Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಬಹುದಿನಗಳಿಂದ ಖಾಲಿ ಇದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಈಗ ಅಧ್ಯಕ್ಷರನ್ನು ನೇಮಕ ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ ಹಿರಿಯ ಸಿನಿಮಾ ಪತ್ರಕರ್ತ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಅವರನ್ನು ನೇಮಕ ಮಾಡಿದ್ದು, ಮಂಗಳವಾರ ಸಂಜೆ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ʼಲಂಕೇಶ್ ಪತ್ರಿಕೆʼಯಲ್ಲಿ ಸಿನಿಮಾ ಬರಹಗಾರರಾಗಿದ್ದ ಸದಾಶಿವ ಶೆಣೈ ಅಲ್ಲಿಯೇ ಬಹುಕಾಲ ಸೇವೆ ಸಲ್ಲಿಸಿದ್ದಾರೆ. ಸಿನಿಮಾ ರಂಗದ ಜತೆಗೆ ತುಂಬಾ ಆತ್ಮೀಯ ಒಡನಾಟ ಹೊಂದಿದ್ದು ನಟರಾದ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಅವರ ಕುರಿತು ಪುಸ್ತಕ ಹೊರ ತಂದಿದ್ದಾರೆ. ಲಂಕೇಶ್ ಪತ್ರಿಕೆಯ ನಂತರ ಇತ್ತೀಚೆಗೆ ಅವರು ಬಿ ಟಿವಿಯಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಹವ್ಯಾಸಿ ಬರಹಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ಪ್ರೆಸ್ ಕ್ಲಬ್ ಗೆ ಎರಡು ಅವದಿಗೆ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಹಾಗೆಯೇ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿದ್ದಾರೆ. ಇದೀಗ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಅವರು ನೇಮಕ ಆಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.
ಹಿರಿಯ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಪತ್ರಕರ್ತರು ಮಾತ್ರವಲ್ಲ, ಸೂಕ್ಷ್ಮ ಸಂವೇದನೆಯ ಲೇಖಕರು ಹೌದು. ಅವರು ಬರೆದ ʼ ನಂಜಿಲ್ಲದ ಪದಗಳುʼ ಕವನ ಸಂಕಲನದ ಕೃತಿಗೆ ಸಾಕಷ್ಟು ಪ್ರಶಸ್ತಿ ಬಂದಿವೆ. ಸಾಹಿತ್ಯದ ಜತೆಗೆ ಸಧಬಿರುಚಿಯ ಸಿನಿಮಾಗಳಂದ್ರೆ ಅವರಿಗೆ ಅತೀವ ಆಸಕ್ತಿ. ಕನ್ನಡದ ಜತೆಗೆ ಅನ್ಯ ಭಾಷೆಗಳಲ್ಲೂ ಬರುವ ಕಲಾತ್ಮಕ ಹಾಗೂ ಸಾಮಾಜಿಕ ಕಾಳಜಿಯ ಕಮರ್ಷಿಯಲ್ ಸಿನಿಮಾಗಳನ್ನು ನಿರಂತರವಾಗಿ ನೋಡುತ್ತಾ, ವಿಮರ್ಶಿಸುತ್ತಾ ಬರುತ್ತಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಅಭಿಯಾನ ಶುರುವಾಗಿರುವ ಈ ಹೊತ್ತಲ್ಲಿ ಅವರು, ಹಿರಿಯ ನಟ ವೈಜನಾಥ್ ಬಿರಾದರ್ ಅವರನ್ನು ಶಿಫಾರಸ್ಸು ಮಾಡಿ ಬರೆದ ಬರಹ ಇಲ್ಲಿದೆ. ಪದ್ಮಶ್ರೀ ಪ್ರಶಸ್ತಿಗೆ ಬಿರಾದರ್ ಯಾಕೆ, ಹೇಗೆ ಅರ್ಹರು ಅನ್ನೋದಕ್ಕೆ ಅವರು ಕೊಟ್ಟ ಕಾರಣಗಳು ಇಲ್ಲಿವೆ . ಓವರ್ ಟು ರವಿಕುಮಾರ್..
ಕನ್ನಡದ ಉತ್ತರಕರ್ನಾಟಕದ ಜವ್ಹಾರಿ ನಟ ವೈಜನಾಥ್ ಬಿರಾದರ್ ಕನ್ನಡ ಚಿತ್ರರಂಗದಲ್ಲಿ ನಟನೆಯ ಗೀಳಿಗೆ ಬಿದ್ದು ಬೀದರ್‌ನಿಂದ ಬೆಂಗಳೂರಿಗೆ ಬಂದು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡ ಕೃಷಿಕುಟುಂಬ ಬಿರಾದಾರ್ ತಾಯಿಯಿಂದ ಪಡೆದ ಹಾಡು,ನಟನೆಯೆ ಚಿತ್ರರಂಗದ ಗೀಳು ಹಚ್ಚಿತು ಎನ್ನಬಹುದು. ಕೇವಲ ಮೂರನೆ ಕ್ಲಾಸ್ ಓದಿದ ಬಿರಾದಾರ್ ಗೆ ನಾಲ್ಕನೆ ಕ್ಲಾಸ್ ಓದಿ ಮೇರು ನಟರಾದ ಡಾ.ರಾಜಕುಮಾರ ಅವರು ಆದರ್ಶವಾಗಿ ಕಂಡರು.ಬೆಂಗಳೂರೆಂಬ ಮಾಯಾನಗರಿಯಲ್ಲಿ ವರ್ಷಾನುಗಟ್ಟಲೆ ಅನ್ನ ನೀರು ನೆರಳಿಲ್ಲದೆ ಪಡಬಾರದ ಕಷ್ಟ ಪಟ್ಟ ಬಿರಾದರ್ ನ್ನು ಗುರುತಿಸಿ ಚಿತ್ರದಲ್ಲಿ ಅವಕಾಶ ಕೊಟ್ಟವರು ಅನುಭವ ಕಾಶಿನಾಥ್.ಬಿರಾದಾರ್ ಕನ್ನಡ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆಗಿಬಿಟ್ಟರು. ಭಿಕ್ಷುಕ,ಕುಡುಕ ಪಾತ್ರಗಳೆ ಅವರಿಗೆ ಖಾಯಂ ಆಗಿ ಚಿತ್ರರಂಗದಲ್ಲಿ ನೆಲೆಯೂರಿದರು.ಭಿಕ್ಷುಕ ಪಾತ್ರಗಳಿಗೆ ಸೀಮಿತರಾದ ಬಿರಾದಾರ್ ಎಂದಿಗೂ ನೊಂದುಕೊಳ್ಳಲಿಲ್ಲ. ‘ ಭಿಕ್ಷುಕ ಪಾತ್ರವೆ ನನ್ನ ಜೀವನದ ಅಕ್ಷಯ ಪಾತ್ರೆ’ ಎಂದು ಸಂತೃಪ್ತರಾಗಿದ್ದರು. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ತಮ್ಮದೆ ಅಭಿಮಾನ ವಲಯ ವನ್ನು ಹೊಂದಿರುವ ಬಿರಾದಾರ್ ಅವರ ಅಪ್ರತಿಮ ಪ್ರತಿಭೆಗೆ ಕನ್ನಡಿ ಯಂತೆ ” ಕನಸೆಂಬ ಕುದುರೆಯನ್ನೇರಿ” ಚಿತ್ರವನ್ನು ನೋಡಬೇಕು.
2010 ರಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಈ ಚಿತ್ರ ಸ್ಪೇನ್ ನಲ್ಲಿ ನಡೆದ ಅಂತರರಾಷ್ಟ್ರೀಯ India image ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗದ ಹಿರಿಮೆಗೆ ಗರಿ ಮೂಡಿಸಿದರು. ಬಿರಾದಾರ್ ಕನ್ನಡದ ಮತ್ತೋರ್ವ ಖ್ಯಾತ ನಟ ಅನಂತನಾಗ್ ರಷ್ಟು ಸ್ಫುರದ್ರೂಪಿಯಲ್ಲ. ಅನಂತನಾಗ್ ಅವರಿಗಿರಬಹುದಾದ ಸಾಮಾಜಿಕ ಹಿನ್ನಲೆಯಾಗಲಿ, ಸಾಂಸ್ಕೃತಿಕ ಪ್ರಭಾವಳಿಯಾಗಲಿ , ರಾಜಕೀಯ ಸಿದ್ಧಾಂತದ ಬಲವಾಗಲಿ ಬಿರಾದರ್ ಗೆ ಇಲ್ಲ. ಆದರೆ ಬಿರಾದಾರ್ ತನಗೊಹಿಸುವ ಪಾತ್ರದಲ್ಲಿ ಯಾರಿಗೂ ಕಮ್ಮಿಯಿಲ್ಲದಂತೆ ಪ್ರತಿಭೆ ಯನ್ನು ಮೆರೆಯುತ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಒಬ್ಬ ಸಾಮಾನ್ಯ ನಟ ಕಾಮಿಡಿಯನ್ ಆಗಿ, ಪೋಷಕ ಪಾತ್ರಗಳಲ್ಲಿ ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದು ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆವುದು ಸಾಧನೆಯಲ್ಲವೆ?
