Categories
ಸಿನಿ ಸುದ್ದಿ

ಶ್ಯಾಡೊ ನಿರ್ಮಾಪಕರ ವಿರುದ್ಧ ವಿನೋದ್‌ ಬೇಸರ

ನನ್‌ ಮಾತು ಕೇಳದೇ ಮನಸ್ಸಿಗೆ ಬಂದಂತೆ ನಡೆದುಕೊಂಡರು!

 

“ಈ ಸಮಯದಲ್ಲಿ ಚಿತ್ರ ರಿಲೀಸ್‌ ಮಾಡೋದು ಬೇಡ ಅಂತ ಹೇಳಿದ್ದೆ. ಆದರೆ, ನಿರ್ಮಾಪಕರು ಮಾತ್ರ ನನ್ನ ಮಾತು ಕೇಳದೆ, ಹೇಳದೆಯೇ ಚಿತ್ರ ರಿಲೀಸ್‌ ಮಾಡಿದ್ದಾರೆ. ನಾನು, ನನ್ನದು ಅಂತ ಹೋದರೆ ಏನೂ ಲಾಭವಿರೋದಿಲ್ಲ…”


– ಇದು ನಟ ವಿನೋದ್‌ಪ್ರಭಾಕರ್‌ ಅವರ ಬೇಸರದ ನುಡಿ. ಇಷ್ಟಕ್ಕೂ ವಿನೋದ್‌ ಪ್ರಭಾಕರ್‌ ಹೀಗೆ ನೋವಿನ ಮಾತುಗಳಲ್ಲಿ ಹೇಳಿಕೊಂಡಿದ್ದು, ತಮ್ಮ “ಶ್ಯಾಡೊ” ಸಿನಿಮಾ ಬಗ್ಗೆ. ಹೌದು, “ಶ್ಯಾಡೊ” ಫೆ.೫ರಂದು ರಿಲೀಸ್‌ ಆಗಿತ್ತು. ಇದಕ್ಕೂ ಮುನ್ನ, ವಿನೋದ್‌ ಪ್ರಭಾಕರ್‌ ರಾಂಗ್‌ ಟೈಮ್‌ನಲ್ಲಿ ರಿಲೀಸ್‌ ಬೇಡ ಅಂತಾನೇ ಹೇಳಿದ್ದರಂತೆ. ಆದರೆ, ನಿರ್ಮಾಪಕರು ಮಾತ್ರ ಮಾತು ಕೇಳದೆ ರಿಲೀಸ್‌ ಮಾಡಿದ್ದಾರೆ.

ಚಿತ್ರದ ಬಗ್ಗೆ ಒಳ್ಳೆಯ ಮಾತು ಕೇಳಿಬಂದರೂ, ಕಲೆಕ್ಷನ್‌ ವಿಚಾರದಲ್ಲಿ ಏನೂ ಆಗಿಲ್ಲ. ನಾನು ಇರುವೆಯ ರೀತಿ ಸಾಮ್ರಾಜ್ಯ ಕಟ್ಟಿದ್ದೇನೆ‌. ಆದರೆ, ಎಲ್ಲರೂ ಅದನ್ನು ಕೆಡವಿದರು. ಎಲ್ಲಾ ಅವರವರೇ ಡಿಸೈಡ್ ಮಾಡ್ತಾರೆ, ನಾನು ಅನ್ನೋದು ಇಲ್ಲಿ ಶಾಶ್ವತ ಅಲ್ಲ. ಈ ಸಿನಿಮಾದಲ್ಲಿ ಟೀಂ ವರ್ಕ್ ಇರಲಿಲ್ಲ. ಫ್ಯಾಮಿಲಿ ತರಹ ನಾವೆಲ್ಲ ಒಂದೇ ಎನ್ನುವ ಭಾವನೆ ಕಿಂಚಿತ್ತೂ ಇದ್ದಿಲ್ಲ. ಮುಖ್ಯವಾಗಿ, ಕಮ್ಯೂನಿಕೇಷನ್ ಗ್ಯಾಪ್ ಸಮಸ್ಯೆ ಎಂದು ಬೇಸರಿಸಿಕೊಂಡೇ ಹೇಳಿಕೊಂಡರು ವಿನೋದ್.


“ಶ್ಯಾಡೊ” ಬಿಡುಗಡೆ ಮಾಡುವ ಸಮಯದಲ್ಲಿ ನನ್ನನ್ನು ಒಂದು ಮಾತೂ ಪ್ರೊಡ್ಯೂಸರ್ ಕೇಳಲೇ ಇಲ್ಲ. ಬಿಡುಗಡೆ ಯಾವಾಗ ಅನ್ನೋದು ಪತ್ರಿಕೆಗಳಲಲಿ ಓದಿ ಗೊತ್ತಾಯ್ತು. ಹಾಗಂತ ನಾನು ದುರಹಂಕಾರಿ ಮನುಷ್ಯನಲ್ಲ. ಮುಂದೆ ನನ್ನದೇ ಆದ ಹೊಸ ಟೀಂ ಕಟ್ಟಿ, ಸಿನಿಮಾ ರಂಗದಲ್ಲಿ ತಂದೆಯಾದ ಪ್ರಭಾಕರ್ ಹೆಸರನ್ನು ಬೆಳೆಸುವುದೊಂದೇ ನನ್ನಾಸೆ” ಎಂಬುದು ವಿನೋದ್‌ ಹೇಳಿಕೆ. ಅಂದಹಾಗೆ, ರವಿಗೌಡ “ಶ್ಯಾಡೊ” ಸಿನಿಮಾದ ನಿರ್ದೇಶಕರು. ಇದು ಮಲಯಾಳಂನಲ್ಲಿ ಬಂದ ಚಿತ್ರ. ತೆಲುಗಿಗೂ ಡಬ್‌ ಆಗಿದ್ದ “ನೆಪೋಲಿಯನ್‌” ಚಿತ್ರದ ರೀಮೇಕ್. ಚಕ್ರವರ್ತಿಸಿ.ಎಚ್. ನಿರ್ಮಾಣವಿದೆ.

