ಅಂದು ಹಾಡು ಬರೆದ್ರು ಇಂದು ಹೀರೋ ಆದ್ರು! ಜಿಂಕೆ ಮರಿನಾ ಖ್ಯಾತಿಯ ರಾಜ್‌ ಆನಂದರಾಂ ಹಿಂದಿನ ಅಟ್ಯಾಕ್‌ ರಹಸ್ಯ!!

“ಜಿಂಕೆ ಮರಿನಾ ನೀ ಜಿಂಕೆ ಮರಿನಾ…” ಕನ್ನಡದಲ್ಲಿ ಈ ಹಾಡನ್ನು ಬಹುತೇಕ ಮಂದಿ ಕೇಳಿದ್ದಾರೆ. ಈ ಹಾಡು “ಲೂಸ್‌ ಮಾದ” ಯೋಗಿ ಅಭಿನಯದ “ನಂದ ಲವ್ಸ್‌ ನಂದಿತ” ಚಿತ್ರದ್ದು. ಈ ಹಾಡನ್ನು ಬರೆದಿದ್ದು, ರಾಜ್ ಆನಂದರಾಂ. ಈ ಹಿಂದೆ ಇವರು “ಮೇಸ್ತ್ರಿ” ಸಿನಿಮಾ ನಿರ್ದೇಶಿಸಿದ್ದರು. ಅದಾದ ಬಳಿಕ ಮತ್ತೊಂದು ಸಿನಿಮಾಗೆ ನಿರ್ದೇಶಕರಾಗಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತು ನಿರ್ದೇಶನ ಮಾಡಿದ್ದಾರೆ. ಆ ಚಿತ್ರಕ್ಕೆ “ಜಯಕೃಷ್ಣ ಆಟ್ಯಾಕ್‌ ೧” ಎಂದು ಹೆಸರಿಟ್ಟಿದ್ದಾರೆ. ಇದೊಂದು ಪಕ್ಕಾ ಆಕ್ಷನ್-ಥ್ರಿಲ್ಲರ್‌ ಕಥೆ ಹೊಂದಿದೆ. ಚಿತ್ರ ಬಿಡುಗಡೆಗೆ ರೆಡೆಯಾಗಿದೆ. ಈ ಹಿಂದೆ ನಿರ್ದೇಶಕರಾದ ಮುರಳಿ ಮೋಹನ್, ಎಚ್.ವಾಸು ಅವರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ ರಾಜ್ ಆನಂದರಾಂ, ಈಗ ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ.


ಬೆಂಗಳೂರು, ನೆಲಮಂಗಲ, ದೊಡ್ಡಬಳ್ಳಾಪುರ ಸುತ್ತಮುತ್ತ ಸುಮಾರು ಮೂವತ್ತೆರಡು ದಿನಗಳ ಕಲಾ ಚಿತ್ರೀಕರಣ ನಡೆದಿದೆ. ಓಂ ಫಿಲಂಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ, ಚಿತ್ರವನ್ನು ಲಕ್ಷ್ಮೀರಮೇಶ್ ಅರ್ಪಿಸುತ್ತಿದ್ದಾರೆ. ಆರ್ ಲೋಕೇಶ್, ವೇಣುಗೋಪಾಲ್, ಸುರೇಶ್ ಪೂಜಾರಿ ಹಾಗೂ ದಿನಕರ್ ಪೂಜಾರಿ ಅವರ ಸಹ ನಿರ್ಮಾಣವಿದೆ. ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದಾರೆ. ಕುಮಾರ್ ಚಕ್ರವರ್ತಿ ಹಾಗೂ ರಾಘವೇಂದ್ರ ಬಿ ಕೋಲಾರ್ ಕ್ಯಾಮೆರಾ ಹಿಡಿದಿದ್ದಾರೆ.

ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಧನಂಜಯ್ ನೃತ್ಯ ನಿರ್ದೇಶನವಿದೆ. ಬಂಡೆ‌ ಚಂದ್ರು, ಅಶೋಕ್, ಕೌರವ ವೆಂಕಟೇಶ್, ರಾಂದೇವ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ನಿರ್ದೇಶಕ ರಾಜ್ ಆನಂದರಾಂ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಯಾಗುತ್ತಿರುವುದು ಈ ಚಿತ್ರದ ವಿಶೇಷ. ರಶ್ಮಿತಾ ಶೆಟ್ಟಿ, ಜೋಗಿ ನಾಗರಾಜ್, ಕೆ.ವಿ.ಮಂಜಯ್ಯ, ಪ್ರಣತಿ, ಖುಷಿ, ದೀಪು ಇತರರು ಚಿತ್ರದಲ್ಲಿದ್ದಾರೆ.

Related Posts

error: Content is protected !!