ನಿಮಗೆ ಗೊತ್ತಿರಲಿ, ಬಿರಾದಾರ್ ಅವರಿಗೆ ಚಲನಚಿತ್ರವೊಂದರಲ್ಲಿ ಮೊಟ್ಟಮೊದಲಿಗೆ ಚಿಕ್ಕದೊಂದು ಪಾತ್ರ ಕೊಡಿಸಿದವರು ಅನಂತನಾಗ್ . ಖ್ಯಾತ ನಿರ್ದೇಶಕ ಎಂ.ಎಸ್ ಸತ್ಯು ಅವರ ನಿರ್ದೇಶನದ ‘ಬರ’ ಚಿತ್ರದ ಚಿತ್ರೀಕರಣ ಬೀದರ್ ನಲ್ಲಿ ಆಸಕ್ತಿಯಿಂದ ಚಿತ್ರೀಕರಣ ನೋಡಲು ಹೋದ ಬಿರಾದಾರ್ ನಟ ಅನಂತನಾಗ್ ಅವರಿಗೆ ಊಟಕ್ಕೆ ಮೊಸರು ಅಗತ್ಯವಿದೆ ಎಂದು ತಿಳಿದು ತಮ್ಮ ಮನೆಯಿಂದ ಅನಂತ್ ನಾಗ್ ಅವರಿಗೆ ಮೊಸರು ತಂದುಕೊಡುತ್ತಾರೆ. ಈ ಸಂದರ್ಭದಲ್ಲಿ ಬಿರಾದಾರ್ ರಂಗಭೂಮಿ ನಟನೆಂಬ ಸುದ್ದಿ ತಿಳಿದ ಅನಂತ್ ನಾಗ್ ನಿರ್ದೇಶಕರಿಗೇಳಿ ಬಿರಾದಾರ್ ಅವರಿಗೆ ‘ಬರ’ ಚಿತ್ರದಲ್ಲಿ ಸಣ್ಣಪಾತ್ರವೊಂದನ್ನು ಕೊಡಿಸು ತ್ತಾರೆ. ಅನಂತ್ ನಾಗ್ ಮತ್ತು ಬಿರಾದಾರ್ ಅವರನ್ನು ಪರಸ್ಪರ ಹೋಲಿಕೆ ಮಾಡಲಾಗದು ನಿಜ, ಆದರೆ ನೈಜ ಪ್ರತಿಭೆ ಬಿರಾದಾರ್ ಒಕ್ಕೂಟ ಸರ್ಕಾರದ ‘ ಪದ್ಮಶ್ರೀ’ ಪ್ರಶಸ್ತಿಗೆ ಎಲ್ಲಾ ಬಗೆಯಲ್ಲೂ ಅರ್ಹರಿ ದ್ದಾರೆ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಬಿರಾದಾರ್ ಅವರಿಗೆ ಪದ್ಮಶ್ರೀ ಸಿಗಲಿ.
ಸಿನಿ ದುನಿಯಾದಲ್ಲೀಗ ಟೈಟಲ್ಗೊಂದು ಅರ್ಥ ಇರಬೇಕು ಅಂತೇನು ಇಲ್ಲ. ಜನಪ್ರಿಯತೆ ಪಡೆದ ಪದ ಹೇಗಿದ್ದರೂ ಸರಿ, ಆ ಹೆಸರಲ್ಲೊಂದು ಸಿನಿಮಾ ಮಾಡುವ, ಅದಕ್ಕೂ ಒಂದು ಕಾರಣ ನೀಡುವ ಅಭ್ಯಾಸ ಮಾಮೂಲು. ಹೆಸರಾಂತ ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼ ಶ್ರೀಕೃಷ್ಣ @ಜಿಮೇಲ್. ಕಾಮ್ʼ ಚಿತ್ರಕ್ಕೀಗ ಚಿತ್ರೀಕರಣ ಮುಗಿದಿದೆ.
ಕಳೆದ ಎಂಟು ದಿನಗಳಿಂದ ಮೇಲುಕೋಟೆ ಸೇರಿದಂತೆ ಮೈಸೂರು ಸುತ್ತಮುತ್ತ ಹಾಡಿನ ಚಿತ್ರೀಕರಣ ನಡೆದಿದೆ. ಹಾಗೆಯೇ ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಒಟ್ಟು 90 ದಿನಗಳ ಕಾಲ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ.ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ ಚಿತ್ರ ಇದು. ಲವ್ ಮಾಕ್ಟೆಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಇದರ ನಾಯಕ ನಟ.
ಭಾವನಾ ಈ ಚಿತ್ರದ ನಾಯಕಿ. ಅವರೊಂದಿಗೆ ಚಂದನ್ ಗೌಡ ಚಿತ್ರದ ಎರಡನೇಯ ನಾಯಕ. ವಿಶೇಷ ಅಂದ್ರೆ ನಟ , ನಿರ್ದೇಶಕ ರಿಷಭ್ ಶೆಟ್ಟಿ ಈ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅವರೊಂದಿಗೆ ದತ್ತಣ್ಣ, ಸಾಧುಕೋಕಿಲ, ಚಿಕ್ಕಣ್ಣ, ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.
ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಈ ಹಿಂದೆ “ಅಮರ್” ಚಿತ್ರವನ್ನೂ ನಿರ್ದೇಶಿಸಿ ತೆರೆಗೆ ತಂದಿದ್ದ ನಾಗಶೇಖರ್, ಈಗ ʼಶ್ರೀಕೃಷ್ಣ @ಜಿಮೇಲ್. ಕಾಮ್ʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಟೈಟಲ್ ನಲ್ಲಿಯೇ ಡಿಫೆರೆಂಟ್ ಎನಿಸುವ ಸಿನಿಮಾ ಇದು. ಹಾಗೆಯೇ ತುಂಬಾ ಸೊಗಸಾದ ಕಥೆ ಈ ಚಿತ್ರದಲ್ಲಿದೆ ಎನ್ನುವ ಭರವಸೆಯ ಮಾತು ನಾಗಶೇಖರ್ ಅವರದ್ದು.
ನಟ ಪುನೀತ್ ರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಫ್ಯಾಮಿಲಿ ಫ್ಯಾಕ್ ಶೂಟಿಂಗ್ ಮುಗಿದಿದೆ. ಒಟ್ಟು ಮೂವತ್ತಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರ ತಂಡ ಚಿತ್ರೀಕರಣ ನಡೆಸಿದೆ. ಚಿತ್ರೀಕರಣದ ಕೊನೆಯ ದಿನ ಚಿತ್ರದ ನಿರ್ಮಾಪಕರು ಆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ, ಚಿತ್ರೀಕರಣ ವೀಕ್ಷಿಸಿದರು. ಹಾಗೆಯೇ ಚಿತ್ರ ತಂಡದ ಪ್ರತಿಯೊಬ್ಬರ ಕೆಲಸವನ್ನು ಮೆಚ್ಚಿಕೊಂತು ತಂಡಕ್ಕೆ ಶುಭ ಕೋರಿದ್ದಾಗಿ ನಿರ್ದೇಶಕ ಅರ್ಜುನ್ ಕುಮಾರ್ ಹೇಳುತ್ತಾರೆ.
ಶೂಟಿಂಗ್ ಸೆಟ್ ಗೆ ಪುನೀತ್ ರಾಜ್ ಕುಮಾರ್ ಬಂದ ಸಂದರ್ಭ
ಕನ್ನಡ ಚಿತ್ರರಂಗರದಲ್ಲಿನ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದೇ ಶುರುವಾಗಿರುವ ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿದಂಪತಿಗಳ ಪಿಆರ್ ಕೆ ಪ್ರೋಡಕ್ಷನ್ ಸಂಸ್ಥೆ ಈಗಾಗಲೇ ಮೂರ್ನಾಲ್ಕು ಚಿತ್ರಗಳನ್ನು ನಿರ್ಮಿಸಿ ತೆರೆಗೆ ತಂದಿದೆ. ಅಷ್ಟು ಚಿತ್ರಗಳೂ ಸದಭಿರುಚಿಯೇ ಚಿತ್ರಗಳೆ. ಆ ಸಾಲಿಗೆ ಸೇರುವ ಮತ್ತೊಂದು ಚಿತ್ರವೇ ಫ್ಯಾಮಿಲಿ ಪ್ಯಾಕ್.