Categories
ಸಿನಿ ಸುದ್ದಿ

ವಾಲ್ಮೀಕಿ ರತ್ನ ಪ್ರಶಸ್ತಿಗೆ ಪಾತ್ರವಾದ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್‌ ಅವರಿಗೆ ಮೊನ್ನೆಯಷ್ಟೇ ದುಬೈನಲ್ಲಿ ʼಕನ್ನಡ ಕುಲತಿಲಕʼ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈಗ ದಾವಣಗೆರೆ ಸಮೀಪದ ರಾಜನಹಳ್ಳಿ ವಾಲ್ಮೀಕಿ ಗುರುಪೀಠವೂ ಈ ಬಾರಿಯʼ ವಾಲ್ಮೀಕಿ ರತ್ನʼ ಪ್ರಶಸ್ತಿ ನೀಡಿದೆ. ಫೆ. 9  ರಂದು ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದ್ದು,  ಅಲ್ಲಿ ನಟ ಸುದೀಪ್‌ ಅವರಿಗೆ ವಾಲ್ಮೀಕಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಜಾತ್ರೆಗೆ ಸುಮಾರು 3  ಲಕ್ಷ ಜನ ಭಕ್ತರು ಸೇರುವ ನಿರೀಕ್ಷೆ ಇದ್ದು, ಅಷ್ಟು ಜನರ ಸಮ್ಮುಖದಲ್ಲಿಯೇ ನಟ ಸುದೀಪ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

 

Categories
ಸಿನಿ ಸುದ್ದಿ

ಎಲ್ಲವೂ ಯೋಗಾಯೋಗ…ಸಿನಿ ಲಹರಿಗೆ ಶುಭ ಹಾರೈಕೆಯ ಮಹಾಪೂರ

ಕಚೇರಿಗೆ ಬಂದು ಸಿನಿ‌ಲಹರಿಗೆ ಹಾರೈಸಿದ ಪ್ಯಾರಾ ಒಲಂಪಿಕ್ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ವೈ.ವೆಂಕಟೇಶ್…..


ಎಲ್ಲವೂ ಯೋಗಾಯೋಗ. ನೂರು ದಿನದ ಸಂಭ್ರಮಕ್ಕೆ ನಾಳೆ ದಿನ‌ ನಿಗದಿ ಆಗಿದೆ. ಸಿಬ್ಬಂದಿ‌ ಖುಷಿಗಾಗಿ ನಾಳೆ ಸುಮ್ನೆ ಕೇಕ್ ಕತ್ತರಿಸಿ ಹಂಡ್ರೆಡ್ ಡೇಸ್ ಸಲೆಬ್ರೆಷನ್ ಮಾಡೋಣ ಅನ್ನೋ ಆಲೋಚನೆಯಲ್ಲಿದ್ದೇವೆ ಆದ್ರೆ ಇವತ್ತೊಂದು ಅಚ್ಚರಿಯೇ ಘಟಿಸಿ ಬಿಟ್ಟಿತು‌.

ನಿರ್ದೇಶಕರಾದ ಕಿರಣ್ ಹಾಗೂ ರಾಜು ಪಾವಗಡ ಎಂದಿನಂತೆ‌ಆಫೀಸ್ ಗೆ ಬರುತ್ತೇವೆ ಎಂದರು. ಬನ್ನಿ ಎಂದೆವು. ಬರುವಾಗ ಅವರೊಂದಿಗೆ ಒಬ್ಬ ಗಣ್ಯ ವ್ಯಕ್ತಿಯೇ ಜತೆಗಿದ್ದರು. ಸರ್, ಇವ್ರು, ಕೆ.ವೈ .ವೆಂಕಟೇಶ್ ಅಂತ. ಪ್ಯಾರಾ ಒಲಂಪಿಕ್ ಸಾಧನೆಯಲ್ಲಿ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದವರು ‌ ದೊಡ್ಡ ಸಾಧಕರು ‘ ಅಂತ ಪರಿಚಯಿಸುತ್ತಿದ್ದಂತೆ, ನಮಗೆ ಏನ್ ಹೇಳ್ಬೇಕೋ ಗೊತ್ತಾಗಲಿಲ್ಲ‌ . ಅವರ ಆಗಮನಕ್ಕಾಗಿ‌ ಆದ ಖುಷಿಗೆ ಆನಂದ ಬಾಷ್ಪಗಳೇ ಬಂದವು.

ಯಾವುದೇ ಆಹ್ವಾನ ಇಲ್ಲದೆ ಅವರು ನಮಗೆ ಹರಿಸಲು ಬಂದಿದ್ದರು. ಇಡೀ ನಮ್ಮ ವ್ಯವಸ್ಥೆ ನೋಡಿ ತುಂಬಾನೆ ಖುಷಿ ಪಟ್ಟರು.ಕೊನೆಗೆ ಕೇಕ್ ಕತ್ತರಿಸಿ, ಒಂದೆರೆಡು ಮಾತನಾಡಿದರು.’ ಸಹೋದರಂತಿರುವ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ, ನಿಮ್ಮ ಕಚೇರಿ, ಸ್ಟುಡಿಯೋ ವ್ಯವಸ್ಥೆ ನೋಡಿ‌ ನಿಜಕ್ಕೂ ಖುಷಿ ಎನಿಸಿತು. ಸಾಧನೆಗೆ ಬೆಲೆ ಇದೆ.ಇಂದಲ್ಲ ನಾಳೆ, ನಿಮಗೆ ಗೆಲುವು ಸಿಗುತ್ತದೆ. ಶುಭವಾಗಲಿ ಅಂತ ಹರಸಿದರು. ಸಿನಿ‌ಲಹರಿ ಗೆ ಇದಕ್ಕಿಂತ ಇನ್ನೇನು ಬೇಕು. ಉದ್ಯಮದ ಜತೆಗೆ ಆಚೆಗೂ ಇರುವ ಸಾಧಕರು ನಮ್ಮನ್ನು ಮನದುಂಬಿ ಹರಿಸುತ್ತಿದ್ದಾರಲ್ಲ, ಅನ್ನೋದು ನಮ್ಮ ದೊಡ್ಡ ಶಕ್ತಿ.

Categories
ಸಿನಿ ಸುದ್ದಿ

ಬುರ್ಜ್‌ ಖಲೀಫ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ಹೇಗೆ – ಒಂದೊಂದು ವಿಷಯವೂ ರೋಚಕ…

ವಿಕ್ರಾಂತ್‌ ರೋಣ ಅನಾವರಣ ಹಿಂದಿನ ಕಥೆ

ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಶೀರ್ಷಿಕೆ ಜಗತ್ತಿನ ಅತೀ ಎತ್ತರದ ಕಟ್ಟಡದ ಖ್ಯಾತಿ ಪಡೆದಿರುವ ದುಬೈನ “ಬುರ್ಜ್‌ ಖಲೀಫ” ಮೇಲೆ ಅನಾವರಣಗೊಂಡಿದ್ದು ಎಲ್ಲರಿಗೂ ಗೊತ್ತು. ಅತ್ಯಂತ ಎತ್ತರದ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣಗೊಂಡಿದ್ದು ಇದೇ ಮೊದಲು. ಅಷ್ಟೇ ಅಲ್ಲ, ಅದೊಂದು ಐತಿಹಾಸಿಕ ಕ್ಷಣವಂತೂ ಹೌದು. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಸಿನಿಮಾವೊಂದರ ಶೀರ್ಷಿಕೆ ಅನಾವರಣ ಮಾಡುವುದು ಅಂದರೆ ತುಸು ಶ್ರಮದ ಕೆಲಸವೇ ಅಂಥದ್ದೊಂದು ಕೆಲಸಕ್ಕೆ “ವಿಕ್ರಾಂತ್‌ ರೋಣ” ಚಿತ್ರತಂಡ ಸಾಕ್ಷಿಯಾಗಿದೆ. ಇಷ್ಟೇ ಆಗಿದ್ದರೆ ಅದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಬರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿದ್ದು ವಿಶೇಷವೇ ಸರಿ. ಆ ಕುರಿತು ಒಂದಷ್ಟು ರೋಚಕ ವಿಷಯಗಳಿವೆ. ಹಾಗೆ ಹೇಳುವುದಾದರೆ…


