Categories
ಸಿನಿ ಸುದ್ದಿ

ಬನ್ ಟೀ ಸವಿದ ನಾಗತಿಹಳ್ಳಿ! ಹೊಸಬರ ಸಿನಿಮಾ ಟ್ರೇಲರ್ ರಿಲೀಸ್

ಯುವ ಸಿನಿಮೋತ್ಸಾಹಿ ತಂಡವೊಂದು ಸೇರಿ ಮಾಡಿರುವ ಬನ್ ಟೀ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಶಯ ಕೋರಿದ್ದಾರೆ. ಆನ್ ಲೈನ್ ಎಡಿಟರ್ ಆಗಿ ಗುರುತಿಸಿಕೊಂಡಿರುವ ಖಾಕಿ ಸಿನಿಮಾ ಬರಹಗಾರದಲ್ಲಿ ಕೆಲಸ ನಿರ್ವಹಿಸಿರುವ ಉದಯ್ ಕುಮಾರ್ ಪಿಎಸ್ ಎರಡನೇ ಹೆಜ್ಜೆ ಇದು. ಕಾರ್ಮೋಡ ಸರಿದು ಎಂಬ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಉದಯ್ ಬನ್ ಟೀ ಎಂಬ ವಿಭಿನ್ನ ಶೀರ್ಷಿಕೆ ಮೂಲಕ ಮತ್ತೊಮ್ಮೆ ಚಿತ್ರರಸಿಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಉದಯ್ ಹೇಳಿದ ಕಥೆ ಇಷ್ಟವಾಯ್ತು. ಹಂಚಿ ತಿನ್ನುವ ಅಗತ್ಯವಿರುವ ಈ ದಿನಗಳಲ್ಲಿ ಹಂಚಿ ಉಣ್ಣದೇ ಬರೀ ಬಾಚಿಕೊಳ್ಳುವ ಮನಸ್ಥಿತಿ, ಅದರಿಂದ ಉಂಟಾಗುವ ಸಾಮಾಜಿಕ ತೊಂದರೆಗಳ ಸುತ್ತ ಕಥೆ ಸಾಗುತ್ತದೆ. ಉದಯ್ ನಿರ್ಮಾಪಕರು ಸಿಕ್ತಾರೆ ಅಂತಾ ಫ್ಯಾಷನ್ ಗೋಸ್ಕರ್ ಸಿನಿಮಾ ಮಾಡಿಲ್ಲ. ಆಳವಾಗಿ ತಾಂತ್ರಿಕವಾಗಿ ಚಿತ್ರ ಮಾಡಿದ್ದಾರೆ. ತಮ್ಮದೇ ಟೆಂಟ್ ಸಿನಿಮಾ ಸೂಲ್ಕ್ ಪ್ರತಿಭೆಗಳು ಸೇರಿ ಬನ್ ಟೀ ಚಿತ್ರ ಮಾಡಿದ್ದು, ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಿರ್ದೇಶಕ ಉದಯ್ ಮಾತನಾಡಿ, ಬನ್ ಟೀ ನಿರ್ದೇಶಕನಾಗಿ ನನ್ನ ಎರಡನೇ ಸಿನಿಮಾ. ಆನ್ ಲೈನ್ ಎಡಿಟರ್ ಆಗಿ ಎಡಿಟರ್ ಆಗಿ ಕೆಲಸ ಮಾಡ್ತಿದ್ದು, ಬನ್ ಟೀ ಏಳು ವರ್ಷದ ಕನಸು. ಸಿನಿಮಾ ಅವಕಾಶಕ್ಕಾಗಿ ಗಾಂಧಿನಗರ ಸುತ್ತುವಾಗ ಬನ್ ಟೀ ನಮ್ಮ ಊಟ.. ಟೈಟಲ್ ಡಿಫರೆಂಟಾಗಿದೆ. ಶೀರ್ಷಿಕೆ ವಿಭಿನ್ನವಾಗಿ ಇದ್ದರೇ ಕುತೂಹಲ ಮೂಡುತ್ತದೆ. ಟೈಟಲ್ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಕಷ್ಟಪಟ್ಟು ಓದು ಅನ್ನುವ ಬದಲು ಇಟ್ಟಪಟ್ಟು ಓದು ಅನ್ನೋದನ್ನು ಯಾಕೆ ಹೇಳುವುದಿಲ್ಲ ಅನ್ನೋದೇ ಚಿತ್ರದ ಒಟ್ಟಾರೆ ಸಾರಾಂಶ ಎಂದು ತಿಳಿಸಿದರು.