ಸೆಟ್ ನಲ್ಲಿ ನಿರ್ದೇಶಕ ಅರ್ಜುನ್ ಜತೆಗೆ ಪುನೀತ್ ರಾಜ್ ಕುಮಾರ್
ಆದಿನ ಚಿತ್ರೀಕರಣದ ಸೆಟ್ ನಲ್ಲಿ ಚಿತ್ರದ ನಾಯಕ ಲಿಖಿತ್ ಶೆಟ್ಟಿ, ನಾಯಕಿ ಅಮೃತ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್, ಶರ್ಮಿತಾ ಗೌಡ, ಸಿಹಿಕಹಿ ಚಂದ್ರು ಮುಂದಿನ ಕಲಾವಿದರು ಅಂದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಚಿತ್ರೀಕರಣದ ಕೊನೆಯ ದಿನ ಚಿತ್ರ ತಂಡ ಕ್ಯಾಮೆರಾಕ್ಕೆ ಪೋಸು ನೀಡಿದ್ದು
ಮನೋರಂಜನೆ ಪ್ರಧಾನವಾಗಿರುವ ಈ ಚಿತ್ರದ ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಲಿಖಿತ್ ಶೆಟ್ಟಿ . ಈ ಹಿಂದೆ ಸಂಕಷ್ಟ ಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ “ಫ್ಯಾಮಿಲಿ ಪ್ಯಾಕ್” ನ ನಿರ್ದೇಶಕ.ನಿರ್ಮಾಪಕ ಲಿಖಿತ್ ಶೆಟ್ಟಿ ಅವರು ಈ ಚಿತ್ರದ ನಾಯಕ ಕೂಡ. ಗುರುಕಿರಣ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಉದಯಲೀಲ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನವಿದೆ.ಮಾಸ್ತಿ ಫ್ಯಾಮಿಲಿ ಪ್ಯಾಕ್ ಗೆ ಸಂಭಾಷಣೆ ಬರೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಸೋಷಿಯಲ್ ಲೋಕದಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸೋದ್ರ ಮೂಲಕ ಮುಂದಿನ ತಮ್ಮ ನಿಲುವೇನು ತಮ್ಮ ನಡೆಯೇನು ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ದಾಸನ ಭಕ್ತವಲಯ ಮಾಡಿರುವ ತೀರ್ಮಾನ ಇದ್ಯೆಯಲ್ಲ ಅದು ಅಂತಿಮ ಅಲ್ಲ. ಆದರೆ, ಚಕ್ರವರ್ತಿಯ ಹೆಸರಿಗೆ ಮಸಿಬಳಿಯುವ ಹಾಗೂ ತೇಜೋವಧೆ ಮಾಡುತ್ತಿರುವ ಈ ಹೊತ್ತಲ್ಲಿ ಅಭಿಮಾನಿ ದೇವರುಗಳು ಕೈಗೊಂಡಿರುವ ನಿರ್ಧಾರ ಇದೆಯಲ್ಲ ಅದು ಮೆಚ್ಚುವಂತಹದ್ದು. ಹಾಗಾದ್ರೆ, ದಚ್ಚು ಫ್ಯಾನ್ಸ್ ಅದ್ಯಾವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ? ಯಾಕಾಗಿ ದೃಡಸಂಕಲ್ಪ ಮಾಡಿದ್ದಾರೆ? ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮಗಾಗಿ
ಸ್ಯಾಂಡಲ್‌ವುಡ್ ಯಜಮಾನ ದಾಸದರ್ಶನ್‌ಗೆ ಕೋಟ್ಯಾಂತರ ಭಕ್ತರಿದ್ದಾರೆ ಈ ಸತ್ಯ ನಮಗೆ ನಿಮಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಗೊತ್ತು. ಆ ಕೋಟ್ಯಾಂತರ ಅಭಿಮಾನಿ ಬಳಗದ ರಕ್ತ ಕುದಿಯುತ್ತಿದೆ. ಯಾರಿಗೂ ಕೇಡು ಬಯಸದ, ಒಳಗೊಳಗೆ ಕತ್ತಿಮಸೆಯದ, ಹಿಂದೆ ಒಂದು ಮುಂದೆ ಒಂದು ಮಾತನಾಡದ ನಮ್ಮ ಆರಾಧ್ಯದೈವನ ಮೇಲೆ ಇದೆಂತಾ ಆರೋಪ, ಇದೆಂತಾ ಕೀಳುಮಟ್ಟದ ರಾಜಕೀಯ ಛೀ.. ಥೂ.. ಅಂತ ಉಗುಳುತ್ತಾ.. ಹಲ್ಲಲ್ಲು ಕಡಿಯುತ್ತಾ ಕಣ್ಣಲ್ಲೇ ಕೆಂಡ ಉಗುಳ್ತಿದ್ದಾರೆ. ಯಾರು ಎಷ್ಟೇ ಕೇಡು ಬಯಸಿದ್ರೂ, ಯಾರು ಎಷ್ಟೇ ಕಿತಾಪತಿ ಮಾಡಿದ್ರೂ, ಯಾರು ಎಷ್ಟೇ ಟಾರ್ಗೆಟ್ ಮಾಡಿ ಕುಗ್ಗಿಸೋಕೆ ಪ್ರಯತ್ನಿಸಿದ್ರೂ, ನೇರ ಹಾಗೂ ನಿಷ್ಠುರವಾದಿಯಾಗಿರುವ, ಪರರಿಗೆ ಸದಾ ಒಳ್ಳೆಯದನ್ನೇ ಬಯಸುವ, ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ಕೋಟಿಗಟ್ಟಲೇ ದುಡ್ಡನ್ನು ಬಡಬಗ್ಗರಿಗೆ ದಾನ ಮಾಡುವ ಶತಸೋದರಾಗ್ರಜಶರವೀರ ದರ್ಶನ್‌ಗೆ ಕೆಡುಕಾಗಲ್ಲ ಅಂತ ಎದೆಮುಟ್ಟಿಕೊಂಡು ಹೇಳಿಕೊಳ್ಳುತ್ತಿದ್ದಾರೆ.
ಮೇಲ್ನೋಟಕ್ಕೆ ನಮ್ಮ ಬಾಸ್ ಒರಟನಾಗಿ ಕಾಣುತ್ತಾರೆ, ಫಿಲ್ಟರ್ ಇಲ್ಲದೇ ಮಾತನಾಡ್ತಾರೆ ನೀವು ಅದನ್ನೇ ರಫ್ ಹಾಗೂ ರಾಂಗು ಅಂದ್ಕೊಂಡ್ರೆ ಯಾರು ಏನು ಮಾಡೋದಕ್ಕೆ ಆಗಲ್ಲ. ಕೊಲ್ಲೊಕೆ ಒಬ್ಬ ಇದ್ದರೆ ಕಾಯೋಕೆ ಅಂತ ಒಬ್ಬ ರ‍್ತಾನೆ ಎನ್ನುವ ಮಾತಿದೆ ಅದರಂತೇ ನೀವು ಏನೇ ಮಾಡಿದರೂ ನಮ್ಮ ಬಾಸ್‌ನ ಕಾಯೋದಕ್ಕೆ ಚಾಮುಂಡೇಶ್ವರಿ ತಾಯಿ ಇದ್ದಾಳೆ ಎನ್ನುವ ದಾಸನ ಭಕ್ತರು ಒಂದು ದೃಡ ಸಂಕಲ್ಪ ಮಾಡಿದ್ದಾರೆ. ದರ್ಶನ್ ಏನು-ಎಂತ-ಹೇಗೆ ಅಂತ ಗೊತ್ತಿದ್ದವರು, ದರ್ಶನ್‌ರನ್ನ ಹತ್ತಿರದಿಂದ ಕಂಡವರು, ಅವರ ವ್ಯಕ್ತಿತ್ವ ಎಂತಹದ್ದೆಂದು ಬಲ್ಲವರು ಸೈಲೆಂಟಾಗಿರುವುದನ್ನ ಕಂಡು ದಚ್ಚು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ದಾಸನಿಂದ ಸಹಾಯ ಪಡೆದು ತುಟಿಪಿಟಿಕ್ ಎನ್ನದ ಮಂದಿ ಮೇಲೆ ಸಾರಥಿ ಸೈನಿಕರು ಆಕ್ರೋಶಗೊಂಡಿದ್ದಾರೆ. ಇನ್ಯಾವತ್ತೂ ಕೂಡ ಅವರನ್ನು ಪ್ರೋತ್ಸಾಹಿಸಕೂಡದು ಎಂಬ ದೃಡನಿರ್ಧಾರಕ್ಕೆ ಬಂದಿದ್ದಾರೆ.
