು ಬದಲಾಗಿದ್ದರ ಸುಳಿವು ನೀಡುತ್ತಾರೆ ನಿರ್ದೇಶಕ ಮಂಸೋರೆ. “ಹೌದು, ಇದೊಂಥರ ಸವಾಲಿನ ಸಂದರ್ಭ. ಬರೀ ಆರ್ಟ್‌ ಸಿನಿಮಾ ಡೈರೆಕ್ಟರ್‌ ಎನ್ನುವ ನನ್ನ ಮೇಲಿನ ಟಾರ್ಗೆಟ್‌ ಸಿಂಡ್ರೊಮ್‌ ಕ್ಕೆ ಸರ್ಜರಿ ಮಾಡಬೇಕಂತಲೇ ಈ ಸಿನಿಮಾ ಮಾಡಿದ್ದೇನೆ. ಮಂಸೋರೆ ಎನ್ನುವ ಇನ್ನೊಂದು ಹೆಸರೇ ಮಾಸ್‌ ಅಂತಾಗಬೇಕುʼ ಎನ್ನುವ ಮನದಾಳದ ಮಾತುಗಳನ್ನು ಆಪ್ತವಾಗಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ಮಂಸೋರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ತಾವು ಬದಲಾಗಿದ್ದು, ಬದಲಾಗಿದ್ದರ ಕುರಿತು ಹೀಗೆ ಹೇಳಿಕೊಳ್ಳುವುದಕ್ಕೂ ಕಾರಣ ತಮ್ಮ ಕ್ರಿಯೇಟಿವಿಟಿಯ ಮೇಲಿದ್ದ ಅಪನಂಬಿಕೆಯ ಟಾರ್ಗೆಟ್ ಸಿಂಡ್ರೋಮಾ.ಹೌದು, ಪ್ರಶಸ್ತಿ, ಪುರಸ್ಕಾರಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮುಕುಟ ಪ್ರಾಯ. ದುರಂತ ಅಂದ್ರೆ ಸಿನಿದುನಿಯಾದಲ್ಲಿ ಇದು ಪಕ್ಕಾ ಉಲ್ಟಾ. ಆರ್ಟ್ ಸಿನಿಮಾ‌ ಮಾಡಿ ದೊಡ್ಡ ಮಟ್ಟದ ಪ್ರಶಸ್ತಿ ಪಡೆದವರು, ಕಮರ್ಷಿಯಲ್‌ ಸಿನಿಮಾ ಮಾಡೋದು ಕಷ್ಟ ಎನ್ನುವ ಆರೋಪಕ್ಕೆ ಸಿಲುಕುತ್ತಾರೆ. ಬಹಳಷ್ಟು ದಿನ ಅಂತಹ ಅಪ ನಂಬಿಕೆಯ ಸಿಂಡ್ರೋಮ್‌ ಕ್ಕೆ ಗುರಿಯಾಗಿ ನೋವು ಅನುಭವಿಸಿದವರ ಪೈಕಿ ಪ್ರತಿಭಾವಂತ ನಿರ್ದೇಶಕ ಮಂಸೋರೆ ಕೂಡ ಒಬ್ಬರು.

ಈಗ ಅದು ಗತಕಾಲಕ್ಕೆ ಜಾರುವುದು ಗ್ಯಾರಂಟಿ. ಸದ್ಯಕ್ಕೆ ಆಕ್ಟ್ 1978 ಸದ್ದು ಮಾಡುತ್ತಿರುವ ಪರಿ ನೋಡಿದರೆ, ಮಂಸೋರೆ ಮಾಸ್ ಪ್ರೇಕ್ಷಕರ ಮನ ಸೂರೆ ಗೊಂಡು ಮಾಸ್ ಮಂಸೋರೆ ಅಂತ ಜನಪ್ರಿಯತೆ ಪಡೆದುಕೊಂಡರು ಅಚ್ಚರಿ ಇಲ್ಲ. ಸದ್ಯಕ್ಕೆ ಈ ಸಿನಿಮಾದ ಟ್ರೇಲರ್ ತೀವ್ರ ಕುತೂಹಲ ಹುಟ್ಟಿಸಿದೆ. ಒಂದು ಹೊಸತಾದ ತಾಜಾ ಕತೆ ಇಲ್ಲಿದೆ. ಅದೆಲ್ಲಕ್ಕಿಂತ ಥ್ರಿಲ್ಲರ್ ಕಥಾ ಹಂದರವೇ ಇಲ್ಲಿ ರೋಚಕವಾಗಿದೆ. ದಂಡೀ ಪಾತ್ರಗಳು ಇಲ್ಲಿವೆ. ದೊಡ್ಡ ತಾರಾಗಣ ಇಲ್ಲಿದೆ.

