ಟಕಿಲಾ ನಶೆ ಯಲ್ಲಿ ನಿಖಿತಾ ಸ್ವಾಮಿ !

Share on facebook
Share on twitter
Share on linkedin
Share on whatsapp
Share on telegram

ನಾಗಚಂದ್ರ ನಿರ್ಮಾಣ ಹಾಗೂ ಪ್ರವೀಣ್‌ ನಾಯಕ್‌ ನಿರ್ದೇಶನದ ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಹೀರೋ, ನಿಖಿತಾ ಸ್ವಾಮಿ ಹೀರೋಯಿನ್

ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ಈಗ ಚಿತ್ರ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ. ʼವಿದ್ಯಾರ್ಥಿʼ ಹಾಗೂ “ ಮುನಿಯʼ ಹಾಗೂ “ ಜನಧನ್‌ʼ  ಚಿತ್ರಗಳ ನಿರ್ದೇಶನದ ನಂತರವೀಗ ಅವರೇ ಒಂದು ಚಿತ್ರದ  ನಿರ್ಮಾಣಕ್ಕೆ ಮುಂದಾ ಗಿದ್ದಾರೆ. ಈ ಚಿತ್ರಕ್ಕೆ ಕೆ. ಪ್ರವೀಣ್‌ ನಾಯಕ್‌  ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.  ಅಂದ ಹಾಗೆ ಈ ಜೋಡಿಯ ಚಿತ್ರವೇ “ಟಕಿಲಾʼ.

ಚಿತ್ರದ ಶೀರ್ಷಿಕೆಯೇ  ಇಲ್ಲಿ ವಿಶೇಷ. ಯಾಕಂದ್ರೆ ಟಿಕಿಲಾ ಅಂದ್ರೆ ಒಂದ್ರೀತಿಯ ನಶೆ.ಅದನ್ನಿಲ್ಲಿ ಅವರು ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನೀಡಲು ಹೊರಟಿದ್ದಾರಂತೆ.  ಈ ತಿಂಗಳ ಅಂತ್ಯದ ಹೊತ್ತಿಗೆ ಸಿನಿಮಾ ಶುರುವಾಗುತ್ತಿದೆ.ಈಗಾಗಲೇ ಈ ಜೋಡಿ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡಿದೆ. ಹಾಗೆಯೇ ನಾಯಕ-ನಾಯಕಿಯನ್ನು ಫೈನಲ್‌ ಮಾಡಿಕೊಂಡಿದೆ. ಯುವ ನಟ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಇಲ್ಲಿ ಜೋಡಿಯಾಗಿದ್ದಾರೆ.

ಇದೊಂದು ಲವ್‌, ಸೆಂಟಿಮೆಂಟ್‌ ಹಾಗೂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಅದಕ್ಕೆ ತಕ್ಕಂತೆ ಯಂಗ್‌ ಪೇರ್‌ ಬೇಕಿತ್ತು. ಆದಕ್ಕೆ ಪೂರಕವಾಗಿ ನಾವು ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ  ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕಥೆಗೆ ಈ ಜೋಡಿ  ಆಫ್ಟ್‌ ಆಗಿದೆ ಎನ್ನುತ್ತಾರೆ ನಿರ್ಮಾಪಕ ನಾಗಚಂದ್ರ ಮರಡಿಹಳ್ಳಿ.

ಇನ್ನು ಒಬ್ಬ ನಿರ್ದೇಶಕ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ತಾನು ನಿರ್ದೇಶಕರಾಗಿರುವ ಕೆ. ಪ್ರವೀಣ್‌ ನಾಯಕ್‌ ಅವರಿಗೆ ಇದು ನಾಲ್ಕನೇ ಚಿತ್ರ. ಈಗಾಗಲೇ ಅವರು ʼಜಡ್‌ʼ, ʼಹೂಂ ಅಂತೀಯಾ, ಉಹೂಂ ಅಂತೀಯಾʼ ಹಾಗೂ ʼಮೀಸೆ ಚಿಗುರಿದಾಗʼ ಚಿತ್ರಗಳನ್ನು ನಿರ್ದೇಶಿಸಿದ್ದರು. ಅದೇ ಅನುಭವದಲ್ಲೀಗ ಟಕಿಲಾ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಹಾಗೆಯೇ ಚಿತ್ರ ತಂಡ ಅನುಭವಿ ತಂತ್ರಜ್ಣರನ್ನೇ ಆಯ್ಕೆ ಮಾಡಿಕೊಂಡಿದೆ.ಪಿ.ಕೆ.ಎಚ್.‌ ದಾಸ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.ಟಾಪ್‌ ಸ್ಟಾರ್‌ ರೇಣು ಸಂಗೀತ ನಿರ್ದೇಶನವಿದೆ. ಗಿರೀಶ್‌ ಸಂಕಲನ ಮಾಡುತ್ತಿದ್ದಾರೆ. ಪ್ರಶಾಂತ್‌ ಕಲೆಯ ಹೊಣೆ ಹೊತ್ತುಕೊಂಡಿದ್ಧಾರೆ. ತಾರಾಗಣದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ನಿಖಿತಾ ಸ್ವಾಮಿ ಅವರೊಂದಿಗೆ  ಸುಮನ್‌, ಜಯರಾಜ್‌, ಸುಷ್ಮಿತಾ, ಪ್ರವೀಣ್‌ ನಾಯಕ್‌ ಇದ್ದಾರೆ.  ಹಾಗೆಯೇ ಬೆಂಗಳೂರು, ನೆಲಮಂಗಲ, ದೇವರಾಯನ ದುರ್ಗ ಹಾಗೂ ಸಕಲೇಶಪುರ ಸುತ್ತಮುತ್ತ ಚಿತ್ರೀಕರಣಕ್ಕೆ ಚಿತ್ರ ತಂಡ ಪ್ಲಾನ್‌ ಹಾಕಿಕೊಂಡಿದೆ. ಸದ್ಯಕ್ಕೆ ನಿರ್ಮಾಪಕ ನಾಗಚಂದ್ರ ಹಾಗೂ ನಿರ್ದೇಶಕ ಪ್ರವೀಣ್‌ ನಾಯಕ್‌ ಇದಿಷ್ಟು ಮಾಹಿತಿ ರಿವೀಲ್‌ ಮಾಡಿದೆ.

Related Posts

error: Content is protected !!