ದರ್ಶನ್‌ ಎದುರು ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ಫಸ್ಟ್‌ ಟೈಮ್‌ ಹೊಡೆದ ಡೈಲಾಗ್‌ ಇದು…..!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರ ಪೈಕಿ ಮರಿ ಟೈಗರ್‌ ವಿನೋದ್‌ ಪ್ರಭಾಕರ್‌ ಕೂಡ ಒಬ್ಬರು. ವಿನೋದ್‌ ಪಾಲಿಗೆ ದರ್ಶನ್‌ ಬರೀ ಆಪ್ತರು ಮಾತ್ರವಲ್ಲ, ಮಾರ್ಗದರ್ಶಕರು ಕೂಡ. ವಿನೋದ್‌ ಕಷ್ಟ ದಿನಗಳಲ್ಲಿ ಸಲಹೆ-ಸಹಕಾರ ನೀಡಿದ್ದಲ್ಲ, ಹೀಗೆಯೇ ನಡೆ ಅಂತ ಧೈರ್ಯ ತುಂಬಿದವರು ದರ್ಶನ್.‌ ಹಾಗಾಗಿಯೇ ದರ್ಶನ್‌ ಅಂದ್ರೆ ವಿನೋದ್‌ ಪ್ರಭಾಕರ್‌ ಅವರಿಗೆ ಅತೀವ ಪ್ರೀತಿ, ಅತೀವ ಗೌರವ.ಇದೇ ಕಾರಣಕ್ಕೆ ದರ್ಶನ್‌ ಎದುರು ನಟ ವಿನೋದ್‌ ಪ್ರಭಾಕರ್‌ ಗಟ್ಟಿಯಾಗಿ ಮಾತನಾಡುವುದಕ್ಕೂ ಮುಜುಗರ ಪಡ್ತಾರೆ. ಇಷ್ಟಾಗಿಯೂ ದರ್ಶನ್‌ ಎದುರು ವಿನೋದ್‌ ಪ್ರಭಾಕರ್‌ ಒಂದು ಖಡಕ್‌ ಡೈಲಾಗ್‌ ಹೊಡೆದಿದ್ದಾರೆ.

ಅದೇ ” ಜಗ್ಗು..ಆರ್‌ ಬಾರ್‌ ತಲುಪಲ್ಲ….! ಇದು ವಿನೋಧ್‌ ಅವರ ಫೇವರೆಟ್‌ ಡೈಲಾಗ್‌ ಅಂತೆ. ಇದನ್ನು ಅವರು ತಮ್ಮ ತಂದೆ ಟೈಗರ್‌ ಪ್ರಭಾಕರ್‌ ಶೈಲಿಯಲ್ಲೇ ಹೊಡೆದಿದ್ದಾರೆ. ಹಾಗೆಯೇ ಡೈಲಾಗ ಹೊಡಿಬೇಕು ಅಂತ ದರ್ಶನ್‌ ಅವರೇ ಹೇಳಿದ್ದಂತೆ. ಇದನ್ನು ಅವರು ಶುಕ್ರವಾರ ಹೈದ್ರಾಬಾದ್‌ ನಲ್ಲಿ ನಡೆದ ರಾಬರ್ಟ್‌ ಚಿತ್ರದ ಫ್ರೀ ರಿಲೀಸ್‌ ಪ್ರಚಾರದ ಸಂಭ್ರಮದಲ್ಲಿ ಹೇಳಿದರು. ರಾಬರ್ಟ್‌ ಚಿತ್ರದಲ್ಲಿನ ಪಾತ್ರದ ಕುರಿತು ವೇದಿಕೆಯಲ್ಲಿ ಮಾತನಾಡುತ್ತಿದ್ದ ವಿನೋದ್‌ ಪ್ರಭಾಕರ್‌, ದಶರ್ನ್‌ ಜತೆಗಿನ ತಮ್ಮ ಬಾಂದವ್ಯದ ಬಗ್ಗೆ ಹಂಚಿಕೊಂಡರು.

” ಡಿ ಬಾಸ್‌ ಎದುರು ಇಂತಹದೊಂದು ವೇದಿಕೆಯಲ್ಲಿ ಯಾವತ್ತು ಡೈಲಾಗ್‌ ಹೊಡೆದಿಲ್ಲ. ಅವರ ಜತೆಗೂ ವೇದಿಕೆ ಹಂಚಿಕೊಂಡಿಲ್ಲ. ಫಸ್ಟ್‌ ಟೈಮ್‌ ಈ ಡೈಲಾಗ ಹೇಳುತ್ತಿದ್ದೇನೆ. ಇದು ನನ್ನ ಫೇವರೆಟ್‌ ಡೈಲಾಗ ಅಂತ ಈ ಡೈಲಾಗ ಹೇಳಿ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು ನಟ ವಿನೋದ್‌ ಪ್ರಭಾಕರ್.‌ ವೇದಿಕೆ ಮುಂಭಾಗ ಕುಳಿತು ವಿನೋದ್‌ ಪ್ರಬಾಕರ್‌ ಅವರ ಮಾತುಗಳನ್ನೇ ಆಲಿಸುತ್ತಿದ್ದ ನಟ ದರ್ಶನ್‌, ವಿನೋದ್‌ ಡೈಲಾಗ್‌ ಗೆ ನಕ್ಕು ಸ್ವಾಗತಿಸಿದರು.

Related Posts

error: Content is protected !!