Categories
ಸಿನಿ ಸುದ್ದಿ

ಅಲ್ಲು-ಇಲ್ಲು ನಿಂದೆ ಗುಲ್ಲು- ಮತ್ತೆ ಬಂದೆ ಗಲ್ಲು ಗಲ್ಲು ! ಪವರ್ ಜೊತೆ ತ್ರಿಷಾ ರೋಮಿಂಗ್ !!

ನನ್ನ ದಿಲ್ಲು ಕಾಲಿಂಗ್ ಬೆಲ್ಲು..ಮತ್ತೆ ಬಂದೆ ಗಲ್ಲು ಗಲ್ಲು..ಅಲ್ಲು-ಇಲ್ಲು ನಿಂದೆ ಗುಲ್ಲು..ಲವ್ವೇ ಥ್ರಿಲ್ಲು ಹೀಗಂತ ಹಾಡಿಕೊಂಡು ಪವರ್‌ಸ್ಟಾರ್ ಜೊತೆ ಜಿರೋ ಸೈಜ್ ಸೊಂಟ ಕುಣಿಸಿದ್ದ ನಟಿ ತ್ರಿಷಾ ಕೃಷ್ಣನ್ ಮತ್ತೆ ಅಣ್ಣಬಾಂಡ್ ಜೊತೆ ಹೆಜ್ಜೆಹಾಕೋದಕ್ಕೆ ಸೈ ಎಂದಿದ್ದಾರೆ. ಸೌತ್ ಸುಂದರಿ ತ್ರಿಷಾ ಕೃಷ್ಣನ್ ಅಪ್ಪುಗೆ ಜೊತೆಯಾಗಲಿದ್ದಾರೆ,ದ್ವಿತ್ವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆ ಸಿನಿಲಹರಿ ಜೊತೆ ಮಾತನಾಡಿದ್ದ ನಿರ್ದೇಶಕ ಪವನ್‌ಕುಮಾರ್ ತ್ರಿಷಾ ಜೊತೆ ಮಾತುಕತೆ ನಡೆದಿರುವುದು ಸತ್ಯ ಎಂದಿದ್ದರು. ಗಿಲ್ಲಿ ಬೆಡಗಿ ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರದಲ್ಲೇ ಅಫಿಷಿಯಲ್ಲಾಗಿ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೇ, ಭಾನುವಾರ ಸಂಜೆ ಅಷ್ಟರಲ್ಲಿ ಹೊಂಬಾಳೆ ಸಂಸ್ಥೆ `ದ್ವಿತ್ವ’ ಚಿತ್ರಕ್ಕೆ ತ್ರಿಷಾಕೃಷ್ಣನ್ ಲೀಡಿಂಗ್ ಲೇಡಿ ಎಂದು ಸಪ್ರೈಸ್ ಕೊಟ್ಟರು. ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಥ್ರಿಲ್ಲಾದರು. ಪವರ್ ಜೋಡಿನಾ ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಕೊಟ್ಟಿದ್ದಕ್ಕೆ ಹೊಂಬಾಳೆ ಬ್ಯಾನರ್‌ಗೆ ಉಘೇ ಉಘೇ ಎಂದರು.

ಪವರ್ ಚಿತ್ರದಲ್ಲಿ ಅಪ್ಪು-ತ್ರಿಷಾ ಕೆಮಿಸ್ಟ್ರಿ ಕ್ಯಾರೆಟ್ ಅಲ್ವಾದಷ್ಟೇ ಕಿಕ್ ಕೊಟ್ಟಿತ್ತು. ಇದೀಗ ಅದೇ ಕಿಕ್ ಮತ್ತೊಮ್ಮೆ ದ್ವಿತ್ವ ಚಿತ್ರದಿಂದ ಸಿಗುತ್ತೆ ಎನ್ನುವ ಕಾತುರತೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಷಾಕೃಷ್ಣನ್ ಪವರ್ ಪಕ್ಕದಲ್ಲಿ ನಿಲ್ಲೋದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯನ್ನು ಮತ್ತೊಮ್ಮೆ ಚಂದನವನಕ್ಕೆ ಕರೆತರುತ್ತಿರುವ ಹೊಂಬಾಳೆ ಸಂಸ್ಥೆ, ಗಾಂಧಿನಗರ ಮಾತ್ರವಲ್ಲ ಸೌತ್ ಸಿನಿಮಾ ಇಂಡಸ್ಟಿçಯೂ ತಿರುಗಿ ನೋಡುವಂತೆ ಮಾಡಿದ್ದಾರೆ.

ದ್ವಿತ್ವ ಟೈಟಲ್‌ನಿಂದಲೇ ಬಜಾರ್‌ನಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿರುವ ಚಿತ್ರ. ಪವನ್ ಹಾಗೂ ಪುನೀತ್ ಕಾಂಬಿನೇಷನ್‌ನಲ್ಲಿ ಮೊದಲ ಚಿತ್ರ ಎನ್ನುವ ಕಾರಣಕ್ಕೂ ದ್ವಿತ್ವ' ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಟೈಟಲ್ ಅನೌನ್ಸ್ ಮೆಂಟ್ ಹಾಗೂ ಚಿತ್ರದ ನಾಯಕ-ನಾಯಕಿಯ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಫಿಲ್ಮ್ ಟೀಮ್ ಅದ್ದೂರಿಯಾಗಿ ಮುಹೂರ್ತ ಮಾಡಿ ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದೆ. ಸೆಪ್ಟೆಂಬರ್‌ನಿಂದದ್ವಿತ್ವ’ ತಂಡ ಚಿತ್ರೀಕರಣಕ್ಕೆ ಹೊರಡಲಿದೆ. ಪ್ರೀತಾ ಜಯರಾಮನ್ ಕ್ಯಾಮೆರಾ ಕೈಚಳಕ ಹಾಗೂ ತೇಜಸ್ವಿಯವರ ಸಂಗೀತ ಚಿತ್ರಕ್ಕಿದೆ.


ಸದ್ಯ ಅಪ್ಪು ಜೇಮ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಷಾ ಕೂಡ ನಾಲ್ಕೈದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ನಿರ್ದೇಶಕ ಪವನ್ ಕುಮಾರ್ `ದ್ವಿತ್ವ’ ಕಥೆ-ಚಿತ್ರಕಥೆ-ಸಂಗೀತ ಎಲ್ಲದರ ಮೇಲೆ ಮತ್ತೊಮ್ಮೆ ಕಣ್ಣುಹಾಯಿಸುತ್ತಿದ್ದಾರೆ. ದಿವ್ಯಮುಹೂರ್ತದಲ್ಲಿ ಮುಹೂರ್ತ ಮುಗಿಸಿ ಸಿನಿಮಾ ಸೆಟ್ಟೇರಿಸುವುದಕ್ಕೆ ಹೊಂಬಾಳೆ ಸಜ್ಜಾಗಿದೆ.

Categories
ಸಿನಿ ಸುದ್ದಿ

ಅಂದು ಹಾಡು ಬರೆದ್ರು ಇಂದು ಹೀರೋ ಆದ್ರು! ಜಿಂಕೆ ಮರಿನಾ ಖ್ಯಾತಿಯ ರಾಜ್‌ ಆನಂದರಾಂ ಹಿಂದಿನ ಅಟ್ಯಾಕ್‌ ರಹಸ್ಯ!!