ಟ್ರೇಲರ್ ನಲ್ಲಿ ಹಲವು ವಿಷಯಗಳು ರಿವೀಲ್ ಆಗಿವೆ. ಒಂದು ಸಮಸ್ಯೆಯ ಇತ್ಯರ್ಥಕ್ಕೆ’ ಆ್ಯಕ್ಟ್ 1978′ ಬೇಕಿತ್ತು ಎನ್ನುವುದನ್ನು ಈ ಸಿನಿಮಾ ಹೇಳ ಹೊರಟಿದೆ ಎನ್ನುವುದನ್ನು ಟ್ರೇಲರ್ ಬಿಚ್ಚಿಟ್ಟಿದೆ. ಇದರಾಚೆ ಈ ಸಿನಿಮಾದ ಟೆಕ್ನಿಕಲ್ ಪ್ರದರ್ಶನ ಕೂಡ ಆಗಿದೆ. ಪತ್ರಕರ್ತ ಹಾಗೂ ಸಿನಿಮಾ ಪ್ರೇಮಿ ದಿನೇಶ್ ಕುಮಾರ್ ( ದಿನೂಸಚಂ) ಸಿನಿಮಾ ನೋಡಿದ್ದಾರೆ. ಅವರ ಪ್ರಕಾರ ಇದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಕನ್ನಡದ ಮಟ್ಟಿಗೆ ಇದೊಂಥರ ಲ್ಯಾಂಡ್ ಮಾರ್ಕ್ ಸಿನಿಮಾ ಮೂವೀ.
ರಿಲೀಸ್ ಮುನ್ನವೇ ‘ಆ್ಯಕ್ಟ್ 1978 ‘ಈ ಮಟ್ಟಕ್ಕೆ ಸದ್ದು ಮಾಡುತ್ತಿರುವುದರ ಹಿಂದೆ ಮಂಸೋರೆ ಅವರ ಸಿನಿಮಾ ಕಟ್ಟುವಿಕೆಯೇ ಕಾರಣ. ಹಾಗೆಯೇ ಒಂದು ಸಿನಿಮಾ ಮಾಡುವಾಗ ವಹಿಸುವ ಜಾಗ್ರತೆ, ಎಚ್ಚರವೂ ಕಾರಣ.

ಸಾಕಷ್ಟು ರಿಸರ್ಚ್ ಮಾಡಿಯೇ ಈ ಸಿನಿಮಾದ ಕತೆ ಬರೆದು, ಗೆಳೆಯರ ಜತೆ ಚರ್ಚಿಸಿ ಈ ಸಿನಿಮಾ ಮಾಡಿದ್ದು ಇವತ್ತು, ಒಂದಷ್ಟು ಸದ್ದು ಮಾಡಲು ಕಾರಣವಾಗಿದೆ. ಚಿತ್ರೋದ್ಯಮದಲ್ಲಿ ದೊಡ್ಡ ಬೆಂಬಲವೂ ಸಿಗುತ್ತಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರದ ಥೀಮ್ ಸಾಂಗ್ ಲಾಂಚ್ ಮಾಡಿ ಶುಭ ಹಾರೈಸಿದ ಬೆನ್ನಲೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ರೇಲರ್ ಲಾಂಚ್ ಮಾಡಿ ಶುಭ ಹಾರೈಸಿದರು. ಇದು ಚಿತ್ರ ತಂಡಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ. ಮಂಸೋರೆ ಹೆಸರು ಮಾಸ್ ಮಂಸೋರೆ ಅಂತಾಗುವುದು ಗ್ಯಾರಂಟಿ ಎನ್ನುವ ವಿಶ್ವಾಸ ಅವರಲ್ಲೂ ಇದೆ. ಬದಲಾವಣೆ ಜಗದ ನಿಯಮ.ಆಲ್ ದಿ ಬೆಸ್ಟ್ ಮಂಸೋರೆ.

Related Posts

error: Content is protected !!