ಡಿಸೆಂಬರ್ 18 ಕ್ಕೆ ನಾನೊಂಥರ

ನಾನೊಂಥರ ಅಂದ್ರೆ ನಾಯಕನೇ ಒಂಥರ!

ಕನ್ನಡ  ಚಿತ್ರರಂಗ ಮತ್ತೆ ಟ್ರ್ಯಾಕ್ ಗೆ ಮರಳುತ್ತಿದೆ. ಮುಹೂರ್ತ, ಚಿತ್ರೀಕರಣ, ಟೀಸರ್ ಲಾಂಚ್ ನಂತಹ ಸಿನಿಮಾ ಚಟುವಟಿಕೆಗಳ ನಡುವೆಯೇ ಈಗ ಚಿತ್ರಗಳ ಬಿಡುಗಡೆಗೂ ಚಾಲನೆ‌ ಸಿಕ್ಕಿದೆ. ಈಗಾಗಲೇ ಬಿಡುಗಡೆಗೊಂಡ ಚಿತ್ರಗಳಿಗೆ ಸಿಕ್ಕಅಭೂತ ಪೂರ್ವ ಬೆಂಬಲದ ಬೆನ್ನಲೇ ಈ ವಾರದಿಂದ ಮತ್ತಷ್ಟು ಚಿತ್ರಗಳು ತೆರೆಗೆ ಬರಲು ರೆಡಿ ಆಗಿವೆ. ಈ ಪೈಕಿ ‘ನಾನೊಂಥರ’ ಚಿತ್ರವೂ ಒಂದು.

ಇದೊಂದು  ಹೊಸಬರ ಚಿತ್ರ. ಜೆಜೆ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ವೃತ್ತಿಯಲ್ಲಿ ವೈದ್ಯೆಯಾಗಿ ಅಪಾರ ಜನ ಮನ್ನಣೆ ಪಡೆದಿರುವ ಡಾ. ಜಾಕ್ಲಿನ್ ಫ್ರಾನ್ಸಿಸ್  ಇದರ ನಿರ್ಮಾಪಕರು. ಇವರ ಪುತ್ರ ತಾರಕ್ಇದರ ನಾಯಕ‌ ನಟ. ಇದು ಅವರ ಚೊಚ್ಚಲ ಚಿತ್ರ.ಹಾಗೆಯೇ ನವ ಪ್ರತಿಭೆ ಯು. ರಮೇಶ್ ಇದರ ನಿರ್ದೇಶಕ. ಒಟ್ಟಾರೆ ಒಂದು ಹೊಸ ತಂಡವು, ತುಂಬಾ ಕನಸು ಹೊತ್ತು, ಈ ಚಿತ್ರ ನಿರ್ಮಾಣ ಮಾಡಿದೆ. ಎಲ್ಲವೂ ಅಂದುಕೊಂಡಂ ತಾಗಿದ್ದರೆ ಈ ಚಿತ್ರ ಲಾಕ್ ಡೌನ್ ಮುಂಚೆಯೇ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಬಂತು. ಸಿನಿಮಾ ಟಾಕೀಸ್ ಬಂದ್ ಆದವು.ಹಾಗಾಗಿ ‘ನಾನೊಂಥರ’ ಚಿತ್ರ ತಂಡವು ಸುಮ್ಮನಾಗಿತ್ತು. ಈಗ  ಚಿತ್ರ ರಿಲೀಸ್ ಗೆ ಮತ್ತೆ ಚಾಲನೆ ಸಿಕ್ಕ ಬೆನ್ನಲೇ ನಾನೊಂಥರ ಕೂಡ ಚಿತ್ರಮಂದಿರಕ್ಕೆ ಬರುತ್ತಿದೆ.

ಚಿತ್ರ ತಂಡವೀಗ ರಿಲೀಸ್ ಗೆ ಸಿದ್ದತೆ ನಡೆಸಿರುವ ಬೆನ್ನಲೇ ಶುಕ್ರವಾರ( ಡಿಸೆಂಬರ್‌ 4) ದಂದು ಚಿತ್ರದ ಟ್ರೇಲರ್ ಲಾಂಚ್ ಮಾಡುವ ಮೂಲಕ ಚಿತ್ರದ ವಿಶೇಷತೆ ಕುರಿತು ಮಾತನಾಡಿತು‌. ಹೊಸಬರ ಚಿತ್ರವಾದರೂ ಟ್ರೇಲರ್ ಭರವಸೆ ಮೂಡಿಸುತ್ತದೆ. ಮೇಕಿಂಗ್ ಅದ್ಬುತವಾಗಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಎನ್ನುವುದಕ್ಕೆಟ್ರೇಲರ್ ಸಾಕ್ಷಿಯಾಗಿದೆ. ಆ ಕುರಿತೇ ಮಾತು ಆರಂಭಿಸಿದರು ನಿರ್ಮಾಪಕಿ ಡಾ. ಜಾಕ್ಲಿನ್ ಫ್ರಾನ್ಸಿಸ್.

ಟ್ರೇಲರ್ ಚೆನ್ನಾಗಿದೆ ಎನ್ನುವ ನಂಬಿಕೆಯಿದೆ. ಹಾಗೆಯೇ ಸಿನಿಮಾ ಅದ್ಬುತ ವಾಗಿ ಮೂಡಿ ಬಂದಿದೆ. ಅದೊಂದೆ ಕಾನ್ಪಿಡೆನ್ಸ್ ಮೇಲೆ ಚಿತ್ರ ಮಂದಿರಕ್ಕೆ ಬರುತ್ತಿದ್ದೇವೆ ಎಂದರು. ಚಿತ್ರದ ನಾಯಕ‌ನಟ ತಾರಕ್ , ನಿರ್ದೇಶಕ ಯು. ರಮೇಶ್ ಕೂಡ ಅದೇ  ವಿಶ್ವಾಸ ವ್ಯಕ್ತಪಡಿಸಿದರು. ನಾಯಕಿ ರಕ್ಷಿಕಾ , ಯುವ ನಟ ಜೈಸನ್, ಖಳ ನಟ ಪ್ರಶಾಂತ್ ರೈ ಮಾತನಾಡಿ, ಚಿತ್ರ ಚೆನ್ನಾಗಿ ಬಂದಿದೆ ಎಂದರು. ವಿಜಯ್ ಫಿಲಂಸ್ ಮೂಲಕ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸದ್ಯಕ್ಕೆ ಎಷ್ಟು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ ಎನ್ನುವುದು ಕನ್ ಫರ್ಮ್ ಆಗಿಲ್ಲ. ಆದರೆ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಭೂಮಿಕಾ ಚಿತ್ರ ಮಂದಿರವನ್ನು ಪ್ರಧಾನವಾಗಿ ಟ್ಟುಕೊಂಡಯ ರಾಜ್ಯಾದ್ಯಂತ 80 ರಿಂದ 100  ಚಿತ್ರ ಮಂದಿರಗಳಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಇದೆ ಅಂದ್ರು ವಿತರಕ ವಿಜಯ್.

Related Posts

error: Content is protected !!