ಏನ್ರೀ, ಇದು ಚಕ್ರವರ್ತಿ ಅವರ ಲಕ್ಕು…! – ಚಂದ್ರಚೂಡ್‌ ಬಗ್ಗೆ ನಟ ಕಿಚ್ಚ ಸುದೀಪ್‌ ಹೀಗೆ ಅಚ್ಚರಿ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ?

ಒಂದೇ ದಿನದಲ್ಲಿ ಎರೆಡೆರೆಡು ಸಿನಿಮಾ ನಮ್ದೇ ಲಾಂಚ್‌ ಆಗಿ ಕಣ್ರೀ, ಬಟ್‌ ಈ ಚಕ್ರವರ್ತಿ ಲಕ್‌ ಹೇಗಿದೆ ನೋಡ್ರಿ…!
ಪತ್ರಕರ್ತ, ಬರಹಗಾರ, ನಿರ್ದೇಶಕ ಹಾಗೂ ನಟ ಚಂದ್ರಚೂಡ್‌ ಚಕ್ರವರ್ತಿ ಅವರ ಬಗ್ಗೆ ಒಂದ್ರೀತಿ ಅಚ್ಚರಿ, ಮತ್ತೊಂದು ಬಗೆಯಲ್ಲಿ ಮೆಚ್ಚುಗೆಯ ಈ ಮಾತು ಹೇಳಿದ್ದು ಮತ್ತೊಬ್ಬ ಚಕ್ರವರ್ತಿ, ಅಲಿಯಾಸ್‌ ಅಭಿನಯ ಚಕ್ರವರ್ತಿ ಒನ್‌ ಅಂಡ್‌ ಒನ್ಲೀ ಕಿಚ್ಚ ಸುದೀಪ್. ಬಿಗ್‌ ಬಾಸ್‌ ಖ್ಯಾತಿಯ ನಟ, ನಿರ್ದೇಶಕ ಚಂದ್ರಚೂಡ್‌ ಚಕ್ರವರ್ತಿ ಭಾನುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಈ ಬಾರಿಯ ಅವರ ಹುಟ್ಟು ಹಬ್ಬ ಹಿಂದೆಂದಿಗಿಂತ ತುಂಬಾನೆ ಸ್ಪೆಷಲ್‌ ಆಗಿತ್ತು. ಯಾಕಂದ್ರೆ, ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಅವರೀಗ ನಟನೆಯ ಜತೆಗೆ ನಿರ್ದೇಶಕರಾಗಿಯೂ ಬ್ಯುಸಿ ಆಗುತ್ತಿದ್ದಾರೆ.

ಸದ್ದಿಲ್ಲದೆ ಸುದ್ದಿ ಮಾಡದೆ ಅವರೀಗ ಎರಡು ಸಿನಿಮಾದೊಂದಿಗೆ ಸುದ್ದಿಯಲ್ಲಿದ್ದಾರೆ. ಕಮಲ್‌ ಜೋಷಿ ನಿರ್ಮಾಣ ಹಾಗೂ ವಶಿಷ್ಠ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಧ್ಯಂತರ ಹೆಸರಿನ ಚಿತ್ರದಲ್ಲಿ ಚಂದ್ರಚೂಡ್‌ ಚಕ್ರವರ್ತಿ ಹೀರೋ ಆಗಿ ಎಂಟ್ರಿ ಆಗುತ್ತಿದ್ದರೆ, ಶ್ರೀಧರ್‌ ರಾಮ್‌, ಬಾಬು ರೆಡ್ಡಿ, ಹಾಗೂ ಕಮಲ್‌ ಗೌಡ ನಿರ್ಮಾಣದ ʼಭೀಮಿʼ ಚಿತ್ರಕ್ಕೆ ಚಂದ್ರಚೂಡ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಜತೆಗೆ ಅದರಲ್ಲೂ ನಟರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಭಾನುವಾರ ಅವರ ಹುಟ್ಟು ಹಬ್ಬದ ಅಂಗವಾಗಿ ಅವೆರೆಡು ಸಿನಿಮಾಗಳ ಫಸ್ಟ್‌ ಪೋಸ್ಟರ್‌ ಲಾಂಚ್‌ ಆದವು. ವಿಶೇಷ ಅಂದ್ರೆ ಅವರೆಡನ್ನು ಲಾಂಚ್‌ ಮಾಡಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಸಪ್ರೇಟ್‌ ಆಗಿ ಎರಡನ್ನು ಲಾಂಚ್‌ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್‌, ಒಂದೇ ದಿನದಲ್ಲಿ ಎರಡೆರೆಡು ಸಿನಿಮಾ ನಮ್ದೇ ಲಾಂಚ್‌ ಆಗಿ ಕಣ್ರೀ.. ಬಟ್‌ ಈ ಚಕ್ರವರ್ತಿ ಅವರದ್ದು ಭರ್ಜರಿ ಲಕ್‌ ಬಿಡಿ.. ಅಂತ ಅಚ್ಚರಿ ಮತ್ತು ಮೆಚ್ಚುಗೆಯ ಮಾತು ಹೇಳಿದರು.