ನೈಜ ಘಟನೆಯಿಂದ ಸ್ಫೂರ್ತಿ ಪಡೆದು ರೂಪಿಸಿರುವ ಬನ್ ಟೀ ಸಿನಿಮಾಗೆ ಉದಯ್ ಕಥೆ ಬರೆದು ನಿರ್ದೇಶನದ ಜೊತೆಗೆ ಸಂಕಲನ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಮೌರ್ಯ, ತನ್ಮಯ್, ಉಮೇಶ್ ಸಕ್ಕರೆನಾಡು, ಶ್ರೀದೇವಿ, ನಿಶಾ, ಗುಂಡಣ್ಣ, ಸುನಿಲ್ ನಟಿಸಿರುವ ಈ ಚಿತ್ರಕ್ಕೆ ರಾಧಾಕೃಷ್ಣ ಬ್ಯಾನರ್ ಆರ್ ಕೇಶವ ನಿರ್ಮಾಣ ಮಾಡಿದ್ದು, ರಾಜರಾವ್ ಅಂಚಲ್ಕರ್ ಕ್ಯಾಮೆರಾ, ಪ್ರದ್ಯೋತನ್ ಸಂಗೀತ ಸಿನಿಮಾಕ್ಕಿದೆ. ಪ್ರಾಮಿಸಿಂಗ್ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬನ್ ಟೀ ಸಿನಿಮಾವನ್ನು ಏಪ್ರಿಲ್ ತಿಂಗಳಾಂತ್ಯಕ್ಕೆ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ.

Categories
ಸಿನಿ ಸುದ್ದಿ

ನಿರ್ದೇಶಕ ಹೇಮಂತ್ ಹೆಗಡೆ ಅವರ ನೆಟ್ ವರ್ಕ್ ಸಿಕ್ತು!

ಪ್ರಭಂಜನ ಅವರು ನಿರ್ಮಿಸುತ್ತಿರುವ, ಹೇಮಂತ್ ಹೆಗಡೆ ನಿರ್ದೇಶಿಸುತ್ತಿರುವ “ನೆಟ್ ವರ್ಕ್” ಚಿತ್ರಕ್ಕೆ ಚಾಲನೆ ದೊರಕಿದೆ.

“ನೆಟ್ ವರ್ಕ್” ಒಂದು ಕುಟುಂಬದ ಕಥೆಯಲ್ಲ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಮೊಬೈಲ್ ನಿಂದ ಉಪಯೋಗ ಇರುವ ಹಾಗೆ, ದುಷ್ಪರಿಣಾಮಗಳು ಹೆಚ್ಚಿದೆ. ಮೊಬೈಲ್ ಬಂದ ಮೇಲೆ ಮಕ್ಕಳು ಆಟವಾಡುವುದನ್ನು ಮರೆತಿದ್ದಾರೆ. ಮನೆಯಲ್ಲೂ ಅಷ್ಟೇ . ಮೂರು ಜನ ಇದ್ದರೆ, ಮೂರು ಕಡೆ ಮೊಬೈಲ್ ನೋಡುವುದರಲ್ಲಿ ತಲೀನರಾಗಿರುತ್ತಾರೆ.

ಹೀಗೆ ಈ ಸಮಸ್ಯೆಗಳ ಸುತ್ತ “ನೆಟ್ ವರ್ಕ್” ಚಿತ್ರದ ಕಥೆ ಸಾಗುತ್ತದೆ. ಮೂವತ್ತು ವರ್ಷಗಳ ಹಿಂದೆ ನಾವು ಗೆಳೆಯರು ಸೇರಿ “ದೃಷ್ಟಿ” ಎಂಬ ಸಂಸ್ಥೆ ಕಟ್ಟಿದ್ದೆವು. ಆ ತಂಡದಲ್ಲಿದ್ದ ಬಹುತೇಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಫ್ಟ್ ವೇರ್ ಕಂಪನಿ ಮಾಲೀಕರಾಗಿರುವ ಪ್ರಭಂಜನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೇ 15 ರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು.

ಹೇಮಂತ್ ಹೆಗಡೆ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಪ್ರಭಂಜನ.

ಚಿತ್ರದಲ್ಲಿ ನಟಿಸುತ್ತಿರುವ ರಾಜೇಶ್ ನಟರಂಗ, ಸುಚೀಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ, ರಕ್ಷಿಕಾ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.

Categories
ಸಿನಿ ಸುದ್ದಿ

ಕನ್ನಡ ಸಿನಿರಂಗಕ್ಕೆ ವಜ್ರಮುನಿ ಮೊಮ್ಮಗನ ಆಗಮನ: ಯಲಾಕುನ್ನಿ ಸಿನಿಮಾಗೆ ಕೋಮಲ್ ಹೀರೋ

ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸುತ್ತಿರುವ “ಯಲಾ ಕುನ್ನಿ” ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿದೆ. ಚಿತ್ರಕ್ಕೆ ಕನ್ನಡ ಚಿತ್ರರಂಗದ ದಂತಕಥೆ ವಜ್ರಮುನಿ ಅವರ ಕುಟುಂಬದ ಎಲ್ಲ ಸದಸ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ವಜ್ರಮುನಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ವಜ್ರಮುನಿ ಕ್ಯಾಮರಾ ಚಾಲನೆ ಮಾಡಿದರೆ, ಮೊದಲ ಸನ್ನಿವೇಶಕ್ಕೆ ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಆರಂಭಫಲಕ ತೋರಿದರು, ವಜ್ರಮುನಿ ಯವರ ಕಿರಿಯ ಪುತ್ರ ಜಗದೀಶ್ ವಜ್ರಮುನಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

“ಯಲಾಕುನ್ನಿ” ಖ್ಯಾತ ನಟ ವಜ್ರಮುನಿ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಪದ. ಈಗ ಆ ಪದವೇ ಚಿತ್ರದ ಶೀರ್ಷಿಕೆಯಾಗಿದೆ. “ಮೇರಾ ನಾಮ್ ವಜ್ರಮುನಿ..!” ಎಂಬ ಅಡಿಬರಹ ಕೂಡ ಇದೆ.