ಬುರ್ಜ್‌ ಖಲೀಫ ಕಟ್ಟಡದಲ್ಲಿ ಬೇರೆ ಬೇರೆ ದೇಶಗಳ ಧ್ವಜಗಳನ್ನು ಹಾರಿಸಬಹುದು. ಹಾಗೆಯೇ, “ವಿಕ್ರಾಂತ್‌ ರೋಣ” ಚಿತ್ರದ ನಿರ್ಮಾಪಕ ಜಾಕ್‌ ಮಂಜು ಅವರು ಇಂಡಿಯನ್‌ ಫ್ಲಾಗ್‌ ಹಾರಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ, ಅಲ್ಲಿ ಬೇಗನೇ ಅನುಮತಿ ಸಿಗಲಿಲ್ಲ. ಯಾಕೆಂದರೆ, ಎಂಬೆಸ್ಸಿ ಮೂಲಕ ಅನುಮತಿ ಪಡೆಯಬೇಕಿತ್ತು. ಅದಕ್ಕೆಲ್ಲ ಸಮಯವೂ ಇರಲಿಲ್ಲ. ಕಡಿಮೆ ಅವಧಿ ಇದ್ದುದರಿಂದ ನಿರ್ಮಾಪಕ ಜಾಕ್‌ ಮಂಜು, ಏನಾದರೂ ಸರಿ, ಕನ್ನಡ ಧ್ವಜ ಹಾರಿಸಬೇಕು ಅಂದುಕೊಂಡು ಮುಂದಾದರು. ಎರಡು ವಾರದಲ್ಲಿ ಶೀರ್ಷಿಕೆ ಅನಾವರಣಗೊಳ್ಳಬೇಕಿತ್ತು. ಸಮಯ ಕಡಿಮೆ ಇದ್ದುರಿಂದ ಎಂಬೆಸ್ಸಿ ಅನುಮತಿ ಅಸಾಧ್ಯ. ಹಾಗಾಗಿ ಅಲ್ಲಿ ಕನ್ನಡ ಧ್ವಜ ಹಾರಿಸಿಬಿಟ್ಟರು. ಆದರೆ, ಕನ್ನಡಿಗರನ್ನು ಹೊರತುಪಡಿಸಿ ಅಲ್ಲಿರುವ ಮಂದಿಗೆ ಕನ್ನಡ ಧ್ವಜದ ಬಣ್ಣದ ಬಗ್ಗೆ ಅಷ್ಟೇನೂ ಐಡಿಯಾ ಇರಲಿಲ್ಲ. ಬುರ್ಜ್‌ ಖಲೀಫ ಕಟ್ಟಡದ ಮೇಲೆ ಕನ್ನಡ ಧ್ವಜ ರಾರಾಜಿಸಿತು.

ಸ್ಕ್ರೀನಿಂಗ್‌ ಆಗಿದ್ದು 6 ಕಿಮೀ ದೂರದಿಂದ...
ಎಲ್ಲರೂ ಬುರ್ಜ್‌ ಖಲೀಫ ಮೇಲೆ ನಮ್ಮ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು ನೋಡಿ ಹೆಮ್ಮೆ ಎನಿಸಿದ್ದು ನಿಜ. ಕನ್ನಡ ಧ್ವಜ ಕಾಣಿಸಿಕೊಂಡಿದ್ದೂ ಕೂಡ ಅಷ್ಟೇ ಸಂಭ್ರಮ ಎನಿಸಿತು. ಆದರೆ, ಆ ಕಟ್ಟಡದ ಮೇಲೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ, ಎಲ್ಲವೂ ಸುಲಭವಾಗಿರಲಿಲ್ಲ. ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಚಿತ್ರದ ಶೀರ್ಷಿಕೆ ಮೂಡಲು, ಕನ್ನಡ ಧ್ವಜ ರಾರಾಜಿಸಲು ಸುಮಾರು 6  ಕಿ.ಮೀ ದೂರದಲ್ಲೇ ಪ್ರೊಜೆಕ್ಟರ್ ಸೆಟಪ್‌ ಮಾಡಿ ಆ ನಂತರ ಲೇಸರ್‌ ಮೂಲಕ ಸ್ಕ್ರಿನಿಂಗ್‌ ಮಾಡಲಾಗಿದೆ.

ದೊಡ್ಡ ಕಟ್ಟಡದ ಮೇಲೆ ಇಷ್ಟೆಲ್ಲಾ ಬರಬೇಕಾದರೆ, ದೂರದಿಂದಲೇ ಪ್ರೊಜೆಕ್ಟರ್ ಸೆಟಪ್‌ ಮಾಡಲೇಬೇಕಾದ ಪರಿಸ್ಥಿತಿ ಇತ್ತು. ಅದಕ್ಕಾಗಿ ಕಿಲೋಮೀಟರ್‌ಗೊಂದೊಂದು ಕ್ಯಾಮೆರಾ ಸೆಟಪ್‌ ಮಾಡಿ ಸುಮಾರು ನಾಲ್ಕೈದು ಪ್ರೊಜೆಕ್ಟರ್‌ಗಳ ಮೂಲಕ ಆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಕೋವಿಡ್‌ ಇದ್ದುದರಿಂದ ಆರು ಜನರ ಮೇಲೆ ಗುಂಪಾಗಲು ಅಲ್ಲಿ ಅವಕಾಶವೂ ಇರಲಿಲ್ಲ. ಹೇಗೋ, “ವಿಕ್ರಾಂತ್‌ ರೋಣ” ತಂಡ, ಇಷ್ಟಿಷ್ಟು ಜನರನ್ನು ಇಟ್ಟುಕೊಂಡು ಅಸಾಧ್ಯವಾದದ್ದನ್ನು ಸಾಧಿಸಿದೆ. ವಿಶೇಷ ಕಾರ್ಯಕ್ರಮ ವೀಕ್ಷಿಸಲು ದುಬೈ ಕನ್ನಡಿಗರು ಬರುತ್ತಾರಾ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕಿತ್ತು. ಆದರೆ, ಅವರ ನಿರೀಕ್ಷೆ ಮೀರಿ ಜನರು ಸೇರಿದ್ದು ಮರೆಯಲಾರದ ವಿಷಯ ಎಂಬುದು ಚಿತ್ರತಂಡದ ಮಾತು.

