ರಶ್ಮಿಕಾ ಮಂದಣ್ಣ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಹಾರೈಕೆ: ನಿತಿನ್ ಹೀರೋ

‘ಭೀಷ್ಮ’ ಸಿನಿಮಾ ನಂತರ ಮತ್ತೊಮ್ಮೆ ನಿತಿನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಇಂದು ನಿತಿನ್,ರಶ್ಮಿಕಾ ಮಂದಣ್ಣ ಜೋಡಿಯ ಹೊಸ ಸಿನಿಮಾ ಸೆಟ್ಟೇರಿದ್ದು, ಮೆಗಾ ಸ್ಟಾರ್ ಚಿರಂಜೀವಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಿರ್ಮಾಣದಲ್ಲಿ ನಿತಿನ್, ರಶ್ಮಿಕಾ ಮಂದಣ್ಣ ಸಿನಿಮಾ ಮೂಡಿ ಬರುತ್ತಿದೆ. ಮತ್ತೊಮ್ಮೆ ಈ ಜೋಡಿ ‘ಭೀಷ್ಮ’ ಸಿನಿಮಾ ನಿರ್ದೇಶಕ ವೆಂಕಿ ಕುದುಮುಲ ಜೊತೆ ಕೈ ಜೋಡಿಸಿದ್ದಾರೆ. ಇಂದು ಮೂವರ ಕಾಂಬಿನೇಶನ್ ಒಳಗೊಂಡ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಭೀಷ್ಮ’ ಚಿತ್ರಕ್ಕೂ ವಿಭಿನ್ನವಾಗಿ ಸಿನಿಮಾ ಮೂಡಿ ಬರಲಿದೆ ಅನ್ನೋದಕ್ಕೆ ಬಿಡುಗಡೆಯಾಗಿರುವ ವೀಡಿಯೋ ತುಣುಕು ಸಾಕ್ಷಿಯಾಗಿದೆ.

ನವೀನ್ ಯಾರ್ನೇನಿ ಮತ್ತು ವೈ.ರವಿ ಶಂಕರ್ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಟ ಕಿರೀಟಿ ರಾಜೇಂದ್ರ ಪ್ರಸಾದ್ ಮತ್ತು ವೆನ್ನೆಲ್ಲಾ ಕಿಶೋರ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ಸಾಯಿ ಶ್ರೀರಾಮ್ ಕ್ಯಾಮೆರಾ ವರ್ಕ್, ಪ್ರವಿನ್ ಪುಡಿ ಸಂಕಲನ, ರಾಮ್ ಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ. ಸದ್ಯದಲ್ಲೇ ಚಿತ್ರದ ಟೈಟಲ್, ತಾರಾಬಳಗದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.

Related Posts

error: Content is protected !!