ನಾನು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕ ಪ್ರದೀಪ್ ಬಹಳ ಚೆನ್ನಾಗಿ ಕಥೆ , ಚಿತ್ರಕಥೆ , ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮುಕ್ಕಾಲು ಭಾಗ 1981 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಆ ದೇವಾಲಯದಲ್ಲೇ ಹೆಚ್ಚಿನ ಚಿತ್ರೀಕರಣವಾಗಲಿದೆ. ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗುವುದು ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಾಯಕ ಕೋಮಲ್ ಕುಮಾರ್ ತಿಳಿಸಿದರು.

ನಾನು ಕನ್ನಡದ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದೀನಿ . ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ “ಸಡಗರ” ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ವಜ್ರಮುನಿ ಯವರ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೊಸ ಪ್ರತಿಭೆ ನಿಸರ್ಗ ಈ ಚಿತ್ರದ ನಾಯಕಿ.‌ ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್ , ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್ ,ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಇನ್ನು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಧರ್ಮವಿಶ್ ಸಂಗೀತ ‌ನಿರ್ದೇಶನ ಹಾಗೂ ಉದಯ್ ಲೀಲಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ , ವಿನೋದ್ ರವರ ಸಾಹಸ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್ ವಜ್ರಮುನಿಯಾದರೆ, ಅವರ ಬಲಗೈ ಬಂಟನಾಗಿ ಜಯಸಿಂಹ ಮುಸುರಿ “ಕನೆಕ್ಷನ್ ಕಾಳಪ್ಪ” ನಾಗಿ ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಹಿನ್ನಲೆ ಗೋವಿನ ಹಾಡಿನಲ್ಲಿ ಬರುವ ವ್ಯಾಘ್ರ ಹುಲಿ ಅರ್ಭುತ ಮತ್ತು ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿಂದ ಪ್ರೇರಿತವಾಗಿದೆ. ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರದೀಪ್ ತಿಳಿಸಿದರು.

ಇದು ನನ್ನ ಎರಡನೇ ನಿರ್ಮಾಣದ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಹೇಶ್ ಗೌಡ್ರು.

ನಾಯಕಿ ನಿಸರ್ಗ ಹಾಗೂ ಚಿತ್ರದಲ್ಲಿ ನಟಿಸುತ್ತಿರುವ ಯತಿರಾಜ್, ಮಾಹಂತೇಶ್, ಆಕರ್ಶ್,‌ ಅರವಿಂದ್ ರಾವ್, ಮಂಜು ಪಾವಗಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಉದಯ್ ಲೀಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನನ್ನ ಮೊಮ್ಮಗ ಆಕರ್ಶ್ ಈ ಚಿತ್ರದಲ್ಲಿ ಕೋಮಲ್ ಅವರ ಮಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಶ್ರೀಮತಿ ಲಕ್ಷ್ಮೀ ವಜ್ರಮುನಿ.

Categories
ಸಿನಿ ಸುದ್ದಿ

ಫುಲ್ ಮೀಲ್ಸ್ ಫಸ್ಟ್ ಲುಕ್ ಪೋಸ್ಟರ್ ಈಸ್ ಬ್ಯೂಟಿಫುಲ್! ಸಖತ್ ಉಂಟು ಲಿಖಿತ್…

“ಸಂಕಷ್ಟಕರ ಗಣಪತಿ” ಹಾಗೂ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ಮೂಲಕ ಜನಮನ ಗೆದ್ದಿರುವ ಲಿಖಿತ್ ಶೆಟ್ಟಿ, ನಿರ್ಮಿಸಿ ಜೊತೆಗೆ ನಾಯಕರಾಗೂ ನಟಿಸುತ್ತಿರುವ ಚಿತ್ರ “ಫುಲ್ ಮೀಲ್ಸ್”. ಸದ್ಯ ” ಫುಲ್ ಮೀಲ್ಸ್” ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ.

ಪೋಸ್ಟರ್ ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದೆ.

ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.

ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧುಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ ಹಾಗು

ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Categories
ಸಿನಿ ಸುದ್ದಿ

ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್ ಕೊಡುಗೆ: ಪ್ರಕಾಶ್ ರಾಜ್ ಫೌಂಡೇಶನ್ ಆಶಯ ಈಡೇರಿಕೆ

ಡಾ.ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಆಂಬುಲೆನ್ಸ್ ಕೊಡಬೇಕೆಂಬ ನಟ ಪ್ರಕಾಶ್ ರಾಜ್ ಮತ್ತು ಅವರ ಗೆಳೆಯರ ಬಯಕೆ ಈಡೇರಿದೆ. ಈ ಕುರಿತು ಸ್ವತಃ ಪ್ರಕಾಶ್ ರಾಜ್ ಪತ್ರವೊಂದನ್ನು ಬರೆದಿದ್ದಾರೆ…

ನಮಸ್ಕಾರ!