ಬಿಗ್‌ ಬಾಸ್‌ ಮನೆಯೊಳಗೆ ಚಂದ್ರಚೂಡ್‌ ಅವರ ಮಾತುಗಾರಿಕೆಯ ಬುದ್ಧಿವಂತಿಕೆಯ ಬಗ್ಗೆ ಸಾಕಷ್ಟು ಪ್ರಶಂಸೆ ಹೇಳಿದ್ದ ಕಿಚ್ಚ ಸುದೀಪ್‌, ಕೆಲವ ಆಕ್ಷೇಪಾರ್ಹ ಮಾತು ಕೇಳಿ ಬಂದಾಗ ಫುಲ್‌ ಕ್ಲಾಸ್‌ ತೆಗೆದುಕೊಂ ಡಿದ್ದು ನಿಮಗೆಲ್ಲ ಗೊತ್ತೇ ಇದೆ. ಇಷ್ಟಾಗಿಯೂ ಚಂದ್ರಚೂಡ್‌ ಅವರ ಸಾಹಿತ್ಯ , ಬರವಣಿಗೆ ಹಾಗೂ ಸಾಹಸದ ಬದುಕಿನ ಬಗ್ಗೆ ಸುದೀಪ್‌ ಅವರಲ್ಲಿ ಅಪಾರ ಪ್ರೀತಿ ಮತ್ತು ಮೆಚ್ಚುಗೆ ಇದೆ. ಅವರೆಡು ಸಿನಿಮಾಗಳ ಫಸ್ಟ್‌ ಲುಕ್‌ ಲಾಂಚ್‌ ಸಂದರ್ಭದಲ್ಲಿ ಬಿಗ್‌ ಬಾಸ್‌ ಮನೆಯೊಳಗೆ ಕಂಡ ಚಂದ್ರಚೂಡ್‌ ಅವರನ್ನೇ ನೆನಪಿಸಿಕೊಂಡು ಮಾತನಾಡಿದ ನಟ ಕಿಚ್ಚ ಸುದೀಪ್‌, ʼ ಹುಟ್ಟಿದ್ದಕ್ಕಾಗಿಯೇ ಇವ್ರು ಬದುಕುತಿರಬೇಕು ಅಂತೆನಿಸುತ್ತೇ. ಅವರು ಸಿಕ್ಕಾಪಟ್ಟೆ ಸ್ಟ್ರೈಟ್‌ ಫಾರ್ವರ್ಡ್.‌ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಅದಿರಲಿ, ಅವರ ಬಗ್ಗೆ ಖುಷಿ ಆಗ್ತೀರೋದು ಅವರು ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಿನಿಮಾ ಸಿನಿಮಾ ಅಂತ ಬ್ಯುಸಿ ಆಗುತ್ತಿದ್ದಾರೆ. ತುಂಬಾ ಖುಷಿ ಆಗುತ್ತಿದೆ. ಅವರಿಗೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದ್ದಾರೆ.


ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆಯೇ ಸಿನಿಮಾ ಚಟುವಟಿಕೆಗಳಲ್ಲಿ ಬ್ಯುಸಿ ಆಗುತ್ತಿರುವ ಬಗ್ಗೆ ನಿರ್ದೇಶಕ, ನಟ ಚಂದ್ರಚೂಡ್‌ ಕೂಡ ಖುಷಿ ಆಗಿದ್ದಾರೆ.ʼ ಗೊತ್ತಿಲ್ಲ, ಇದೆಲ್ಲ ನಾನು ನಿರೀಕ್ಷೆ ಮಾಡಿರಲಿಲ್ಲ. ಹೇಂಗಾಗುತ್ತೋ ಹಾಗೆ ಆಗ್ಲಿ ಅಂತ ಬಿಗ್‌ ಬಾಸ್‌ ಮನೆಗೆ ಹೋಗಿ ಬಂದೆ. ಅಲ್ಲಿಂದ ಬರುತ್ತಿದ್ದಂತೆಯೇ ಒಂದಷ್ಟು ಚಟು ವಟಿಕೆಗಳು ಶುರುವಾದವು. ಸದ್ಯಕ್ಕೆ ಈಗ ಎರಡು ಪ್ರಾಜೆಕ್ಟ್‌ ಶುರು ವಾಗಿವೆ. ಇನ್ನು ಈಗಾಗಲೇ ನಾನು ಒಪ್ಪಿಕೊಂಡ ಸಿನಿಮಾಗಳ ಪೈಕಿ ʼಗಾನ್‌ ಕೇಸ್‌ʼ ಶೂಟಿಂಗ್‌ ಬಾಕಿ ಇದೆ. ಜರ್ನಿ ಚೆನ್ನಾಗಿದೆ. ಎಲ್ಲವೂ ಒಳ್ಳೆಯದಾಗುತ್ತೆ ಎನ್ನುವ ನಿರೀಕ್ಷೆ ಇದೆ ಎನ್ನುತ್ತಾರೆ ಚಂದ್ರಚೂಡ್.‌ ಇನ್ನು ಚಂದ್ರಚೂಡ್‌ ನಟಿಸಿರುವ ʼಮೇಲೊಬ್ಬ ಮಾಯಾವಿʼ ಹಾಗೂ ʼಮಾರೀಚ ʼ ಸಿನಿಮಾಗಳು ತೆರೆಕಾಣಬೇಕಿದೆ.

Related Posts

error: Content is protected !!