“ಜಿಂಕೆ ಮರಿನಾ ನೀ ಜಿಂಕೆ ಮರಿನಾ…” ಕನ್ನಡದಲ್ಲಿ ಈ ಹಾಡನ್ನು ಬಹುತೇಕ ಮಂದಿ ಕೇಳಿದ್ದಾರೆ. ಈ ಹಾಡು “ಲೂಸ್‌ ಮಾದ” ಯೋಗಿ ಅಭಿನಯದ “ನಂದ ಲವ್ಸ್‌ ನಂದಿತ” ಚಿತ್ರದ್ದು. ಈ ಹಾಡನ್ನು ಬರೆದಿದ್ದು, ರಾಜ್ ಆನಂದರಾಂ. ಈ ಹಿಂದೆ ಇವರು “ಮೇಸ್ತ್ರಿ” ಸಿನಿಮಾ ನಿರ್ದೇಶಿಸಿದ್ದರು. ಅದಾದ ಬಳಿಕ ಮತ್ತೊಂದು ಸಿನಿಮಾಗೆ ನಿರ್ದೇಶಕರಾಗಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಜಯಕೃಷ್ಣ ಆಟ್ಯಾಕ್‌ ೧” ಎಂದು ಹೆಸರಿಟ್ಟಿದ್ದಾರೆ. ಇದೊಂದು ಪಕ್ಕಾ ಆಕ್ಷನ್-ಥ್ರಿಲ್ಲರ್‌ ಕಥೆ ಹೊಂದಿದೆ. ಚಿತ್ರ ಬಿಡುಗಡೆಗೆ ರೆಡೆಯಾಗಿದೆ. ಈ ಹಿಂದೆ ನಿರ್ದೇಶಕರಾದ ಮುರಳಿ ಮೋಹನ್, ಎಚ್.ವಾಸು ಅವರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ ರಾಜ್ ಆನಂದರಾಂ, ಈಗ ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ.


ಬೆಂಗಳೂರು, ನೆಲಮಂಗಲ, ದೊಡ್ಡಬಳ್ಳಾಪುರ ಸುತ್ತಮುತ್ತ ಸುಮಾರು ಮೂವತ್ತೆರಡು ದಿನಗಳ ಕಲಾ ಚಿತ್ರೀಕರಣ ನಡೆದಿದೆ. ಓಂ ಫಿಲಂಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, ಚಿತ್ರವನ್ನು ಲಕ್ಷ್ಮೀರಮೇಶ್ ಅರ್ಪಿಸುತ್ತಿದ್ದಾರೆ. ಆರ್ ಲೋಕೇಶ್, ವೇಣುಗೋಪಾಲ್, ಸುರೇಶ್ ಪೂಜಾರಿ ಹಾಗೂ ದಿನಕರ್ ಪೂಜಾರಿ ಅವರ ಸಹ ನಿರ್ಮಾಣವಿದೆ. ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ. ಕುಮಾರ್ ಚಕ್ರವರ್ತಿ ಹಾಗೂ ರಾಘವೇಂದ್ರ ಬಿ ಕೋಲಾರ್ ಕ್ಯಾಮೆರಾ ಹಿಡಿದಿದ್ದಾರೆ.

ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಧನಂಜಯ್ ನೃತ್ಯ ನಿರ್ದೇಶನವಿದೆ. ಬಂಡೆ‌ ಚಂದ್ರು, ಅಶೋಕ್, ಕೌರವ ವೆಂಕಟೇಶ್, ರಾಂದೇವ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ನಿರ್ದೇಶಕ ರಾಜ್ ಆನಂದರಾಂ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಯಾಗುತ್ತಿರುವುದು ಈ ಚಿತ್ರದ ವಿಶೇಷ. ರಶ್ಮಿತಾ ಶೆಟ್ಟಿ, ಜೋಗಿ ನಾಗರಾಜ್, ಕೆ.ವಿ.ಮಂಜಯ್ಯ, ಪ್ರಣತಿ, ಖುಷಿ, ದೀಪು ಇತರರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ವಿಕ್ರಾಂತ್ ರೋಣ ಬಜೆಟ್ ಕೇಳಿದ್ರೆ ಹೌಹಾರ್ತೀರಿ; ಕಿಚ್ಚನಿಗಾಗಿ ಜಾಕ್ ಮಂಜು ಕೋಟಿ ಖಜಾನೆ‌ ಓಪನ್ !

ಸಿನಿಲಹರಿ ವಿಶೇಷ….

  • ವಿಶಾಲಾಕ್ಷಿ

ವಿಕ್ರಾಂತ್ ರೋಣ ಬಹುಕೋಟಿ ವೆಚ್ಚದ ಸಿನಿಮಾ ಎಂಬುದು‌ ಎಲ್ಲರಿಗೂ ಗೊತ್ತಾಗಿದೆ ಆದರೆ ಬಹುಕೋಟಿ ಅಂದರೆ ಎಷ್ಟು ಕೋಟಿ ಸುರಿದಿರಬಹುದು ಎನ್ನುವ ಪ್ರಶ್ನೆ ಮಾತ್ರ ಕೂತೂಹಲವಾಗಿ ಉಳಿದಿದೆ. ಆ ಕೌತುಕದ ಪ್ರಶ್ನೆಗೆ ಉತ್ತರದ ಜೊತೆಗೆ ವಿಕ್ರಾಂತ್ ರೋಣನ ಡಿಮ್ಯಾಂಡ್ ಸ್ಟೋರಿ ಕಥೆನಾ ನಿಮ್ಮ ಮುಂದೆ ಇಡಲಿದ್ದೇವೆ.‌

ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರು‌ನೋಡ್ತಿರುವ ಕನ್ನಡದ ಹೆಗ್ಗಳಿಕೆಯ ಚಿತ್ರ ವಿಕ್ರಾಂತ್ ರೋಣ. ಭಾರತೀಯ ಚಿತ್ರರಂಗದ ಅಂಗಳದಲ್ಲಿ ಸಾವಿರಾರು ಚಿತ್ರಗಳು ತಯ್ಯಾರಾಗ್ತಿವೆ. ಹಲವು ಸೂಪರ್ ಸ್ಟಾರ್ ಗಳ ಪವರ್ ಫುಲ್ ಸಿನಿಮಾಗಳು ತೆರೆಗೆ ಬರೋಕೆ ಸಜ್ಜಾಗ್ತಿವೆ. ಈ ಮಧ್ಯೆ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣನಿಗಾಗಿ ಜಗತ್ತಿನ‌ ಸಿನಿಮಾ ಪ್ರೇಕ್ಷಕ ಬಳಗ ಜಾತಕಪಕ್ಷಿಯಂತೆ ಕಾಯ್ತಿದೆ. ವಿಕ್ರಾಂತ್ ರೋಣನ ಮೇಲಿರುವ ನಿರೀಕ್ಷೆ ಬುರ್ಜ್ ಖಲೀಫಾವನ್ನು ಮೆಟ್ಟಿನಿಂತಿದೆ.

ಹೌದು, ಅದ್ಯಾವ ದಿವ್ಯಗಳಿಗೆಯಲ್ಲಿ ಚಿತ್ರತಂಡ ಫ್ಯಾಂಟಮ್ ಹೆಸರನ್ನ ಬದಲಾಯಿಸಿ ಬುರ್ಜ್ ಖಲೀಫಾ‌ದಲ್ಲಿ ವಿಕ್ರಾಂತ್ ರೋಣ ಟೈಟಲ್ ಲಾಂಚ್ ಮಾಡ್ತೋ ಏನೋ ಅಲ್ಲಿಂದ ಇಲ್ಲಿಯವರೆಗೆ ಚಿತ್ರದ ಮೇಲಿನ ನಿರೀಕ್ಷೆ ಗಗನಕ್ಕೇರುತ್ತಲೆ ಇದೆ.

