Categories
ಸಿನಿ ಸುದ್ದಿ

ಹೊಸ ಲವ್ ನಲ್ಲಿ ದುನಿಯಾ ವಿಜಯ್!

ಸಲಗ ಬಳಿಕ ಕ್ಯೂಟ್ ಲವ್ ಸ್ಟೋರಿ ನಿರ್ದೇಶನಕ್ಕೆ  ನಟ ವಿಜಯ್ ಸಜ್ಜು

“ದುನಿಯಾ” ವಿಜಯ್ ಅವರು ಮೊದಲ ಬಾರಿಗೆನ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಕೊರೊನಾ ಸಮಸ್ಯೆ ಇಲ್ಲದೇ ಹೋಗಿದ್ದರೆ, ಇಷ್ಟೊತ್ತಿಗಾಗಲೇ, “ಸಲಗ’ ಅಬ್ಬರಿಸಿಬಿಡುತ್ತಿತ್ತು. ಇಡೀ ಚಿತ್ರರಂಗವೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಬಿಡುಗಡೆಗೆ ಸಜ್ಜಾಗಿದ್ದ ಚಿತ್ರಗಳೂ ಬಿಡುಗಡೆಯಾಗದೆ ಉಳಿದಿದ್ದವು. ಈಗ ಚಿತ್ರರಂಗ ತನ್ನ ಕಾರ್ಯಚಟುವಟಿಕೆ ಶುರುಮಾಡಿದೆ.

“ಸಲಗ’ ಕೂಡ ಬಿಡುಗಡೆಯ ಹಾದಿಯಲ್ಲಿದೆ. “ಸಲಗ’ ನಿರ್ದೇಶಕ ಕಮ್ ನಟ “ದುನಿಯಾ” ವಿಜಯ್, ಇದೀಗ ಹೊಸದೊಂದು ಸಿನಿಮಾಗೆ ಕೈ ಹಾಕಿದ್ದಾರೆ. “ಸಲಗ” ಬಿಡುಗಡೆ ಬಳಿಕ ಹೊಸ ಚಿತ್ರ ಮಾಡಲು ಅಣಿಯಾಗುತ್ತಿದ್ದಾರೆ.

ಈ ಬಾರಿ ಅವರು ಸಾಹಸ ಚಿತ್ರಕ್ಕೆ ಮೊರೆ ಹೋಗದೆ, ಪಕ್ಕಾ ಲವ್‌ ಸ್ಟೋರಿ ಹೇಳಲು ಹೊರಟಿದ್ದಾರೆ. ಆ ಕುರಿತು “ಸಿನಿ ಲಹರಿ’ ಜೊತೆ ಮಾತನಾಡಿದ “ದುನಿಯಾ” ವಿಜಯ್, ” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ.

” ನಾನೀಗ “ಸಲಗ” ಬಿಡುಗಡೆ ಎದುರು ನೋಡುತ್ತಿದ್ದೇನೆ. ಸದ್ಯ ಎಲ್ಲವೂ ತಿಳಿಯಾದ ನಂತರ ಚಿತ್ರ ಬಿಡುಗಡೆಗೆ ಮುಂದಾಗುತ್ತೇನೆ. ಇದರ ನಡುವೆ, ನಾನೊಂದು ಹೊಸ ಚಿತ್ರಕ್ಕೂ ಕೈ ಹಾಕಿದ್ದೇನೆ. ಈ ಸಲ ಒಂದು ಪ್ರೇಮಕಥೆ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ. ಅದೊಂದು ಪಕ್ಕಾ ಫ್ರೆಶ್ ಲವ್  ಸ್ಟೋರಿಯಾಗಲಿದೆ” 

” ಕಪ್ಪಗಿರೋ ‌ಹುಡುಗ ಬೇಕು- ವಯಸ್ಸು ಹದಿನೆಂಟಾಗಿರಬೇಕು ” 

ಹೊಸ ಹುಡುಗ ಹುಡುಗಿ ಇರಲಿದ್ದಾರೆ. ಅದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದೆ. ನಾಯಕ ಆಯ್ಕೆ ನಡೆಯುತ್ತಿದೆ. ಸ್ಕ್ರಿಪ್ಟ್ ಎಂಡ್ ಆಗಿದೆ. ಹೊಸ ಹುಡುಗ ಕಥೆಗೆ ಸೂಕ್ತವಾಗಿರಬೇಕು. ಕಪ್ಪುಗಿರೋರು ಬೇಕು. ಕಥೆ ಆ ರೀತಿಯ ಹುಡುಗನನ್ನು ಡಿಮ್ಯಾಂಡ್ ಮಾಡುತ್ತಿದೆ. ನನ್ನ ಪ್ರಕಾರ ಒಳ್ಳೆಯ ಲವ್ ಸ್ಟೋರಿ  ಇದು. ನಾನು ಮಾಡೋಕೆ ಆಗದಿರುವ ಕಥೆ ಇದು. ಹಾಗಾಗಿ ಇನ್ನೊಬ್ಬರಿಗೆ ಮಾಡಬೇಕು ಅಂತಾನೇ ಈ ನಿರ್ಧಾರ. 18 ರಿಂದ 25ರ ಹುಡುಗ ಹುಡುಗಿ ನಡುವಿನ ಪ್ರೇಮಕಥೆ ಇದು. ನಟನೆ ಗೊತ್ತಿದ್ದರೂ ಓಕೆ, ಅಂತಹ ಹುಡುಗ ಬೇಕು. ಹುಡುಗಿ ಫ್ರೆಶ್ ಫೇಸ್ ಹುಡುಕುತ್ತಿದ್ದೇನೆ.

“ಸಲಗ” ನಂತರ ಈ ಸಿನಿಮಾ ಮಾಡಿ ಮುಗಿಸೋದು. ಸದ್ಯಕ್ಕಿಷ್ಟು. ದೊಡ್ಡ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇಷ್ಟರಲ್ಲೇ ಎಲ್ಲವೂ ಸರ್ಪ್ರೈಸ್ ಆಗಿರಲಿದೆ. ಅಲ್ಲಿಯವರೆಗೆ ಈ ಪ್ರೇಮಕಥೆಯ ಕೆತ್ತನೆ ಕೆಲಸ ನಡೆಯುತ್ತಿದೆ. ಸದ್ಯಕ್ಕೆ ನಾನೀಗ ಸ್ಕ್ರಿಪ್ಟ್ನಲ್ಲಿದ್ದೇನೆ. “ಸಲಗ” ಬಿಡುಗಡೆಯ ತಯಾರಿಯಲ್ಲೂ ಇದ್ದೇನೆ. ಸದ್ಯಕ್ಕಿಷ್ಟು ವಿಷಯವಿದೆ. ಉಳಿದದ್ದನ್ನು ಹಂತವಾಗಿ ವಿವರಿಸುತ್ತೇನೆ’ ಎಂದು ಮಾತು ಮುಗಿಸುತ್ತಾರೆ ದುನಿಯಾ ವಿಜಯ್

Categories
ಸಿನಿ ಸುದ್ದಿ

ಅಭಿಮಾನಿಯನ್ನು ‘ಪದವಿಪೂರ್ವ’ ಕ್ಕೆ ಸೇರಿಸಿದ ಜಗ್ಗೇಶ್

ಯೋಗರಾಜ್ ಭಟ್ಟರ’ ಪದವಿ ಪೂರ್ವ’ ಕ್ಕೆ ಭರ್ಜರಿ ಹೊಸ ಮುಖಗಳು ಸೇರ್ಪಡೆ ಆಗುತ್ತಿವೆ. ಮೊನ್ನೆಯಷ್ಟೆ ಆಳ್ವಾಸ ಕಾಲೇಜು ವಿದ್ಯಾರ್ಥಿನಿ‌, ಮಾಡೆಲಿಂಗ್ ಬೆಡಗಿ ಬೆಂಗಳೂರು ಮೂಲದ ಯಶಾ ಶಿವಕುಮಾರ್ ಸೇರ್ಪಡೆಯಾದ ಬೆನ್ನಲೇ ಮತ್ತೊರ್ವ ಯುವ ಪ್ರತಿಭೆ ಬುಧವಾರ ಪದವಿ ಪೂರ್ವ ಕ್ಕೆ ಜಾಯಿನ್ ಆಗಿದ್ದಾರೆ‌. ಆತನ ಹೆಸರು ವಿಜೇಶ್ ಅಲಿಯಾಸ್ ವೆಂಕಟೇಶ್ ಗಂಗಾಧರಪ್ಪ.

