Deshadri Hosmane
Those who came to journalism with a fighting background. Hew has over 20 years of experience as a journalist and has worked in a variety of fields including politics, crime and agriculture. He is also a film journalist by accident and has been awarded the prestigious Aragini Award by the Karnataka Media Academy. He has worked in evening newspapers like sanjevani, karunaadu Sanje. Also work in tv Chanel. ETV, Udaya TV, Janashree, Vijaya Karnataka and Kannada newspapers.
ದೇಶಾದ್ರಿ ಹೊಸ್ಮನೆ
ಹೋರಾಟದ ಹಿನ್ನೆಲೆಯೊಂದಿಗೆ ಪತ್ರಿಕೋದ್ಯಮ ಕ್ಕೆ ಬಂದವರು. ಪತ್ರಕರ್ತನಾಗಿ 20 ವರ್ಷಗಳಿಗೂ ಹೆಚ್ವು ಕಾಲ ಅನುಭವ ಹೊಂದಿದ್ದು, ರಾಜಕೀಯ, ಅಪರಾಧ, ಕೃಷಿ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವಿ. ಹಾಗೆಯೇ ಆಕಸ್ಮಿಕ ಎಂಬಂತೆ ಸಿನಿಮಾ ಪತ್ರಕರ್ತರಾಗಿ ಬಂದ ಅವರು, ಕರ್ನಾಟಕ ಮಾಧ್ಯಮ ಅಕಾಡೆಮಿ ನೀಡುವ ಪ್ರತಿಷ್ಟಿತ ಅರಗಿಣಿ ಪ್ರಶಸ್ತಿ ಗೆ ಪಾತ್ರವಾಗಿದ್ದಾರೆ. ಸಂಜೆ ವಾಣಿ, ಈಟಿವಿ, ಉದಯ ಟಿವಿ, ಜನಶ್ರೀ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದು, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ, ನ್ಯೂಸ್ ಮೀಡಿಯಾ ವಿಶೇಷ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.ಈಗ ಸಿನಿ ಲಹರಿ ವೆಬ್ ಸೈಟ್ ಹಾಗೂ ಯುಟ್ಯೂಬ್ ಚಾನೆಲ್ ರೂವಾರಿ ಆಗಿದ್ದಾರೆ.
ಪಿ.ವಾಸು ಅಂದ್ರೆ ರಿಯಲಿ ಅಮೇಜಿಂಗ್….ಹಿರಿಯ ನಿರ್ದೇಶಕ ಪಿ. ವಾಸು ಅವರ ಬಗ್ಗೆ ಹೀಗೆ ಮೆಚ್ಚುಗೆಯ ಉದ್ಘಾರ ತೆಗೆದಿದ್ದು ಕನ್ನಡದ ಭರವಸೆಯ ಯುವ ನಟಿ ಆರೋಹಿ ನಾರಾಯಣ್. ಭೀಮಸೇನ ನಳಮಹಾ ರಾಜನ ಈ ಚೆಲುವೆ ಈಗ ʼ ದೃಶ್ಯ 2ʼ ಚಿತ್ರದ ಚಿತ್ರೀಕರಣ ದಲ್ಲಿ ಬ್ಯುಸಿ ಆಗಿದ್ದಾರೆ. ಅಂದ ಹಾಗೆ ʼದೃಶ್ಯ 2ʼ ಹೆಸರಾಂತ ನಿರ್ದೇಶಕ ಪಿ. ವಾಸು ನಿರ್ದೇಶನದ ಸಿನಿಮಾ. ʼದೃಶ್ಯʼ ಭಾಗ ಒಂದಕ್ಕೂ ಅವರೇ ನಿರ್ದೇಶಕರು. ಕನ್ನಡಕ್ಕೆ ʼಆಪ್ತಮಿತ್ರʼದಂತಹ ಸೂಪರ್ ಡೂಪರ್ ಹಿಟ್ ಸಿನಿಮಾ ಕೊಟ್ಟ ಖ್ಯಾತಿ ಅವರದು. ಇದೀಗ ʼದೃಶ್ಯ 2ʼ ಮೂಲಕ ಮತ್ತೆ ಸಿನಿದುನಿಯಾದಲ್ಲಿ ಕಮಾಲ್ ಮಾಡಲು ಬರುತ್ತಿದ್ದು, ಕೊರೋನಾ ಭೀತಿಯ ನಡುವೆಯೂ ಈ ಚಿತ್ರಕ್ಕೆ ಈಗ ಮಡಿಕೇರಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ನಟ ರವಿಚಂದ್ರನ್ ಸೇರಿದಂತೆ ಇಡೀ ತಂಡವೇ ಅಲ್ಲಿದೆ. ಇನ್ನು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ನಟಿ ಆರೋಹಿ ನಾರಾಯಣ್ ಕೂಡ ಈಗ ಮಡಿಕೇರಿ ನಲ್ಲಿದ್ದಾರೆ.
ಮಡಿಕೇರಿಯಲ್ಲೀಗ ಮಳೆ. ಮಡಿಕೇರಿ ಮಳೆ ಅಂದ್ರೆ ಅದನ್ನು ಹೆಚ್ಚೇನು ವಿವರಿಸಬೇಕಿಲ್ಲ. ಕಾಫಿ ಕಾಡಿನಲ್ಲಿ ದಟ್ಟವಾಗಿ ಸುರಿಯುವ ಮಳೆ ಅದು. ಅದರ ನಡುವೆಯೇ ಕಳೆದ ಹಲವು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಆರೋಹಿ ನಾರಾಯಣ್, ʼಸಿನಿಲಹರಿʼಯೊಂದಿಗೆ ಮಾತನಾಡುತ್ತಾ, ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಚಿತ್ರೀಕರಣ ಅದ್ಬುತವಾಗಿ ನಡಯುತ್ತಿದೆ. ಇಡೀ ಟೀಮ್ ಜತೆಗಿದೆ. ಒಂದು ಸಿನಿಮಾ ಟೀಮ್ ಎನ್ನುವುದಕ್ಕಿಂತ ಒಂದೇ ಫ್ಯಾಮಿಲಿ ವಾತಾವರಣ ಇಲ್ಲಿದೆ. ತುಂಬಾ ಕಂಫರ್ಟ್ ಜೋನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. ಎಲ್ಲರೂ ತುಂಬಾ ಸೇಫ್ಟಿ ತೆಗೆದುಕೊಂಡೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆನ್ನುತ್ತಾ ಅಲ್ಲಿನ ಅನುಭವ ತೆರೆದಿಟ್ಟರು.
ಚಿತ್ರೀಕರಣದ ಕುರಿತು ಮಾತನಾಡಿದ್ದಕ್ಕಿಂತ ನಿರ್ದೇಶಕ ಪಿ. ವಾಸು ಅವರ ಬಗ್ಗೆಯೇ ಹೆಚ್ಚು ಮಾತನಾಡಿದರು.ʼ ಪಿ.ವಾಸು ಅವರಂತಹ ಲೆಂಜೆಡರಿ ಡೈರೆಕ್ಟರ್ ಕಾಂಬನೇಷನಿನಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೆ ಒಂದು ಪುಣ್ಯ. ಸಿನಿಮಾ ಅಂತ ಬಂದಾಗ ಅವರಿಂದ ತುಂಬಾ ಕಲಿಯುವುದಿದೆ. ಅದಕ್ಕೆ ನಂಗೊಂದು ಅವಕಾಶ ಈ ಸಿನಿಮಾದಲ್ಲಿ ಸಿಕ್ಕಿದೆ ಎಂದರು.
ಇನ್ನು ನಟಿ ಆರೋಹಿ ನಾರಾಯಣ್ ಡಯಟ್ ಮಾಡುತ್ತಿದ್ದಾರಂತೆ. ಕೊಂಚ ಸಣ್ಣಾಗಬೇಕೆನ್ನುವುದು ಅವರ ಆಸೆ. ಹೀಗಾಗಿ ಫುಡ್ ವಿಚಾರ ದಲ್ಲಿ ತುಂಬಾ ಸ್ಟ್ರಿಕ್ಟ್ ಅಂತೆ. ʼ ಡಯೆಟ್‌ನಲ್ಲಿದ್ದಾಗ ತಕ್ಕನಾದ ಫುಡ್ ಸಿಗೋದು ಕಷ್ಟ. ಅದರಲ್ಲೂ ಸಿನಿಮಾ ಸೆಟ್ ನಲ್ಲಿ ಅಂತಹ ಫುಡ್ ಗೆ ಪರದಾಡಬೇಕಾಗುತ್ತದೆ. ಆದರೆ ನಿರ್ದೇಶಕರಾದ ಪಿ. ವಾಸು ಸ್ವಂತ ತಮ್ಮ ಮಕ್ಕಳಂತೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಡಯಟ್ ಪೂರಕವಾದ ಫುಡ್ ಅನ್ನು ಟೀಮ್ ಗೆ ಹೇಳಿ ತರಿಸಿಕೊಡುತ್ತಾರೆ. ಇಷ್ಟು ಕೇರ್ ಯಾರು ತಗೋಳ್ಳೋದಿಲ್ಲ. ಆದರೆ, ನಮ್ಮ ನಿರ್ದೇಶಕರು ಡಿಫೆರೆಂಟ್ ಅಂತಾರೆ ನಟಿ ಆರೋಹಿ ನಾರಾಯಣ್.
ಕೊರೋನಾ ಮಹಾಮಾರಿಯ ನಡುವೆಯೂ ಈ ವರ್ಷ ʼರಾಬರ್ಟ್ʼ ಭರ್ಜರಿ ಆಗಿಯೇ ಆಬ್ಬರಿಸಿದ ನಂತರ ಚಂದನವನದಲ್ಲಿ ನಟ ದರ್ಶನ್ ನಟನೆಯ ಮುಂಬರುವ ಸಿನಿಮಾಗಳ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಇದೆ. ಸದ್ಯಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ʼರಾಜಾವೀರ ಮದಕರಿ ನಾಯಕʼ ದಲ್ಲಿ ದರ್ಶನ್ ಬ್ಯುಸಿ ಆಗಿದ್ದಾರೆ. ಹಾಗೆಯೇ ʼಯಜಮಾನʼ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರಿಗೆ ದರ್ಶನ್ ಮತ್ತೊಂದು ಕಾಲ್‌ಶೀಟ್ ನೀಡಿದ್ದಾರೆ. ಇಷ್ಟರಲ್ಲಿಯೇ ಆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ ಅನ್ನೋ ಸುದ್ದಿಗಳಿವೆ. ಸದ್ಯಕ್ಕೆ ಇವೆರೆಡು ಸಿನಿಮಾಗಳ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅದಾದ ನಂತರ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು, ಯಾರ ಜತೆಗೆ ಎನ್ನುವ ಕುತೂಹಲದ ನಡುವೆಯೇ ನಟ ದರ್ಶನ್ ಅವರನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಭೇಟಿ ಮಾಡಿ, ಕೇಕ್ ತಿನ್ನಿಸಿದ್ದಾರೆ. ಸಹಜವಾಗಿಯೇ ಇವರ ಭೇಟಿ ಭಾರೀ ಕುತೂಹಲ ಮೂಡಿಸಿದೆ.