ವಿಕ್ರಾಂತ್ ರೋಣ ಆಕ್ಷನ್ ಅಡ್ವೆಂಚರಸ್ ಚಿತ್ರ, ಬಹುಕೋಟಿ ವೆಚ್ಚದ ಸಿನಿಮಾ, ಸುದೀಪ್- ಅನುಪ್ ಕಾಂಬಿನೇಷನ್ ನಲ್ಲಿ ಬರ್ತಿರೋ‌ ಮೊದಲ ಮೂವೀ, ತ್ರಿಡಿ ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಿರುವ ಕನ್ನಡದ ಮೊದಲ ಫ್ಯಾಂಟಸಿ ಪಿಕ್ಚರ್, ಹೀಗೆ ಹಲವು ಕಾರಣಕ್ಕೆ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಾ ನಿರೀಕ್ಷೆ ಎನ್ನುವ ಬೆಟ್ಟವನ್ನು ಪರ್ವತವಾಗಿಸುತ್ತಾ ಬಂದಿತ್ತು. ಟೀಸರ್ ಹಾಗೂ ಕಣ್ಣು ಕುಕ್ಕುವ ಮೇಕಿಂಗ್ ನಿಂದ ಹೈಪ್‌ ಕ್ರಿಯೇಟ್ ಮಾಡಿಕೊಂಡು ಪರಭಾಷಾ ಮಂದಿ ತಿರುಗಿ ನೋಡುವಂತೆ ಮಾಡಿತ್ತು.

ಇತ್ತೀಚೆಗೆ 6 ಕೋಟಿ ಖರ್ಚು ಮಾಡಿ ಬಾಲಿವುಡ್ ನ ಬಂಗಾರದಂತಹ ಬೊಂಬೆ ಜಾಕ್ವೆಲಿನ್ ಕರೆತಂದು ಬೆಚ್ಚಿಬೆರಗಾಗುವಂತೆ ಮಾಡಿದ ಚಿತ್ರತಂಡ 20 ಲಕ್ಷ ಖರ್ಚು ಮಾಡಿ ಮುಂಬೈನ ಚಿತ್ರಕೂಟದಲ್ಲಿ ಫಸ್ಟ್ ಲುಕ್ ಲಾಂಚ್ ಮಾಡಿದ ಸುದ್ದಿ ಕೇಳಿ ಕೆಲವರು ಹೌಹಾರಿದ್ದರು. ಇದೀಗ, ವಿಕ್ರಾಂತ್ ರೋಣನಿಗೆ ನಿರ್ಮಾಪಕ ಜಾಕ್ ಮಂಜು ಸುರಿದಿರುವ ಕೋಟಿ‌ ಬಂಡವಾಳದ ಕಥೆ ಕೇಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು ಸತ್ಯಸ್ಯಸತ್ಯ

ಹೌದು, ವಿಕ್ರಾಂತ್ ರೋಣನಿಗಾಗಿ ನಿರ್ಮಾಪಕ ಜಾಕ್ ಮಂಜು ತಮ್ಮ ಮನೆಯ ಖಜಾನೆಯನ್ನ ಓಪನ್ ಮಾಡಿಟ್ಟಿದ್ದಾರೆ. ಹತ್ತಲ್ಲ‌ .. ಐವತ್ತಲ್ಲ.. ಭರ್ತಿ 100 ಕೋಟಿ ಬಂಡವಾಳನ ಬಾದ್ ಷಾ ಮೇಲೆ ಹಾಕಿದ್ದಾರೆ.‌ ಬಾಲ್ಯದ ಸ್ನೇಹಿತ ಸುದೀಪ್ ಮೇಲಿರುವಂತಹ ನಂಬಿಕೆ ಹಾಗೂ ವಿಶ್ವಾಸಕ್ಕಿಂತ ವಲ್ಡ್ ವೈಡ್, ಆಲ್ ಇಂಡಿಯಾ ಕಟೌಟ್ ಗಿರುವ ತಾಕತ್ತು ಹಾಗೂ ಮಾರುಕಟ್ಟೆ ಬೆಲೆನಾ‌ ಅರಿತುಕೊಂಡಿರುವ ನಿರ್ಮಾಪಕ ಜಾಕ್ ಮಂಜು ಶತಕೋಟಿ ಸುರಿದರೂ ಮಗದಷ್ಟು ಹಣ ಹೂಡೋಕೆ ಸಿದ್ದರಾಗಿದ್ದಾರೆ. ಅದು ಅವರ ಗಟ್ಟಿಗುಂಡಿಗೆ ಹಾಗೂ ಕಿಚ್ಚನ ಸಿನಿಮಾ ಮೇಲಿರುವ ನಂಬಿಕೆ ಅಲ್ಲದೇ ಇನ್ನೇನು ನೀವೇ ಹೇಳಿ.‌

ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದ‌ ಜಾಕ್ ಮಂಜು‌ ಅವರು, ಬ್ರಹ್ಮ ಸಿನಿಮಾದಿಂದ ಇಲ್ಲಿಯವರೆಗೆ ಕಿಚ್ಚನೊಟ್ಟಿಗೆ ಹೆಜ್ಜೆಹಾಕಿದ್ದಾರೆ. ಈ‌ ಮಧ್ಯೆ ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಡೆಡ್ಲಿ ಸೋಮ, ಲೈಫು ಇಷ್ಟೇನೆ, ಭಜರಂಗಿ, ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ನಿರ್ಮಾಣ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ 100 ಕೋಟಿ ಬಜೆಟ್ ನ ಚಿತ್ರ ನಿರ್ಮಾಣ ಮಾಡುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಕ್ವಾಲಿಟಿ- ಕ್ವಾಂಟಿಟಿಯಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗದೇ ವಿಕ್ರಾಂತ್ ರೋಣ ಚಿತ್ರ ನಿರ್ಮಿಸಿ ಪರಭಾಷಾ ಮಂದಿ ಕಣ್ಣುಕುಕ್ಕುವಂತೆ ಮಾಡಿದ್ದಾರೆ.

ಅಲ್ಲದೇ, ಪರಭಾಷಾ ಮಂದಿ ವಿತರಣಾ ಹಕ್ಕುಗಳನ್ನು ಕೊಳ್ಳೋದಕ್ಕೆ‌ ಮುಗಿಬೀಳ್ತಿದ್ದಾರಂತೆ.‌ ವಿಶ್ವದಾದ್ಯಂತ ವಿಕ್ರಾಂತ್ ರೋಣನ ಮೇಲಿರುವ ನಿರೀಕ್ಷೆ ಚಿತ್ರದ ಬೇಡಿಕೆಯನ್ನು ಹೆಚ್ಚಿಸುತ್ತಿದೆ.
ಸದ್ಯಕ್ಕೆ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಕೋಟಿಗೊಬ್ಬ 3 ನಂತರ ಅನುಪ್ ಬಂಡಾರಿ ನಿರ್ದೇಶನ- ಜಾಕ್ ಮಂಜು ನಿರ್ಮಾಣ- ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಆರ್ಭಟ ಶುರುವಾಗಲಿದೆ.

Categories
ಸಿನಿ ಸುದ್ದಿ

ಚಡ್ಡಿದೋಸ್ತ್‌ಗಳ ಆಗಮನ! ಇದು ಇಬ್ಬರು ನಿರ್ದೇಶಕರು ಹೀರೋ ಆದ ಸಿನಿಮಾ!!


ನಿರ್ದೇಶಕರು ಹೀರೋ ಆಗಿರುವ ಸಿನಿಮಾಗಳು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿ ಈಗ ಒಂದೇ ಸಿನಿಮಾದಲ್ಲಿ ಹೀರೋ ಆಗಿದ್ದಾರೆ ಅನ್ನೋದು ವಿಶೇಷ. ಈ ಹಿಂದೆ ಕೂಡ ನಿರ್ದೇಶಕರುಗಳು ತೆರೆಯ ಮೇಲೆ ರಾರಾಜಿಸಿದ್ದಾರೆ. ಆದರೆ, ಇಲ್ಲಿರೋ ನಿರ್ದೇಶಕರು ತೆರೆ ಹಿಂದೆಯೂ ದೋಸ್ತಿಗಳು. ತೆರೆಮೇಲೂ ದೋಸ್ತಿಗಳು. ಹಾಗಂತ, ತೆರೆ ಮೇಲೆ ದೋಸ್ತಿಗಳಾಗಿದ್ದರೂ, ಒಂದಷ್ಟು ಕೋಪ, ಮನಸ್ತಾಪ, ಜಗಳ, ಎಲ್ಲವೂ ಇದೆ. ಈಗ ಪ್ರೇಕ್ಷಕರ ಮುಂದೆ ಬರಲು ಅವರು ಸಜ್ಜಾಗಿದ್ದಾರೆ.

