ಸಿನಿಮಾ ಮಂದಿ ಈಗ ನಕ್ಕರೂ, ಭವಿಷ್ಯ ಕರಾಳವೇ….!!

ಸಿನಿಮಾ ಮಂದಿ ಮುಖದಲ್ಲಿ ಕೊನೆಗೂ ನಗುವಿನ ಗೆರೆ ಮೂಡಿವೆ. ಸತತ ಮೂರು ತಿಂಗಳ ನಂತರ ಸರ್ಕಾರವು ಮಲ್ಟಿಪ್ಲೆಕ್ಸ್‌ ಸೇರಿದಂತೆ ಚಿತ್ರಮಂ ದಿರಗಳ ಬಾಗಿಲು ತೆರೆಯಲು ಪರ್ಮಿಷನ್‌ ಕೊಟ್ಟಿದೆ. ಅಲ್ಲೂ ಒಂದು ಕಂಡಿಷನ್‌ ಇದೆ. ಶೇಕಡಾ 50 ರಷ್ಟು ಸೀಟು ಭರ್ತಿ ಮೂಲಕ ಚಿತ್ರಮಂ ದಿರಗಳಲ್ಲಿ ಚಿತ್ರಪ್ರದರ್ಶನ ನಡೆಸಬೇಕು ಅನ್ನೋದು ಸರ್ಕಾರದ ಕಂಡಿ ಷನ್.‌ಅದಕ್ಕೆ ಕಾರಣವೂ ಇದೆ. ಮಹಾಮಾರಿ ಕೊರೋನಾ ಇನ್ನು ಹೋಗಿಲ್ಲ. ಈಗಲೂ ದಿನವೂ ರಾಜ್ಯದಲ್ಲಿ ಒಂದಷ್ಟು ಕೊರೋನಾ ಪಾಸಿಟಿವ್‌ ಪ್ರಕರಣ ದಾಖಲಾಗುತ್ತಲೇ ಇವೆ. ಹಾಗೆಯೇ ಹೊರ ರಾಜ್ಯ ಗಳ ಲ್ಲೀಗ ಕೊರೋನಾ ಭೀತಿ ಮತ್ತಷ್ಟು ಹೆಚ್ಚಾಗಿದೆ ಎನ್ನುವ ಆತಂಕದ ವಿಷಯ ಕೇಳಿಬರುತ್ತಿದೆ. ಅಲ್ಲದೇ ಯುರೋಪ್‌ ಕಂಟ್ರಿಗಳಲ್ಲಿ ಕೊರೋನಾ ಮತ್ತೆ ಹೆಚ್ಚಾಗುತ್ತಿರುವ ಸುದ್ದಿಗಳು ಬರುತ್ತಿವೆ. ಈ ಕಾರಣಕ್ಕೆ ಸರ್ಕಾರ, ಒಂದಷ್ಟು ಕಂಡಿಷನ್‌ ನಡುವೆಯೇ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ನೀಡಿದೆ. ಸಹಜವಾಗಿಯೇ ಇದು ಸಿನಿಮಾ ಮಂದಿ ಮುಖದಲ್ಲಿ ಒಂದಷ್ಟು ಸಂತಸ ತಂದಿದೆ.

ಹಾಗಂತ ಚಿತ್ರೋದ್ಯಮ ಎದ್ದುಕುಳಿತುಕೊಂಡಿತು ಅಂತಲ್ಲ. ಭವಿಷ್ಯ ಕರಾಳವೇ ಆಗಿದೆ. ಸದ್ಯಕ್ಕೆ ಶೇಕಡಾ 50 ರಷ್ಟು ಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ಸಿಕ್ಕರೂ, ಚಿತ್ರರಂಗದ ಬೇಡಿಕೆ ಈಗ ಶೇಕಡಾ ನೂರರಷ್ಟು ಸೀಟು ಭರ್ತಿಗೆ ಅವಕಾಶ ಕೊಡಿ ಎನ್ನುವು ದಾಗಿದೆ. ಈ ಸಂಬಂಧ ಇಂದು ( ಜುಲೈ 19 ) ಕರ್ನಾಟಕ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಿನಿಮಾ ಮಂದಿಯೂ, ಮುಖ್ಯಮಂ ತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎನ್ನುವ ಮಾತುಗಳೂ ಕೇಳಿಬಂದಿವೆ.

ಉದ್ಯಮವೂ ಸರ್ಕಾರವನ್ನು ಈ ರೀತಿ ಕೇಳುವುದಕ್ಕೂ ಕಾರಣವಿದೆ. ಚಿತ್ರಮಂದಿರಗಳಲ್ಲಿ ಈಗ ಶೇಕಡಾ 50 ರಷ್ಟು ಸೀಟು ಭರ್ತಿ ಮೂಲಕ ಚಿತ್ರ ಪ್ರದರ್ಶಿಸುವುದು ಅದು ಅಷ್ಟು ಸುಲಭ ಇಲ್ಲ. ಮಲ್ಟಿಪ್ಲೆಕ್ಸಗಳಿಗೆ ಅನುಕೂಲ ಆದೀತೇ ಹೊರತು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿಗೆ ಶೇಕಡ ೫೦ ರಷ್ಟು ಸೀಟು ಭರ್ತಿಯ ಅವಕಾಶ ಮತ್ತಷ್ಟು ನಷ್ಟವೇ ಹೌದು. ಯಾಕಂದ್ರೆ, ಅವತ್ತಿನ ಖರ್ಚು ವೆಚ್ಚಗಳಿಗೂ ಪ್ರದರ್ಶನದ ಹಣ ಬರೋದಿಲ್ಲ. ಮೇಲಾಗಿ ಅಷ್ಟಾದ್ರೂ ಜನ ಬರುತ್ತಾರೆನ್ನುವ ನಂಬಿಕೆ ಯೂ ಇಲ್ಲ. ಜತೆಗೆ ಶೇಕಡಾ 50 ರಷ್ಟು ಸೀಟು ಭರ್ತಿ ಅಂದಾಕ್ಷಣ ಯಾವುದೇ ಸ್ಟಾರ್‌ ಸಿನಿಮಾಗಳು ಚಿತ್ರಮಂದಿರಕ್ಕೆ ಬರೋದಿಲ್ಲ.