ತಮ್ಮ ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಹಾಗೂ ಉತ್ತಮ ವ್ಯಕ್ತಿತ್ವದಿಂದಾಗಿ ನಮ್ಮೆಲ್ಲರ ನಡುವೆ ಎಂದೆಂದೂ ಮಾಸದ ನೆನಪಾಗಿ ಉಳಿದಿರುವವರು ಡಾ ಪುನೀತ್ ರಾಜಕುಮಾರ್ — ನಮ್ಮೆಲ್ಲರ ಪ್ರೀತಿಯ ಅಪ್ಪು. ಅವರು ಯಾವಾಗಲೂ ನಮ್ಮ ಜೊತೆ ಇರಬೇಕು ಅಂದರೆ ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರೆಸಿದರೆ ಮಾತ್ರ ಸಾಧ್ಯ ಆಗುತ್ತದೆ.


ಈ ಒಂದು ಆಶಯದಿಂದ ಶುರುವಾಗಿದ್ದು ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್. ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಅಪ್ಪು ಹೆಸರಿನ ಆಂಬುಲೆನ್ಸ್ ಇರಬೇಕು ಎನ್ನುವುದು ನನ್ನ ಹಾಗೂ ನಮ್ಮ ಪ್ರಕಾಶ್ ರಾಜ್ ಫೌಂಡೇಶನ್ನಿನ ಕನಸು.
ಮೊದಲನೇ ಆಂಬುಲೆನ್ಸ್ ಅನ್ನು ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಗರವಾದ ಮೈಸೂರಿಗೆ ಕೊಡುಗೆ ನೀಡಿದೆವು. ಈಗ ಅದರ ಮುಂದುವರೆದ ಭಾಗವಾಗಿ ಇನ್ನೂ 5 ಆಂಬುಲೆನ್ಸ್ ನಮ್ಮ ರಾಜ್ಯದ ಐದು ಜಿಲ್ಲೆಗಳಿಗೆ ಜೀವ ಉಳಿಸುವಂಥ ಗುರುತರ ಹೊಣೆ ಹೊತ್ತು ಸಾಗುತ್ತಿವೆ.

ಈ ಬಾರಿ ಬೀದರಿನ ಗುರು ನಾನಕ್ ಆಸ್ಪತ್ರೆ, ಕಲಬುರ್ಗಿಯ ಡಾ ಓಮ್ ಇಂಡೋ ಜರ್ಮನ್ ಆಸ್ಪತ್ರೆ ಚಿತ್ತಾಪುರ, ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಕೊಳ್ಳೇಗಾಲದ ‘ಹೋಲಿ ಕ್ರಾಸ್ ಕಾನ್ವೆಂಟ್ ಆಸ್ಪತ್ರೆ’. ಮತ್ತು ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ – ಈ ಸಂಸ್ಥೆಗಳಿಗೆ ಆಂಬುಲೆನ್ಸ್ ಹಸ್ತಾಂತರಿಸಿದ್ದೇವೆ,
ಈ ಬಾರಿ ಈ ಕನಸು ನನಸಾಗುವಲ್ಲಿ ನನ್ನನ್ನು ಮೀರಿ ಇನ್ನೂ ಹಲವರ ಪಾತ್ರ ಇದೆ. ನಮ್ಮ ಪ್ರಕಾಶ್ ರಾಜ್ ಫೌಂಡೇಶನ್ ನ ಈ ಕನಸಿಗೆ ಜೊತೆಯಾಗಿ ನಿಂತಿರುವವರು ತಮ್ಮ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಮೂಲಕ ನಮ್ಮ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರಿದ್ದಾರೆ, ಜೊತೆಗೆ ತಮಿಳಿನ ಸೋದರ ನಟ ಸೂರ್ಯ ಅವರು ತಮ್ಮ 2 ಡಿ ಎಂಟರ್ಟೈನ್ಮೆಂಟ್ ಮೂಲಕ ನೀಡಿದರೆ, ನಮ್ಮ ಕನ್ನಡದ ಹೆಮ್ಮೆಯ ನಾಯಕ ನಟ ಯಶ್ ಅವರು ತಮ್ಮ ಸಂಸ್ಥೆ ‘ಯಶೋಮಾರ್ಗ’ ದ ಮೂಲಕ ಬಹಳ ದೊಡ್ಡ ಸಹಾಯವಾಗಿ ನಿಂತಿದ್ದಾರೆ.

