ಗಡಂಗ್ ರಕ್ಕಮ್ಮನ ನಶೆಯೇರಿಸೋ ನಯಾ ಅವತಾರ; ಗುಂಡೈಕ್ಳ ಕರುಳು ಕಿಲಕಿಲ- ಗಂಡೈಕ್ಳ ಮನಸ್ಸು ಅಲ್ಲೋಲ ಕಲ್ಲೋಲ !?

  • ವಿಶಾಲಾಕ್ಷಿ

ಸೊಂಟ ಸೂಪರ್ ಆದರೆ ಬಾರಿ ಡೇಂಜರ್ರು ಅಂತ ಗೊತ್ತು ಆದರೆ ಕಣ್ಣುಗಳು ಮಾತು ಕೇಳಲ್ಲ.‌ ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಅಂತ ಗೊತ್ತು ಆದರೆ ಸಣ್ಣಕರುಳು ಮಾತು ಕೇಳಲ್ಲ. ಹೀಗಿರುವಾಗ ಜಿರೋ ಸೈಜ್ ಸೊಂಟ ಕುಣಿಸಿಕೊಂಡು, ಕಣ್ಣುಕುಕ್ಕೋ ಹೊಕ್ಕಳ ತೋರಿಸಿಕೊಂಡು ಕೈಯಲ್ಲಿ ರಾಮರಸ ಹಾಗೂ ಚಿಲ್ಡ್ ಬಿಯರ್ ಇಡ್ಕೊಂಡು ಗಡಂಗ್ ರಕ್ಕಮ್ಮ ಗ್ರ್ಯಾಂಡ್ ಎಂಟ್ರಿಕೊಟ್ಟರೆ ಏನ್ಗಾಬೇಡ ನೀವೇ ಹೇಳಿ.

ಗಡಂಗ್ ರಕ್ಕಮ್ಮ ಗಂಧದಗುಡಿಗೆ ಮೊದಲ ಬಾರಿಗೆ ಬಲಗಾಲಿಟ್ಟು ಬಂದಿರುವ ಬಿಟೌನ್ ಬಾಲೆ.‌
ಹೆಸರು ಜಾಕ್ವೆಲಿನ್ ಫರ್ನಾಂಡೀಸ್, ಮೂಲತಃ ಶ್ರೀಲಂಕಾ‌ದ ಸುಂದರಿ.‌ ಅಲ್ಲಿಂದ ಮುಂಬೈಗೆ ಜಿಗಿದು ಬಾಲಿವುಡ್ ಅಂಗಳದಲ್ಲಿ ಸ್ಟಾರ್ ನಟರ ಜೊತೆ ಡ್ಯುಯೆಟ್ ಹಾಡಿಕೊಂಡು ಮೆರೆಯುತ್ತಿದ್ದಾರೆ. ಫಾರ್ ದಿ ಫಸ್ಟ್ ಟೈಮ್ ಚಂದನವನಕ್ಕೆ ಕಾಲಿಟ್ಟಿದ್ದು ಗಡಂಗ್ ರಕ್ಕಮ್ಮನಾಗಿ ವಿಕ್ರಾಂತ್ ರೋಣ ಅಲಿಯಾಸ್ ಕಿಚ್ಚನ ಜೊತೆ ಕಿಕ್ಕೇರಿಸುತ್ತಿದ್ದಾರೆ.

ಬಿಟೌನ್ ಹಾಟ್ ಬ್ಯೂಟಿ ಜಾಕ್ವೆಲಿನ್ ತಮ್ಮ
ಮೊದಲ‌ ನೋಟದಲ್ಲೇ ನೋಡುಗರ ಎದೆಗೆ ಕಿಚ್ಚು ಹಚ್ಚಿದ್ದಾರೆ. ನಿರ್ದೇಶಕ ಅನುಪ್ ಭಂಡಾರಿಯವರ ಪತ್ನಿ ಡಿಸೈನ್ ಮಾಡಿದ ಕಾಸ್ಟ್ಯೂಮ್ ತೊಟ್ಟುಕೊಂಡು
ವಿಕ್ರಾಂತ್ ರೋಣನ‌ ಅಖಾಡಕ್ಕೆ ಎಂಟ್ರಿಕೊಟ್ಟ ಜಾಕ್ವೆಲಿನ್, ಕೈಯಲ್ಲಿ ರಾಮರಸ ಹಾಗೂ ಚಿಲ್ಡ್ ಬಿಯರ್ ಹಿಡ್ಕೊಂಡು ಬಾದ್ ಷಾ ಜೊತೆ ಬೊಂಬಾಟ್ ಫೋಸ್ ಕೊಟ್ಟಿದ್ದಾರೆ. ಅದೇ ಅವತಾರವನ್ನ ಚಿತ್ರತಂಡ ಇಂದು ಮುಂಬೈನ ಚಿತ್ರಕೂಟ ಗ್ರೌಂಡ್ಸ್ ನಲ್ಲಿ ರಿಲೀಸ್ ಮಾಡಿದೆ.