ಬುರ್ಜ್‌ ಖಲೀಫಗೆ ಮಾಡಿದ ಖರ್ಚಲ್ಲಿ ನಾಲ್ಕು ಕಲಾತ್ಮಕ ಚಿತ್ರ ಮಾಡಬಹುದಿತ್ತು!
ಇಂಥದ್ದೊಂದು ಸಾಹಸಕ್ಕೆ ಮುಂದಾದ ಜಾಕ್‌ ಮಂಜು, ಬುರ್ಜ್‌ ಖಲೀಫ ಮೇಲೆ “ವಿಕ್ರಾಂತ್‌ ರೋಣ” ಟೈಟಲ್‌ ಜೊತೆ ಕನ್ನಡ ಧ್ವಜ ರಾರಾಜಿಸಬೇಕೆನಿಸಿದ್ದು ನವೆಂಬರ್‌ನಲ್ಲಿ ಮಕ್ಕಳ ಜೊತೆ ಕುಳಿತು ಊಟ ಮಾಡುವಾಗ, ಕನ್ನಡ ಬಗ್ಗೆ, ಧ್ವಜದ ಬಗ್ಗೆ ಮಾತುಕತೆ ನಡೆಸುತ್ತಿದ್ದರಂತೆ.

ಅತೀ ಎತ್ತರದಲ್ಲಿ ಬಾವುಟ ಹಾರಬೇಕು ಎಂಬ ಮಾತುಗಳು ಕೇಳಿಬರುತ್ತಿದ್ದಂತೆಯೇ, ಜಾಕ್‌ಮಂಜು ಅವರಿಗೊಂದು ಯೋಚನೆ ಬಂದಿದೆ. ಯಾಕೆ ದುಬೈನಲ್ಲಿರುವ ಬುರ್ಜ್‌ ಖಲೀಫ ಮೇಲೆ ಇದನ್ನೆಲ್ಲಾ ಮಾಡಬಾರದು ಅಂತಂದುಕೊಂಡು ಇಷ್ಟೆಲ್ಲಾ ಮಾಡಲು ಕಾರಣವಾಯಿತು ಎನ್ನುತ್ತಾರೆ ಜಾಕ್‌ ಮಂಜು. ಅಂದಹಾಗೆ, ಅದಕ್ಕೆಲ್ಲಾ ಕೋಟಿಗಟ್ಟಲೆ ಖರ್ಜು ಬೇಕೇ ಬೇಕು. ಆದರೆ, ದೊಡ್ಡ ಮಟ್ಟದಲ್ಲೇ ಸುದೀಪ್‌ ಅವರ ಚಿತ್ರದ ಟೈಟಲ್‌ ಲಾಂಚ್‌ ಮಾಡಬೇಕು ಅಂದುಕೊಂಡು, ಈ ಕೆಲಸ ಮಾಡಿದ್ದಾರೆ. ಇನ್ನು, ಅಲ್ಲಿಗೆ ಖರ್ಚು ಮಾಡಿದ ಹಣದಲ್ಲಿ ನಾಲ್ಕು ಕಲಾತ್ಮಕ ಚಿತ್ರಗಳನ್ನು ಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿರುವುದಂತೂ ನಿಜ.

Categories
ಸಿನಿ ಸುದ್ದಿ

ಬೆಳ್ಳಿತೆರೆಗೆ ಸುದೀಪ್‌ ಅವರದ್ದು ಐರನ್‌‌ ಲೆಗ್ಗಾ? ಗೋಲ್ಡನ್‌ ಲೆಗ್ಗಾ?

ನಟ ಕಿಚ್ಚ ಸುದೀಪ್‌ ಅವರೇ ಈ ಬಗ್ಗೆ ಏನ್ ಹೇಳ್ತಾರೆ ಕೇಳಿ….

ಅಭಿನಯ ಚಕ್ರವರ್ತಿ ಅಂತಲೇ ಜನಪ್ರಿಯತೆ ಪಡೆದ ನಟ ಕಿಚ್ಚ ಸುದೀಪ್‌ ಅವರ ಸಿನಿಜರ್ನಿಗೆ ಈಗ ೨೫ ವರ್ಷ. ಸದ್ಯ ಸುದೀಪ್‌ ಈಗ ಅದೇ ಖುಷಿಯಲ್ಲಿದ್ದಾರೆ. ಯಾಕಂದ್ರೆ, ಒಬ್ಬ ನಟಿನಿಗೆ ಯಶಸ್ವಿ ೨೫ ವರ್ಷ ಅನ್ನೋದು ಸುಲಭವಾದದ್ದೇನು ಅಲ್ಲ. ಸೋಲಿಗಿಂತ ಹೆಚ್ಚಾಗಿ ಗೆಲುವು ಸಾಧಿಸಿಕೊಂಡಾಗಲೇ ಅದೆಲ್ಲ ಸಾಧ್ಯ. ಆ ವಿಚಾರದಲ್ಲಿ ನಟ ಸುದೀಪ್‌ ಒಬ್ಬ ಯಶಸ್ವಿ ನಟ.

ಅದಕ್ಕೆ ಅದೃಷ್ಟ ಎನ್ನಬೇಕೋ, ಇಲ್ಲವೇ ಕಠಿಣವಾದ ಪರಿಶ್ರಮ ಎನ್ನಬೇಕೋ ಗೊತ್ತಿಲ್ಲ. ಆದರೆ ಸ್ಯಾಂಡಲ್‌ ವುಡ್‌ನಲ್ಲಿ ಅವರ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆ. ಸಿನಿಮಾ ಅಂತ ಬಂದಾಗ ಅವರ ಬಗ್ಗೆ ಕೆಲವರು ಐರನ್‌ ಲೆಗ ಅಂದಿದ್ದಾರೆ. ಹಾಗೆಯೇ ಕೆಲವರು “ಗೋಲ್ಡನ್‌ ಲೆಗ್‌ʼ ಅಂತ ಪ್ರಶಂಸೆ ವ್ಯಕ್ತಪಡಿಸಿದ್ದೂ ಇದೆ. ಹಾಗಾದ್ರೆ ಇವೆರೆಡು ಅಭಿಪ್ರಾಯಗಳಲ್ಲಿ ಯಾವುದು ಸರಿ ? ನಟ ಸುದೀಪ್‌ ಅವರ ಪ್ರಕಾರವೇ ಯಾವುದು ಸರಿ, ಯಾವುದು ತಪ್ಪು ?