ಒಡೆಯ ದರ್ಶನ್ ಅವರಿಂದ ಸಹಾಯ ಪಡೆದವರು ಒಬ್ಬರಾ-ಇಬ್ಬರಾ ಲೆಕ್ಕಕ್ಕೇ ಇಲ್ಲ. ದೇಹಿ ಎನ್ನುವ ಮುಂಚೆನೇ ದಾನ ನೀಡುವ ಕರ್ಣ ಅಂದರೆ ಒನ್ ಅಂಡ್ ಓನ್ಲೀ ಡಿಬಾಸ್. ಜನಸಾಮಾನ್ಯರಿಗೆ ಮಾತ್ರವಲ್ಲ ಕಲಾವಿದರಿಗೂ ಕೂಡ ದಾಸನ ಮನ ಮಿಡಿಯುತ್ತೆ. ಗಾಡ್‌ಫಾದರ್‌ಗಳಿಲ್ಲದೇ ಗಂಧದಗುಡಿಗೆ ಯಾರೇ ಬರಲಿ ಅವರಲ್ಲಿ ಪ್ರತಿಭೆಯಿದ್ದರೆ ಅಂತಹವರನ್ನ ದರ್ಶನ್ ಪ್ರೋತ್ಸಾಹಿಸ್ತಾರೆ. ಪೋಸ್ಟರ್ ಲಾಂಚ್‌ನಿಂದ ಹಿಡಿದು ಸಿನಿಮಾ ಬಿಡುಗಡೆವರೆಗೂ ಹೊಸತಂಡದ ಜೊತೆಗೆ ಬೆಂಬಲವಾಗಿ ನಿಲ್ತಾರೆ. ಆರಾಧ್ಯದೈವನ ನಿಲುವನ್ನ ಸ್ವಾಗತಿಸುವ ಅಭಿಮಾನಿಗಳು ಹೊಸತಂಡ ಚಿತ್ರವನ್ನ ಸಾರಥಿ ಸಿನಿಮಾದಂತೆಯೇ ನೋಡ್ತಾರೆ ಜೊತೆಗೆ ಆ ಸಿನಿಮಾವನ್ನು ಪ್ರಮೋಷನ್ ಮಾಡಿಕೊಡ್ತಾರೆ. ಇಷ್ಟೆಲ್ಲಾ ಮಾಡಿಕೊಟ್ಟರೂ ಕೂಡ ಯಾರೊಬ್ಬರು ನಮ್ಮ ಬಾಸ್ ಪರವಾಗಿ ಧ್ವನಿಎತ್ತಲಿಲ್ಲ ಎಂಬುದು ದಚ್ಚು ಭಕ್ತರ ಅಳಲು ಹಾಗೂ ಏಕೈಕ ಪ್ರಶ್ನೆ
ಆರಾಧ್ಯದೈವ ದರ್ಶನ್ ಹೆಸರಿಗೆ ಮಸಿ ಬಳಿಯುವಂತಹ ಹಾಗೂ ತೇಜೋವಧೆ ಮಾಡುವಂತಹ ಕೆಲಸ ಆಗ್ತಿದೆ. ಈ ಹೊತ್ತಲ್ಲಾದರೂ ದಾಸನಿಂದ ಸಹಾಯ ಪಡೆದವರು ಧ್ವನಿ ಎತ್ತಬಹುದು ಆದರೆ ಯಾರೊಬ್ಬರು ಕೂಡ ದಚ್ಚು ಪರವಾಗಿ ಬ್ಯಾಟಿಂಗ್ ಮಾಡೋದಕ್ಕೆ ಫೀಲ್ಡಿಗಿಳಿಯುತ್ತಿಲ್ಲ. ಹೀಗಾಗಿ, ಬೇಸರಗೊಂಡಿರುವ ಚಕ್ರವರ್ತಿಯ ಸೈನಿಕರು ಇಲ್ಲಿ ಎಲ್ಲಾ ಅವಕಾಶವಾಧಿಗಳೇ ಕೆಲಸ ಆಗೋತನಕ ಮಾತ್ರ ಆ ಮೇಲೆ ತಮ್ಮ ಬುದ್ದಿ ಏನು ಅಂತ ತೋರಿಸಿಬಿಡ್ತಾರೆ. ಇನ್ಮುಂದೆ, ಯಾವುದೇ ಕಾರಣಕ್ಕೂ ಸಿನಿಮಾ ಇರಲಿ ಅಥವಾ ಬೇರೆ ಯಾವುದೇ ವಿಷ್ಯವಿರಲಿ ಯಾರನ್ನೂ ಪ್ರೋತ್ಸಾಹಿಸೋದು ಬೇಡ. ನಮ್ಮ ಡಿಬಾಸ್ ಪರವಾಗಿ ಯಾರೂ ಮಾತನಾಡೋದು ಬೇಡ ಅಭಿಮಾನಿಗಳಾಗಿ ನಾವೇ ಕೋಟ್ಯಾಂತರ ಮಂದಿಯಿದ್ದೇವೆ ಹೀಗಂತ ಬರೆದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಲುವನ್ನ ಸ್ಪಷ್ಟಪಡಿಸಿದ್ದಾರೆ. ದಾಸನ ಭಕ್ತರ ನಿಲುವನ್ನ ಈ ಕ್ಷಣಕ್ಕೆ ಮೆಚ್ಚುವಂತಹದ್ದೇ ಬಿಡಿ. ಅದಕ್ಕೆ ಡಿಬಾಸ್ ಹೇಳೋದು ಈ ಜನ್ಮ ಅಲ್ಲ ನೂರು ಜನ್ಮ ಹುಟ್ಟಿಬಂದರೂ ಫ್ಯಾನ್ಸ್ ಋಣ ತರ‍್ಸೋದಕ್ಕೆ ಆಗಲ್ಲ ಅಂತ.
ಕನ್ನಡ ಸಿನಿ ದುನಿಯಾದಲ್ಲೀಗ ಹ್ಯಾಪನಿಂಗ್ ಸಿಂಗರ್ ಅಂತಲೇ ಖ್ಯಾತಿ ಪಡೆದ ಗಾಯಕಿ ಅನುರಾಧ ಭಟ್. ʼಚೌಕʼ ಚಿತ್ರದ ಅಪ್ಪ…ಅಪ್ಪ ಹಾಡಿನ ಮೂಲಕ ಕನ್ನಡಿಗರ ಮನೆ ಮಾತಾದ ಪ್ರತಿಭಾನ್ವಿತ ಹಿನ್ನೆಲೆ ಗಾಯಕಿ. ಮಧುರ ಕಂಠದ ಈ ಚೆಲುವೆ ಹಿನ್ನೆಲೆ ಗಾಯಕಿ ಆಗಿ ಚಿತ್ರರಂಗಕ್ಕೆ ಎಂಟ್ರಿಯಾದ ದಿನಗಳಲ್ಲಿ ರಘು ಮುಖರ್ಜಿ ಹಾಗೂ ಕಮಲಿನಿ ಮುಖರ್ಜಿ ಅಭಿನಯದ ʼಸವಾರಿʼ ಚಿತ್ರದ ʼಮರಳಿ ಮರೆಯಾಗಿ..ʼ ಹಾಡಿಗೆ ಟ್ರ್ಯಾಕ್ ಸಿಂಗರ್ ಆಗಿ ಧ್ವನಿ ನೀಡಿದ್ದರು ಎನ್ನುವುದು ಬಹುಶ: ನಿಮಗೆ ಗೊತ್ತಿರಲಿಕ್ಕಿಲ್ಲ. ಅದು ಆ ದಿನಗಳಲ್ಲಿ ಆಗಿತ್ತು. ಆ ಹಾಡಿನ ಲಿರಿಕಲ್ ವಿಡಿಯೋ ಭಾನುವಾರವಷ್ಟೇ ಸೋಷಲ್ ಮೀಡಿಯಾದಲ್ಲಿ ಲಾಂಚ್ ಆಗಿದೆ.
ಅದರ ರೆಕಾರ್ಡಿಂಗ್ ವೇಳೆ ಪಟ್ಟ ಕಷ್ಟದ ಕ್ಷಣಗಳನ್ನು ಗಾಯಕಿ ಅನುರಾಧ್ ಭಟ್ ಈಗ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಭಾನುವಾರವಷ್ಟೇ ಲಾಂಚ್ ಆದ ʼಸವಾರಿʼ ಚಿತ್ರದ ಮರಳಿ ಮರೆಯಾಗಿ ..ಹಾಡಿನ ಲಿರಿಕಲ್ ವಿಡಿಯೋ ಲಾಂಚ್. ಹಾಗಂತ ಅಲ್ಲೇನೋ ಕಿರಿಕ್ ಆಗಿತ್ತಾ ಅಂತಲ್ಲ. ಬದಲಿಗೆ ಅಲ್ಲಿ ಕೆಲವು ಸ್ವಾರಸ್ಯಕರ ಸಂಗತಿಯೊಂ ದಿದೆ. ಅದನ್ನೇ ಇಲ್ಲಿ ಅವರು ಹೇಳಿಕೊಂಡಿದ್ದಾರೆ.ʼ ಇದನ್ನು ನನ್ನ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ರೆಕಾರ್ಡ್ ಮಾಡಲಾಗಿತ್ತು. ರೆಕಾರ್ಡ್ ಮಾಡುವ ವೇಳೆ, ನಾನು ಗಂಟಲು ಕಿರಿ ಕಿರಿಯಿಂದ ಬಹಳ ಕಷ್ಟಪಟ್ಟಿದ್ದೆ. ಕಾರಣ ನಾನು ಸೊಳ್ಳೆಯೊಂದನ್ನು ನುಂಗಿದ್ದೆʼ ಅಂತ ಮರಳಿ ಮರೆಯಾಗಿ … ಹಾಡಿನ ಟ್ರ್ಯಾಕ್ ಧ್ವನಿ ಮುದ್ರಣದ ವೇಳೆ ಸೊಳ್ಳೆ ಕಾರಣಕ್ಕೆ ತಾವು ಕಷ್ಟಪಟ್ಟಿದ್ದನ್ನು ಬರೆದು ಪೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ ಗಾಯಕಿ ಅನುರಾಧ ಭಟ್. ಅವರ ಅನುಭವದ ಅನಿಸಿಕೆಗೆ ಅಭಿಮಾನಿಗಳು ಸಖತ್ ಫನ್ನಿ ಕಾಮೆಂಟ್ಸ್ ಹಾಕಿ ಖುಷಿ ಪಟ್ಟಿದ್ದಾರೆ. ಕಾಮೆಂಟ್ಸ್‌ಗಳೇ ಅಲ್ಲಿ ಮಜಾ ಆಗಿವೆ. ಸಸ್ಯಹಾರಿಯಾಗಿರುವ ಅನುರಾಧ ಭಟ್ ಸೊಳ್ಳೆ ನುಂಗಿ ಮಂಸಹಾರಿ ಆಗಿಬಿಟ್ರಾ ಅಂತ ಕೆಲವರು ತಮಾಷೆ ಮಾಡಿದ್ದಾರೆ.ಸೊಳ್ಳೆ ನುಂಗಿದ ಕಾರಣಕ್ಕೆ ಆ ಹಾಡು ಅಷ್ಟು ಮಧುರವಾಗಿ ಮೂಡಿ ಬಂದಿರಬೇಕು ಅಂತ ಕೆಲವರು ವರ್ಣಿಸಿದ್ದು ವಿಶೇಷ.
ಅನುರಾಧ ಭಟ್
ಉಳಿದಂತೆ ಈ ಹಾಡಿನ ದೊಡ್ಡ ಜನಪ್ರಿಯತೆಗೆ ಹೆಸರಾಂತ ಗಾಯಕಿ ಸಾಧನಾ ಸರ್ಗಮ್ ಕೂಡ ಕಾರಣ. ಯಾಕಂದ್ರೆ ʼಸವಾರಿʼ ಚಿತ್ರದಲ್ಲಿ ಈ ಹಾಡು ಹಾಡಿದ್ದು ಬಾಲಿವುಡ್ ನ ಹೆಸರಾಂತ ಗಾಯಕಿ ಸಾಧನಾ ಸರ್ಗಮ್. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರಿಂದ ಅದು ಸಾಧ್ಯವಾಗಿತ್ತು. ಆ ಮೂಲಕ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮೊಳಗಿದ ಸಾಧನಾ ಸರ್ಗಮ್ ಅವರ ಕಂಠಸಿರಿಯ ಮೂಲಕ ಮರಳಿ ಮರೆಯಾಗಿ…ಹಾಡು ಮನೆ ಮಾತಾಯಿತು.