ವಿಜೇಶ್

ಹಾಸನದ ಅರಕಲುಗೂಡಿನ ಯುವ ಪ್ರತಿಭೆ. ನವರಸನಾಯಕ ಜಗ್ಗೇಶ್ ಅಭಿನಯದ ಚಿತ್ರಗಳ ತುಣುಕುಗಳಿಗೆ ತನ್ನ ವಿಚಿತ್ರ ಮ್ಯಾನರಿಸಂ ಮೂಲಕ ಹೊಸ ಟಚ್ ನೀಡಿ ಜನರನ್ನು ನಕ್ಕು ನಗಿಸುತ್ತಿದ್ದ ಹುಡುಗನಿಗೆ ‘ಪದವಿಪೂರ್ವ’ ಚಿತ್ರ ಅದೃಷ್ಟ ಹೊತ್ತು ತಂದಿದೆ. ಸ್ವತಃ ಜಗ್ಗೇಶ್ ಅವರೇ ಈತನ ಅಭಿನಯ ಶೈಲಿಯನ್ನು ಮೆಚ್ಚಿ ‘ಪದವಿಪೂರ್ವ’ ಚಿತ್ರತಂಡಕ್ಕೆ ಪರಿಚಯಿಸುವ ಮೂಲಕ ಹೊಸ ಕಲಾವಿದನಿಗೆ ಆಸರೆಯಾಗಿದ್ದಾರಂತೆ.

ಚಿತ್ರದ ನಾಯಕನಾಗಿ “ಪೃಥ್ವಿ ಶಾಮನೂರ್” ಅಭಿನಯಿಸುತ್ತಿದ್ದು, ನಾಯಕಿಯರಾಗಿ “ಅಂಜಲಿ ಅನೀಶ್” ಹಾಗು “ಯಶ ಶಿವಕುಮಾರ್” ಈಗಾಗಾಲೇ ಆಯ್ಕೆಯಾಗಿದ್ದಾರೆ. ಅರ್ಜುನ್ ಜನ್ಯ, ಸಂತೋಷ್ ರೈ ಪಾತಾಜೆರಂತ ಅತ್ಯುತ್ತಮ ತಂತ್ರಜ್ಞರನ್ನೂಳಗೊಂಡ ‘ಪದವಿಪೂರ್ವ’ ತಂಡಕ್ಕೆ, ‘ಪಂಚತಂತ್ರ ‘ ಚಿತ್ರದ ರೇಸ್ ದೃಶ್ಯಗಳನ್ನು ಅಚ್ಚು’ಕಟ್’ ಆಗಿ ತೆರೆಯ ಮೇಲೆ ಮೂಡುವಂತೆ ಮಾಡಿದ್ದ ಸಂಕಲನಕಾರ “ಮಧು ತುಂಬಕೆರೆ” ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಚಿತ್ರದ ಪೂರ್ವತಯಾರಿ ಕಾರ್ಯಭರದಿಂದ ಸಾಗಿದ್ದು, ಪ್ರಮುಖ ಪಾತ್ರಧಾರಿಗಳಿಗೆ “ಆಕ್ಟಿಂಗ್ ವರ್ಕ್‌ಶಾಪ್” ನಡೆಸಲಾಗುತ್ತಿದೆ. ಶಿವಮೊಗ್ಗ, ಮಂಗಳೂರು ಹಾಗು ಬೆಂಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಆಲೋಚಿಸುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರು ಮಾಡಲು ಚಿತ್ರ ಸಿದ್ಧತೆ ನಡೆಸಿದೆ.

Categories
ಸಿನಿ ಸುದ್ದಿ

ಕ್ರಾಂತಿವೀರನ ಹೊಸ ಫೋಟೋ ರಿಲೀಸ್

ಬಾಲ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್

ಕನ್ನಡದಲ್ಲಿ ಈಗಾಗಲೇ “ಭಗತ್ ಸಿಂಗ್” ಜೀವನ ಚರಿತ್ರೆ ಕುರಿತಂತೆ “ಕ್ರಾಂತಿವೀರ” ಚಿತ್ರ ಬರುತ್ತಿರುವುದು ಎಲ್ಲರಿಗೂ ಗೊತ್ತು. ಇತ್ತೀಚೆಗಷ್ಟೇ ಚಿತ್ರತಂಡ ಪೊಸ್ಟರ್ ರಿಲೀಸ್ ಮಾಡಿತ್ತು. ಭಗತ್ ಸಿಂಗ್ ಪಾತ್ರದಲ್ಲಿ ಅಜಿತ್ ಜಯರಾಜ್ ನಟಿಸುತ್ತಿದ್ದಾರೆ. ಈ “ಕ್ರಾಂತಿವೀರ” ಚಿತ್ರದಲ್ಲಿ ಬಾಲ್ಯದ ದಿನಗಳಲ್ಲಿನ ಭಗತ್ ಸಿಂಗ್ ಕಥೆಯೂ ಇದೆ. ಜ್ಯೂನಿಯರ್ ಭಗತ್ ಸಿಂಗ್ ಪಾತ್ರದಲ್ಲಿ ನಿಶಾಂತ್ ಟಿ ರಾಠೋಡ್ ಕಾಣಿಸಿಕೊಂಡಿದ್ದಾರೆ. ಅ.22ರಂದು ಈ ಬಾಲನಟ ನಿಶಾಂತ್ ಟಿ.ರಾಠೋಡ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಿರ್ದೇಶಕರಾದ ಆದತ್ ಎಂ.ಪಿ. ಅವರು ನಿಶಾಂತ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ, ಭಗತ್‌ಸಿಂಗ್ ಜೀವನ ಚರಿತ್ರೆ ಇರುವ ಈ ಚಿತ್ರದ ಚಿತ್ರೀಕರಣ ಮುಗಿದು, ಡಬ್ಬಿಂಗ್ ಕೂಡ ನಡೆಸುತ್ತಿದೆ.
ಚಿತ್ರವನ್ನು ಬಾಗಲಕೋಟೆ, ಶಿವಮೊಗ್ಗ, ಹುಬ್ಬಳ್ಳಿ, ಕೆಜಿಎಫ್ ಹಾಗೂ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಪ್ರತಾಪ್.ಎಸ್ ಅವರ ಸಂಗೀತವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಆರ್ ‌ಕೆ ನೃತ್ಯ ನಿರ್ದೇಶನ‌ ಮಾಡಿದ್ದಾರೆ. ಚಿತ್ರಕ್ಕೆಚಂದ್ರಕಲಾ.ಟಿ.ರಾಠೋಡ್,ಮಂಜುನಾಥ್.ಹೆಚ್.ನಾಯಕ್ ಮತ್ತು ಆರ್ಜೂರಾಜ್ ನಿರ್ಮಾಪಕರು. ತ್ರಿವಿಕ್ರಮಸಾಪಲ್ಯ, ಪ್ರಶಾಂತ್‌ಕಲ್ಲೂರು, ಲೇಟ್ ಗೌರಿರಮನಾಥ್ ಅವರು‌ನ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.

Categories
ಸಿನಿ ಸುದ್ದಿ

ರತ್ನನ್ ಪ್ರಪಂಚದಲ್ಲಿ  ಗಟ್ಟಿಗಿತ್ತಿ ಗೌಡ್ತಿಯಾಗಿ‌ ನಟಿ ತಾರಾ

ನಟಿ ತಾರಾ ಕನ್ನಡ ಚಿತ್ರರಂಗದ ಹಿರಿಯ ನಟಿ. ನೂರಾರು ಅಧಿಕ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಪಾತ್ರವನ್ನು ಪೋಷಿಸುತ್ತ ಬಂದಿದ್ದಾರವರು. ಆದರೆ, ಆ ಒಂದು ಪಾತ್ರವನ್ನು ಬಿಟ್ಟು! ಅದುವೇ ಗಟ್ಟಿಗಿತ್ತಿ ಗೌಡತಿ ಪಾತ್ರ. ಹೌದು, ಅಂಥ ಒಂದು ವಿಶೇಷ ಪಾತ್ರವನ್ನು ಡಾಲಿ ಧನಂಜಯ್ ನಟಿಸುತ್ತಿರುವ ‘ರತ್ನನ್​ ಪ್ರಪಂಚ’ ಚಿತ್ರ ಅವರಿಗೆ ಕರುಣಿಸಿದೆ.

ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಾಣ ಮಾಡುತ್ತಿರುವ ರತ್ನನ್​ ಪ್ರಪಂಚ ಸಿನಿಮಾವನ್ನು ‘ದಯವಿಟ್ಟು ಗಮನಿಸಿ’ ಸಿನಿಮಾ ಖ್ಯಾತಿಯ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅತೀ ವಿಶೇಷವಾದ ಪಾತ್ರದಲ್ಲಿ ತಾರಾ ಕಾಣಿಸಿಕೊಳ್ಳಲಿದ್ದಾರೆ. ಉತ್ತರ ಕರ್ನಾಟಕ ಮೂಲದ ಊರೊಂದರ ಗಟ್ಟಿಗಿತ್ತಿ ಗೌಡತಿಯಾಗಿ ಅವರನ್ನು ತೋರಿಸುತ್ತಿದ್ದಾರೆ ನಿರ್ದೇಶಕರು.


‘ಕಥೆಯ ಒಂದೆಳೆ ಹೇಳುತ್ತಿದ್ದಂತೆ, ನನಗೆ ಇಷ್ಟವಾಯ್ತು.ಆದರೆ ಜೊತೆಗೆ ಆಳಕು ಆಯ್ತು..ಅದರಲ್ಲೂ ನಾನು ಈ ರೀತಿಯ ಪಾತ್ರವನ್ನು ಇಲ್ಲಿಯವರೆಗೂ ಮಾಡಿಲ್ಲ. ಖಡಕ್​ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡುವ ಹೆಣ್ಣುಮಗಳಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಹಿಳೆಯಾಗಿ ನನ್ನ ಪಾತ್ರ ಸಾಗಲಿದೆ. ನೆಗೆಟಿವ್​ ಶೇಡ್​ ಅಲ್ಲದ, ದೇವತೆಯಂತೆ ಬಿಂಬಿಸುವ ಪಾತ್ರ ಇದು. ಇಂಥ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ನನ್ನ ಧನ್ಯವಾದ’ ಎನ್ನುವ ತಾರಾ, ಉತ್ತರ ಕರ್ನಾಟಕ ಭಾಷೆ ಕಲಿಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಇಡೀ ಸಿನಿಮಾದಲ್ಲಿ ತಾರಾ ಪಾತ್ರ ಮುಖ್ಯವಾಗಿರುವುದರಿಂದ ಬಹುಪಾಲು ಸಿನಿಮಾದಲ್ಲಿ ಅವರೂ ಕಾಣಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಆ ಸೊಗಡನ್ನು ಉಚ್ಚರಿಸುವುದಕ್ಕೆ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

” ‘ಈವರೆಗೂ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತಿ ಪಾತ್ರದಲ್ಲಿಯೂ ಕಲಿಯುವುದಕ್ಕೆ ಸಾಕಷ್ಟಿತ್ತು. ಇಷ್ಟು ವರ್ಷಗಳಾದರೂ ಈಗಲೂ ನನಗೆ ಕಲಿಯುವುದಕ್ಕೆ ಇಂಥ ಪಾತ್ರಗಳ ಮೂಲಕ ಅವಕಾಶ ಸಿಗುತ್ತಿದೆ. ಆ ರೀತಿಯ ಪಾತ್ರ ಹಿಡಿದು ಬರುವ ನಿರ್ದೇಶಕರಿಗೆ, ನೀವೇ ನಟಿಸಬೇಕು ಎನ್ನುವ ನಿರ್ಮಾಪಕರಿಗೆ ನನ್ನ ನಮನಗಳು’’

–  ತಾರಾ

ಇನ್ನು ಲಾಕ್​ಡೌನ್​ ಮುಗಿಯುತ್ತಿದ್ದಂತೆ ಟಾಮ್​ ಆ್ಯಂಡ್​ ಜೆರ್ರಿ ಮತ್ತು ಬಡವ ರಾಸ್ಕಲ್ ಚಿತ್ರದ ಶೂಟಿಂಗ್​ ಮುಗಿಸಿರುವ ತಾರಾ, ನವೆಂಬರ್​ನಲ್ಲಿ ರತ್ನನ್​ ಪ್ರಪಂಚ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಹೊಸದಾಗಿ ಐದಾರು ಚಲನಚಿತ್ರಗಳನ್ನೂ ಒಪ್ಪುಕೊಂಡಿದ್ದಾರೆ.

Categories
ಸಿನಿ ಸುದ್ದಿ

ಟಾಲಿವುಡ್ ,‌ಮಾಲಿವುಡ್ ನಲ್ಲೂ ‘ ಸಿಂಹ ‘ ಘರ್ಜನೆ, ವಸಿಷ್ಠ ಬರ್ತ್ ಡೇ ಗೆ ಸಿಕ್ಕ ಗಿಫ್ಟ್ ಏನು ಗೊತ್ತಾ?

ಕೊರೋನಾ ಕಾರಣ ಬರ್ತ್ ಡೇ ಗ್ರಾಂಡ್  ಆಚರಣೆಯಿಂದ ದೂರವುಳಿದ ನಟನಿಗೆ ‘ಕಾಲಚಕ್ರ’ದ ಭರ್ಜರಿ ಸಂಭ್ರಮ

ಸರಿ ಸುಮಾರು ಆರಡಿ ಹೈಟು, ಖಡಕ್ ಲುಕು, ಕಂಚಿ‌ನ ಕಂಠ, ‌ಯುಂಗ್ ವಿಲನ್ ಅಂದಾಕ್ಷಣ ನೆನಪಾಗುವ ಹೆಸರು ಚಿಟ್ಟೆ ಅಲಿಯಾಸ್ ವಸಿಷ್ಟ ಸಿಂಹ. ಸ್ಯಾಂಡಲ್ ವುಡ್ ಮಟ್ಟಿಗೆ ಅವರೊಬ್ಬ ಪ್ರತಿಭಾನ್ವಿತ ಯುವ ನಟ. ಗಾಯಕರಾಗಲು ಬೆಂಗಳೂರಿಗೆ ಬಂದು ನಟನಾಗಿ‌ಮಿಂಚುತ್ತಿರುವ ಅವರ ಸಿನಿಜರ್ನಿಯೇ ಒಂದು ಇಂಟೆರೆಸ್ಟಿಂಗ್. ‘ರಾಜಾಹುಲಿ ‘ ಚಿತ್ರದೊಂದಿಗೆ ಕನ್ನಡದಲ್ಲಿ ಬಹುಬೇಡಿಕೆಯ ವಿಲನ್ ಆಗಿದ್ದು, ಆ ಜನಪ್ರಿಯತೆಯ ಮೂಲಕವೇ ಗಾಯಕರಾಗಿದ್ದು, ಅಲ್ಲಿಂದೀಗ ನಾಯಕರಾಗಿಯೂ ಮಿಂಚುತ್ತಿರುವುದು ಅವರ ಸಿನಿ ಜರ್ನಿಯ ವಿಶೇಷ. ಅವರಿಗಿಂದು ಹುಟ್ಟು ಹಬ್ಬ( ಅಕ್ಟೋಬರ್ 19) .

ಬೇಡಿಕೆಯ‌‌ ಹೀರೋ ಆಗಿದ್ದೇ ಬರ್ತ್ ಡೇ ಗಿಫ್ಟ್ !

ಕೊರೋನಾ ಕಾರಣಕ್ಕೆ ಅವರಿಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಈ ವರ್ಷದ ಅವರ ಹುಟ್ಟುಹಬ್ಬ ಎರಡು ಕಾರಣಕ್ಕೆ ಗಮನಾರ್ಹ. ‘ಇಂಗ್ಲೆಂಡ್ ವರ್ಸಸ್ ಲಂಡನ್’ ಚಿತ್ರದ ಮೂಲಕ ಕನ್ನಡದಲ್ಲಿ ಹೀರೋ ಆಗಿಯೂ ಬಡ್ತಿ ಪಡೆದ ಟಗರು ಖ್ಯಾತಿಯ ‘ಚಿಟ್ಟೆ ‘ ಇವತ್ತು ಭರ್ಜರಿ ಬ್ಯುಸಿ. ಕಾಲಚಕ್ರ, ತಲ್ವಾರ್ ಪೇಟೆ, ಗ್ಯಾಂಗ್ ಸ್ಟರ್, ‘ಪಂಥ’ ಸೇರಿದಂತೆ ಸಾಲು ಸಾಲು ಚಿತ್ರಗಳಿಗೆ ನಾಯಕ‌ನಟ‌. ಇದರ ಜತೆಗೆ ಸಾಕಷ್ಟು ಸಿನಿಮಾ‌ಗಳಿಗೂ ವಿಲನ್ ಆಗಿ ಅಭಿನಯಿಸಿದ್ದಾರೆ‌. ಮತ್ತೊಂದೆಡೆ ಹೀರೋ ಆಗಿ ಟಾಲಿವುಡ್ ಗೂ ಎಂಟ್ರಿ ಆಗಿದ್ದಾರೆ. ಒಂದಲ್ಲ ಅಲ್ಲಿ‌ಅವರೀಗ ಎರಡು ಚಿತ್ರಕ್ಕೆ ನಾಯಕ. ‘ಓದೆಲ್ಲಾ ರೈಲ್ವೆ ಸ್ಟೇಷನ್ ‘ಜತೆಗೆ ಕನ್ನಡದ‌ ‘ಗ್ಯಾಸ್ ಸ್ಟರ್’ ಕೂಡ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ.ಹಾಗೆಯೇ ‘ ಕಾಲ ಚಕ್ರ ‘ ಮಲಯಾಳಂ ಗೂ‌ ಕಾಲಿಡುತ್ತಿದೆ.
ಈಗಷ್ಟೇ ಹೀರೋ‌ ಆಗಿ ಗುರುತಿಸಿಕೊಳ್ಳುತ್ತಿರುವ ವಸಿಷ್ಠ ಸಿಂಹ ಅವರಿಗೆ ಇದಕ್ಕಿಂತ ಇನ್ನೇನು ಬೇಕು? ಇವೆಲ್ಲ ಅವರ ವರ್ಷದ ಹುಟ್ಟು ಹಬ್ಬದ ಭರ್ಜರಿ ಗಿಫ್ಟ್.