ಒಂದು ವೇಳೆ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೆ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗಬಹುದು. ಸಹಜವಾಗಿಯೇ ಅವರ ಸಿನಿಮಾ ನೋಡುವುದಕ್ಕಾದರೂ ಚಿತ್ರಮಂದಿರಕ್ಕೂ ಜನ ಬರುತ್ತಾರೆನ್ನುವ ನಂಬಿಕೆಯ ಮೂಲಕವೇ ಸೋಮವಾರ ಚಿತ್ರೋದ್ಯಮದ ಮಂದಿ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆಂದು ಗೊತ್ತಾಗಿದೆ. ಇರಲಿ, ಸಿನಿಮಾ ಮಂದಿ ಭಾವಿಸಿಕೊಂಡಂತೆ ಇವತ್ತೇ ಚಿತ್ರಮಂದಿರಗಳಲ್ಲಿ ನೂರರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕರೂ, ಚಿತ್ರಮಂದಿರಗಳಿಗೆ ಸಡನ್‌ ಆಗಿ ಸ್ಟಾರ್‌ ಸಿನಿಮಾ ಬರುತ್ತವೆ ಎನ್ನುವ ಖಾತರಿ ಇಲ್ಲ. ಯಾಕಂದ್ರೆ ಜನಕ್ಕೆ ಈಗಲೂ ಕೊರೋನಾ ಸೋಂಕಿನ ಭೀತಿ ಇರೋದ್ರಿಂದ ಸ್ಟಾರ್‌ ಸಿನಿಮಾ ರಿಲೀಸ್‌ ಆದರೂ, ಜನ ಚಿತ್ರ ಮಂದಿರದತ್ತ ಮುಖ ಮಾಡುವುದು ಕಷ್ಟವೇ ಇದೆ ಎನುತ್ತಾರೆ ಸಿನಿಮಾ ನಿರ್ಮಾಪಕರೊಬ್ಬರು.

ಪರಿಸ್ಥಿತಿ ಭೀಕರವಾಗಿದೆ. ತಕ್ಷಣಕ್ಕೆ ನೂರರಷ್ಟು ಸೀಟು ಭರ್ತಿಗೂ ಅವಕಾಶ ಸಿಕ್ಕರೂ, ಉದ್ಯಮ ಚೇತರಿಕೆ ಕಾಣೋದಿಕ್ಕೆ ಇನ್ನು ವರ್ಷವೇ ಬೇಕಿದೆ. ಹೀಗಾಗಿ ಉದ್ಯಮಕ್ಕೆ ಎದುರಾಗಬಹುದಾದ ಸಂಕಷ್ಟಗಳನ್ನು ದೂರ ಮಾಡಬಹುದಾದ ಪರ್ಯಾಯ ದಾರಿಗಳತ್ತ ಉದ್ಯಮ ಗಮನ ಹರಿಸಬೇಕಿದೆ. ಕಮರ್ಷಿಯಲ್‌ ಸಿನಿಮಾಗಳ ಜತೆಗೆ ಕಂಟೆಂಟ್‌ ಆಧರಿತ ಸಿನಿಮಾಗಳನ್ನು ನಿರ್ಮಿಸಿ, ಡಿಜಿಟಲ್‌ ಫ್ಲಾಟ್‌ಪಾರ್ಮ್‌ ನಲ್ಲೂ ರಿಲೀಸ್‌ ಮಾಡಬಹುದು, ಹಾಗೆಯೇ ಚಿತ್ರಮಂದಿರಕ್ಕೂ ಬರಬಹುದು. ಹಾಗೆಯೇ ಸ್ಟಾರ್‌ ಗಳು ಕೂಡ ವರ್ಷಕ್ಕೆ ಒಂದೋ ಅಥವಾ ಎರಡು ಸಿನಿಮಾ ಎನ್ನುವ ಬೌಂಡರಿಯ ಕಂಫರ್ಟ್‌ ಜೋನ್‌ ದಾಟಿ, ಕಮರ್ಷಿಯಲ್‌ ಸಿನಿಮಾಗಳ ಜತೆಗೆ ಕಂಟೆಂಟ್‌ ಆಧರಿತ ಕಡಿಮೆ ಬಜೆಟ್ ನ ಸಿನಿಮಾಗಳಿಗೂ ಕಾಲ್‌ ಶೀಟ್‌ ಕೊಡಲಿ. ಆಗ ಕೊರೋನಾದಂತಹ ಸಂಕಷ್ಟಗಳ ಕಾಲದಲ್ಲೂ ಉದ್ಯಮ ಬದುಕುಳಿಯಲು ಸಾಧ್ಯ.

Related Posts

error: Content is protected !!