ಸಾಧನಾ ಸರ್ಗಮ್
ಆ ಮೂಲಕ ಕನ್ನಡಕ್ಕೆ ಸುಧೀರ್ ಅತ್ತಾವರ್ ಎನ್ನುವ ಕ್ರೀಯಾಶೀಲ ಬರಹಗಾರನೊಬ್ಬ ಸಿಕ್ಕರು ಅನ್ನೋದು ಎಲ್ಲರಿಗೂ ಗೊತ್ತು. ಈ ಹಾಡಿನ ಜನಪ್ರಿಯತೆಯ ಮೂಲಕವೇ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಾಕಷ್ಟು ಅವಕಾಶ ಹುಡುಕಿಕೊಂಡು ಬಂದವು. ಮತ್ತೊಂದೆಡೆ ಬರಹಗಾರರಾಗಿದ್ದ ಸುಧೀರ್ ಅತ್ತಾವರ್, ನಿರ್ದೇಶಕರಾಗಿ ಬಡ್ತಿ ಪಡೆದರು. ಸಾಕಷ್ಟು ಪ್ರಶಸ್ತಿಗಳು ಅವರಿಗೆ ಬಂದವು.
ಸುಧೀರ್ ಅತ್ತಾವರ್
ಈಗಲೂ ಈ ಹಾಡಿನ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುವ ಬರಹಗಾರ ಸುಧೀರ್ ಅತ್ತಾವರ್, ನಾನು ಈ ಹಾಡು ಬರೆದೆ ಎನ್ನುವುದಕ್ಕಿಂತ ಈ ಸಾಹಿತ್ಯಕ್ಕೆ ಗಾಯಕಿ ಸಾಧನಾ ಸರ್ಗಮ್ ಧ್ವನಿ ನೀಡಿದ ಕಾರಣಕ್ಕೆ ಇದು ಸಾಕಷ್ಟು ಜನಪ್ರಿಯತೆ ಪಡೆಯಿತು. ಆ ಮೂಲಕ ನಾನು ಕೂಡ ನಿರ್ದೇಶಕನಾಗುವ ಅವಕಾಶ ಬಂತು ಎನ್ನುತ್ತಾ ಆ ಹಾಡಿನ ಮೂಲಕ ತಮಗೆ ಸಿಕ್ಕ ಅವಕಾಶ ನೆನಪಿಸಿಕೊಳ್ಳುತ್ತಾರೆ. ಹಲವು ವರ್ಷಗಳ ನಂತರ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಮೂಲಕ ಇಷ್ಟೇಲ್ಲ ನೆನಪಾದವು.
ಹಿರಿಯ ನಟಿ ಶ್ರುತಿ ಅವರಿಗೆ ಸರ್ಕಾರ ಕೋಕ್ ಕೊಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಅವರನ್ನು ಬದಲಾಯಿಸಿದೆ. ಅವರ ಜಾಗಕ್ಕೆ ಯಡಿಯೂರಪ್ಪ ಅವರ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ಚಿತ್ರೋದ್ಯಮದಲ್ಲೂ ಇದು ತೀವ್ರ ಚರ್ಚೆಗೆ ಏಡೆ ಮಾಡಿಕೊಟ್ಟಿದೆ. ಶ್ರುತಿ ಅವರನ್ನು ಏಕಾಏಕಿ ಸರ್ಕಾರ ಯಾಕೆ ಬದಲಾಯಿಸಿತು? ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅವರಿನ್ನು ಆರು ತಿಂಗಳು ಪೂರೈಸಿಲ್ಲ, ಆಗಲೇ ಅವರನ್ನು ಕಿತ್ತು ಹಾಕಿದ್ದು ಯಾಕೆ? ಹೀಗೆಲ್ಲ ಚರ್ಚೆಗಳು ನಡೆಯುತ್ತಿವೆ. ಹಾಗಾದ್ರೆ ಸರ್ಕಾರ ಯಾಕಾಗಿ ಈ ರೀತಿ ಮಾಡಿತು ಅನ್ನೋದು ಯಕ್ಷ ಪ್ರಶ್ನೆ ಆಗಿದೆ. ವಿಚಿತ್ರ ಅಂದ್ರೆ ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವ ಬಗ್ಗೆ ಒಂದೇ ಒಂದು ಮನ್ಸೂಚನೆ ಕೂಡ ಶ್ರುತಿ ಅವರಿಗೇ ಸಿಕ್ಕಿಲ್ವಂತೆ.
ಚಿತ್ರರಂಗದಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ತಾರೆಯರ ಪೈಕಿ ಇತ್ತೀಚೆಗೆ ನಟಿ ತಾರಾ ಹಾಗೂ ಶ್ರುತಿ ಅವರಿಗೆ ಸರ್ಕಾರ ನಿಗಮಗಳ ಆಧ್ಯಕ್ಷ ಸ್ಥಾನದ ಅವಕಾಶ ನೀಡಿತ್ತು. ತಾರಾ ಅವರು ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದರೆ, ಶ್ರುತಿ ಅವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದರು. ಇವರಿಬ್ಬರಿಗೂ ಅವಕಾಶ ಸಿಕ್ಕಿದ್ದು ಕಂಡ ಚಿತ್ರರಂಗ ಖುಷಿ ಪಟ್ಟಿತು. ಆದರೆ ಈಗ ಪರಿಸ್ಥಿತಿಯೇ ಭಿನ್ನವಾಗಿದೆ.ಎಲ್ಲವೂ ಸರಿಯಾಗಿಯೇ ಇದಿದ್ದರೆ ಶ್ರುತಿ ಅವರು ಈಗಲೂ ಅಧ್ಯಕ್ಷಾಗಿಯೇ ಇರುತ್ತಿದ್ದರೋ ಏನೋ, ಕೊರೋನಾ ಕಾಲದಲ್ಲಿ ಅಷ್ಟಾಗಿ ಅವರು ನಿಗಮದ ಕಡೆ ಮುಖ ಹಾಕಿರಲಿಲ್ಲ ಎನ್ನುವ ಆರೋಪ ಇದೆ.
ಅದಕ್ಕಿಂತ ವಿಚಿತ್ರ ಅಂದ್ರೆ, ದೆಹಲಿ, ಹೈದ್ರಾಬಾದ್ ಅಂತಲೇ ಹೆಚ್ಚು ತಿರುಗಾಡುತ್ತಿದ್ದ ಸಚಿವ ಯೋಗೇಶ್ವರ್ ಅವರೊಂದಿಗೆ ನಟಿ ಶ್ರುತಿ ಕೂಡ ಇತ್ತೀಚೆಗೆ ದೇವಾಲಯಗಳಿಗೆ ಸುತ್ತಾಡಿದ್ದರು. ಇವರಿಬ್ಬರ ಟೆಂಪಲ್ ರನ್ ಮೇಲೆ ಸಿಎಂ ಕಣ್ಣು ಬಿದ್ದಿತ್ತು. ಅದೇ ವೇಳೆ ಪ್ರವಾಸೋದ್ಯಮ ಇಲಾಖೆ ತೀವ್ರ ನಷ್ಟದಲ್ಲಿತ್ತು. ಅದೇ ಕಾರಣಕ್ಕೆ ನಟಿ ಶ್ರುತಿ ಅವರನ್ನು ನಿಗಮದಿಂದ ಸರ್ಕಾರ ಬದಲಾಯಿಸಿದೆ ಎನ್ನುವ ಮಾತುಗಳು ಇವೆ. ರಾಜಕಾರಣವೇ ಹಾಗೆ, ಜನರಲ್ಲಿ ಮನೆ ಮಾತಾದ ಕಲಾವಿದರು ರಾಜಕಾರಣದಲ್ಲಿ ಕೆಲವೊಮ್ಮೆ ಹಿನ್ನೆಡೆ ಸಾಧಿಸಿದ್ದೂ ಇದೆ. ಅದಕ್ಕೆ ಇಲ್ಲಿ ಬೇಕಾದಷ್ಟು ಉದಾಹರಣೆಗಳು ಇವೆ. ಪಾಪಾ, ಶ್ರುತಿ ಅವರನ್ನು ಬಿಜೆಪಿ ಅದೇ ರೀತಿ ಮಾಡಿ ಬಿಟ್ಟಿತಾ ಗೊತ್ತಿಲ್ಲ. ವಾಸ್ತವ ಹಿರಿಯ ನಟಿ ಶ್ರುತಿ ಅವರಿಗೇ ಗೊತ್ತು.