 

ನಿಮ್ಮ‌ಹಾರೈಕೆ , ನೀವಿರುವಲ್ಲಿಂದಲೇ ಕೊಡಿ

ಪ್ರತಿ ವರ್ಷ ವಸಿಷ್ಠ ಅವರ ಹುಟ್ಟು ಹಬ್ಬ ಅಂದ್ರೆ ಅವರ ಮನೆ ಮುಂದೆ ಅಭಿಮಾನಿಗಳ ದಂಡು‌ ಸೇರುತ್ತಿತ್ತು. ತಮ್ಮ‌ನೆಚ್ಚಿನ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳಲು ದೂರದೂರುಗಳಿಂದ ಫ್ಯಾನ್ಸ್ ಬರುತ್ತಿದ್ದರು. ಆದರೆ ಈ ವರ್ಷ ಅದಕ್ಕೆ ಅವಕಾಶ ಇಲ್ಲ. ಯಾಕಂದ್ರೆ ಕೊರೋನಾ ಕಾರಣಕ್ಕೆ ಅವರು ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಳ್ಳುತ್ತಿಲ್ಲ.’ ಕೊರೊನಾದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಹುಟ್ಟುಹಬ್ಬ ಆಚರಣೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ನೀವೆಲ್ಲಿ ಇರುತ್ತಿರೋ, ಅಲ್ಲಿಂದಲೇ ತಮ್ಮ ಆಶೀರ್ವಾದ, ಪ್ರೀತಿ, ಹಾರೈಕೆಯನ್ನು ಕೊಡಿ. ನಾವೆಲ್ಲರೂ ಒಗ್ಗಟ್ಟಾಗಿ ಈ ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆದಷ್ಟು ಬೇಗ ನಮ್ಮ ಜನಜೀವನ ಮೊದಲಿನ ಸ್ಥಿತಿಗೆ ಬರಲಿ’ ಎಂದು ನಟ ವಸಿಷ್ಠ ಸಿಂಹ‌ ಅಭಿಮಾನಿಗಳಲ್ಲಿ‌ ಮನವಿ‌ಮಾಡಿದ್ದಾರೆ.

ಕಾಲ ಚಕ್ರದಲ್ಲಿ ವಸಿಷ್ಠ

ಹುಟ್ಟು ಹಬ್ಬಕ್ಕೆ ‘ಕಾಲಚಕ್ರ’ ದ ಸಂಭ್ರಮ ..

ಕನ್ನಡದಲ್ಲಿ ವಸಿಷ್ಠ ಸಿಂಹ‌ ನಾಯಕರಾಗಿ ಅಭಿನಯಿಸಿರುವ ಚಿತ್ರಗಳ ಪೈಕಿ ಈಗ ಕಾಲಚಕ್ರ ರಿಲೀಸ್ ಗೆ ರೆಡಿ ಆಗಿದೆ. ವಸಿಷ್ಠ ಅವರಿಗೆ ಇದೊಂದು‌ಸ್ಪೆಷಲ್ ಸಿನಿಮಾ. ಅದಕ್ಕೆ ಕಾರಣ ಅವರ ಪಾತ್ರ. ಸುಮಾರು ಎಂಟು ಗೆಟಪ್, ನಾಲಹಬ್ಬ
ವಿಭಿನ್ನ ಪಾತ್ರ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ‌. ಹಾಗೆಯೇ ಇದೊಂದು ವಿಭಿನ್ನ ಹಂದರದ ಚಿತ್ರ ಎನ್ನುವುದು ಅವರ ವಿಶ್ವಾಸದ ಮಾತು. ಈ ಮಧ್ಯೆ :ಕಾಲ ಚಕ್ರ’ ಮಲಯಾಳಂನಲ್ಲೂನಿರ್ಮಾಣವಾಗುತ್ತಿದೆ. ‘ಕಾಲಚಕ್ರ’ ಚಿತ್ರದ
ರಿಮೇಕ್ ಹಕ್ಕು ಮಲೆಯಾಳಂ ಭಾಷೆಗೆ ಮಾರಾಟವಾಗುತ್ತಿದೆ. ಅಲ್ಲಿನ ಹೆಸರಾಂತ ನಿರ್ಮಾಪಕರೊಬ್ಬರು ‘ಕಾಲಚಕ್ರ’ ಚಿತ್ರದ ಕಥೆ ಇಷ್ಟಪಟ್ಟು ಮಲೆಯಾಳಂ ನಲ್ಲಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ. ಇದೊಂದು ಸಂತಸದ ವಿಷಯ ಎನ್ನುತ್ತಿದೆ‌ ಚಿತ್ರ ತಂಡ.

ತೆಲುಗು ಚಿತ್ತ ಒದೆಲಾ ರೈಲ್ವೆ ಸ್ಟೇಷನ್ ಪೋಸ್ಟರ್

ಟಾಲಿವುಡ್ ಗೆ ಹಾರಿದ‌ ಚಿಟ್ಟೆ…
ವಸಿಷ್ಠ ಸಿಂಹ‌ ಈಗ ಟಾಲಿವುಡ್ ನಲ್ಲೂ ಹೀರೋ. ವಿಲನ್ ಆಗಿ ಈಗಾಗಲೇ ಅಲ್ಲೂ ತಮ್ನ ಖಡಕ್ ಲುಕ್ ತೋರಿಸಿದ ಅವರಿಗೀಗ ಹೀರೋ ಆಗಿ ಕಾಣಿಸಿಕೊಳ್ಳುವ ಬಂಪರ್ ಅವಕಾಶವೂ ಸಿಕ್ಕಿದೆ. ಅದರಲ್ಲೂ ಪ್ರತಿಷ್ಟಿತ ಬ್ಯಾನರ್ ಗಳ ಸಿನಿಮಾಗಳಿಗೇ ಅವರು ಹೀರೋ ಆಗಿದ್ದಾರೆ. ಕನ್ನಡದ ‘ ಗ್ಯಾಂಗ್ ಸ್ಟರ್ ‘ ನ ತೆಲುಗು ವರ್ಷನ್ ಸೇರಿದಂತೆ ಓದೆಲ್ಲಾ ರೈಲ್ವೆಸ್ಟೇಷನ್ ಹೆಸರಿನ ಮತ್ತೊಂದು ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಯೇ ಇನ್ನೆರೆಡು ಸಿನಿಮಾ‌ಮಾತುಕತೆ ಹಂತದಲ್ಲಿವೆಯಂತೆ. ಕನ್ನಡದ ಹಾಗೆಯೇ ಟಾಲಿವುಡ್ ನಲ್ಲೂ ಸಿಂಹ, ಹೀರೋ‌ಆಗಿ ಬ್ಯುಸಿ ಆಗುತ್ತಿರುವುದು ವಿಶೇಷ.

Categories
ಸಿನಿ ಸುದ್ದಿ

‘ಐ ಆ್ಯಮ್ ಕಲ್ಕಿ ‘ ಗೆ ಕತೆ ಬರೆದು ಮುಗಿಸಿದ ಚಂದ್ರಚೂಡ್!

ಜೋಗಿ ಪ್ರೇಮ್ ಬರ್ತ್ ಡೇ ಗೆ ಮೋಷನ್ ಪೋಸ್ಟರ್ ಗಿಫ್ಟ್ !

ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್, ಚಿತ್ರ ನಿರ್ದೇಶಕ ಕಮ್ ನಟರಾಗಿ ಮತ್ತೊಂದು ಅವತಾರ ತಾಳುವುದಕ್ಕೆ ರೆಡಿಯಾಗುತ್ತಿದ್ದಾರೆ. ಸದ್ಯಕ್ಕೆ‌‌ ಚಿತ್ರ ನಿರ್ದೇಶನದ‌ ಅವತಾರ
ನಿಮ್ಗೆಲ್ಲ ಗೊತ್ತೇ ಇದೆ.‌ ಅದು ‘ಕಲ್ಕಿ’ ಅವತಾ‌ರ ! ಉಳಿದಂತೆ ಇನ್ನೊಂದು ಅವತಾರಕ್ಕೂ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದೇನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಅವರ ಪ್ರಕಾರವೇ ಅದಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಉಳಿದಂತೆ, ನಿರ್ದೇಶಕ ಹಾಗೂ ನಟ ಜೋಗಿ ಪ್ರೇಮ್ ಜತೆಗೆ ಸಿನಿಮಾ ಮಾಡಲು ಹೊರಟಿರುವ ಅವರ ಪ್ರಯತ್ನವೀಗ ಒಂದು ಹಂತಕ್ಕೆ ತಲುಪಿದೆ. ಕತೆ, ಚಿತ್ರಕತೆ ಸೇರಿದಂತೆ ಚಿತ್ರದ‌ ಸ್ಕ್ರಿಫ್ಟ್ ವರ್ಕ್ ಬರೆದು ಮುಗಿಸಿದ್ದಾರೆ. ಅಕ್ಟೋಬರ್ 22 ಕ್ಕೆ ಈ ಚಿತ್ರದ ತಾಜಾ ಮಾಹಿತಿ ಯೊಂದನ್ನು ರಿವೀಲ್ ಮಾಡಲು ಅಣಿಯಾಗಿದ್ದಾರೆ. ಸದ್ಯಕ್ಕೆ‌ ಆ‌ ಕೆಲಸದಲ್ಲೇ ಬ್ಯುಸಿಯಾಗಿದ್ದಾರಂತೆ.


ಅಂದ ಹಾಗೆ, ಜೋಗಿ ಪ್ರೇಮ್ ಹಾಗೂ ಚಕ್ರವರ್ತಿಚಂದ್ರಚೂಡ್ ಕಾಂಬಿನೇಷನ್ ಮೂಲಕ‌ ಬರಲಿರುವ ಚಿತ್ರದ ಹೆಸರು ‘ಐ ಆ್ಯಮ್ ಕಲ್ಕಿ’. ತುಂಬಾ ದಿನಗಳ ಹಿಂದೆಯೇ ಚಂದ್ರಚೂಡ್ ತಮ್ಮ ಚಿತ್ರದ ಟೈಟಲ್ ಜತೆಗೆ, ಜೋಗಿ ಪ್ರೇಮ್ ಈ ಚಿತ್ರದ ಹೀರೋ‌ ಅಂತಲೂ ಅನೌನ್ಸ್ ‌ಮಾಡಿದ್ದರು. ಹಾಗೆಯೇ ಈ ಚಿತ್ರಕ್ಕೆ ‘ಆನೆ‌ಪಟಾಕಿ ‘ ಚಿತ್ರದ ಖ್ಯಾತಿಯ ನಿರ್ಮಾಪಕ‌ ಸುರೇಶ್ ಬಂಡವಾಳ ಹೂಡುತ್ತಿರುವ ವಿಷಯ ಕೂಡ ಹಂಚಿಕೊಂಡಿದ್ದರು. ಈ‌ಮಧ್ಯೆ ‌ಕೊರೋನಾ ಕಾಟ ಶುರುವಾಯಿತು. ಸಿನಿಮಾ‌ ಚಟುವಟಿಕೆಗಳಿಗೂ ಅಡ್ಡಿಯಾಯಿತು. ಅಲ್ಲಿಂದ ಇಲ್ಲಿ ತನಕ ತೆರೆ ಮರೆಯಲ್ಲೇ ತಾವು ನಿರ್ದೇಶಿಸುತ್ತಿರುವ ಚಿತ್ರದ ಕೆಲಸದಲ್ಲಿ ಹೇಗೆ ಬ್ಯುಸಿಯಾಗಿದ್ದರು,ಏನೆಲ್ಲ ತಯಾರಿ ಮಾಡಿಕೊಂಡರು ಎನ್ನುವುದರ ಕುರಿತು ‘ ಸಿನಿ‌ಲಹರಿ’ ಜತೆಗೆ ಮಾತನಾಡಿದರು.

ರಿಸರ್ಚ್ ಮಾಡಿ ಬರೆದ ಕತೆ…

‘ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಸೇರಿದಂತೆ ಚಿತ್ರದ ಎಲ್ಲಾ ಬರವಣಿಗೆ ಕೆಲಸ ಮುಗಿದಿದೆ. ಇವೆಲ್ಲವನ್ನು‌ ನಾನೇ ಮಾಡಿದ್ದೇನೆ. ಇದಕ್ಕೆಲ್ಲ ತುಂಬಾ ದಿನ‌ ಹಿಡಿದಿದೆ. ಏನೇ ಮಾಡಿದರೂ ನಾನು ಆಳವಾದ ಅಧ್ಯಯನ, ಪೂರ್ವ ತಯಾರಿ ಇಲ್ಲದೆ ಮಾಡುವುದಿಲ್ಲ. ಈ‌ ಚಿತ್ರದ ಕತೆಗೆ ದೊಡ್ಡ‌‌ ರಿಸರ್ಚ್ ನಡೆದಿದೆ. ಯಾಕಂದ್ರೆ ಈ ಕತೆಯೇ ಹಾಗಿದೆ. ತೆರೆ ಮೇಲೆ ನೋಡಿದಾಗ ನಮ್ಮ‌ ಶ್ರಮ‌ ಗೊತ್ತಾಗಲಿದೆ’ ಎನ್ನುತ್ತಾರೆ ನಿರ್ದೇಶಕ‌ ಚಂದ್ರಚೂಡ್. ಈಗಾಗಲೇ ಅವರೇ ಮಾಹಿತಿ ಕೊಟ್ಟ ಪ್ರಕಾರ ಇದು ಬಾಂಬರ್ ಆದಿತ್ಯ ರಾವ್ ಸುತ್ತಣ ಕತೆ. ಅವರಿಗೆ ಇಂತಹ ವಿವಾದಿತ ಮತ್ತು ನಿಗೂಢ ಕತೆಗಳ ಮೇಲೆ‌ ಹೆಚ್ಚು ಆಸಕ್ತಿ. ಅವರೇ ಕತೆ, ಚಿತ್ರ ಕತೆ ಬರೆದಿರುವ ‘ ಮೆಲ್ಲೊಬ್ಬ ಮಾಯಾವಿ ‘ ಚಿತ್ರದ ಕತೆ ಕೂಡ ಒಂದು ನಿಗೂಢ ಮಾಫಿಯಾಕ್ಕೆ‌ ಸಂಬಂಧಿಸಿದ್ದು.‌ ವಿಚಿತ್ರ ಅಂದ್ರೆ ಅದು ಕೂಡ ಮಂಗಳೂರು ಸುತ್ತ ಮುತ್ತ ನಡೆದ ನೈಜ ಘಟನೆ.‌ ಈಗ ಮತ್ತೆ ಅಂಥಹದೇ ಒಂದು ರೋಚಕ ಕತೆಯನ್ನು ‘ಐ ಆ್ಯಮ್ ಕಲ್ಕಿ‌’ಮೂಲಕ ತೋರಿಸಲು ಹೊರಟಿದ್ದಾರಂತೆ.

