ವಿಕ್ಕಿಯ ʼಕಾಲಾ ಪತ್ಥರ್ʼ‌ ಟೈಟಲ್‌ ಗೆ ಆ ರೌಡಿ ಖ್ಯಾತೆ ತೆಗೆದಿದ್ದು ನಿಜವೇ?

ಫಸ್ಟ್‌ ಲುಕ್‌ ಲಾಂಚ್‌ ದಿನವೇ ಸೋಷಲ್‌ ಮೀಡಿಯಾ ಟ್ರೆಂಡಿಂಗ್ನಲ್ಲಿ ಸದ್ದು ಮಾಡಿತು ವಿಕ್ಕಿ ವರುಣ್‌ ಸಿನಿಮಾದ ಫಸ್ಟ್‌ ಲುಕ್‌

ಯುವ ನಟ ವಿಕ್ಕಿ ವರುಣ್‌ ಅಭಿನಯದ ʼಕಲಾಪತ್ಥರ್‌ʼ ಟೈಟಲ್‌ ಕಾಂಟ್ರೋವರ್ಸಿ ಆಗಿದೆ. ಟೈಟಲ್‌ ಪೋಸ್ಟರ್‌ ಲಾಂಚ್‌ ಅದ ದಿನವೇ ಅದರ ಟೈಟಲ್‌ ಗೆ ಬೆಂಗಳೂರಿನ ಮಾಜಿ ರೌಡಿಯೊಬ್ಬರು ಆಕ್ಷೇಪಣೆ ಎತ್ತಿದ್ದಾರೆನ್ನುವ ಸುದ್ದಿ ಇದೆ. ಸದ್ಯಕ್ಕೆ ಇದಿನ್ನು ಕನ್ಫರ್ಮ್‌ ಆಗಿಲ್ಲ. ಆದರೆ ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡಿದೆ. ಟೈಟಲ್‌ಗೆ ಆಕ್ಷೇಪ ಎತ್ತಿ ಮಾಜಿ ರೌಡಿಯೊಬ್ಬರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರಂತೆ. ತಮ್ಮದೇ ಬಯೋಗ್ರಪಿ ಎತ್ತಿಕೊಂಡು ಕೆಲವರು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂಬುದಾಗಿ ಆತ ದೂರು ಸಲ್ಲಿಸಿದ್ದಾನಂತೆ ಎಂಬುದಾಗಿ ಸುದ್ದಿ ಇತ್ತು. ಆದರೆ ಇದು ಎಷ್ಟು ಸತ್ಯ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಸಂಪರ್ಕಿಸಿದಾಗ ಅಂತಹ ಯಾವುದೇ ದೂರು ತಮಗೆ ಬಂದಿಲ್ಲ ಎಂಬುದು ಸ್ಪಷ್ಟನೆ ಬಂತು.

ಕೊನೆಗೆ ಆತ ಸೋಷಲ್‌ ಮೀಡಿಯಾದಲ್ಲಾದರೂ ಅಂತಹ ಆಕ್ಷೇಪಣೆ ಎತ್ತಿದ್ನ ಅಂತಲೂ ಹುಡುಕಾಡಿದರೆ, ಅಲ್ಲೂ ಆತನ ಆಕ್ಷೇಪಣೆಯ ಸುಳಿವು ಕಾಣಲಿಲ್ಲ. ಅಂತಿಮವಾಗಿ ಕಾಡಿದ್ದು, ಈ ವಿವಾದದ ಶುರುವಾಗಿದ್ದು ಎಲ್ಲಿಂದ ಅಂತ ? ಅದು ಚಿತ್ರ ತಂಡಕ್ಕೂ ಗೊತ್ತಿರಲಿಲ್ಲ. ಅದೇನೆ ಇರಲಿ, ವಿಕ್ಕಿ ವರುಣ್‌ ಅಭಿನಯದ “ಕಾಲಾ ಪತ್ಥರ್‌ʼ ಚಿತ್ರಆರಂಭದಲ್ಲೇ ಸುದ್ದಿ ಮಾಡಿದೆ. ಆನ್‌ ಲೈನ್‌ ಟ್ರೆಂಡಿಂಗ್‌ ನಲ್ಲಿ ಫಸ್ಟ್‌ ಡೇ ಸಖತ್‌ ಟ್ರೆಂಡಿಂಗ್‌ ನಲ್ಲಿತ್ತು. ಒಂದಷ್ಟು ಗ್ಯಾಪ್‌ ನಂತರ ಮತ್ತೆ ಎಂಟ್ರಿ ಆಗುತ್ತಿರುವ ವಿಕ್ಕಿಯ ಕಮರ್ಷಿಯಲ್‌ ಲುಕ್‌ ವರ್ಕ್‌ ಆಗುತ್ತೆ ಎನ್ನುವುದರ ಸೂಚನೆಯಂತೂ ಆರಂಭದಲ್ಲೇ ಸಿಕ್ಕಿದೆ.

Related Posts

error: Content is protected !!