ಕನ್ನಡದ ಮಟ್ಟಿಗೆ ಸಕ್ಸಸ್ ನಿರ್ದೇಶಕರೇ ಅಗಿರುವ ದಯಾಳ್ ಪದ್ಮನಾಭನ್ ಇತ್ತೀಚೆಗೆ ದೊಡ್ಡ ಸ್ಟಾರ್ ಜತೆಗೆ ಸಿನಿಮಾ ಮಾಡಿಲ್ಲ ಅಂತಂದರೂ ಕೂಡ ಕಂಟೆಂಟ್ ಆಧರಿತ ಸಿನಿಮಾಗಳ ಮೂಲಕ ಸಖತ್ ಸೌಂಡ್ ಮಾಡುತ್ತಲೇ ಬರುತ್ತಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ತಾವೇ ನಿರ್ಮಾಪಕರಾಗುವುದರ ಜತೆಗೆ ನಿರ್ದೇಶಕರೂ ಆಗಿ, ಒಂದು ಸಿನಿಮಾಕ್ಕೆ ಹಾಕಿದ ಬಂಡವಾಳ ಲಾಸ್ ಮಾಡಿಕೊಂಡಿದ್ದೇ ಇಲ್ಲ.
ಕಡಿಮೆ ಬಜೆಟ್ ಸಿನಿಮಾ ಮಾಡಿ, ಹೆಚ್ಚು ಲಾಭ ಮಾಡುವ ನಿರ್ದೇಶಕ ಕಮ್ ನಿರ್ಮಾಪಕ ಯಾರು ಅಂತ ಹುಡುಕಿದರೆ ಮೊದಲು ಸಿಗುವ ಹೆಸರು ದಯಾಳ್ ಪದ್ಮನಾಭನ್. ಅದ್ಯಾಕೋ ಅವರಿಗೆ ಈಗ ದರ್ಶನ್ ಅವರೊಂದಿಗೆ ಸಿನಿಮಾ ಮಾಡುವ ಆಸೆ ಚಿಗುರಿದೆ. ಅವರಿಬ್ಬರ ಭೇಟಿ ಈ ಫೋಟೋ ನೋಡಿದಾಗ ಹಾಗನಿಸಿದರೂ ಅಚ್ಚರಿ ಇಲ್ಲ. ಆದರೆ ಅವರ ಭೇಟಿಯ ಉದ್ದೇಶ ಬೇರೆಯದೇ ಇದೆ. ಅದು ಸಿನಿಮಾ ಮಾಡುವ ಕಾರಣಕ್ಕಾಗಿ ಅಲ್ಲ. ಹಾಗಾದ್ರೆ, ಯಾಕೆ ಈ ಭೇಟಿಯ ಉದ್ದೇಶ ? ಆ ಬಗ್ಗೆ ದಯಾಳ್ ಹೇಳ್ತಾರೆ ಕೇಳಿ.
ʼ ನಟ ದರ್ಶನ್ ಅವರು ಚಿತ್ರರಂಗಕ್ಕೆ ಬಂದು ಇಲ್ಲಿಗೆ ೨೪ ವರ್ಷ ಆಯಿತು. ಒಬ್ಬ ನಟನ ಪಾಲಿಗೆ ಇದು ಬಹುದೊಡ್ಡ ಸಾಧನೆ. ಅದೇ ಕಾರಣಕ್ಕೆ ಅವರಿಗೆ ವಿಶ್ ಮಾಡೋಣ ಅಂತ ಕಳೆದ ನಾಲ್ಕೈದು ದಿನಗಳಿಂದ ಅಂದುಕೊಂಡಿದ್ದೆ. ಅದ್ಯಾಕೋ ಸಮಯ ಕೂಡಿ ಬಂದಿರಲಿಲ್ಲ. ಜತೆಗೆ ಅವರು ಸಿಗ್ತಾರೋ ಇಲ್ಲವೋ ಎನ್ನುವ ಕಾರಣಕ್ಕೆ ಹಿಂದು ಮುಂದು ನೋಡುತ್ತಿದ್ದೆ. ಇದೇ ವೇಳೆ ಚೆನ್ನೈನಿಂದ ಪರಿಚಿತರೊಬ್ಬರು ನಟ ದರ್ಶನ್ ಅವರನ್ನು ಭೇಟಿ ಮಾಡುವುದಿದೇ ಅಂತ ಹೇಳಿದ್ದರು.ಒಂದು ಖಾಸಗಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅವರು, ಚೆನ್ನೈನಿಂದ ದರ್ಶನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಅವರ ಕರೆದುಕೊಂಡು ಹೋಗುವ ನೆಪದಲ್ಲಿ ನಾನು ಬರುವುದಾಗಿ ಹೇಳಿದ್ದೆ. ಹಾಗೆಯೇ ಅವರ ಸಿನಿ ಜರ್ನಿಗೆ ಸ್ಪೆಷಲ್ ವಿಶ್ ಮಾಡೋಣ ಅಂತ ಒಂದು ಸಿನಿಮಾ ರೋಲ್ ನ ಸೆಲ್ಯುಲಾಯ್ಡ್ ಶೈಲಿಯ ಕೇಕ್ ತಯಾರಿಸಿ, ಅವರ ಮನೆಗೆ ತೆಗೆದುಕೊಂಡು ಹೋಗಿದ್ದೆ. ಅದನ್ನು ನೋಡಿ ದರ್ಶನ್ ತುಂಬಾ ಖುಷಿ ಪಟ್ಟರು. ಇದೇನೋ ತುಂಬಾ ಡಿಫೆರೆಂಟ್ ಆಗಿದೆ, ನಿಮ್ಗೆ ಮಾತ್ರ ಈ ಥರ ಪ್ಲಾನ್ ಹೊಳೆಯುತ್ತೆ ಅಂತೆಲ್ಲ ತಮಾಷೆ ಮಾಡಿ, ಖುಷಿ ಪಟ್ಟರುʼ ಅಂತ ದರ್ಶನ್ ಭೇಟಿಯ ಹಿಂದಿನ ಕಥೆಯನ್ನು ಬಿಚ್ಚಿಟ್ಟರು ನಿರ್ದೇಶಕ ದಯಾಳ್.
ಒಂದೇ ದಿನದಲ್ಲಿ ಎರೆಡೆರೆಡು ಸಿನಿಮಾ ನಮ್ದೇ ಲಾಂಚ್ ಆಗಿ ಕಣ್ರೀ, ಬಟ್ ಈ ಚಕ್ರವರ್ತಿ ಲಕ್ ಹೇಗಿದೆ ನೋಡ್ರಿ…! ಪತ್ರಕರ್ತ, ಬರಹಗಾರ, ನಿರ್ದೇಶಕ ಹಾಗೂ ನಟ ಚಂದ್ರಚೂಡ್ ಚಕ್ರವರ್ತಿ ಅವರ ಬಗ್ಗೆ ಒಂದ್ರೀತಿ ಅಚ್ಚರಿ, ಮತ್ತೊಂದು ಬಗೆಯಲ್ಲಿ ಮೆಚ್ಚುಗೆಯ ಈ ಮಾತು ಹೇಳಿದ್ದು ಮತ್ತೊಬ್ಬ ಚಕ್ರವರ್ತಿ, ಅಲಿಯಾಸ್ ಅಭಿನಯ ಚಕ್ರವರ್ತಿ ಒನ್ ಅಂಡ್ ಒನ್ಲೀ ಕಿಚ್ಚ ಸುದೀಪ್. ಬಿಗ್ ಬಾಸ್ ಖ್ಯಾತಿಯ ನಟ, ನಿರ್ದೇಶಕ ಚಂದ್ರಚೂಡ್ ಚಕ್ರವರ್ತಿ ಭಾನುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಬಾರಿಯ ಅವರ ಹುಟ್ಟು ಹಬ್ಬ ಹಿಂದೆಂದಿಗಿಂತ ತುಂಬಾನೆ ಸ್ಪೆಷಲ್ ಆಗಿತ್ತು. ಯಾಕಂದ್ರೆ, ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರೀಗ ನಟನೆಯ ಜತೆಗೆ ನಿರ್ದೇಶಕರಾಗಿಯೂ ಬ್ಯುಸಿ ಆಗುತ್ತಿದ್ದಾರೆ.
ಸದ್ದಿಲ್ಲದೆ ಸುದ್ದಿ ಮಾಡದೆ ಅವರೀಗ ಎರಡು ಸಿನಿಮಾದೊಂದಿಗೆ ಸುದ್ದಿಯಲ್ಲಿದ್ದಾರೆ. ಕಮಲ್ ಜೋಷಿ ನಿರ್ಮಾಣ ಹಾಗೂ ವಶಿಷ್ಠ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಧ್ಯಂತರ ಹೆಸರಿನ ಚಿತ್ರದಲ್ಲಿ ಚಂದ್ರಚೂಡ್ ಚಕ್ರವರ್ತಿ ಹೀರೋ ಆಗಿ ಎಂಟ್ರಿ ಆಗುತ್ತಿದ್ದರೆ, ಶ್ರೀಧರ್ ರಾಮ್, ಬಾಬು ರೆಡ್ಡಿ, ಹಾಗೂ ಕಮಲ್ ಗೌಡ ನಿರ್ಮಾಣದ ʼಭೀಮಿʼ ಚಿತ್ರಕ್ಕೆ ಚಂದ್ರಚೂಡ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜತೆಗೆ ಅದರಲ್ಲೂ ನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಭಾನುವಾರ ಅವರ ಹುಟ್ಟು ಹಬ್ಬದ ಅಂಗವಾಗಿ ಅವೆರೆಡು ಸಿನಿಮಾಗಳ ಫಸ್ಟ್ ಪೋಸ್ಟರ್ ಲಾಂಚ್ ಆದವು. ವಿಶೇಷ ಅಂದ್ರೆ ಅವರೆಡನ್ನು ಲಾಂಚ್ ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸಪ್ರೇಟ್ ಆಗಿ ಎರಡನ್ನು ಲಾಂಚ್ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್, ಒಂದೇ ದಿನದಲ್ಲಿ ಎರಡೆರೆಡು ಸಿನಿಮಾ ನಮ್ದೇ ಲಾಂಚ್ ಆಗಿ ಕಣ್ರೀ.. ಬಟ್ ಈ ಚಕ್ರವರ್ತಿ ಅವರದ್ದು ಭರ್ಜರಿ ಲಕ್ ಬಿಡಿ.. ಅಂತ ಅಚ್ಚರಿ ಮತ್ತು ಮೆಚ್ಚುಗೆಯ ಮಾತು ಹೇಳಿದರು.