ಜೊತೆಗೆ ಅವರ ಸ್ನೇಹಿತ ನಿರ್ಮಾಪಕರಾದ ವೆಂಕಟ್ ಅವರು ತಮ್ಮ ಕೆವಿಎನ್ ಫೌಂಡೇಶನ್ ಮೂಲಕ ಬೆಂಬಲ ನೀಡಿದ್ದಾರೆ.
“ಪ್ರಕಾಶ್ ಸಾರ್, ಇದು ಬರೀ ನಿಮ್ಮ ಕನಸಲ್ಲ ನಮ್ಮದೂ ಕೂಡ” ಅಂತ ಅವರ ಸಂಸ್ಥೆ ‘ಯಶೋಮಾರ್ಗ’ದ ಮೂಲಕ ಇದರಲ್ಲಿ ಧಾರಾಳ ಸಹಾಯ ಹಸ್ತ ಚಾಚಿರುವ ಯಶ್ ಅವರಿಗೆ ಮತ್ತೆ ನನ್ನ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.
ಈಗ ಈ ಆಂಬುಲೆನ್ಸ್ ಗಳು ಅವುಗಳು ಸೇರಬೇಕಾದ ಆಸ್ಪತ್ರೆಗಳತ್ತ ಹೊರಟು ಬಿಟ್ಟಿವೆ. ಇದನ್ನು ದೊಡ್ಡ ಕಾರ್ಯಕ್ರಮ ಮಾಡಿ ಹಸ್ತಾಂತರ ಮಾಡಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಆಗುವ ಖರ್ಚಿನಲ್ಲೇ ಇನ್ನೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿಬಿಡಬಹುದು ಎನ್ನುವುದು ನನ್ನ ಹಾಗೂ ಯಶ್ ಅವರ ಅನಿಸಿಕೆ. ಹಾಗಾಗಿ ಈ ಪತ್ರಿಕಾ ಪ್ರಕಟಣೆ ನೀಡುತ್ತಾ ನಿಮ್ಮೊಂದಿಗೆ ನಮ್ಮ ಈ ಕೈಂಕರ್ಯದ ಮಾಹಿತಿಯನ್ನ ಹಂಚಿಕೊಳ್ಳುತ್ತಾ ಇದೀವಿ.

ವಿಶ್ವಾಸದಿಂದ,
ನಿಮ್ಮ ಪ್ರಕಾಶ್ ರಾಜ್

Categories
ಸಿನಿ ಸುದ್ದಿ

ಏಕಾಂಗಿ ಸಂಚಾರಿಯ ಭಾವುಕ ಪಯಣ! ನಿರ್ದೇಶಕ ಕಿರಣ್ ಗೋವಿ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಕಿರಣ್ ಗೋವಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಾಗರಭಾವಿಯಲ್ಲಿದ್ದ ಸಿನಿಮಾ ಕಚೇರಿಯಲ್ಲಿ ಅವರು ಕೆಲಸ‌ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆರಂಭದಲ್ಲಿ ಆರ್ಕೇಸ್ಟ್ರಾದಲ್ಲಿ ನಟ‌ ರವಿಶಂಕರ್ ಗೌಡ ಅವರು ಗಾಯಕರಾಗಿದ್ದ ಸಂದರ್ಭದಲ್ಲಿ ನಿರೂಪಕರಾಗಿದ್ದ ಕಿರಣ್ ಗೋವಿ, ಅವರು ತಮ್ಮ ಆತ್ಮೀಯ ಗೆಳೆಯ ರವಿಶಂಕರ್ ಗೌಡ ಅವರಿಗೆ ‘ಪಯಣ’ ಎಂಬ ಸದಭಿರುಚಿಯ ಸಿನಿಮಾ ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದರು. ಅ ಚಿತ್ರದ ಹಾಡುಗಳು ಸುಪರ್ ಹಿಟ್ ಆಗುವುದರ ಜೊತೆಗೆ ಸಿನಿಮಾ ಕೂಡ ಸುದ್ದಿಯಾಗಿತ್ತು.

ಆ ಸಿನಿಮಾ‌ ಬಳಿಕ ಅವರು ‘ಸಂಚಾರಿ’ ಸಿನಿಮಾ ನಿರ್ದೇಶಿಸಿದ್ದರು. ಆ ಚಿತ್ರದ ಹಾಡುಗಳು ಸಹ ಎಲ್ಲೆಡೆ ಗಮನ ಸೆಳೆದಿದ್ದವು. ನಂತರದ ದಿನಗಳಲ್ಲಿ ಕಿರಣ್ ಗೋವಿ ಅವರು ಶ್ರೀನಗರ ಕಿಟ್ಟಿ ಅವರಿಗೆ ‘ಪಾರು ವೈಫ್ ಆಫ್ ದೇವದಾಸ್’ ಎಂಬ ಸಿನಿಮಾ ಮಾಡಿದ್ದರು. ಆಮೇಲೆ ‘ಯಾರಿಗುಂಟು ಯಾರಿಗಿಲ್ಲ’ ಸಿನಿಮಾ‌ ನಿರ್ದೇಶನ ಮಾಡಿದ್ದರು. ಸದ್ಯ ಹೊಸ ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದರು.

ಕಿರಣ್ ಗೋವಿ ಪ್ರತಿಭಾವಂತ ನಿರ್ದೇಶಕ. ಅವರಿಗೆ ಕಥೆ ಹಾಗು, ಸಂಗೀತ ಜ್ಞಾನವಿತ್ತು. ಕನ್ಮಡ‌ಸಿನಿಮಾ ರಂಗದಲ್ಲಿ ಒಳ್ಳೆಯ ಸಿನಿಮಾ ಕೊಡಬೇಕು ಎಂಬ ಉತ್ಸಾಹದಲ್ಲಿದ್ದರು. ಇಂದು ಹೃದಯಾಘಾತದಿಂದ ತನ್ನ ಬದುಕಿನ ಪಯಣ ಮುಗಿಸಿ ಬಾರದೂರಿಗೆ ತೆರಳಿದ್ದಾರೆ.

