ಅಲ್ಲು-ಇಲ್ಲು ನಿಂದೆ ಗುಲ್ಲು- ಮತ್ತೆ ಬಂದೆ ಗಲ್ಲು ಗಲ್ಲು ! ಪವರ್ ಜೊತೆ ತ್ರಿಷಾ ರೋಮಿಂಗ್ !!

ನನ್ನ ದಿಲ್ಲು ಕಾಲಿಂಗ್ ಬೆಲ್ಲು..ಮತ್ತೆ ಬಂದೆ ಗಲ್ಲು ಗಲ್ಲು..ಅಲ್ಲು-ಇಲ್ಲು ನಿಂದೆ ಗುಲ್ಲು..ಲವ್ವೇ ಥ್ರಿಲ್ಲು ಹೀಗಂತ ಹಾಡಿಕೊಂಡು ಪವರ್‌ಸ್ಟಾರ್ ಜೊತೆ ಜಿರೋ ಸೈಜ್ ಸೊಂಟ ಕುಣಿಸಿದ್ದ ನಟಿ ತ್ರಿಷಾ ಕೃಷ್ಣನ್ ಮತ್ತೆ ಅಣ್ಣಬಾಂಡ್ ಜೊತೆ ಹೆಜ್ಜೆಹಾಕೋದಕ್ಕೆ ಸೈ ಎಂದಿದ್ದಾರೆ. ಸೌತ್ ಸುಂದರಿ ತ್ರಿಷಾ ಕೃಷ್ಣನ್ ಅಪ್ಪುಗೆ ಜೊತೆಯಾಗಲಿದ್ದಾರೆ,ದ್ವಿತ್ವ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಈ ಬಗ್ಗೆ ಸಿನಿಲಹರಿ ಜೊತೆ ಮಾತನಾಡಿದ್ದ ನಿರ್ದೇಶಕ ಪವನ್‌ಕುಮಾರ್ ತ್ರಿಷಾ ಜೊತೆ ಮಾತುಕತೆ ನಡೆದಿರುವುದು ಸತ್ಯ ಎಂದಿದ್ದರು. ಗಿಲ್ಲಿ ಬೆಡಗಿ ಗ್ರೀನ್ ಸಿಗ್ನಲ್ ಕೊಟ್ಟರೆ ಶೀಘ್ರದಲ್ಲೇ ಅಫಿಷಿಯಲ್ಲಾಗಿ ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೇ, ಭಾನುವಾರ ಸಂಜೆ ಅಷ್ಟರಲ್ಲಿ ಹೊಂಬಾಳೆ ಸಂಸ್ಥೆ `ದ್ವಿತ್ವ’ ಚಿತ್ರಕ್ಕೆ ತ್ರಿಷಾಕೃಷ್ಣನ್ ಲೀಡಿಂಗ್ ಲೇಡಿ ಎಂದು ಸಪ್ರೈಸ್ ಕೊಟ್ಟರು. ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಥ್ರಿಲ್ಲಾದರು. ಪವರ್ ಜೋಡಿನಾ ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಕೊಟ್ಟಿದ್ದಕ್ಕೆ ಹೊಂಬಾಳೆ ಬ್ಯಾನರ್‌ಗೆ ಉಘೇ ಉಘೇ ಎಂದರು.

ಪವರ್ ಚಿತ್ರದಲ್ಲಿ ಅಪ್ಪು-ತ್ರಿಷಾ ಕೆಮಿಸ್ಟ್ರಿ ಕ್ಯಾರೆಟ್ ಅಲ್ವಾದಷ್ಟೇ ಕಿಕ್ ಕೊಟ್ಟಿತ್ತು. ಇದೀಗ ಅದೇ ಕಿಕ್ ಮತ್ತೊಮ್ಮೆ ದ್ವಿತ್ವ ಚಿತ್ರದಿಂದ ಸಿಗುತ್ತೆ ಎನ್ನುವ ಕಾತುರತೆ ಹೆಚ್ಚಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಷಾಕೃಷ್ಣನ್ ಪವರ್ ಪಕ್ಕದಲ್ಲಿ ನಿಲ್ಲೋದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯನ್ನು ಮತ್ತೊಮ್ಮೆ ಚಂದನವನಕ್ಕೆ ಕರೆತರುತ್ತಿರುವ ಹೊಂಬಾಳೆ ಸಂಸ್ಥೆ, ಗಾಂಧಿನಗರ ಮಾತ್ರವಲ್ಲ ಸೌತ್ ಸಿನಿಮಾ ಇಂಡಸ್ಟಿçಯೂ ತಿರುಗಿ ನೋಡುವಂತೆ ಮಾಡಿದ್ದಾರೆ.

ದ್ವಿತ್ವ ಟೈಟಲ್‌ನಿಂದಲೇ ಬಜಾರ್‌ನಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿರುವ ಚಿತ್ರ. ಪವನ್ ಹಾಗೂ ಪುನೀತ್ ಕಾಂಬಿನೇಷನ್‌ನಲ್ಲಿ ಮೊದಲ ಚಿತ್ರ ಎನ್ನುವ ಕಾರಣಕ್ಕೂ ದ್ವಿತ್ವ' ಮೇಲೆ ನಿರೀಕ್ಷೆಗಳು ಗರಿಗೆದರಿವೆ.

ಟೈಟಲ್ ಅನೌನ್ಸ್ ಮೆಂಟ್ ಹಾಗೂ ಚಿತ್ರದ ನಾಯಕ-ನಾಯಕಿಯ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಫಿಲ್ಮ್ ಟೀಮ್ ಅದ್ದೂರಿಯಾಗಿ ಮುಹೂರ್ತ ಮಾಡಿ ಸಿನಿಮಾ ಶುರು ಮಾಡುವ ಪ್ಲ್ಯಾನ್‌ನಲ್ಲಿದೆ. ಸೆಪ್ಟೆಂಬರ್‌ನಿಂದದ್ವಿತ್ವ’ ತಂಡ ಚಿತ್ರೀಕರಣಕ್ಕೆ ಹೊರಡಲಿದೆ. ಪ್ರೀತಾ ಜಯರಾಮನ್ ಕ್ಯಾಮೆರಾ ಕೈಚಳಕ ಹಾಗೂ ತೇಜಸ್ವಿಯವರ ಸಂಗೀತ ಚಿತ್ರಕ್ಕಿದೆ.


ಸದ್ಯ ಅಪ್ಪು ಜೇಮ್ಸ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತ್ರಿಷಾ ಕೂಡ ನಾಲ್ಕೈದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ನಿರ್ದೇಶಕ ಪವನ್ ಕುಮಾರ್ `ದ್ವಿತ್ವ’ ಕಥೆ-ಚಿತ್ರಕಥೆ-ಸಂಗೀತ ಎಲ್ಲದರ ಮೇಲೆ ಮತ್ತೊಮ್ಮೆ ಕಣ್ಣುಹಾಯಿಸುತ್ತಿದ್ದಾರೆ. ದಿವ್ಯಮುಹೂರ್ತದಲ್ಲಿ ಮುಹೂರ್ತ ಮುಗಿಸಿ ಸಿನಿಮಾ ಸೆಟ್ಟೇರಿಸುವುದಕ್ಕೆ ಹೊಂಬಾಳೆ ಸಜ್ಜಾಗಿದೆ.

Related Posts

error: Content is protected !!