ಬಿಗ್ ಬಾಸ್ ಮನೆಯೊಳಗೆ ಚಂದ್ರಚೂಡ್ ಅವರ ಮಾತುಗಾರಿಕೆಯ ಬುದ್ಧಿವಂತಿಕೆಯ ಬಗ್ಗೆ ಸಾಕಷ್ಟು ಪ್ರಶಂಸೆ ಹೇಳಿದ್ದ ಕಿಚ್ಚ ಸುದೀಪ್, ಕೆಲವ ಆಕ್ಷೇಪಾರ್ಹ ಮಾತು ಕೇಳಿ ಬಂದಾಗ ಫುಲ್ ಕ್ಲಾಸ್ ತೆಗೆದುಕೊಂ ಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇಷ್ಟಾಗಿಯೂ ಚಂದ್ರಚೂಡ್ ಅವರ ಸಾಹಿತ್ಯ , ಬರವಣಿಗೆ ಹಾಗೂ ಸಾಹಸದ ಬದುಕಿನ ಬಗ್ಗೆ ಸುದೀಪ್ ಅವರಲ್ಲಿ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಇದೆ. ಅವರೆಡು ಸಿನಿಮಾಗಳ ಫಸ್ಟ್ ಲುಕ್ ಲಾಂಚ್ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯೊಳಗೆ ಕಂಡ ಚಂದ್ರಚೂಡ್ ಅವರನ್ನೇ ನೆನಪಿಸಿಕೊಂಡು ಮಾತನಾಡಿದ ನಟ ಕಿಚ್ಚ ಸುದೀಪ್, ʼ ಹುಟ್ಟಿದ್ದಕ್ಕಾಗಿಯೇ ಇವ್ರು ಬದುಕುತಿರಬೇಕು ಅಂತೆನಿಸುತ್ತೇ. ಅವರು ಸಿಕ್ಕಾಪಟ್ಟೆ ಸ್ಟ್ರೈಟ್ ಫಾರ್ವರ್ಡ್.ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಅದಿರಲಿ, ಅವರ ಬಗ್ಗೆ ಖುಷಿ ಆಗ್ತೀರೋದು ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಿನಿಮಾ ಸಿನಿಮಾ ಅಂತ ಬ್ಯುಸಿ ಆಗುತ್ತಿದ್ದಾರೆ. ತುಂಬಾ ಖುಷಿ ಆಗುತ್ತಿದೆ. ಅವರಿಗೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗುತ್ತಿರುವ ಬಗ್ಗೆ ನಿರ್ದೇಶಕ, ನಟ ಚಂದ್ರಚೂಡ್ ಕೂಡ ಖುಷಿ ಆಗಿದ್ದಾರೆ.ʼ ಗೊತ್ತಿಲ್ಲ, ಇದೆಲ್ಲ ನಾನು ನಿರೀಕ್ಷೆ ಮಾಡಿರಲಿಲ್ಲ. ಹೇಂಗಾಗುತ್ತೋ ಹಾಗೆ ಆಗ್ಲಿ ಅಂತ ಬಿಗ್ ಬಾಸ್ ಮನೆಗೆ ಹೋಗಿ ಬಂದೆ. ಅಲ್ಲಿಂದ ಬರುತ್ತಿದ್ದಂತೆಯೇ ಒಂದಷ್ಟು ಚಟು ವಟಿಕೆಗಳು ಶುರುವಾದವು. ಸದ್ಯಕ್ಕೆ ಈಗ ಎರಡು ಪ್ರಾಜೆಕ್ಟ್ ಶುರು ವಾಗಿವೆ. ಇನ್ನು ಈಗಾಗಲೇ ನಾನು ಒಪ್ಪಿಕೊಂಡ ಸಿನಿಮಾಗಳ ಪೈಕಿ ʼಗಾನ್ ಕೇಸ್ʼ ಶೂಟಿಂಗ್ ಬಾಕಿ ಇದೆ. ಜರ್ನಿ ಚೆನ್ನಾಗಿದೆ. ಎಲ್ಲವೂ ಒಳ್ಳೆಯದಾಗುತ್ತೆ ಎನ್ನುವ ನಿರೀಕ್ಷೆ ಇದೆ ಎನ್ನುತ್ತಾರೆ ಚಂದ್ರಚೂಡ್. ಇನ್ನು ಚಂದ್ರಚೂಡ್ ನಟಿಸಿರುವ ʼಮೇಲೊಬ್ಬ ಮಾಯಾವಿʼ ಹಾಗೂ ʼಮಾರೀಚ ʼ ಸಿನಿಮಾಗಳು ತೆರೆಕಾಣಬೇಕಿದೆ.
ಫ್ರಾಕ್ ಹಾಕಿಕೊಂಡು ಮಾಸ್ಟರ್ ಪೀಸ್' ಜೊತೆ ವಾಕಿಂಗ್ ಬಂದ ನಾಗವಲ್ಲಿಯನ್ನು ನೀವೆಲ್ಲಾ ನೋಡಿದ್ದೀರಿ. ಆ ನಾಗವಲ್ಲಿ ಮೇಲೆ ರೀಲ್‌ನಲ್ಲಿ ಅಣ್ತಮ್ಮನಿಗೆ ಲವ್ವಾಗಿದ್ದನ್ನು ಕಂಡಿದ್ದೀರಿ, ಈಗ ಅದೇ ನಾಗವಲ್ಲಿ ನಾಗರಪಂಚಮಿ ದಿನದಂದು ಅಖಾಡಕ್ಕೆ ಇಳಿದಿದ್ದಾಳೆ. ಸೀರೆಯುಟ್ಕೊಂಡು ಫೀಲ್ಡಿಗಿಳಿದಿರುವ ಆಕೆನಿನ್ನ ಕೆಲಸ ಮುಗಿತು ಕಿಟ್ಟಪ್ಪ, ಇನ್ಮೇಲೆ ನನ್ನ ಆಟ ಶುರು ಎನ್ನುತ್ತಿದ್ದಾಳೆ. ಇಷ್ಟೊತ್ತಿಗೆ ನಾವು ಯಾರ ಬಗ್ಗೆ ಹೇಳ್ತಿದ್ದೇವೆ ಅನ್ನೋದು ನಿಮಗೆ ಗೊತ್ತಾಗಿರುತ್ತೆ. ಆಕೆ ಬೇರ‍್ಯಾರು ಅಲ್ಲ ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಗೋಲ್ಡನ್ ಸ್ಟಾರ್, ರೋರಿಂಗ್ ಸ್ಟಾರ್ ರಂತಹ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿರುವ ಶೈನಿಂಗ್ ಸುಂದರಿ ಶಾನ್ವಿ ಶ್ರೀವಾಸ್ತವ್.
ಶಾನ್ವಿ ಶ್ರೀವಾಸ್ತವ್ ವಾರಣಾಸಿಯ ಚೆಲುವೆ. ತೆಲುಗು ಇಂಡಸ್ಟ್ರಿ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಶಾನ್ವಿ, ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಚಂದ್ರಲೇಖ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಎರಡನೇ ಚಿತ್ರದಲ್ಲಿ ರಾಕಿಂಗ್‌ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಅದ್ಯಾವಾಗ,ಮಾಸ್ಟರ್‌ಪೀಸ್’ ನಲ್ಲಿ ಅಣ್ತಮ್ಮನ ಜೊತೆ ಕುಣಿದರೋ ಫಿನಿಶ್ ಶಾನ್ವಿ ಸಿಕ್ಕಾಪಟ್ಟೆ ಶೈನ್ ಆದರು. ಸ್ಟಾರ್ ನಟರುಗಳು ಸೇರಿದಂತೆ ಹೊಸಬರ ಚಿತ್ರಗಳಲ್ಲೂ ಅಭಿನಯಿಸಿ ಮೋಡಿ ಮಾಡಿದರು. ಇದೀಗ ಲೇಡಿರೆಬಲ್‌ಸ್ಟಾರ್ ನಯನಾತಾರ ಥರ ಲೀಡಿಂಗ್ ಲೇಡಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಫ್ರಾಕ್ ಬಿಚ್ಚಿಟ್ಟು ಸೀರೆಯು ಟ್ಟುಕೊಂಡು ಕಣಕ್ಕಿಳಿದಿರುವ ಶಾನ್ವಿ ಅಚ್ಚರಿಯ ನೋಟ ಬೀರುತ್ತಾ ಚಿತ್ರಪ್ರೇಮಿಗಳನ್ನು ಬೆಚ್ಚಿಬೀಳಿಸ್ತುತಾರೆ.
ನಾಗರಪಂಚಮಿಯ ದಿನದಂದು ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿ ಕೆಯಲ್ಲಿರುವ ಕಸ್ತೂರಿ ಮಹಲ್' ಚಿತ್ರದ ಟ್ರೇಲರ್ ಹೊರಬಿದ್ದಿದೆ. ದಟ್ಟವಾದ ಕಾಡು, ಅಭಯಾರಣ್ಯದಲ್ಲಿರುವ ಭೂತಬಂಗಲೆಯಂತಹ ಮನೆ, ಆ ಮನೆಗೊಂದು ಮಣ್ಣಿನ ದಾರಿ, ಕಪ್ಪು ಸೀರೆಯುಟ್ಟು ಪ್ರತ್ಯಕ್ಷವಾಗುವ ಹೆಂಗಸು, ೮೦೦ ವರ್ಷ ಹಳೇ ಬುಕ್ ಹೀಗೆ ಹಲವು ಕೂತೂಹಲಕಾರಿ ಅಂಶಗಳನ್ನೊಳಗೊಂಡಿರುವಕಸ್ತೂರಿ ಮಹಲ್’ ಟ್ರೇಲರ್ ಕೂತೂಹಲ ಕೆರಳಿಸುತ್ತೆ. `ಅವನೇ ಶ್ರೀಮನ್ನಾರಾಯಣನ’ ರಾಣಿ ಶಾನ್ವಿಯ ನೋಟ ಬೆರಗುಗೊಳಿಸುತ್ತೆ. ಚಂದ್ರಲೇಖ ನಂತರ ಮತ್ತೆ ಬೆಚ್ಚಿಬೀಳಿಸೋಕೆ ಬರುತ್ತಿರುವ ಶಾನ್ವಿಯ ಹಾರರ್ ಅವತಾರ ನೋಡಿದ್ಮೇಲೆ ನಿರೀಕ್ಷೆಗಳು ಗರಿಗೆದರುತ್ತಿವೆ.