ಹೌದು, “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ”. ಇದು ಇದೇ ತಿಂಗಳು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಆಸ್ಕರ್‌ ಕೃಷ್ಣ ನಿರ್ದೇಶನದ ಚಿತ್ರವಿದು. ಈ ಹಿಂದೆ. “ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು” ಚಿತ್ರ ನಿರ್ದೇಶಿಸಿ, ನಟಿಸಿದ್ದ ಲೋಕೇಂದ್ರ ಸೂರ್ಯ ಮತ್ತು ಆಸ್ಕರ್‌ ಕೃಷ್ಣ ಈ ಚಿತ್ರದ ಹೀರೋಗಳು.

ಇವರಿಗೆ ಗೌರಿ ನಾಯರ್‌ ಜೋಡಿ. ಇಲ್ಲಿ ನಾಯಕಿ ಯಾರ ಹಿಂದೆ ಹೋಗುತ್ತಾಳೆ ಅನ್ನೋದು ಸಸ್ಪೆನ್ಸ್.‌ ಅಂದಹಾಗೆ, ಇದು ರೆಡ್ ಅಂಡ್ ವೈಟ್ ಖ್ಯಾತಿಯ ಸೆವೆನ್ ರಾಜ್ ಅವರ ನಿರ್ಮಾಣದ ಚಿತ್ರ.

ಕೊರೊನಾದಿಂದ ತತ್ತರಿಸಿದ್ದ ಚಿತ್ರರಂಗ, ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಚಿತ್ರಮಂದಿರಗಳು ಕೂಡ ಈಗ ತೆರೆದಿವೆ. ನಿರ್ದೇಶಕ ಆಸ್ಕರ್ ಕೃಷ್ಣ ಚಿತ್ರಮಂದಿರದಲ್ಲಿಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಕಾದಿದ್ದರು. “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ” ಚಿತ್ರವು ಆಗಸ್ಟ್ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

ಅನಂತ್‌ ಆರ್ಯನ್‌ ಸಂಗೀತ ನೀಡಿದ್ದು, ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಜೋಗಿ ಸುನಿತಾ ಹಾಡಿದ್ದಾರೆ. ಈಗಾಗಲೇ ಹಾಡುಗಳು ಮೆಚ್ಚುಗೆ ಪಡೆದಿವೆ. ಇಲ್ಲಿ ನಾಯಕರ ಜೊತೆಗೆ ನಿರ್ಮಾಪಕ ಸೆವೆನ್ ರಾಜ್ ಕೂಡ ಒಂದು ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗಗನ್ ಕುಮಾರ್ ಛಾಯಾಗ್ರಹಣ ಮಾಡಿದರೆ, ಮರಿಸ್ವಾಮಿ ಸಂಕಲನವಿದೆ. ಅಕುಲ್ ನೃತ್ಯ ಹಾಗೂ ವೈಲೆಂಟ್ ವೇಲು ಸಾಹಸ ಮಾಡಿದ್ದಾರೆ.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರ ಚಿತ್ರದ ಟೀಸರ್ ಬಂತು; ಆಗಸ್ಟ್ 3ರಿಂದ ಕೊನೆ ಹಂತದ ಚಿತ್ರೀಕರಣ

ಈಗ ಸಿನಿಮಾ ಪ್ರಚಾರದ ಪರ್ವ. ಹೌದು, ಲಾಕ್‌ಡೌನ್‌ ಬಳಿಕ ಚಿತ್ರರಂಗ ಈಗ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಚಿತ್ರರಂಗವಿದೆ. ಹಾಗಾಗಿ, ಸದ್ಯ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ಈಗಿನಿಂದಲೇ ಬಿಡುಗಡೆಯ ಕೆಲಸವನ್ನು ಶುರುವಿಟ್ಟುಕೊಂಡಿವೆ. ಎರಡನೇ ಅಲೆ ನಂತರದಲ್ಲಿ ಸಿನಿಮಾಗಳು ಪ್ರಚಾರಕ್ಕೆ ಇಳಿದಿವೆ. ಆ ಸಾಲಿಗೆ ಈಗ “ಶಂಭೋ ಶಂಕರ” ಸಿನಿಮಾ ಕೂಡ ಸೇರಿದೆ.

ಅಘನ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ ‘ಶಂಭೋ ಶಿವ ಶಂಕರ’ ಚಿತ್ರದ ನಾಯಕರಲೊಬ್ಬರಾದ ಅಭಯ್ ಪುನೀತ್ ಅವರ ಹುಟ್ಟುಹಬ್ಬದಂದು ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ. ಆನಂದ್ ಆಡಿಯೋ ಮೂಲಕ ಹೊರಬಂದಿರುವ ಟೀಸರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಆಗಸ್ಟ್ 3 ರಿಂದ ಕೊನೆಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಶಂಕರ್‌ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಗೌಸ್‌ಫೀರ್ ಸಾಹಿತ್ಯವಿದೆ.

ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ‌. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದೆ. ‘ಶಂಭೋ ಶಿವ ಶಂಕರ’ ಮೂವರು ಹೀರೋಗಳ ಹೆಸರು. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಸುಪ್ರಿಂ ಹೀರೋ ಶಶಿಕುಮಾರ್, ಸೋನಾಲ್ ಮಾಂಟೆರೊ, ಜೊಗಿ‌ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್’, ಡಿ.ಸಿ.ತಮ್ಮಣ್ಣ ನಟಿಸಿದ್ದಾರೆ.

Categories
ಸಿನಿ ಸುದ್ದಿ

ಸಿನಿಮಾ ಆಗಲಿದೆ ಸಾಧಕನ ಜೀವನ ಚರಿತ್ರೆ! ಡಾ.ವಿಜಯ ಸಂಕೇಶ್ವರ ಅವರ ಬಯೋಪಿಕ್‌ಗೆ ವಿಜಯಾನಂದ ಟೈಟಲ್!!

ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವು ವಿಭಾಗಗಳಲ್ಲಿ ಖ್ಯಾತಿ ಪಡೆದಿರುವ ಪ್ರತಿಷ್ಠಿತ ವಿ.ಆರ್.ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಡಾ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಇದೀಗ ವಿ.ಆರ್.ಎಲ್. ಮೀಡಿಯಾ ಸಂಸ್ಥೆ ಅಡಿಯಲ್ಲಿ “ವಿಆರ್ ಎಲ್” ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ ಪದ್ಮಶ್ರೀ ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರವಾಗುತ್ತಿದೆ. 1976ರಲ್ಲಿ ಒಂದು ಟ್ರಕ್‌ನಿಂದ ಶುರುವಾಗಿ, ಇಂದು ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗು ಮಾಧ್ಯಮ ರಂಗದಲ್ಲಿ ಸಾಧನೆ ಮಾಡಿರುವ ಡಾ.ವಿಜಯ ಸಂಕೇಶ್ವರ ಅವರ ರೋಚಕ ಕಥೆ ಇರುವಂತಹ ಬಯೋಪಿಕ್‌ ಈಗ ಶುರುವಾಗುತ್ತಿದೆ.‌

ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಎಲ್ಲೆಡೆಯಿಂದಲೂ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ ಇಡಲಾಗಿದ್ದು, ರಿಷಿಕಾ ಶರ್ಮಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಸತತವಾಗಿ ೮ ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನೆಮಾ ಹಾಗು ಸೀರಿಯಲ್ ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವ ಹೊಂದಿರುವ ರಿಷಿಕಾ ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾದ ಜೆ. ವಿ. ಅಯ್ಯರ್ ಅವರ ಸಂಬಂಧಿ.

