ಸೋಷಲ್ ಮೀಡಿಯಾದಲ್ಲಿ ವೈರಲ್ ಆಯ್ತು ಯೂನಿಕ್ ಕಾನ್ಸೆಫ್ಟ್ ನ ಮೋಷನ್ ಪೋಸ್ಟರ್
ಕನ್ನಡದಲ್ಲೂ ಕ್ರಿಯೇಟರ್ಸ್ ಇದ್ದಾರೆ ಅಂತ ತೋರಿಸುವುದೇ ಪೆಂಟಗನ್ʼ ಅಂದ್ರು ಗುರು
ಆಂಥಾಲಜಿ ಕಥಾ ಹಂದರದ ಸಿನಿಮಾಗಳ ಪೈಕಿ ಕನ್ನಡದಲ್ಲೀಗ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ʼಪೆಂಟಗನ್ʼ. ಐದು ಕತೆ, ಐವರು ನಿರ್ದೇಶನದ ಮೂಲಕ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಬಂಡವಾಳ ಹಾಕಿದವರು ನಿರ್ದೇಶಕ ಗುರುದೇಶಪಾಂಡೆ. ಈಗ ಈ ಚಿತ್ರ ಮೋಷನ್ ಪೋಸ್ಟರ್ ಮೂಲಕ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಜೈಂಕಾರ್ ಮ್ಯೂಜಿಕ್ ಆಡಿಯೋ ಸಂಸ್ಥೆಯ ಆಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಹೊರ ಬಂದಿರುವ ಈ ಮೋಷನ್ ಪೋಸ್ಟರ್ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಕ್ಷಕರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಅಪಾರ ಮೆಚ್ಚುಗೆ ಕೂಡ ಸಿಕ್ಕಿದೆ. ಅದೆಲ್ಲದಕ್ಕೂ ಕಾರಣವಾಗಿದ್ದು ಯೂನಿಕ್ ಕಾನ್ಸೆಫ್ಟ್‌ನ ಮೋಷನ್ ಪೋಸ್ಟರ್.
ಐದು ಕತೆಗಳು, ಹಾಗೆಯೇ ಐದು ಮಂದಿ ನಿರ್ದೇಶಕರ ಸಿನಿಮಾ ಅಂದಾಗ ಮೊದಲು ಕುತೂಹಲ ಇರೋದು ಸಿನಿಮಾದ ಬಗ್ಗೆ ಅಲ್ಲ, ಬದಲಿಗೆ ಅದರ ಪೋಸ್ಟರ್, ಆ ನಂತರ ಟೀಸರ್, ತದನಂತರ ಟ್ರೇಲರ್. ನಾಳೆ “ಪೆಂಟಗನ್ʼ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಅಗುತ್ತೆ ಅಂದಾಗಿನಿಂದಲೂ ಚಿತ್ರ ಪ್ರೇಕ್ಷಕರಲ್ಲಿ ಇದ್ದ ಕುತೂಹಲವೂ ಅದೇ ಆಗಿತ್ತು. ಅಂತಹ ಕುತೂಹಲಕ್ಕೆ ತೆರೆ ಬಿದ್ದಿದ್ದು ಅದರ ಮೋಷನ್ ಪೋಸ್ಟರ್ ಹೊರ ಬಂದಾಗಲೇ.
ಇದು ಎಲ್ಲಾ ಆಂಥಾಲಜಿ ಸಿನಿಮಾಗಳ ಬಗೆಗೂ ಹುಟ್ಟಬಹುದಾದ ಸಹಜ ಕುತೂಹಲವೂ ಕೂಡ. ಯಾಕಂದ್ರೆ, ಬೇರೆ ಬೇರೆಯಾದ ಐದು ಕತೆಗಳನ್ನು ಒಂದೆಡೆ ಜೋಡಿಸಿಕೊಂಡು ಆ ಮೂಲಕ ಸಿನಿಮಾ ಮಾಡುತ್ತೇವೆ, ಅದನ್ನು ಜನರಿಗೆ ತೋರಿಸಿ ರಂಜಿಸುತ್ತೇವೆ ಅನ್ನೋದು ಅಷ್ಟು ಸುಲಭದ ಕೆಲಸ ಅಲ್ಲ. ಅದೊಂದು ಸವಾಲಿನ ಕೆಲಸ. ಆದರೂ ಈಗ “ಪೆಂಟಗನ್ʼ ಚಿತ್ರ ತನ್ನ ಪೋಸ್ಟರ್ಸ್ ಹಾಗೂ ಮೋಷನ್ ಪೋಸ್ಟರ್ ಮೂಲಕ ಒಂದಷ್ಟು ಯೂನಿಕ್ ಕಾನ್ಸೆಫ್ಟ್ ತೋರಿಸಿ ಕುತೂಹಲ ಮೂಡಿಸಿದ್ದು ಗಮನಾರ್ಹ.