ಸಸ್ಪೆನ್ಸ್-ಥ್ರಿಲ್ಲಿಂಗ್ ಆಗಿರುವ ಕಸ್ತೂರಿಮಹಲ್'ಗೆ ದಿನೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ʼಅಮೃತ ವರ್ಷಿಣಿʼ, ʼನಿಶ್ಯಬ್ದʼ, ʼಲಾಲಿʼ ಸೇರಿದಂತೆ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗಕಸ್ತೂರಿ ಮಹಲ್’ ಡೈರೆಕ್ಟ್ ಮಾಡಿದ್ದಾರೆ. ಇದು ಅವರ ೫೦ನೇ ಚಿತ್ರವಾಗಿದ್ದು ಟ್ರೇಲರ್ ನಿಂದಲೇ ಸೌಂಡ್ ಮಾಡುತ್ತಿದೆ. ರವೀಶ್ ಆರ್ ಸಿ, ರುಬೀನ್ ರಾಜ್ ಕಸ್ತೂರಿ ಮಹಲ್'ಗೆ ಬಂಡವಾಳ ಹೂಡಿದ್ದಾರೆ. ಸ್ಕಂದ ಅಶೋಕ್, ಶ್ರುತಿ ಪ್ರಕಾಶ್, ರಂಗಾಯಣ ರಘು ಸೇರಿದಂತೆ ಹಲವರು ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ʼಆಪ್ತರಕ್ಷಕʼ ಸಿನಿಮಾಗೆ ಕ್ಯಾಮೆರಾ ಕೈಚಳ ತೋರಿದ್ದ ಪಿ.ಕೆ.ಎಚ್ ದಾಸ್, ಸಸ್ಪೆನ್ಸ್ ಥ್ರಿಲ್ಲರ್ಕಸ್ತೂರಿ ಮಹಲ್’ಗೆ ಕ್ಯಾಮೆರಾ ಹಿಡಿದಿದ್ದಾರೆ. ಗೌತಮ್ ಶ್ರೀವತ್ಸ ಸಂಗೀತ ಚಿತ್ರಕ್ಕಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಬುಲ್‌ಬುಲ್ ಬೆಡಗಿ ರಚಿತರಾಮ್ ಕಸ್ತೂರಿ ಮಹಲ್'ನಲ್ಲಿ ಕಂಗೊಳಿಸಬೇಕಿತ್ತು. ಅದೇನಾಯ್ತೋ ಏನೋ ಗೊತ್ತಿಲ್ಲಕಸ್ತೂರಿ ನಿವಾಸ’ ಟೈಟಲ್ ಚೇಂಜ್ ಆದ್ಹಂಗೆ ನಾಯಕಿ ರಚಿತಾ ರಾಮ್ ಕೂಡ ಬದಲಾದರು. ಡಿಂಪಲ್ ಬೆಡಗಿ ಜಾಗಕ್ಕೆ ಡಿಂಪಲ್ ಸುಂದರಿ ಶಾನ್ವಿಯೇ ಬಂದರು. `ಕಸ್ತೂರಿ ಮಹಲ್’ ಶಾನ್ವಿಗೆ ಚಾಲೆಂಜಿಂ ಗ್ ಆಗಿದೆ. ಕೇವಲ ೨೦ ದಿನದಲ್ಲಿ ತನ್ನ ಪಾತ್ರದ ಶೂಟಿಂಗ್ ಕಂಪ್ಲೀಟ್ ಮಾಡಿಕೊಟ್ಟು ಹೊಸ ಹಿಸ್ಟರಿ ಬರೆದಿರುವ ತಾರಕ್ ಬೆಡಗಿ ʼಕಸ್ತೂರಿ ಮಹಲ್’ ಮೂಲಕ ನಯಾ ಮೇನಿಯಾ ಸೃಷ್ಟಿಸಿಕೊಳ್ಳಲಿ. ಈ ಚಿತ್ರವೂ ಹೊಸ ರೆಕಾರ್ಡ್ ಬರೆಯಲಿ ಎನ್ನುವುದೇ ಸಿನಿಲಹರಿಯ ಹಾರೈಕೆ
ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ಚೇತರಿಸಿಕೊಂಡಿದ್ದಾರೆ. ಹೈದ್ರಾಬಾದ್ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ಯಶಸ್ವಿ ಆಗಿ ನಡೆದಿದೆ. ಈ ಕುರಿತು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಾಶ್ ರೈ ಕುತೂಹಲದ ಸ್ಟೇಟಸ್ ಹಾಕಿಕೊಂಡಿದ್ದಾರೆ.ʼ ಡೇವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದೆ. ನನ್ನ ಆತ್ಮೀಯ ಗೆಳೆಯ ಡಾ.ಗುರು ರೆಡ್ಡಿ ಮತ್ತು ನಿಮ್ಮೆಲ್ಲರ ಪ್ರೀತಿ. ಪ್ರಾರ್ಥನೆಗೆ ಧನ್ಯವಾದಗಳು. ಶೀಘ್ರವೇ ಕೆಲಸಕ್ಕೆ ಹಾಜರಾಗುತ್ತೇನೆ ಅಂತ ಪ್ರಕಾಶ್ ರೈ ಟ್ವಿಟ್ ಮಾಡಿ ದ್ದಾರೆ. ಅವರ ಟ್ವಿಟ್ನಲ್ಲಿ ಕುತೂಹಲ ಮೂಡಿಸಿದ್ದು ಡೇವಿಲ್ ಈಸ್ ಬ್ಯಾಕ್ ಎನ್ನುವ ಪದ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಬೆಡ್ ಮೇಲೆ ಮಲಗಿ ಕಿರುನಗೆ ಬೀರುತ್ತಾ ಸ್ಪೆಲ್ಫಿಗೆ ಪೋಸು ನೀಡಿದ ಫೋಟೋ ದೊಂದಿಗೆ ಪ್ರಕಾಶ್ ರೈ ʼ ಡೇವಿಲ್ ಈಸ್ ಬ್ಯಾಕ್ʼ ಅಂತ ಯಾಕೆ ಹೇಳಿದ್ರು ಗೊತ್ತಾ ? ಅದಕ್ಕೆ ದೊಡ್ಡದಾದ ಕಾರಣವೊಂದಿದೆ. ಅದೇನು ಅಂತ ಹೇಳೋದಿಕ್ಕೂ ಮುನ್ನ ಪ್ರಕಾಶ್ ರೈ ಅಂದ್ರೆ ಉರಿದು ಬಿಳುವವರ ಬಗ್ಗೆ ಹೇಳ್ತೀವಿ ಕೇಳಿ.
ಪ್ರಕಾಶ್ ರೈ ಬರೀ ನಟ ಮಾತ್ರವೇ ಅಲ್ಲವೇ ಅಲ್ಲ, ಒಬ್ಬ ಆಕ್ಟಿವಿಸ್ಟ್ ಕೂಡ ಹೌದು. ನಟನಾಗಿ ಚಿತ್ರರಂಗದಲ್ಲಿ ಸಂಪಾದಿಸುವ ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ಅರಂಭದಿಂದಲೂ ಸಾಮಾಜಿಕ ಸೇವೆಗಾಗಿ ಮೀಸ ಲಿಟ್ಟ ಹೃದಯವಂತ. ಅತಿವೃಷ್ಟಿ, ಅನಾವೃಷ್ಟಿ ಅಥವಾ ಇನ್ನಾವು ದೋ ಸಂಕಷ್ಟ ಅಂತ ರೈತರು, ಸಾಮಾನ್ಯ ಜನರು ಸಂಕಷ್ಟಗಳಲ್ಲಿ ಸಿಲುಕಿ ದಾಗ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಅವರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ಬಂದ ನಟ. ಅದರಲ್ಲೂ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನೂರಾರು ಜನರಿಗೆ ಆಹಾರ ಧಾನ್ಯ ನೀಡಿದರು. ಊಟ ಹಾಕಿದರು. ಅದೆಷ್ಟೋ ಜನರಿಗೆ ಆರ್ಥಿಕ ನೆರವು ನೀಡಿ, ಅವರವರ ಊರುಗಳಿಗೆ ತೆರಳುವಂತೆ ಮಾಡಿದರು. ಅದರ ಜತೆಗೆ ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಸದಾ ಕ್ರೀಯಾಶೀಲ ವಾಗಿರುವ ಮನಸು ಅವರದು. ಸರ್ಕಾರದ ಯಾವುದೇ ಜನವಿರೋಧಿ ನಿಲುವುಗಳನ್ನು ಖಂಡಾತುಂಡಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಕೋಮುವಾದದ ವಿರುದ್ಧ ಪ್ರಬಲವಾದ ಧ್ವನಿ ಪ್ರಕಾಶ್ ರೈ ಅವರದ್ದು.
ಭಾರತೀಯ ಚಿತ್ರರಂಗದ ಮಟ್ಟಿಗೆ ಮೋದಿ ಅವರನ್ನು ಕಟುವಾಗಿ ಟೀಕಿಸಿದ ನಟರಾರು ಅಂತ ನೋಡಿದಾಗ ಮೊದಲ ಸಾಲಿಗೆ ನಿಲ್ಲುವ ಹೆಸರು ಪ್ರಕಾಶ್ ರೈ ಅವರದ್ದು. ಅದೇ ಕಾರಣಕ್ಕೆ ಬಿಜೆಪಿ ಬೆಂಬಲಿಗರು ಬಹುದೊಡ್ಡ ಪ್ರತಿರೋಧ ಹಾಗೂ ಟೀಕೆಗಳಿಗೆ ಗುರಿಯಾದರು ಪ್ರಕಾಶ್ ರೈ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಪ್ರಕಾಶ್ ರೈ ಒಬ್ಬ ಹಿಂದೂ ವಿರೋಧಿ, ಅವರು ಪಾಕಿಸ್ತಾನಕ್ಕೆ ಹೋಗುವುದೇ ಸೂಕ್ತ ಅಂತಲೂ ಒಂದು ಸಿದ್ದಾಂತದ ಜನ ಅವರನ್ನು ಜರಿದರು. ಒಂದು ಹಂತದಲ್ಲಿ ಅವರು ಅಭಿನಯಿಸುವ ಸಿನಿಮಾ ನಿಷೇಧಿಸಿ ಅಂದವರು ಇದ್ದಾರೆ. ಹಾಗೆಯೇ ಅವರಿಗೆ ಕನ್ನಡದಲ್ಲಿ ಸಿನಿಮಾ ಅವಕಾಶ ಕೊಡ್ಬೇಡಿ ಅಂತ ನಿರ್ಮಾಪಕರಿಗೆ ಒತ್ತಡ ತಂದವರು ಇದ್ದಾರೆ. ಇದೆಲ್ಲ ಯಾಕಂದ್ರೆ ಪ್ರಕಾಶ್ ರೈ ಒಬ್ಬ ವಾಸ್ತವವಾದಿ ಅನ್ನೋದು. ಸರ್ಕಾರಗಳ ಸುಳ್ಳು ಭರವಸೆಗಳು, ಜನ ವಿರೋಧಿ ಧೋರಣೆಗಳನ್ನು ಅವರು ವಿರೋಧಿ ಸುತ್ತಾರೆ ಎನ್ನುವುದಕ್ಕೆ. ಅದಿರಲಿ ಅದೆಲ್ಲ ಹಳೇ ಕಥೆ. ಈಗ್ಯಾಕೆ ಪ್ರಕಾಶ್ ರೈ ಡೇವಿಲ್ ಈಸ್ ಬ್ಯಾಕ್ ಅಂತ ಶಾಕ್ ಕೊಟ್ಟರು ಗೊತ್ತಾ ?
ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರಕಾಶ್ ರೈ ಹೈದ್ರಾಬಾದ್ ಹೊರವಲಯದಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆನ್ನುವ ಸುದ್ದಿ ಬಂದಾಗ, ಅದೇ ಅವರ ವಿರೋಧಿ ಪಡೆ ಸಂಭ್ರಮ ಆಚರಿಸಿತು. ಜತೆಗೆ ಸೋಷಲ್ ಮೀಡಿಯಾ ದಲ್ಲಿ ಮಾನವೀಯತೆ ಇಲ್ಲದ ಮೃಗಗಳ ಹಾಗೆ ಕಾಮೆಂಟ್ ಆಗಿ ತಮ್ಮ ವಿಕೃತ ಮನಸ್ಥಿತಿಗಳನ್ನು ತೋರಿದ್ದರು. ಸಹಜವಾಗಿಯೇ ಇವೆಲ್ಲ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸುದ್ದಿಯೂ ಆಗಿದ್ದವು. ತುಂಬಾ ಜನರು ಈ ಕೆಟ್ಟ ಕಾಮೆಂಟ್ ಗಳಿಗೆ ತಿರುಗೇಟು ನೀಡಿ, ಇದು ವಿಕೃತ ಮನಸಿನ ಅತಿರೇಕ ಅಂದಿದ್ದರು. ಇನ್ನು ಕೆಲವರು ಸಮರ್ಥಿಸಿಕೊಂಡು, ಪ್ರಕಾಶ್ ರೈ ಒಬ್ಬ ಹಿಂದೂ ವಿರೋಧಿ ಎಂಬುದಾಗಿ ವಿಜೃಂಭಿಸಿದ್ದರು. ಅದಕ್ಕೆಲ್ಲ ಉತ್ತರವೇ ಎನ್ನುವ ಹಾಗೆ ಗುರುವಾರ ವಷ್ಟೇ ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಡೇವಿಲ್ ಬ್ಯಾಕ್ ಅಂತ ಗುಡುಗು ಮೂಲಕ ಶಾಕ್ ನೀಡಿದ್ದು ವಿಶೇಷ. ಕೊನೆಯದಾಗಿ ಒಂದು ಮಾತು, ಭಾರತೀಯ ಚಿತ್ರರಂಗದಲ್ಲಿಯೇ ಇವತ್ತು ದೊಡ್ಡ ಹೆಸರು ಮಾಡಿರುವ ಪ್ರಕಾಶ್ ರೈ ಅವರಂತಹ ಬಹುಭಾಷಾ ನಟ ಕನ್ನಡದವರು ಅನ್ನೋದೇ ನಮಗೆಲ್ಲ ಹೆಮ್ಮೆ. ಅಷ್ಟು ಮಾತ್ರವೇ ಅಲ್ಲ, ಸದಾ ಕನ್ನಡ ಕನ್ನಡ ಎನ್ನುತ್ತಲೇ ಯಾರಿಗೂ ಉಪಯೋ ಗವೇ ಇಲ್ಲದಂತೆ ತಾವಾಯಿತು, ತಮ್ಮ ಪಾಡಾಯಿತು ಅಂತ ಇರುವ ಕನ್ನಡದ ಅದೆಷ್ಟೋ ನಟರ ನಡುವೆ ಪ್ರಕಾಶ್ ರೈ ಸದಾ ಕ್ರಿಯಾಶೀಲವಾಗಿದ್ದು ನಟನೆ, ಕೃಷಿ, ಸಮಾಜ ಸೇವೆ ಹಾಗೂ ರಾಜಕೀಯ ಅಂತ ಪಾದಾರಸದಂತೆ ಹರಿದಾಡುತ್ತಲೇ ಇದ್ದಾರೆನ್ನುವುದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.
ಒಂದು ಲಾರಿಯ ಬೆನ್ನೇರಿ ಪ್ರಪಂಚವನ್ನೇ ತನ್ನೆಡೆಗೆ ತಿರುಗಿಸಿಕೊಂಡ ಸಾಧಕನ ದಂತ ಕತೆ…
ವಿಆರ್‌ಎಲ್ ಫಿಲಂಸ್ ಪ್ರೊಡಕ್ಷನ್ ನಿರ್ಮಾಣದ ಮೊದಲ ಬಹುನಿ ರೀಕ್ಷಿತ ಚಿತ್ರ ʼವಿಜಯಾನಂದʼ ಈಗ ಮೋಷನ್ ಟೀಸರ್ ಮೂಲಕ ಸೌಂಡ್ ಮಾಡುತ್ತಿದೆ. ರಿಷಿಕಾ ಶರ್ಮಾ ನಿರ್ದೇಶನ ಹಾಗೂ ನಿಹಾಲ್ ರಜಪೂತ್ ಅಭಿನಯದ ʼವಿಜಯಾನಂದʼ ಚಿತ್ರದ ಮೋಷನ್ ಟೀಸರ್ ಗುರುವಾರ ಲಾಂಚ್ ಆಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ವಿಆರ್ ಎಲ್ ಸಂಸ್ಥೆಯ ಮಾಲೀಕ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ್ ಅವರ ಜೀವನ ಆಧರಿತ ಸಿನಿಮಾ , ಆಗಸ್ಟ್ ೨ ರಂದು ಇದರ ಟೈಟಲ್ ಲಾಂಚ್ ಜತೆಗೆ ಫಸ್ಟ್ ಲುಕ್ ಪೋಸ್ಟರ್ ಹೊರ ಬಂದಿತ್ತು. ವಿಜಯ್ ಸಂಕೇಶ್ವರ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಆರ್‌ಎಲ್ ಸಮೂ ಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ್ ಸಂಕೇಶ್ವರ ಅವರು ಈ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿದ್ದರು. ಇದೀಗ ಮೋಷನ್ ಪೋಸ್ಟ ರ್ ಲಾಂಚ್ ಆಗಿದ್ದು, ಸಿನಿಮಾ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ.
ಲಾಜಿಸ್ಟಿಕ್ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೆಸರು ವಿಆರ್‌ಎಲ್. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಭಾರತದಲ್ಲಿಯೇ ವಿಆರ್ ಎಲ್ ಜನಜನಿತ. ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವ್ಯಕ್ತಿ ವಿಜಯ್ ಸಂಕೇಶ್ವರ. ಅವರ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಪ್ರಯತ್ನವೇ ʼವಿಜಯಾನಂದ ʼಸಿನಿಮಾ. ವಿಆರ್ ಎಲ್ ಫಿಲಂ ಪ್ರೊಡಕ್ಷನ್ ಲಾಂಛನದಲ್ಲಿ ವಿಜಯ್ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಇದರ ನಿರ್ಮಾಪಕರು.
ಅನಂದ್ ಸಂಕೇಶ್ವರ್, ನಿರ್ಮಾಪಕರು
ಯುವ ನಿರ್ದೇಶಕಿ ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು. ಕಳೆದ ಎಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭದ ಅವರಿಗಿದೆ. ಹಾಗೆಯೇ ʼಟ್ರಂಕ್ ʼ ಹೆಸರಿನ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದು, ಇದೀಗ ಅದೃಷ್ಟವೇ ಎನ್ನುವ ಹಾಗೆ ವಿಆರ್ ಎಲ್ ಸಂಸ್ಥೆಯ ಮಾಲೀಕ ವಿಜಯ್ ಸಂಕೇಶ್ವರ ಅವರ ಬಯೋಫಿಕ್ ಅನ್ನು ತೆರೆಗೆ ತರುವ ಅವಕಾಶ ಸಿಕ್ಕಿದೆ.
https://www.youtube.com/watch?v=jfTVhiwGhFY
ಇನ್ನು ವಿಜಯಾನಂದ ಚಿತ್ರದಲ್ಲಿ ಕಥಾ ನಾಯಕ ವಿಜಯ್ ಸಂಕೇಶ್ವರ್ ಅವರ ಪಾತ್ರಕ್ಕೆ ಯುವ ನಟ ನಿಹಾನ್ ರಜಪೂತ್ ಬಣ್ಣ ಹಚ್ಚುತ್ತಿದ್ದಉ, ಇದೀಗ ಮೋಷನ್ ಪೋಸ್ಟರ್ ನಲ್ಲಿ ಅವರ ಮೊದಲ ಲುಕ್ ರಿವೀಲ್ ಆಗಿದೆ.
ರಿಶಿಕಾ ಶರ್ಮಾ, ನಿರ್ದೇಶಕಿ
ಮಲಯಾಳಂ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇನ್ನು ಕಡಲ ತೀರದ ಭಾರ್ಗವ ಮತ್ತು ಮಹಿರ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಕೀರ್ತನ ಪೂಜಾರಿ ಈ ಚಿತ್ರಕ್ಕೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂ ಡಿದ್ದಾರೆ. ಹೇಮಂತ್ ಕುಮಾರ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಶುರುವಾಗುವ ಸಾಧ್ಯತೆಗಳಿವೆ ಎನ್ನುತ್ತಿದೆ ಚಿತ್ರತಂಡ.
ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ!
ಗಂಧದಗುಡಿ ಅರಗಿಣಿ ಯಾವುದರಲ್ಲಿ ಕಮ್ಮಿ ಗುರು.. ಕಣ್ಣರಳಿಸಿ ನೋಡಿ- ಗಡಿದಾಟೋದು ಬಿಡಿ, ಹೀಗಂತ ನಾವು ಹೇಳ್ತಿಲ್ಲ ಅವರ ಫ್ಯಾನ್ಸ್ ಹೇಳ್ತಿದ್ದಾರೆ. ಗಿಣಿಯ ಫ್ಯಾನ್ಸ್ಫಾಲೋಯರ್ಸ್ ಈ ರೀತಿಯಾಗಿ ಗುಡುಗುತ್ತಿರುವುದಕ್ಕೂ ಕಾರಣ ಇದೆ ಅದೇನು ಅಂತ ಹೇಳ್ತೀವಿ. ಅದಕ್ಕೂ ಮುನ್ನ ಅರಗಿಣಿಯ ಹವಾ ಕಥೆ ಕೇಳಿ.ಗಿಣಿ ಅಂದಾಕ್ಷಣ ನಿಮ್ಮೆಲ್ಲರ ಕಣ್ಮುಂದೆ ನಟಿ ರಾಗಿಣಿ ಬಂದು ನಿಲ್ತಾರೆ ಅಪ್ ಕೋರ್ಸ್ ನಿಲ್ಲಬೇಕು. ಚಂದನವನಕ್ಕೆ ಊರಿಗೊಬ್ಳೆ ಪದ್ಮಾವತಿ ಹೇಗೋ ಸ್ಯಾಂಡಲ್ ವುಡ್ ಗೆ ಒಬ್ಬರೇ ಗಿಣಿ ಅವರೇ ನಟಿ ರಾಗಿಣಿಯವರು. ಸೌಂದರ್ಯದ ಕಣಿಯಂ ತಿರುವ ಅರಗಿಣಿ ಮಾದಕ ನೋಟ ಮಾತ್ರವಲ್ಲ ಮನಮೋಹಕ ಅಭಿನ ಯ ದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬೆಳ್ಳಿತೆರೆಯನ್ನೂ ಮೆಚ್ಚಿಸಿ ಬಿಗ್ ಸ್ಕ್ರೀನ್ ನಲ್ಲಿ ದಶಕ ಪೂರೈಸಿದ್ದಾರೆ.