ಬಾಬಿ ಸಿಂಹ ಬರ್ತಾರೆ…

‘ ಹೌದು, ಇಂತಹ ಕತೆ ಸಿಗದೇ ಹೋಗಿದ್ದರೆ ನಾನು ಸಿನಿಮಾ‌ ಮಾಡುವುದೇ ಡೌಟಿತ್ತು. ಯಾಕಂದ್ರೆ, ಅಂತಹ ಘಟನೆಗಳು‌ ನಂಗೆ ಬೇಕು.‌ಆ‌ಅಲೋಚನೆಯಲ್ಲಿದ್ದಾಗ ನಂಗೆ‌ ಸಿಕ್ಕಿದ್ದು‌‌ ಬಾಂಬರ್ ಆದಿತ್ಯ ರಾವ್ ಪ್ರಕರಣ.‌ವ್ಯವಸ್ಥೆಯೊಳಗಡೆ ಈ ಪ್ರಕರಣ ಏನಾಯ್ತು, ಎಂಥಾಯ್ತು ಅನ್ನೋದು ಬೇರೆ ವಿಚಾರ. ಆದರೆ ಬಾಂಬರ್ ಆದಿತ್ಯ ರಾವ್ ಎನ್ನುವ ವ್ಯಕ್ತಿತ್ವವೇ ಒಂದು‌ ನಿಗೂಢತೆಯ ರೂಪ. ಯಾಕಂದ್ರೆ ಆ‌ಬಗ್ಗೆ ನಾನು ರಿಸರ್ಚ್ ಮಾಡಿದ್ದೇನೆ.‌ಅದಕ್ಕಾಗಿ ಹೇಳುತ್ತಿದ್ದೇನೆ. ಆ ಪಾತ್ರಕ್ಕೆ ಯಾರು? ಸದ್ಯಕ್ಕೆ‌ನಾನು‌ಈಗಲೇ ಏನನ್ನು ಹೇಳುವುದಿಲ್ಲ.‌ನನ್ನ‌ಕತೆಯ ಹೀರೋ ಜೋಗಿ ಪ್ರೇಮ್. ಉಳಿದಂತೆ‌‌ ಬಾಲಿವುಡ್ ನಟ ಬಾಬಿ‌ಸಿಂಹ‌ ಚಿತ್ರದ ಪ್ರಮುಖ‌ ವಿಲನ್. ಈಗಾಗಲೇ ಅವರೊಂದಿಗೆ ಒಂದು ಹಂತದ ಮಾತುಕತೆ ನಡೆದಿದೆ. ಫೈನಲ್ ಆಗಬೇಕಿದೆ. ಹಾಗೆಯೇ ನಾಯಕಿ ಸೇರಿದಂತೆ ಉಳಿದ‌ ಕಲಾವಿದರನ್ನು ಆಯ್ಕೆ‌ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಡುವುದಷ್ಟೇ ಬಾಕಿಯಿದೆ ಎನ್ನುತ್ತಾರೆ ಚಂದ್ರಚೂಡ್.

ಮೋಷನ್ ಪೋಸ್ಟರ್ ಲಾಂಚ್..
ಉಳಿದಂತೆ, ಇಲ್ಲಿ‌ ಕುತೂಹಲ ಇರೋದು ಅಕ್ಟೋಬರ್ 22. ಅವತ್ತು ಜೋಗಿ ಪ್ರೇಮ್ ಬರ್ತ್ ಡೇ. ಅವತ್ತು ಅವರಿಗೆ ಚಂದ್ರಚೂಡ್ , ಚಿತ್ರ ತಂಡದ ಕಡೆಯಿಂದ ಸ್ಪೆಷಲ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಅದೇ ‘ಐ ಆ್ಯಮ್ ಕಲ್ಕಿ‌’ ಚಿತ್ರದ ಮೋಷನ್ ಪೋಸ್ಟರ್. ಅದೆಲ್ಲ ಹೀಗಿರುತ್ತೆ, ಎಂತಿರುತ್ತೆ. ಮುಂದೇನು ಎನ್ನುವುದರ ಕುರಿತು ಅವತ್ತೇಮಾಧ್ಯಮದವರು ಜತೆಗೆ ಹಂಚಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ ಪತ್ರಕರ್ತ ಕಮ್ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್.

Categories
ಸಿನಿ ಸುದ್ದಿ

ಯಂಗ್ ವಿಲನ್, ನ್ಯೂ ವಿಷನ್ !

ಅರ್ಧಸೆಂಚುರಿಯತ್ತ ಯಶ್ ಶೆಟ್ಟಿ ,ಕೈಯಲ್ಲೀಗ ಸಾಲು ಸಾಲು ಸಿನಿಮಾ

Categories
ಸಿನಿ ಸುದ್ದಿ

ಗೋಧ್ರಾ ಈಗ ಗೋಧ್ರಾನ್ !

 ಮಂಡಳಿ ನೋಂದಣಿಗೆ ಮಾನ್ಯತೆ ಇಲ್ಲವೇ? ಸೆನ್ಸಾರ್ ಮಂಡಳಿ ಮಾತು ಕೇಳಿ ಕಕ್ಕಾಬಿಕ್ಕಿಯಾದ ಗೋಧ್ರಾ ಚಿತ್ರತಂಡ


ನಟ ನೀನಾಸಂ ಸತೀಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಗೋಧ್ರಾ’. ಟೈಟಲ್ ಜತೆಗೆ ಅದು ಒಂದು ವಿಭಿನ್ನ ಕಥಾ ಹಂದರದ ಕಾರಣಕ್ಕೆ ಸಾಕಷ್ಟು ಸದ್ದು ಮಾಡಿತ್ತು. ಹಾಗೆಯೇ ಅದರ ಪೋಸ್ಟರ್ ಗಳಂತೂ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.‌ಆದರೆ ಈಗ ಚಿತ್ರ ತಂಡವೇ ಒಂದು ಸುದ್ದಿ ಹೊರ ಹಾಕಿದೆ. ನಟ ನೀನಾಸಂ ಸತೀಶ್ ಅಭಿಮಾನಿಗಳ‌ ಪಾಲಿಗೆ ಇದು ನಿಜಕ್ಕೂ ಬೇಸರದ ಸುದ್ದಿ. ಯಾಕಂದ್ರೆ ಸಾಕಷ್ಟು ಸುದ್ದಿಯಾಗಿದ್ದ ‘ಗೋಧ್ರಾ ‘ ಟೈಟಲ್ ಬದಲಾಗಿದೆ. ಮುಂದೆ ಈ ಚಿತ್ರ ‘ಗೋಧ್ರಾನ್ ‘ ಹೆಸರಲ್ಲಿ ಚಿತ್ರೀಕರಣ ಮುಗಿಸಿ, ಬಿಡುಗಡೆ ಆಗಲಿದೆ.

ಟೈಟಲ್ ಬದಲಾವಣೆಗೆ ಅದೇ ಕಾರಣ….

ಚಿತ್ರದ ಸೆನ್ಸಾರ್ ಅಂತ ಇತ್ತೀಚೆಗೆ ಚಿತ್ರ ತಂಡ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಿದೆ. ಅಂತೆಯೇ ಸೆನ್ದಾರ್ ಮಂಡಳಿಯ ಸದಸ್ಯರು, ಚಿತ್ರ ವೀಕ್ಷಿಸಿದ ನಂತರ‌ ಚಿತ್ರದ  ಶೀರ್ಷಿಕೆ ಬದಲಾಯಿಸುವಂತೆ ಸೂಚಿಸಿದ್ದಾರೆ. ಅವರ ಪ್ರಕಾರ ಚಿತ್ರದಲ್ಲಿನ ಕೆಲವು ವಿಷಯವೇ ಅದಕ್ಕೆ ಕಾರಣ.
ಚಿತ್ರದ ನಿಲುವು, ಕಥಾವಸ್ತು ಮತ್ತು ನೇರವಂತಿಕೆಯ ಕೆಲವು ವಿಷಯಗಳ ಕುರಿತಾದ ಆಕ್ಷೇಪಣೆ ಅವರದು.
ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆ ಬಂತು‌ಎನ್ನುವುದು ಚಿತ್ರ ತಂಡದ ಮಾತು.
‘ಕೆಲವೊಮ್ಮೆ‌ನೇರ- ನಿಷ್ಟುರ ಮಾತುಗಳು ಕಹಿಯಾಗಿರುತ್ತವೆ. ನಮ್ಮ ಸಿನಿಮಾ ವಿಚಾರದಲ್ಲೂ ಹಾಗೆ ಆಗಿದೆ. ಗೋಧ್ರಾ ಘಟನೆಗೂ, ನಮ್ಮ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ .ಆದರೆ ಸೆನ್ಸಾರ್ ಮಂಡಳಿ‌ ಸದಸ್ಯರು‌ಮತ್ತು ಅಧಿಕಾರಿಗಳಿಗೆ ಅದೇ ಅನುಮಾನ.‌ಅದು ಹಾಗಲ್ಲ ಅಂತ ನಾವು ಮನವಿ‌ ಮಾಡಿದೆವು. ವಸ್ತು ಸ್ಥಿತಿ ಏನು ಅಂತ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆವು.ಆದರೆ ಅವರು ನಮ್ಮ‌ಮನವಿ ಪುರಸ್ಕರಿಸಲಿಲ್ಲ’ ಎನ್ನುವ ಬೇಸರ , ಸಿಟ್ಟು‌ ಚಿತ್ರ ತಂಡದ್ದು.