ಸಿನಿಮಾ ಮಂದಿ ಮುಖದಲ್ಲಿ ಕೊನೆಗೂ ನಗುವಿನ ಗೆರೆ ಮೂಡಿವೆ. ಸತತ ಮೂರು ತಿಂಗಳ ನಂತರ ಸರ್ಕಾರವು ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂ ದಿರಗಳ ಬಾಗಿಲು ತೆರೆಯಲು ಪರ್ಮಿಷನ್ ಕೊಟ್ಟಿದೆ. ಅಲ್ಲೂ ಒಂದು ಕಂಡಿಷನ್ ಇದೆ. ಶೇಕಡಾ 50 ರಷ್ಟು ಸೀಟು ಭರ್ತಿ ಮೂಲಕ ಚಿತ್ರಮಂ ದಿರಗಳಲ್ಲಿ ಚಿತ್ರಪ್ರದರ್ಶನ ನಡೆಸಬೇಕು ಅನ್ನೋದು ಸರ್ಕಾರದ ಕಂಡಿ ಷನ್.ಅದಕ್ಕೆ ಕಾರಣವೂ ಇದೆ. ಮಹಾಮಾರಿ ಕೊರೋನಾ ಇನ್ನು ಹೋಗಿಲ್ಲ. ಈಗಲೂ ದಿನವೂ ರಾಜ್ಯದಲ್ಲಿ ಒಂದಷ್ಟು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಲೇ ಇವೆ. ಹಾಗೆಯೇ ಹೊರ ರಾಜ್ಯ ಗಳ ಲ್ಲೀಗ ಕೊರೋನಾ ಭೀತಿ ಮತ್ತಷ್ಟು ಹೆಚ್ಚಾಗಿದೆ ಎನ್ನುವ ಆತಂಕದ ವಿಷಯ ಕೇಳಿಬರುತ್ತಿದೆ. ಅಲ್ಲದೇ ಯುರೋಪ್ ಕಂಟ್ರಿಗಳಲ್ಲಿ ಕೊರೋನಾ ಮತ್ತೆ ಹೆಚ್ಚಾಗುತ್ತಿರುವ ಸುದ್ದಿಗಳು ಬರುತ್ತಿವೆ. ಈ ಕಾರಣಕ್ಕೆ ಸರ್ಕಾರ, ಒಂದಷ್ಟು ಕಂಡಿಷನ್ ನಡುವೆಯೇ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ನೀಡಿದೆ. ಸಹಜವಾಗಿಯೇ ಇದು ಸಿನಿಮಾ ಮಂದಿ ಮುಖದಲ್ಲಿ ಒಂದಷ್ಟು ಸಂತಸ ತಂದಿದೆ.
ಹಾಗಂತ ಚಿತ್ರೋದ್ಯಮ ಎದ್ದುಕುಳಿತುಕೊಂಡಿತು ಅಂತಲ್ಲ. ಭವಿಷ್ಯ ಕರಾಳವೇ ಆಗಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ಸಿಕ್ಕರೂ, ಚಿತ್ರರಂಗದ ಬೇಡಿಕೆ ಈಗ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಕೊಡಿ ಎನ್ನುವು ದಾಗಿದೆ. ಈ ಸಂಬಂಧ ಇಂದು ( ಜುಲೈ 19 ) ಕರ್ನಾಟಕ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಿನಿಮಾ ಮಂದಿಯೂ, ಮುಖ್ಯಮಂ ತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎನ್ನುವ ಮಾತುಗಳೂ ಕೇಳಿಬಂದಿವೆ.
ಉದ್ಯಮವೂ ಸರ್ಕಾರವನ್ನು ಈ ರೀತಿ ಕೇಳುವುದಕ್ಕೂ ಕಾರಣವಿದೆ. ಚಿತ್ರಮಂದಿರಗಳಲ್ಲಿ ಈಗ ಶೇಕಡಾ 50 ರಷ್ಟು ಸೀಟು ಭರ್ತಿ ಮೂಲಕ ಚಿತ್ರ ಪ್ರದರ್ಶಿಸುವುದು ಅದು ಅಷ್ಟು ಸುಲಭ ಇಲ್ಲ. ಮಲ್ಟಿಪ್ಲೆಕ್ಸಗಳಿಗೆ ಅನುಕೂಲ ಆದೀತೇ ಹೊರತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಶೇಕಡ ೫೦ ರಷ್ಟು ಸೀಟು ಭರ್ತಿಯ ಅವಕಾಶ ಮತ್ತಷ್ಟು ನಷ್ಟವೇ ಹೌದು. ಯಾಕಂದ್ರೆ, ಅವತ್ತಿನ ಖರ್ಚು ವೆಚ್ಚಗಳಿಗೂ ಪ್ರದರ್ಶನದ ಹಣ ಬರೋದಿಲ್ಲ. ಮೇಲಾಗಿ ಅಷ್ಟಾದ್ರೂ ಜನ ಬರುತ್ತಾರೆನ್ನುವ ನಂಬಿಕೆ ಯೂ ಇಲ್ಲ. ಜತೆಗೆ ಶೇಕಡಾ 50 ರಷ್ಟು ಸೀಟು ಭರ್ತಿ ಅಂದಾಕ್ಷಣ ಯಾವುದೇ ಸ್ಟಾರ್ ಸಿನಿಮಾಗಳು ಚಿತ್ರಮಂದಿರಕ್ಕೆ ಬರೋದಿಲ್ಲ.
ಒಂದು ವೇಳೆ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಸ್ಟಾರ್ ಸಿನಿಮಾಗಳು ರಿಲೀಸ್ ಆಗಬಹುದು. ಸಹಜವಾಗಿಯೇ ಅವರ ಸಿನಿಮಾ ನೋಡುವುದಕ್ಕಾದರೂ ಚಿತ್ರಮಂದಿರಕ್ಕೂ ಜನ ಬರುತ್ತಾರೆನ್ನುವ ನಂಬಿಕೆಯ ಮೂಲಕವೇ ಸೋಮವಾರ ಚಿತ್ರೋದ್ಯಮದ ಮಂದಿ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆಂದು ಗೊತ್ತಾಗಿದೆ. ಇರಲಿ, ಸಿನಿಮಾ ಮಂದಿ ಭಾವಿಸಿಕೊಂಡಂತೆ ಇವತ್ತೇ ಚಿತ್ರಮಂದಿರಗಳಲ್ಲಿ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೂ, ಚಿತ್ರಮಂದಿರಗಳಿಗೆ ಸಡನ್ ಆಗಿ ಸ್ಟಾರ್ ಸಿನಿಮಾ ಬರುತ್ತವೆ ಎನ್ನುವ ಖಾತರಿ ಇಲ್ಲ. ಯಾಕಂದ್ರೆ ಜನಕ್ಕೆ ಈಗಲೂ ಕೊರೋನಾ ಸೋಂಕಿನ ಭೀತಿ ಇರೋದ್ರಿಂದ ಸ್ಟಾರ್ ಸಿನಿಮಾ ರಿಲೀಸ್ ಆದರೂ, ಜನ ಚಿತ್ರ ಮಂದಿರದತ್ತ ಮುಖ ಮಾಡುವುದು ಕಷ್ಟವೇ ಇದೆ ಎನುತ್ತಾರೆ ಸಿನಿಮಾ ನಿರ್ಮಾಪಕರೊಬ್ಬರು.
ಪರಿಸ್ಥಿತಿ ಭೀಕರವಾಗಿದೆ. ತಕ್ಷಣಕ್ಕೆ ನೂರರಷ್ಟು ಸೀಟು ಭರ್ತಿಗೂ ಅವಕಾಶ ಸಿಕ್ಕರೂ, ಉದ್ಯಮ ಚೇತರಿಕೆ ಕಾಣೋದಿಕ್ಕೆ ಇನ್ನು ವರ್ಷವೇ ಬೇಕಿದೆ. ಹೀಗಾಗಿ ಉದ್ಯಮಕ್ಕೆ ಎದುರಾಗಬಹುದಾದ ಸಂಕಷ್ಟಗಳನ್ನು ದೂರ ಮಾಡಬಹುದಾದ ಪರ್ಯಾಯ ದಾರಿಗಳತ್ತ ಉದ್ಯಮ ಗಮನ ಹರಿಸಬೇಕಿದೆ. ಕಮರ್ಷಿಯಲ್ ಸಿನಿಮಾಗಳ ಜತೆಗೆ ಕಂಟೆಂಟ್ ಆಧರಿತ ಸಿನಿಮಾಗಳನ್ನು ನಿರ್ಮಿಸಿ, ಡಿಜಿಟಲ್ ಫ್ಲಾಟ್‌ಪಾರ್ಮ್ ನಲ್ಲೂ ರಿಲೀಸ್ ಮಾಡಬಹುದು, ಹಾಗೆಯೇ ಚಿತ್ರಮಂದಿರಕ್ಕೂ ಬರಬಹುದು. ಹಾಗೆಯೇ ಸ್ಟಾರ್ ಗಳು ಕೂಡ ವರ್ಷಕ್ಕೆ ಒಂದೋ ಅಥವಾ ಎರಡು ಸಿನಿಮಾ ಎನ್ನುವ ಬೌಂಡರಿಯ ಕಂಫರ್ಟ್ ಜೋನ್ ದಾಟಿ, ಕಮರ್ಷಿಯಲ್ ಸಿನಿಮಾಗಳ ಜತೆಗೆ ಕಂಟೆಂಟ್ ಆಧರಿತ ಕಡಿಮೆ ಬಜೆಟ್ ನ ಸಿನಿಮಾಗಳಿಗೂ ಕಾಲ್ ಶೀಟ್ ಕೊಡಲಿ. ಆಗ ಕೊರೋನಾದಂತಹ ಸಂಕಷ್ಟಗಳ ಕಾಲದಲ್ಲೂ ಉದ್ಯಮ ಬದುಕುಳಿಯಲು ಸಾಧ್ಯ.