ನಟ ಸುದೀಪ್‌ ಅವರು ತಮ್ಮ ಸಿನಿಜರ್ನಿಯ ೨೫ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭಾನುವಾರ(ಫೆ.೭) ದಂದು ಬೆಂಗಳೂರಿನ ಪಂಚತಾರಾ ಹೋಟೆಲ್‌ ನಲ್ಲಿ ಮಾಧ್ಯಮದವರೊಂದಿಗೆ ಒಂದು ಔತಣಕೂಟ ಆಯೋಜಿಸಿದ್ದರು. ಹಾಗೆಯೇ ಅಲ್ಲಿ ಅವರ ಬಹು ನಿರೀಕ್ಷಿತ ʼವಿಕ್ರಾಂತ್‌ ರೋಣʼ ಚಿತ್ರದ ಮೊದಲ ಸುದ್ದಿ ಗೋಷ್ಠಿ ಕೂಡ ಇತ್ತು. ಅದರ ಮಾತುಕತೆ ನಂತರ ಸುದೀಪ್‌ ಅವರಿಗೆ ಎದುರಾಗಿದ್ದು ಐರನ್‌ ಲೆಗ್‌ ಹಾಗೂ  ಗೋಲ್ಡನ್‌ ಲೆಗ್‌ ಬಗೆಗಿನ ಪ್ರಶ್ನೆ.

ಸಿನಿಮಾ ಮಂದಿ ನಡುವೆ ನಿಮ್ಮ ಬಗ್ಗೆ ಎರಡು ಅಭಿಪ್ರಾಯಗಳಿದ್ದವು. ಸುದೀಪ್‌ ಅಂದ್ರೆ ಐರನ್‌ ಲೆಗ್‌ ಅಂತ ಕೆಲವರು ಹೇಳಿದ್ರೆ, ಮತ್ತೆ ಕೆಲವರು ಸುದೀಪ್‌ ಅವರದ್ದು ಗೋಲ್ಡನ್‌ ಲೆಗ್‌ ಅಂತಲೂ ಹೇಳಿದ್ದರು. ಈ ಬಗ್ಗೆ ನೀವೇನು ಹೇಳ್ತೀರಾ ? ನಿಮ್ಮ ಪ್ರಕಾರ ಯಾವುದು ಸರಿ ? ಮಾಧ್ಯಮದವರು ಕೇಳಿದ ಈ ಪ್ರಶ್ನೆಗೆ ಸುದೀಪ್‌ ನೀಡಿದ ಉತ್ತರ ಮಾತ್ರ ಮಜಾ ವಾಗಿತ್ತು.” ಐರನ್‌ ಲೆಗ್ಗೋ, ಗೋಲ್ಡನ್‌ ಲೆಗ್ಗೋ ಗೊತ್ತಿಲ್ಲ. ನಂಗೆ ದೇವರು ಕೊಟ್ಟ ಎರಡು ಕಾಲುಗಳು ಮಾತ್ರ ಇವೆ. ಅವೆಲ್ಲ ಅಪ್ಪ-ಅಮ್ಮನ ಕೊಡುಗೆ. ನಂಗೆ ಅವಷ್ಟೇ ಸಾಕು, ಬೇರೆನೋ ಲೆಗ್‌ ಬೇಡ.” ಎಂದು ನಗುತ್ತಲೇ ಮಾರ್ಮಿಕವಾಗಿ ಉತ್ತರಿಸಿದರು ನಟ ಸುದೀಪ್.

Categories
ಸಿನಿ ಸುದ್ದಿ

ಪೋರ್ನ್‌ ಮೂವಿ ರಾಕೆಟ್‌ನಲ್ಲಿ ಸಿಕ್ಕಿಬಿದ್ದ ಹೆಸರಾಂತ ನಟಿ

ಪೊಲೀಸ್‌ ಕಸ್ಟಡಿಯಲ್ಲಿರುವ ಗೆಹನಾ ವಸಿಷ್ಠ್‌ ನಿಜಕ್ಕೂ ಅಪರಾಧಿಯೇ?

ಹಿಂದಿ ಕಿರುತೆರೆ ಹಾಗೂ ಸಿನಿಮಾ ನಟಿ ಗೆಹನಾ ವಸಿಷ್ಠ್‌ ಅವರನ್ನು ಮುಂಬಯಿಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೋರ್ನ್‌ ವೀಡಿಯೋಗಳಲ್ಲಿ ಪಾಲ್ಗೊಳ್ಳುವಂತೆ ಯುವತಿಯರನ್ನು ಓಲೈಸುತ್ತಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಅವರು ಬಂಧನಕ್ಕೊಳಗಾಗಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಅಶ್ಲೀಲ, ಅನಪೇಕ್ಷಿತ ವೀಡಿಯೋಗಳನ್ನು ಹಾಕುತ್ತಿದ್ದರು ಎನ್ನುವ ಆರೋಪವೂ ಅವರ ಮೇಲಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಆಕೆಯೊಂದಿಗೆ ಇನ್ನೂ ಐವರು ಪೊಲೀಸರ ಕಸ್ಟಡಿಯಲ್ಲಿದ್ದಾರೆ.

ಛತ್ತೀಸ್‌ಘಡ ಮೂಲದ ಗೆಹನಾ ವಸಿಷ್ಠ ಅವರ ನಿಜನಾಮಧೇಯ ವಂದನಾ ತಿವಾರಿ. 2012ರ ಮಿಸ್‌ ಏಷ್ಯಾ ಬಿಕಿನಿ ಸ್ಪರ್ಧೆಯಲ್ಲಿ ವಿಜೇತರಾದ ಅವರು ಜಾಹೀರಾತು, ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟರು. ಮುಂದೆ ಕಿರುತೆರೆ, ಸಿನಿಮಾರಂಗದಲ್ಲೂ ತೊಡಗಿಸಿಕೊಂಡರು. ‘ಗಂಧಿ ಬಾತ್‌’ ವೆಬ್‌ ಸರಣಿ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಗೆಹನಾ ಸ್ಟಾರ್‌ ಪ್ಲಸ್‌ನ ‘ಬೆಹನೀನ್‌’ ಸರಣಿಯಲ್ಲೂ ಹೆಸರು ಮಾಡಿದ್ದಾರೆ. ಲಕ್ನೋವಿ ಇಶ್ಕ್‌, ದಾಲ್‌ ಮೇ ಕುಚ್‌ ಕಾಲಾ ಹೈ ಸೇರಿದಂತೆ ಕೆಲವು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.