ಅವರ ಆತ್ಮಕ್ಕೆ ಕನ್ನಡ ನಿರ್ದೇಶಕರು, ನಟರು, ನಿರ್ಮಾಪಕರು ಶಾಂತಿ ಕೋರಿದ್ದಾರೆ.

Categories
ಸಿನಿ ಸುದ್ದಿ

ಶಿವಣ್ಣ -ಉಪೇಂದ್ರ ಸಿನಿಮಾಗೆ ನಾಯಕಿ ಬೇಕಂತೆ: ಇದು ಅರ್ಜುನ್ ಜನ್ಯ ಚಿತ್ರ….

ರಮೇಶ್ ರೆಡ್ಡಿ ನಿರ್ಮಾಣದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆ ಮಾಡುತ್ತಿರೋದು ಗೊತ್ತೇ ಇದೆ. ಆ ಸಿನಿಮಾಗೆ ಈಗ ನಾಯಕಿ ಬೇಕಾಗಿದೆ. ಹೌದು, ಅರ್ಜುನ್ ಜನ್ಯ ಮೊದಲ ಸಲ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಹೀರೋಯಿನ್ ಹುಡುಕಾಟ ನಡೆಯುತ್ತಿದೆ.

“ನಾತಿಚರಾಮಿ”, ” ಗಾಳಿಪಟ ೨” ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳ ನಿರ್ಮಾಪಕರಾದ ರಮೇಶ್‌ ರೆಡ್ಡಿ ಅವರು ನಿರ್ಮಿಸುತ್ತಿರುವ “45” ಪ್ಯಾನ್ ಇಂಡಿಯಾ ಚಿತ್ರವನ್ನು ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶಿಸುತ್ತಿದ್ದಾರೆ. ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಮಹತ್ವಾಕಾಂಕ್ಷೆಯ ಈ ಚಿತ್ರಕ್ಕೆ ಚಿತ್ರತಂಡ ನಾಯಕಿಯ ಹುಡುಕಾಟ ನಡೆಸುತ್ತಿದೆ‌. ನಾಯಕಿಯ ಪಾತ್ರಕ್ಕೆ ಕನ್ನಡ ಬರುವವರಿಗೆ ಮೊದಲ ಆದ್ಯತೆ. ಆಸಕ್ತಿ ಇರುವವರು ತಮ್ಮ ಇತ್ತೀಚಿನ ಎಡಿಟ್ ಮಾಡದ ಫೋಟೊ ಹಾಗೂ ಚಿಕ್ಕ ವಿಡಿಯೋ ತುಣುಕನ್ನು [email protected] ಗೆ ಕಳುಹಿಸಬಹುದು.

Categories
ಸಿನಿ ಸುದ್ದಿ

ರಶ್ಮಿಕಾ ಮಂದಣ್ಣ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಹಾರೈಕೆ: ನಿತಿನ್ ಹೀರೋ

‘ಭೀಷ್ಮ’ ಸಿನಿಮಾ ನಂತರ ಮತ್ತೊಮ್ಮೆ ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಇಂದು ನಿತಿನ್,ರಶ್ಮಿಕಾ ಮಂದಣ್ಣ ಜೋಡಿಯ ಹೊಸ ಸಿನಿಮಾ ಸೆಟ್ಟೇರಿದ್ದು, ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಿರ್ಮಾಣದಲ್ಲಿ ನಿತಿನ್, ರಶ್ಮಿಕಾ ಮಂದಣ್ಣ ಸಿನಿಮಾ ಮೂಡಿ ಬರುತ್ತಿದೆ. ಮತ್ತೊಮ್ಮೆ ಈ ಜೋಡಿ ‘ಭೀಷ್ಮ’ ಸಿನಿಮಾ ನಿರ್ದೇಶಕ ವೆಂಕಿ ಕುದುಮುಲ ಜೊತೆ ಕೈ ಜೋಡಿಸಿದ್ದಾರೆ. ಇಂದು ಮೂವರ ಕಾಂಬಿನೇಶನ್ ಒಳಗೊಂಡ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಭೀಷ್ಮ’ ಚಿತ್ರಕ್ಕೂ ವಿಭಿನ್ನವಾಗಿ ಸಿನಿಮಾ ಮೂಡಿ ಬರಲಿದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ವೀಡಿಯೋ ತುಣುಕು ಸಾಕ್ಷಿಯಾಗಿದೆ.

ನವೀನ್ ಯಾರ್ನೇನಿ ಮತ್ತು ವೈ.ರವಿ ಶಂಕರ್ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಟ ಕಿರೀಟಿ ರಾಜೇಂದ್ರ ಪ್ರಸಾದ್ ಮತ್ತು ವೆನ್ನೆಲ್ಲಾ ಕಿಶೋರ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ಸಾಯಿ ಶ್ರೀರಾಮ್ ಕ್ಯಾಮೆರಾ ವರ್ಕ್, ಪ್ರವಿನ್ ಪುಡಿ ಸಂಕಲನ, ರಾಮ್ ಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ. ಸದ್ಯದಲ್ಲೇ ಚಿತ್ರದ ಟೈಟಲ್, ತಾರಾಬಳಗದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.