ನಾವು ಯಾರ ಪರನೂ ಅಲ್ಲ ಯಾರ ವಿರೋಧವೂ ಅಲ್ಲ’ ಯಾಕೀ ಮಾತು ಹೇಳ್ತಿದ್ದೀವಿ ಅನ್ನೋದು ಕಂಪ್ಲೀಟ್ ಸ್ಟೋರಿನಾ ಓದಿದ್ಮೇಲೆ ನಿಮಗೆ ಗೊತ್ತಾಗುತ್ತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಒಂದಾದ್ಮೇಲೊಂದು ಆರೋಪಗಳು ಕೇಳಿ ಬರುತ್ತಲೇ ಇವೆ. ಅಸಲಿಯತ್ತು ಬಯಲಾಗುವ ಮುನ್ನವೇ ಬಣ್ಣಕಟ್ಟಿ ಪುಂಕಾನುಪುಂಕವಾಗಿ ಪುಂಗುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಯಾವುದೋ ವಿಷ್ಯವನ್ನು ತೆಗೆದುಕೊಂಡು ಇನ್ಯಾವುದಕ್ಕೋ ಲಿಂಕ್ ಮಾಡಿ ಸ್ಯಾಂಡಲ್‌ವುಡ್ ಚಕ್ರವರ್ತಿಯನ್ನು ತೇಜೋವಧೆ ಮಾಡುವಂತಹ ಕೆಲಸ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಪ್ರಿನ್ಸ್ ಹೋಟೆಲ್‌ನ ಸಪ್ಲೈಯರ್ ಮೇಲೆ ಸಾರಥಿ ಹಾಗೂ ಅವರ ಸ್ನೇಹಿತರು ಹಲ್ಲೆ ನಡೆಸಿದ್ದಾರೆನ್ನುವ ಆರೋಪದಲ್ಲಿ ಹುರುಳಿದಿಯೋ ಇಲ್ಲವೋ ಗೊತ್ತಿಲ್ಲ. ಸದ್ಯಕ್ಕೆ ಪ್ರಕರಣ ತನಿಖಾ ಹಂತದಲ್ಲಿದೆ. ಅಷ್ಟಕ್ಕೂ, `ಸತ್ಯಾನಾ ದಫನ್ ಮಾಡುವ ಖಫನ್ನಾ’ ಯಾರೂ ಇನ್ನೂ ಕಂಡುಹಿಡಿದಿಲ್ಲ ಹೀಗಾಗಿ ಸತ್ಯದ ಕೊರಳಿಗೆ ಕುಣಿಕೆ ಬಿಗಿದರೂ ಅದೂ ನುಸುಳಾಡಿಕೊಂಡು ಹೊರಬರಲೆಬೇಕು ಹೊರಬರುತ್ತೆ ಬಿಡಿ. ಆದರೆ ದಾಸನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಾ, ಅಖಾಡದಲ್ಲಿ ಗೊಂದಲ ಸೃಷ್ಟಿಸುತ್ತಾ, ವಿವಾದ ಎಬ್ಬಿಸುವ ಘಟನೆಗಳನ್ನ ಡಿಬಾಸ್ ಭಕ್ತರ ಕೈಯಲ್ಲಿ ನೋಡೋದಕ್ಕೆ ಆಗ್ತಿಲ್ಲ ಹೀಗಾಗಿ ಭಕ್ತಬಳಗ ಕೆಂಡಾಮಂಡಲಗೊಂಡಿದೆ.
ಶನಿವಾರ ಬೆಳಗ್ಗೆಯಿಂದ ದೊಡ್ಮನೆ ಆಸ್ತಿ ಮೇಲೆ ದರ್ಶನ್ ಕಣ್ಣಿಟ್ಟಿದ್ದರಂತೆ ಎಂಬುದೇ ದೊಡ್ಡ ಚರ್ಚೆ. ಒಡಹುಟ್ಟಿದವರಿಗಿಂತ ಒಂದು ಕೈ ಮೇಲಾಗಿದ್ದ ಸಾರಥಿ ಹಾಗೂ ಉಮಾಪತಿ ನಡುವೆ ಮನಸ್ಥಾಪ ಮೂಡೋದಕ್ಕೆ, ಬಿರುಕು ಕಾಣಿಸಿಕೊಳ್ಳೋದಕ್ಕೆ, ಇಬ್ಬರು ಸ್ಟೇಷನ್ ಮೆಟ್ಟಿಲೇರೋದಕ್ಕೆ, ೨೫ ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುವುದಕ್ಕೆ, ದೋಖಾ ಪ್ರಕರಣದಲ್ಲಿ ಒಂದು ವೇಳೆ ಉಮಾಪತಿಯವರ ಕೈವಾಡ ಇದೆ ಅಂತಾದರೆ ನಾನು ಅವರನ್ನೂ ಬಿಡೋದಿಲ್ಲ ಅಂತ ದಾಸ ಹೇಳಿದ್ದಕ್ಕೆ, ಸ್ನೇಹಿತರ ಜೊತೆ ಕುಳಿತು ಮೈಸೂರಿನಲ್ಲಿ ಪ್ರೆಸ್ಮೀಟ್ ಮಾಡಿದ್ದಕ್ಕೆ, ಇತ್ತ ಉಮಾಪತಿ ನಾನು ಬಾಯ್ಬಿಟ್ಟು ಆ ಮೂರು ವಿಷ್ಯ ಹೇಳಿದರೆ ಮಂಡ್ಯಗಿಂತ ಜಾಸ್ತಿ ವೈಬ್ರೇಷನ್ ಆಗುತ್ತೆ ಅಂತ ಹೇಳಿದ್ದಕ್ಕೆ, ಹೀಗೆ ಎಲ್ಲದಕ್ಕೂ ದೊಡ್ಮನೆ ಆಸ್ತಿ ಕೈತಪ್ಪಿರುವುದೇ ಎನ್ನುವುದು ಚರ್ಚೆಯಲ್ಲಿರುವ ವಿಷ್ಯ. ಆದರೆ, ಸತ್ಯಾಸತ್ಯತೆಯನ್ನು ಪರಾಮರ್ಶಿಸುವ ಮೊದಲೇ ಅಂತಿಮ ತೀರ್ಮಾನಕ್ಕೆ ಬರುವುದು ಅಕ್ಷಮ್ಯ ಅಪರಾದ ಅಲ್ಲದೇ ಮತ್ತೇನು ಅಲ್ಲ ಬಿಡಿ.
ದಾಸನಿಗೆ ೨೫ ಕೋಟಿ ದೋಖಾ ಪ್ರಕರಣ ಬೆಳಕಿಗೆ ಬಂದಾಗ, ದರ್ಶನ್‌ಗೆ ಅರುಣಕುಮಾರಿಯವರನ್ನು ಪರಿಚಯ ಮಾಡಿದ್ದು ನಿರ್ಮಾಪಕ ಉಮಾಪತಿಯವರು ಎನ್ನುವ ಸುದ್ದಿ ಹೊರಬಿದ್ದಾಗ ನೇರವಾಗಿ ಉಮಾಪತಿಯವರ ಕಡೆ ಎಲ್ಲರೂ ಬೊಟ್ಟುಮಾಡಿ ತೋರಿಸಿದ್ರು. ಚಕ್ರವರ್ತಿಯ ಆಸ್ತಿ ಹೊಡೆಯೋಕೆ ಅಥವಾ ದಚ್ಚುನಾ ಮೈಸೂರು ಸ್ನೇಹಿತರಿಂದ ದೂರ ಇಡೋದಕ್ಕೆ ನಿರ್ಮಾಪಕ ಉಮಾಪತಿಯವರು ಈ ರೀತಿ ಪ್ಲ್ಯಾನ್ ಮಾಡಿರ‍್ಬೋದು ಅಂತ ಎಲ್ಲರೂ ಮಾತನಾಡಿಕೊಂಡರು. ಇದೀಗ, ಉಮಾಪತಿಯವರು ಬಿಚ್ಚಿಟ್ಟ ದೊಡ್ಮನೆ ಆಸ್ತಿ ವಿಷ್ಯ ಕೇಳಿದ್ಮೇಲೆ ಬಹುತೇಕರು ಮಾತನಾಡ್ತಿರುವುದು ಹಾಗೂ ಬಜಾರ್‌ನಲ್ಲಿ ಚರ್ಚೆಯಾಗ್ತಿರೋದು ದೊಡ್ಮನೆ ಆಸ್ತಿ ತನ್ನ ಕೈ ಸೇರಲಿಲ್ಲ ಎನ್ನುವ ಕಾರಣಕ್ಕೆ ದಾಸದರ್ಶನ್ ರಾಬರ್ಟ್ ಪ್ರೊಡ್ಯೂಸರ್ ಮೇಲೆ ಹಗೆತನ ಸಾಧಿಸೋದಕ್ಕೆ ಹೊರಟರಾ? ತಮ್ಮನಂತಿದ್ದ ಉಮಾಪತಿ ವಿರುದ್ದ ದುಷ್ಮನಿಗೆ ನಿಂತ್ರಾ? ಹೀಗೆ ಏನೇನೋ ಚರ್ಚೆಗಳು ಆಗ್ತಿವೆ.