ವೆಬ್‌ ಸರಣಿಗಳಲ್ಲಿ ಅವಕಾಶ ಕೊಡುವುದಾಗಿ ಯುವತಿಯರಿಗೆ ಆಮಿಷ ಒಡ್ಡಿ ಅವರನ್ನು ಪೋರ್ನ್‌ ವೀಡಿಯೋದಲ್ಲಿ ಕಾಣಿಸಿಕೊಳ್ಳುವಂತೆ ಗೆಹನಾ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆದರೆ ಮತ್ತೊಂದು ವಾದದ ಅನ್ವಯ ಗೆಹನಾ ಜನಪ್ರಿಯತೆಯನ್ನು ಸಹಿಸದೆ ಹಿತಶತ್ರುಗಳು ಆಕೆಯನ್ನು ಈ ಆರೋಪಕ್ಕೆ ಸಿಲುಕಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. “ಈ ವಿಚಾರದಲ್ಲಿ ಗೆಹನಾ ನಿರ್ದೋಷಿ. ಆಕೆ ಯಾವುದೇ ಪೋರ್ನ್‌ ರಾಕೆಟ್‌ನಲ್ಲಿ ತೊಡಗಿಕೊಂಡಿಲ್ಲ. ತಮ್ಮ ಜಿವಿ ಸ್ಟುಡಿಯೋದ ನಿರ್ದೇಶಕಿ, ನಿರ್ಮಾಪಕಿಯಾಗಿ ಅವರು ಕಾನೂನಿಗೆ ಮೀರಿ ಯಾವುದೇ ರೀತಿಯ ಕಾರ್ಯಚಟುವಟಿಕೆ ಕೈಗೊಂಡಿಲ್ಲ. ಇದೊಂದು ದೊಡ್ಡ ಪಿತೂರಿ” ಎಂದು ಗೆಹನಾ ವಕೀಲರು ವಾದ ಮಾಡುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಮುಂದಿನ ಕೆಲವೇ ದಿನಗಳಲ್ಲಿ ಹೊರಬೀಳಲಿದೆ.

Categories
ಸಿನಿ ಸುದ್ದಿ

ವೈರಲ್ ಆಯ್ತು ಬೇಬಿ ಬಾಹುಬಲಿ ಫೋಟೋ !

ಈ ತನ್ವಿಯೇ ನೋಡಿ ಅಲ್ಲಿ ಕಂಡ ಮಹೇಂದ್ರ ಬಾಹುಬಲಿ

ರಾಜ್‌ಮೌಳಿ ನಿರ್ದೇಶನದ ‘ಬಾಹುಬಲಿ’ (2015) ಭಾರತೀಯ ಚಿತ್ರರಂಗದಲ್ಲೇ ದಾಖಲೆ ಬರೆದ ಸಿನಿಮಾ. ಪ್ರಭಾಸ್‌, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಬಾಟಿಯಾ ಸೇರಿದಂತೆ ಈ ಚಿತ್ರಕ್ಕೆ ಬಣ್ಣ ಹಚ್ಚಿದ ಸಣ್ಣ ಪುಟ್ಟ ಕಲಾವಿದರೂ ಕೂಡ ಮನೆ ಮಾತಾದರು. ಕೆಲವರಂತೂ ರಾತ್ರೋ ರಾತ್ರಿ ಸ್ಟಾರ್ ಆದರು. ಮೊದಲೇ ಸ್ಟಾರ್ ಆಗಿದ್ದ ಪ್ರಭಾಸ್ ಸೂಪರ್ ಸ್ಟಾರ್ ಆಗಿದ್ದು ನಿಮಗೂ ಗೊತ್ತು. ಇದರಾಚೆ ಇಲ್ಲಿ ಇನ್ನೊಂದು ಪಾತ್ರವೂ ಕೂಡ ಬಾಹು ಬಲಿ ಸಿನಿಮಾ ನೋಡಿದವರಿಗೆಲ್ಲ ನಿದ್ದೆ ಗೆಡಿಸಿತ್ತು. ಅದೇ ಬೇಬಿ ಬಾಹುಬಲಿ ! ಆ ಪಾತ್ರದಲ್ಲಿ ಕಾಣಸಿಕೊಂಡಿದ್ದು ಹುಡುಗ ಅಲ್ಲ, ಬೇಬಿ ತನ್ವಿ. ಆ ಪುಟಾಣಿಗೆ ಈಗ ಏಳು ವರ್ಷ. ಆಕೆಯ ಫೋಟೋ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಸ್ಮತಿ ಸಂಸ್ಥಾನದ ಆಳ್ವಿಕೆಯ ಕಾಲ. ಶಿವಗಾಮಿ ( ನಟಿ ರಮ್ಯ ಕೃಷ್ಣ) ದುಷ್ಟ ಸೈನಿಕರಿಂದ ತಪ್ಪಿಸಿಕೊಂಡು ಹೋಗುವ ಸಂದರ್ಭ. ತನ್ನ ಪುತ್ರ ಮಹೇಂದ್ರ ಬಾಹುಬಲಿ ಸಮೇತ ನದಿ ದಾಟುತ್ತಿದ್ದಾಗ, ನದಿಯ ಪ್ರವಾಹ ಹೆಚ್ಚಾಗಿ ಮುಳುಗಿ ಹೋಗುವಾಗ, ತನ್ನ ಪುತ್ರನನ್ನು ಒಂದು ಕೈಯಲ್ಲಿ ಎತ್ತಿ ಹಿಡಿದು ರಕ್ಷಿಸುವಂತೆ ಶಿವನನ್ನು ಕೋರುತ್ತಾಳೆ. ಕೊನೆಗೆ ಆ ಮಗು ನೀರಿನಲ್ಲಿ ತೇಲಿ ಹೋಗಿ, ಬದುಕುಳಿಯುವ ಕತೆ ಸಿನಿಮಾ ನೋಡಿದವರಿಗೆಲ್ಲ ಗೊತ್ತು. ಉಳಿದಂತೆ ಇಲ್ಲಿನ ಇಂಟರೆಸ್ಟಿಂಗ್ ಸಂಗತಿ ಏನಂದ್ರೆ, ಶಿವಗಾಮಿ ಅಂದ್ರೆ ರಮ್ಯ ಕೃಷ್ಣ ಕೈಯಲ್ಲಿದ್ದ ಮಗು ಯಾರು ಅಂತ. ಮಗುವೇ ತನ್ವಿ.