ಈ ಹಿಂದೆ “ಟ್ರಂಕ್” ಎಂಬ ಕನ್ನಡದ ಹಾರರ್ ಚಿತ್ರ ನಿರ್ದೇಶಿಸಿದ್ದರು ರಿಷಿಕಾ ಶರ್ಮ. ಆ ಸಿನಿಮಾದಲ್ಲಿ ನಟಿಸಿದ್ದ ಹೀರೋ ನಿಹಾಲ್ ಕೂಡ “ವಿಜಾಯಾನಂದ” ಚಿತ್ರದ ಹೈಲೈಟ್.‌ ಇಲ್ಲಿ ಅವರು, ಡಾ.ವಿಜಯ ಸಂಕೇಶ್ವರ ಅವರ ಪಾತ್ರ ನಿರ್ವಹಿಸುತ್ತಿದ್ದಾರೆ. ನಿಹಾಲ್‌ ರಂಗಭೂಮಿ ಹಿನ್ನಲೆಯಿಂದ ಬಂದವರು. ಭಾರತಿ ಮತ್ತು ಗಂಗಾ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು, “ಚೌಕ” ಮತ್ತು “ಟ್ರಂಕ್” ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 2ರಂದು ಡಾ.ವಿಜಯ ಸಂಕೇಶ್ವರ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ, “ವಿಜಯಾನಂದ” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.


ಚಿತ್ರತಂಡ ಎರಡು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತೆಲುಗು ಮತ್ತು ಮಲಯಾಳಂ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ “ವಿಜಯಾನಂದ” ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರ ತಂಡಕ್ಕೆ ಬಹಳಷ್ಟು ದೊಡ್ಡ ನಟ, ನಟಿಯರು ಹಾಗು ತಂತ್ರಜ್ಞರು ಕಾಣಿಸಿಕೊಳ್ಳಲಿದ್ದಾರೆ. ಅವರ ಆಯ್ಕೆ ಇಷ್ಟರಲ್ಲೇ ನಡೆಯಲಿದ್ದು, ಶೀಘ್ರವೇ ಶೂಟಿಂಗ್‌ ಕುರಿತಂತೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

Categories
ಸಿನಿ ಸುದ್ದಿ

ಗಡಂಗ್ ರಕ್ಕಮ್ಮನ ನಶೆಯೇರಿಸೋ ನಯಾ ಅವತಾರ; ಗುಂಡೈಕ್ಳ ಕರುಳು ಕಿಲಕಿಲ- ಗಂಡೈಕ್ಳ ಮನಸ್ಸು ಅಲ್ಲೋಲ ಕಲ್ಲೋಲ !?

  • ವಿಶಾಲಾಕ್ಷಿ

ಸೊಂಟ ಸೂಪರ್ ಆದರೆ ಬಾರಿ ಡೇಂಜರ್ರು ಅಂತ ಗೊತ್ತು ಆದರೆ ಕಣ್ಣುಗಳು ಮಾತು ಕೇಳಲ್ಲ.‌ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತು ಆದರೆ ಸಣ್ಣಕರುಳು ಮಾತು ಕೇಳಲ್ಲ. ಹೀಗಿರುವಾಗ ಜಿರೋ ಸೈಜ್ ಸೊಂಟ ಕುಣಿಸಿಕೊಂಡು, ಕಣ್ಣುಕುಕ್ಕೋ ಹೊಕ್ಕಳ ತೋರಿಸಿಕೊಂಡು ಕೈಯಲ್ಲಿ ರಾಮರಸ ಹಾಗೂ ಚಿಲ್ಡ್ ಬಿಯರ್ ಇಡ್ಕೊಂಡು ಗಡಂಗ್ ರಕ್ಕಮ್ಮ ಗ್ರ್ಯಾಂಡ್ ಎಂಟ್ರಿಕೊಟ್ಟರೆ ಏನ್ಗಾಬೇಡ ನೀವೇ ಹೇಳಿ.

ಗಡಂಗ್ ರಕ್ಕಮ್ಮ ಗಂಧದಗುಡಿಗೆ ಮೊದಲ ಬಾರಿಗೆ ಬಲಗಾಲಿಟ್ಟು ಬಂದಿರುವ ಬಿಟೌನ್ ಬಾಲೆ.‌
ಹೆಸರು ಜಾಕ್ವೆಲಿನ್ ಫರ್ನಾಂಡೀಸ್, ಮೂಲತಃ ಶ್ರೀಲಂಕಾ‌ದ ಸುಂದರಿ.‌ ಅಲ್ಲಿಂದ ಮುಂಬೈಗೆ ಜಿಗಿದು ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟರ ಜೊತೆ ಡ್ಯುಯೆಟ್ ಹಾಡಿಕೊಂಡು ಮೆರೆಯುತ್ತಿದ್ದಾರೆ. ಫಾರ್ ದಿ ಫಸ್ಟ್ ಟೈಮ್ ಚಂದನವನಕ್ಕೆ ಕಾಲಿಟ್ಟಿದ್ದು ಗಡಂಗ್ ರಕ್ಕಮ್ಮನಾಗಿ ವಿಕ್ರಾಂತ್ ರೋಣ ಅಲಿಯಾಸ್ ಕಿಚ್ಚನ ಜೊತೆ ಕಿಕ್ಕೇರಿಸುತ್ತಿದ್ದಾರೆ.

ಬಿಟೌನ್ ಹಾಟ್ ಬ್ಯೂಟಿ ಜಾಕ್ವೆಲಿನ್ ತಮ್ಮ
ಮೊದಲ‌ ನೋಟದಲ್ಲೇ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ನಿರ್ದೇಶಕ ಅನುಪ್ ಭಂಡಾರಿಯವರ ಪತ್ನಿ ಡಿಸೈನ್ ಮಾಡಿದ ಕಾಸ್ಟ್ಯೂಮ್ ತೊಟ್ಟುಕೊಂಡು
ವಿಕ್ರಾಂತ್ ರೋಣನ‌ ಅಖಾಡಕ್ಕೆ ಎಂಟ್ರಿಕೊಟ್ಟ ಜಾಕ್ವೆಲಿನ್, ಕೈಯಲ್ಲಿ ರಾಮರಸ ಹಾಗೂ ಚಿಲ್ಡ್ ಬಿಯರ್ ಹಿಡ್ಕೊಂಡು ಬಾದ್ ಷಾ ಜೊತೆ ಬೊಂಬಾಟ್ ಫೋಸ್ ಕೊಟ್ಟಿದ್ದಾರೆ. ಅದೇ ಅವತಾರವನ್ನ ಚಿತ್ರತಂಡ ಇಂದು ಮುಂಬೈನ ಚಿತ್ರಕೂಟ ಗ್ರೌಂಡ್ಸ್ ನಲ್ಲಿ ರಿಲೀಸ್ ಮಾಡಿದೆ.

ಜಾಕ್ವೆಲಿನ್ ಫಸ್ಟ್ ಲುಕ್ ಲಾಂಚ್ ಗೆ 20 ಕೋಟಿ ಸುರಿದರಲ್ಲ ಗುರು !