Categories
ಸಿನಿ ಸುದ್ದಿ

ವೀರಪ್ಪನ್ ಮಗಳು ಈಗ ನಾಯಕಿ! ಮಾವೀರನ್ ಪಿಳ್ಳೈ ಸಿನಿಮಾದಲ್ಲಿ ನಟನೆ


ದಂತಚೋರ ವೀರಪ್ಪನ್​ ಅವರ ಮಗಳು ಹಾಗೂ ತಮಿಳುನಾಡಿನ ಭಾರತೀಯ ಜನತಾ ಪಕ್ಷದ ಯುವ ಘಟಕದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ‘ಮಾವೀರನ್​ ಪಿಳ್ಳೈ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇತ್ತೀಚೆಗೆ ಹಾಡುಗಳ ಬಿಡುಗಡೆಯಾಗಿದೆ.


ಚೆನ್ನೈನ ಪ್ರಸಾದ್​ ಲ್ಯಾಬ್​ನಲ್ಲಿ ನಡೆದ ಈ ಸಮಾರಂಭದಲ್ಲಿ ವೀರಪ್ಪನ್​ ಪತ್ನಿ ಮುತ್ತು ಲಕ್ಷ್ಮೀ, ಆಲ್​ ಪೀಪಲ್ಸ್​ ಪೊಲಿಟಿಕಲ್​ ಪಾರ್ಟಿ ಅಧ್ಯಕ್ಷೆ ರಾಜೇಶ್ವರಿ ಪ್ರಿಯಾ, ನಟ ಕೂಲ್​ ಸುರೇಶ್​, ನಿರ್ದೇಶಕ ಪೇರರಸು, ನಿರ್ಮಾಪಕ ಕೆ.ಎನ್.​ಆರ್.​ ರಾಜ ಮುಂತಾದವರು ಹಾಜರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ರಾಜ, ‘ಪ್ರತಿ ಸಂಸಾರದಲ್ಲೂ ಕುಡಿತದಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ. ಕುಡಿತದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದು ಹೇಳಿದರು.
ವಿಜಯಲಕ್ಷ್ಮೀ ಅವರಿಗೆ ಬಾಲ್ಯದಿಂದಲೂ ನಟಿಸುವ ಆಸಕ್ತಿ ಇತ್ತಂತೆ. ‘ಮೊದಲಿನಿಂದಲೂ ನಟಿಸುವ ತುಡಿತ ಇತ್ತು. ಈಗ ಅವಕಾಶ ಸಿಕ್ಕಿದೆ. ಕುಡಿತದಿಂದಾಗಿ ಪ್ರತೀ ಮನೆಯಲ್ಲೂ ಸಾಕಷ್ಟು ಮಹಿಳೆಯರು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂಥ ಮಹಿಳೆಯರ ಕುರಿತು ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎಂದು ಹೇಳಿದರು.


ಒಂದು ಚಿತ್ರದಲ್ಲಿ ಯಾರು ನಟಿಸಿದ್ದಾರೆ ಅಥವಾ ಚಿತ್ರವನ್ನು ಯಾರು ನಿರ್ದೇಶಿಸಿದ್ದಾರೆ ಎಂಬುದು ಮುಖ್ಯವಲ್ಲ, ಚಿತ್ರದ ಕಥಾವಸ್ತು ಮುಖ್ಯ ಎಂದ ನಿರ್ದೇಶಕ ಪೇರರಸು, ‘ನಮ್ಮ ಚಿತ್ರರಂಗದಲ್ಲಿ ಮುಖ್ಯಮಂತ್ರಿಗಳ ಮಗನೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ವೀರಪ್ಪನ್​ ಮಗಳು ಸಹ ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಚಿತ್ರರಂಗ ಎಲ್ಲರನ್ನೂ ಕೈಬೀಡಿ ಕರೆಯುತ್ತದೆ. ನಾವು ಸಹ ವಿಜಯಲಕ್ಷ್ಮೀ ಅವರನ್ನು ಬಹಳ ಪ್ರೀತಿಯಿಂದ ಚಿತ್ರರಂಗಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ’ ಎಂದು ವಿಜಯಲಕ್ಷ್ಮೀ ಅವರಿಗೆ ಚಿತ್ರರಂಗಕ್ಕೆ ಸ್ವಾಗತ ಕೋರಿದರು.


‘ಇಂದು ದೊಡ್ಡವರಷ್ಟೇ ಅಲ್ಲ, ಸಣ್ಣ ಮಕ್ಕಳು ಸಹ ಕುಡಿಯುವ ವೀಡಿಯೋಗಳು ಬಿಡುಗಡೆಯಾಗಿ ಎಲ್ಲರಿಗೂ ಆಘಾತ ತಂದಿದೆ. ಈ ಚಿತ್ರದಲ್ಲಿ ‘ಸಾರಾಯಂ ಅಭಯಂ’ ಎಂಬ ಹಾಡಿದ್ದು, ಕುಡಿತದ ವಿರುದ್ಧದ ಅಭಿಯಾನದಲ್ಲಿ ಬಳಸಿಕೊಳ್ಳಬಹುದು. ಜನ ಮತ ಚಲಾಯಿಸುತ್ತಾರೋ, ಇಲ್ಲವೋ ಎಂಬ ಭಯದಿಂದ ಯಾವ ರಾಜಕಾರಿಣಿಯೂ ಕುಡಿತವನ್ನು ನಿಷೇಧಿಸುವ ಮಾತಾಡುವುದಿಲ್ಲ. ಅವರ ಭಾಷಣಗಳಲ್ಲಿ, ಮಾತುಗಳಲ್ಲಿ ಕುಡಿತ ಕುರಿತು ಪ್ರಸ್ತಾಪವೇ ಇರುವುದಿಲ್ಲ.