ಈ ಹತ್ತು ವರ್ಷದ ಸಿನಿಜರ್ನಿಯಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಾಯಕನ ಜೊತೆ ಬರೀ ಮರಸುತ್ತು ವುದಲ್ಲದೇ ನಾಯಕಿ ಪ್ರಧಾನ ಸಿನಿಮಾ ಮೂಲಕ ಬೆಳ್ಳಿಪರದೆಯನ್ನು ಬೆಚ್ಚಿಸಿ, ಬಾಕ್ಸ್ ಆಫೀಸ್ ನ ಶೇಕ್ ಮಾಡಿದ್ದಾರೆ. ನಾಯಕಿಯಾಗಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ ಸಿಲ್ವರ್‌ಸ್ಕ್ರೀನ್ ಮೇಲೆ ದಿಬ್ಬಣ ಹೋಗಿ ಬಂದಿದ್ದಾರೆ. ಎಕ್ಸ್ ಪಿರಿಮೆಂಟ್ ಮಾಡುವ ಹೊತ್ತಲ್ಲಿ ಎಡವಿ ದ್ದಾರೆ, ಕೆಳಗೆ ಬಿದ್ದು ಮೇಲೇಳಲು ಒದ್ದಾಡಿದ್ದಾರೆ. ಚಾರ್ಮ್ ಉಳಿಸಿ ಕೊಳ್ಳೋದಕ್ಕೆ ಹಗಲು-ರಾತ್ರಿ ಕಷ್ಟಪಟ್ಟಿದ್ದಾರೆ.
ಯಾವುದೇ ಜರ್ನಿಯಲ್ಲಿ ಅಪ್ಸ್ ಅಂಡ್ ಡೌನ್ಸ್ ಇದ್ದೇ ಇರುತ್ತೆ. ಅಂತಹ ಜರ್ನಿಯ ಅನುಭವ ರಾಗಿಣಿಗೂ ಆಗಿದೆ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ರಾಗಿಣಿ ಡ್ರಗ್ಸ್ ವಿಚಾರದಲ್ಲಿ ಜೈಲಿಗೆ ಹೋಗಬೇಕಾಗಿ ಬಂತು. ಅಲ್ಲಿಂದ ಬಂದ್ಮೇಲೆ ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇರಬಹುದಾಗಿತ್ತು ಆದರೆ ಅದಕ್ಕೆ ರಾಗಿಣಿ ಮನಸ್ಸು ಒಪ್ಪಲಿಲ್ಲ. ಹೀಗಾಗಿ, ಮತ್ತೆ ಸಾಮಾಜಿಕ ಕೆಲಸಕ್ಕೆ ಅಣಿಯಾದರು. ಕೊರೊನಾ ಸಂಕಷ್ಟದಿಂದ ನರಳುತ್ತಿದ್ದವರಿಗೆ ನೆರವಿನ ಹಸ್ತ ಚಾಚಿದರು ಅನ್ನಪೂರ್ಣೇಶ್ವರಿ ಎನಿಸಿಕೊಂಡರು. ನಟಿ ರಾಗಿಣಿಯ ಹೃದಯವಂತಿಕೆ ಹಾಗೂ ಸಮಾಜಮುಖಿ ಕೆಲಸಕ್ಕೆ ಅತ್ಯದ್ಬುತ ಪ್ರಶಸ್ತಿ ಕೂಡ ಸಿಗ್ತು.
ಇಷ್ಟೆಲ್ಲಾ ಹೇಳಿದ್ಮೇಲೆ ನಟಿ ರಾಗಿಣಿಯ ಹೊಸ ವರಸೆ ಹಾಗೂ ಅವರ ಅಭಿಮಾನಿಗಳ ಒಕ್ಕೊರಲ ಅಭಿಪ್ರಾಯವನ್ನು ನಿಮ್ಮ ಮುಂದೆ ಇಡಲೆ ಬೇಕು. ನಟಿ ರಾಗಿಣಿ ದ್ವಿವೇದಿ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಬಜಾರ್‌ನಲ್ಲಿ ನಾವೇ ಸ್ಲಿಮ್ ಸುಂದರಿಯರು ಅಂತ ಮೆರೆಯುತ್ತಿ ದ್ದವರು ಕೂಡ ಅರಗಿಣಿಯ ಜಿರೋ ಸೈಜ್ ಫಿಗರ್‌ನ ನೋಡಿ ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ. ಹೌದು, ಮೊದಲೇ ಸ್ಲಿಮ್ ಆಗಿದ್ದ ರಾಗಿಣಿ ಮೊಗದಷ್ಟು ಸ್ಲಿಮ್ ಆಗಿದ್ದಾರೆ. ಜಿಮ್-ವರ್ಕೌಟ್‌ನ ಬದಿಗಿಟ್ಟು ಯೋಗದ ಮೊರೆ ಹೋದ ರಾಗಿಣಿ ಭರ್ತಿ ಐದು ಕೆ.ಜಿ ತೂಕ ಇಳಿಸಿಕೊಂ ಡಿದ್ದಾರೆ. ಯೋಗ ಮಾಡಿ ದೈಹಿಕವಾಗಿ ಮತ್ತು ಮಾನಸಿ ಕವಾಗಿ ಸ್ಟ್ರಾಂಗ್ ಆಗಿದ್ದೇನೆಂದು ಸಿನಿಲಹರಿ ಜೊತೆ ಹೇಳಿಕೊಂಡಿದ್ದಾರೆ.
ನಟಿ ರಾಗಿಣಿ ತೂಕ ಇಳಿಸಿಕೊಂಡಿರುವುದು ಯಾವುದೋ ಸಿನಿಮಾಗಾಗಿ ಅಲ್ಲ ಫಿಸಿಕಲಿ ಫಿಟ್ ಆಗರ‍್ಬೇಕು ಹಾಗೂ ಹೆಲ್ತಿಯಾಗರ‍್ಬೇಕು ಎನ್ನುವ ಕಾರಣಕ್ಕೆ ಯೋಗದ ಮೊರೆ ಹೋಗಿದ್ದಾರೆ. ತಮ್ಮ ನೆಚ್ಚಿನ ನಾಯಕಿಯ ನಯಾ ಲುಕ್‌ನ ನೋಡಿದ ಅವರ ಫ್ಯಾನ್ಸು ನಮ್ಮ ಅರಗಿಣಿಗೆ ಏನ್ ಕಮ್ಮಿಯಾಗಿದೆ ಹೇಳ್ರಪ್ಪಾ? ಆರಡಿ ಹೀರೋಗೆ ಹೈಟ್ ಮ್ಯಾಚ್ ಮಾಡ್ತಾರೆ? ಜಿರೋ ಸೈಜ್‌ನ ಮೆಂಟೇನ್ ಮಾಡಿದ್ದಾರೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿಯೂ ಇದ್ದಾರೆ. ಇಷ್ಟೆಲ್ಲಾ, ಇದ್ದರೂ ಕೂಡ ನಮಗೆ ಗಿಲ್ಲಿ ಗರ್ಲ್ ಬೇಕು, ಕಿಕ್ ಸುಂದರಿನೇ ಆಗ್ಬೇಕು, ಮಲೆಯಾಳಂ ಕುಟ್ಟಿನೇ ಬೇಕು ಅಂತ ಯಾಕೇ ಹಠ ಮಾಡ್ತೀರಿ? ನಮ್ಮ ಇಂಡಸ್ಟ್ರಿಯ ಹೆಣ್ಣುಮಕ್ಕಳನ್ನು ಅದ್ಯಾಕೆ ಕಡೆಗಣಿಸ್ತೀರಿ ?ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ ಹೀಗಂತಾರೇ, ಸಕಲ ಕನ್ನಡ ನಟಿಮಣಿಯರ ಅಭಿಮಾನಿ ದೇವರುಗಳು.
ಈಗಲೂ ಸಿನಿಮಾ ರಂಗ ಎಚ್ಚರಿಕೆ ವಹಿಸಿದಂತಿಲ್ಲ. ಆತುರವೋ, ಅಚಾತುರ್ಯವೋ, ಆವೇಶವೋ, ಅಬ್ಬರವೋ…. ಶೂಟಿಂಗ್ ಸೆಟ್‌ನಲ್ಲಿ ಅವಘಡಗಳು ನಡೆಯುತ್ತಲೇ ಇವೆ. ಎಚ್ಚರ ವಹಿಸಬೇಕಾದ ಕಡೆ ನಿರ್ಲಕ್ಷ್ಯ ತೋರುತ್ತಿರುವುದರ ಪರಿಣಾಮ ಅನಾಹುತಗಳು ನಡೆದು, ಅಮಾಯಕರು ಬಲಿಯಾಗುತ್ತಿರುವುದು ದುರಂತ. ಮೊನ್ನೆಯಷ್ಟೇ ಆಗಿರುವ ʼಲವ್ ಯು ರಚ್ಚುʼ ಚಿತ್ರದ ದುರಂತ ಕೂಡ ಇದರಿಂದ ಹೊರತಲ್ಲ. ಸಾಹಸ ದೃಶ್ಯದ ಸನ್ನಿವೇಶದಲ್ಲಿ ಒಬ್ಬ ಫೈಟರ್ ಸಾವನ್ನಪ್ಪಿದ್ದರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಮತ್ತೊಂದೆಡೆ ನಿರ್ಮಾಪಕ ಕೆ.ಮಂಜು ನಿರ್ಮಾಣದ ʼರಾಣಾʼ ಚಿತ್ರದ ಚಿತ್ರೀಕರಣದ ವೇಳೆಯೂ ಒಂದು ಅವಘಡ ನಡೆದು ಹೋಗಿದೆ. ಒಬ್ಬ ಛಾಯಾಗ್ರಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೆಲ್ಲ ಆಕಸ್ಮಿಕವಾಗಿಯೇ ನಡೆದು ಹೋದರೂ, ಚಿತ್ರೀಕರಣಕ್ಕೆ ವಹಿಸಬೇಕಾದ ಎಚ್ಚರ ತಪ್ಪಿದ್ದೇ ಇದಕ್ಕೆ ಕಾರಣ ಅನ್ನೋದು ಅಷ್ಟೇ ಸತ್ಯ.
ಯಾಕೆ ಹಾಗೆ ? ಹಾಗೆ ನೋಡಿದರೆ ಕನ್ನಡ ಚಿತ್ರೋದ್ಯಮಕ್ಕೆ ʼಮಾಸ್ತಿಗುಡಿʼ ದುರಂತ ದೊಡ್ಡ ಪಾಠ ಆಗಬೇಕಿತ್ತು. ಸಾಹಸ ನಿರ್ದೇಶಕ ತೋರಿದ ವೈಫ ಲ್ಯದ ಪರಿಣಾಮ ಇಬ್ಬರು ನಟರು ಕಣ್ಣೇದುರೆ ಸಾವು ಕಂಡರು. ಅಲ್ಲಿಂದ ಏನಾ ಯ್ತು ಅನ್ನೋದೆಲ್ಲ ಉದ್ಯಮಕ್ಕೆ ಗೊತ್ತೇ ಇದೆ. ಅಲ್ಲಿ ಸ್ಟಂಟ್ ಮಾಸ್ಟರ್ ತೋರಿದ ನಿರ್ಲಕ್ಷ್ಯಕ್ಕೆ ನಿರ್ಮಾಪಕರು, ನಿರ್ದೇಶಕರ ಜತೆಗೆ ಕಲವಿದರು ಕೂಡ ಅದರ ನೋವು ಅನುಭವಿಸಬೇಕಾಗಿ ಬಂತು. ಇಷ್ಟಾಗಿ ಯೂ ಚಿತ್ರೋದ್ಯಮ ಪಾಠ ಕಲಿತಿಲ್ಲ ಅಂದ್ರೆ ಏನನ್ನಬೇಕೋ ಗೊತ್ತಿಲ್ಲ. ಹಾಗಂತ ಯಾರೇನು ಇಲ್ಲಿ ಬೇಕಂತ ಮಾಡುತ್ತಿಲ್ಲ. ಯಾರಿಗೂ ಈ ಅವಘ ಡಗಳು ಬೇಕಾಗಿಲ್ಲ. ಸುಸೂತ್ರವಾಗಿ ನಡೆಯುವ ಚಿತ್ರೀಕರಣ ಗಳೆಲ್ಲಿ ಇನ್ನೇನು ತೊಂದರೆ ತಂದುಕೊಂಡು ವಿನಾಕರಣ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಕೂಡ ಯಾರಿಗೂ ಬೇಕಿಲ್ಲ. ಇಷ್ಟಾಗಿಯೂ ಇಂತ ಹ ದುರಂತ ನಡೆದಾಗ ಯಾರನ್ನು ಹೊಣೆಗಾರರನ್ನಾಗಿ ಮಾಡ ಬೇಕು?