ಅಚ್ಚರಿ ಅಂದರೆ ನಿರ್ಮಾಪಕ ಜಾಕ್ ಮಂಜು ಭರ್ತಿ 20 ಲಕ್ಷ ಖರ್ಚು ಮಾಡಿ ಗಡಂಗ್ ರಕ್ಕಮ್ಮನ ಫಸ್ಟ್ ಲುಕ್ ಹಾಗೂ ಪಾತ್ರ ಪರಿಚಯ ಮಾಡಿಕೊಟ್ಟಿದ್ದಾರೆ. ಜಾಕ್ ಮಂಜು ಅವರ ಸಿನಿಮಾ ಪ್ರೀತಿಯನ್ನ ಹಾಗೂ ಮನೆಮಗಳಂತೆ ನೋಡಿಕೊಂಡ ರೀತಿಯನ್ನು ಕಂಡ ಬೆರಗಾಗಿರುವ ಜಾಕ್ವೆಲಿನ್, ನಿಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡೋದಕ್ಕೆ‌ ಸದಾ ಸಿದ್ದ ಎನ್ನುವ ಮಾತುಗಳನ್ನಾಡಿದ್ದಾರಂತೆ. ಈ‌ಖುಷಿಯನ್ನು ನಿರ್ಮಾಪಕ ಜಾಕ್ ಮಂಜು ಅವರು ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.

ಗಡಂಗ್ ರಕ್ಕಮ್ಮನ ಹಾಡಿಗೆ 6 ಕೋಟಿ ಖರ್ಚು !

ಗಡಂಗ್ ರಕ್ಕಮ್ಮನ ಹಾಡಿಗೆ ನಿರ್ಮಾಪಕ ಜಾಕ್ ಮಂಜು ಒಂದಲ್ಲ ಎರಡಲ್ಲ ಭರ್ತಿ ಆರು ಕೋಟಿ ಸುರಿದಿದ್ದಾರೆ. ಮೋಹನ್ ಬಿ ಕೆರೆಯಲ್ಲಿ ಅದ್ದೂರಿ ಸೆಟ್ ಹಾಕಿಸಿ ಬಿಟೌನ್ ಬಾಲೆಗೆ ರೆಡ್ ಕಾರ್ಪೆಟ್ ಹಾಕಿದರು. ವಿಕ್ರಾಂತ್ ರೋಣನ‌ ಜೊತೆಗೆ ಲೆಗ್ ಶೇಕ್ ಮಾಡೋದಕ್ಕೆ ಅಂತ ಫ್ಲೈಟ್ ಏರಿ ಬಂದ ಜಾಕ್ವೆಲಿನ್‌, ಕಿಚ್ಚನ ಜೊತೆಯಾಗಿ ವಿಶೇಷ ಪಾತ್ರ ಕೂಡ ಮಾಡಿದ್ದಾರೆ. ಗೌರಿ ಗಣೇಶ ಹಬ್ಬದ ನಂತರ ಜಾಕ್ವೆಲಿನ್ ಮತ್ತೆ ಬೆಂಗಳೂರಿಗೆ ಬಂದು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಊರಲ್ಲೆಲ್ಲಾ ಒಂದು ಹೆಸರು ಕೇಳಿಬರ್ತಿದೆ ಅದುವೇ ವಿಕ್ರಾಂತ್ ರೋಣ ಅಂತ
ಜಾಕ್ವೆಲಿನ್ ಭವಿಷ್ಯ ನುಡಿದಿದ್ದರು.‌ ಕೊನೆಗೂ ಶ್ರೀಲಂಕಾ ಸುಂದರಿಯ ಭವಿಷ್ಯ ನಿಜವಾಗಿದೆ. ವಿಕ್ರಾಂತ್ ರೋಣನಿಗಾಗಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರುನೋಡ್ತಿದೆ. ಗಡಂಗ್ ರಕ್ಕಮ್ಮ ಹಾಗೂ ವಿಕ್ರಾಂತ್ ರೋಣನ ಕೆಮಿಸ್ಟ್ರಿ ನೋಡಿದ್ಮೇಲೆ ಕಾತುರತೆ ಹೆಚ್ಚಾಗ್ತಿದೆ. ಅನುಪ್ ನಿರ್ದೇಶನ ಚಿತ್ರಕ್ಕಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಗುಮ್ಮ ಬಂದ ಗುಮ್ಮ ಗುಮ್ಮ ಎಂತಿದ್ದವರು ಈಗ ಗಡಂಗ್ ರಕ್ಕಮ್ಮ ಬಂದ್ಳು ಗಡಂಗ್ ರಕ್ಕಮ್ಮ‌ ಬಂದ್ಳು ಅಂತ ಕುಣಿದಾಡುತ್ತಿದ್ದಾರೆ.

Categories
ಸಿನಿ ಸುದ್ದಿ

ಗಾಜನೂರಲ್ಲಿ ಗಾಜನೂರು ಗಂಡು! ಅಣ್ಣಾವ್ರು ಸುತ್ತಾಡಿದ ಜಾಗದಲ್ಲಿ ಅಣ್ತಮ್ಮ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದೊಂದಿಗೆ ತಮಿಳುನಾಡಿನ ಗಾಜನೂರಿಗೆ ಭೇಟಿ ನೀಡಿ ರಿಲ್ಯಾಕ್ಸ್ ಮಾಡಿದ್ದಾರೆ.
ಶುಕ್ರವಾರ ಬೆಳಗ್ಗೆಯೇ ಶಿವಣ್ಣ ಹಾಗೂ ಅಪ್ಪು ಗಾಜನೂರಿನ ಮನೆಗೆ ಭೇಟಿ ಮಾಡಿ, ಅಣ್ಣಾವ್ರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದ್ದಾರೆ‌.

ಅಣ್ಣಾವ್ರು ಅಕ್ಕರೆಯಿಂದ ಕಟ್ಟಿಸಿದ ಮನೆಯಲ್ಲಿ ಇಡೀ ಕುಟುಂಬದೊಂದಿಗೆ ಕುಳಿತು ಬಾಡೂಟ ಸೇವಿಸಿದ್ದು ಬಳಿಕ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ನೆಚ್ಚಿನ ಚಿತ್ರನಟರು ಬಂದಿರುವ ವಿಚಾರ ತಿಳಿದ ಅಭಿಮಾನಿಗಳು ಅಣ್ಣಾವ್ರ ಮನೆಗೆ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿ ಕೊಂಡು ಸಂಭ್ರಮಿಸಿದ್ದಾರೆ‌.

Categories
ಸಿನಿ ಸುದ್ದಿ

ಹೃತಿಕ್ ರೋಷನ್ ನಟನೆಯ ವೆಬ್ ಸರಣಿಯಲ್ಲಿ ಕನ್ನಡ ನಟಿ ನಭಾ ನಟೇಶ್?