ಅಂದ್ಹಾಗೇ, ರಾಬರ್ಟ್ ಪ್ರೊಡ್ಯೂಸರ್ ಉಮಾಪತಿಯವರು ದೊಡ್ಮನೆ ಆಸ್ತಿ ವಿಷಯವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಹೆಸರಲ್ಲಿದ್ದ ಪ್ರಾಪರ್ಟಿಯನ್ನ ನಾನು ಕೊಂಡುಕೊಂಡಿದ್ದೆ. ಈ ವಿಚಾರ ತಿಳಿದ ದರ್ಶನ್ ಅವರು ಆ ಪ್ರಾಪರ್ಟಿಯನ್ನು ತನಗೆ ಕೊಡಿ ಅಂತ ಕೇಳಿದರು. ಆದರೆ, ದೊಡ್ಮನೆ ಆಸ್ತಿಯನ್ನು ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸು ಒಪ್ಪಲಿಲ್ಲ. ಅಷ್ಟಕ್ಕೂ ಒಬ್ಬ ಸ್ಟಾರ್ ನಟರಿಂದ ಪ್ರಾಪರ್ಟಿಯನ್ನು ಖರೀದಿ ಮಾಡಿ ಮಗದೊಬ್ಬ ಸ್ಟಾರ್ ನಟರಿಗೆ ಮಾರಿಕೊಳ್ಳುವುದು ಶೋಭೆ ತರುವಂತಹ ಕೆಲಸ ಅಲ್ಲ. ಹೀಗಾಗಿ ನಾನು ಕೊಡುವುದಕ್ಕೆ ಆಗಲ್ಲ ಬಾಸ್ ಎಂದೇ ಇದಕ್ಕೆ ಅವರು ಹೋಗಲಿ ಬಿಡಿ ನಿರ್ಮಾಪಕರೇ ಅಂತ ಸುಮ್ಮನಾದರು. ಇದಾದ್ಮೇಲೆ ಮತ್ತೆ ಯಾವತ್ತೂ ಕೂಡ ಆಸ್ತಿ ಬಗ್ಗೆ ಡಿಬಾಸ್ ನನ್ನ ಹತ್ತಿರ ಚರ್ಚೆ ಮಾಡಿಲ್ಲ, ನಾನೇ ಅವರಿಗೆ ದೊಡ್ಮನೆ ಪ್ರಾಪರ್ಟಿಯ ಬದಲಿಗೆ ಮಗದೊಂದು ಪ್ರಾಪರ್ಟಿಯನ್ನು ಕೊಡುತ್ತೇನೆ ಅಂತ ಹೇಳಿದ್ದೇನೆ. ಹೀಗಂತ ಖುದ್ದು ಉಮಾಪತಿಯವರು ಹೇಳಿದ್ಮೇಲೂ ಕೂಡ ದೊಡ್ಮನೆಯ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸುತ್ತಿದ್ದಾರೆ ಅಂತೆಲ್ಲಾ ಕೆಲವರು ಸುದ್ದಿಮಾಡುತ್ತಿದ್ದಾರೆ.
ಅಷ್ಟಕ್ಕೂ, ದಾಸದರ್ಶನ್ ಸಣ್ಣಮನಸ್ಸಿನ ವ್ಯಕ್ತಿಯೂ ಅಲ್ಲ ಅಂತಹ ವ್ಯಕ್ತಿತ್ವವೂ ಅವರದ್ದಲ್ಲ. ಆಸ್ತಿ ಬೇಕು ಅಂದರೆ ಭೂಮಿ ಮೇಲೆ ಅಲ್ಲ ಆಕಾಶದಲ್ಲೂ ಖರೀದಿ ಮಾಡುವ ತಾಕತ್ತೂ ಜಗ್ಗುದಾದನಿಗಿದೆ. ಬೆಲೆಕಟ್ಟಲಾಗದ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜಾಗ ಸಂಪಾದನೆ ಮಾಡಿರುವ ದಾಸ ಮಗದೊಬ್ಬ ಸ್ಟಾರ್ ನಟರ ಆಸ್ತಿಯ ಮೇಲೆ ಕಣ್ಣಾಕೋದು ಇರಲಿ ಬೇರೆ ಸ್ಟಾರ್‌ನಟರ ಫ್ಯಾನ್ಸ್ ಗಳನ್ನೂ ತನ್ನತ್ತ ಸೆಳಿಬೇಕು ಎನ್ನುವ ಕುತಂತ್ರವನ್ನ ಮಾಡೋದಿಲ್ಲ. ಹೀಗಿರುವಾಗ, ದೊಡ್ಮನೆ ಆಸ್ತಿ ತನಗೆ ದಕ್ಕಲಿಲ್ಲ ಎನ್ನುವ ಕಾರಣಕ್ಕೆ ಉಮಾಪತಿಯವರ ವಿರುದ್ದ ಜಿದ್ದು ಸಾಧಿಸ್ತಾರೆ, ಅವರ ವಿರುದ್ದ ಸಂಚು ರೂಪಿಸ್ತಾರೆ, ಅವರ ವಿರುದ್ದ ಇಲ್ಲಸಲ್ಲದ ಆರೋಪ ಮಾಡ್ತಾರೆ ಅಂತೆಲ್ಲಾ ಮಾತನಾಡಿಕೊಳ್ಳುವುದು ತಪ್ಪು.
ಒಂದ್ವೇಳೆ ದಾಸ ದೊಡ್ಮನೆಯ ಆಸ್ತಿ ಮೇಲೆ ಆಸೆಪಟ್ಟಿದ್ದು ನಿಜಾನೇ ಅಂತಾನೇ ತಿಳಿದುಕೊಳ್ಳೋಣ ಅದರಲ್ಲಿ ಏನ್ ತಪ್ಪು. ಅಷ್ಟಕ್ಕೂ, ಆಸ್ತಿ ಮೇಲೆ ಕಣ್ಣಿಡುವುದಕ್ಕೂ, ಆಸೆಪಟ್ಟು ಕೇಳಿ ಪಡೆಯುವುದಕ್ಕೂಅಜಗಜಾಂತರ ವ್ಯತ್ಯಾಸವಿದೆ. ಹೀಗಿರುವಾಗ ದರ್ಶನ್ ಆಸೆಪಟ್ಟು ನಿರ್ಮಾಪಕ ಉಮಾಪತಿಯವರ ಬಳಿ ಕೇಳಿದ್ದರಲ್ಲಿ ತಪ್ಪೇನಿದೆ. ಅಷ್ಟಕ್ಕೂ, ಅವರೇನು ಲಪಟಾಯಿಸೋಕೆ ನೋಡಿಲ್ಲವಲ್ಲ ದುಡ್ಡು ಕೊಟ್ಟು ಖರೀದಿ ಮಾಡೋದಕ್ಕೆ ಕೇಳಿದ್ದಾರೆ ಅವರು ಕೊಡಲ್ಲ ಅಂದಿದ್ದಾರೆ ಅಲ್ಲಿಗೆ ಮುಗೀತು. ಅದನ್ನು ಬಿಟ್ಟು ದೊಡ್ಮನೆಯವರನ್ನು ಹಾಗೂ ತೂಗುದೀಪ್ ಕುಟುಂಬವನ್ನು ಎತ್ತಿಕಟ್ಟುವ ಒಳಸಂಚು ರೂಪಿಸೋದ್ಯಾಕೆ.ಹೊಗೆಯಾಡದಿದ್ದರೂ ಕೂಡ ಕಡ್ಡಿಗೀರಿ ಚಳಿಕಾಯಿಸಿಕೊಳ್ಳುವ ಪ್ರಯತ್ನ ಮಾಡ್ತಿರೋದ್ಯಾಕೆ ಒಂದು ಗೊತ್ತಾಗ್ತಿಲ್ಲ.
ಎನಿವೇ, ಬೆಂಕಿಹಚ್ಚಿ ಮಜಾ ಉಡಾಯಿಸೋರ್ ಆಟ ಹೆಚ್ಚು ದಿನ ನಡೆಯಲ್ಲ ಒಂದಲ್ಲ ಒಂದು ದಿನ ತಾವೇ ಹೆಚ್ಚಿದ ಬೆಂಕಿಯ ಬಾಣಲೆಗೆ ಹಚ್ಚಿದವರೇ ಬೀಳಬೇಕು ಅಲ್ಲಿವರೆಗೂ ಕಾಯದೇ ಬೇರೆ ದಾರಿಯಿಲ್ಲ. ಆದರೆ ಒಂದಂತೂ ಸತ್ಯ ನೂರಾರು ಕೋಟಿಗೆ ಒಡೆಯನಾಗಿರುವ, ವರ್ಷಕ್ಕೆ ೩ ಕೋಟಿಯಂತೆ ಬಡಬಗ್ಗರಿಗೆ ದಾನ ಮಾಡುವ ಯಜಮಾನ ದೊಡ್ಮನೆ ಆಸ್ತಿ ಲಪಟಾಯಿಸಿಕೊಳ್ಳಬೇಕು ಎನ್ನುವ ಹಪಾಹಪಿ ಇರೋದಿಲ್ಲ ಬದಲಾಗಿ ಒಬ್ಬ ಅಭಿಮಾನಿಯಾಗಿ ಅಣ್ಣಾವ್ರ ಮೇಲಿನ ಅಭಿಮಾನ ಹಾಗೂ ದೊಡ್ಮನೆಯ ಸ್ಟಾರ್‌ಗಳ ಮೇಲಿರುವ ಪ್ರೀತಿಗೆ ಕಾಣಿಕೆಯಾಗಿ ಆ ಆಸ್ತಿಯನ್ನು ಖರೀದಿಸಿ ಜೋಪಾನ ಮಾಡ್ಬೇಕು ಎನ್ನುವ ಬಯಕೆ ಇದ್ದಿರಬಹುದು. ಅದನ್ನ ಅಪಾರ್ಥಮಾಡಿಕೊಂಡು ಇಲ್ಲಸಲ್ಲದ ಬಣ್ಣಕಟ್ಟಿ ಸಾರಥಿಯ ತೇಜೋವಧೆ ಮಾಡುವ ಕಾಯಕ ಒಳ್ಳೆಯದಲ್ಲ ಬಿಡಿ
ಜುಲೈ 17 ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬ. ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ “ಲಂಕೆ” ಚಿತ್ರದ ಪ್ರಮುಖಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ “ಲಂಕೆ” ಚಿತ್ರದ ಮೋಷನ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್ ನಲ್ಲಿ “ಲಂಕೆ” ಚಿತ್ರ ತೆರೆಗೆ ಬರಲಿದೆ.
ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಾಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.
ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್ ಗಳಿವೆ.
ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.