ಮುಂದಿನ ದಿನಗಳಲ್ಲಿ ಸಾರಾಯಿ ತರಹ ಗಾಂಜ ಅಂಗಡಿಗಳು ಪ್ರಾರಂಭವಾದರೂ ಆಶ್ಚರ್ಯವಿಲ್ಲ. ಆಗಾಗ ಆನ್​ಲೈನ್​ ರಮ್ಮಿಯಿಂದ ಜನ ಸಾಯುವ ಬಗ್ಗೆ ಕೇಳುತ್ತಿರುತ್ತೇವೆ. ಆದರೆ, ಕುಡಿತದಿಂದ ಪ್ರತೀ ದಿನ ನೂರಾರು ಜನ ಸಾಯುತ್ತಿದ್ದಾರೆ. ಆನ್​ಲೈನ್​ ರಮ್ಮಿಯನ್ನು ನಿಷೇಧಿಸಬೇಕು ಎನ್ನುವವರು ಕುಡಿತವನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದಿಲ್ಲ.

ಮಹಿಳೆಯರಿಗೆ ಸಾವಿರಾರು ರೂಪಾಯಿ ಬೇಕಿಲ್ಲ. ಅವರಿಗೆ ಎಸಿ ಬಸ್​ ಬೇಕಿಲ್ಲ. ನೀಟ್​ ಪರೀಕ್ಷೆಗಳು ಮುಖ್ಯವಲ್ಲ. ಜನಸಾಮಾನ್ಯರಿಗೆ ಸಮಸ್ಯೆ ಆಗಿರುವ ಸಾರಾಯಿಯನ್ನು ಮೊದಲು ನಿಷೇಧಿಸಿ’ ಎಂದು ಆಗ್ರಹಿಸಿ.
ಈ ಚಿತ್ರಕ್ಕೆ ಮಂಜುನಾಥ ಅವರ ಛಾಯಾಗ್ರಹಣ ಮತ್ತು ರವಿವರ್ಮ ಸಂಗೀತವಿದೆ. ಪ್ರೇಮ್​ ಹಿನ್ನೆಲೆ ಸಂಗೀತ ಸಂಯೋಜಿಸಿದರೆ, ಜೂಲಿಯನ್​ ಸಂಕಲನಕಾರರಾಗಿ ದುಡಿದಿದ್ದಾರೆ.

Categories
ಸಿನಿ ಸುದ್ದಿ

ನಾನಿ ಜೊತೆ ಶೆಟ್ರು! ದಸರಾ ಸಿನಿಮಾದಲ್ಲಿ ದಿಯಾ ಹುಡುಗ ದೀಕ್ಷಿತ್ ಶೆಟ್ಟಿ…

‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ‘ದಿಯಾ’ ಸಿನಿಮಾದಲ್ಲಿ ಸಿಂಪಲ್ ಹುಡುಗನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ದೀಕ್ಷಿತ್, ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಸರಾ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಮಾರ್ಚ್ 30ರಂದು ‘ದಸರಾ’ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದ್ದು, ಸೂರಿ ಪಾತ್ರದ ಮೂಲಕ ದೀಕ್ಷಿತ್ ಶೆಟ್ಟಿ ತೆರೆ ಮೇಲೆ ಬರುತ್ತಿದ್ದಾರೆ.

ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಟೀಸರ್ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಿರುವ ಈ ಚಿತ್ರ ನಾನಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನ್ಯಾಚುರಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ವಿಶೇಷ.

ನಾನಿ ಸರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್ ನಲ್ಲಿ ನಟಿಸಿದ್ದೆ. ವೆಬ್ ಸೀರೀಸ್ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಸರ್ ಕೂಡ ವೆಬ್ ಸೀರೀಸ್ ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ರು ಇದ್ರಿಂದ ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಸರ್ ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ರು ಎಂದು ತಮ್ಮ ಪಾತ್ರ ಹಾಗೂ ‘ದಸರಾ’ ತಂಡದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ದೀಕ್ಷಿತ್ ಶೆಟ್ಟಿ.

‘ದಿಯಾ’ ನಂತರ ದೀಕ್ಷಿತ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗದೇ ಅಳೆದು ತೂಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಗೆ ರೆಡಿಯಾಗಿವೆ. ಅದಕ್ಕೂ ಮೊದಲು ‘ದಸರಾ’ ಮೂಲಕ ಸೂರಿ ಪಾತ್ರದಲ್ಲಿ ತೆರೆ ಮೇಲೆ ರಂಜಿಸಲು ರೆಡಿಯಾಗಿದ್ದಾರೆ ದೀಕ್ಷಿತ್ ಶೆಟ್ಟಿ.

error: Content is protected !!