ಜಾಕ್ವೆಲಿನ್ ಫಸ್ಟ್ ಲುಕ್ ಲಾಂಚ್ ಗೆ 20 ಕೋಟಿ ಸುರಿದರಲ್ಲ ಗುರು !

ಅಚ್ಚರಿ ಅಂದರೆ ನಿರ್ಮಾಪಕ ಜಾಕ್ ಮಂಜು ಭರ್ತಿ 20 ಲಕ್ಷ ಖರ್ಚು ಮಾಡಿ ಗಡಂಗ್ ರಕ್ಕಮ್ಮನ ಫಸ್ಟ್ ಲುಕ್ ಹಾಗೂ ಪಾತ್ರ ಪರಿಚಯ ಮಾಡಿಕೊಟ್ಟಿದ್ದಾರೆ. ಜಾಕ್ ಮಂಜು ಅವರ ಸಿನಿಮಾ ಪ್ರೀತಿಯನ್ನ ಹಾಗೂ ಮನೆಮಗಳಂತೆ ನೋಡಿಕೊಂಡ ರೀತಿಯನ್ನು ಕಂಡ ಬೆರಗಾಗಿರುವ ಜಾಕ್ವೆಲಿನ್, ನಿಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡೋದಕ್ಕೆ‌ ಸದಾ ಸಿದ್ದ ಎನ್ನುವ ಮಾತುಗಳನ್ನಾಡಿದ್ದಾರಂತೆ. ಈ‌ಖುಷಿಯನ್ನು ನಿರ್ಮಾಪಕ ಜಾಕ್ ಮಂಜು ಅವರು ಸಿನಿಲಹರಿ ಜೊತೆ ಹಂಚಿಕೊಂಡಿದ್ದಾರೆ.

ಗಡಂಗ್ ರಕ್ಕಮ್ಮನ ಹಾಡಿಗೆ 6 ಕೋಟಿ ಖರ್ಚು !

ಗಡಂಗ್ ರಕ್ಕಮ್ಮನ ಹಾಡಿಗೆ ನಿರ್ಮಾಪಕ ಜಾಕ್ ಮಂಜು ಒಂದಲ್ಲ ಎರಡಲ್ಲ ಭರ್ತಿ ಆರು ಕೋಟಿ ಸುರಿದಿದ್ದಾರೆ. ಮೋಹನ್ ಬಿ ಕೆರೆಯಲ್ಲಿ ಅದ್ದೂರಿ ಸೆಟ್ ಹಾಕಿಸಿ ಬಿಟೌನ್ ಬಾಲೆಗೆ ರೆಡ್ ಕಾರ್ಪೆಟ್ ಹಾಕಿದರು. ವಿಕ್ರಾಂತ್ ರೋಣನ‌ ಜೊತೆಗೆ ಲೆಗ್ ಶೇಕ್ ಮಾಡೋದಕ್ಕೆ ಅಂತ ಫ್ಲೈಟ್ ಏರಿ ಬಂದ ಜಾಕ್ವೆಲಿನ್‌, ಕಿಚ್ಚನ ಜೊತೆಯಾಗಿ ವಿಶೇಷ ಪಾತ್ರ ಕೂಡ ಮಾಡಿದ್ದಾರೆ. ಗೌರಿ ಗಣೇಶ ಹಬ್ಬದ ನಂತರ ಜಾಕ್ವೆಲಿನ್ ಮತ್ತೆ ಬೆಂಗಳೂರಿಗೆ ಬಂದು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಊರಲ್ಲೆಲ್ಲಾ ಒಂದು ಹೆಸರು ಕೇಳಿಬರ್ತಿದೆ ಅದುವೇ ವಿಕ್ರಾಂತ್ ರೋಣ ಅಂತ
ಜಾಕ್ವೆಲಿನ್ ಭವಿಷ್ಯ ನುಡಿದಿದ್ದರು.‌ ಕೊನೆಗೂ ಶ್ರೀಲಂಕಾ ಸುಂದರಿಯ ಭವಿಷ್ಯ ನಿಜವಾಗಿದೆ. ವಿಕ್ರಾಂತ್ ರೋಣನಿಗಾಗಿ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಎದುರುನೋಡ್ತಿದೆ. ಗಡಂಗ್ ರಕ್ಕಮ್ಮ ಹಾಗೂ ವಿಕ್ರಾಂತ್ ರೋಣನ ಕೆಮಿಸ್ಟ್ರಿ ನೋಡಿದ್ಮೇಲೆ ಕಾತುರತೆ ಹೆಚ್ಚಾಗ್ತಿದೆ. ಅನುಪ್ ನಿರ್ದೇಶನ ಚಿತ್ರಕ್ಕಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಗುಮ್ಮ ಬಂದ ಗುಮ್ಮ ಗುಮ್ಮ ಎಂತಿದ್ದವರು ಈಗ ಗಡಂಗ್ ರಕ್ಕಮ್ಮ ಬಂದ್ಳು ಗಡಂಗ್ ರಕ್ಕಮ್ಮ‌ ಬಂದ್ಳು ಅಂತ ಕುಣಿದಾಡುತ್ತಿದ್ದಾರೆ.

Related Posts

error: Content is protected !!