ನಮಗೊಂದು ಅನುಮಾನ ಇದೆ…

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯಲ್ಲಿ ನಾವು ಚಿತ್ರದ ಟೈಟಲ್ ನೋಂದಣಿ ಮಾಡಿಸಿದ್ದೇವೆ. ಗೋಧ್ರಾ ಹೆಸರಲ್ಲೇ ಅದು ನೋಂದಣಿ ಆಗಿದೆ. ವಾಣಿಜ್ಯ ಮಂಡಳಿ ಕೂಡ ಅದಕ್ಕೆ ಅನುಮತಿ‌ ನೀಡಿದೆ. ಅನುಮೋದಿ ತ ಮತ್ತು ನೋಂದಾಯಿಸಿದ ಈ  ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸೆನ್ಸಾರ್ ಮಂಡಳಿ ( ಸಿಬಿಎಫ್‌ಸಿ) ಹೇಳುವುದು ಮಂಡಳಿ ಹೇಳುವುದು ಎಷ್ಟು ಸರಿ? ಅಷ್ಟೇ ಅಲ್ಲ ವಾಣಿಜ್ಯ ಮಂಡಳಿಯಲ್ಲಿ ನೊಂದಣಿ ಗೊಂಡ ಟೈಟಲ್ ಗೆ ಯಾವುದೇ ಸಿಂಧುತ್ವ ಇಲ್ಲ ಅಂತ ಸೆನ್ಸಾರ್‌ಹೇಳಿತು.  ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡಲು ಅಂತಹ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ ಸಿ ಒಪ್ಪಬೇಕಿಲ್ಲ ಎಂದು ಮಂಡಳಿಯು ಹೇಳಿದಾಗ ಅಚ್ಚರಿ ಮತ್ತು ಅಘಾತವಾಯಿತು. ಹಾಗಾದ್ರೆ ಇದರ ಸತ್ಯಾಸತ್ಯತೆ ಏನು? ವಾಣಿಜ್ಯ ಮಂಡಳಿ ಉತ್ತರಿಸಬೇಕಿದೆ ಎನ್ನುವುದು ಚಿತ್ರ ತಂಡದ ಮನವಿ.

ಹಣ  ಹಾಕಿದವರ ಗತಿಯೇನು?

ಸಿನಿಮಾದ ಹೆಸರು ಬದಲಾಯಿಸುವುದಾಗಿ ನಾವು ಸೆನ್ಸಾರ್ ಮಂಡಳಿಗೆ ಭರವಸೆ ನೀಡಿದ್ದೇವೆ. ಆದರೆ ಈ ಹೆಸರು ಬದಲಾಯಿಸುವ ಮೂಲಕ ನಾವು ಈಗ ಅನುಭವಿಸ‌‌ಬೇ ಕಾದ ಎಲ್ಲಾ ನಷ್ಟಗಳನ್ನು ಯಾರು ಸರಿದೂಗಿಸಲಿದ್ದಾರೆ? ಕಳೆದ ಎರಡು ವರ್ಷಗಳಲ್ಲಿ ನಾವು ಕೈಗೊಂಡ ಎಲ್ಲ ಪ್ರಚಾರದ ಗತಿಯೇನು? ವಾಣಿಜ್ಯ ಮಂಡಳಿಯೇ ನಮಗೆ ಧೈರ್ಯ ತುಂಬಬೇಕಿದೆ. ಆಗಿರುವ ಈ ಗೊಂದಲ ತಿಳಿಗೊಳಿಸಬೇಕಿದೆ. ಜವಾಬ್ದಾರಿಯುತ ಚಲನಚಿತ್ರ ನಿರ್ಮಾಪಕರಾಗಿ, ನಾವು ಉತ್ತರಗಳನ್ನು ಕೋರುತ್ತೇವೆ. ನಿರ್ಮಾಪಕರು ಮತ್ತು ನಿರ್ದೇಶಕರು ಹಾಗೂ ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಕೆಎಫ್‌ಸಿಸಿಯು ಒಳಗೊಳ್ಳುವುದರಿಂದ,ನೀವು ಕೊಟ್ಟ ಶೀರ್ಷಿಕೆಗಳನ್ನೇ ನಂಬಿಕೊಂಡು ಶ್ರಮ ಪಡುವುದರಿಂದ, ಕೊನೆಗೆ ನೀವುಕೊಡುವ ಶೀರ್ಷಿಕೆಗೆ ಯಾವುದೇ ಬೆಲೆ ಇಲ್ಲ ಅಂದಾಗ ನಾವು ಯಾರನ್ನು ನಂಬಬೇಕು?

ಚಿತ್ರದಲ್ಲಿ ಇವರೆಲ್ಲ ಇದ್ದಾರೆ..

ಸತೀಶ್ ನಾಯಕರಾದರೆ, ಶ್ರದ್ಧಾ ಶ್ರೀನಾಥ್ ನಾಯಕಿ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷ ಸೋಮಶೇಖರ್ ಮತ್ತು ಸೋನು ಗೌಡ ಮುಂತಾದವರ ತಾರಾ ಬಳಗವಿದೆ. ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಕೆ.ಪಿ. ಇನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕೆ.ಎಸ್.ನಂದೀಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಕೂಡ ನಡೆಸಲಾಗಿದೆ.

Categories
ಸಿನಿ ಸುದ್ದಿ

ಪುಷ್ಕರ್ ಮುಂದಿನ ಸಿನಿಮಾ ರಾಬಿನ್ ಹುಡ್ ಗೆ ಹೀರೋ‌ ಯಾರು?

 ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಆ ರಾಜಕಾರಣಿಯ ಪುತ್ರನ ಹೆಸರು. ಯಾರು ಆತ ? ಆತನ ಸಿನಿಮಾ ಹಿನ್ನೆಲೆ ಏನು?  ಸ್ಟೋರಿ ನೋಡಿ

ಪುಷ್ಕರ್ ಸದ್ದಿಲ್ಲದೆ ಹೊಸ ಸಿನಿಮಾ ‌ಅನೌನ್ಸ್ ಮಾಡಿದ್ದಾರೆ. ‘ಅವತಾರ ಪುರುಷ’ ಚಿತ್ರದ ಬೆನ್ನಲೇ  ನಿರ್ದೇಶಕ ಸಿಂಪಲ್ ಸುನಿ‌ ಜತೆಯಾಗಿ  ರಾಬಿನ್ ಹುಡ್ ಹೆಸರಲ್ಲಿ ಮತ್ತೊಂದು ಚಿತ್ರ ಮಾಡುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಆ ಚಿತ್ರದ ಟೈಟಲ್ ಕೂಡ ಲಾಂಚ್ ಆಗಿದೆ. ಆದರೆ ಆ ಚಿತ್ರದ ನಾಯಕ ಯಾರು ಎನ್ನುವುದೀಗ ಭಾರೀ ಕುತೂಹಲ ಕೆರಳಿಸಿದೆ.

ಹಾಗಂತ ಪುಷ್ಕರ್ ಅವರಾಗಲಿ, ನಿರ್ದೇಶಕ ಸಿಂಪಲ್ ಸುನಿ ಅವರಾಗಲಿ ಈ‌ ಬಗ್ಗೆ ಎಲ್ಲೂ ಮಾತನಾಡಿಲ್ಲ. ಕಲಾವಿದರ ಬಗ್ಗೆಯೂ ಸುಳಿವು ಕೊಟ್ಟಿಲ್ಲ.ಆದರೆ  ಸೋಷಲ್ ಮೀಡಿಯಾದಲ್ಲಿ‌ ಮಾತ್ರ ಒಬ್ಬ ರಾಜಕಾರಣಿಯ ಪುತ್ರನ ಹೆಸರು ವೈರಲ್ ಆಗಿದೆ. ಆತನೇ  ‘ರಾಬಿನ್ ಹುಡ್’ ಚಿತ್ರದ ನಾಯಕ ಅಂತಲೂ ಹೇಳಲಾಗುತ್ತಿದೆ. ಇಷ್ಟಕ್ಕೂ ಆತನ‌ಹೆಸರು ದುಶ್ಯಂತ್ ಶ್ರೀನಿವಾಸ್.