ಎ. ಹರ್ಷ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು ನಟಿ ನಭಾ ನಟೇಶ್. ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದವರು ನಭಾ. ವಜ್ರಕಾಯ ಚಿತ್ರದ ಗೆಲುವಿನ ನಂತರಲೀ’ ಚಿತ್ರದಲ್ಲಿ ನಾಯಕಿಯಾಗಿ, ಸಾಹೇಬ’ದಲ್ಲಿ ಅತಿಥಿ ಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರು.ನನ್ನು ದೋಚುಕುಂಡುವಟೆ’ ಚಿತ್ರದ ಮೂಲಕ ತೆಲುಗು ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟಿದ್ದ ನಭಾ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್ ಸೇರಿದಂತೆ ಒಂದರ ಹಿಂದೊಂದು ತೆಲುಗು ಚಿತ್ರಗಳಲ್ಲಿ ನಟಿಸುತ್ತಲೇ ಇದ್ದಾರೆ. ಮೆಘಾ ಸ್ಟಾರ್ ಚಿರಂಜೀವಿ ಅವರ ಸೋದರಳಿಯ ಸಾಯಿ ಧರಂ ತೇಜ್ ನಟನೆಯ ಸೋಲೋ ಬ್ರಾತುಕೆ ಸೋ ಬೆಟರ್ ಎನ್ನುವ ಸೂಪರ್ ಹಿಟ್ ಸಿನಿಮಾದಲ್ಲೂ ನಭಾ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ನಮ್ಮ ಕನ್ನಡದ ನಭಾ ನಟೇಶ್ ಕೂಡಾ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ನಭಾ ನಾಯಕಿಯಾಗಿ ನಟಿಸಿದ್ದ ಇಸ್ಮಾರ್ಟ್ ಶಂಕರ್ ಹತ್ತಿರತ್ತಿರ ನೂರು ಕೋಟಿ ಕಲೆಕ್ಷನ್ ಮಾಡಿತ್ತು. ಕೇವಲ ಎರಡೂವರೆ ವರ್ಷಗಳಲ್ಲಿ ನಭಾ ನಟೇಶ್ ನಟಿಸಿದ ತೆಲುಗು ಸಿನಿಮಾಗಳ ಬಾಕ್ಸಾಫೀಸ್ ಕಲೆಕ್ಷನ್ ಬರೋಬ್ಬರಿ ಇನ್ನೂರ ಐವತ್ತು ಕೋಟಿಗೂ ಅಧಿಕ.

ಇಷ್ಟು ಕಡಿಮೆ ಅವಧಿಯೊಳಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಭಾ ಈಗ ವೆಬ್ ಸಿರೀಸ್ ಒಂದರಲ್ಲಿ ನಟಿಸುವುದರೊಂದಿಗೆ ಬಾಲಿವುಡ್‍ನಲ್ಲೂ ಖಾತೆ ತೆರೆಯುವ ಹಂತದಲ್ಲಿದ್ದಾರೆ. ಅದೂ ಹಿಂದಿ ಚಿತ್ರರಂಗದ ಖ್ಯಾತ ನಾಯಕನಟ ಹೃತಿಕ್ ರೋಷನ್ ಜೊತೆಗೆ. ಈಗ ಬಾಲಿವುಡ್‍ನ ಸ್ಟಾರ್ ನಟರು ವೆಬ್ ಸಿರೀಸ್ ಗಳಲ್ಲಿ ನಟಿಸುವ ಮೂಲಕ ಅಚ್ಛರಿ ಹುಟ್ಟುಹಾಕಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಸೈಫ್ ಅಲಿ ಖಾನ್ ಮುಂತಾದ ಜನಪ್ರಿಯ ನಟರ ವೆಬ್ ಸರಣಿಗಳು ತಯಾರಾಗಿವೆ. ಸದ್ಯ ಹೃತಿಕ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ಜಗತ್ತಿನಾದ್ಯಂತ ಹೆಸರು ಮಾಡಿರುವ `ದಿ ನೈಟ್ ಮ್ಯಾನೇಜರ್’ ವೆಬ್ ಸರಣಿಯ ಹಿಂದಿ ಅವತರಣಿಕೆಯಲ್ಲಿ ಹೃತಿಕ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಅದರಲ್ಲಿ ನಭಾ ಹೃತಿಕ್‍ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ಪೂಜಾ ಹೆಗಡೆ, ರಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶಾಲಿನಿ ಪಾಂಡೆ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಾಕಷ್ಟು ಜನ ನಟಿಯರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ನಭಾ ನಟೇಶ್ ಕೂಡಾ ಕನ್ನಡದಿಂದ ತೆಲುಗಿಗೆ ಹೋಗಿ, ಈಗ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಅಂದ, ಚೆಂದದ ಜೊತೆಗೆ ಅಭಿನಯದಲ್ಲೂ ಪಳಗಿರುವ ನಭಾ ಹಿಂದಿ ಚಿತ್ರರಂಗದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿಬರುತ್ತಿದೆ.

Categories
ಸಿನಿ ಸುದ್ದಿ

ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ; ರಚಿತ-ರಕ್ಷಿತಾ ಕೇಳ್ತಿದ್ದಾರೆ ಹೇಳು ಗುರು !

  • ವಿಶಾಲಾಕ್ಷಿ

ಎಣ್ಣೆ-ಹೆಣ್ಣು ಅಂದಾಕ್ಷಣ ಕಿವಿ ನೆಟ್ಟಗಾಗದಿದ್ದರೂ ಕೂಡ ರಚಿತಾ-ರಕ್ಷಿತಾ ಹೆಸರನ್ನು ಒಟ್ಟಿಗೆ ಕೇಳಿದಾಕ್ಷಣ ಕಿವಿಗಳು ಅರಳುತ್ತವೆ…ಕಣ್ಣು ಊರಗಲವಾಗುತ್ತವೆ. ಯಸ್, ಗಂಧದಗುಡಿಯ ಕ್ರೇಜಿಕ್ವೀನ್ ಹಾಗೂ ಡಿಂಪಲ್‌ಕ್ವೀನ್ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದರೆ ಸಹಜವಾಗಿ ಕೂತೂಹಲ ಹೆಚ್ಚಾಗುತ್ತೆ. ಅಂತದ್ರಲ್ಲಿ, ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಅಂತ ಇವರಿಬ್ಬರು ಕೇಳ್ತಿದ್ದಾರೆ ಅಂದರೆ ಕ್ಯೂರಿಯಾಸಿಟಿ ಅನ್ನೋದು ಶ್ಯಾಂಪೇನ್ ಥರ ಗಗನಕ್ಕೆ ಹಾರುತ್ತೆ ಅಪ್‌ಕೋರ್ಸ್ ಹಾರಲೆಬೇಕು. ಹಾರಬೇಕು ಅಂತಾನೇ ಜೋಗಿ ಪ್ರೇಮ್ ಅವರು ಪ್ಲ್ಯಾನ್ ಮಾಡಿದ್ದು ಫಿಕ್ಸ್ ಮಾಡಿದ್ದು.

ಅಷ್ಟಕ್ಕೂ, ಪ್ರೇಮ್ ಅವರು ಮಾಡಿದ ಪ್ಲ್ಯಾನ್ ಏನು? ಏನು ಫಿಕ್ಸ್ ಮಾಡಿದರು? ಎಣ್ಣೆಗೂ-ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳು ಗುರು ಅಂತ ರಕ್ಷಿತಾ ಹಾಗೂ ರಚಿತಾ ಯಾರ ಬಳಿ ಕೇಳ್ತಿದ್ದಾರೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ನೀಡಬೇಕು ಅಂದರೆ ಏಕ್ ಲವ್ ಯಾ' ಬಗ್ಗೆ ಹೇಳಲೆಬೇಕು.ಏಕ್ ಲವ್ ಯಾ’ ಹೆಸರು ಕೇಳಿದಾಕ್ಷಣ ಹಂಡ್ರೆಂಡ್ ಪರ್ಸೆಂಟ್ ನಿರ್ದೇಶಕ ಪ್ರೇಮ್ ಕಣ್ಮುಂದೆ ಬಂದಿರುತ್ತಾರೆ. ಅಟ್ ದಿ ಸೇಮ್ ಟೈಮ್ ಬಿಯರ್ ಬಾಟಲಿ ಹಿಡಿದು ಕಿಕ್ಕೇರಿಸಿದ ರಕ್ಷಿತಾ-ರಚಿತಾರ ಪೋಟೋ ಕೂಡ ಕಣ್ಮುಂದೆ ಬಂದುಬಿಡುತ್ತೆ. ಅಸಲಿ ಕಹಾನಿ ನಾವು ಬಿಚ್ಚಿಡುವ ಮೊದಲೇ ನಿಮ್ಗೆ ಎಲ್ಲಾ ಅರ್ಥವಾಗಿರುತ್ತೆ ಎನಿವೇ ಆದರೂ ಹೇಳ್ತೀವಿ ಕೇಳಿ

ಮಧುಲೋಕಕ್ಕೂ ಹಾಗೂ ಗುಂಡಾಕೋ ಗಂಡೈಕ್ಳಿಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧವನ್ನ ಕಡಿದುಹಾಕುವುದಕ್ಕೆ ಖಾಲಿಕ್ವಾಟ್ರಿಂದಲೂ ಸಾಧ್ಯವಿಲ್ಲ ಬಿಡಿ. ಹೆಣ್ಣುಮಕ್ಕಳು ತವರು ಮನೆಗೆ ಹೋಗೋದು ಬಿಡ್ಬೋದು ಆದರೆ ಸುರಪಾನಪ್ರಿಯರು ಮಾತ್ರ ತವರುಮನೆಯಂತಿರುವ ಬಾರ್‌ಗೆ ಹೋಗೋದನ್ನು ಮಾತ್ರ ತಡೆಯೋದಕ್ಕೆ ಆಗಲ್ಲ.