ಸಿನಿಮಾ ಬಂದ ಕಾಲಕ್ಕೆ ಈ ತನ್ವಿ ಇನ್ನು ಪುಟಾಣಿ. ಈಗ ಆಕೆಗೆ ಏಳು ವರ್ಷ. ಪೋಷಕರೊಂದಿಗೆ ತೆಗೆಸಿಕೊಂಡ ಫೋಟೋಗಳು ಸೋಷಲ್ ಮೀಡಿಯಾಕ್ಕೆ ಬರುತ್ತಿದ್ದಂತೆ ವೈರಲ್ ಆಗಿವೆ. ತನ್ವಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕಾರಣ ಬಾಹುಬಲಿ ಚಿತ್ರದಲ್ಲಿದ್ದ ಅದೊಂದು ರೋಚಕ ದೃಶ್ಯ. ಕೆಲವೊಮ್ಮೆ ಕೆಲವರಿಗೆ ಮಹತ್ವದ ತಿರುವುಗಳಉ ಅರಿವಿಲ್ಲದೆ ಬಂದು ಹೋಗುತ್ತವೆ ಎನ್ನುವ ಮಾತು ತನ್ವಿ ವಿಚಾರಕ್ಕೂ ಅನ್ವಯ. ತನ್ವಿ ಈ ಬಣ್ಣದ ಜಗತ್ತಿನ ಬಗ್ಗೆ ತಿಳಿದುಕೊಳ್ಳುವಷ್ಟು ದೊಡ್ಡವಳಾಗುವ ಮುನ್ನವೇ ಸ್ಟಾರ್.

Categories
ಸಿನಿ ಸುದ್ದಿ

ದರ್ಶನ್‌ ಫ್ಯಾನ್ಸ್‌ಗೆ ಇದು ಸಂಭ್ರಮದ ಸುದ್ದಿ – ಮೆಜೆಸ್ಟಿಕ್‌ ಚಿತ್ರ ಬಂದು ಹತ್ತೊಂಬತ್ತು ವರ್ಷ

ಸಂತಸದಲ್ಲಿ ಮಿಂದೆದ್ದ ದಚ್ಚು ಹುಡುಗರು

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಹೌದು, ದರ್ಶನ್‌ ಅವರ “ರಾಬರ್ಟ್‌” ಸಿನಿಮಾ ಬಿಡುಗಡೆ ದಿನವನ್ನು ಈಗಾಗಲೇ ಅನೌನ್ಸ್‌ ಮಾಡಿದೆ. ತೆಲುಗಿನಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಇದು ಅವರ ಫ್ಯಾನ್ಸ್‌ಗೆ ದೊಡ್ಡ ಖುಷಿಯ ವಿಷಯವೆಂದರೆ, ಇನ್ನೊಂದು ಸಂತಸದ ಸುದ್ದಿಯೂ ಇದೆ. ಹೌದು, ದರ್ಶನ್‌ ಅಭಿನಯದ “ಮೆಜೆಸ್ಟಿಕ್‌” ಚಿತ್ರ ಬಿಡುಗಡೆಯಾಗಿ ಇಂದಿಗೆ ೧೯ ವರ್ಷಗಳು ಸಂದಿವೆ.

“ಮೆಜಸ್ಟಿಕ್‌” ಅವರ ಬದುಕಿನ ದಿಕ್ಕನ್ನೇ ಬದಲಿಸಿದ ಚಿತ್ರ. “ಮೆಜೆಸ್ಟಿಕ್‌” ಬಳಿಕ ಅವರು ಇದುವರೆಗೂ ತಿರುಗಿ ನೋಡಿದವರೇ ಅಲ್ಲ, ಅಲ್ಲಿಂದ ಬಣ್ಣದ ಲೋಕದಲ್ಲಿ ಮಿಂದೆದ್ದ ದರ್ಶನ್‌ ಈಗ‌ ಕನ್ನಡದ ಪಾಲಿಗೆ ಬಹುದೊಡ್ಡ ಸ್ಟಾರ್‌ನಟ. ಕ್ರಮೇಣ ಒಳ್ಳೆಯ ಚಿತ್ರಗಳ ಮೂಲಕವೇ ಅವರು ಸದ್ದು ಮಾಡುತ್ತಲೇ ಬಂದರು. “ಕಲಾಸಿಪಾಲ್ಯ”, “ಗಜ”, “ಚಿಂಗಾರಿ”, “ಬೃಂದಾವನ”, “ಸರ್ದಾರ್”, “ಜಗ್ಗುದಾದ”, “ದಾಸ” ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಕನ್ನಡ ಕಲಾರಸಿಕರಿಗೆ ನೀಡಿದ್ದಾರೆ. “ಮೆಜೆಸ್ಟಿಕ್‌” ಪಕ್ಕಾ ಮಾಸ್‌ ಸಿನಿಮಾ. ಅಲ್ಲಿಂದಲೇ ದರ್ಶನ್‌ ಅವರಿಗೆ ಮಾಸ್‌ ಫ್ಯಾನ್ಸ್‌ ಹುಟ್ಟುಕೊಂಡರು.

ಈಗ ಎಲ್ಲಿ ನೋಡಿದರೂ ದರ್ಶನ್‌ ಅವರ ಅಭಿಮಾನಿಗಳದ್ದೇ ಸುದ್ದಿ. ಅದರಲ್ಲೂ ದರ್ಶನ್‌ ಅಂದಾಕ್ಷಣ ನೆನಪಾಗೋದೇ ಮಾಸ್‌ ಫೀಲ್.‌ ಸದಾ ಸದಭಿರುಚಿಯ ಚಿತ್ರ ಕೊಡುತ್ತ ಬಂದಿರುವ ದರ್ಶನ್‌ ಅವರ “ಮೆಜೆಸ್ಟಿಕ್‌” ಚಿತ್ರದ ಬಗ್ಗೆಯೇ ಈಗ ಎಲ್ಲರ ಮಾತು. ಮತ್ತೆ ಮತ್ತೆ “ಮೆಜಸ್ಟಿಕ್‌” ನೆನಪಾಗುತ್ತೆ ಅಂದರೆ, ಅದರೊಳಗಿರುವ ಕಂಟೆಂಟ್.‌

ಅದೇನೆ ಇರಲಿ, ಇಂಥದ್ದೊಂದು ಸಿನಮಾ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ದರ್ಶನ್‌ ಇಂದಿಗೂ ಮಾಸ್‌ ಹೀರೋ ಆಗಿಯೇ ಗಟ್ಟಿನೆಲೆ ಕಂಡಿದ್ದಾರೆ. ಅಂದಹಾಗೆ, ಪಿ.ಎನ್.ಸತ್ಯ ನಿರ್ದೇಶಿಸಿದ ಸಿನಿಮಾ ಇದು. ರಾಮಮೂರ್ತಿ, ಬಾ.ಮ.ಹರೀಶ್‌ ಇದರ ಹಿಂದೆ ಇದ್ದು, ತಯಾರು ಮಾಡಿದವರು.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