ಸೋಷಲ್ ಮೀಡಿಯಾದಲ್ಲಿ ಈ ಹೆಸರು ಚಾಲ್ತಿಯಲ್ಲಿದೆ. ಹಾಗಂತ ಚಿತ್ರ ತಂಡದಿಂದ  ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಆದರೆ ರಾಬಿನ್ ಹುಡ್ ಪೋಸ್ಟರ್ ಲಾಂಚ್ ಆದ ದಿನದಿಂದಲೇ ತುಮಕೂರು ಜಿಲ್ಲೆಯ ಜನ ಅದನ್ನು ಸೋಷಲ್ ಮೀಡಿಯಾದಲ್ಲಿ‌ ವೈರಲ್ ಮಾಡಿದ್ದಾರೆ. ಯುವ ರಾಜಕಾರಣಿಯೂ ಆಗಿರುವ ದುಶ್ಯಂತ್ ಶ್ರೀನಿವಾಸ್ ಅಧಿಕೃತ ಫೇಸ್ ಬುಕ್ ಪೇಜ್ ಗೆ ಅಭಿಮಾನಿಗಳು ಪೋಸ್ಟರ್ ಟ್ಯಾಗ್ ಮಾಡಿ, ಶುಭಾಶಯ ಕೋರಿದ್ದಾರೆ. ಇದೆಲ್ಲ ಹೇಗೆ ಸಾಧ್ಯ? ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವೇ? ಉತ್ತರ ಚಿತ್ರ ತಂಡದ ಬಳಿಯಿದೆ.

ದುಶ್ಯಂತ್ ಶ್ರೀನಿವಾಸ್, ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಪುತ್ರ. ಯುವ ಉತ್ಸಾಹಿ. ಶಿಕ್ಷಣದ ಜತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ‌. ತಂದೆಯ ಹಾಗೆ ಸಾರ್ವಜನಿಕ ಕಾರ್ಯಕ್ರಮ ಗಳಲ್ಲಿ ಕಾಣಿಸಿಕೊಂಡ ದೊಡ್ಡ ಯುವ ಪಡೆಯ ಬೆಂಬಲ ಪಡೆದಿದ್ದಾರೆ. ಅವರ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿರುವ ದುಶ್ಯಂತ್ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರಿಂದಲೇ ಸೋಷಲ್ ಮೀಡಿಯಾದಲ್ಲಿ ದುಶ್ಯಂತ್ ಶ್ರೀನಿವಾಸ್ ರಾಬಿನ್ ಹುಡ್ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿರುವ ಸುದ್ದಿ ಹಬ್ಬಿದೆ.

ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆಯೋ, ಸಿಂಪಲ್ ಸುನಿ ಅವರಿಗೆ ಗೋತ್ತು.  ಹಾಗಂತ ಇದನ್ನು ಅಲ್ಲಗಳೆಯುವುದಕ್ಕೂ ಸಾಧ್ಯವಿಲ್ಲ.ಪುಷ್ಕರ್ ಅವರ ಊರು ತುಮಕೂರು. ‌ಸಹಜವಾಗಿಯೇ ಶಾಸಕ ಶ್ರೀನಿವಾಸ್ ಅವ್ ಸಂಪರ್ಕ‌ಇದ್ದೇ ಇರುತ್ತದೆ. ಅವರು ತಮ್ಮ‌ಮಗನನ್ನು ಹೀರೋ‌ಮಾಡು ಅಂತಲೂ ಶ್ರೀನಿವಾಸ್, ಪುಷ್ಕರ್ ಅವರಿಗೆ ಹೇಳಿರಬಹುದು. ಇಂತಹ ಸಾಧ್ಯತೆಗಳು ಈ ಸುದ್ದಿಯ ಸುತ್ತ ಇವೆ‌.


ಒಂದಂತೂ ಸತ್ಯ, ದುಶ್ಯಂತ್ ಶ್ರೀನಿವಾಸ್ ಅವರಿಗೆ ಸಿನಿಮಾದ ದೊಡ್ಡ ಕ್ರೇಜ್ ಇದೆ‌. ನಟ ನಿಖಿಲ್ ಕುಮಾರ ಸ್ವಾಮಿ‌ ಅವರ ಸ್ನೇಹಿತ ಕೂಡ. ಅನೇಕ ಸಿನಿಮಾ‌ ಕಾರ್ಯಕ್ರಮ ಗಳಲ್ಲೂ ಕಾಣಿಸಿಕೊಂಡಿದ್ದಾರೆ.ಡಾ. ರಾಜ್ ಕುಮಾರ್ ಅವರ ಪಕ್ಕಾ ಅಭಿಮಾನಿಯಂತೆ. ಹಾಗೆಯೇ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಜತೆಗೆ ಪೋಟೋಕ್ಕೆ ಪೋಸು ನೀಡಿದ್ದಾರೆ. ಇದರ ಪ್ರಭಾವ ಸಹಜವಾಗಿಯೇ ಸಿನಿಮಾರಂಗದ ಕಡೆ ಬರುವಂತೆಯೂ ಪ್ರೇರೆಪಿಸಿ ರಬಹಹುದು.‌ ಆದರೂ ಅಧಿಕೃತವಾಗಿಲ್ಲ.

ಉಳಿದಂತೆ ದುಶ್ಯಂತ್ ಅವರೇ ರಾಬಿನ್ ಹುಡ್ ಚಿತ್ರದ ನಾಯಕರಾದರೆ, ಹೊಸ ಪ್ರತಿಭೆಯಾಗಿ ಆ ಟೈಟಲ್ ಗೆ‌ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಬಹುದು ಎನ್ನುವುದು ಸಹಜವಾದ ಕುತೂಹಲ.

Categories
ಸಿನಿ ಸುದ್ದಿ

ಪದವಿಪೂರ್ವ‌ ಸೇರಿದ ಯಶಾ ಶಿವಕುಮಾರ್

ಚಂದನವನಕ್ಕೆ ಎಂಟ್ರಿಯಾದ ಕರಾವಳಿಯ ಮತ್ತೊಬ್ಬಳು ಚೆಲುವೆ

ಈಗಾಗಲೇ “ಪದವಿಪೂರ್ವ” ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಆ ಸಾಲಿಗೆ ಮತ್ತೊಂದು ಸುದ್ದಿಯೂ ಹೊರಬಿದ್ದಿದೆ.
ಹೌದು, ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರಕ್ಕೆ ಮತ್ತೊಬ್ಬ ಹೊಸ ನಾಯಕಿ ಎಂಟ್ರಿಯಾಗಿದ್ದಾಳೆ. ಯಶಾ ಶಿವಕುಮಾರ್ ಈಗಷ್ಟೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಾಯಕಿ.
ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಆಳ್ವಾಸ್ ಕಾಲೇಜ್’ನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಇವರು. 2019ರಲ್ಲಿ ‘ಫ್ಯಾಶನ್ ಎಬಿಸಿಡಿ’ ಸಂಸ್ಥೆ ಆಯೋಜಿಸಿದ್ದ “ಮಿಸ್ ಬೆಂಗಳೂರು 2019 ” “ಮಿಸ್ ಕರ್ನಾಟಕ ಇಂಟರ್ನ್ಯಾಷನಲ್ 2019” ಹಾಗೂ ಮುಂಬೈನಲ್ಲಿ ನಡೆದ “ಮಿಸ್ ಗ್ಲೋರಿ ಆಫ್ ಗ್ಯಾಲಕ್ಸಿ 2019” ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಮೂಲಕ ಅನೇಕ ಫ್ಯಾಶನ್ ಕಿರೀಟಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ ಯಶಾ ಶಿವಕುಮಾರ್.
ಈಕೆ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆಯಾಗಿದ್ದು, ಫ್ರೀ ಸ್ಟೈಲ್, ಬಾಲಿವುಡ್, ಮಣಿಪುರಿ ಮತ್ತು ಜಾನಪದದಂತಹ ಇತರ ನೃತ್ಯ ಪ್ರಕಾರಗಳನ್ನೂ ಚೆನ್ನಾಗಿ ಅರಿತಿದ್ದಾಳೆ.
ಒಂದು ವರ್ಷ ಮಾಡೆಲಿಂಗ್ ಕ್ಷೇತ್ರದ ಅನುಭವವೂ ಇದೆ. ಆ ಅನುಭವ ಸಿನಿಮಾ ರಂಗಕ್ಕೆ ಬರಲು‌ ಕಾರಣವಾಗಿದೆ. ಚಿತ್ರರಂಗದಲ್ಲಿ ಗಟ್ಟಿನೆಲೆ ಕಾಣುವ ವಿಶ್ವಾಸ ಅವರಿಗಿದೆ.
ಚಿತ್ರಕ್ಕೆ ‘ಪೃಥ್ವಿ ಶಾಮನೂರ್ ನಾಯಕ, ‘ಅಂಜಲಿ ಅನೀಶ್ ನಾಯಕಿ. ಇವರಿಬ್ಬರಿಗೂ ಇದು ಚೊಚ್ಚಲ ಸಿನಿಮಾ.
ಅರ್ಜುನ್ ಜನ್ಯ ಸಂಗೀತವಿದೆ. ಸಂತೋಷ್ ರೈ ಪರಾಜೆ ಛಾಯಾಗ್ರಹಣವಿದೆ.
error: Content is protected !!