ʼಲವ್ ಯೂ ರಚ್ಚುʼ ದುರಂತದಲ್ಲೀಗ ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಸಾಹಸ ನಿರ್ದೇಶಕರು ಹೊಣೆಗಾರರಾಗಿದ್ದಾರೆ. ಮಾಡಿದ ತಪ್ಪಿಗೆ ಅವರೇನೋ,ಮಡಿದ ವ್ಯಕ್ತಿಯ ಕುಟಂಬಕ್ಕೆ ಒಂದಷ್ಟು ಪರಿಹಾರ ನೀಡಬಹುದು, ಇಲ್ಲವೇ ಕಾನೂನಿನಡಿ ಒಂದಷ್ಟು ಶಿಕ್ಷಿಗೂ ಗುರಿಯಾಗಬಹುದು, ಆದರೆ ಯಾರದೋ ನಿರ್ಲಕ್ಷ್ಯ ವಿನಾಕಾರಣ ಸತ್ತು ಹೋದ ವ್ಯಕ್ತಿ ಮತ್ತೆ ಬರುತ್ತಾನೆಯೇ? ಸಿನಿಮಾ ಶೂಟಿಂಗ್ ಈಗ ತೀರಾ ಆತುರಕ್ಕೆ ನಡೆಯುತ್ತಿವೆ. ಎಷ್ಟೋ ನಿರ್ಮಾಪಕರು ನಿಗದಿ ಮಾಡಿಕೊಂಡ ಶೆಡ್ಯೂಲ್ ಗಿಂತ ಮುಂಚೆಯೇ ಶೂಟಿಂಗ್ ಮುಗಿಸಿ ಅಂತ ನಿರ್ದೇಶಕರ ಮೇಲೆ ಒತ್ತಡ ಹಾಕುವ ಕಾರಣಕ್ಕೆ ಹಗಲು-ರಾತ್ರಿ ಶೂಟಿಂಗ್ ನಡೆದ ಉದಾಹರಣೆಗಳು ಸಾಕಷ್ಟಿವೆ. ಈ ರೀತಿಯ ಅವಸರಗಳು ಕೂಡ ಶೂಟಿಂಗ್ ಸೆಟ್ ನಲ್ಲಿ ಅವಘಡ ಸಂಭವಿಸುವುದಕ್ಕೂ ಕಾರಣ.
ಸರ್ಕಾರದ ಹಣ ದುರುಪಯೋಗದ ಆರೋಪದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಿರುದ್ಧ ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಅವರು ಭ್ರಷ್ಟಚಾರ ನಿಗ್ರಹ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ತಗಲು ಖರ್ಚು ವೆಚ್ಚಗಳ ಕುರಿತು ವಿಧಾನ ಪರಿಷತ್ ಸದಸ್ಯ ಮೋಹನಗ ಕೊಂಡಜ್ಜಿ ಪರಿಷತ್ ಸಭೆ ಯಲ್ಲಿ ಪ್ರಸ್ತಾಪಿಸಿ, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕಿನಡಿ ಪಡೆ ದಾಖಲೆಗಳನ್ನು ಉಲ್ಲೇಖಿಸಿ ಮದನ್ ಪಟೇಲ್ ದೂರು ನೀಡಿದ್ದು, ಹಾಲಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಭಾರೀ ಪ್ರಮಾಣದಲ್ಲಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಸರಿಯಾದ ತನಿಖೆ ನಡೆಯಬೇಕೆಂದು ಮನವಿ ಮಾಡಿದ್ದಾರೆ.
ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ !
ಅದೃಷ್ಟ ಅಂದ್ರೆ ಇದೆ ಅಲ್ವಾ ? ಹೌದು, ಅದೊಂದು ಬೆಳವಣಿಗೆ ಮಾತ್ರ ಕನ್ನಡ ಚಿತ್ರ ರಂಗದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಕೊರೋನಾ ಅಂತ ಇಡೀ ಚಿತ್ರೋದ್ಯಮವೇ ಸೈಲೆಂಟ್ ಆಗಿ ಸೈಡಿಗೆ ಕುಳಿತಿರುವಾಗ ಕನ್ನಡದ ಆ ಸ್ಟಾರ್ ಜೋಡಿಗೆ ಬಿಗ್ ಆಫರ್ ಒಲಿದು ಬಂದಿದೆ. ಅವರಿಬ್ಬರು ಆಕ್ಟರ್ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡ ಹೌದು. ಅವರು ಇದುವರೆಗೂ ಆವೆರೆಡು ಅವತಾರ ತೋರಿಸಿದ್ದು ಅವರದೇ ಬ್ಯಾನರ್ ಸಿನಿಮಾಗಳ ಮೂಲಕ.
ಫಾರ್ ಏ ಚೇಂಜ್ ಈಗವರು ಕನ್ನಡದ ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಎಂದೇ ಖ್ಯಾತಿ ಪಡೆದಿರುವ ಹೊಂಬಾಳೆ ಫಿಲಂಸ್ ನಲ್ಲಿ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಸ್ಟಾರ್ ಡೈರೆಕ್ಟರ್ ಗಳೇ ಇವತ್ತು ಅವಕಾಶ ಎದುರು ನೋಡು ತ್ತಾ ಕುಳಿತಿರುವಾಗ, ಈ ಸ್ಟಾರ್ ಜೋಡಿಗೆ ಮಾತ್ರ ಎರಡು ಅವತಾರಕ್ಕೆ ಅವಕಾಶ ಸಿಕ್ಕಿದೆ. ಇದು ಸಾಧ್ಯವಾಗಿದ್ದುದಾದ್ರೂ ಹೇಗೆ ? ಅಷ್ಟು ದೊಡ್ಡ ಪ್ರೊಡಕ್ಷನ್ ಹೌಸ್‌ಗೆ ಆ ಸ್ಟಾರ್ ಜೋಡಿ ಮಾಡಿದ ಮೋಡಿಯಾದ್ರು ಎಂಥಹದು ?
ಅಂದ ಹಾಗೆ, ನಾವಿಲ್ಲಿ ಹೇಳಹೊರಟಿದ್ದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಡಿಟೆಕ್ಟಿವ್ ದಿವಾಕರ್ ಖ್ಯಾತಿಯ ರಿಷಬ್ ಶೆಟ್ಟಿ ಅವರ ಬಗ್ಗೆ. ಇವರಿಬ್ಬರು ಕರವಾಳಿ ಮೂಲದವರು ಅನ್ನೋದು ಮಾತ್ರವಲ್ಲ ಅತ್ಯಾಪ್ತ ಸ್ನೇಹಿತರು ಹೌದು. ‘ಕಿರಿಕ್ ಪಾರ್ಟಿ’ ಮೂಲಕ ಕನ್ನಡದಲ್ಲಿ ದೊಡ್ಡ ಹವಾ ಸೃಷ್ಟಿಸಿದ ಜೋಡಿ. ಸ್ಪೆಷಲ್ ಅಂದ್ರೆ, ಅಲ್ಲಿಂದಲೇ ಇವರಿಬ್ಬರಿಗೂ ದೊಡ್ಡ ಮಟ್ಟದ ನೇಮ್ ಅಂಡ್ ಫೇಮ್ ಎರಡು ಸಿಕ್ಕವು ಅನ್ನೋದೆಲ್ಲ ಹಳೇ ಮಾತೇ. ʼರಿಕ್ಕಿʼ ಮೂಲಕ ರಿಷಬ್ ಶೆಟ್ಟಿ ಡೈರೆಕ್ಟರ್ ಹ್ಯಾಟ್ ತೊಟ್ಟರೆ, ವೃತ್ತಿಯಲ್ಲಿ ಟೆಕ್ಕಿಯಾಗಿದ್ದ ರಕ್ಷಿತ್ ಶೆಟ್ಟಿ ‘ ಉಳಿದವರು ಕಂಡಂತೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಮಾತ್ರವಲ್ಲ, ಅಲ್ಲಿ ಅವರೇ ನಾಯಕರು ಆಗಿದ್ದರು. ಇನ್ನು ರಿಷಬ್ ಶೆಟ್ಟಿ ಡೈರೆಕ್ಟರ್ ಆಗುವ ಮುನ್ನ ʼಅಟ್ಟಹಾಸʼ ಹಾಗೂ ʼಲೂಸಿಯಾʼ ಚಿತ್ರಗಳಿಗೆ ಬಣ್ಣ ಹಚ್ಚಿ ನಟರಾದವರು. ಅಲ್ಲಿಂದ ಶುರುವಾದ ಅವರಿಬ್ಬರ ಜರ್ನಿಯಲ್ಲೀಗ ಬಿಗ್ ಟರ್ನಿಂಗ್ ಪಾಯಿಂಟ್.
ಯಾಕಂದ್ರೆ, ಅವರೀಗ ಆ್ಯಕ್ಟರ್ ಜತೆಗೆ ಡೈರೆಕ್ಟರ್ ಅವತಾರೊಂದಿಗೆ ತೆರೆ ಮೇಲೆ ಬರುತ್ರಿರುವುದು ‘ಕೆಜಿಎಫ್ ‘ಖ್ಯಾತಿಯ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರಗಳ ಮೂಲಕ. ಹೊಂಬಾಳೆ ಫಿಲಂಸ್ ಅಂದ್ರೆ ಇವತ್ತು ಭಾರತೀಯ ಚಿತ್ರರಂಗದಲ್ಲಿ ಮನೆ ಮಾತಾದ ಪ್ರೊಡಕ್ಷನ್ ಹೌಸ್. ಹಾಗೊಂದು ಹವಾ ಕ್ರಿಯೇಟ್ ಮಾಡಿದ್ದು ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರ ‘ಕೆಜಿಎಫ‍್’. ಅದೇ ಕಾರಣಕ್ಕೆ ಇವತ್ತು ಫ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಫ್ಯಾನ್ಸ್ ‘ಕೆಜಿಎಫ್ 2’ ಗೆ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇಷ್ಟರಲ್ಲಿಯೇ ಬಂದು, ಮತ್ತೊಂದು ಚರಿತ್ರೆ ಸೃಷ್ಟಿಸುತ್ತೋ ಏನೋ. ಆದರೆ ಕೊರೋನಾ, ಲಾಕ್ ಡೌನ್ ಅಂತ ಎಲ್ಲವೂ ಏರುಪೇರು ಆಗಿದೆ. ಈ ವರ್ಷದ ಅಂತ್ಯಕ್ಕೆ ಕೆಜಿಎಫ್ ಬಂದರೂ ಬರಬಹುದು. ಅದರಾಚೆ ಹೊಂಬಾಳೆ ಬಗ್ಗೆ ಕುತೂಹಲ ಇರೋದು, ಕೊರೋನಾ ಕಾಲದಲ್ಲೂ ಅದು ಬ್ಯಾಕ್ ಟು ಬ್ಯಾಕ್ ಸಿನಿಮಾ ಅನೌನ್ಸ್ ಮಾಡ್ತಿರೋ ಸಾಹಸಕ್ಕೆ.