ಕರುಳು ಕೆರೆದರೆ, ತುಟಿ ಒಣಗಿದರೆ, ಪಿತ್ತ ನೆತ್ತಿಗೇರಿದರೆ, ಮನಸ್ಸು ಮಂಕಾದರೆ, ಹೃದಯಕ್ಕೆ ಗಾಯವಾದರೆ, ಲವ್ವರ್ ಕೈಕೊಟ್ಟರೆ, ವೈಫ್ ಕೂಗಾಡಿದರೆ, ಬಾಸ್ ಕಿರುಚಾಡಿದರೆ, ಬ್ಯುಸಿನೆಸ್ ಲಾಸ್ ಆದರೆ ಹೂಃ ಇದಿಷ್ಟೇ ಆದರೆ ಪರವಾಗಿಲ್ಲ ಗುರು ಹೊಸ ಲವ್ವರ್ ಸಿಕ್ಕರೆ, ಹಳೆಯ ಲವ್ವರ್ ಎದುರುಬಂದರೆ, ವೈಫ್ ತವರು ಮನೆಗೆ ಹೋದರೆ, ಮನಸ್ಸಿಗೆ ಖುಷಿಯಾಗುವ ಘಟನೆಗಳು ಘಟಿಸಿದರೆ ಮುಗೀತು `ಓಪನ್ ದಿ ಬಾಟೆಲ್’ ಅಂತ ಫೆಂಡ್ಸ್ ಜೊತೆ ಟೇಬಲ್ ಕುಟ್ಟಿಕೊಂಡು ಬೆಳಗ್ಗಿನ ಜಾವ ೩ ಗಂಟೆವರೆಗೆ ಕುಂತುಬಿಡ್ತಾರೆ. ಆದರೆ, ಹೆಣ್ಣುಮಕ್ಕಳಿಗೆ ಇದ್ಯಾವ ಸೌಭಾಗ್ಯವೂ ಇಲ್ಲ

ಮನಸ್ಸಿಗೆ ದುಃಖ ಆದಾಗ ಅಥವಾ ಖುಷಿ ಆದಾಗ ಸುರಪಾನಪ್ರಿಯರ ಥರ ನಾವು ಕೂಡ ಎಂಜಾಯ್ ಮಾಡ್ಬೇಕು ಅಂತ ಎಣ್ಣೆರುಚಿ ಹತ್ತಿರುವ ಕೆಲವು ಹೆಣ್ಣುಮಕ್ಕಳಿಗೆ ಅನಿಸುತ್ತೆ. ಹೀಗೆ ಅನಿಸಿದ್ದನ್ನ ನಾಲ್ಕು ಗೋಡೆಯ ಮಧ್ಯೆ ಮಾಡಿಬಿಡ್ತಾರೆ. ಇಷ್ಟದ ಬ್ರ್ಯಾಂಡ್‌ನ ಆರ್ಡರ್ ಮಾಡಿ ಚಿಪ್ಸೋ-ಉಪ್ಪಿನಕಾಯಿಯೋ ಅಥವಾ ಲೆಗ್‌ಪೀಸ್ ಜೊತೆಗೆ ಹೊಟ್ಟೆಗೆ ಸೇರಿಸಿಕೊಳ್ತಾರೆ. ಆದರೆ, ಗಂಡುಮಕ್ಕಳ ಥರ ಟೇಬಲ್ ಕುಟ್ಟಿಕೊಂಡು ಸಣ್ಣಕರುಳನ್ನ ತಂಪುಮಾಡಿಕೊಳ್ಳೋದಕ್ಕೆ ಆಗಲ್ಲ. ಅಷ್ಟಕ್ಕೂ, ಇವರ ಕಥೆಯನ್ನು ಕೇಳೋರು ಯಾರು ಇಲ್ಲ ಹೀಗಾಗಿಯೇ ರಚ್ಚು ಹಾಗೂ ರಕ್ಷಿತಾ ಮುಂದೆಬಂದಿದ್ದಾರೆ. `ಎಣ್ಣೆಗೆ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ’… ಬಾರಲ್ಲಿ ಹೆಣೈಕ್ಳು ಕುಡಿಯೋದು ತಪ್ಪಂತ ಯಾರಾನಾ ಬೋರ್ಡ್ ಹಾಕವ್ರಾ… ಅಯ್ಯೋ ನಮ್ಗೂನೂ ಲವ್ವಲ್ಲಿ ಬ್ರೇಕಪ್ ಆಗೈತೆ ಒಂದೊಳ್ಳೆ ಪೆಗ್ ಹಾಕ್ತೀರಾ.. ಈ ರೀತಿ ಪ್ರಶ್ನೆಮಾಡ್ತಿದ್ದಾರೆ

ರಚಿತಾ ಮತ್ತು ರಕ್ಷಿತಾ ಈ ರೀತಿ ಪ್ರಶ್ನೆ ಮಾಡ್ತಿರುವುದು ರಿಯಲ್ ನಲ್ಲಿ ಅಲ್ಲ ಬದಲಾಗಿ ರೀಲ್ ನಲ್ಲಿ . ಹೌದು, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ಒಂದು ಎಣ್ಣೆ ಸಾಂಗ್ ಇಡಲಾಗಿದೆ.
ರಕ್ಷಿತಾ- ರಚಿತಾ ಜೊತೆಗೆ ರಕ್ಷಿತಾ ಸಹೋದರ ರಾಣಾ ಕೂಡ ಬಾಟೆಲ್ ಕುಟ್ಟಿ ಕಿಕ್ಕೇರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಾಡು ಎಣ್ಣೆಹೊಡೆಯೋ ಹೆಣ್ಣುಮಕ್ಕಳ ಆಂಥಮ್ ಆಗಲಿದೆ.

ಕಣ್ಣೇ ಅದಿರಿಂದಿ ಅಂತ ಹಾಡಿ ಬಜಾರ್ ನಲ್ಲಿ ಸುನಾಮಿ ಎಬ್ಬಿಸಿರುವ ಸತ್ಯವತಿ ಮಂಗ್ಲಿ ಏಕ್ ಲವ್ ಯಾ ಎಣ್ಣೆ ಸಾಂಗ್ ಗೆ ಕಂಠಕುಣಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.ಇತ್ತೀಚೆಗಷ್ಟೇ ಈ ಹಾಡಿನ ಟ್ರ್ಯಾಕ್ನ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಏಕ್ ಲವ್ ಯಾ ಪ್ರೇಮ್ ನಿರ್ದೇಶನ ಮಗದೊಂದು ಪ್ರೇಮಕಥಾ ಚಿತ್ರವಾಗಿದ್ದು ಸಿನಿಪ್ರೇಕ್ಷಕರಲ್ಲಿ ಕೂತೂಹಲ ಗರಿಗೆದರಿದೆ.

error: Content is protected !!