ಅ ೧ ನಿಮಿಷ ೨ ಸೆಕೆಂಡುಗಳಷ್ಟು ಅವದಿಯ ಅದರ ಮೋಷನ್ ಪೋಸ್ಟರ್ ನಲ್ಲಿ ಯೂನಿಕ್ ಆದ ನೋಟವಿದೆ. ಬಹುತೇಕ ಗ್ರಾಫಿಕ್ಸ್ ಬಳಸಿಯೇ ಈ ಮೋಷನ್ ಪೋಸ್ಟರ್ ಕ್ರಿಯೇಟ್ ಮಾಡಲಾಗಿದೆ. ಅಲ್ಲಿಯೇ ಕಾಗೆಯೇ ಹೈಲೈಟ್ಸ್. ಕಾಗೆಯನ್ನು ಅಪಶಕುನ ಅಂತೆಲ್ಲ ತಿಳಿಯುವವರಿಗೆ ಈ ಕಾಗೆ ಅಂತಹದಲ್ಲ ಅಂತಾರೆ ನಿರ್ದೇಶಕ ಕಮ್ ನಿರ್ಮಾಪಕ ಗುರುದೇಶ ಪಾಂಡೆ. ಇನ್ನು ಈ ಚಿತ್ರದ ಮೋಷನ್ ಪೋಸ್ಟರ್ ಲಾಂಚ್ ಆಗುವ ಮುನ್ನವೇ ಅದರ ಐದು ಕತೆಗಳ ಬೇರೆ ಬೇರೆಯ ವಿಭಿನ್ನ ಪೋಸ್ಟರ್ ಆಗಲೇ ಸೋಷಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಚಿತ್ರತಂಡವೇ ಆ ಪೋಸ್ಟರ್ ಲಾಂಚ್ ಮಾಡಿತ್ತು. ಅವೆಲ್ಲವೂ ಅಲ್ಲಿನ ಕತೆಗಳಿಗೆ ಪೂರಕವಾಗಿ ಬಂದಿದ್ದವು. ಒಬ್ಬೊಬ್ಬರದು ಒಂದೊಂದು ಥರ.
ಒಬ್ಬರದು ಸ್ವೀಟೆಸ್ಟ್ ಆಗಿದ್ದರೆ, ಮತ್ತೊಬ್ಬರದು ಹಾಟೆಸ್ಟ್, ಮಗದೊಬ್ಬರದು ಸ್ವೀಟು ಮತ್ತು ಹಾಟ್ ಗೆ ವಿರುದ್ಧವಾದ ಗನ್ ಪಾಯಿಂಟ್. ಅದರಾಚೆ ಮೋಷನ್ ಪೋಸ್ಟರ್ ಮಾತ್ರ ಅವೆಲ್ಲವುದರ ಮಿಕ್ಸರ್. ತುಂಬಾ ಡಿಫೆರೆಂಟ್ ಆಗಿಯೇ ಮೂಡಿ ಬಂದಿದೆ. ಐದು ಜನ ನಿರ್ದೇಶಕರ ಕತೆಗಳು ಹೈಲೈಟ್ಸ್ ಆಗುವ ಹಾಗೆ ಮೋಷನ್ ಪೋಸ್ಟರ್ ಕ್ರಿಯೇಟ್ ಮಾಡಿರುವುದು ವಿಶೇಷವಾಗಿದೆ. ಅಷ್ಟು ಕತೆಗಳಿಗೆ ಕೊಂಡಿಯಾಗಿ ಕಾಗೆಯನ್ನು ತೋರಿಸಲಾಗಿದೆ. ಅಲ್ಲಿನ ಕತೆಗಳಿಗೆ ಕಾಗೆಗೂ ಅದೆಂತಹದೋ ನಂಟು ಗೊತ್ತಿಲ್ಲ. ಅದಕ್ಕೆ ಚಿತ್ರ ನೋಡಿ ಅಂತಾರೆ ನಿರ್ದೇಶಕರು. ರಿಯಲ್ ಸ್ಟಾರ್ ಉಪೇಂದ್ರ ಈ ಪೊಸ್ಟರ್ ಲಾಂಚ್ ಮಾಡಿ ಶುಭ ಹಾರೈಸಿದ್ದಾರೆ.
ಇನ್ನು ಜೀ ಸಿನಿಮಾಸ್ ಪ್ರೊಡಕ್ಷನ್ ಅಡಿಯಲ್ಲಿ ಗುರು ದೇಶಪಾಂಡೆ ಈ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಲ್ಲದೆ, ಅದರಲ್ಲಿನ ಐದು ಕತೆಗಳಲ್ಲಿ ಒಂದು ಕತೆಗೆ ಆಕ್ಷನ್ ಕಟ್ ಹೇಳಿದ್ದಾರೆ.ಉಳಿದಂತೆ ಚಂದ್ರ ಮೋಹನ್, ಕಿರಣ್ ಕುಮಾರ್, ರಘು ಶಿವಮೊಗ್ಗ ಹಾಗೂ ಆಕಾಶ್ ಶ್ರೀವಾತ್ಸ ನಾಲ್ಕು ಕತೆಗಳಿಗೆ ನಿರ್ದೇಶನ ಮಾಡಿದ್ದಾರೆ. ಐದು ಕತೆಗಳ ಪೈಕಿ ಈಗಾಗಲೇ ಮೂರು ಕತೆಗಳಿಗೆ ಚಿತ್ರೀಕರಣ ಮುಗಿದಿದೆ. ಬೆಂಗಳೂರು ಹಾಗೂ ಹೊರವಲಯದ ವಿವಿಧ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆಯಂತೆ. ಉಳಿದ ಎರಡು ಕತೆಗಳಿಗೆ ಇನ್ನು ಚಿತ್ರೀಕರಣ ಬಾಕಿ ಇದೆ. ಇನ್ನು ಐದು ಕತೆಗಳಲ್ಲಿ ಒಂದು ಕತೆಗೆ ಅದ್ವೈಂತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದರೆ, ಉಳಿದ ನಾಲ್ಕು ಕತೆಗಳಿಗೆ ಕಿರಣ್ ಹಂಪಾಪುರ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕಲಾವಿದರು ಸೇರಿದಂತೆ ಉಳಿದ ವಿವರಗಳನ್ನು ಚಿತ್ರದ ಇಷ್ಟರಲ್ಲಿಯೇ ನೀಡಲಿದೆಯಂತೆ.