ಕೊರೋನಾ ಮೊದಲ ಅಲೆ ಕಡಿಮೆ ಆಗಿ ಲಾಕ್ ಡೌನ್ ತೆರವಾದ ನಂತರ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಮೂಲಕ ʼಸಲಾರ್ʼ ಅನೌನ್ಸ್ ಅಯಿತು. ಸಲಾರ್ ಅದ್ದೂರಿ ವೆಚ್ಚದ ಸಿನಿಮಾ. ಆ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಖರ್ಚು ಮಾಡ್ತಿರೋದು ಹತ್ತಿಪ್ಪತ್ತು ಕೋಟಿ ಅಲ್ಲ, ಕನಿಷ್ಟ ಮೂನ್ನೂರು ಕೋಟಿ ಅಂತೆ. ಆದಾದ ನಂತರ ಮತ್ತೆ ಪವರ್ ಸ್ಟಾರ್ ಕಾಂಬಿನೇಷನ್ ನಲ್ಲಿ ʼದ್ವಿತ್ವʼ ಲಾಂಚ್ ಆಗಿದೆ. ಆದಾದ ಮೇಲೆ ರಕ್ಷಿತ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼರಿಚರ್ಡ್ ಆಂಟನಿʼ ಚಿತ್ರ. ಅದರ ಬೆನ್ನಲೇ ಈಗ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ʼಕಾಂತಾರ ʼಚಿತ್ರ. ಡಿಫೆರೆಂಟ್ ಕಾನ್ಸೆಪ್ಟ್ ಮೂಲಕ ಬಂದಿರುವ ಇದರ ಪೋಸ್ಟರ್ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣವೂ ಇದೆ. ಶಿವರಾಜ್ ಕುಮಾರ್ ಅಭಿನಯ ಹಾಗೂ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಒಂದು ಸಿನಿಮಾದ ಪೋಸ್ಟರ್ ಇದೆ ರೀತಿಯಲ್ಲಿತ್ತು. ಹಾಗಾಗಿ ಅದೇ ಸಿನಿಮಾ ಕಥೆ, ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದಲ್ಲೂ ಇದೆಯಾ ಅನ್ನೋದು ಫ್ಯಾನ್ಸ್ ಗೆ ಇರುವ ಡೌಟು.
ಅದೇನೆ ಇರಲಿ, ಬಿಡಿ, ರಿಯಾಲಿಟಿ ಮುಂದೆ ಗೊತ್ತಾಗುತ್ತೆ. ಅದು ಬಿಟ್ಟರೆ ನಾವಿಲ್ಲಿ ಪಾಯಿಂಟ್ ಔಟ್ ಮಾಡ್ತಿರೋದು, ಹೊಂಬಾಳೆಯಂತಹ ದೊಡ್ಡ ಬ್ಯಾನರ್‌ನಲ್ಲಿ ಇಬ್ಬರು ಶೆಟ್ರು ನಾಯಕರಾಗುವ ಜತೆಗೆ ಡೈರೆಕ್ಟರ್ ಅವಕಾಶವನ್ನು ಹೇಗೆ ಗಿಟ್ಟಿಸಿಕೊಂಡ್ರು ಅಂತ. ಇದು ನಮದ್ದಲ್ಲ, ಇಡೀ ಇಂಡಸ್ಟ್ರಿನಲ್ಲಿರೋ ದೊಡ್ಡ ಕುತೂಹಲವೂ ಹೌದು. ಯಾಕಂದ್ರೆ ಹೊಂಬಾಳೆ ಫಿಲಂಸ್‌ನಲ್ಲಿ ಬಂದ ಅಷ್ಟು ಸಿನಿಮಾಗಳಲ್ಲಿ ಇದುವರೆಗೂ ನಾಯಕರೇ ಬೇರೆ, ನಿರ್ದೇಶಕರೇ ಬೇರೆ. ಮೊದಲ ಸಿನಿಮಾದಿಂದಲೂ ಬರೀ ಸ್ಟಾರ್ ನಟರನ್ನೇ ಪೋಕಸ್ ಮಾಡಿದೆ. ಬಜಾರ್ ನಲ್ಲಿ ಓಡುವ ಕುದುರೆಗಷ್ಟೇ ದುಡ್ಡು ಕಟ್ಟಿದೆ. ಫಾರ್ ಏ ಚೇಂಜ್ ಈಗ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರಿಗೆ ನಟನೆಯ ಜತೆಗೆ ನಿರ್ದೇಶನಕ್ಕೂ ಅವಕಾಶ ಕೊಟ್ಟಿದೆ. ಆ ಮೂಲಕ ಹೊಂಬಾಳೆ ತೇರು ಈಗ ಕರಾವಳಿ ಕಡೆ ಮುಖ ಮಾಡಿದೆ. ಘಟ್ಟ ಇಳಿದು, ಪಟ್ಟ ಏರುವ ಆಸೆ ಹೊತ್ತಿದೆ. ಮುಗ್ಗರಿಸಿದರೆ ಮುಂದಿರೋದು ಸಮುದ್ರ ಎನ್ನುವ ಎಚ್ಚರವೂ ಅದಕ್ಕಿಲ್ಲ ಎನ್ನುವಂತೆಯೂ ಇಲ್ಲ. ಹೇಗೋ ಏನೋ ಎನ್ನವುದಕ್ಕಿಂತ ಇಬ್ಬರು ಶೆಟ್ರು ಮೇಲೂ ಆಗಾಧವಾದ ವಿಶ್ವಾಸ ಹೊತ್ತಿದೆ. ಚಿನ್ನದ ಸಾಮ್ರಾಜ್ಯಕ್ಕೆ ಒಡೆಯರಾದವರಿಗೆ ಸಮುದ್ರಕ್ಕೆ ಅಧಿಪತಿಯಾಗುವಾಸೆ ಇಟ್ಟುಕೊಂಡಿದೆ. ಅದಕ್ಕೆ ಕಾರಣ ಅವರಿಬ್ಬರ ಹಿನ್ನೆಲೆ.
ಕರಾವಳಿಯ ಮೂಲದ ಆ ಇಬ್ಬರು ಶೆಟ್ರು ಬುದ್ದಿವಂತರು. ಪ್ರತಿಭಾವಂ ತರು ಕೂಡ. ಸಿನಿ ದುನಿಯಾದಲ್ಲಿ ಆಕ್ಟರ್ ಆಗಿ ಗೆದ್ದ ಹಾಗಿಯೇ ಡೈರೆಕ್ಟ ರ್ ಆಗಿಯೂ ಸಕ್ಸಸ್ ಕಂಡಿದ್ದಾರೆ. ಇವರಿಬ್ಬರು ತುಂಬಾ ಡಿಫೆರೆಂಟ್ ಅಂತ ಅನ್ನೋದಿಕ್ಕೆ ಇಷ್ಟು ಸಾಕು. ಹೊಂಬಾಳೆ ಫಿಲಂಸ್ ಲೆಕ್ಕಚಾರದ ಹಿಂದೆಯೂ ಇದಿದ್ದು ಕೂಡ ಅದೇ ನಿರೀಕ್ಷೆ. ಯಾಕಂದ್ರೆ, ದೊಡ್ಡ ಸಂಸ್ಥೆ ಯಾವುತ್ತೂ ರಿಸ್ಕ್ ತೆಗೆದುಕೊಳ್ಳೋದಕ್ಕೆ ರೆಡಿ ಇರೋದಿಲ್ಲ. ನಿರ್ದೇಶಕ ಹಾಗೂ ನಟ ಇಬ್ಬರು ಪವರ್ ಫುಲ್ ಅಂದರೆ ಮಾತ್ರ ಕಾಸು ಬಿಚ್ಚುತ್ತದೆ. ಅದರಲ್ಲಿ ಒಬ್ಬರು ಕೊಂಚ ಡಲ್ ಎನಿಸಿದರೂ ಖಜಾನೆ ಬಾಗಿಲು ಓಪನ್ ಮಾಡಲ್ಲ. ಇಷ್ಟಾಗಿಯೂ ರಕ್ಷಿತ್ ಶೆಟ್ಟಿ ಅವರಿಗೊಂದು ಸಿನಿಮಾ, ಅವರ ಸ್ನೇಹಿತ ರಿಷಬ್ ಶೆಟ್ಟಿ ಅವರಿಗೊಂದು ಸಿನಿಮಾ ವನ್ನು ಈ ಕೊರೋನಾ ನಡುವೆಯೂ ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡುತ್ತದೆ ಅಂದ್ರೆ, ನಿರ್ದೇಶನದ ಜೊತೆಗೆ ಅವರಲ್ಲೊಬ್ಬ ಅಭಿನಯ ಕಲಾವಿದ ಇದ್ದಾನೆ ಅವನಿಗಾಗಲೇ ಜನರಿಂದ ವಿಜಯದ ಹಾರ ಹಾಕಿಸಿಕೊಂಡಿದ್ದಾನೆ ಎನ್ನುವ ಕಾರಣಕ್ಕೆ. ಸದ್ಯಕ್ಕೆ ಇಬ್ಬರೂ ಈಗ ಕರಾವಳಿಯ ಕಥೆಗಳನ್ನೇ ಮುಂದಿಟ್ಟುಕೊಂಡೇ ಸಿನಿಮಾ ಮಾಡುವ ಸಿದ್ದತೆ ನಡೆಸಿದ್ದಾರೆ. ಎರಡು ಸಿನಿಮಾಗಳ ಮೊದಲ ಪೋಸ್ಟರ್ ಗಳು ಈಗಾಗಲೇ ದೊಡ್ಡ ಹವಾ ಎಬ್ಬಿಸಿವೆ. ಆ ಮೂಲಕ ಹೊಂಬಾಳೆ ಬ್ಯಾನರ್ ಮೂಲಕ ಮುಂದೆ ಪ್ಯಾನ್ ಇಂಡಿಯಾ ಲೆವೆನ್ ನಲ್ಲಿ ದಂತ ಕಥೆ ಸೃಷ್ಟಿಸುತ್ತಾರೆ ಎನ್ನುವುದು ದೊಡ್ಡ ಕುತೂಹಲ ಹುಟ್ಟಿಸಿದೆ. ಆ ಇಬ್ಬರು ಶೆಟ್ರಿಗೆ ಸಿನಿಲಹರಿ ಕಡೆಯಿಂದ ಆಲ್ ದಿ ಬೆಸ್ಟ್.