ಕೋಟಿಗೊಬ್ಬನ ಹಾಡು ಪಾಡು- ಮಾರ್ಚ್‌ 28ಕ್ಕೆ ಹಾಡುಗಳ ಬಿಡುಗಡೆ

ಸಾಂಗ್‌ ಎದುರು ನೋಡುತ್ತಿರುವ ಫ್ಯಾನ್ಸ್‌ 

ಕೋಟಿಗೊಬ್ಬ ಅಂದಾಕ್ಷಣ, ನೆನಪಾಗೋದೇ ಡಾ.ವಿಷ್ಣುವರ್ಧನ್.‌ ಈಗ ಅದೇ ಕೋಟಿಗೊಬ್ಬ ಹೆಸರಲ್ಲಿ ಸುದ್ದಿಯಾದವರು ಕಿಚ್ಚ ಸುದೀಪ್.‌ ಹೌದು, ಸುದೀಪ್‌ ಈಗಾಗಲೇ “ಕೋಟಿಗೊಬ್ಬ” ಸೀರೀಸ್‌ನಲ್ಲಿ ಸಿನಿಮಾ ಮಾಡಿರುವ ಸುದೀಪ್‌, “ಕೋಟಿಗೊಬ್ಬ ೩” ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

ಅದಕ್ಕೆ ಕಾರಣ, ಈಗಾಗಲೇ ಸಾಕಷ್ಟು ಸುದ್ದಿಯಲ್ಲಿರೋದು. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳ ಸ್ಟಾರ್‌ ನಟ ಎನಿಸಿರುವ ಸುದೀಪ್‌ ಅವರ “ಕೋಟಿಗೊಬ್ಬ” ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಮಾ.೨೮ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಹೌದು, ಸೂರಪ್ಪ ಬಾಬು ನಿರ್ಮಾಣದ “ಕೋಟಿಗೊಬ್ಬ ೩” ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯಕ್ಕೆ, ಟ್ವೀಟ್‌ ಮೂಲಕ ಚಿತ್ರತಂಡ ಹಾಡುಗಳ ಬಿಡುಗಡೆ ಕುರಿತು ಹೇಳಿಕೊಂಡಿದೆ.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಸಿನಿಮಾ ವಿಚಾರದಲ್ಲಿ ನಟ ನಿರೂಪ್ ಭಂಡಾರಿ ಮನಸ್ಸಲೇ ಬೈದು ಕೊಂಡಿದ್ದಾರಂತೆ.. ಅದು ಯಾಕೆ?

ಸುದೀಪ್ ಜತೆಗೆ ಅಭಿನಯಿಸುವ ಸಲುವಾಗಿ..


ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ದಲ್ಲಿ ನಟ ನಿರೂಪ್ ಭಂಡಾರಿ‌ಕೂಡ ಇದ್ದಾರೆ. ಈಗಾಗಲೇ ಅವರು ಸಂಜೀವ್ ಗಂಬೀರ್ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಂತೆ. ಈಗಾಗಲೇ ಆ ಪಾತ್ರ್ ಚಿತ್ರೀಕರಣ ಕೂಡ ಮುಗಿಸಿಕೊಂಡು ಬಂದಿದ್ದಾರೆ. ಭಾನುವಾರ ಅದರ ಮೊದಲ ಸುದ್ದಿಗೋಷ್ಟಿಯಲ್ಲಿ ನಟ ನಿರೂಪ್ ಭಂಡಾರಿ ಮಾತನಾಡುತ್ತಾ, ತಾವು ಪಾತ್ರಕ್ಕಾಗಿ ಮನಸ್ಸಲ್ಲೇ ಬೈದುಕೊಂಡ‌ ಕ್ಷಣ ಗಳನ್ನು ಹೇಳಿಕೊಂಡು ಅಚ್ಚರಿ ಮೂಡಿಸಿದರು.


‘ ನಂಗೆ ಈ ಪಾತ್ರ ಸಿಗುತ್ತೆ ಅಂತಂದುಕೊಂಡಿರಲಿಲ್ಲ‌ . ಸಿನಿಮಾ ಕತೆ ಬರೆಯಲು ಅನೂಪ್ ಶುರುಮಾಡಿ ದಾಗನಿಂದ ಅವರ ಜತೆ ಆಗಾಗ ಭೇಟಿ ಮಾಡುತ್ತಿದ್ದೆ. ಆದರೆ ನಂಗೆ ಅದರಲ್ಲಿ ಪಾತ್ರ ಸಿಗುತ್ತೆ ಅಂತ ಗೊತ್ತಿರಲಿಲ್ಲ. ಕೊನೆಗೊಂದು ದಿನ ನಾನು ಅಭಿನಯಿಸಬೇಕಿದ್ದ ಪಾತ್ರಕ್ಕೆ ಬೇರೆ ಬೇರೆ ಆ್ಯಕ್ಟರ್ ಅವರನ್ನು ಹುಡುಕುತ್ತಿದ್ದರು. ಅನೇಕ ಸ್ಟಾರ್ ಹೆಸರು ಕೇಳಿಬಂದಿದ್ದವು. ಹಾಗೆಲ್ಲ ಬೇರೆ ಸ್ಟಾರ್ ಹೆಸರು ಕೇಳಿದಾಗೆಲ್ಲ ನಾನು ಮನಸ್ಸಲೇ ಬೈದುಕೊಳ್ಳುತ್ತಿದ್ದೆ. ಕೊನೆಗೆ ಒಂದು ದಿನ ಆ ಪಾತ್ರ‌ನಂಗೆ ಬಂತು. ಆಗ ಕೊನೆಗೂ ನೆಮ್ಮದಿ ಸಿಕ್ಕಿತು’ ಎಂದರು ನಟ ನಿರೂಪ್ ಭಂಡಾರಿ.

ನಿರೂಪ್ ಇಷ್ಟಕ್ಕೂ ಆ ಪಾತ್ರಕ್ಕಾಗಿ ಆ ರೀತಿ ಪರದಾಡಿದ್ದು ಯಾಕೆ? : ಸುದೀಪ್ ಸರ್ ಸಿನಿಮಾ. ಬಿಗ್ ಬಜೆಟ್ ಸಿನಿಮಾ.‌ಅವರೊಂದಿಗೆ ಅಂತಹದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತಲ್ವಾ ಅಂತ ‌ಅದೇ ಕಾರಣಕ್ಕೆ ಈ ಸಿನಿಮಾಕ್ಕಾಗಿ ಈ ರೀತಿ ಪರದಾಡಿದ್ದು ಅಂತ ಸ್ಪಷ್ಟನೆ ಕೊಟ್ಟರು ನಟ ನಿರೂಪ್ ಭಂಡಾರಿ.

error: Content is protected !!